ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

5

ಮೈಕ್ರೋಸಾಫ್ಟ್ ವರ್ಡ್ ಹಾಗೂ ಓಪನ್ ಆಫೀಸ್ ರೈಟರ್‌‌ನಲ್ಲಿ ಸುಲಭವಾಗಿ ಟೇಬಲ್ ಡ್ರಾ ಮಾಡಲು ಒಂದು ತಮಾಷೆಯಾದ ಫೀಚರ್‍ ಇದೆ. ಸುಮ್ಮನೆ +-+-+-+-+-+ ಅಂತ ಕೊಟ್ಟು ಎಂಟರ್‍ ಒತ್ತಿದ್ರೆ ಆಯ್ತು ಟೇಬಲ್ ರೆಡಿ.

ಆಮೇಲೆ ಕೊನೆಯ ಬಾಕ್ಸ್‌ನಲ್ಲಿ ಕರ್ಸರ್‍ ಕ್ಲಿಕ್ ಮಾಡಿ ಟ್ಯಾಬ್ ಒತ್ತುತ್ತಾ ಹೋದ್ರೆ ಎಷ್ಟು ಬೇಕೋ ಅಷ್ಟು rowಗಳು ಬರುತ್ತಾ ಹೋಗುತ್ತದೆ. ಇಲ್ಲಿ ನೀವು ಎಷ್ಟು - ಗಳನ್ನು ಬಳಸುತ್ತೀರೋ ಅಷ್ಟು ಕಾಲಂಗಳನ್ನು ಪಡೆಯಬಹುದು. ಉದಾಹರಣೆಗೆ +--+--+--+ ಎಂದು ಕೊಟ್ಟರೆ ಮೂರು ಕಾಲಂಗಳು ಹಾಗೂ +--+--+--+--+ ಎಂದು ಕೊಟ್ಟರೆ ನಾಲ್ಕು ಕಾಲಂಗಳು ಬರುತ್ತವೆ. ಅಲ್ಲದೇ ಎರಡು + ಗಳ ನಡುವಿನ ಮಧ್ಯದಲ್ಲಿ - ಗಳ ಸಂಖ್ಯೆ ಹೆಚ್ಚಾದಷ್ಟೂ ಕಾಲಂನ ಅಗಲ ಹೆಚ್ಚಾಗುತ್ತದೆ. ಮೊದಲನೆಯ ಕಾಲಂ ಕಡಿಮೆ ಅಗಲ, ಎರಡನೆಯ ಕಾಲಂ ಸ್ವಲ್ಪ ದೊಡ್ಡದು ಹಾಗೂ ಮೂರನೆಯ ಕಾಲಂ ದೊಡ್ಡದಾಗಿ ಬೇಕಿದ್ದರೆ ಹೀಗೆ ಕೊಡಬಹುದು: +--+-----+--------+-ಪ್ರಸನ್ನ.ಎಸ್.ಪಿ

ನನ್ನ ಬ್ಲಾಗ್‌‌ನಲ್ಲಿ ಈ ಬರಹ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

<ಕೊನೆಯ ಬಾಕ್ಸ್‌ನಲ್ಲಿ ಕರ್ಸರ್‍ ಕ್ಲಿಕ್ ಮಾಡಿ ಟ್ಯಾಬ್ ಒತ್ತುತ್ತಾ ಹೋದ್ರೆ ಎಷ್ಟು ಬೇಕೋ ಅಷ್ಟು rowಗಳು ಬರುತ್ತಾ ಹೋಗುತ್ತದೆ> ನಾನು ಹೊಸ row insert ಮಾಡಬೇಕಿದ್ರೆ ಹೀಗೇನೆ ಮಾಡೋದು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಕೊನೆಯ ಬಾಕ್ಸ್‌ನಲ್ಲಿ ಕರ್ಸರ್‍ ಕ್ಲಿಕ್ ಮಾಡಿ ಟ್ಯಾಬ್ ಒತ್ತುತ್ತಾ ಹೋದ್ರೆ ಎಷ್ಟು ಬೇಕೋ ಅಷ್ಟು rowಗಳು ಬರುತ್ತಾ ಹೋಗುತ್ತದೆ> ನಾನೂ ಅಷ್ಟೇ. ಆದರೆ + ಮತ್ತು- ಇದರ ಬಳಕೆ ಗೊತ್ತಿರಲಿಲ್ಲ.ತು೦ಬಾ ಅನುಕೂಲವಾಯಿತು. ಪ್ರಸನ್ನರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಆಸಕ್ತಿಕರ ಮಾಹಿತಿ (+- ಕುರಿತಾದದ್ದು). ಎಂಎಸ್ ವರ್ಡ್ ಅನ್ನು ಯಾವಾಗಲೂ ಬಳಕೆ ಮಾಡುತ್ತಿದ್ದರೂ ಇದರ ಅರಿವಿರಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಇದನ್ನು ಆಕಸ್ಮಿಕವಾಗಿಯೇ ಕಂಡುಕೊಂಡಿದ್ದು. ಒಮ್ಮೆ ವರ್ಡ್‌ನಲ್ಲಿ ಏನೋ ಬರೆಯುತ್ತಿರುವಾಗ +-+ ಎಂದು ಕೊಟ್ಟು ಎಂಟರ್‍ ಕೊಟ್ಟಿದ್ದೆ. ಆಗ ಒಂದು ಬಾಕ್ಸ್ ಬಂದಿತ್ತು. ಅದೇಕೆ ಹಾಗಾಯಿತು ಅಂತ ತಲೆಕೆಡಿಸಿಕೊಂಡು +-+-+ ಒತ್ತಿ ಎಂಟರ್‍ ಒತ್ತಿದ್ದೆ. ಆಗ ಒಂದರ ಪಕ್ಕ ಒಂದರಂತೆ ಎರಡು ಬಾಕ್ಸ್‌ಗಳು ಬಂದವು. ನಂತರ ಅದು ಟೇಬಲ್‌‌ ಹಾಕೋಕೆ ಇರೋ ಶಾರ್ಟ್‌ಕಟ್ ವಿಧಾನ ಎಂದು ಗೊತ್ತಾಯಿತು. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ೨೦೦೭ ರಿಲೀಜ್ ನಲ್ಲಿ ಕೆಲ್ಸಾ ಮಾಡುತ್ತಾ..? ಇಲ್ಲಿ ಆಗ್ತಾ ಇಲ್ಲ :-((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

2007 ಬಗ್ಗೆ ಗೊತ್ತಿಲ್ಲ. Office XP, Office 2003 ಹಾಗೂ OpenOffice Writerನಲ್ಲಿ ಪರೀಕ್ಷಿಸಿದ್ದೇನೆ. ಅವುಗಳಲ್ಲಿ ಇದು ಕೆಲಸ ಮಾಡುತ್ತೆ. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೨೦೦೭ ರಿಲೀಜ್‌ನಲ್ಲೂ ಇದು ಕೆಲಸ ಮಾಡುತ್ತೆ. ಮೊದಲ ಮತ್ತು ಕೊನೆಯ ಕೀಗಳು + ಇರಲೇಬೇಕು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಅವ್ರೆ- ನಿಮ್ಮ ಹಿಂದೆ ಬಿದ್ದುದಕ್ಕೆ ಸಾರ್ಥಕ ಆಯ್ತು.. :())) ಅಬ್ಬೊ...!! ಎಸ್ಟೆಲಾ ಉಪಯುಕ್ತ ಮಾಹಿತಿಗಳ ಬ್ಲಾಗ್ ಗಳನನ ಒಂದರ ಹಿಂದೆ ಒಂದು ಬರೆದು ಇಕ್ಕಿದೀರಾ.. ಎಲ್ಲವೂ ಅವಶ್ಯ- ಉಪಯುಕ್ತ ಮಾಹಿತಿಯ ಬರಹಗಳು.. ನೀವ್ ಹೇಳಿದ ಈ ಬರಹದ +--+--+--+--+= ನಾ ಪ್ರಯತ್ನಿಸಿದೆ(ಆಫೀಸ್ ೨೦೦೭) ಬಂತು.... ೩ ಹೊಸ ಮಾಹಿತಿಯನ್ನ ಈ ದಿನ ಅರಿತುಕೊಂಡೆ.. ಒಂದು ಬರಹದಲ್ಲಿ ಚಿತ್ರ ಸೇರಿಸುವುದು ಪ್ರತಿಕ್ರಿಯೆಯಲ್ಲಿ ಚಿತ್ರ ಸೇರಿಸುವುದು..(ಈ ಎರಡು ಸಂಪದಿಗರು ತಿಳಿಸಿದ್ದರಿಂದ) ೩ ನೆದು ನಿಮ್ಮ ಈ +--+--+--+ ವಿಧಾನ... ಸಾಮಾನ್ಯ ಜನಕ್ಕೆ ಈ ತಂತ್ರಜ್ಞಾನ ಸಂಬಂಧಿ ವಿಷ್ಯ ಕಬ್ಬಿಣದ ಕಡಲೆ ಅನ್ನಿಸಿದರೂ ಅದನ್ನು ಬೇಯಿಸೋಕೆ ಈ ತರಹದ ಸರಳ ಭಾಷೆಯ ತಂತ್ರಜ್ಞಾನ ಸಂಬಂಧಿ ಬರಹಗಳ ಅವಶ್ಯಕತೆ ಇದೆ... ಹಾಗೆಯೇ ನಿಮ್ಮಂತವರ ಅವಶ್ಯಕತೆಯೂ... ನಿಮ್ಮ ಎಲ್ಲ ಬರಹಗಳನ್ನ ಓದಲಿಕ್ಕಿದೆ.. ನಿಮ್ಮ ಈ ಕಾರ್ಯ ಮುಂದುವರೆಯಲಿ.. ಎಲ್ಲದಕ್ಕೂ ಚಿತ್ರ ಸಮೇತ ವಿವರಣೆ ನೀಡುವ ನಿಮ್ಮ ತಾಳ್ಮೆ ಛಲ ಪರಿಶ್ರಮ- ಆಸಕ್ತಿ ಉತ್ಸಾಹ ಕ್ಕೆ ನನ್ನ ಹ್ಯಾಟ್ಸ್ಆಫ್.. ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರವರೆ, +-+-+- ಆಟ ಚೆನ್ನಾಗಿದೆ. :) "ಸುಡೋಕು" ಆಡಲು- ಕಾಲಂ ಮಾಡಲು ಬಹಳ ಸುಲಭವಾಗುವುದು. :) ಸಪ್ತಗಿರಿವಾಸಿ ಕೊನೆಯಲ್ಲಿ ಹೇಳಿದ್ದಕ್ಕೆ ನನ್ನದೂ +೧ -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಉಪಯುಕ್ತ ಮಾಹಿತಿ :‍) ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.