ಇನ್ನು ತಡವೇಕೆ?

4

ನನ್ನ ಎದುರು ನಿಂತು ನೀನು
ಮಾತನಾಡದಿದ್ದರೇನು
ನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?

ನನ್ನ ಕಂಡ ಒಡನೆ ನಿನ್ನ
ತುಟಿಯಂಚಿನಲ್ಲಿ ಮಿಂಚಿ ಹೋದ
ನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?

ನಾನು ಕಾಣದಿಲ್ಲದಾಗ
ರಾತ್ರಿ ಪೂರ ನಿದ್ರೆಯಿರದೆ
ನನ್ನ ನೆನೆದು ಕಂಡ ಕನಸು ಇನ್ನು ಗೌಪ್ಯವೇ?

ಹೃದಯ ಬರೆದ ಒಲವಿನೋಲೆ
ನನಗೆ ತೋರದಿದ್ದರೇನು
ನಿನ್ನ ಮನದ ಭಾವಗೀತೆ ನನಗೆ ಕೇಳದೆ?

ಸರಿಸಿಬಿಡು ಮೌನ ತೆರೆಯ
ಅರಳಲಿನ್ನು ಸುಖದ ಘಳಿಗೆ
ಕನಸು ಮನಸು ಹಂಚಿಕೊಳಲು ತಡವು ಏತಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮೆಚ್ಚಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕನಸು ಮನಸು ಒಂದಾದರೂ ಕೆಲಸ ಗಿಲಸ ಸಿಗಲಿ ಎಂದು ಹಗಲು ಇರುಳು ಜಪಿಸುತಿರುವೆ" ಎಂದಾತನ ಕನವರಿಕೆ ಕೇಳುತಿಲ್ಲವೇ? ಚೆನ್ನಾಗಿದೆ, ಇಂದುಶ್ರೀ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು, ಅಂದು, ಎಂದುಕೊಂಡು ಕಾಡುತಿರುವ ಅವನ ಕಂಡು ಇಂದು ನೊಂದುಕೊಂಡು ಬರೆದಳಿಂದು ಕವನ ಒಂದು || ಬಂದು ನೋಡಿ ಮೋಡಿ ಮಾಡಿ ಜೋಡಿ ಹಕ್ಕಿ ಕೂಡಿ ಆಡಿ ಕುಣಿವ ದಿನವು ಬರಲಿ ಎಂದು ಹರಸುವೆವು ಹಿರಿಯರಿಂದು||
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಚಿಕೊಂಡರೆ....ಎಲ್ಲಿ ಹಂಚಿಕೊಳ್ಳದ್ದಿದ್ದ ಅನಿಸಿಕೆಗಳು ಮನದಿಂದ ಮರೆಯಾಗುವವೋ ಎಂಬ ಭಯ...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಚಂದದ ಕವನ ಓದಿ ಮನಸ್ಸಿನಲ್ಲಿ ಮೂಡಿದ ಸಾಲುಗಳು -------------------------------- ನಿನ್ನ ಕಣ್ಣುಗಳಲ್ಲಿ ನನ್ನ ಮನದ ಇಂಗಿತವ ಕಂಡು ಖುಷಿ ಪಡುತ್ತೇನೆ ಆಗೊಮ್ಮೆ ಈಗೊಮ್ಮೆ ನನ್ನ ಮನದ ಭಾವನೆಗಳ ಅರ್ಥ ಮಾಡಿಕೊಳ್ಳೋ ನಿನಗೆ ಎಲ್ಲವನ್ನೂ ಬಿಡಿಸಿ ಹೇಳಬೇಕೇ ಆದರೂ ಗೆಳತಿ, ಯಾಕೋ ಮೌನ ಮುರಿಯಲು ಮನಸ್ಸು ಬಾರದು ಮೌನವಾಗಿಯೇ ಇರಲಿ ನಮ್ಮ ಮಾತುಗಳು ನಿನ್ನ ತುಟಿಗಳಲಿ ಬೆರೆಯುವ ಕಾತರ ಬಟ್ಟಲು ಕಣ್ಣುಗಳ ಇಂಚರ, ನೋಡಲದೇ ಖುಷಿ ನನಗೆ ಸಮಯ ಬರಲಿ ಹೇಳಿಯೇ ಹೇಳುವೆ ತಡವಾಯಿತು ಎನ್ನುವ ಪರಿವೆ ಬಿಡು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಷ್ತಂತ ಮೌನ ವಾಗಿರುತ್ತೀರ ? ಮೌನದ ಅಣೇಕಟ್ಟು ತುಂಬಿ ಒಡೆದೀತು ಜೋಕೆ. ಮೌನ ಮುರಿದು ನಿಮ್ಮ ಅಗೋಚರ ಭಾವನೆಗಳನ್ನು ಸುಂದರ ಕವಿತೆಯಾಗಿ ಹರಿಯ ಬಿಡಬಾರದೇ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನದ ಭಾವಗೀತೆಯ ಕೇಳಿಸಿಕೊಂಬಾಕೆಗೆ ಕನಸ ಮನಸ ಹಂಚಿಕೊಂಬ ತವಕವೇತಕೆ? ಮೌನದಲ್ಲೇ ಎಲ್ಲವನ್ನೂ ಅರಿತುಕೊಂಬ ಜಾಣ್ಮೆ ಇರಲು ತೆರೆದ ಮನದ ಕನಸ ಮಾತಿದೇತಕೆ? ಸುಲಲಿತವಾಗಿ, ಮೂಡಿಬಂದ ಸುಂದರ ಕವನ, ಇಂದುಶ್ರೀ. - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇ೦ದು, ಚೆ೦ದದ ಕವನ. ಮನಸ್ಸಿಗೆ ಸ೦ತಸ ನೀಡಿತು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಮೊದ್ಮಣಿ ಮೆಚ್ಚಿದ್ದಕ್ಕೆ ನನ್ನಿ @ಕವಿನಾಗರಾಜ್ :) @ಹರಿಹರಪುರ ಶ್ರೀಧರ್ ಹಾರೈಕೆಗೆ ನನ್ನಿ @ವಿಜಯ್ ಎಲ್ಲವನ್ನು ಹಂಚಿಕೊಳ್ಳಬೇಕೆಂಬ ಎಂಬ ಮನವಿ ನನ್ನದು @ಸಂತೋಷ್ ಮೆಚ್ಚಿದ್ದಕ್ಕೆ ನನ್ನಿ. ನಿಮ್ಮ ಕವನ ಕೂಡ ಚೆನ್ನಿದೆ @ಆಸು ಹೆಗ್ಡೆ ನನಗೆ ತಿಳಿದಿದ್ದರೂ ಅದನ್ನು ಖಚಿತ ಪಡಿಸಿಕೊಳ್ಳಬೇಕಲ್ಲವೇ? ಅದಕ್ಕೆ ಮನದ ಮಾತು ಹೇಳಿಬಿಡು ಎಂಬ ಪ್ರೀತಿಯ ಆಗ್ರಹ :) @ರಾಘವೇಂದ್ರ ನಾವಡ ಮೆಚ್ಚಿದ್ದಕ್ಕೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿ ಬರೆಯುತ್ತೀರಾ ತ್ರಿಪದಿಗಳನ್ನು. ಸುಂದರ ಕವನ...ಒಳ್ಳೆಯ ಅವಕಾಶ ಮುಂದಿದೆ ಅಂತ ಕಾಣುತ್ತೆ..;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ನನ್ನಿ... ಅವಕಾಶ ಇನ್ನೂ ಬಾಗಿಲು ಬಡಿದಿಲ್ಲ.... ನಾ ಬಾಗಿಲು ಕಟ್ಟುವುದನ್ನೇ ಕಾಯ್ತಾ ಇದೆ ಅನಿಸುತ್ತೆ. ನಾವೇ ಅವಕಾಶಕ್ಕೆ ಕಾಯಬೇಕಾ? ಅವಕಾಶವೂ ನಮ್ಮ ಬಳಿ ಬರಲು ಕಾಯಲಿ ಬಿಡಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರೀ ಚೆನ್ನಾಗಿದೆ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನದ ಮಾತುಗಳು ಭಾಷೆಯ ಬೇಲಿಯಿಲ್ಲದೆ ಪ್ರವಹಿಸಬಲ್ಲದು ಎಂದು ಬಹು ಚುಟುಕಾಗಿ ತಿಳಿಸಿದ್ದೀರಿ. ಸುಲಲಿತವಾಗಿ ಹರಿದಿರುವ ಭಾವನೆಗಳು ಮತ್ತು ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾಳಕ್ಕೆ ಒದಗುವ ಸಾಲುಗಳು, ಚೆನ್ನಾಗಿವೆ. ಈ ಮಾತಿಗೊನ್ದು ಅಪವಾದವೆನ್ದರೆ "ಸರಿಸಿಬಿಡು ಮೌನ ತೆರೆಯ". "ಸರಿಸಿಬಿಡು ನೀ ಮೌನ ತೆರೆಯ" ಎನ್ದಿದ್ದರೆ ಈ ಕೊರತೆ ನೀಗಬಹುದಾಗಿತ್ತು. ಕೊನೆಯ ಸಾಲು "ಕನಸ ನನಸು ಮಾಡಿಕೊಳಲು ತಡವದೇತಕೆ?" ಹೀಗಿದ್ದರೂ ಚೆನ್ನಾಗಿರುತ್ತದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ನನ್ನಿ... "ಸರಿಸಿಬಿಡು ಮೌನ ತೆರೆಯ" ಬದಲಾಯಿಸೋಕೆ ಮನಸ್ಸಾಗ್ತಿಲ್ಲ :( ಕನಸ ನನಸು ಮಾಡಿಕೊಳ್ಳೋದು ಎಷ್ಟೋ ಬಾರಿ ಬಳಸಿಯಾಗಿದೆ. ಹಾಗಾಗಿ ಕನಸು ಮನಸು ಹಂಚಿಕೊಳಲು ಎಂದಿದ್ದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಕೇಳುವಿರಾದರೆ "ನನ್ದಿ" ಹೆಚ್ಚು ಸರಿ ಎನ್ನುವೆನು. ಕೆ.ಕಲ್ಯಾಣ್ ಬರೆದಿರುವ ಹಾಡುಗಳ ಕೇಳಲಿಲ್ಲವೇ ನೀವು? ಕನಸು-ಮನಸು ಇವೆರಡು ಪದಗಳನ್ನು ಬಿಟ್ಟು ಅವರು ಹಾಡುಗಳನ್ನೇ ಬರೆಯಲಿಲ್ಲ. :) ಕೇಳಿರುವ ಬೞಕೆಯಾದರೂ ಅದೂ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.