ಹಿಂದಿನ ಮೈಸೂರು ಸಂಸ್ಥಾನದ ರಾಜ್ಯಗೀತೆ !

To prevent automated spam submissions leave this field empty.

ಮೈಸೂರು ಸಂಸ್ಥಾನದ ರಾಜ್ಯಗೀತೆಯಾಗಿದ್ದ, " ಕಾಯೌ ಜಯಗೌರಿ, ಕರುಣಾ ಲಹರಿ.....", ಗೀತೆಯನ್ನು, ನಮ್ಮ ಬಾಲ್ಯದ ಶಾಲೆಯದಿನಗಳಲ್ಲಿ, ಹೇಳುತ್ತಿದ್ದದ್ದು ಇಂದಿಗೂ, ನನ್ನ ನೆನಪಿನ ಹಲಿಗೆಯಲ್ಲಿ ಮಾಸದೆ, ಉಳಿದುಕೊಂಡಿದೆ !

" ಕಾಯೌ ಶ್ರೀ ಗೌರೀ ಕರುಣಾಲಹರೀ

ತೋಯಜಾಕ್ಷೀ ಶಂಕರೀಶ್ವರೀ [ಪ]

ವೈಮಾನಿಕ ಭಾಮಾರ್ಚಿತ ಕೋಮಲತರ ಪಾದೇ

ಸೀ ಮಾತಿಗ ಭೂಮಾಸ್ಪದೆ ಕಾಮಿತ ಫಲದೇ [೧]

ಶುಂಭಾದಿಮದಾಂಬೋನಿಧಿ ಕುಂಭಜನಿಭೆ ದೇವೀ

ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ [೨]

ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜಚಾಮ

ನಾಮಾಂಕಿತ ಭೂಮೀಂದ್ರ ಲಾಮನ

ಮುದದೇ." [೩]

ಮೈಸೂರು ಅರಸರ ಕುಲದೇವತೆಯಾದ ಶ್ರೀ ಚಾಮುಂಡೇಶ್ವರಿ ಅಥವ ಗೌರಿಯನ್ನು ಪ್ರಾರ್ಥಿಸುವ ರಾಜ್ಯಗೀತೆಯನ್ನು ಆಸ್ಥಾನ ಸಾಹಿತಿ, ವಿದ್ವಾನ್, ಶ್ರೀ. ಬಸಪ್ಪ ಶಾಸ್ತ್ರಿಗಳು, ೧೦ ನೆಯ ಮಹಾರಾಜರಾಗಿದ್ದ, ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್, ಜೆ. ಸಿ. ಐ. ಇ ; ರವರಿಗಾಗಿ, ರಚಿಸಿದರು. ತಮ್ಮ ಬ್ಯಾಂಡ್ ಮಾಸ್ಟರ್ ಬಾರ್ಟೈಸ್, ಹಾಗೂ ಆಸ್ಥಾನವಿದ್ವಾಂಸ, ವೈಣಿಕಶಿಖಾಮಣಿ, ಶೇಷಣ್ಣನವರ ಸಹಯೋಗದಿಂದ, ರಾಗ-ಸಂಯೋಜನೆ ನಡೆಸಿದರು. ಹಳೆಯಮೈಸೂರಿನ ಜನತೆಯ ದೈನಂದಿಕ ವ್ಯವಹಾರದಲ್ಲಿ, ಈ ಗೀತೆ ಅವಿಭಾಜ್ಯ ಅಂಗವಾಗಿತ್ತು. ಮಹಾರಾಜರ ಮರಣದ ನಂತರ ನಾಲ್ಮಡಿಕೃಷ್ಣರಾಜ ಒಡೆಯರು ಪಟ್ಟಕ್ಕೆ, ಬಂದರು. ರಾಜ್ಯಗೀತೆಯ ರಚನೆಯ, ಅಂತಿಮ ಚರಣದಲ್ಲಿ, " ಚಾಮ," ಎಂಬ ಪದದ ಜಾಗದಲ್ಲಿ " ಕೃಷ್ಣ " ಎಂಬ ಹೊಸಪದ ಸೇರ್ಪಡೆಯಾಯಿತು. ಇದೇತರಹ, ಜಯಚಾಮೇಂದ್ರ, ಎನ್ನುವ ಮತ್ತೊಂದು ಹೊಸಪದ, ಶ್ರೀ ಜಯಚಾಮರಾಜ ಒಡೆಯರು, ಅಧಿಕಾರಕ್ಕೆಬಂದಾಗ, ಸೇರಿಸಲಾಯಿತು. ವೈಣಿಕಪ್ರವೀಣ, ಶ್ರೀ. ವಿ. ವೆಂಕಟಗಿರಿಯಪ್ಪನವರು, ಬೇಕಾಗಿದ್ದ ರಾಗಸಂಯೋಜನೆಯನ್ನು, ತಾವೇ ಮಾಡಿಕೊಟ್ಟರು. ಮೈಸೂರು ರಾಜಧ್ವಜದ ಬಣ್ಣ, ಕೆಂಪು. ರಾಜಲಾಂಛನ, ಗಂಡುಭೇರುಂಡ.

'ಮೈಸೂರು-ನೂರಿನ್ನೂರು ವರ್ಷಗಳ ಹಿಂದೆ'. ಲೇ : ಪ್ರೊ. ಪಿ. ವಿ. ನಂಜರಾಜ ಅರಸು. ತರಂಗ, ೨೫, ಅಕ್ಟೊಬರ್, ೨೦೦೭.
ಪುಟ- ೫೬.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವೆಂಕಟೇಶರ ಲೇಖನ ಮೂರು ಸಾರಿ submit ಆಗಿಬಿಟ್ಟಿತ್ತು :)

ಹಂಸಾನಂದಿಯವರೆ, ಆ ಹಾಡು ನೀವೇ ಅಪ್ಲೋಡ್ ಮಾಡಿದ್ದಾ? ಹಾಡು ಕೇಳಿರಲಿಲ್ಲ - ಥ್ಯಾಂಕ್ಸ್ರೀ ಸರ್ರ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

'ಕಾಯೌ ಶ್ರೀ ಗೌರಿ' ಹಾಡನ್ನು ಕೈಲಾಸಂ ರವರು ತಮ್ಮ ನಾಟಕಗಳಲ್ಲಿ ಯಾವಾಗಲೋ ಪ್ರಸ್ತಾಪಿಸಿದ್ದು ನೆನಪಿಗೆ ಬಂತು. ವೆಂಕಟೇಶ್ ಹಾಗೂ ಹಂಸಾನಂದಿಯವರಿಗೆ ನನ್ನ ಧನ್ಯವಾದಗಳು.

ನಿಮ್ಮಲ್ಲಿ ಯಾರಿಗಾದರೂ 'ಲೋಕಮಾತೆ ವಿಮಲಚರಿತೆ ದೇವಿ ಶಾರದಾಂಬೆಯೇ' ಗೀತೆಯ ಪೂರ್ಣ ಸಾಹಿತ್ಯ ತಿಳಿದಿದ್ದರೆ ದಯವಿಟ್ಟು ನಮ್ಮೊಡನೆ ಹಂಚಿಕೊಳ್ಳುವಿರಾ?

ಶಾಮಲ

"ಕಾಯೌ ಶ್ರೀ ಗೌರೀ ಕರುಣಾಲಹರೀ " ಹಾಡಿನ ಬಗ್ಗೆ ತಿಳಿಸಿದ್ದಕ್ಕೆ ಮತ್ತು ಹಾಡು ಕೇಳಿಸಿದ್ದಕ್ಕೆ ಧನ್ಯವಾದಗಳು. ಮೈಸೂರು ಅರಸರ ಗತವೈಭವ ನೆನಪಿಗೆ ಬಂದಿತು.

ಹಾಡು ಕೇಳಿ ತುಂಬಾ ಸಂತೋಷವಾಯಿತು. :) ಎಷ್ಟು ಚೆನ್ನಾಗಿದೆ!!