ಥಟ್ ಅಂತ ಹೇಳಿ - ೧೫೦೦! ಭಾಗವಹಿಸಲು ನಿಮಗೆ ಆಹ್ವಾನ

5

ಸಂಪದಿಗರೆ!

ಥಟ್ ಅಂತ ಹೇಳಿ ಕಾರ್ಯಕ್ರಮದ ೧೫೦೦ ನೆಯ ಕಾರ್ಯಕ್ರಮವು ತನ್ನ ೧೫೦೦ ಕಂತುಗಳ ಪ್ರಸಾರವನ್ನು ಮುಗಿಸಿರುವ ಈ ಸಂದರ್ಭದಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮ. ಇದರೊಡನೆ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲು ಪ್ರಯತ್ನಿಸುತ್ತಿದ್ದೇನೆ. ದಯವಿಟ್ಟು ಬನ್ನಿ!

 

ದಿನಾಂಕ: ೧೩.೦೬.೧೦

ಸಮಯ: ಸಂಜೆ ೪ ಗಂಟೆಯಿಂದ

ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ.

 

ಅಂದು ಕಾರ್ಯಕ್ರಮಕ್ಕೆ ಬಂದಿರುವ ಪ್ರೇಕ್ಷಕರಲ್ಲಿ ಕೆಲವರನ್ನು ಚೀಟಿಯ ಮೂಲಕ ಆಯ್ದ, ಅಲ್ಲಿಯೇ ವಿಶೇಷ ಕ್ವಿಜ್ ನಡೆಸಿ ಪುಸ್ತಕ ರೂಪದ ಬಹುಮಾನಗಳನ್ನು ನೀಡುವ ಯೋಜನೆಯಿದೆ. ಜೊತೆಗೆ ಇತರ ಮನರಂಜನೆಯ ಕಾರ್ಯಕ್ರಮವಿದೆ. ನೀವು ಬಂದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಿಮ್ಮ ಮನೆಮಂದಿಯೊಡನೆ ಬನ್ನಿ!

 

- ನಾಸೋ

 

(ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸರ್, -ಬ್ರೈಲ್ ಲಿಪಿ ಬಗ್ಗೆ ಈಗ ತಾನೆ ನನ್ನೆದುರು ಕುಳಿತು ವಿವರಿಸುತ್ತಿದ್ದಿರಿ! -೧೫೦೦ನೇ ಕಂತು!! -ಆಹ್ವಾನ ಪತ್ರಿಕೆ ತಲುಪಿತು. (ಚಿತ್ರಪುಟದಲ್ಲೇ ನೋಡಿದೆ) ಶುಭಾಶಯಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ. ಸೋಮೇಶ್ವರ ಅವರೇ, ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ನಿಮಗೆ ನನ್ನ ಅಭಿನಂದನೆಗಳು. ಒಳ್ಳೆಯ ಕಾರ್ಯಕ್ರಮ ತಪ್ಪಿಸಿಕೊಳ್ತಾ ಇದೀನಿ ಅಂತ ಬೇಸರವಾಗ್ತಿದೆ. ಮನೆಯಲ್ಲಿ ಹೇಳ್ತೇನೆ, ನನ್ನ ತಮ್ಮ ಅಥವಾ ತಂಗಿ ಬರಬಹುದು. ಧನ್ಯವಾದಗಳು, ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹ್ವಾನ ಪತ್ರಿಕೆ ಇಲ್ಲಿದೆ. ನನಗಂತೂ ಬರಲಾಗುತ್ತಿಲ್ಲ. ಬೆಂಗಳೂರಲ್ಲಿ ಇರುವವರೆಲ್ಲ ಹೋಗಿ, ಅನಂದಿಸುತ್ತೀರಿ ಎಂದು ಆಶಿಸುತ್ತೇನೆ. 

http://sampada.net/files/images/th%201500.preview.jpg

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಸಂತೋಷ ಸರ್... ಖಂಡಿತ ಬರುತ್ತೇವೆ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೇ, ಆಹ್ವಾನ ಸ್ವೀಕೃತವಾಗಿದೆ ಮನಕೂ ಸಂತಸವಾಗಿದೆ ಬರುವ ಇಚ್ಛೆ ಬಲವಾಗಿದೆ ಹೆಚ್ಚಿನೆಲ್ಲಾ ಸಂಪದಿಗರನ್ನೂ ಅಲ್ಲಿಯೇ ಭೇಟಿ ಮಾಡುವ ಹೊಸ ಯೋಚನೆಯೊಂದು ಈ ಮನದಲ್ಲಿ ಹೊಳೆದಿದೆ... - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ. ಸೋಮೇಶ್ವರ ಅವರೇ, ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ನಿಮಗೆ ನನ್ನ ಅಭಿನಂದನೆಗಳು,ಅಲ್ಲಿಗೆ ಬರಲಿಕ್ಕೆ ಪ್ರಯತ್ನ ಪಡುವೆ. -ಚೈತನ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳು ನಾಸೋ ಅವರೇ ಅದೇ ದಿನವೇ ಸಂಮಿಲನವೂ ಅಲ್ವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ. ನಾ. ಸೋಮೇಶ್ವರ ಅವರಿಗೆ ನಮಸ್ಕಾರಗಳು, ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಕಂತನ್ನು ತಲುಪಿದ್ದಕ್ಕಾಗಿ ನಿಮಗೆ ನನ್ನ ಅಭಿನಂದನೆಗಳು. ಒಳ್ಳೆಯ ಕಾರ್ಯಕ್ರಮ ನನಗೂ ಬರಬೇಕೆಂಬ ಆಸೆಯಿದೆ. ಮಳೆ ನಮ್ಮ ಕಾರ್ಯಕ್ರಮಕ್ಕೆ ತೊಂದರೆಯನ್ನುಂಟು ಮಾಡದಿರಲಿ ಎಂದು ವರುಣದೇವನನ್ನು ಪ್ರಾರ್ಥಿಸುತ್ತೇನೆ. ನಿಮ್ಮ ಆಹ್ವಾನಕ್ಕೆ ನನ್ನ ಅಭಿವಂದನೆಗಳು ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಕ್ಷರಮಿತ್ರ ನಾಸೋ ಅವರಿಗೆ ನಮಸ್ಕಾರ. ’ಥಟ್’ ಅಂತ ಹೇಳಿಸಲು ಅಲ್ಲಿ ನೀವು ಮಾಡುವ ಶತಪ್ರಯತ್ನದಂತೆ ’ಝಟ್’ ಅಂತ ನಮಗಿಲ್ಲಿ ನೀಡಿರುವ ಆಹ್ವಾನವೂ ನನಗೆ ಮೆಚ್ಚಿಕೆಯಾಯಿತು. ’ಪ್ರಸಾರ ಭಾರತಿ’ಯು ಮುದ್ರಿಸಿರುವ ಆಮಂತ್ರಣ ಪತ್ರಿಕೆ ಕಂಡು ಕೊಂಚ ಬೇಸರವಾಯಿತು. * ಪತ್ರಿಕೆಯಲ್ಲಿ ನಿಮ್ಮ ಹೆಸರಿರಬೇಕಿತ್ತು. * ’೧೫೦೦’ ಎಂದು ಸಂಖ್ಯೆಯು ಕನ್ನಡಲಿಪಿಯಲ್ಲಿದ್ದಿದ್ದರೆ ಮನಸ್ಸಿಗೆ ಹೆಚ್ಚು ಮುದವಾಗುತ್ತಿತ್ತು. (ದಿನಾಂಕ ಮತ್ತು ಸಮಯ ಕೂಡ.) * ’ಸರ್ವೋಚ್ಛ’ ಎಂಬುದು ತಪ್ಪು ಪ್ರಯೋಗ. ಅದು ’ಸರ್ವೋಚ್ಚ’ ಆಗಬೇಕು. * ನಾಗರಾಜಯ್ಯ ’ಹಂಪಾ’ ಅಲ್ಲ, ’ಹಂ. ಪ.’ (ಕೆಳಗೆ ’ಹಂಪನಾ’ ಎಂದು ತಾವೇ ಸರಿಯಾಗಿ ನಮೂದಿಸಿರುವುದೂ ’ಪ್ರ.ಭಾ.’ ಪ್ರಭೃತಿಗಳ ಅರಿವಿಗೆ ಬರಲಿಲ್ಲ!) * ’ಅಂತರಾಷ್ಟ್ರೀಯ’ ಸರಿಯಲ್ಲ. ’ಅಂತಾರಾಷ್ಟ್ರೀಯ’ ಸರಿ. * ’ದೃಷ್ಠಿ’ ತಪ್ಪು. ’ದೃಷ್ಟಿ’ ಸರಿ. * ’ಅಂತಹೇಳಿ’ ಎಂಬುದು (ಎರಡು ಕಡೆ) ’ಅಂತ ಹೇಳಿ’ ಎಂದಾಗಬೇಕು. * ’ಸಭಿಕ’ ಎಂಬ ಪದಪ್ರಯೋಗ ಸೂಕ್ತವಲ್ಲ. ಇದರರ್ಥ ’ಜೂಜುಕೋರ’ ಎಂದಾಗುತ್ತದೆ. ಕೆಲವು ನಿಘಂಟುಗಳಲ್ಲಿ ’ಸಭಿಕ’ ಎಂಬ ಪದಕ್ಕೆ ’ಸಭಾಸದ’ ಎಂಬ ಅರ್ಥವನ್ನು ನೀಡಲಾಗಿದೆಯಾದರೂ ಎರಡೂ ವಿಭಿನ್ನಾರ್ಥ ಹೊಂದಿರುವ ಪದಗಳು. ಆದ್ದರಿಂದ ’ಸಭಾಸದ’ ಎಂಬ ಪದವೇ ಇಲ್ಲಿ ಸೂಕ್ತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆ ನೀಡಿದ ಹಾಗೂ ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು. ಶಾಸ್ತ್ರಿಗಳೇ! ಆಹ್ವಾನ ಪತ್ರಿಕೆಯಲ್ಲಿರುವ ಸ್ಖಾಲಿತ್ಯಗಳನ್ನು ಪಟ್ಟಿ ಮಾಡಿದ್ದೀರಿ. ಆಹ್ವಾನ ಪತ್ರಿಕೆಯನ್ನು ರೂಪಿಸುವ ಆಗಲಿ ಅಥವ ಕರಡನ್ನು ತಿದ್ದುವ ಭಾಗ್ಯ ನನಗಿರಲಿಲ್ಲ. ಇನ್ನೂ ಕೆಲವು ತಪ್ಪುಗಳಿವೆ. ದಯವಿಟ್ಟು ಕ್ಷಮಿಸಿ. ಸಂಪದಿಗರೆಲ್ಲ ಅಂದು ಭೇಟಿಯಾಗುವುದಾದರೆ, ಕಾರ್ಯಕ್ರಮದ ಮುಗಿದ ನಂತರ ಒಟ್ಟಿಗೆ ಊಟ ಮಾಡೋಣ ಊಟದ ಸ್ಥಳವನ್ನು ನೀವೇ ನಿರ್ಧರಿಸಿ. ಆತಿಥ್ಯದ ಅವಕಾಶವನ್ನು ನನಗೆ ನೀಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. -ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ! ಕ್ಷಮಿಸಬೇಕಾದ್ದು ನೀವು, ದೂರದರ್ಶನದವರನ್ನು. ಇರಲಿ. (ನೀವಂದಂತೆ, ಆಮಂತ್ರಣಪತ್ರಿಕೆಯಲ್ಲಿ ಇನ್ನೂ ಕೆಲವು ಸ್ಖಾಲಿತ್ಯಗಳಿವೆ ಹೌದು. ವ್ಯಾಕರಣದೋಷ; ಪದದೋಷ; ’ದೃಷ್ಠಿ ವಂಚಿತ’ ಇದು ’ದೃಷ್ಟಿವಂಚಿತ’ ಎಂದಾಗಬೇಕಲ್ಲದೆ ಪದದ ಕೊನೆಯಲ್ಲಿ ಅಲ್ಪವಿರಾಮಚಿಹ್ನೆ ಇರಬೇಕು..ಹೀಗೆ. ಬಿಟ್ಟ್ಹಾಕೋಣ.) ಸಂಪದಿಗರೆಲ್ಲ ಹದಿಮೂರರಂದು ಕಾರ್ಯಕ್ರಮ ಮುಗಿದ ನಂತರ ಒಟ್ಟಿಗೆ ಊಟಮಾಡುವ ನಿಮ್ಮ ಸಲಹೆ-ಬಯಕೆ ನಮ್ಮೆಲ್ಲರ ಬಯಕೆಯೂ ಹೌದು. ಅಂದು ನನಗೆ ಪೂರ್ವಯೋಜಿತ ಸಾರ್ವಜನಿಕ ಕಾರ್ಯಕ್ರಮವಿರುವುದರಿಂದ ಬರಲು ಸಾಧ್ಯವಾಗುವುದೇ ಅನುಮಾನ. ’ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲದು.’ ಆನಂದರಾಮ ಬರದಿದ್ದರೆ ಸಂಪದಿಗರ ಒಟ್ಟೂಟಕ್ಕೆ ಕುಂದುಂಟಾಗದು. ಖಂಡಿತ ನಡೆಯಲಿ. ಆನಂದರಾಮನು ಅನಂತರ ವಿವರ ತಿಳಿದು ಆನಂದಿಸುತ್ತಾನೆ. ಕಾರ್ಯಕ್ರಮದ ಸ್ಥಳಕ್ಕೆ ಹತ್ತಿರವಿರುವ ಯಾವುದಾದರೊಂದು ಹೋಟೆಲ್ ಸೂಕ್ತವೆನ್ನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರೀರವರೇ, ನಾನು ತು೦ಬಾ ಸಮಯದಿ೦ದ ಆಮಂತ್ರಣ ಪತ್ರಿಕೆಯಲ್ಲಿನ ಭಾಷಾ ಪ್ರಯೋಗದ ಬಗ್ಗೆ ಯಾರಲ್ಲಿಯಾದರು ಕೇಳಬೇಕು ಅ೦ದು ಕೋಳ್ಳುತ್ತಿದ್ದೆ. ಅದಕ್ಕಾಗಿ ಈ ಸ೦ದರ್ಭವನ್ನು ಬಳಸಿಕೊಳ್ಳುತ್ತೇನೆ. ಅದೇನೆ೦ದರೆ ಆಹ್ವಾನ ಪತ್ರಿಕೆಯಲ್ಲಿ "ಅತಿಥಿಗಳು" ಎ೦ದು ಬಳಸುವ ಬಗ್ಗೆ.. "ಅತಿಥಿಗಳು" ಅ೦ದರೆ ಕರೆಯದೇ ಬರುವವರು ಎ೦ಬ ಅರ್ಥ ಬರುವುದಿಲ್ಲವೇ? "ಅಭ್ಯಾಗತರು" ಎ೦ಬ ಪದದ ಬಳಕೆ ಸರಿಯಲ್ಲವೇ? "ಅತಿಥಿಗಳು" ಅಥವಾ "ಅಭ್ಯಾಗತರು" ಯಾವುದು ಸರಿ? ಈ ವರೆಗೊ ನನಗೆ ಸಮ೦ಜಸವಾದ ಉತ್ತರ ಸಿಕ್ಕಿಲ್ಲ.. ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅತಿಥಿಗಳು = ತಿಥಿಯನ್ನು ನೋಡದೆ ಬರುವವರು; ಮೂಲ ಅರ್ಥ ಹಠಾತ್ತಾಗಿ ಮನೆಗೆ ಬರುವ ಬಂಧುಮಿತ್ರರು; ಈಗ ಈ ಶಬ್ಧದ ಅರ್ಥ ಆಮಂತ್ರಣ ಸಹಿತ ಅಥವ ಆಮಂತ್ರಣ ರಹಿತ ಬರುವ ವ್ಯಕ್ತಿಗಳು ಎಂದು ಹಿಂಜಲಾಗಿದೆ. ವಾಡಿಕೆಯಲ್ಲಿ ‘ಆಮಂತ್ರಣವನ್ನು ಪಡೆದು ಬಂದವರು’ ಎಂಬರ್ಥದಲ್ಲಿಯೇ ಹೆಚ್ಚು ಪ್ರಯೋಗವಾಗುತ್ತಿದೆ. ಅಭ್ಯಾಗತರು=ಇದರ ಅರ್ಥವನ್ನು ಯಾರೂ ಹಿಂಜಿಲ್ಲ. ಆಮಂತ್ರಣವಿಲ್ಲದೆ ಮನೆಗೆ ಬರುವ ವ್ಯಕ್ತಿ ಎಂಬುದು ಸರಿಯಾದ ಅರ್ಥ. ಆಹ್ವಾನ ಪತ್ರಿಕೆಯನ್ನು ಮುದ್ರಿಸುವಾಗ ಅತಿಥಿಗಳು ಎಂಬ ಶಬ್ಧವನ್ನು ಬಳಸುವ ಬದಲು ‘ಆಮಂತ್ರಿತರು’ ಎಂಬ ಶಬ್ಧವನ್ನು ಬಳಸುವುದು ಹೆಚ್ಚು ಸೂಕ್ತ. - ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕೊಂಡಿ ನೋಡಿ: http://dsal.uchicago... ಅಭಿ - ಹತ್ತಿರಕ್ಕೆ (ಮನೆಗೆ), ಆಗತ- ಬಂದವ - ಅಭ್ಯಾಗತ- ಮನೆಗೆ ಬಂದವ - ಆದರೆ ಆಮಂತ್ರಿತನಲ್ಲ, ಅಪರಿಚಿತನೂ ಅಲ್ಲ. ಆತ ಬರುವ ನಿರೀಕ್ಷೆ ಮನೆಯವರಿಗೆ ಇದ್ದಿಲ್ಲ. ಅಭ್ಯಾಗಮ - (ಹತ್ತಿರಕ್ಕೆ) ಬರುವುದು, (ಹಿಂದಿಯಲ್ಲಿ ಅಭೀ ಶಬ್ದದ ಅರ್ಥ ಬೇರೆ, ಅಲ್ಲಿ ಅಭೀ ಎಂದರೆ ಈಗ ಎಂದಾಗುತ್ತದೆ.) ಅತಿಥಿಯೂ ಅದೇ ವರ್ಗಕ್ಕೆ ಸೇರಿದವನು. The unexpected guest is called the atithi, literally meaning "without a set time." ಆಮಂತ್ರಿತರು, ನಿಮಂತ್ರಿತರು, ಆಹ್ವಾನಿತರು ಇವರೆಲ್ಲ ಕರೆ ಹೇಳಿಸಿಕೊಂಡು ಬರುವವರು :) ಉತ್ತರ ಸರಿಯಿದೆಯೇ ಎಂದು ಸಂಸ್ಕೃತ ಹೆಚ್ಚು ಬಲ್ಲವರು ಹೇಳಬೇಕು :-) ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟೇಶಮೂರ್ತಿ ಅವರೇ, ಇದೀಗಷ್ಟೇ ನಿಮ್ಮ ಪ್ರಶ್ನೆಗಳನ್ನು ಹಾಗೂ ನಾಸೋ ಮತ್ತು ಶ್ಯಾಮಲಾ ಅವರ ಉತ್ತರಗಳನ್ನೂ ನೋಡಿದೆ. ಆಗಸ್ಟ್ ೨, ೨೦೦೯ರ ’ಕನ್ನಡಪ್ರಭ’ ದಿನಪತ್ರಿಕೆಯ ’ಸಾಪ್ತಾಹಿಕ ಪ್ರಭ’ದಲ್ಲಿ ಈ ಬಗ್ಗೆ ನಾನು ಕೊಟ್ಟಿರುವ ವಿವರಣೆ ಪ್ರಕಟವಾಗಿದ್ದು ಅದು ಈ ಕೆಳಗಿನಂತಿದೆ: ’ಅಭ್ಯಾಗತ’ ಎಂದರೆ ’ಅನಿರೀಕ್ಷಿತವಾಗಿ ಆಗಮಿಸಿದ ಅತಿಥಿ’ ಎಂದರ್ಥ. (ಅಭಿ+ಆಗತ=ಅಭ್ಯಾಗತ. ’ಅಭಿ’ ಎಂಬ ಉಪಸರ್ಗಕ್ಕೆ ಅದರೊಡನಿರುವ ಶಬ್ದಾನುಸಾರ ನಾನಾ ಅರ್ಥಗಳಷ್ಟೆ.) ’ಅತಿಥಿ’ಯು ಆಹ್ವಾನಿತನಾಗಿರಬಹುದು, ಆಗಿಲ್ಲದೆಯೂ ಇರಬಹುದು. ಆಮಂತ್ರಣಪತ್ರವೊಂದರಲ್ಲಿ ’ಅಭ್ಯಾಗತ’ ಪದದ ಬಳಕೆಯನ್ನು ಆಕ್ಷೇಪಿಸಿ ನಾನು ಈ ವಿವರಣೆ ನೀಡಿದ್ದೆ. ಆಮಂತ್ರಣಪತ್ರದಲ್ಲಿ ’ಅತಿಥಿ’ ಪದದ ಬಳಕೆಯೇ ಸರಿ. ’ಅಭ್ಯಾಗತ’ ಎಂದರೆ ’ಅನಿರೀಕ್ಷಿತವಾಗಿ ಹಾಗೂ ಆಹ್ವಾನವಿಲ್ಲದೆ ಆಗಮಿಸಿದವ’ ಎಂದರ್ಥ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ. ನಾ. ಸೋ ರವರೇ, ಶಾಸ್ತ್ರೀರವರೇ,ಹಾಗೂ ಶಾಮಲರವರೇ ಸಮ೦ಜಸ ವಿವರಣೆಗಾಗಿ ಧನ್ಯವಾದಗಳು.ಉತ್ತರ ಸಿಕ್ಕಿತು..:) ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ. ನಾ. ಸೋಮೇಶ್ವರ ಅವರಿಗೆ ನಮಸ್ಕಾರಗಳು, ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಕಂತನ್ನು ತಲುಪಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ಅಲ್ಲಿಗೆ ಬರಲಿಕ್ಕೆ ಪ್ರಯತ್ನ ಪಡುವೆ.... ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥಟ್ ಅಂತ ಹೇಳಿ ಕಾರ್ಯಕ್ರಮ ೧೫೦೦ರ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು. ಇನ್ನು ಹೆಚ್ಚು ಹೆಚ್ಚು ಕಂತುಗಳು ಪ್ರಸಾರವಾಗಲೆಂದು ಆಶಿಸುತ್ತೇನೆ.ಬರಲಿಕ್ಕೆ ಆಗದಕ್ಕೆ ಖೇದ. ಮನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಸೋ ಸರ್, ’ಥಟ್ ಅಂತ ಹೇಳಿ’ ಕಾರ್ಯಕ್ರಮ ೧೫೦೦ ರ ಗಡಿ ತಲುಪುತ್ತಿರುವ ಶುಭಸಂದರ್ಭದಲ್ಲಿ ನಿಮಗೆ ನನ್ನ ಅಭಿನಂದನೆಗಳು. ನಮಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಯುತ ನಾ ಸೋಮೇಶ್ವರರವರಿಗೆ, ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಎರಡು ಮಾತಿಲ್ಲ. ಆದರೆ ಇದು ೧೫೦೦ನೇ ಸಂಭ್ರಮ ಅಂತೀರಿ, ನಿಮ್ಮ ಪರಿಚಯ ಪತ್ರದಲ್ಲಿ ಈಗಾಗಲೇ ೧೫೦೨ ಕಂತುಗಳು ಮುಗಿದಿವೆ ಎಂದು ನಮೂದಿಸಿದ್ದೀರಿ.ಯಾವುದು ಸರಿ ??? >>ದೂರದರ್ಶನದಲ್ಲಿ ಈಗ `ಥಟ್ ಅಂತ ಹೇಳಿ` ಕ್ವಿಜ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. 1502 ಕಂತುಗಳು ಮುಗಿದಿವೆ<<........???? ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್, ಸೂಕ್ಷ್ಮವಾಗಿ ಗಮನಿಸಿದ್ದಕ್ಕೆ ಅಭಿನಂದನೆಗಳು. ಇವೆರಡು ಮುದ್ರಣವಾದ ಹಾಗೂ ಪ್ರಸಾರವಾದ ಸಂಖ್ಯೆಗಳನ್ನು ಸೂಚಿಸುತ್ತವೆ. ವಾಸ್ತವದಲ್ಲಿ ಈಗಾಗಲೆ ಜುಲೈ ತಿಂಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಮುದ್ರಿಸಿಟ್ಟುಕೊಂಡಿದ್ದೇವೆ. ಅಂದರೆ ಮುದ್ರಣದ ಸಂಖ್ಯೆಯು ೧೫೫೦ ನ್ನು ಮೀರುತ್ತದೆ. ಈ ಶನಿವಾರ ಹಾಗೂ ಭಾನುವಾರ ೧೫ ಕಾರ್ಯಕ್ರಮಗಳನ್ನು ಮುದ್ರಿಸಲಿದ್ದೇವೆ. ಆಗ ಒಟ್ಟು ಮುದ್ರಣವಾಗಿರುವ ಕಾರ್ಯಕ್ರಮಗಳ ಸಂಖ್ಯೆಯು ೧೫೬೫ ಆಗುತ್ತದೆ. ೧೫೦೦ ನೆಯ ಕಾರ್ಯಕ್ರಮವಿನ್ನೂ ಪ್ರಸಾರವಾಗಬೇಕಿದೆ. ಅದನ್ನು ವಿಶೇಷವಾಗಿ ಮುದ್ರಿಸಿ ಪ್ರಸಾರ ಮಾಡಲು ಈಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಒಟ್ಟು ೩ ಗಂಟೆಗಳ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಎಷ್ಟು ಗಂಟೆಯ ಕಾರ್ಯಕ್ರಮವು ಕಂತಿನ ರೂಪದಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಸಧ್ಯಕ್ಕಿಲ್ಲ. -ನಾಸೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾ.ಸೋಮೇಶ್ವರ ಅವರಿಗೆ, ನಮ್ಮ ನೆಚ್ಚಿನ "ಚಂದನ"ದಲ್ಲಿ ಮೂಡಿಬರುತ್ತಿರುವ "ಥಟ್ ಅಂತ ಹೇಳಿ" ಕಾರ್ಯಕ್ರಮ ೧೫೦೦ ರ ಗಡಿ ದಾಟಿದ್ದು ಕೇಳಿ ಬಹಳ ಸಂತೋಷವಾಯಿತು. ನಾನು ತಾವು ಕೇಳುವ ಪ್ರಶ್ನೆಗಳನ್ನು ಬರೆದಿಟ್ಟಿಕೊಳ್ಳುತ್ತೀರುತ್ತೇನೆ. ಬರಿ ದಾರಾವಾಹಿಗಳೆ ತುಂಬಿರುವ ವಾಹಿನಿಗಳಲ್ಲಿ ಇಂತಹ ಕಾರ್ಯಕ್ರಮ ಕಳಸ ಪ್ರಾಯವಾಗಿದೆ. ನಮ್ಮ ಜ್ಞಾನವನ್ನು ಹೆಚ್ಚಿಸುವ ಈ ಕಾರ್ಯಕ್ರಮ ನಿರಂತರವಾಗಿ ಮೂಡಿಬರುತ್ತಿರಲಿ ಎಂಬುದೆ ನಮ್ಮೆಲ್ಲಾರ ಆಶಯ. ನಾನು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಅದರೆ "ಚಂದನ"ದಲ್ಲಿ ಆ ವಿಶೇಷ ಕಾರ್ಯಕ್ರಮದ ತುಣುಕುಗಳನ್ನಾದರು ತೋರಿಸುವಿರಿ ಎಂದು ಚಾತಕ ಪಕ್ಷಿಯ ತರಹ ಕಾಯುತ್ತಿರುತ್ತೇನೆ. ಚಂದನಕ್ಕೂ ತಮಗೂ ನಮ್ಮ ಹಾರ್ದಿಕ ಶುಭಾಶಯಗಳು. ಮೌನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.