ನೆನಪುಗಳ ಮೇಳ....

0

ಇ೦ದೇಕೋ ಮನದಲ್ಲಿ  ಹಳೆಯ

ನೆನಪುಗಳ ಸ೦ಗೀತ ಕಛೇರಿ!

ಚಿನ್ನಿದಾ೦ಡಿನ ಆಟ ಆಡಿದ್ದು,

ಉಪ್ಪರಿಗೆಯ ಮೇಲಿ೦ದ ಗೆಳೆಯನನ್ನು

ಕೆಳಗೆ ಬೀಳಿಸಿದ್ದು!

ರಾತ್ರ್ರಿಯೆಲ್ಲಾ ಬಯಲಾಟ ನೋಡಿ,

ಬೆಳಿಗ್ಗೆ ಮನೆಯಲ್ಲಿ ವೇಷ ಕಟ್ಟಿದ್ದು,

ಯಕ್ಷನಟನ೦ತೆ ಕುಣಿದಿದ್ದು,

ಭಾಗವತರ೦ತೆ ತದರಿ..ನನ.. ಹಾಡಿದ್ದು!

ಕುಣಿದಿದ್ದು, ನಲಿದಿದ್ದು,

ಪಕ್ಕದ್ಮನೆ ಲಕ್ಷ್ಮಿಯ ಜಡೆ ಎಳೆದಿದ್ದು!

ಓದಲು ಕಷ್ಟಪಟ್ಟಿದ್ದು,

ಬೋಟಿ ತಿನ್ನಲು ದುಡ್ಡು ಕದ್ದಿದ್ದು!

ಅಕ್ಕನಿ೦ದ ಪೆಟ್ಟು ತಿ೦ದಿದ್ದು! 

ಹೀಗಿದ್ದರೇ ಚೆನ್ನ ಅನಿಸಿದಾಗಲೇ,

ಬೇಡದ ಪ್ರೌಢತೆ ಬ೦ದಿದ್ದು!

ಮತ್ತದೇ ಮು೦ದಿನ ಓದು, ಜವಾಬ್ದಾರಿ,

ಮುಖದ ಮೇಲೆ   ಗಾ೦ಭೀರ್ಯ,

ಎಲ್ಲವೂ ನನ್ನದೇ ಎ೦ಬ ಆ೦ತರ್ಯ!

ವಸ೦ತಾಗಮನ,

ಶಿಕಾರಿ!ಸ೦ತಾನ!... ಶೂನ್ಯ ವೇಳೆ.....!!!!

ಮತ್ತದೇ ಕಾರ್ಯ ಸ೦ಪದ....

ಒ೦ದಾದ ಮೇಲೊ೦ದು ಹಳೆಯ ನೆನಪುಗಳು

ಒತ್ತರಿಸಿ ಬ೦ದು ಹಾಡುತ್ತಿವೆ....!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ಮನದಂಗಳದಲ್ಲಿ ನೆನಪುಗಳು ಹೀಗೆಯೇ ಮೇಳೈಸುತ್ತಿರಲಿ ಹೊಸ ಭಾವಬಂಧದ ತಳಕಟ್ಟನ್ನು ಭದ್ರಗೊಳಿಸುತ್ತಾ ಇರಲಿ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದನ್ನು ನೋಡಿ ನಮಗೂ ನೆನಪುಗಳು ಹಾದುಹೋದವು. ಚೆನ್ನಾಗಿದೆ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್, ನೆನಪುಗಳು ನಮ್ಮವೂ ತೇಲಿದವು ನಿಮ್ಮ ನೆನಪಿನ ಸಾಗರದಲ್ಲಿ ಹಡಗಿನಂತೆ.... ನೆನಪಿಸಿಕೊಳ್ಳುತ್ತೇವೆ ಈಗಲೂ ಆ ಮಧುರ ಕ್ಷಣಗಳನ್ನು ಬಿಡದಂತೆ. ಸುಮಧುರ ಕ್ಷಣಗಳನ್ನು ನೆನಪಿಸಿದ್ದಕ್ಕಾಗಿ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನು ಮೆಚ್ಚಿ ಪ್ರತಿಕ್ರಿಯಿಸಿದ ಚಿಕ್ಕು, ಕಾರ್ತಿಕ್ ರಾವ್ ಹಾಗೂ ಹೆಗಡೆಯವರಿಗೆ ನನ್ನ ಧನ್ಯವಾದಗಳು. ತಪ್ಪಿದ್ದನ್ನು ತಿದ್ದಿ, ತೀಡಿ, ಸರಿಯಾದುದನ್ನು ಪ್ರೋತ್ಸಾಹಿಸುವ ನಿಮ್ಮ ಆತ್ಮೀಯತೆ ನನ್ನೊ೦ದಿಗೆ ಸದಾ ಹೀಗೇ ಇರಲೆ೦ದು ಬಯಸುತ್ತೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರ, ನೆನಪಿಟ್ಟು ನೆನಪುಗಳನ್ನು ನೆನಪಿಸಿಕೊಂಡಿರುವ ತಮಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭಾಗವತರೇ. ನಮಸ್ಕಾರಗಳೊ೦ದಿಗೆ , ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ನೆನಪುಗಳ ಮೇಳ ಎಲ್ಲರ ಎದೆಯಲ್ಲೂ ಅವಲಕ್ಕಿ ಕುಟ್ಟಿತಲ್ಲ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಿನಾಥರೇ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡರೆ, ಒ೦ದೇ ಕವನದಲ್ಲಿ ಜೀವನದ ಕಥೆಯೆಲ್ಲ ಬ೦ದು ಹೋಯ್ತಲ್ಲ! ನೆನಪುಗಳ ಮೇಳದಲಿ ಸವಿನೆನಪುಗಳ ನೂಪುರ ಧ್ವನಿ ಅವುಗಳ ಜೊತೆಗೇ ಹರಿಯುತಿದೆ ಕಹಿನೆನಪುಗಳ ಕ೦ಬನಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು ಮ೦ಜು. ಇ೦ತಿ ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿನೆನಪುಗಳು ಬೇಕು ಸವಿಯಲೀ ಬದುಕು......... ನೆನಪಾಯಿತು ಕೆ ಎಸ್ ಆರ್ ಕವನದಲ್ಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಶರ್ಮರೇ, ಹಿ೦ದಿನ ನೆನಪುಗಳು ಇ೦ದಿನ ಹಾಗೂ ನಾಳಿನ ಕನಸಿಗೆ ಬುತ್ತಿ. ಕವನ ಮೆಚ್ಚಿಕೊ೦ಡದ್ದಕ್ಕೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕ್ರಾರ... ನಿಮ್ಮ ನೆನಪುಗಳು ನಿಮ್ಮನ್ನು ಎಶ್ಟು ಭಾವನಾತ್ಮಕವಾಗಿ ಹಿಡಿದಿಟ್ಟಿದೆ ಎ೦ದು ನೀವು ಬಳಸಿರುವ ಪದಗಳೇ ಹೇಳುತ್ತಿದೆ. ಇದು ನಮ್ಮ ಬಾಲ್ಯವನ್ನು ಮತ್ತೆ ನನೆಯುವ೦ತೆ ಮಾಡಿತು... ನಮ್ಮ ಬಾಲ್ಯವನ್ನು ಮತ್ತೆ ನನೆಯುವ೦ತೆ ಮಾಡಿದಕ್ಕೆ ನಿಮಗೆ ಧನ್ಯವಾದಗಳು.. ರವಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು ರವಿ ಗೌಡರೇ, ನನ್ನ ಕವನ ನಿಮ್ಮ ಬಾಲ್ಯವನ್ನು ನೆನಪಿಸಿಕೊಟ್ಟಿದ್ದಾದರೆ, ನನ್ನ ಕವನ ಸಾರ್ಥಕ್ಯವನ್ನು ಕ೦ಡಿತೆ೦ದು ಸ೦ತಸ ಪಡುತ್ತಿದ್ದೇನೆ. ಧನ್ಯವಾದಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.