ಸಿನೆಮಾ ವಿಮರ್ಶೆ

ಕಾಸ್ಟ್ ಅವೆ (CAST AWAY)

field_vote: 
Average: 4 (2 votes)
To prevent automated spam submissions leave this field empty.

ಕಾಸ್ಟ್ ಅವೆ (CAST AWAY)...೯೦ರ‍ ದಶಕದಲ್ಲಿ ತೆರೆಕಂಡ ಈ ಚಿತ್ರ ನನಗೆ ಬಹಳ ಅಚ್ಚುಮೆಚ್ಚು...


ನಾನು ಆಂಗ್ಲ ಚಿತ್ರಗಳನ್ನು ನೋಡುತ್ತಿದ್ದದ್ದು ಬಹಳ ವಿರಳ. ಒಮ್ಮೆ ರವಿ ಬೆಳಗೆರೆ ಯವರ ಹಾಯ್ ಬೆಂಗಳೂರಿನ


ಖಾಸ್ ಬಾತ್ ಅಂಕಣದಲ್ಲಿ ರವಿಯವರು ಈ ಚಿತ್ರದ ಬಗ್ಗೆ ವಿಶ್ಲೇಷಿಸಿದ್ದರು..ಅದನ್ನು ಓದಿದ ಮೇಲೆ ಕುತೂಹಲದಿಂದ


ಈ ಚಿತ್ರದ ಡಿ.ವಿ.ಡಿ ಯನ್ನು ತಂದು ನೋಡಿದೆ.


 


ಚಿತ್ರದಲ್ಲಿ ನಾಯಕ "ಫೆಡೆಕ್ಸ್" ಕೊರಿಯರ್ ಕಂಪನಿಯಲ್ಲಿ ನೌಕರಿಯಲ್ಲಿರುತ್ತಾನೆ. ಒಮ್ಮೆ ಸರಕು ಸಾಗಣೆ ವಿಮಾನದಲ್ಲಿ


ಹೊರಟಿದ್ದಾಗ ವಿಮಾನ್ ದುರಂತಕ್ಕೀಡಾಗಿ ವಿಮಾನ ಸಮುದ್ರದಲ್ಲಿ ಬಿದ್ದು ಹೋಗುತ್ತದೆ. ನಾಯಕನ ಹೊರತಾಗಿ ಬೇರೆ


ಯಾರು ಉಳಿಯುವುದಿಲ್ಲ.. ನಾಯಕ ಹಾಗು ಹೀಗು ಮಾಡಿ ಒಂದು ದ್ವೀಪಕ್ಕೆ ಬಂದು ಬೀಳುತ್ತಾನೆ. ಆ ದ್ವೀಪವೋ


ನಿರ್ಮಾನುಷವಾದ ದ್ವೀಪ.


 

ಲೇಖನ ವರ್ಗ (Category): 

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸೃಷ್ಟಿಸಿದ ಚಿತ್ರ ’ನವಿಲಾದವರು’

field_vote: 
No votes yet
To prevent automated spam submissions leave this field empty.

ಸೃಜನಶೀಲ ಅಭಿವ್ಯಕ್ತಿ ಎಂದೆಂದಿಗೂ ಯಾತನೆಯ ಚಟುವಟಿಕೆಯೇ ಆಗಿರುತ್ತದೆ. ಅಕ್ಷರವೋ ಕುಂಚವೋ ಆದರೆ ಒಂದು ಮಟ್ಟಕ್ಕೆ ಅಭಿವ್ಯಕ್ತಿಗೆ ಒಂದು ಚೌಕಟ್ಟನ್ನು ಒದಗಿಸಿಬಿಡಬಹುದು. ಅನುಭವ, ಸಂಸ್ಕಾರ ಇವೆರಡು ಸಂಕಟದೊಂದಿಗೆ ಬೆರೆತಾಗ ಆ ಸೃಜನಶೀಲ ಅಭಿವ್ಯಕ್ತಿ ಹೆಚ್ಚು ಅರ್ಥಪೂರ್ಣವಾಗಬಲ್ಲದು. ದೃಶ್ಯಮಾಧ್ಯಮ ಅನುಭವ, ಸಂಸ್ಕಾರಕ್ಕೆ ಮಾತ್ರ ಒದಗಿಬರುವ ಒಲಿದುಬರುವ ಸಾಧನವೇನಲ್ಲ. ಏಕೆಂದರೆ ವೆಚ್ಚ ಬರಿ ಕುಂಚಕ್ಕೆ, ಬಣ್ಣಕ್ಕೆ ಸೀಮಿತವಾಗಿರುವುದಿಲ್ಲ. ಹೆಚ್ಚು ಆರ್ಥಿಕ ಸಂಪನ್ಮೂಲ, ಮಾನವ ಸಂಪನ್ಮೂಲವನ್ನು ಬೇಡುವ ಚಟುವಟಿಕೆ-ದೃಶ್ಯಮಾಧ್ಯಮ.

ಲೇಖನ ವರ್ಗ (Category): 

ಪಂಚರಂಗಿಗಳು

field_vote: 
Average: 3 (1 vote)
To prevent automated spam submissions leave this field empty.

ಭಾನುವಾರದ ಬೇಸರಗಳುಉಮಾ ಚಿತ್ರಮಂದಿರಗಳುಒಂದು ಗಂಟೆಯ ಆಟಗಳು,


ಪಂಚರಂಗಿ ಸಿನಿಮಾಗಳುನಿಧಿ ಸುಬ್ಬಯ್ಯನ ಮುದ್ದು ಮುಖಗಳು,


ದಿಗಂತನ ಗಳು, ಗಳು, ಗಳು ಸಂಭಾಷಣೆಗಳುರಾಜು ತಾಳಿಕೋಟೆಯ ಹಾಸ್ಯ ಸಂಭಾಷಣೆಗಳು,

ಲೇಖನ ವರ್ಗ (Category): 

ಪಿಕ್ಚರ್ ಅಷ್ಟೇನೇ!!!

field_vote: 
Average: 3 (2 votes)
To prevent automated spam submissions leave this field empty.

ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’ ದು ಸೆಕೆ೦ಡ್ ಪಾರ್‍ಟ್ ಥರಾನೇ ಅನ್ನಿಸ್ತು. ’ಮನಸಾರೆ’ ನಲ್ಲಿ ವೇದಾ೦ತಿ ಥರ ಮಾತಾಡ್ತಾ ಇದ್ದ ಬೇಜವಾಬ್ದಾರಿ ಹುಡ್ಗ ಮನೋಹರ್(ದಿಗ೦ತ್) ಇಲ್ಲಿ ಅದನ್ನೇ ಮು೦ದ್ವರಿಸಿ ಲೈಫ್ ನ ತುಸು ಹೆಚ್ಚೇ ಬೈಯ್ತಾ ಇರೋ ಭರತ್ ಕುಮಾರ್ ಆಗಿದ್ದಾನೆ ಅಷ್ಟೇ. ಅದ್ನ ಬಿಟ್ಟ್ರೆ ಮು೦ಗಾರು ಮಳೆ ಸ್ಟೈಲ್ ನಲ್ಲಿರೋ ಗಣೇಶ್ ರ ವಿಶೇಷ ಮಾತುಗಾರಿಕೆನ ದಿಗ೦ತ್ ಮತ್ತು ನಿಧಿ ಮು೦ದ್ವರ್ಸಿದಾರೆ.

ಲೇಖನ ವರ್ಗ (Category): 

ಜೋಗಯ್ಯ ಕನ್ನಡ ಚಿತ್ರದ ವಿಮರ್ಶೆ - ಇನ್ನೂ ಬಿಡುಗಡೆಯಾಗದ ಚಿತ್ರ

field_vote: 
Average: 4.8 (5 votes)
To prevent automated spam submissions leave this field empty.

ಜೋಗಯ್ಯ ಜೋಗಿಯ ಪಾರ್ಟ್ 2. ನಿರ್ದೇಶನ ಪ್ರೇಮ್, ಹೀರೋ ಶಿವರಾಜ್ಕುಮಾರ್.

ಜೋಗಿ ಚಿತ್ರದಲ್ಲಿ ಹಳ್ಳಿಯಿಂದ ಬೆಂಗಳೂರಿಗೆ ಬಂದ ಶಿವಣ್ಣ ರೌಡಿಯಾಗುತ್ತಾನೆ. ಕ್ಲೈಮ್ಯಾಕ್ಸ್ ನಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದೊಂದಿಗೆ ಚಿತ್ರ ಅಂತ್ಯಗೊಳ್ಳುತ್ತದೆ.

ಇದೀಗ "ಜೋಗಯ್ಯ" ಚಿತ್ರ ಇನ್ನೂ ಸೆಟ್ ಏರಿಲ್ಲ. ಆಗಲೇ ಅಬ್ಬರದ ಪ್ರಚಾರ ಆರಂಭವಾಗಿದೆ. ಇದರ ವಿಮರ್ಶೆ ಈ ರೀತಿ ಇರಬಹುದೆ ಎಂದು ತಮಾಷೆಗಾಗಿ ಬರೆಯುತ್ತಿದ್ದೇನೆ.

 

ಲೇಖನ ವರ್ಗ (Category): 

ಉಪೇಂದ್ರನ ಹತ್ತನೇ ಅವತಾರ ( ಇನ್ನೂ ಎತ್ತಲಿ ದಶಾವತಾರಗಳು !) :ಸೂಪರ್ !

ಅಂತೂ ಕೊನೆಗೂ ಉಪ್ಪಿ ೧೦ ವರ್ಷಗಳ ನಂತರ ತಲೆಗೆ ಟೋಪಿ ಹಾಕಿದ್ದಾನೆ ,ಅರ್ಥಾತ್ ಆಕ್ಷನ್ ಕಟ್ ಅನ್ನಲಿದ್ದಾನೆ. ಈ ಭಾರಿ ಅದೊಂದು ಒಳ್ಳೆಯ ಚಿತ್ರ ಅಂತು ಕೊಡುತ್ತಾನೆ ಅಂತ ನಂಬಿಕೆ ಇದೆ. ಉಪ್ಪಿ ಇಷ್ಟ ಆಗೋದೇ ಆ ಕಾರಣಕ್ಕೆ . ಮನಸಿನ ಮಾತನ್ನು ಹೇಳುವ ಅಂಜಿಕೆ ಇರುವ , ಇಲ್ಲದಿರುವ ಜನರಿಗೆ ಅವ ಇಷ್ಟ ಆಗ್ತಾನೆ .

ವಿಭಿನ್ನ ಗೆಟಪ್ , ಹಾವ ಭಾವ ,ಚಿತ್ರಿಸುವ ವಿಧಾನ ,ಘಳಿಗೆಗೆ ಒಮ್ಮೆ ಕೊಡುವ ಟ್ವಿಸ್ಟ್ , ಫ್ಯಾಮಿಲಿ ಕೂತು ನೋಡಲಾಗದ ಚಿತ್ರದಲ್ಲಿ ಒಂದು ಅಡಗಿ ಕುಳಿತ ಸಂದೇಶ , ಅಧ್ಯಾತ್ಮ ದ ಟಚ್ ಕೊಟ್ಟು ಎಲ್ಲ ವರ್ಗವನ್ನೂ ಕೊರಿಸಿ ಚಿತ್ರ ನೋಡಿಸುತ್ತಾನೆ . ಅವನ ಚಿತ್ರದಲ್ಲಿ ಅವನು ಹೇಳುವ ಸಂದೇಶದ ಹಿಂದಿರುವ ಮಸಾಲೆ ಮರೆತು ನೋಡಿದರೆ ಚಿತ್ರ "ಸೂಪರ್" !

ಗಣೇಶ್ ಕಾಸರಗೋಡ್ ವಿ.ಕ ದಲ್ಲಿ ಬರೆಯುತ್ತಾರೆ , ಅದೊಂದು ಮಟ ಮಟ ಮಧ್ಯಾನ್ಹ ಉಪೇಂದ್ರ ಅವರ ಆಫೀಸ್ ಗೆ ಬಂದನಂತೆ . ಅದಿನ್ನೂ ಉಪೇಂದ್ರ , ಅನಂತನ ಅವಾಂತರ ದ ಕಾಮಣ್ಣ ನ ಪಾತ್ರ ಮಾಡಿದ್ದ ಅಷ್ಟೇ .

field_vote: 
Average: 3.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಸಿನಿಮಾ ಮಾಡುವಿಕೆಯ ಹೊಸ "ಅವತಾರ"....

ಎಲ್ಲೆಲ್ಲೂ ಅದೇ ಮಾತು, ಎಲ್ಲರೂ ಎಲ್ಲರನ್ನೂ ಕೇಳುವದೇ, "ಅವ್ತಾರ್" ನೋಡಿದ್ರಾ?... ಅವತಾರ್ ನೋಡಿದ್ರಾ?,...

ತ್ರೀ ಡಿ ಸಿನಿಮಾ ನೀವಿನ್ನೂ ಒಂದೂ ನೋಡಿಲ್ಲ ಅಂದ್ರೆ, ಈ ಸಿನಿಮಾ ಮಿಸ್ ಮಾಡಿಕೊಳ್ಳಲೇ ಬೇಡಿ... ಈ ಬಿಳಿಯರು ಏನಾದರೊಂದು ಹೊಸದನ್ನು ಮಾಡ್ತಾನೇ ಇರ್ತಾರೆ, ಕೆಲವು ಸಲ ಅಸೂಯೆ ಆಗುತ್ತೆ,.. :P

ನನಗಂತೂ ಈ ಸಿನಿಮಾ ನೋಡಿ, ಅನಿಸಿದ್ದು, .. ವಾ!! ವಾ!!.. ಅಸ್ಟೇ.. ಹೇಳುವದಕ್ಕೆ ಸರಿಯಾದ ಪದ ಸಿಗುತ್ತಿಲ್ಲ.. ಅದನ್ನು ನೋಡಿಯೇ ತಿಳಿದುಕೊಳ್ಳಬೇಕು.. :)

field_vote: 
Average: 4 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಸ್ಲಂ ಡಾಗ್ ... ಯಶಸ್ಸು

field_vote: 
No votes yet
To prevent automated spam submissions leave this field empty.

ಆಸ್ಕರ್ ಪ್ರಶಸ್ತಿಗಳನ್ನು “ಸ್ಲಂ ಡಾಗ್ ಮಿಲಿಯನಯರ್” ಒಂದರ ಮೇಲೊಂದರಂತೆ ಕೊಳ್ಳೆ ಹೊಡೆಯುತ್ತಿದ್ದಾಗ ನೆನಪಾಯಿತು “ಭಗವಾನ್ ನಹೀ ದೇತಾ, ದೇತಾ ತೋ ಥಪ್ಪಡ್ ಮಾರ್ ದೇತಾ” ಅದು ನಿಜವೋ ಅನ್ನಿಸಿತು! ದೇವರು ಜಿಪುಣ, ಆದರೆ ಕೊಟ್ಟರೆ ಭರಪೂರ ಕೊಡುತ್ತಾನೆ!

ಅಲ್ಲ, ಇದು ತನಕ ಎಷ್ಟೊಂದು ಬಾರಿ ಆಸ್ಕರ್ ಪ್ರಶಸ್ತಿಗೆ ನಮ್ಮ ಚಿತ್ರಗಳು ಹೋಗಿಲ್ಲ. ಕೊನೆಯ ಸುತ್ತಿನ ತನಕವೂ ಬಂದು ಬಂದು ಮುಗ್ಗರಿಸುತ್ತಿದ್ದುವು. ಆದರೆ ಈ ಬಾರಿ ಹಾಗಾಗಲಿಲ್ಲ - ಪ್ರಶಸ್ತಿಯ ಮೇಲೆ ಪ್ರಶಸ್ತಿಗಳು ಬಂದು ಬಿಟ್ಟಿವೆ. ಭಾರತೀಯ ಸಾಕ್ಷ್ಯ ಚಿತ್ರ- “ಸ್ಮೈಲ್ ಪಿಂಕೀ” ಕೂಡ ತಣ್ಣಗೆ ಆಸ್ಕರ್‌ನನ್ನು ಮುಡಿಗೇರಿಸಿಕೊಂಡು ಅಚ್ಚರಿ ಮೂಡಿಸಿದೆ.
ಇದೊಂದು ಖುಷಿಯ ಕ್ಷಣ. ಮುಕ್ತವಾಗಿ ಆನಂದಿಸುವ ಹೊತ್ತು.

ನಾನು ಚಲನ ಚಿತ್ರಗಳ ವಿಮರ್ಶಕನಲ್ಲ. ಸದಭಿರುಚಿಯ ಚಿತ್ರಗಳನ್ನು ಸವಿಯುವ ಒಬ್ಬ ಸಾಮಾನ್ಯ ಪ್ರೇಕ್ಷಕ ಮಾತ್ರ. ಈ ನೆಲೆಯಲ್ಲಿ ನೋಡಿದಾಗ ಅಮೀರ್ ಖಾನ್ ಚಿತ್ರಗಳು - “ಲಗಾನ್” ಆಸ್ಕರ್ ಪ್ರಶಸ್ತಿ ಪ್ರಾಯಶ: ಪಡೆಯಬಹುದಾಗಿತ್ತು ಎಂದು ಅನ್ನಿಸಿದರೂ, ಚಿತ್ರದ ಕೆಲವು ಭಾಗಗಳ ಹಾಡುಗಳು ಮತ್ತು ತೀರ ನಾಟಕೀಯತೆ ಆಸ್ಕರ್ ಪ್ರಶಸ್ತಿಯಿಂದ ಚಿತ್ರವನ್ನು ದೂರ ಇಟ್ಟವೇನೋ. ಇದು ಪ್ರಾಯಶ: “ರಂಗ್ ದೇ ಬಸಂತೀ”ಗೂ ಅನ್ವಯಿಸುತ್ತದೆ. ಹಾಗಾಗಿ ಈ ಬಾರಿ ಕೂಡ ಹಾಗೆಯೇ ಆಗಬಹುದೆಂದು ನನಗನ್ನಿಸಿತ್ತು. ಆದರೆ ನನ್ನೆಣಿಕೆ ತಪ್ಪಾದದ್ದು ತುಂಬ ಖುಷಿಯಾಯಿತು.

ಲೇಖನ ವರ್ಗ (Category): 

ಒಬ್ಬ "ಸಾಮಾನ್ಯ" ಇನ್ ’ಮುಂಬೈ’ನಲ್ಲಿ "ಎ ವೆಡ್ ನಸ್ ಡೇ"

field_vote: 
No votes yet
To prevent automated spam submissions leave this field empty.

ಈ ಸಿನಿಮಾವನ್ನು ನಾನು ಮುಂಬೈ ಘಟನೆಯ ಮುಂಚೆ ನೋಡಿದ್ದರೆ ನನ್ನ ಅಭಿಪ್ರಾಯ ಸಾಮಾನ್ಯ ಸಿನಿಮಾ ವೀಕ್ಷಕನದಾಗಿರುತ್ತಿತ್ತೇನೊ. ಆದರೆ ಮುಂಬೈ ಘಟನೆ ಇತರ ’ಭಾರತೀಯ’ರು ಮರೆತಂತೆ ನನಗೆ ಮರೆಯಲು ಸಾದ್ಯವಾಗುವ ಮೊದಲು ಈ ಸಿನಿಮಾ ನೋಡಿದೆ ನನ್ನ ದುರಾದ್ರುಷ್ಟ..!

ಲೇಖನ ವರ್ಗ (Category): 

’ಹೀರೊ" ರಹಿತ ಹೀರೊಗಳ ಕನ್ನಡ ಸಿನಿಮಾ ’ನವಗ್ರಹ’

field_vote: 
Average: 2 (1 vote)
To prevent automated spam submissions leave this field empty.

ನಮ್ಮ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗ.ಬಾಲಿವುಡ್ ಗೆ ಸಮನಾಗಿ ಬೆಳೆಯ ಬೇಕೆಂದರೆ ಏನು ಮಾಡಬೇಕು...?

೧. ಅವರ ಸಮವಾಗಿ ಯೋಚನೆ ಮಾಡಬೇಕು.
ಅಥವಾ
೨. ಅವರ ಯೋಚನೆಗಳನ್ನು ನಮ್ಮ ಪ್ರಾದೇಶಿಕತೆಗೆ ತಕ್ಕಂತೆ ಪರಿ’ವರ್ತಿಸಿ’ ನಮ್ಮ ಸಿನಿಮಾಗಳನ್ನು ಮಾಡಬೇಕು.(ಇದು ಕನ್ನಡ ಚಿತ್ರರಂಗವನ್ನು ಬಾಲಿವುಡ್ಗೆ ಸಮನಾಗಿ ತರಬೇಕೆಂದು ಯೋಚಿಸುವವರಿಗೆ ಮಾತ್ರ.)

ಲೇಖನ ವರ್ಗ (Category): 

ಇಬ್ಬರು ’ಹೀರೊ’ ಒಂದು ಸಿನಿಮಾ, ”ಸೈಕೊ”

field_vote: 
No votes yet
To prevent automated spam submissions leave this field empty.

ಕನ್ನಡ ಚಿತ್ರರಂಗ ಬದಲಾವಣೆಯ ದಿಕ್ಕಿನಲ್ಲಿ ಹೊರಟಿದಿಯೇ...?

ಲೇಖನ ವರ್ಗ (Category): 

ಗುಲಾಬಿ ಟಾಕೀಸ್!!!

field_vote: 
No votes yet
To prevent automated spam submissions leave this field empty.

ಹಲವಾರು ದಿನಗಳ ನಂತರ ಒಂದು ಉತ್ತಮ ಚಿತ್ರ ನೋಡಿದ ಖುಷಿ ಇವತ್ತು. ನಾವು ಚಿಕ್ಕಂದಿನಲ್ಲಿದ್ದಾಗ ನೋಡಿದ, ಮಾಡಿದ, ಕೇಳಿದ್ದನ್ನು ತೆರೆಯ ಮೇಲೆ ನೋಡಿ ಮನಸ್ಸು ತುಂಬಿ ಬಂತು. ನಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕುವಂತೆ ಮಾಡಿದೆ ಗಿರೀಶ್ ಕಾಸರವಳ್ಳಿಯವರಿಗೆ ಅನಂತ ಧನ್ಯವಾದಗಳು. ಮದ್ಯಂತರದವರೆಗೂ ತಿಳಿಹಾಸ್ಯ ಬೆರೆತ ಸಂಭಾಷಣೆ ಮನಸ್ಸಿಗೆ ಮುದ ಕೊಟ್ಟಿತು.

ಲೇಖನ ವರ್ಗ (Category): 

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

field_vote: 
No votes yet
To prevent automated spam submissions leave this field empty.

ಕ್ಲಾಸೇ ಇಲ್ಲದ ವಿಮರ್ಶಕನಿಂದಲೂ ಥರ್ಢ್ 'ಕ್ಲಾಸ್' ನಲ್ಲಿ ಗೆದ್ದ ದಶಾವತಾರಿ ಕಮಲ್.....

ನಾಡಿನ ಹೆಮ್ಮೆಯ? ಪತ್ರಿಕೆ ಎಂದು ಹೇಳಿಕೊಳ್ಳುವ ಪತ್ರಿಕೆಯ ಸಿನಿಮಾ ವಿಮರ್ಶೆಯಲ್ಲಿ ದಶಾವತಾರಂ ನ ವಿಮರ್ಶೆಯಲ್ಲಿ 'ಆ' ವಿಮರ್ಶಕನ ವಿಮರ್ಶೆ ಕುರಿತು 'ಈ' ವಿಮರ್ಶೆ.

ಲೇಖನ ವರ್ಗ (Category): 

ಎಂದೂ ಎಂದೂ ಮುಗಿಯದ ಖಾಲಿ ಖಾಲಿ ಸಿನಿಮಾ ನಾನ್ಯಾರು..?

field_vote: 
No votes yet
To prevent automated spam submissions leave this field empty.

ಎಂದೂ ಎಂದೂ ಮುಗಿಯದ
ಯಾವ ಪದಕೂ ನಿಲುಕದ.....
ನಿಮಗೆ ನಾನು ತೋರುವ
ಖಾಲಿ ಖಾಲಿ ಸಿನಿಮಾ
ಇಂತೀ ನಿಮ್ಮ ಪ್ರೀತಿಯ
ನಾನ್ಯಾರು...?ನಾನ್ಯಾರು...?

ಅಂತ ಮುಂದೆ ಒಂದಿನ ನಮ್ಮ ಕನ್ನಡ ಸಿನಿಮಾ ನೋಡುಗ "ದೇವರಿಗೆ" 'ರೀಲ್' ಪತ್ರ ಸಂಪದದಲ್ಲಿ
ಪ್ರಕಟ ಆದ್ರೆ ಅದ್ರಲ್ಲಿ ವಿಶೇಷ ಏನೂ ಇರೋದಿಲ್ಲ. ಕಾರಣ ನಮ್ಮ ಈಗಿನ ಕನ್ನಡ
ಸಿನಿಮಾಗಳ 'ಕಥೆ' ಹಾಗಾಗಿದೆ

ಲೇಖನ ವರ್ಗ (Category): 

ಮುಂಗಾರು ಮಳೆ...

field_vote: 
No votes yet
To prevent automated spam submissions leave this field empty.

ಪ್ರೀತ್ಸೋ ಹೃದಯ, ಹದಿಹರೆಯದ ಕನಸುಗಳು, ಭಾವನೆಗಳು, ನಿಸ್ವಾರ್ಥ ಒಲವು,
ನೆನಪಿನ ಕಾಣಿಕೆಯಾದ ವಸ್ತುವನ್ನು ಜೋಪಾನವಾಗಿ ಕಾಪಾಡೋದು, ಪ್ರತಿಕ್ಷಣ ಪ್ರೀತಿಯಲ್ಲೇ
ಮುಳುಗಿರುವುದು, ಪ್ರೀತಿ ಪಡೆಯುವ ಪರಿಯನ್ನು ವಿಭಿನ್ನವಾಗಿ ಯೋಚಿಸುವುದು, ಪ್ರೀತಿ ಸಿಗದೆಹೋದರೆ ಮುಂದೆ ಬದುಕು ಇಲ್ಲವೇನೋ ಎಂಬ ಭಾವನೆ...

ಲೇಖನ ವರ್ಗ (Category): 

"ಗಾಳಿಪಟ" ಹಾರಿಸಬಹುದು.......!!!

field_vote: 
No votes yet
To prevent automated spam submissions leave this field empty.

"ಗಾಳಿಪಟ" ಚಿತ್ರ ಈ ಮಟ್ಟಕ್ಕೆ ಸುದ್ದಿಯಾಗುತ್ತದೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ಯೋಗರಾಜ ಭಟ್ಟರ "ಮುಂಗಾರು ಮಳೆ" ದಾಖಲೆ ನಿರ್ಮಿಸಿದ ಚಿತ್ರವಾದ್ದರಿಂದ, ಅವರ ಮುಂದಿನ ಚಿತ್ರ "ಗಾಳಿಪಟ"ದ ಬಗ್ಗೆ ಕುತೂಹಲವಿದ್ದಿದ್ದು ಸಹಜವೇ.

ಲೇಖನ ವರ್ಗ (Category): 

ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ

field_vote: 
No votes yet
To prevent automated spam submissions leave this field empty.

 

 

"ಗಾಳಿಪಟ" ಶುದ್ಧ ಮನರಂಜನೆಯ ಚಿತ್ರ. ಮತ್ತೇನನ್ನಾದರೂ ಬಯಸಿ ಹೋದವರಿಗೆ ಸಿನಿಮಾ ಇಷ್ಟವಾಗಲಿಕ್ಕಿಲ್ಲ. ಗಂಭೀರವಾಗಿ ಅವಲೋಕಿಸಿ ಪ್ರಶ್ನೆಗಳನ್ನು ಕೇಳಿಕೊಂಡು ಹೊರಟರೆ ಸಿನಿಮಾ ಸ್ವಲ್ಪವೂ ಇಷ್ಟವಾಗಲಿಕ್ಕಿಲ್ಲ. ಪ್ರಸ್ತುತ ಕಾಲದಲ್ಲಿ ಹೆಣೆದ ಜನ ಕೇಳಬಯಸುವ ಫಿಕ್ಷನ್ ಇದರ ಕಥೆ. ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕುಳಿತು ನೋಡಿ ನಗುವುದನ್ನು ಬಿಟ್ಟರೆ ಸಿನಿಮಾ ವೀಕ್ಷಕನಿಂದ ಇನ್ನೇನನ್ನೂ ಬಯಸುವುದಿಲ್ಲ. ಆದರೆ ಸಿನಿಮಾ ಹೆಚ್ಚು ವಲ್ಗಾರಿಟಿ ಇಲ್ಲದೆ ನಗಿಸಿ, ಹಲವೆಡೆ ಸಹಜ ಡೈಲಾಗುಗಳನ್ನ ಹೊತ್ತುಕೊಂಡು ಬಹಳ ಖುಷಿ ಕೊಡುವ ಚಿತ್ರವಾಗಿ ಮುಗಿಯುತ್ತದೆ.

ಗಣೇಶನ ಬಾಯಿಂದ witty ಡೈಲಾಗ್ಸ್ ಒಂದರಮೇಲೊಂದು ಸುರಿಯುತ್ತ ವೀಕ್ಷಕರು ಸ್ಕ್ರೀನಿಗೆ ಕಣ್ಣಿಟ್ಟು ಕೂತಿರುವಂತೆ ಮಾಡುತ್ತದೆ. ಸ್ಕ್ರೀನ್ ಪ್ಲೇ ಜೀವ ತುಂಬಿಕೊಂಡಿರುವಂತಿದೆ, ಅರ್ಥಪೂರ್ಣವಲ್ಲದಿದ್ದರೂ. ಸಂಗೀತ ಬಹಳ ಡಿಫರೆಂಟ್ ಆಗಿದ್ದು ವೀಡಿಯೋ ಹಾಡುಗಳಿಗೆ ಚೆನ್ನಾಗಿ ಹೊಂದಿಕೊಂಡಂತೆ ಮೂಡಿಬಂದಿದೆ.
ಸಿನೆಮಾಟೋಗ್ರಫಿ ಬಹಳ ಚೆನ್ನಾಗಿದೆ. ಡಿಜಿಟಲ್ ಎಫೆಕ್ಟ್ ಚೆಂದವಾಗಿ ನಂಬಿಕೆ ತರುವಂತಿದೆ (ಸಂಪೂರ್ಣವಾಗಿ ಸರಿಯಾಗಿಲ್ಲದಿದ್ದರೂ).

ನಟ ಗಣೇಶ್ ತಮ್ಮ ಪಾತ್ರಕ್ಕೆ ಸರಿಯಾಗಿ ಹೊಂದುತ್ತಾರೆ. ಡೈಸಿ ಬೋಪಣ್ಣರ ಪಾತ್ರ ಸಿನಿಮಾ ಹಾಲ್ ಬಿಟ್ಟು ಹೊರಬಂದರೂ ನೆನಪಿನಲ್ಲುಳಿಯುತ್ತದೆ. ಜೊತೆಗಿರುವ ಉಳಿದ ಕಲಾವಿದರು ಒಳ್ಳೆಯ ನಟನೆಯಿಂದ ಚಿತ್ರವನ್ನು ಮತ್ತಷ್ಟು ಉತ್ತಮವಾಗಿಸಿದ್ದಾರೆ.

ಲೇಖನ ವರ್ಗ (Category): 

ಮೈಸೂರು ರಮಾನಂದರ ಹೊಸ ಸಾಮಾಜಿಕ ನಾಟಕ - ಕಾಣೆಯಾಗಿದ್ದಾನೆ - ಒಂದು ವಿಶ್ಲೇಷಣೆ

field_vote: 
No votes yet
To prevent automated spam submissions leave this field empty.

ನಾವು ದಿನ ಪತ್ರಿಕೆಗಳನ್ನು ನೋಡುತ್ತಿದ್ದರೆ ಕಡೇ ಪಕ್ಷ ವಾರಕ್ಕೆರಡುಬಾರಿಯಾದರೂ ಯಾರಾದರೊಬ್ಬ ವ್ಯಕ್ತಿ ಕಾಣೆಯಾಗಿ ಹೋಗಿರುವ ಸುದ್ದಿಯನ್ನು ಓದಿಯೇತೀರುತ್ತೇವೆ. ಅದು ಗಂಡಸಾಗಿರಬಹುದು, ಹೆಣ್ಣಾಗಿರಬಹುದು, ವಯಸ್ಕರಾಗಿರಬಹುದು ಅಥವಾ ವಯೋವೃದ್ಧರಾಗಿರಬಹುದು.

ಲೇಖನ ವರ್ಗ (Category): 

ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ

field_vote: 
Average: 1 (2 votes)
To prevent automated spam submissions leave this field empty.

ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ

ಲೇಖನ ವರ್ಗ (Category): 

ಮುಂಗಾರು ಮಳೆ ನೋಡಿದ ಮೇಲೆ

field_vote: 
No votes yet
To prevent automated spam submissions leave this field empty.

-೧-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಈ ಪ್ರಶ್ನೆ ನನ್ನನ್ನು ಕಾಡಿದ್ದು ಮುಂಗಾರು ಮಳೆಯನ್ನು ಮೊನ್ನೆ ಸಿಡ್ನಿಯಲ್ಲಿ ನೋಡಿದಾಗ. ಸಾಧಾರಣವಾಗಿ ಎರಡು ಶೋಗಳು ನಡೆಯುವ ಇಲ್ಲೂ ಮೂರು ಶೋಗಳಿದ್ದು ಮೂರಕ್ಕೂ ಜನ ತುಂಬಿದ್ದರು.
ಪ್ರೀತಂನ ಮಾತುಗಳಿಗೆ ಮೊದಮೊದಲು ಜನ ನಗುತ್ತಲೇ ಚಿತ್ರ ಮೊದಲುಗೊಂಡಿತು. ಪ್ರೀತಂನ ಮಾತುಕತೆ ಎಲ್ಲಾ, ಬೆಂಗಳೂರಿನ ಶ್ರೀಮಂತ ಹುಡುಗನ ಉಡಾಫೆ, ಸಲೀಸಾಗಿ ಹರಿಯುವ ಇಂಗ್ಲೀಷ್ ಮಿಶ್ರಿತ ಕನ್ನಡ, ಮನಸ್ಸಿಗೆ ಹಿಡಿದ ಹುಡುಗಿ ಬೇಕೇ ಬೇಕು ಎಂಬಂತೆ ಹಿಂಬಾಲಿಸುವ ಮನೋಧರ್ಮ, ಇದರ ಸುತ್ತಲೇ ಸುತ್ತುತ್ತ ಢಾಳಾಗಿ ನಮ್ಮ ಮುಂದೆ ನಿಲ್ಲುತ್ತದೆ. ಒಳಗೇನೂ ಇಟ್ಟುಕೊಳ್ಳದೆ ಬೇಕಾದ್ದನ್ನು ಆಡುವ, ಆಡಿದಂತೆ ನಡೆಯುವ ಹುಡುಗ. ಇವೆಲ್ಲಾ ಹೊಸದೇನಲ್ಲ. ಆದರೆ, ಹೊಸ ಬಗೆಯ ಸ್ವಾವಹೇಳನ (self-depricating) ಹಾಸ್ಯ ಕನ್ನಡ ಚಿತ್ರದ ಹೀರೋಗೆ ಹೊಸದಿರಬಹುದು. ಆ ಅಂಶ ಅಲ್ಲಲ್ಲಿ ಕನ್ನಡದ ಚಿತ್ರಗಳಲ್ಲಿ ಈ ಹಿಂದೆ ಬಂದಿದ್ದರೂ, ಇಲ್ಲಿ ಅದು ಪ್ರೀತಂನ ಸ್ವಭಾವದ ಒಂದು ದೊಡ್ಡ ಭಾಗವೇ ಆಗಿರುವುದು ಹೊಸದೇನೋ ಅನಿಸಿತು. ಆಗಾಗ ಸಂದರ್ಭದ ಹೊರಗೆ ನಿಂತು ಚಟಾಕಿ ಹಾರಿಸುವ ಕ್ಷಣಗಳು ಮುದಕೊಡುವಂಥವು. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಂ ಬಳಸುವ ಬೆಂಗಳೂರಿನಂಥ ನಗರದ ಭಾಷೆಯಿಂದಾಗಿ ಅದು ಹೊಸದಾಗಿ ಕಾಣುತ್ತವೆ ಕೂಡ. ಆದರೆ ಚಿತ್ರದ ಉತ್ತರಾರ್ಧದ ಹೊತ್ತಿಗೆ ಅವನ ಮಾತು ಕತೆ ಹಾಗೇ ಮುಂದುವರೆಯುವುದು ಪಿಚ್‌ ಎನಿಸುತ್ತದೆ.

ಲೇಖನ ವರ್ಗ (Category): 

ಕಾಡಬೆಳದಿಂಗಳು: ಕಾಡುವ ಬೆಳದಿಂಗಳು

field_vote: 
No votes yet
To prevent automated spam submissions leave this field empty.

 

 

ಬಿಯರ್‌ ಸವಿಯುತ್ತಾ ಟೀವಿ ನೋಡುತ್ತಿರುವಾಗ ಅಲ್ಲೊಂದು ಸುದ್ದಿ: `ಪಟಾಕಿ ಸಿಡಿಯಿತು' ಎಂದು ವರದಿಯಾದ ಬಾಂಬ್‌ ಸ್ಫೋಟದ ಸುದ್ದಿ ಅದು. ಅದರ ಸಾವಿನ ಸುದ್ದಿಯ ಪೂರ್ವಾಪರವನ್ನು ವರದಿ ಮಾಡುವುದಕ್ಕಾಗಿ ಟೀವಿ ಚಾನಲ್‌ನ ವರದಿಗಾರ್ತಿ ಸುದೇಷ್ಣೆ ರಾತ್ರೋರಾತ್ರಿ ಸ್ಥಳಕ್ಕೆ ತೆರಳುತ್ತಾಳೆ ಮತ್ತು ಆಕೆ ವರದಿ ಮಾಡಿದ ಸುದ್ದಿ ಮರುದಿನ ಟೀವಿಯಲ್ಲಿ ಪ್ರಸಾರವಾಗುತ್ತದೆ. ಸಂಪಾದಕರು ಆಕೆಯನ್ನು ಆಕ್ಷೇ ಪಿಸುತ್ತಾರೆ: ಎಲ್ಲರೂ ವರದಿ ಮಾಡಿದ್ದನ್ನೇ ನೀನೂ ಮಾಡಿದ್ದೀಯಾ. ಏನಾದರೂ ವಿಶೇಷವಾಗಿದ್ದನ್ನು ಮಾಡು.ಅತ್ತ ಬಾಂಬ್‌ ಬ್ಲಾಸ್ಟ್‌ನಲ್ಲಿ ಸತ್ತ ವ್ಯಕ್ತಿಯೊಬ್ಬನ ಜೇಬಲ್ಲಿ ಸದಾಶಿವರಾಯರ ವಿಳಾಸ ಸಿಗುತ್ತದೆ. ಸದಾಶಿವರಾಯರು ಪುಟ್ಟಳ್ಳಿಯವರು. ಅವರ ಮಗ ಸತ್ತಿರಬೇಕು ಎಂದು ಯಾರೋ ಹಳ್ಳಿಗೆ ತಾರು ಕೊಟ್ಟಿದ್ದಾರೆ. ಸದಾಶಿವರಾಯರು ಮಗನನ್ನು ನೋಡಲು ಕಂಪಿಸುವ ಕಾಲೂರುತ್ತಾ ಬೆಂಗಳೂರಿಗೆ ಬಂದಿದ್ದಾರೆ ಮತ್ತು ಹೆಣ ನೋಡಿದ್ದಾರೆ. `ನಿಮ್ಮ ಮಗನ ಹೆಣವಾ?' ಎಂದು ಪೊಲೀಸ್‌ ಸ್ಟೇಷನ್‌ನವರು ಕೇಳುತ್ತಾರೆ. ರಾಯರು ತಲೆ ಆಡಿಸುತ್ತಾರೆ. ಅದು ಹೌದು ಎಂದೂ ಆಗಿರಬಹುದು, ಅಲ್ಲ ಎಂದೂ ಆಗಿರಬಹುದು!

ಸದಾಶಿವರಾಯರು ಊರಿಗೆ ಮರಳುತ್ತಾರೆ ಮತ್ತು ಸತ್ತವ ತಮ್ಮ ಮಗ ಆಗಿರಲಿಲ್ಲ ಎಂದು ಎಲ್ಲ ರಿಗೂ ಸಾರಿ ಹೇಳಿ, ಹತ್ತಿರದವರನ್ನು ಕಳಕೊಂಡವ ರಂತೆ ಸೂತಕದ ಸ್ನಾನ ಮಾಡುತ್ತಾರೆ (ರಾಯರ ಇಪ್ಪ ತ್ತೆಂಟು ವರ್ಷದ ಮಗ ಧ್ರುವ ಓಡಿಹೋದವನು. ಓಡಿಹೋದವನ ಇರುವಿಕೆಯ ಬಗ್ಗೆ ಊರಿಡೀ ಊಹಾಪೋಹಗಳು. ಸದಾಶಿವ ರಾಯರ ನೆನಪಲ್ಲಿ ಬರುವ ಓಡಿಹೋದ ಮಗನ ಮಾತುಗಳು ಕ್ರಾಂತಿಕಾರಿಯಾಗಿವೆ. ಮಗನ ನೋಟ್‌ ಪುಸ್ತಕಗಳಲ್ಲಿ ಕ್ರಾಂತಿಕಾರಿ ಸಾಲುಗಳಿವೆ).

ಲೇಖನ ವರ್ಗ (Category): 

ಗೋಡೆಯ ಆಚೆಯಿಂದ ಈಚಿನ ಕಥೆ

field_vote: 
Average: 5 (1 vote)
To prevent automated spam submissions leave this field empty.

Shawshank Redemption ಆಂಡೀ ಡುಫ್ರ್ರೆನ್ಸ್ ಒಬ್ಬ ಚತುರ, ಚಾಣಾಕ್ಷ ಬ್ಯಾಂಕ್ ಅಧಿಕಾರಿ. ಸುಂದರ ಪತ್ನಿ, ದೌಲತ್ತಿನ-ಸವಲತ್ತಿನ ಜೀವನ, ಅಮೇರಿಕಾದ ಮುಕ್ತ ಬದುಕಿನ ಸುಂದರ ಕನಸುಗಳು. ಜೀವನ ಇದಕ್ಕಿಂತ ಇನ್ನೇನು ತಾನೇ ಕೊಟ್ಟೀತು? ಜೀವನದಿಂದ ಇನ್ನೇನು ತಾನೇ ಕೇಳಬಹುದು? ಆಂಡೀ ಡುಫ್ರ್ರೆನ್ಸ್ ಸಂತುಷ್ಟನಾಗಿದ್ದ ಎನ್ನಲೇ? ಅಥವಾ ಅದೆಲ್ಲವೂ ಒಂದು ಸುಂದರ ಕನಸಾಗಿತ್ತು ಎನ್ನಲೇ? ಬಹುಷಃ ಕನಸು ಎಂಬುದೇ ಸರಿಯಾದ ಶಬ್ದ. ಏಕೆಂದರೆ ಕನಸುಗಳು ಕಣ್ಣುಬಿಡುತ್ತಿದ್ದಂತೆಯೇ ಕರಗಿಹೋಗುತ್ತವೆ. ಒಂದು ಸರಳವಾದ ಕೇಸ್. ಖಚಿತವಾಗಿ ಸಿಗುವ ಪುರಾವೆಗಳು. ದಕ್ಷ ಪೊಲೀಸರು, ಗೌರವಾನ್ವಿತ ಸಮಾಜ, ನಿಷ್ಟಾವಂತ ಅಧಿಕಾರಿಗಳು ಇವೆಲ್ಲಾ ಸೇರಿ ಸಂಶಯಕ್ಕೆಡೆಯಿಲ್ಲದಂತೆ ಆನ್ಡಿ ಡುಫ್ರ್ರೆನ್ಸನನ್ನು ೧೯೪೭ರಲ್ಲಿ ಸ್ವಶಾಂಕ್ ಎಂಬ ಅಮೇರಿಕಾದ ಜೈಲಿಗೆ ತಳ್ಳಿತು. ಸಮಾಜ ತನ್ನೊಳಗಿನೊಂದು ಮುಳ್ಳನ್ನು ಕಳೆಯಿತೆಂದು ಅಂದುಕೊಂಡು ನಿಟ್ಟುಸಿರಿಟ್ಟಿತು. ಇಲ್ಲಿಂದ ಆರಂಭವಾಗುತ್ತೆ ಒಂದು ಮಹಾಪಲಾಯನ ಕಥನ ಸ್ವಶಾಂಕ್ ರಿಡೆಂಪ್ಶನ್ ಎನ್ನುವ ಚಿತ್ರದ್ದು. (೧೯೯೪) Shawshank Redemption (1994)

ಡರಬೌನ್ಟ್ ನಿರ್ದೇಶಿತ ಮೊದಲ ಚಿತ್ರವಾದ ಇದು ಆತನ ಆಗಲೇ ಪ್ರಸಿದ್ಧವಾಗಿದ್ದ ಬರವಣಿಗೆ ಹಾಗೂ ಇತರ ಚಿತ್ರನಿರ್ಮಾಣ ಸಂಬಂಧೀ ಕುಶಲತೆಗಳ ಪಟ್ಟಿಗೆ ಇನ್ನೊಂದು ಗರಿಯನ್ನಿಟ್ಟಿತು. ಮಾನವನ ಮೂಲಭೂತ ಭಾವನೆಗಳು ಪರೀಕ್ಷೆಗಿಟ್ಟಾಗ ಹೇಗೆ ಬೇರೆ ಬೇರೆ ರೂಪಗಳಿಂದ ಚಿಮ್ಮಿ ಹೊರಹೊಮ್ಮುತ್ತದೆ ಎನ್ನುವುದು ಈ ಕಥೆಯ ಕಥನ. ನಮ್ಮ ಮನಸ್ಸನ್ನಾವರಿಸಿ ಮುದಕೊಡುವ ಕಥೆಗಳು ಶ್ರೀಸಾಮಾನ್ಯರಿಂದಲ್ಲ (ಸ್ಟೀರಿಯೋ ಟೈಪ್) ಅವರೊಳಗಿನ ಒಬ್ಬೊಬ್ಬ ವಿಶೇಷ ವ್ಯಕ್ತಿಯಿಂದ (ಆರ್ಖಿಟೈಪ್) ಹುಟ್ಟುತ್ತವೆ ಎಂದು ಒಮ್ಮೆ ಓದಿದ್ದೆ. ಆನ್ಡಿ ಡುಫ್ರ್ರೆನ್ಸ್ ಅಂಥಾ ಒಬ್ಬ ಕಥಾನಾಯಕ. ಆತ ತೀರಾ ಸರಳ, ಸಾಮಾನ್ಯ ಸಜ್ಜನ. ಮೇಲ್ನೋಟಕ್ಕೆ ತೀರಾ ಸಾಧಾರಣ ವ್ಯಕ್ತಿ. ಆದರೆ ಪರಿಸ್ಥಿತಿ ಕೂಡಿಬಂದಾಗ ಆವರೆಗೆ ಅಡಗಿದ್ದ ಒಂದು ಅದಮ್ಯ ಶಕ್ತಿ ಹೊರಬಂದು ಪವಾಡಗಳನ್ನು ಆತ ಸಾಧಿಸುತ್ತಾನೆ.

ಲೇಖನ ವರ್ಗ (Category): 

ಹಕ್ಕಿಗಳಿಗೆ ಮುನಿಸ್ಯಾಕೋ?

field_vote: 
Average: 1 (1 vote)
To prevent automated spam submissions leave this field empty.

`ದಿ ಬರ್ಡ್ಸ್‌'

ಇವತ್ತಿನ ಹಾಲಿವುಡ್‌ ಹಾರರ್‌ ಸಿನಿಮಾಗಳನ್ನು ನೋಡಿದರೆ ಇರುವ ಅಲ್ಪಸ್ವಲ್ಪ `ಹಾರರ್‌' ಕಲ್ಪನೆಯೂ ಹಾರಿಹೋಗುತ್ತದೆ ಎಂಬ ಮಾತಿದೆ. ಚಿತ್ರವಿಚಿತ್ರ ಅಕರಾಳ ವಿಕರಾಳ ಮುಖಗಳ ಲಿವಿಂಗ್‌ ಡೆಡ್‌, ಜೀಪರ್ಸ್‌ ಕ್ರೀಪರ್ಸ್‌ನಂಥ ಕಲ್ಪನೆಗಳು ಒಂದು ಕಾಲದಲ್ಲಿ ಹಾಲಿವುಡ್‌ ಹಾರರ್‌ ಸಿನಿಮಾಗಳೆಂದರೆ ತುದಿಗಾಲಲ್ಲಿ ನಿಲ್ಲಿಸುವಂತಿದ್ದವು. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ತಂತ್ರಜ್ಞಾನಗಳ ಮೇಲಾಟವೇ ಹಾರರ್‌ ಆಗಿಬಿಟ್ಟಿದೆ. ರಿಲೀಫ್‌ಗೆ ಇರಲಿ ಅಂತಲೋ ಏನೋ, ಅದಕ್ಕೊಂದಿಷ್ಟು ಶೃಂಗಾರ ಭರಿತ ಒರಟು ಲೈಂಗಿಕತೆಯ ಲೇಪನವೂ ಆಗಿ ಹಾರರ್‌ ಅದೋ ಇದೋ ಎಂಬ ಗೊಂದಲಕ್ಕೂ ಪ್ರೇಕ್ಷಕ ಬೀಳಬೇಕಾಗುತ್ತದೆ. ಇಲ್ಲಿ ಬಳಕೆಯಾಗಿರುವ ತಾಂತ್ರಿಕತೆಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದೇ ಹೊರತು ಬೆಚ್ಚಿ ಬೀಳುವ ಅಥವಾ ಭಯಪಡುವ ಅಗತ್ಯವಿರುವುದಿಲ್ಲ!

ಲೇಖನ ವರ್ಗ (Category): 

ಚಿಕನ್ ಲಿಟ್ಟಲ್

ಏನ್ರೀ ಇದು? ಇಂಗ್ಲಿಷ್ ಸಿನಿಮಾ ರಿವ್ಯೂ ಕನ್ನಡ ತಾಣದಲ್ಲಿ ಎಂದು ಕೇಳಲು ಸಜ್ಜಾಗಿದ್ದೀರಾದರೆ ಇಗೋ ನನ್ನ ಉತ್ತರ - ಕನ್ನಡದಲ್ಲಿ ಬರೆಯೋದಷ್ಟೆ ಮುಖ್ಯ, ನಾವು ನೋಡುವ ಚಿತ್ರ ಯಾವ ಭಾಷೆಯದ್ದಾದರೂ ಆಗಿರಬಹುದು, ಕನ್ನಡ ಚಿತ್ರವೇ ಆಗಿರಬೇಕೆಂದೇನಿಲ್ಲ.

ಸಿನಿಮಾ ಮಾಹಿತಿ - ಇಕಿರು (೧೯೫೨)

ಇಕಿರು ೧೯೫೨ ರಲ್ಲಿ ಹೊರಬಂದ ಅಕಿರಾ ಕುರೊಸಾವಾರವರು ನಿರ್ದೇಶಿಸಿದ ಜಪಾನ್ ದೇಶದ ಚಿತ್ರ. ಈ ಚಿತ್ರಕ್ಕೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಲಭಿಸಿದೆ.

Subscribe to ಸಿನೆಮಾ ವಿಮರ್ಶೆ