ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ!

0

ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ ಇಲ್ಲಿದೆ.
ಚಿತ್ರ: ಮಾಸೂಮ್ (೧೯೮೩)
ನಿರ್ದೇಶಕ: ಶೇಖರ್ ಕಪೂರ್
ಸಾಹಿತ್ಯ: ಗುಲ್ಝಾರ್
ಸಂಗೀತ: ರಾಹುಲ್ ದೇವ್ ಬರ್ಮನ್
ಹಾಡಿದವರು: ಅನೂಪ್ ಘೋಶಾಲ್

ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ
ಆಚ್ಚರಿಗೊಂಡಿಹೆನು ನಾನು
ಆಚ್ಚರಿಗೊಂಡಿಹೆನು ನಾನು

ನಿನ್ನ ಮುಗ್ಧ ಪ್ರಶ್ನೆಗಳಿಂದ
ನಾ ಸೋತುಹೋಗಿಹೆನು
ನಿಜಕೂ ನಾ ಸೋತುಹೋಗಿಹೆನು

ಯೋಚಿಸಿರಲೇ ಇಲ್ಲ, ಜೀವಿಸಲು ನೋವುಗಳ ಹೊರೆ ಹೊರಬೇಕಾದೀತೆಂದು
ನಕ್ಕರೆ, ಆ ನಗುವಿನ ಋಣವನ್ನೂ ತೀರಿಸಬೇಕಾದೀತೆಂದು
ನಕ್ಕಾಗಲೆಲ್ಲಾ ಅನಿಸುತ್ತಿದೆ, ಈ ತುಟಿಗಳ ಮೇಲೆ ಋಣಭಾರ ಹೊತ್ತಿರುವೆನೆಂದು

ಇಂದು ಈ ಕಂಗಳು ತುಂಬಿವೆಯಾದರೆ ಹನಿಗಳ ಮಳೆಯಾಗಬಹುದು
ನಾಳೆ ಈ ಕಂಗಳು ಇವುಗಳ ನಿರೀಕ್ಷೆಯಲ್ಲಿಯೇ ಕಾಯುತಿರಬಹುದು
ಅದೆಲ್ಲಿ ಕಾಣೆಯಾಯ್ತೋ
ಅದೆಲ್ಲಿ ಕಳೆದುಹೋಯ್ತೋ
ಕಣ್ಣೀರ ಒಂದು ಹನಿಯ ನಾ ಬಚ್ಚಿಟ್ಟಿದ್ದೆನಲ್ಲಾ ...

ಜೀವನದ ನೋವುಗಳು ಅರ್ಥೈಸಿದವೆನಗೆ ಹೊಸ ಸಂಬಂಧಗಳನ್ನು
ಸುಡುಬಿಸಿಲಿನಲ್ಲಿ ಸಿಕ್ಕವರೂ ನೀಡಿದರು ನನಗೆ ತಂಪಾದ ನೆರಳನ್ನು

ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ
ಆಚ್ಚರಿಗೊಂಡಿಹೆನು ನಾನು
ಆಚ್ಚರಿಗೊಂಡಿಹೆನು ನಾನು

ನಿನ್ನ ಮುಗ್ಧ ಪ್ರಶ್ನೆಗಳಿಂದ
ನಾ ಸೋತುಹೋಗಿಹೆನು
ನಿಜಕೂ ನಾ ಸೋತುಹೋಗಿಹೆನು
******************
ಆತ್ರಾಡಿ ಸುರೇಶ ಹೆಗ್ಡೆ

ಮೂಲ ಸಾಹಿತ್ಯ:
tujhase naaraaz nahi zindagi,
hairaan hoon main o hairaan hoon main
tere masoom savalon se pareshaan hooN main o pareshaan hoon main

jeene ke liye socha hi na tha, dard sambhalane honge
muskuraoon to, muskurane ke karz utaarne honge
muskuraoon kabhi to lagata hai jaise hontonn pe karz rakhaa hai
tujhase ...

aaj agar bhar ayi hai, boondein baras jaayengi
kal kya pata inke liye aakhen taras jayengi
jaane kahan gum kahan khoya ek aansu chhupake rakha tha
tujhase ...

zindagi tere gum ne hamain rishte naye samajhaye
mile jo hamain dhoop main mile chhaanv ke thande saaye
o tujhase ...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

’ಹಾಡು ಹಳೆಯದಾದರೇನು ಭಾವ ನವನವೀನ’. ಭಾವಾನುವಾದ ಹಳೆಯದಾದರೇನು ಕಾವ್ಯಭಾಷೆ ನವನವೀನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇಂದು ಈ ಕಂಗಳು ತುಂಬಿವೆಯಾದರೆ ಕಣ್ಣೀರವೃಷ್ಟಿ ಆಗಬಹುದು ನಾಳೆ ಈ ಕಂಗಳು ಇವುಗಳ ನಿರೀಕ್ಷೆಲ್ಲಿಯೇ ಕಾಯುತಿರಬಹುದು ಅದೆಲ್ಲಿ ಕಾಣೆಯಾಯ್ತು ಅದೆಲ್ಲಿ ಮರೆಯಾಯ್ತು ಕಣ್ಣೀರ ಒಂದು ಹನಿಯ ನಾ ಬಚ್ಚಿಟ್ಟಿದ್ದೆನಲ್ಲಾ ...<< ಭಾವಪೂರ್ಣ ಸಾಲುಗಳು. ಅನುವಾದ ಭಾವಪರವಶನನ್ನಾಗಿ ಮಾಡಿತು ಎ೦ದರೆ ಉತ್ಪ್ರೇಕ್ಷೆಯಲ್ಲ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈರ್ವರಿಗೂ ಹಾರ್ದಿಕ ಅಭಿವಂದನೆಗಳು. ಯಾರೂ ಪ್ರತಿಕ್ರಿಯಿಸದಿದ್ದ ಈ ಭಾವಾನುವಾದಕ್ಕೆ ಇಂದು ನಿಮ್ಮಿಂದ ಪ್ರತಿಕ್ರಿಯೆಗಳು ಬಂದಿರುವುದನ್ನು ಓದಿ ಸಮಾಧಾನವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಕ್ಕರೆ, ಆ ನಗುವಿನ ಋಣವನ್ನೂ ತೀರಿಸಬೇಕಾದೀತೆಂದು ನಕ್ಕಾಗಲೆಲ್ಲಾ ಅನಿಸುತ್ತಿದೆ ಈ ತುಟಿಗಳ ಮೇಲೆ ಋಣಭಾರ ಹೊತ್ತಿರುವೆನೆಂದು>> ಹಿಂದಿಯಲ್ಲೂ ಓದಬಹುದು ಈ ಸಾಲುಗಳನ್ನು... ಆದರೆ ಕೊಡಲಾರದು ಆ ಆನಂದವನ್ನು.. ಕನ್ನಡದ ಸಾಲುಗಳು ಕೊಟ್ಟ ಆನಂದವನ್ನು.. ಅನುವಾದಿಸಿದ ಹೆಗ್ಡೆ ಅವರೆ ನಿಮಗೆ ಬಾಗುವೆನು ಶಿರವನು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗಾದರೆ ಭಾಷೆಯ ಮಿತಿಯೆಂಬುದೇ ಇಲ್ಲ ಅರ್ಥೈಸಿಕೊಳ್ಳಲು ಪೂರ್ತಿ ಆ ಭಾಷೆಯಲ್ಲಿ ಆನಂದಿಸಿದ ಪರಿಣಾಮವೇ ಭಾವಾನುವಾದಕ್ಕೆ ಸ್ಪೂರ್ತಿ ಮೂಲ ರೂಪಕ್ಕೆ ನ್ಯಾಯ ಒದಗಿಸಿಲ್ಲವೇನೋ ಎನ್ನುವ ಅಂಜಿಕೆ ಇಹುದು ಓದುಗರು ಓದಿ ಪ್ರತಿಕ್ರಿಯಿಸಿದರೆ ಆಸುಮನ ಸಮಾಧಾನ ಹೊಂದುವುದು ಧನ್ಯವಾದಗಳು ಜಯಂತ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಾಳೆ ಈ ಕಂಗಳು ಇವುಗಳ ನಿರೀಕ್ಷೆಲ್ಲಿಯೇ ಕಾಯುತಿರಬಹುದು>> ನಿರೀಕ್ಷೆಯಲ್ಲಿಯೇ ಆಗಬೇಕಲ್ವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೆ..ನಿಜವಾಗಿಯೂ ಈ ಹಾಡಿನ ಭಾವಾನುವಾದ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳೊಣ ಅಂತಿದ್ದೆ!..ಚೆನ್ನಾಗಿ ಬಂದಿದೆ ಭಾವಾನುವಾದ. ನನಗೆ ಮೂಲದಲ್ಲೂ ಮತ್ತು ಇಲ್ಲೂ ಹಿಡಿಸಿದ ಸಾಲುಗಳು.... >> ಯೋಚಿಸಿರಲೇ ಇಲ್ಲ ಬದುಕಲು ನೋವುಗಳನ್ನೂ ಸಂಭಾಳಿಸ ಬೇಕಾದೀತೆಂದು ನಕ್ಕರೆ, ಆ ನಗುವಿನ ಋಣವನ್ನೂ ತೀರಿಸಬೇಕಾದೀತೆಂದು ನಕ್ಕಾಗಲೆಲ್ಲಾ ಅನಿಸುತ್ತಿದೆ ಈ ತುಟಿಗಳ ಮೇಲೆ ಋಣಭಾರ ಹೊತ್ತಿರುವೆನೆಂದು << ---- ಟೈಪಿಸುವಾಗ ತಪ್ಪಿದ್ದು.. >>ಆಚ್ಚರಿಗೊಂಡಿದ್ದೇನೆ ನಾಯನು<<
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಆ ಹಾಡನ್ನು ನೆನಪಿಸಿದಾಗ, ನನಗೂ ನೆನಪಿಗೆ ಬಂತು, ನಾನಾಗಲೇ ಆ ಹಾಡಿನ ಭಾವಾನುವಾದ ಮಾಡಿ ಪ್ರಕಟಿಸಿದ್ದೇನೆ ಅನ್ನುವುದು. ಇಂದು ಅದು ಮತ್ತೆ ಬೆಳಕ ಕಾಣುವಂತಾಯಿತಾದರೆ, ಅದು ನಿಮ್ಮಿಂದ. ಧನ್ಯವಾದಗಳು ವಿಜಯ್, ಅದಕ್ಕೂ ಮತ್ತು ಮೆಚ್ಚುಗೆಯ ನುಡಿಗಳಿಗೂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.