ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…

4


 ‘ಸರ್, ಆಗಸತ್ತರಕ್ಕೆ ನೀವು ಬೆಳೆಸಿದ ಪತ್ರಿಕೆ ಇ೦ದೆ ಸದ್ದಿಲ್ಲದೆ ಹೊರಬರಲು ಕಾರಣವೇನು ? ಹೊಸ ಚಿ೦ತನೆಗಳು, ಮೊನಚಾದ ಬರಹಗಳು, ಅ೦ಕಣಗಳು ಒ೦ದೇ ಎರಡೇ..ಲವಲವಕೆ ಯ೦ತಹ ಹೊಸ ರೂಪವನ್ನು ಪತ್ರಿಕೆಗೆ ಪರಿಚಯಿಸಿದಿರಿ, ರಾಜಕಾರಣಿ ಗಳ ಮಾನ ಹರಾಜು ಹಾಕಿ ಪತ್ರಿಕೊಧ್ಯಮದ ಘನತೆ ಹೆಚ್ಚಿಸಿದಿರಿ…..ನೀವಿಲ್ಲದ ಪತ್ರಿಕೆ ಇನ್ನುಮು೦ದೆ ನೀರಸ…ನಿಮ್ಮೂದಿಗೆ ನಾವಿದ್ದೇವೆ..’


ಇಂಥ ಒಂದು ಕಾಮೆಂಟ್ ವಿಶ್ವೇಶ್ವರ ಭಟ್ಟರ ಫೇಸ್ ಬುಕ್ ನಲ್ಲಿ ಇದೆ ಅಂದ್ರೆ ಅವರ ಬರಹಗಳನ್ನು ಆರಾಧಿಸುವ ಜನ ಎಷ್ಟಿರಬಹುದೆಂದು ಯೋಚಿಸಿ. ಪತ್ರಿಕೆಯ ಸಂಪಾದಕನಾದವನಿಗೆ ಇದಕ್ಕಿಂತ ಹೆಮ್ಮೆ ಬೇಕೆ? ಒಂದು ಕಾಲವಿತ್ತು. ಪತ್ರಿಕೆಯ ಸಂಪಾದಕರ ಹೆಸರುಗಳನ್ನು ಪತ್ರಿಕೆಯ ಕಡೆಯ ಸಾಲುಗಳಲ್ಲಿ ಹುಡುಕಬೇಕಾಗಿತ್ತು. ಈ ಸಂಸ್ಕೃತಿಯನ್ನು ತಪ್ಪಿಸಿ ದಿನವೂ ಬರೆಯುವ ಯಾರಾದರೂ ಸಂಪಾದಕರಿದ್ದರೆ ಅದು ವಿಶ್ವೇಶ್ವರ ಭಟ್ಟರು ಮಾತ್ರ ಎಂಬಂತಾಗಿತ್ತು.


ನೀವಿಲ್ಲದಿದ್ದರೆ ನಾವು ವಿ.ಕ.ವನ್ನು ಬಾಯ್ಕಾಟ್ ಮಾಡುತ್ತೇವೆ ಎಂಬ ಹಂತಕ್ಕೆ ಓದುಗ ತಲುಪುತ್ತಾನೆ ಎಂದರೆ ಅದು ಸಾಮಾನ್ಯವಾದ ವಿಷಯವಲ್ಲ. ಈ ಹಿಂದೆಯೂ ಹಲವು ಜನ ಸಂಪಾದಕರು ಪತ್ರಿಕೆ ಇಲ್ಲವೇ ವೃತ್ತಿಯನ್ನು ಬದಲಿಸಿದ್ದಿದೆ. ಆದರೆ ಇಂಥ ಅಮೂಲ್ಯವಾದ ಓದುಗರ ಪ್ರೀತಿಗೆ ಯಾರು ಭಾಜನರಾಗಿದ್ದಿಲ್ಲ. ಅವರು ಕನ್ನಡದ ನಡುವೆ ಬೇರೆ ಭಾಷೆಯ ಪದಗಳನ್ನು ಬಳಸುವುದರ ಬಗ್ಗೆ ಕೆಲವು ಓದುಗರಿಗೆ ಅಸಮಾಧಾನವಿದ್ದರೂ ಕೂಡ ಅವರ ಕನ್ನಡ ಕಾಳಜಿಗೆ ಅವರ ಬರೋಬ್ಬರಿ ನಲವತ್ತೈದು ಕೃತಿಗಳು ಸಾಕ್ಷಿ.


ಅವರ ಚಿಂತನೆಯೂ ಹಾಗೆಯೇ ತುಸು ಬಲಪಂಥೀಯ. ಅನಂತಕುಮಾರ್ ಅವರ ಮೀಡಿಯಾ ಸೆಕ್ರೇಟರಿಯಾಗಿದ್ದದ್ದು ಇದಕ್ಕೆ ಇನ್ನಷ್ಟು ಇಂಬು ಕೊಟ್ಟಿದ್ದು ಸುಳ್ಳಲ್ಲ. ಆದರೂ ಎಲ್ಲ ಪತ್ರಿಕೆಗಳು ಬಲಪಂಥೀಯ ವಿಷಯಗಳನ್ನು ತಮ್ಮ ಪತ್ರಿಕೆಗಳಲ್ಲಿ ಹಾಕಲು ಯೋಚಿಸುವ ಸಾಕಷ್ಟು ಪ್ರಮಾಣ ಬಲಪಂಥೀಯರಿಗೆ ತಮ್ಮ ಪತ್ರಿಕೆಯಲ್ಲಿ ಸ್ಪೇಸ್ ನೀಡಿ ಬೆಳೆಸಿದ್ದರು. ಇದು ಕನ್ನಡ ಪತ್ರಿಕೋದ್ಯಮದಲ್ಲಿಯೇ ಗಮನಿಸುವಷ್ಟು ಮಟ್ಟದ ಬದಲಾವಣೆ.


ಈಗಂತೂ ವಿಶ್ವೇಶ್ವರ ಭಟ್ಟರ ರಾಜಿನಾಮೆ ಓದುಗರಲ್ಲಿ ಸಾಕಷ್ಟು ಗೊಂದಲ ಮತ್ತು ಗಾಳಿಸುದ್ದಿಗಳನ್ನು ಸೃಷ್ಟಿಸಿದೆ. ಭಟ್ಟರ ಮುಂದಿನ ನಡೆಯೇನು ಎಂಬ ಬಗ್ಗೆ ಅವರ ಎಲ್ಲ ಪ್ರೀತಿಯ ಓದುಗರ ಕುತೂಹಲಕ್ಕೆ ಕಾರಣವಾಗಿದೆ. ಒಂದು ಸಣ್ಣ ಸುದ್ದಿಯೂ ಇಲ್ಲದೇ ವಿ ಕ ವನ್ನು ತೊರೆದ ಭಟ್ಟರು, ಸುದ್ದಿ ಮಾಡುವುದರಲ್ಲಿ ನಿಪುಣರಾದ ಅವರು ಈಗ ತಾವೇ ಸುದ್ದಿಯಲ್ಲಿದ್ದಾರೆ.


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಂತರ್ಜಾಲ ಸಂಪರ್ಕದ ಸಮಸ್ಯೆಯಿಂದ ಎರಡು ಬಾರಿ ಪ್ರಕಟಗೊಂಡಿದೆ ಕ್ಷಮೆಯಿರಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಟ್ಟರಿಲ್ಲದ ಪತ್ರಿಕೆ, ವಿಕ? ಎಂಬ ಶೀರ್ಷಿಕೆ ಯೊಂದಿಗೆ ಸಣ್ಣದೊಂದು ಲೇಖನ ಬರೆದು ಸಂಪದಕ್ಕೆ ಹಾಕುವ ಪ್ರಯತ್ನ ಮೊನ್ನೆ ಕೈಕೊಟ್ಟ ಅಂತರ್ಜಾಲ ಸಂಪರ್ಕದಿಂದ ಹಾಕಿರಲು ಸಾಧ್ಯವಾಗಿರಲಿಲ್ಲ. ಸಾತ್ವಿಕ್ ನಿಮ್ಮ ಲೇಖನದಿಂದ ನೆನಪು ಬಂತು ಸಧ್ಯ ನೀವಾದ್ರೂ ಇದರ ಬಗ್ಗೆ ಸಂಪದದಲ್ಲಿ ಬರೆದಿರಲ್ಲ. ಬಿಜೇಪಿಯ ಭಟ್ಟಂಗಿ ಪತ್ರಿಕೆಯೆಂದು ಹೀಗಳೆಯುವಷ್ಟು ಹಿಂದೂ ಪರವಿದ್ದ ಏಕೈಕ ಪತ್ರಿಕೆಯನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಯಶಸ್ಸು ಭಟ್ಟರಿಗೇ ಸಲ್ಲಬೇಕು. ಎಡ ಪಂಥೀಯ ಕಪಿಮುಷ್ಟಿಯಲ್ಲೇ ಇರುವ ಮಾಧ್ಯಮ ಪ್ರಪಂಚದಲ್ಲಿ ಅದರ ದಿಕ್ಕನ್ನೆ ಬದಲಿಸಿದವರು ಭಟ್ಟರು. ಈಗಲೂ ಚಡ್ಡಿ ಹಾಕ್ಲಿಕ್ಕೆ ತಯಾರಿದ್ದಾರೆ ಎನ್ನುವ ಮಟ್ಟಿಗೆ ಕುಹಕವಾಡುವಷ್ಟು ಬಲಪಂಥೀಯರೆಂದು ಜರೆಯಿಸಿಕೊಂಡ, ಬಿಜೇಪಿ ಸರ್ಕಾರ ರಚನೆಯಾದಾಗ ಜನರ ಆಶೋತ್ತರ ನಿರೀಕ್ಷೆಗಳ ಪಟ್ಟಿ ಮಾಡಿ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲೆ ಸರ್ಕಾರಕ್ಕೆ ತಲುಪಿಸಿದ, ಸನಿಹದಲ್ಲೆ ರೇಣುಕಾಚಾರ್ಯ, ಹಾಲಪ್ಪ, ಯಡ್ಡಿಯ ಹಗರಣಗಳನ್ನು ಬಯಲಿಗೆಳೆದದ್ದು ಇದೇ ಭಟ್ಟರೆ ಎಂದು ಅವರ ವಿರೋಧಿಗಳು ಮೂಗಿನ ಮೇಲೆ ಬೆರಳಿಡುವಂತೆ ವರ್ತಿಸಿದ, ತಮ್ಮ ಮೊನಚಾದ ಬರಹಗಳ ಮೂಲಕ, ಅಷ್ಟೆ ಮೊನಚಾದ ಸಹೊದ್ಯೋಗಿಗಳನ್ನು ಮಾಧ್ಯಮ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಭಟ್ಟರಿಗೆ ಸಲ್ಲಲೇಬೇಕು. ೧ ರೂಗೆ ಪತ್ರಿಕೆ ಕೊಡುವ ಮೂಲಕ ಕ್ರಾಂತಿಯೆನ್ನುವ ಗಿಮಿಕ್ ಮಾಡಿದರೂ ತಮ್ಮ ಗಟ್ಟಿ ನಿರೂಪಣೆ, ವಿಭಿನ್ನ ಶೈಲಿ ಪ್ರಖರ ಲೇಖನಗಳ ಮೂಲಕ ಜನಮನಕ್ಕೆ ಹತ್ತಿರವಾದ ಭಟ್ಟರು ವಿ ಕ ಗೆ ಟಾಟ ಹೇಳುವ ದಿನ ಟೈಂಸ್ ಖರೀದಿಸಿದಾಗಲೆ ಬಂದಿದ್ದಿರಬಹುದು. ಮನಸ್ಸಿಗೆ ಬಂದಾಗೊಮ್ಮೆ ಪ್ರಕಟವಾಗುವ ಕೆಲವು ಪತ್ರಿಕೆಗಳ ಅನಿವಾಸಿ ಕೃ ರ ಭಾರತೀಯ ಪತ್ರಕರ್ತರು (ಚುನಾವಣೆಯಲ್ಲಿ ಹಣ ಖರ್ಚು ಮಾಡುವ ರಾಜಕಾರಣಿಗಳು ಒಂದೆಡೆಯಾದರೆ, ಚುನಾವಣೆ ಹೆಸರಿನಲ್ಲಿ ಹಣ ಮಾಡಿಕೊಂಡ ಪತ್ರಕರ್ತರು) ಇವರ ಏಳಿಗೆಯನ್ನು ಕರುಬಿ ತಮ್ಮ ಪತ್ರಿಕೆಗಳಲ್ಲಿ ತೆಗಳಿ ಬರೆದದ್ದು ಒಂದು ಮೈಲಿಗಲ್ಲೆ ಏಕೆಂದರೆ ಕನ್ನಡದ ಸಂಪಾದಕನೊಬ್ಬನ ಇನ್ನೊಂದು ಪತ್ರಿಕೆ ನೇರವಾಗಿ ಹೊಟ್ಟೆ ಉರಿಯನ್ನು ಕಾರಿದ್ದು ಬಹುಶಃ ಮೊದಲಿರಬಹುದು. ಅವರದೇ ಮಾತಿನಂತೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪತ್ರಿಕೆ ಬಿಡುವುದಾಗಿ ಹೇಳಿದ್ದರೂ ಇದರ ಹಿಂದೆ ರಾಜಕೀಯದ ವಾಸನೆ ಇಲ್ಲದಿಲ್ಲ. ಕೃಷ್ಣಭಟ್ಟರಿಗೆ ಸಿಕ್ಕ ಶಾಸಕ ಸ್ಥಾನ ಸಿಗದಿದ್ದರಿಂದ ಯಡಿಯೂರಪ್ಪ ವಿರುದ್ದ ನೇರ ವೈಯಕ್ತಿಕ ಯುದ್ದ ಸಾರಿದ್ದಂತೂ ನಿಜ. ಅದೇ ಅವರ ಸ್ಥಾನಕ್ಕೆ ಮುಳುವಾಯಿತೇ? ಈ ಪ್ರಶ್ನೆಗೆ ನಿಮ್ಮಂತ ಮಾಧ್ಯಮ ಮಿತ್ರರೆ ಉತ್ತರ ಹೇಳಬೇಕು. ಪ್ರತಾಪ್ ಸಿಂಹನಂತಹ ನೇರ ನುಡಿಯ ಪ್ರಖರ ಹಿಂದುತ್ವ ಪರ ಯುವ ಲೇಖಕರಿಗೆ ಬೆನ್ನೆಲುಬಾಗಿ ನಿಂತ ಇವರ ದಿಟ್ಟತನ ಮೆಚ್ಚತಕ್ಕದ್ದೆ. ಹಿಂದೆಯೆ ಅದೆ ಹಿಂದುತ್ವವಾದಿ ಪಕ್ಷದ ನಡೆಗಳ ಬಗ್ಗೆ ಅದರ ಹಗರಣಗಳ ಬಗ್ಗೆ ಸರ್ಕಾರದ ವಿರುದ್ದ ನೇರವಾಗಿ ದನಿಯೆತ್ತಿದ ಭಟ್ಟರ ನಡೆ ಕೆಲವೊಮ್ಮೆ ಆಶ್ಚರ್ಯವೆನಿಸಿದರೂ ಸತ್ಯ. ಪತ್ರಿಕೆಗಳ sms ಮೂಲಕ ಅನಿಸಿಕೆ ಪ್ರಕಟಿಸಿ ಕಾರ್ನಾಡ್, ಜಿ ಕೆ ಗೋವಿಂದರಾವ್ ಎಂಬ ಡೋಂಗಿ ಸೆಕ್ಯುಕಲರ್ಗಳಿಗೆ ತಪರಾಕಿ ಕೊಟ್ಟದ್ದು ಇವರ ಗರಿಮೆಯೆ. ನಕ್ಸಲ್ ಸಮರ್ಥಕರ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಅವರು ಪ್ರಕಟಿಸಿದ ಫೋಟೋ ಅವರ ಸಮಯ ಪ್ರಜ್ಞೆಗೆ ಉದಾಹರಣೆ. ವಿರುದ್ದ ದಿಕ್ಕಿನ ರವಿಬೆಳಗರೆ, ಪ್ರತಾಪ್ ಸಿಂಹ ಇಬ್ಬರ ಲೇಖನಗಳು ಒಂದೇ ಪತ್ರಿಕೆಯಲ್ಲಿ ತಂದದ್ದು ವಿಶೇಷ ಏನೇ ಆದರೂ ಕನ್ನಡ ಪತ್ರಿಕೋದ್ಯಮಕ್ಕೆ ಸಂಪಾದಕೀಯಕ್ಕೆ ಹೊಸ ಆಯಾಮ ತರಿಸಿಕೊಟ್ಟ ಸುದ್ದಿಮನೆಯ ಬಗ್ಗೆ, ಇತರ ಪತ್ರಿಕೆಗಳ ಹೆಸರನ್ನೂ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಲು ಹಿಂಜರಿಯುವ ಆ ಪ್ರಪಂಚದವರಿಗೆ ಧೈರ್ಯವಾಗಿ ಬೇರೆಯ ಪತ್ರಿಕೆಗಳನ್ನು ಹೊಗಳಿದ ತೆಗಳಿದ, ಸುದ್ದಿಮನೆಯ ಬಗ್ಗೆ ಮೊದಲಿಗೆ ಕನ್ನಡದಲ್ಲಿ ಬರೆದ ಭಟ್ಟರು ಸದ್ದಿಲ್ಲದೆ ಸುದ್ದಿಮನೆಯಿಂದ ಎದ್ದು ಹೊದರೆ? ಏನೇ ಆಗಲಿ ಅವರ ಮುಂದಿನ ಸಾಹಸಕ್ಕೆ ಶುಭ ಹಾರೈಸೋಣ. ಕನ್ನಡ ಮಾಧ್ಯಮ ಪ್ರಪಂಚದಲ್ಲಿ ಮತ್ತೊಂದು ಸಂಚಲನವನ್ನು ತರುತ್ತಾರೆಯೆ ಭಟ್ಟರು ಎಂದು ನಿರೀಕ್ಷಿಸೋಣವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಪ್ರತಿಕ್ರಿಯೆ ಪ್ರಸನ್ನ! ಭಟ್ಟರ ಏಳಿಗೆ ಸಹಿಸದ ಕೆಲವರು ಮತ್ತು ಅವರ ಭಟ್ಟಂಗಿಗಳು ಮೂಗಿನ ಮೇಲೆ ಎರಡೂ ಬೆರಳು ಇಟ್ಟು ಚಿತ್ರ ತೆಗೆಸಿ ಖುಷಿ ಪಟ್ಟುಕೊಂಡಿರುತ್ತಾರೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ವಾರದ ವಿ ಕ ದಲ್ಲಿ ಪ್ರತಾಪ್ ಸಿಂಹರ ಬೆತ್ತಲೇ ಜಗತ್ತು ಪ್ರಕಟವಾಗಿಲ್ಲ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತ.. ಪ್ರತಾಪ ಸಿಂಹ ವಿ.ಕ ಕ್ಕೆ ರಾಜಿನಾಮೆ ನೀಡಿದ್ದಾರೆ. ಕೊಂಡಿ ನೋಡಿ.. http://pratapsimha.c...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಶ್ವೇಶ್ವರ ಭಟ್ಟರು ಕನ್ನಡ ಪತ್ರಿಕೋದ್ಯಮಕ್ಕೆ ವೈವಿಧ್ಯತೆಯನ್ನು ತಂದದ್ದನ್ನು ಯಾರೂ ಅಲ್ಲಗೆಳಯಲಾಗುವುದಿಲ್ಲ. ವಿ.ಕ ದಲ್ಲಿ ಅವರ ಸಂಪಾದಕೀಯ, ಅಂಕಣ ಓದುವಂತಿರುತ್ತಿತ್ತು. ಆದರೆ ಕೆಲವು ಸಾರಿ ಕೆಲವೊಂದು ವ್ಯಕ್ತಿಗಳ ಬಗ್ಗೆ ತೀರಾ ಅನಿಸುವುಷ್ಟು ಗೇಲಿ ಮಾಡಿದ್ದು ಇದೆ..ಮತ್ತೆ ಕೆಲವರನ್ನು ಹೊತ್ತುಕೊಂಡು ಕುಣಿದಾಡಿದ್ದು ಇದೆ!. ಏನೇ ಇರಲಿ.. ಈಗಿನ ಕನ್ನಡ ದಿನಪತ್ರಿಕೆಗಳ ಸಂಪಾದಕರ ಹೆಸರು ಕೇಳಿದರೆ ಥಟ್ಟನೆ ನೆನಪಿಗೆ ಬರುವ ಹೆಸರು ಅವರದೊಂದೆ..ಆ ಮಟ್ಟಿಗೆ ವಿ.ಕ ಎಂದರೆ ವಿಶ್ವೇಶ್ವರ ಆಗಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಶ್ವೇಶ್ವರಭಟ್ಟರು, ಪ್ರತಾಪ್ ಸಿ೦ಹ ಇಲ್ಲದ ವಿ.ಕ, ತಾರೆಗಳಿಲ್ಲದೆ ಭಣಗುಟ್ಟುವ ಆಗಸದ೦ತೆ ಕ೦ಡರೆ ಆಶ್ಚರ್ಯವೇನಿಲ್ಲ, ಆದರೂ ಪತ್ರಿಕೋದ್ಯಮದಲ್ಲಿ ನಡೆಯುತ್ತಿರುವ ಹಗ್ಗ ಜಗ್ಗಾಟದ ಗಾಢವಾಸನೆ ಈ ಪ್ರಕರಣದ ಹಿ೦ದಿದೆ ಅನ್ನಿಸುತ್ತದೆ. ಕೆಲವೊಮ್ಮೆ ಅತಿ ಗತಿ ಕೆಡಿಸಿತು ಅನ್ನುವ ಮಾತು ಇವರ ಪಾಲಿಗೆ ಸತ್ಯವಾಯಿತೇನೋ ಅ೦ತಲೂ ಅನ್ನಿಸಿದೆ. ಒಟ್ಟಾರೆ ಭಟ್ಟರ ಮು೦ದಿನ ನಡೆ ಕುತೂಹಲ ಮೂಡಿಸಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.