ಸ್ಥಳ ಮಹಿಮೆ, ಪುರಾಣ

ಹಕ್ಕಿಯ ಹಿಕ್ಕೆಗಳ ಗಣಿಗಾರಿಕೆ!!!!!

        ಆಂಗ್ಲ ಮಾಸಿಕವೊಂದರಲ್ಲಿ ಮೊದಲ ಬಾರಿಗೆ ಈ ಲೇಖನ ಓದಿದಾಗ ನಾನೊಂದು ತೀರ್ಮಾನಕ್ಕೆ ಬಂದೆ- ಈ ಪ್ರಪಂಚದಲ್ಲಿ ಸಂಭವಿಸುವ ಅಚ್ಚರಿಗಳಿಗೆ ಕೊನೆಮೊದಲೇ ಇಲ್ಲ-ಎಂದು!! ಅಷ್ಟು ಆಶ್ಚರ್ಯವಾಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುವುದೇ ಈ ಲೇಖನ. ನೀವು ಕಲ್ಲಿದ್ದಿಲು ಗಣಿಗಾರಿಕೆ ಕೇಳಿರಬಹುದು, ಚಿನ್ನ, ಬಾಕ್ಸೈಟ್ ಗಣಿಗಾರಿಕೆ ಕೇಳಿರಬಹುದು. ಬಳ್ಳಾರಿ ಗಣಿಗಾರಿಕೆಯಂತೂ ಕೇಳಿಯೇ ಕೇಳಿರುತ್ತೀರಿ. ಆದರೆ ನಾನು ಈ ಮುಂದೆ ಬರೆಯಲಿರುವ ಗಣಿಗಾರಿಕೆ ಬಗ್ಗೆ ನೀವು ಇಲ್ಲಿಯವರೆಗೂ ಕೇಳಿರುವ ಸಂಭವ ಕಡಿಮೆಯೆಂದೇ ನನ್ನ ಅನಿಸಿಕೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕಿಟ್ಟೆಲ್ ಬಗ್ಗೆ ಮಾಹಿತಿ ಬೇಕು .

field_vote: 
No votes yet
To prevent automated spam submissions leave this field empty.

ಸಂಪದಿಗ ಸ್ನೇಹಿತರೇ

 

ರೆವೆರೆಂಡ್  ಕಿಟ್ಟೆಲ್ ರ ಬಗ್ಗೆ ನಿಮಗೆ ಮಾಹಿತಿಯಿದ್ದಲ್ಲಿ ಹಂಚಿಕೊಳ್ಳಿವಿರಾ..?  ಅವರು ಮರಣಿಸಿದ ನಗರ ಟ್ಯೂಬಿಂಗೆನ್ ನಲ್ಲಿ ಅವರದೇನಾದರೂ ಸ್ಮಾರಕ ಇದೆಯೇ ..?  ಟ್ಯೂಬಿಂಗೆನ್ ನಗರದ ಬಳಿಯೇ ನಾನಿರುವುದರಿಂದ ಹಾಗೇನಾದರೂ ಇದ್ದರೆ ನೋಡಿ ಬರಬೇಕೆಂಬ ಬಯಕೆಯಿದೆ

 

ಮೊದ್ಮಣಿ

ಲೇಖನ ವರ್ಗ (Category): 

ಬೊಲಿವಿಯಾದ "ಸಾವಿನ ಹೆದ್ದಾರಿ" ; ಪ್ರಪಂಚದ ಅತ್ಯಂತ ದುರ್ಗಮ ರಸ್ತೆ!!!

                 ಅನೇಕ ವರ್ಷಗಳ ಕೆಳಗೆ ಎಲ್ಲೋ ಓದಿದ ನೆನಪು. ಬಯಲುಸೀಮೆಯಲ್ಲೇ ಯಾವಾಗಲೂ ಬಸ್ ಓಡಿಸುತ್ತಿದ್ದ ಡ್ರೈವರ್ಗೆ ಚಾರ್ಮಾಡಿ ಘಾಟಿ ರೂಟ್ ಕೊಟ್ಟರಂತೆ. ಹೋಗಿಬಂದ ಮೇಲೆ ಅವನು ಮೊದಲು ಮಾಡಿದ ಕೆಲಸ ಕೈ ಮುಗಿದು ಇನ್ನು ಆ ರೂಟಿಗೆ ಹಾಕಬೇಡಿ ಎಂದು ಕೇಳಿಕೊಂಡಿದ್ದು!! ಕೆಲವೊಂದು ಗುಡ್ಡಗಾಡು ರಸ್ತೆಗಳು ಹಾಗೇ. ಪ್ರಯಾಣ ರೋಮಾಂಚನ. (ನಮ್ಮಲ್ಲಿ ಶೃಂಗೇರಿ-ಜಯಪುರ-ಬಸರಿಕಟ್ಟೆ-ಹೊರನಾಡು ರಸ್ತೆ ಸ್ವಲ್ಪ ಹಾಗೇ). ಹಿಮಾಲಯದ ತಪ್ಪಲಲ್ಲಿ ಅಂತಹ ಅನೇಕ ರಸ್ತೆಗಳಿವೆ. ಪ್ರಪಂಚ ಮಟ್ಟದಲ್ಲಿ ಅತಿ ಅಪಾಯಕಾರಿ ದುರ್ಗಮ ಹೆದ್ದಾರಿಯೆಂದು ಹೆಸರುಮಾಡಿರುವ ರಸ್ತೆಯ ವಿವರವನ್ನು ನಿಮ್ಮ ಮುಂದೆ ಬಿಚ್ಚಿಡುವುದೇ ಈ ಲೇಖನ.

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಈ ವಿಚಿತ್ರ ಜೀವಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆ!!!!

ಕೆಲವೊಂದು ವಿಷಯಗಳು ಕೆಲವೊಂದು ಕಡೆ ತುಂಬಾ ಸಾಮಾನ್ಯವಾದದ್ದಾಗಿರುತ್ತದೆ. ಆದರೆ ಹೊರಗಿನವರಿಗೆ ಅವು ತುಂಬಾ ಆಶ್ಚರ್ಯದ ವಿಷಯಗಳಾಗಿರುತ್ತವೆ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಬೆಂಗಳೂರಿನ ಪಾಷ್ ಶಾಪಿಂಗ್ ಮಾಲ್ ನಲ್ಲಿ ಇಂಬಳವೊಂದನ್ನ ಕಲ್ಪಿಸಿಕೊಳ್ಳಿ. ಜನ ಅದನ್ನು ಹೇಗೆ ಕಣ್ಣು ಬಾಯಿ ಬಿಟ್ಟು ನೋಡಬಹುದು? ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಪಟಪಟಾಂತ ಅದರ ಫೋಟೋ ತೆಗೆಯಬಹುದು. ಆದರೆ ಮಲೆನಾಡು ಕರಾವಳಿ ಜನರಿಗೆ? ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ ಹತ್ತುವ ಪೀಡೆ. ಅದೇ ವಿಮಾನದ ಶಬ್ದ ಕೇಳಿದರೆ ಇಲ್ಲಿನ ಹುಡುಗರು ಹೊರಗೆ ಬಂದು ಎಲ್ಲಿದೆಂತ ನೋಡ್ತಾರೆ. ಬೆಂಗಳೂರಲ್ಲಿ ಅದು ಮಾಮೂಲು.

field_vote: 
Average: 5 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಮುತ್ತು ಬಂದಿದೆ ಕೇರಿಗೆ"....ಇದು ಬರೀ ಬಾಲಿಯನ್ನರಿಗೆ ಮಾತ್ರ...

field_vote: 
No votes yet
To prevent automated spam submissions leave this field empty.

"ಮತ್ತೆ ಬ೦ದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ;
ಸ್ವೀಕರಿಸುವುದಷ್ಟೆ ನಮ್ಮ ಕೆಲಸ,
ನೋವೋ, ನಲಿವೋ, ಅಳುವೋ, ನಗುವೋ
ಅದುವೆ ಸ೦ವತ್ಸರದ ರಸದೌತಣ"


ಭಾರತದಲಿ ಯುಗಾದಿ ನವ ಹರುಷವ ತರುವ ನವೋಲ್ಲಾಸದ ಹಬ್ಬ. ಕರ್ನಾಟಕ,  ಆಂಧ್ರ, ಮಹಾರಾಷ್ಟ್ರಗಳಲ್ಲಿ ಯುಗಾದಿ, ಉಗಾದಿ, ಗುಡಿಪಾಡ್ವ ಎಂದು ಕರೆಸಿಕೊಳ್ಳುವ ಈ ಹಬ್ಬ ಯುಗ ಯುಗಗಳೇ ಸಾಗಲಿ ಈ ಆದಿ ಶಾಶ್ವತ ಎಂಬ ಮುನ್ನುಡಿ. ಪ್ರತಿ ವರ್ಷ ಚೈತ್ರ ಶುಕ್ಲ ಪ್ರತಿಪತ್ (ಪಾಡ್ಯ) ದಿನ ಚಾ೦ದ್ರಮನ ಯುಗಾದಿ . ಸೂರ್ಯ ಮೇಷ ರಾಶಿ ಪ್ರವೇಶಿಸುವ ಪುಣ್ಯ ಕಾಲ ಸೌರಮಾನ ಯುಗಾದಿ. ಯುಗಾದಿ ಹೊಸತನ್ನು ತರುವುದೆಂಬ ಭರವಸೆಯ ನೀಡುವ ಒಂದು ಅಭಯ ಹಸ್ತ. ಹೊಸ ವರುಷ ಹೊಸ ಹರುಷ ತರುವುದೆಂಬ ವಿಶ್ವಾಸದ ಆದಿಶಕ್ತಿ.

ಲೇಖನ ವರ್ಗ (Category): 

ಎಂದರೋ ಮಹಾನುಭಾವುಲು !!

field_vote: 
No votes yet
To prevent automated spam submissions leave this field empty.

ಪುಷ್ಯ ಬಹುಳ ಪಂಚಮಿಯ ದಿನ ತ್ಯಾಗರಾಜರ ಆರಾಧನೆ
ತಂಜಾವೂರಿನಿಂದ ಸುಮಾರು ಹದಿನೈದು ಕಿ.ಮಿ ತಿರುವಯ್ಯಾರಿನಲ್ಲಿ ನಡೆಯುತ್ತದೆ.  ಅದು
ತ್ಯಾಗರಾಜರ ಪುಣ್ಯತಿಥಿ. ಇಂಗ್ಲೀಶ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳ
ಪೂರ್ವಾರ್ಧದಲ್ಲಿ ಈ ದಿನಾಂಕ ಬರುತ್ತದೆ.

ಕರ್ನಾಟಕ ಸಂಗೀತದಲ್ಲಿ
ತ್ಯಾಗರಾಜರದು ದೊಡ್ಡ ಹೆಸರು. ತ್ಯಾಗರಾಜರು ರಚಿಸಿದ ಪಂಚರತ್ನ ಕೃತಿಗಳನ್ನು ಆರಾಧನೆಯ
ದಿನ ಹಾಡಲಾಗುತ್ತದೆ. ಸುಮಾರು ಎರಡು ಸಾವಿರ ಜನರು ಒಂದೇ ಬಾರಿಗೆ ಹಾಡುವುದನ್ನು
ಕೇಳುವುದೇ ಒಂದು ಸೊಗಸು. ನಿತ್ಯಶ್ರೀ ಮಹದೇವನ್, ಸುಧಾ ರಘುರಾಮನ್ ರಂತಹ ಖ್ಯಾತನಾಮರು
ಎರಡು ಸಾವಿರ ಜನರ ನಡುವೆ ಅವರ ಜೊತೆಯೇ ಹಾಡುತ್ತಾರೆ. ಇಷ್ಟು ದಿನ ಕುನ್ನುಕ್ಕುಡಿ
ವೈದ್ಯನಾಥನ್ ಆರಾಧನೆಯ ನೇತೃತ್ವ ವಹಿಸುತ್ತಿದ್ದರು.

ಲೇಖನ ವರ್ಗ (Category): 

ಮಲೆನಾಡಿನ ಪವಿತ್ರ ಸ್ಥಳ ಶೃಂಗೇರಿ

field_vote: 
Average: 4 (9 votes)
To prevent automated spam submissions leave this field empty.

ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಆದಿ ಶಂಕರರು ಸ್ಥಾಪಿಸಿದ ೪ ಪೀಠಗಳಗಳ್ಲಿ ಇದುನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ.

ಲೇಖನ ವರ್ಗ (Category): 

ಇಡಗುಂಜಿ ಗಣಪತಿ ದೇವಸ್ಥಾನ

ಕರಾವಳಿಯ ಪ್ರಸಿದ್ಧ ಆರು ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿಗೆ ವಿಶೇಷ ಸ್ಥಾನ. ಏಕೆಂದರೆ ಇಲ್ಲಿಗೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಚೌತಿಯಂದು ಹಾಗೂ ಸಂಕಷ್ಟಿಯಂದು ೫೦೦೦೦ ಕ್ಕೂ ಮೇಲ್ಪಟ್ಟಿನ ಜನಸಾಗರ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ೧೪ ಕಿ.ಮೀ ದೂರವಿರುವ ನಿಸರ್ಗ ರಮಣೀಯ ಕ್ಷೇತ್ರ. ಹಿಂದೆ ಈ ಕ್ಷೇತ್ರಕ್ಕೆ ಇಡಕುಂಜಾವನ, ಕುಂಜವನ, ಗುಂಜಾವನ ಎಂಬ ಪುರಾತನ ಹೆಸರುಗಳಿವೆ. ಕರಾವಳಿಯ ಹಲವು ಕ್ಷೇತ್ರಗಳಂತೆ ಈ ಕ್ಷೇತ್ರಕ್ಕೂ ಪುರಾತನ ಹೆಸರುಗಳಿವೆ.

field_vote: 
Average: 3 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಮಾನಸ ಸರೋವರ ಯಾತ್ರೆ

ಮಾನಸ ಸರೋವರ ಯಾತ್ರೆ 

ಎಲ್ಲಿದೆ?
ಮಾನಸ ಸರೋವರ ಭಾರತ - ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ.

ಮಾನಸ ಸರೋವರ


ಮಾನಸ ಸರೋವರ ವಿಶೇಷ.
ಕೈಲಾಸ ಪರ್ವತ ಶಿಖರವು ಪ್ರಪಂಚದ ಅತಿ ಎತ್ತರದ ಶಿಖರಗಳಲ್ಲಿ (ಸುಮಾರು ೨೩,೦೦೦ ಅಡಿಗಳು) ಒಂದು. ಇದಕ್ಕೆ ಅನೇಕ ಹೆಸರುಗಳಿವೆ. ಮೇರು, ಸುಮೇರು, ಸುಷುದ್ನು, ಹೇಮಾದ್ರಿ, ದೇವಪರ್ವತ, ಗಾನಪರ್ವತ, ರಜತಾದ್ರಿ, ರತ್ನ ಸ್ತಂಭ ಎಂಬ ಹೆಸರುಗಳೂ ಇವೆ. ಇದಕ್ಕೆ ರಾವಣ ಪರ್ವತ, ಹನುಮಾನ್ ಪರ್ವತ, ಪದ್ಮ ಸಂಭವ, ಮಂಜುಶ್ರೀ, ವಜ್ರಧರ, ಅವಲೋಕಿತೇಶ್ವರ ಎಂದೂ ಕರೆಯುತ್ತಾರೆ. ಇದು ಪಾರ್ವತಿ-ಪರಮೇಶ್ವರರ ಆವಾಸಸ್ಥಾನ. ಶಿವಶಕ್ತಿಯರು ಒಂದುಗೂಡಿದ ಜಾಗ. ಪ್ರಕೃತಿ ಪುರುಷರ ಮಿಲನ ಸ್ಥಾನ. ಜೀವಾತ್ಮ ಪರಮಾತ್ಮರ ಐಕ್ಯ ಸ್ಥಾನ. ವಿಶ್ವದ ರಚನೆ, ಸ್ಥಿತಿ, ಲಯಗಳಿಗೆ ಕಾರಣೀಭೂತವಾದ ಕೇಂದ್ರಬಿಂದು (Pillar of the Universe) ಮುಂತಾದವು. ಇದು ವರ್ಷದ ಎಲ್ಲಾ ಕಾಲವೂ ಹಿಮಾಚ್ಛಾದಿತವಾಗಿರುವುದು. ಈ ಸ್ಥಳವನ್ನು ದೂರದಿಂದ ದರ್ಶನ ಮಾಡಬಹುದೇ ಹೊರತು ಹತ್ತಲಾಗುವುದಿಲ್ಲ. ಇಚ್ಛೆಪಟ್ಟರೆ ಅದರ ಪರಿಕ್ರಮ ಮಾಡಬಹುದು. ಅದರ ಮಾರ್ಗ ೫೦ ಕಿ. ಮೀ. ಅದರಲ್ಲಿ ನಂದಿ ಗೊಂಫ್, ದಿರಾಚಕ್, ಗೌರಿಕುಂಡ, ಜಾನುಲಾ ಪಾರ್ಕ್ ಎಂಬ ಸ್ಥಳಗಳು ಬರುವುವು.

field_vote: 
Average: 3.6 (9 votes)
To prevent automated spam submissions leave this field empty.
ಲೇಖನ ವರ್ಗ (Category): 

ಕ್ಷೇತ್ರ ಪರಿಚಯ: ಕೊಲ್ಲೂರು

ಪರಶುರಾಮ ಸೃಷ್ಟಿಸಿದ ಕರ್ನಾಟಕ ಕರಾವಳಿಯ ಪ್ರದೇಶದ ಸಪ್ತಕ್ಷೇತ್ರಗಳಲ್ಲಿ ಒಂದು ಕೊಲ್ಲೂರು. ಕೊಡಚಾದ್ರಿ ಎಂದಾಗ ಹಲವರಿಗೆ ನೆನಪಾಗುವುದು ಚಾರಣ. ಕೊಡಚಾದ್ರಿ ಬೆಟ್ಟದಿಂದ ಪಶ್ಚಿಮ ದಿಕ್ಕಿನಲ್ಲಿ ಇಳಿದರೆ ಸಿಗುವುದು ಪವಿತ್ರ ಕ್ಷೇತ್ರ. ಅದುವೇ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ. ಕರ್ನಾಟಕದ ಪ್ರಸಿದ್ಧ ದೇವಿ ಕ್ಷೇತ್ರ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಿಂದ ಸುಮಾರು ೪೫ ಕಿ.ಮೀ ಅಂತರದಲ್ಲಿದೆ ಈ ಕ್ಷೇತ್ರ. ಹಾಗೆ ಕುಂದಾಪುರ ತಾಲೂಕಿನ ಬೈಂದೂರಿನಿಂದ ೩೦ ಕಿ.ಮೀ ಅಂತರದಲ್ಲಿದೆ. ಸೌಪರ್ಣಿಕಾ ನದಿ ಮತ್ತು ಪಶ್ಚಿಮ ಘಟ್ಟದ ಸಾಲುಗಳ ಬಳಿ ಇರುವ ಇತಿಹಾಸ ಪ್ರಸಿದ್ಧ ಕ್ಷೇತ್ರ. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಅಂಧ್ರಪ್ರದೇಶ, ಕೇರಳ, ಗೋವಾ, ಮಹಾರಾಷ್ತ್ರದವರಿಗೂ ಈ ಕ್ಷೇತ್ರ ಬಹಳ ವಿಶೇಷ. ಮಳೆಗಾಲ, ಬೇಸಿಗೆಗಾಲ ಎಂಬ ಋತುಭೇದವಿಲ್ಲದೆ ಜನಸಾಗರದಿಂದ ತುಂಬಿ ತುಳುಕುತ್ತಿರುತ್ತದೆ. ಸುಪ್ರಸಿದ್ಧ ಗಾಯಕರಾದ ಯೇಸುದಾಸ್ ಅವರು ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದಂದು ತಪ್ಪದೆ ಇಲ್ಲಿಗೆ ಬಂದು ಚಂಡಿಕೆಯಾಗ ನಡೆಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಸಂಗೀತ ಕಚೇರಿ ಕೂಡ ನೀಡುತ್ತಾರೆ

field_vote: 
Average: 4.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೧೨ [ದಾರುಕಾವನದ ನಾಗನಾಥ].

ದಾರುಕಾವನದ ನಾಗನಾಥ


ಎಲ್ಲಿದೆ?
ಇದು ಮಹಾರಾಷ್ಟ್ರದ ಪರಭಣಿ ಜಿಲ್ಲಿಯಲ್ಲಿದೆ. ದಾರುಕಾವನಕ್ಕೆ ಈಗ ಔಂದ್ ಎಂಬ ಹೆಸರಿದೆ.

ದೇವಸ್ಥಾನದ ಸ್ವರೂಪ.
ದಾರುಕಾವನದ ನಾಗೇಶ ಅಥವಾ ನಾಗನಾಥ ದೇವಾಲಯವು ಅಪರೂಪದ ವಾಸ್ತುಶಿಲ್ಪವಾಗಿದೆ. ಸಂಪೂರ್ಣ ಶಿಲಿಯಲ್ಲೇ ನಿರ್ಮಾಣವಾಗಿರುವ ಈ ದೇವಸ್ಥಾನಕ್ಕೆ ಬೃಹದಾಕಾರದ ಬಾಗಿಲುಗಳು, ವಿಶಾಲವಾದ ಸಭಾಂಗಣವೂ ಇದೆ. ಎಂಟು ಶಿಲ ಕಂಬಗಳ ಆಧಾರದ ಮೇಲೆ ಇಡೀ ದೇವಾಲಯ ನಿಲ್ಲುವಂತೆ ರೂಪಿಸಲಾಗಿದೆ. ನಾಗನಾಥ ಲಿಂಗವು ಒಳಭಾಗದ ಚಿಕ್ಕ ಗರ್ಭಗುಡಿಯಲ್ಲಿದೆ. ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿ ಶಿವಲಿಂದ ಎದುರು ನಂದಿಯ ವಿಗ್ರಹವಿಲ್ಲ. ದೇವಸ್ಥಾನದ ಹಿಂಭಾಗದಲ್ಲಿ ನಂದಿಕೇಷ್ವರನ ಪ್ರತ್ಯೇಕ ದೇವಾಲಯವಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ೧೨ ಜ್ಯೊತಿರ್ಲಿಂಗ ದೇವಸ್ಥಾನಗಳಿವೆ. ಸುಂದರವಾದ ಗಣಪತಿ, ದತ್ತಾತ್ರೇಯ, ಮುರಳಿ ಮನೋಹರ, ದಶಾವತಾರ ದೇವಾಲಯಗಳಿವೆ. ಔಂದ್ ಅಲ್ಲಿ ೧೦೮ ಶಿವ ದೇವಸ್ಥಾನಗಳು ಮತ್ತು ೬೮ ಇತರ ದೇವಾಲಯಗಳು ಇವೆ. ಹಾಗಾಗಿ ಔಂದ್ ದೇವಾಲಯಗಳ ನಗರಿ. ನಾಗನಾಥ ದೇವಸ್ಥಾನಕ್ಕೆ ಎರಡು ಕಳಸ ಗೋಪುರಗಳು ಇವೆ. ಇದನ್ನು ಅತ್ತೆ-ಸೊಸೆ ಕಳಸ ಗೋಪುರ ಎಂದು ಕರೆಯಲಾಗುತ್ತದೆ. 

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೧೧ [ವೇರುಳಿನ ಘುಶ್ಮೇಶ್ವರ].

ವೇರುಳಿನ ಘುಶ್ಮೇಶ್ವರ.

ಎಲ್ಲಿದೆ?
ಔರಂಗಾಬಾದ್ ಇಂದ ಎಲ್ಲೋರ ಗುಹೆಗಳ ಕಡೆ ಹೋಗುವ ರಸ್ತೆಯಲ್ಲಿ ವೇರುಳ್ ಸಿಗುತ್ತದೆ. ಜ್ಯೋತಿರ್ಲಿಂಗ ಗ್ರೀಷ್ಮೇಶ್ವರ ಅಥವಾ ಘುಶ್ಮೇಶ್ವರ ಇಲ್ಲಿದೆ. ಇದು ಮೂಲತಃ ನಾಗ್ ಬುಡಕಟ್ಟು ಜನಾಂಗದವರ ದೇವಸ್ಥಾನ.

ದೇವಸ್ಥಾನದ ಸ್ವರೂಪ.
ದಶಾವತಾರದ ಕೆತ್ತನೆಗಳಿಂದ ಶೋಭಿತವಾದ ಇದು ೨೪೦ * ೧೮೫ ಅಡಿ ವಿಸ್ತಾರವಾಗಿದೆ. ಅಂಗಳದಲ್ಲಿ ೨೪ ಕಂಬಗಳ ಮೇಲೂ ನಂದಿಕೇಶ್ವರನ ಮೂರ್ತಿ ಇದೆ. ದೇವರು ಪೂರ್ವಾಭಿಮುಖವಾಗಿದ್ದು ದೇವಾಲಯದಿಂದ ಪವಿತ್ರ ಜಲ ಪ್ರವಹಿಸುವುದು.

ಸ್ಥಳ ಪುರಾಣ.
ಈ ಸ್ಥಳದ ಕುರಿತು ಅನೇಕ ಕತೆ(ಥೆ)ಗಳಿವೆ. ಪಾರ್ವತಿ ಕುಂಕುಮ ಇಟ್ಟುಕೊಳ್ಳುವಾಗ ಅದು ಶಿವಲಿಂಗವಾಗಿ ಕೆಳಗೆ ಬಿದ್ದಿತಂತೆ. ಇದಕ್ಕೆ ಕುಂಕುಮೇಶ್ವರ ಎಂಬ ಹೆಸರು ಕೂಡ ಇದೆ. ಇನ್ನೊಂದು ಕತೆ(ಥೆ)ಯಂತೆ, ದೇವಗಿರಿ ಪರ್ವತದಲ್ಲಿ ಸುಧರ್ಮ-ಸುದೇಹಿ ದಂಪತಿಗಳು ಧರ್ಮಪರರಾಗಿದ್ದರು. ಇವರಿಗೆ ಮಕ್ಕಳಾಗದಿರಲು ತಂಗಿ ಘುಶ್ಮಾದೇವಿಗೆ ಮಗುವಾಯಿತು. ಅಕ್ಕ ಸುದೇಹಿ ಆ ಮಗುವನ್ನು ಮೋಸದಿಂದ ಕೊಂದಳು. ಆಗ ತಂಗಿಯು ಶಿವನನ್ನು ಪ್ರಾರ್ಥಿಸಿದಳು. ಶಿವನು ಮಗುವನ್ನು ಬದುಕಿಸಿದ ಮತ್ತು ಅವಳ ಕೋರಿಕೆಯ ಮೇರೆಗೆ ಘುಷ್ಮೇಶ್ವರನಾಗಿ ಇಲ್ಲಿ ನಿಂತನು ಎಂದು ನಂಬಿಕೆ. ಇದನ್ನು ವೇರುಳಿನ ಅರಸನಾದ ಭೋಂಸ್ಲೆ ಸ್ಥಾಪಿಸಿದನೆಂದೂ, ಅಹಲ್ಯಾಬಾಯಿ ಹೋಳ್ಕರ‍್ ಅಭಿವೃದ್ಧಿ ಪಡಿಸಿದಳೆಂದೂ ಚಾರಿತ್ರಿಕ ದಾಖಲೆಗಳು ಹೇಳುತ್ತವೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೧೦ [ವಾರಣಾಸಿ (ಕಾಶಿ) ವಿಶ್ವೇಶ್ವರ].

ವಾರಣಾಸಿ (ಕಾಶಿ) ವಿಶ್ವೇಶ್ವರ.

ಎಲ್ಲಿದೆ?
ಕಾಶಿ ಅಥವಾ ವಾರಣಾಸಿಯು ಉತ್ತರಪ್ರದೇಶದಲ್ಲಿದೆ. ವಿಶ್ವನಾಥ ಮಂದಿರ ಇಲ್ಲಿನ ಪ್ರಧಾನ ದೇವಾಲಯ. ೧೭೭೬ರಲ್ಲಿ ಈ ದೇವಸ್ಥಾನವು ಪುನರ್ ನಿರ್ಮಾಣಗೊಂಡಿತು.

ದೇವಸ್ಥಾನದ ಸ್ವರೂಪ.
ಇಲ್ಲಿನ ಚೌಕಾಕಾರದ ಕುಂಡದಲ್ಲಿ ಲಿಂಗವು ಒಂದು ಅಡಿ ಎತ್ತರವಾಗಿದೆ. ಗಂಗಾಸ್ನಾನ ಮಾಡಿ, ಸ್ವತಃ ಭಕ್ತಾದಿಗಳೇ ಗಂಗಾಜಲದಿಂದ ಅಭಿಷೇಕ ಮಾಡಬಹುದು.

ಸ್ಥಳ ಪುರಾಣ.
ಈ ಕ್ಷೇತ್ರದ ಕುರಿತು ನೂರಾರು ಪುರಾಣ ಕತೆ(ಥೆ)ಗಳು ಕೇಳಿ ಬರುತ್ತವೆ. ಪ್ರಳಯಕಾಲದಲ್ಲಿ ಮಹಾವಿಷ್ಣು ಇಲ್ಲಿ ತಪಸ್ಸನ್ನು ಆಚರಿಸಿದನೆಂದೂ, ಬ್ರಹ್ಮನು ಆಗ ಈತನ ನಾಭಿ ಕಮಲದಿಂದ ಜನಿಸಿದಾಗ, ಲಕ್ಷ್ಮಿಯು ಆತನ ಕಣ್ಣುಮುಚ್ಚಲು ಜಗವೆಲ್ಲ ಕತ್ತಲಾಯಿತೆಂದೂ, ಆಗ ಭಕ್ತರ ಸ್ತೋತ್ರದಿಂದ ಸುಪ್ರೀತನಾದ ಶಿವನು ಜ್ಯೋತಿರ್ಲಿಂಗ ಸ್ವರೂಪನಾಗಿ ಇಲ್ಲಿ ನೆಲೆಸಿ ಜಗವನ್ನು ಬೆಳಗಿದನೆಂಬುದು ನಂಬಿಕೆ. ಸ್ವರ್ಗದಿಂದ ಧುಮುಕಿದ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಹಿಡಿದದ್ದುಉ ಇಲ್ಲೇ ಎಂಬ ನಂಬಿಕೆಯೂ ಇದೆ. ಕಾಶಿಯನ್ನು ೩ ಭಾಗ ಮಾಡಿಲಾಗಿವೆ. ಕೇದಾರ ಖಂಡ, ಪ್ರಣವ ಖಂಡ, ವಿಶ್ವೇಶ್ವರ ಖಂಡ ಎಂದು ಈ ಭಾಗಗಳಿಗೆ ಹೆಸರು. ಜ್ಯೋತಿರ್ಲಿಂಗ ವಿಶ್ವೇಶ್ವರ ಖಂಡದಲ್ಲಿ ಇದೆ.

field_vote: 
Average: 3.2 (9 votes)
To prevent automated spam submissions leave this field empty.
ಲೇಖನ ವರ್ಗ (Category): 

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಹಟ್ಟಿಯಂಗಡಿ (ಹಟ್ಟಿಅಂಗಡಿ)

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳಲ್ಲಿ ಒಂದಾದ ಹಟ್ಟಿಯಂಗಡಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಕುಂದಾಪುರದಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ಕ್ಷೇತ್ರವಿದು. ಹಟ್ಟಿಯಂಗಡಿ ಒಂದು ಸಣ್ಣ ಹಳ್ಳಿ. ಇಲ್ಲಿ ಗಣಪನ ವಾಸ. ದೇವಸ್ಥಾನ ಸಣ್ಣವಾಗಿ ಕಂಡರೂ ಬಹಳ ಪ್ರಸಿದ್ಧಿ ಪಡೆದಿದೆ. ಈ ದೇವಳದಲ್ಲಿ ನವಗ್ರಹ ಮಂದಿರ ಕೂಡ ಇದೆ. ಗರ್ಭಗುಡಿಯ ಸುತ್ತಲೂ ವಿವಿಧ ಭಂಗಿಯ ಗಣಪತಿ ಮೂರ್ತಿಗಳಿವೆ (ಊರ್ಧ್ವ, ಹೇರಂಬ, ನೃತ್ಯ ಮುಂತಾದವು).

 


ಹಿನ್ನೆಲೆ:
ಪಶ್ಚಿಮಾಭಿಮುಖವಾಗಿ ಹರಿಯುವ ವರಾಹಿ ನದಿ ಉತ್ತರ ದಂಡೆಯ ಮೇಲೆ ಇರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ. ’ಹಟ್ಟಿಯಂಗಡಿ’ ಎಂಬ ಹೆಸರಿನ ಗ್ರಾಮಕ್ಕೆ ಹಿಂದೆ ’ಪಟ್ಟಿ-ಪಟ್ಟಿಯ’ನಗರ ಎಂಬ ಹೆಸರಿತ್ತು. ಇದಕ್ಕೆ ಶಾಸನಾಧಾರಗಳಿವೆ. ತುಳುನಾಡು ಆಳಿದ ಪ್ರಪ್ರಥಮ ರಾಜವಂಶದ ಆಳುಪ ರಾಜರ ಹೆಸರಿನಲ್ಲಿ ’ಪಟ್ಟಿ’ ಪ್ರಮುಖವಾಗಿ ಕಾಣಿಸಿಕೊಂಡಿದೆ. ಪಟ್ಟಿ ಅಥವಾ ಹಟ್ಟಿ ಎಂದರೆ ಒಂದು ಕಿರುಗ್ರಾಮ, ಒಂದು ಗುಂಪಿನವರು ವಾಸಿಸುವ ಸ್ಥಳ, ಮನೆ, ಬೀಡು ಎಂಬಿತ್ಯಾದಿ ಅರ್ಥಗಳು ಇವೆ. ಹಟ್ಟಿಯಂಗಡಿಯಲ್ಲೇ ಎರಡು ಪ್ರಾಚೀನವಾದ ಗಣಪತಿ ವಿಗ್ರಹಗಳಿವೆ. ಒಂದು ಲೋಕನಾಥೇಶ್ವರ ದೇವಸ್ಥಾನದಲ್ಲಿ (ಈ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ) ಮತ್ತೊಂದು ಸಿದ್ಧಿವಿನಾಯಕ ದೇವಸ್ಥಾನದಲ್ಲಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೯ [ರಾಮೇಶ್ವರಂನ ರಾಮೇಶ್ವರ].

ರಾಮೇಶ್ವರಂನ ರಾಮೇಶ್ವರ.

ಎಲ್ಲಿದೆ?
ತಮಿಳುನಾಡಿನ ರಾಮೇಶ್ವರಂ ಅಲ್ಲಿದೆ. ಇದು ೪ ಕಿ. ಮೀ (೩೪ ಚ. ಮೈ) ಅಗಲದ ದ್ವೀಪ. ಇಲ್ಲಿನ ದೇವಸ್ಥಾನ ದ್ರಾವಿಡ ಶಿಲ್ಪ ಕಲೆಯ ಪ್ರತಿರೂಪ.

ದೇವಸ್ಥಾನದ ಸ್ವರೂಪ.
೮೬೫ ಅಡಿ ಉದ್ದ, ೬೫೭ ಅಡಿ ಅಗಲ ಮತ್ತು ೪೯ ಅಡಿ ಎತ್ತರವಾಗಿದೆ. ಸಹಸ್ರಾರು ಕಂಬಗಳು, ಹತ್ತು ಅಂತಸ್ತುಗಳ ಮಹಾದ್ವಾರ, ಹೀಗೆ ದೇಗುಲದ ನೋಟವೇ ಭವ್ಯವಾಗಿದೆ. ಇದರ ಗೋಪುರ ಕೂಡ ೧೨೬ ಅಡಿ ಎತ್ತರವಿದೆ. ಇಲ್ಲಿ ೨೪ ತೀರ್ಥಗಳಿವೆ. ರಾಮತೀರ್ಥ, ಸೀತಾಕುಂಡ, ಲಕ್ಷ್ಮಣ ತೀರ್ಥ, ಕಪಿಲತೀರ್ಥ, ಬ್ರಹ್ಮಕುಂಡ, ಮಂಗಳತೀರ್ಥ ಮುಂತಾದ ಹೆಸರಿನ ಇವುಗಳಲ್ಲಿ ಪ್ರತಿಯೊಂದಕ್ಕೂ ಕತೆಗಳಿವೆ. ಅವೆಲ್ಲವೂ ರೋಗನಿವಾರಕ ಎಂಬುದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ರಾಮೇಶ್ವರ ದೇವಸ್ಥಾನದ ಹತ್ತಿರದಲ್ಲೇ ಪಾರ್ವತಿ ದೇವಸ್ಥಾನವಿದೆ. ಅಲ್ಲದೇ, ಸಂತಾನ ಗಣಪತಿ, ವೀರಭದ್ರ, ಹನುಮಾನ್, ನವಗ್ರಹ ಮುಂತಾದ ದೇವಸ್ಥಾನಗಳಿವೆ.

ಸ್ಥಳ ಪುರಾಣ.
ಶ್ರೀರಾಮ, ರಾವಣನನ್ನು ಸಂಹರಿಸಿದ ನಂತರ ಆತನಿಗೆ ಕಣ್ಣು ಕಾಣದಂತಾಯಿತಂತೆ. ಇದು ಬ್ರಹ್ಮಹತ್ಯಾ ದೋಷದ ಪರಿಣಾಮ ಎಂದು ತಿಳಿದು ರಾಮೇಶ್ವರದಲ್ಲಿ ಲಿಂಗವನ್ನು ಅರ್ಚಿಸಿ ಪಾಪಮುಕ್ತನಾದನೆಂಬುದು ನಂಬಿಕೆ. ಹಾಗೆಯೇ, ಇದು ಶ್ರೀರಾಮನು ರಾವಣನ ಜೊತೆಗಿನ ಯುದ್ಧಕ್ಕೆ ಮೊದಲು ಶಿವನನ್ನು ಅರ್ಚಿಸಿದ ತಾಣ ಎಂಬ ನಂಬಿಕೆ ಕೂಡ ಇದೆ. ಪವಿತ್ರವಾದ ಕಾಶಿಯಾತ್ರೆ ಮಡುವವರು ಮೊದಲು ಇಲ್ಲಿ ದರ್ಶನ ಪಡೆದು, ಇಲ್ಲಿನ ಮರಳನ್ನು ಕಾಶಿಯ ಗಂಗೆಗೆ ಅರ್ಪಿಸಿ, ಕಾಶಿಯಾತ್ರೆ ಮುಗಿಸಿ ಬಂದು ರಾಮೇಶ್ವರನಿಗೆ ಗಂಗಾಸ್ನಾನ ಮಾಡಿಸಿದಾಗಲೇ ಕಾಶಿಯಾತ್ರೆ ಪೂರ್ಣವಾಗುವುದು ಎಂಬ ನಂಬಿಕೆ ಇದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೮ [ನಾಶಿಕದ ತ್ರ್ಯಂಬಕೇಶ್ವರ].

ನಾಶಿಕದ ತ್ರ್ಯಂಬಕೇಶ್ವರ.
ನಾಷಿಕದ ತ್ರ್ಯಂಬಕೇಶ್ವರ.
ಎಲ್ಲಿದೆ?
ಮಹಾರಾಷ್ಟ್ರದ ನಾಶಿಕದಲ್ಲಿದೆ. ಇದು ಗೋದಾವರಿ ನದಿಯ ಉಗಮ ಸ್ಥಾನ. ತ್ರ್ಯಂಬಕೇಶ್ವರದ ವಿಶೇಷವೆಂದರೆ ಒಂದೇ ಪಾಣಿಪೀಠದ ಕುಳಿಯೊಳಗೆ ಬ್ರಹ್ಮ - ವಿಷ್ಣು - ಮಹೇಶ್ವರರು ಮೂವರು ಕೂಡಿದ ಲಿಂಗ.

ದೇವಸ್ಥಾನದ ಸ್ವರೂಪ.
ಇದು ಭವ್ಯವಾದ ದೇಗುಲ. ಎತ್ತರದ ಕಂಬಗಳು ದೇವಾಲಯಕ್ಕೆ ಮೆರುಗು ನೀಡಿದೆ. ದೇವಾಲಯದ ಆವರಣದಲ್ಲಿ ಅಮೃತಕುಂಡ ಸರೋವರವಿದೆ. ದೇವಾಲಯದ ಸ್ವಲ್ಪ ದೂರದಲ್ಲೇ ಕುಶಾವರ್ತಿ ಎಂಬ ಪುಷ್ಕರಣಿ ಇದೆ. ದೇವಾಲಯವಿರುವ ಬ್ರಹ್ಮಗಿರಿ ಪರ್ವತದ ಬುಡದಲ್ಲಿ ವರಾಹ ತೀರ್ಥ ಮತ್ತು ನರಸಿಂಹ ತೀರ್ಥಗಳೆಂಬ ಪವಿತ್ರ ಕ್ಷೇತ್ರಗಳಿವೆ.

ಸ್ಥಳ ಪುರಾಣ.
ಬ್ರಹ್ಮಗಿರಿ ಪರ್ವತದ ತಪ್ಪಲಿನಲ್ಲಿ ಮಳೆಯಾಗದ್ದರಿಂದ ಗೌತಮ ಋಷಿಯು ದೀರ್ಘ ತಪಸ್ಸು ನಡೆಸಿದ. ಅವನ ತಪಸ್ಸಿಗೆ ಒಲಿದ ವರುಣನು ಶಾಶ್ವತವಾಗಿ ಹರಿಯುವ ಜಲಧಾರೆಯನ್ನು ಕರುಣಿಸಿದ. ಇದೇ ಗೋದಾವರೀ ನದಿ ಆಯಿತು. ಗೌತಮನ ಕೀರ್ತಿಗೆ ಅಸೂಯೆಗೊಂಡ ಋಷಿಗಳು ಅವನ ಮೇಲೆ ಹಸುವನ್ನು ಕೊಂದ ಆಪಾದನೆಯನ್ನು ಹೊರಿಸಿ ಬಹಿಷ್ಕರಿಸಿದರು. ಇದರಿಂದ ನೊಂದ ಗೌತಮನು ತನ್ನ ಸತಿಯೊಂದಿಗೆ ತಪಸ್ಸನ್ನಾಚರಿಸಿ ಶಿವನನ್ನು ಒಲಿಸಿಕೊಂಡಾಗ ಅವನು ಜ್ಯೋತಿರ್ಲಿಂಗ ರೂಪಧಾರಿಯಾಗಿ ಪ್ರತ್ಯಕ್ಷನಾಗಿ ತ್ರ್ಯಂಬಕೇಶ್ವರನಾಗಿ ಇಲ್ಲಿ ನೆಲೆಸಿದನೆಂದು ಪುರಾಣ ಹೇಳುತ್ತದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು: ಕುಂಭಾಸಿ

ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಇದು ಕರಾವಳಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಉಡುಪಿಯಿಂದ ಸುಮಾರು ೩೦ ಕಿ.ಮೀ ಮತ್ತು ಕುಂದಾಪುರದಿಂದ ಸುಮಾರು ೭ ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ಕ್ಷೇತ್ರವಿದು. ಈ ಕ್ಷೇತ್ರ ರಾಹೆ-೧೭ರ ಬಳಿಯಿದೆ. ದೇವಸ್ಥಾನದ ಬಳಿ ಇರುವ ಮೆಟ್ಟಿಲುಗಳಲ್ಲಿ ಇಳಿದು ಹೋದರೆ ಶಿವನ ದೇವಸ್ಥಾನವೂ ಇದೆ. ಈ ದೇವಸ್ಥಾನದಲ್ಲಿ ಪುಷ್ಕರಿಣಿ ಕೂಡ ಇದೆ. ಕರಾವಳಿಯ ಅನೇಕ ದೇವಸ್ಥಾನಗಳು ಒಂದೋ ನದಿಯ ಬಳಿ ಇರುತ್ತವೆ ಇಲ್ಲವಾದಲ್ಲಿ ಪುಷ್ಕರಿಣಿ ಇರುತ್ತದೆ. ಪರಶುರಾಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಕರಾವಳಿಯ ಕನ್ನಡ ಜಿಲ್ಲೆಗಳಿರುವ ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ, ಕೊಲ್ಲೂರು- ಹೀಗೆ ಸಪ್ತಕ್ಷೇತ್ರಗಳು ಪವಿತ್ರ ಸ್ಥಳಗಳಾಗಿವೆ. ಕುಂಭಾಸಿ ಪೇಟೆಯ ಬೆಟ್ಟದ ಮೇಲೆ (ಆನೆಗುಡ್ಡೆಯಲ್ಲಿ) ಶ್ರೀ ವಿನಾಯಕ ವಿರಾಜಿಸುತ್ತಿರುವನು. ಆನೆಗುಡ್ಡೆಗೆ ವೇಲಾವನದ ಭಾಗವಾದ ಮಧುವನವೆಂದೂ, ನಾಗಾಚಲವೆಂದೂ ಹೆಸರು ಪಡೆದಿದೆ. ದೇವಸ್ಥಾನ ಬಹಳ ಪುರಾತನವಾಗಿದ್ದು, ಜೀರ್ಣಾವಸ್ಥೆಯಲ್ಲಿದ್ದ ದೇವಳವನ್ನು ೧೯೮೫ರಲ್ಲಿ ಉದ್ದಾರ ಮಾಡಲಾಗಿದೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಮಧೂರುಗಣೇಶ ಚತುರ್ಥಿಯಂದು ಕರಾವಳಿಯ ಅನೇಕ ಕಡೆ ಒಂದು ಹಾಡು ಕೇಳಿಬರುತ್ತದೆ. ಇದರ ಸಾಹಿತ್ಯ ಸರಿಯಾಗಿ ತಿಳಿದಿಲ್ಲ. ಆ ಹಾಡಿನಲ್ಲಿ ಕೆಳಗಿನ ಚರಣ ಬರುತ್ತದೆ. ಈ ಚರಣದಲ್ಲಿ ಕರಾವಳಿಯ ಪ್ರಸಿದ್ಧ ಗಣಪತಿ ದೇವಾಲಯಗಳ ಹೆಸರುಗಳಿವೆ.

"ಮಧೂರು ಗಣಪತಿ ಶರವು ಗಣಪತಿ ಕುಂಭಾಸಿ ಗಣಪತಿ ಶರಣಂ
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣಂ"

ಈ ದೇವಸ್ಥಾನಗಳ ವಿಶೇಷತೆಯೆಂದರೆ (ಒಂದೆರಡು ಬಿಟ್ಟು) ಅಪಾರ ಪ್ರಕೃತಿ ಸೌಂದರ್ಯದಿಂದ ಆವರಿಸಿದೆ. ಇಲ್ಲಿ ನಾನು ಸಂಕ್ಷಿಪ್ತ ವಿವರಣೆಯನ್ನು ನೀಡಿದ್ದೇನೆ. ವಿಸ್ತಾರವಾಗಿ ಸಮಯವಿದ್ದಾಗ ಬರೆಯುತ್ತೇನೆ. ಈ ದೇವಸ್ಥಾನಗಳು ಎಷ್ಟು ಪ್ರಸಿದ್ಧಿ ಎಂದರೆ ಕರಾವಳಿಯ ಬಿರುಸಿನ ಮಳೆಗಾಲದ ಮಧ್ಯೆಯೂ ಗಣೇಶ ಚತುರ್ಥಿಯಂದು ಬಹಳ ಜನ ಸೇರುತ್ತಾರೆ. ಗಣಪತಿ ದೇವಸ್ಥಾನ ಎಂದು ಎಲ್ಲೂ ಇಲ್ಲ. ಗಣಪತಿ ಜೊತೆಗೆ ಶಿವನೂ ಇರುವನು. ಹಾಗೆ ಈ ಎಲ್ಲಾ ದೇವಸ್ಥಾನಗಳಿಗೂ ಐತಿಹಾಸಿಕ ಹಿನ್ನೆಲೆ ಇದೆ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೭ [ಹಿಮಾಲಯದ ಕೇದಾರನಾಥ].

ಹಿಮಾಲಯದ ಕೇದಾರನಾಥ.

ಎಲ್ಲಿದೆ?
ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ.

ಸ್ಥಳ ಪುರಾಣ.
ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ.
ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ.
ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ.
ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ.
ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೬ [ಡಾಕಿನಿಯ ಭೀಮಶಂಕರ].

ಡಾಕಿನಿಯ ಭೀಮಶಂಕರ

ಎಲ್ಲಿದೆ?
ಮಹಾರಾಷ್ಟ್ರದ ಪುಣೆಯ ಸಮೀಪದಲ್ಲಿದೆ. ಪುಣೆಯಿಂದ ನಾಶಿಕ ರಸ್ತೆಯಲ್ಲಿ ಮಂಚರ್ ಎಂಬ ಊರಿಗೆ ಬಂದು ಸಹ್ಯಾದ್ರಿ ಪರ್ವತ ಶ್ರೇಣಿಯತ್ತ ತಿರುಗಿ ಖೋಡೆಂಗಾವ್ ಎಂಬ ಊರಿಗೆ ಬಂದರೆ ಸಮೀಪದ ಡಾಕಿನಿಯಲ್ಲಿ ಭೀಮಶಂಕರ ದೇಗುಲವಿದೆ. ಇದು ಬ್ರಹ್ಮಪುರ ಪರ್ವತ ಶಿಖರದಲ್ಲಿದ್ದು ಭೀಮಾ ನದಿ ಇಲ್ಲಿ ಉಗಮವಾಗುವುದು. ಸುಂದರ ದೇಗುಲ, ಪ್ರಾಕಾರ ಭವ್ಯ ಗೋಪುರಗಳು ಹಸಿರಿನ ಮಧ್ಯೆ ಕಂಗೊಳಿಸುತ್ತವೆ. ಲಿಂಗದ ಮಧ್ಯದಲ್ಲಿ ಗೆರೆ ಇದ್ದು, ಇದು ಶಿವ ಶಕ್ತಿ ಸ್ವರೂಪವಾಗಿದೆ. ಇದನ್ನು ಅರ್ಧನಾರೀಶ್ವರ ರೂಪ ಎಂದೂ ಶಿವಲೀಲಾಮೃತ ವರ್ಣಿಸುತ್ತದೆ. ಸಂತ ರಾಮದಾಸರು, ಗಂಗಾಧರ ಪಂಡಿತರು, ಸಂತ ಜ್ಞಾನೇಶ್ವರರು, ವರದಹಳ್ಳಿ ಶ್ರೀಧರ ಸ್ವಾಮಿಗಳು ಮೊದಲಾದ ಮಹಿಮರು ತಪಸ್ಸು ಮಾಡಿ ಅನುಗ್ರಹ ಪಡೆದ ಸ್ಥಳವಿದೆ. ಪೋರ್ಚುಗೀಸರು ಸ್ಥಾಪಿಸಿದರು ಎಂದು ನಂಬಲಾದ ಬೃಹದಾಕಾರದ ತೂಗಾಡುವ ಘಂಟೆ ಇಲ್ಲಿನ ಇನ್ನೊಂದು ವಿಶೇಷ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಶಿರ್ಡಿಗೆ ಹೋಗಲಿಕ್ಕುಂಟಾ ? ರೈಲಿನಲ್ಲಿ ಹೋಗಿ. (೧, ಮಾರ್ಚ್, ೨೦೦೯) ರವಿವಾರ, ಸುರು ಆಗ್ತದೆ !

field_vote: 
No votes yet
To prevent automated spam submissions leave this field empty.

ಇವತ್ತು ರೈಲು ಸೇವೆ ಮಧ್ಯಾನ್ಹ ೩ ಗಂಟೆಗೆ ಸುರು ಆಗಿದೆ. ನೋಡಿ. ಓದಿ.

ಓಹ್ ! ವಿವರಗಳು ನಿಮಗೆ ಬೇಕೇನೋ. ಸರಿ, ಇಲ್ಲಿದೆ ನೋಡಿ.

** ೧. ಮುಂಬೈ ನ CST ರೈಲ್ವೆ ನಿಲ್ದಾಣದಿಂದ ಶಿರ್ಡಿಗೆ-[೧೨ ಘಂಟೆ ಪ್ರಯಾಣ]

CST ೧೦-೫೫ PM ಶಿರ್ಡಿಯನ್ನು ಮುಟ್ಟುವುದು ಮರುದಿನ, ೧೦-೩೦ AM.

** ೨. ವಾಪಸ್ ಬರಲು, ಶಿರ್ಡಿಯಿಂದ ೪-೪೦ PM, ಮುಂಬೈ ನ CST ಗೆ ಮರುದಿನ, ೪-೨೫ AM.

ಲೇಖನ ವರ್ಗ (Category): 

ಅಪರೂಪದ ಶಿವಪಾರ್ವತಿ ವಿಗ್ರಹ

field_vote: 
No votes yet
To prevent automated spam submissions leave this field empty.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಅನೇಕ ಪಾಳೇಗಾರರು ಆಳಿರುವ ಪ್ರದೇಶವಾಗಿದೆ. ತಾಲೂಕಿನಲ್ಲಿರುವ ಗುಡೇಕೋಟೆ ಗ್ರಾಮ ಪಾಳೆಗಾರರ ಕೋಟೆ-ಕೊತ್ತಲಗಳಿಂದ ಕಂಗೊಳಿಸುತ್ತದೆ. ಇಲ್ಲಿಯೇ ದಕ್ಷಿಣ ಭಾರತದಲ್ಲಿಯೇ ಅಪರೂಪದ್ದೆನಿಸುವ ಸುಂದರ ಶಿವಪಾರ್ವತಿಯ ವಿಗ್ರಹವಿದೆ. ಶಿವಪಾರ್ವತಿಯ ವಿಗ್ರಹವಿರುವ ದೇವಸ್ಥಾನವಿರುವುದೂ ವಿಶೇಷವೇ! ವಿಗ್ರಹವು ಏಕಶಿಲಾ ವಿಗ್ರಹವಾಗಿದ್ದು, ಕಪ್ಪುಶಿಲೆಯಿಂದ ಕಂಡರಿಸಲ್ಪಟ್ಟಿದೆ. ಹೊರಗಡೆ ಸಾಮಾನ್ಯ ದೇವಸ್ಥಾನದಂತೆ ಕಂಡರೂ ಗರ್ಭಗುಡಿಯಲ್ಲಿನ ಶಿವಪಾರ್ವತಿ ವಿಗ್ರಹದಿಂದ ಈ ದೇವಸ್ಥಾನಕ್ಕೆ ಮಹತ್ವ ಬಂದಿದೆ. ಇಲ್ಲಿ ಶಿವನು ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡಿರುವುದು ಅಪರೂಪದ್ದಾಗಿದೆ. ಶಿವನು ಎಡಕೈಯಲ್ಲಿ ತ್ರಿಶೂಲವನ್ನು ಹಿಡಿದಿದ್ದು, ತ್ರಿಶೂಲದ ಮೇಲ್ಭಾಗದಲ್ಲಿ ಮಾನವನ ರುಂಡವನ್ನು ಕೆತ್ತನೆ ಮಾಡಲಾಗಿದೆ. ಶಿವನು ಬಲಗೈಯಲ್ಲಿ ಡಮರುಗವನ್ನು ಹಿಡಿದಿದ್ದಾನೆ. ಪಾರ್ವತಿಯ ತೋಳು ಶಿವನನ್ನು ಬಳಸಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಶಿವನ ತಲೆಯಲ್ಲಿ ಜಟೆಯಿಲ್ಲ, ಗಂಗೆಯಿಲ್ಲ, ಅರ್ಧಚಂದಿರನೂ ಇಲ್ಲ. ಶಿವಪಾರ್ವತಿಯರಿಬ್ಬರೂ ಕಿರೀಟವನ್ನು ಧರಿಸಿರುವುದು ಈ ಮೂರ್ತಿಯ ಮತ್ತೊಂದು ವಿಶೇಷವಾಗಿದೆ. ಈ ರೀತಿಯ ಶಿವಪಾರ್ವತಿಯ ಮೂರ್ತಿ ಎಲ್ಲಿಯೂ ನೋಡಸಿಗುವುದಿಲ್ಲವೆಂಬುದು ಗ್ರಾಮಸ್ಥರ ಹೇಳಿಕೆ. ಶಿವನ ಹಣೆಗಣ್ಣನ್ನು ವಿಶೇಷವಾಗಿ ಕೆತ್ತನೆ ಮಾಡಲಾಗಿದೆ. ಕಿರೀಟ, ಮೂರ್ತಿಯ ಮುಖ, ತಲೆಕೂದಲು, ಒಟ್ಟಾರೆ ಇಡೀ ಆಕೃತಿ ಹೊಯ್ಸಳರ ಕಾಲದ ಕೆತ್ತನೆಯ ಶೈಲಿಯನ್ನು ನೆನಪಿಸುತ್ತದೆ. ಗರ್ಭಗುಡಿಯ ಹೊರಭಾಗದಲ್ಲಿ ಎಡಗಡೆ ಗಣಪನ ವಿಗ್ರಹ, ಬಲಗಡೆ ದುರ್ಗೆಯ ವಿಗ್ರಹಗಳಿವೆ. ಎದುರಿಗೆ ನಂದಿಯ ವಿಗ್ರಹವಿದೆ.

ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೫ [ಪರ್ಲಿಯ ವೈದ್ಯನಾಥ].

ಪರ್ಲಿಯ ವೈದ್ಯನಾಥ.

ಎಲ್ಲಿದೆ?
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಚಿಕ್ಕಗ್ರಾಮ ಪರ್ಲಿ.
ಮಹಾಭಾರತದ ಪ್ರಸಿದ್ಧ ಕುಂತೀಪುರವೇ ಇದು ಎಂದು ನಂಬಿಕೆ.
ಅಮೃತ ಮಥನದ ಸಂದರ್ಭದಲ್ಲಿ ಸೃಷ್ಟಿಯಾದ ಹದಿನಾಲ್ಕು ರತ್ನಗಳಲ್ಲಿ ಈ ಲಿಂಗವೂ ಒಂದು ಎಂಬುದು ಪ್ರತೀತಿ.
ರಾವಣಾಸುರನು ಪರಮಶಿವನನ್ನು ಒಲಿಸಿಕೊಳ್ಳಲುಇಲ್ಲಿ ತಪಸ್ಸು ಮಾಡಿ ತನ್ನ ಶಿರವನ್ನೇ ಅರ್ಪಿಸಿದನಂತೆ.
ಕ್ರಿ. ಶ. ೧೭೦೬ರಲ್ಲಿ ಅಹಲ್ಯಾದೇವಿ ಹೋಳ್ಕರ್ ಈ ಅಪೂರ್ವ ಲಿಂಗವನ್ನು ಪತ್ತೆ ಮಾಡಿದಳು.
ನಂತರ ಪೇಶ್ವೆ ನಾನಾರಾವ್ ದೇಶಪಾಂಡೆ ಇಲ್ಲಿ ಭವ್ಯವಾದ ದೇವಸ್ಥಾನವನ್ನು ಕಟ್ಟಿಸಿದನು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೪ [ಮಾಂದಾತದ ಓಂಕಾರೇಶ್ವರ].

ಮಾಂದಾತದ ಓಂಕಾರೇಶ್ವರ

ಎಲ್ಲಿದೆ?
ಮಧ್ಯಪ್ರದೇಶದ ಪರ್ವತ ಶ್ರೇಣಿಯಲ್ಲಿ, ನರ್ಮದಾ ನದಿಯ ತೀರದಲ್ಲಿದೆ.
ಮಾಮಲ್ಲೇಶ್ವರ ದ್ವೀಪ ಮತ್ತು ನದಿ "ಓಂ"ಕಾರದ ಮಾದರಿಯಲ್ಲಿರುವುದರಿಂದ ಇದಕ್ಕೆ ಓಂಕಾರೇಶ್ವರ ಎಂದು ಹೆಸರು.
ಇಡೀ ಆವರಣದಲ್ಲಿ ಕೋಟಿ ತೀರ್ಥಗಳಿವೆಯಂತೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೩ [ಉಜ್ಜಯನಿಯ ಮಹಾಕಾಳೇಶ್ವರ].

ಉಜ್ಜಯನಿಯ ಮಹಾಕಾಳೇಶ್ವರ.

ಎಲ್ಲಿದೆ?

ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಂಡೆಯ ಮೇಲಿದೆ.
ಇದು ಪುರಾಣಗಳಲ್ಲಿ ಅವಂತಿಕಾ ನಗರಿ ಎಂದು ವರ್ಣಿತವಾಗಿತ್ತು.
ಇದನ್ನು ಭೂಮಿಯ ನಾಭಿ ಎಂದೂ ವರ್ಣಿಸಲಾಗಿದೆ.
ಶ್ರೀ ಕೃಷ್ಣ-ಬಲರಾಮ-ಸುಧಾಮರು ಇಲ್ಲಿ ವಿದ್ಯಾಭ್ಯಾಸ ಮಾಡಿದರಂತೆ.
ಪ್ರಸಿದ್ಧವಾದ ವಿಕ್ರಮಾದಿತ್ಯನ ಸಿಂಹಾಸನ ಇಲ್ಲಿಯೇ ಇತ್ತು ಎಂದು ಪ್ರತೀತಿ.
ಉಜ್ಜಯನಿಹಲವಾರು ಬಂಗಾರದ ಕಲಶಗಳನ್ನು ಹೊಂದಿರುವ ದೇಗುಲಗಳನ್ನು ಹೊಂದಿರುವುದರಿಂದ "ಸ್ವರ್ಣ ಶೃಂಗ" ಎಂದೂ ಪ್ರಸಿದ್ಧವಾಗಿದೆ.
ಬಹಳ ಹಿಂದೆ ಇಲ್ಲಿ ಅನೇಕ ವೇದಾಧ್ಯಯನ ಸಂಪನ್ನ ಶಿವ ಭಕ್ತರಿದ್ದರಂತೆ.
ಅವರಲ್ಲಿ ವೇದ ಪ್ರಿಯನೆಂಬುವನು ತನ್ನ ನಾಲ್ಕು ಪುತ್ರರೊಂದಿಗೆ ಶಿವ ಕೈಂಕರ್ಯದಲ್ಲಿ ತೊಡಗಿದ್ದನಂತೆ. ಹೀಗಿರುಬಾಗ, ದೂಷಣನೆಂಬ ರಾಕ್ಷಸನು ತನ್ನ ದುಷ್ಟ ಶಕ್ತಿಯೊಂದಿಗೆ ಇವರ ಮೇಲೆರಗ್ಲು ಶಿವಪೂಜಾ ನಿರತರಾದ್ದ ತನ್ನ ಭಕ್ತರನ್ನು ಕಾಪಡಲು ಶಿವನು ಲಿಂಗಾಕಾರದಿಂದ ಮಹಾಕಾಳನಾಗಿ ಹೊರಬಂದು ರಾಕ್ಷಸ ಸಂಹಾರ ಮಾಡಿದನಂತೆ.
ಕೊನೆಗೆ ಭಕ್ತರ ವಿನಂತಿ ಮೇರೆಗೆ ಅದೇ ಆಕಾರದಲ್ಲಿ ಜ್ಯೋತಿರ್ಮಯನಾಗಿ ನಿಂತನಂತೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇದು ಮುಂಬೈ ನಗರದ ’ಶಾನ್,” ಎಂದು ಹೇಳಬಹುದಾದ ಕಟ್ಟಡಗಳಲ್ಲೊಂದು-’ ಏರ್ ಇಂಡಿಯಾ ಬಿಲ್ಡಿಂಗ್ ’ !

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೨ [ಶ್ರೀಶೈಲದ ಮಲ್ಲಿಕಾರ್ಜುನ].

೨. ಶ್ರೀಶೈಲದ ಮಲ್ಲಿಕಾರ್ಜುನ.

ಮಲ್ಲಿಕಾರ್ಜುನ ದೇವಾಲಯ

ಎಲ್ಲಿದೆ?
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ.
ಕೃಷ್ಣ ನದಿ ತೀರದಲ್ಲಿರುವ ಇದು ಕದಲಿ, ಬಿಲ್ವವೃಕ್ಷಗಳಿಂದ ಕೂಡಿದ ಮನೋಹರವಾದ ಪರ್ವತಶ್ರೇಣಿಯಲ್ಲಿದೆ.
ಪುರಾಣ ಕಾಲದಲ್ಲಿ ಶಿವ-ಪಾರ್ವತಿಯರು ತಮ್ಮ ಮಗನಾದ ಕುಮಾರಸ್ವಾಮಿಯನ್ನು ಅರಸುತ್ತಾ ಇಲ್ಲಿಗೆ ಬಂದರು ಎಂದು ಪ್ರತೀತಿ.
ಒಂದು ಐತಿಹ್ಯದಂತೆ ಶಿವನ ಮಕ್ಕಳು ಕೈಲಾಸ ಪರ್ವತವನ್ನು ತೊರೆದು ಶ್ರೀಶೈಲದಲ್ಲಿ ವಿಹರಿಸುತ್ತಿರಲು, ಬಹುದಿನಗಳ ನಂತರ ಮಕ್ಕಳನ್ನು ನೋಡುವಾಸೆಯಿಂದ ಕೈಲಾಸಪತಿಯು ಪತ್ನಿ ಸಮೇತ ಇಲ್ಲೇ ಬಂದು ನೆಲೆನಿಂತನು.

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಹನ್ನೆರಡು ಜ್ಯೋತಿರ್ಲಿಂಗಗಳು - ೧ [ಸೌರಾಷ್ಟ್ರದ ಸೋಮನಾಥ].

ಭಾರತದ ವಿವಿಧ ಭಾಗಗಳಲ್ಲಿ ಜ್ಯೋತಿರ್ಲಿಂಗಗಳು ಹರಡಿಕೊಂಡಿವೆ.
ಈ ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ ಹೇಗೆ ಎಂದು ತಿಳಿಯೋಣ.

ಸೌರಾಷ್ಟ್ರೇ ಸೋಮನಾಥ೦ ಚ |
ಶ್ರೀಶೈಲೇ ಮಲ್ಲಿಕಾರ್ಜುನ೦ |
ಉಜ್ಜಯಿನ್ಯಾಂ ಮಹಾಕಾಲ೦ ಚ |
ಓ೦ಕಾರಮಮಲೇಶ್ವರಂ |
ಪರಾಲ್ಯಾ೦ ವೈದ್ಯನಾಥ೦ ಚ |
ಡಾಕಿಣ್ಯಾ೦ ಭೀಮಶಂಕರಂ |
ಸೇತುಬ೦ಧೇ ತು ರಾಮೇಶ೦ |
ನಾಗೇಶ೦ ಧಾರುಕಾವನೆ |
ವಾರಣಸ್ಯಾ೦ತು ವಿಶ್ವೇಶಂ |
ತ್ರ್ಯ೦ಬಕ೦ ಗೌತಮೀತಟೆ |
ಹಿಮಾಲಯೇ ತು ಕೇದಾರ೦ |
ಘುಷ್ಮೇಶ್ವರಂ ಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿ೦ಗಾನಿ ಸಾಯ೦ ಪ್ರಾತಃ ಪಠೇನ್ನರಃ
ಸಪ್ತ ಜನ್ಮ ಕೃತ೦ ಪಾಪ೦ ಸ್ಮರಣೇನ ವಿನಶ್ಯತಿ ||

ಮೇಲೆ ಹೇಳಿದ ಶ್ಲೋಕವು ಸುಪ್ರಸಿದ್ಧ "ರುದ್ರಸಂಹಿತೆ"ಯಲ್ಲಿದೆ.

field_vote: 
Average: 2 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಬಾಗಲವಾಡದ ಗಿರಿಯೊಡೆಯ ಸ್ವಯಂವ್ಯಕ್ತ ಶ್ರೀ ಲಕ್ಷ್ಮೀ ವೆಂಕಟರಮಣ...

field_vote: 
Average: 3 (1 vote)
To prevent automated spam submissions leave this field empty.

ಸುಕ್ಷೇತ್ರ ಬಾಗಲವಾಡವು ಕರ್ನಾಟಕದಲ್ಲಿ ಹರಿದಾಸರ ನೆಲೆವೀಡಾದ ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಹರಿಕಥಾಮೃತಸಾರವನ್ನು ರಚಿಸಿದ ಶ್ರೀ ಜಗನ್ನಾಥದಾಸರಾಯರ ಜನ್ಮಸ್ಥಳವಾದ ಬ್ಯಾಗವಾಟ ಎಂಬ ಹಳ್ಳಿಯೂ ಇಲ್ಲೇ ಹತ್ತಿರದಲ್ಲಿದೆ.

ಲೇಖನ ವರ್ಗ (Category): 

ಬನ್ನಿ ಕನ್ನಡದ ಸಿರಿ ಮೈಸೂರಿಗೆ.

field_vote: 
No votes yet
To prevent automated spam submissions leave this field empty.

ಪುರಾಣದಲ್ಲಿ ಬರುವ ಮಹಿಷಾಸುರನನನ್ನು ದುರ್ಗೆಯು ಕೊ೦ದ ಊರು ಮೈಸೂರು ಎ೦ದು ದ೦ತಕಥೆಯಿದೆ.ಮೈಸೂರಿನ ಒಡೆಯರು ವಿಜಯನಗರ ಅರಸರ ಸಾಮ೦ತರಾಗಿದ್ದರು. ಕ್ರಿ.ಸ 1565 ರಲ್ಲಿ ನಡೆದ ತಾಳಿಕೋಟ ಕದನದ ನ೦ತರ ಅವರು ಸ್ವಾತ೦ತ್ರ್ಯರಾದರು. ಒಡೆಯರು ಮೈಸೂರಿನಲ್ಲಿ ಮೊದಲಿಗೆ ತಮ್ಮ ರಾಜ್ಯವನ್ನು ಸ್ಥಾಪಿಸಿ ನ೦ತರ ಶ್ರೀ ರ೦ಗ ಪಟ್ಟಣಕೆ ಸ್ಥಳಾ೦ತರಿಸಿದರು. ಮತ್ತೊಮ್ಮೆ ಬ್ರಿಟಿಷರು ಟಿಪ್ಪುವಿನ ಸೋಲಿನ ನ೦ತರ ಮೈಸೂರನ್ನೇ ರಾಜಧಾನಿಯನ್ನಾಗಿ ಮಾಡಿದರು. ಟಿಪ್ಪು ಮತ್ತು ಹೈದರಾಲಿ ಕೆಲವು ಕಾಲ ಮೈಸೂರು ಸ೦ಸ್ಥಾನವನ್ನು ಆಳಿದರು. ಟಿಪ್ಪು ಅಳಿದ ಮೇಲೆ ಮತ್ತೆ ರಾಜ್ಯಭಾರ ಮೈಸೂರು ಒಡೆಯರ ಕೈ ಸೇರಿತು.
ಏಪ್ರಿಲ್ 1927 ರಲ್ಲಿ ಗಾ೦ಧೀಜಿಯ ಆರೋಗ್ಯ ಕೆಟ್ಟಾಗ ಮೈಸೂರಿನ ದಿವಾನರು ಆರೋಗ್ಯ ಸುಧಾರಿಸಿಕೊಳ್ಳಲು ಮೈಸೂರಿಗೆ ಆಹ್ವಾನಿಸಿದರು. ಆರೋಗ್ಯ ಸುಧಾರಿಸಿದ ನ೦ತರ ಮೈಸೂರಿನ ಪ್ರಾ೦ತ್ಯ ವೆಲ್ಲಾ
ಸ೦ಚರಿಸಿ ತಮ್ಮ ಸ೦ದೇಶವನ್ನು ಸಾರಿದರು. ಮೈಸೂರಿನವರಿಗೆ ಇದನ್ನು ಕೇಳುವ ಸದಾವಕಾಶವು ಲಭಿಸಿತು. ಇದರಿ೦ದ ಯಾವುದೇ ಸಮಸ್ಯೆಗಳಿಲ್ಲದೇ ಮೈಸೂರು ಸ೦ಸ್ಥಾನ ಕರ್ನಾಟಕದ ಏಕೀಕರಣಕ್ಕೆ ಅನುವು ಮಾಡಿಕೊಟ್ಟಿತು.

ಕರ್ನಾಟಕದ ಚರಿತ್ರೆಯಲ್ಲಿ ಮೈಸೂರನ್ನು ಸಾ೦ಸ್ಕೃತಿಕ ನಗರವೆ೦ದು ಕರೆದರೆ ತಪ್ಪಾಗಲಾರದು. ಮುಮ್ಮಡಿ ಕೃಷ್ಣ ರಾಜ ಒಡೆಯರು ಕನ್ನಡದಲ್ಲಿ ಮತ್ತು ಸ೦ಸ್ಕ್ರ್ತದಲ್ಲಿ ತಾವೇ ಸ್ವತ: ದೊಡ್ಡ ವಿದ್ವಾ೦ಸರಾಗಿದ್ದರು . 1794- 1868ವರೆಗೆ ಮೈಸೂರನ್ನು ಆಳಿದರು. ಅವರು ಕನ್ನಡಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟು ಯಕ್ಷಗನ ಮು೦ತಾದ ಕಲೆಗಳಿಗೆ ಆಶ್ರಯವನ್ನು ಕೊಟ್ಟರು. ಅವರ ಆಸ್ಥಾನ ನೂರಾರು ಕವಿಗಳಿ೦ದ ಅಲ೦ಕೃತವಾಗಿತ್ತು. ಇವರ ಆಸ್ಥಾನದ ಕವಿಯಾದ ಕೆ೦ಪು ನಾರಾಯಣನ "ಮುದ್ರಾ ಮ೦ಜುಷ " ಕನ್ನಡ ಗದ್ಯ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಟ್ಟಿತು.
ಕನ್ನಡ ನಾಟಕಗಳಿಗೆ ಅತ್ಯ೦ತ ಪ್ರೋತ್ಸಾಹವನ್ನು ಕೊಡುತ್ತಿದ್ದ ಮಹಾರಾಜರು ತಮ್ಮ ಆಸ್ಥಾನ ವಿದ್ವಾನ್ ಬಸವಪ್ಪ ಶಾಸ್ತ್ರಿಯವರಿ೦ದಾ ಸ೦ಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮಹಾತ್ಕಾರ್ಯವನ್ನು ಮಾಡಿದರು. ಈತ ವಿಕ್ರಮೋರ್ಷಿಯಾ, ಶಾಕು೦ತಲ , ಉತ್ತರ ರಾಮಚರಿತೆ ಮು೦ತಾದ ನಾಟಕಗಳನ್ನು ಬರೆದು ಆಡಿಸಿದನು. ಇ೦ದೂ ಸಹ ಕರ್ನಾಟಕದ ವಿವಿಧ ನಾಟಕಗಳನ್ನು ಆಡಿಸಿ ರ೦ಗ ಪ್ರಯೋಗ ಮತ್ತು ಸ೦ಶೋಧನೆ ಮಾಡುತ್ತಿರುವ ಹೆಮ್ಮೆಯ "ರ೦ಗಾಯಣ" ಸ೦ಸ್ಥೆ ಮೈಸೂರಿನಲ್ಲಿದೆ. 

ಲೇಖನ ವರ್ಗ (Category): 

ಯಡೆಯೂರು ಸಿದ್ದಲಿಂಗೇಶ್ವರ

field_vote: 
No votes yet
To prevent automated spam submissions leave this field empty.

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನಲ್ಲಿರುವ, ಬೆಂಗಳೂರಿನಿಂದ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸುಮಾರು ೧೦೦ ಕಿ.ಮಿ. ದೂರದಲ್ಲಿರುವ ಯಡೆಯೂರು ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ, ಲಿಂಗಾಯತ ಸಮುದಾಯಕ್ಕೆ ಮುಖ್ಯವಾಗಿ, ಪ್ರಮುಖವಾದ ಯಾತ್ರಾಸ್ಥಳ.

ಲೇಖನ ವರ್ಗ (Category): 

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ

field_vote: 
Average: 5 (3 votes)
To prevent automated spam submissions leave this field empty.

ದೋರಸಮುದ್ರವೆಂದು ಒಂದಾನೊಂದು ಕಾಲದಲ್ಲಿ ಹೆಸರಾಗಿದ್ದ, ಇಂದಿನ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ೧೨ನೇ ಶತಮಾನದ್ದಾಗಿದ್ದು, ಎರಡನೇ ವೀರಬಲ್ಲಾಳ (ವಿಷ್ಣುವರ್ಧನ)ನಿಂದ ನಿರ್ಮಿತವಾದದ್ದೆಂದು ಚರಿತ್ರೆ ತಿಳಿಸುತ್ತದೆ.

ಲೇಖನ ವರ್ಗ (Category): 

ವೀರನಾರಾಯಣ ದೇವಸ್ಥಾನ, ಬೆಳವಾಡಿ

field_vote: 
Average: 4 (1 vote)
To prevent automated spam submissions leave this field empty.

ಚಿಕ್ಕಮಗಳೂರು ತಾಲ್ಲೂಕು, ಲೇಕ್ಯಾ ಹೋಬಳಿಯಲ್ಲಿರುವ ಬೆಳವಾಡಿ ಗ್ರಾಮವು ಒಂದಾನೊಂದು ಕಾಲದಲ್ಲಿ ಏಕಚಕ್ರನಗರವೆಂಚು ಖ್ಯಾತಿಯನ್ನು ಹೊಂದಿದ್ದು, ೨ನೇ ವೀರಬಲ್ಲಾಳರಾಯನ (ವಿಷ್ಣುವರ್ಧನ)ನ ಕಾಲದಲ್ಲಿ ನಿರ್ಮಿತವಾದ, ಎಂದರೆ ಸುಮಾರು ೧೨ನೇ ಶತಮಾನದ ಸುಂದರ ದೇವಾಲಯಗಳಿಗೆ ಪ್ರಸಿದ್ದವಾಗಿದೆ.

ಲೇಖನ ವರ್ಗ (Category): 

ಮಹಾಶಿವರಾತ್ರಿ.....

field_vote: 
Average: 5 (1 vote)
To prevent automated spam submissions leave this field empty.

ತ್ರಿಮೂರ್ತಿ, ತ್ರಿನೇತ್ರ, ತ್ರಿಕಾಲಮೂರ್ತಿ

ಮಹಾಶಿವರಾತ್ರಿ.....
ಶಿವರಾತ್ರಿಯ ಉತ್ಸಹವನ್ನು ಪ್ರತಿ ವರ್ಷ ದೇಶದಾದ್ಯಂತ ಆಚರಿಸಲಾಗುತ್ತದೆ. ಶಿವನ ದರ್ಶನವನ್ನು ಪಡೆದು ಬಿಲ್ವ ಪತ್ರವನ್ನು ಆರ್ಪಿಸಿ,ಉಪವಾಸವನ್ನು ಆಚರಿಸಿ ಇಡೀ ರಾತ್ರಿ ಜಾಗರಣೆಯನ್ನು ಮಾಡಿ ಶಿವರಾತ್ರಿಯನ್ನು ಆಚರಿಸಲಾಗುವುದು

ಲೇಖನ ವರ್ಗ (Category): 

ಶಿವರಾತ್ರಿ

field_vote: 
No votes yet
To prevent automated spam submissions leave this field empty.

ಇದೇ ತಿಂಗಳ ೫ - ೬ನೇ ದಿನಾಂಕಗಳಂದು ಬರುವ (ಪಾಲ್ಗುಣ ಚತುರ್ದಶಿ) ಶಿವರಾತ್ರಿ ನಮಗೆಲ್ಲಾ ಒಂದು ಪ್ರಮುಖ ಹಬ್ಬ. ಅಂದು ಶಿವನನ್ನು ಆರಾಧಿಸಿ ಪುಣ್ಯ ಸಂಪಾದನೆಯಲ್ಲಿ ಅತಿ ಹೆಚ್ಚಿನ ಗಳಿಕೆ ದೊರಕಿಸಿಕೊಳ್ಳುವ ಕಾತುರ, ಆತುರ ಭಕ್ತರೆಲ್ಲರಿಗೆ. ಶಿವದೇವಾಲಯಗಳಿಗೆ ಭಕ್ತರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಹೊತ್ತು ಶಿವನ ಆರಾಧನೆಯನ್ನು ಮಾಡುವ ತವಕ.

ಲೇಖನ ವರ್ಗ (Category): 

ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮೀ ದೇವಾಲಯದಲ್ಲಿರುವ ಬೇತಾಳಗಳ ಮೂರ್ತಿಗಳು

field_vote: 
No votes yet
To prevent automated spam submissions leave this field empty.

ಹಾಸನ ಜಿಲ್ಲೆಯು ದೇವಾಲಯಗಳ ಆಗರ. ಹಾಸನದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿರುವ ದೊಡ್ಡಗದ್ದವಳ್ಳಿಯ ೧೨೦೦ ವರ್ಷಗಳಷ್ಟು ಪುರಾತನ ಲಕ್ಷ್ಮೀದೇವಿ ದೇವಾಲಯವು ತನ್ನ ಸೌಂದರ್ಯದಿಂದ ಹಾಗು ಸ್ಥಳ ಮಹಿಮೆಯಿಂದ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಲೇ ಇದೆ.

ಲೇಖನ ವರ್ಗ (Category): 

ನೋಡಿ ಬನ್ನಿರಿ ಕುಂತಿ ಗುಡ್ಡವ, ಅಲ್ಲಿಯ ಬೆಡಗಿನ ಚಿತ್ತಾರವ

field_vote: 
No votes yet
To prevent automated spam submissions leave this field empty.

ಕುಂತಿ ಗುಡ್ಡ ಎಂಬುದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದ್ದು, ಹಾಸನದಿಂದ ಕೇವಲ ೧೦ ಕಿ.ಮಿ. ದೂರದಲ್ಲಿ ಅರಕಲಗೂಡು ರಸ್ತೆಯಲ್ಲಿದೆ. ಇಲ್ಲಿ ಅತಿ ಸುಂದರವಾದ ಪ್ರಕೃತಿ ಸೌಂದರ್ಯ ಹಾಗು ಇತಿಹಾಸ/ಪೌರಾಣಿಕ ಹಿನ್ನೆಲೆಯನ್ನು ಹೊಂದಿದ ದೇವಾಲಯವೂ ಇದೆ.

ಲೇಖನ ವರ್ಗ (Category): 

ಲಕ್ಷ್ಮೀ ಸೆರಗು

field_vote: 
No votes yet
To prevent automated spam submissions leave this field empty.

ಪಕ್ಕದಲ್ಲಿ ಕಾಣುವ ಚಿತ್ರವು ಕರ್ನಾಟಕ ರಾಜ್ಯ ಚಿಕ್ಕಮಗಳೂರು ಜಿಲ್ಲೆಯ/ತಾಲ್ಲೂಕಿನ ಕಳಸಾಪುರ ಗ್ರಾಮದ ಭಕ್ತರ ಮನೆಯಲ್ಲಿ ತೆಗೆದದ್ದು.

ಲೇಖನ ವರ್ಗ (Category): 

ಶೃಂಗೇರಿಯ ಇತಿಹಾಸ.

field_vote: 
Average: 1 (1 vote)
To prevent automated spam submissions leave this field empty.

ಶೃಂಗೇರಿಯ ಇತಿಹಾಸ : ಆದಿಶಂಕರರು, ತಮ್ಮ ಪ್ರಥಮ, ಹಾಗೂ ಪ್ರಶಷ್ತ್ಯ ವಾದ ಮಠವನ್ನು ಸ್ಥಾಪಿಸುವ ಉದ್ದೇಶ್ಯದಿಂದ ಪವಿತ್ರಸ್ಥಾನದ ಅನ್ವೇಷಣೆಯಲ್ಲಿದ್ದಾಗ, ಶೃಂಗೇರಿಗೂ ಭೇಟಿಯಿತ್ತರು. ಅಲ್ಲಿನ ತುಂಗಾನದಿಯ ದಂಡೆಯ ಬಳಿ ಕಂಡ ದೃಶ್ಯದಿಂದ ಅವರು ಬಹಳ ಪ್ರಭಾವಿತರಾದರು. ಬಿಸಿಲಿನ ತಾಪದಿಂದ ಬಸವಳಿದ ಒಂದು ಗರ್ಭಿಣಿ ಕಪ್ಪೆಯೊಂದಕ್ಕೆ, ಕಾಳಿಂಗಸರ್ಪವೊಂದು, ತನ್ನ ಹೆಡೆಯೆತ್ತಿ ನೆರಳು ನೀಡುತ್ತಿತ್ತು ! ಹೀಗೆ, ಸಹಜ ಶತೃಗಳಾದಾಗ್ಯೂ, ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳ್ವೆಮಾಡುತ್ತಿದ್ದ, ಪಶು, ಪಕ್ಷಿ, ಪ್ರಾಣಿಗಳ ನಡುವಳಿಕೆಯ ಸ್ಥಾನದ ಪವಿತ್ರತೆ, ಅವರನ್ನು ಮೂಕರನ್ನಾಗಿಸಿತು.

ಲೇಖನ ವರ್ಗ (Category): 

ಶಿಲ್ವೆಪುರ

field_vote: 
No votes yet
To prevent automated spam submissions leave this field empty.

ಬೆಂಗಳೂರಿನಿಂದ ಹೆಸರಘಟ್ಟಕ್ಕೆ ಹೋಗುವ ದಾರಿಯಲ್ಲಿ ಬಾಣಾವರ ದಾಟಿ ತರಬನಹಳ್ಳಿಯ ಬಳಿ ಬಲಕ್ಕೆ ತಿರುಗಿ ಮೂರು ಕಿಲೋಮೀಟರು ಕ್ರಮಿಸಿದರೆ ಸಿಗುವ ಊರು ಶಿಲ್ವೆಪುರ. ಚಿಕ್ಕಬೆಟ್ಟಳ್ಳಿ ಮಾರ್ಗವಾಗಿ ಶಿವಕೋಟೆಗೆ ಸಾಗುವ ರಸ್ತೆಯಲ್ಲಿ ಬ್ಯಾಲದಕೆರೆ ಬಳಿ ಎಡಕ್ಕೆ ಮೂರು ಕಿಲೋಮೀಟರು ನಡೆದರೂ ಈ ಊರು ಸಿಗುತ್ತದೆ. ಈ ಊರಿನ ಇತಿಹಾಸ ಕೇವಲ ೧೨೦ವರ್ಷಗಳ ಈಚಿನದು.

ಲೇಖನ ವರ್ಗ (Category): 

ದೊರೆಸಾನಿಪಾಳ್ಯ (ಅಮಲೋದ್ಭವಿ ನಗರ)

field_vote: 
Average: 4 (1 vote)
To prevent automated spam submissions leave this field empty.

೧೮೭೬ ರಿಂದ ೧೮೭೮ರವರೆಗೆ ತಲೆದೋರಿದ ಭೀಕರ ಕ್ಷಾಮಕ್ಕೆ ಸಾವಿರಾರು ಜನರು ಮರಣವನ್ನಪ್ಪಿ, ಅನೇಕ ಸಾವಿರ ಜನರು ತಮ್ಮ ಹಳ್ಳಿಗಳನ್ನು ತೊರೆದು ಉದರ ಪೋಷಣೆಗಾಗಿ ಪಟ್ಟಣಗಳನ್ನು ಆಶ್ರಯಿಸಬೇಕಾಯಿತು.

ಲೇಖನ ವರ್ಗ (Category): 

ಅನ್ನಮ್ಮ ಬೆಟ್ಟದ ಶಿಲುಬೆಯಾತ್ರೆ

field_vote: 
No votes yet
To prevent automated spam submissions leave this field empty.

ಯೇಸುಕ್ರಿಸ್ತ ಶಿಲುಬೆಗೇರುವ ಮುನ್ನ ಆತನ ವಿರೋಧಿಗಳು ಅವನನ್ನು ಬಂಧಿಸುವ ಪರಿ, ಆತನ ನ್ಯಾಯವಿಚಾರಣೆ, ಅವನಿಗೆ ನೀಡಿದ ಹಿಂಸೆ, ನಂತರ ಶಿಲುಬೆ ಹೊರಿಸಿ ಮೆರವಣಿಗೆ ಮಾಡಿದ್ದು ಇವೆಲ್ಲವನ್ನೂ ಶುಭಶುಕ್ರವಾರಕ್ಕೆ ಮುಂಚಿನ ೪೦ ದಿನಗಳಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಕ್ರೈಸ್ತರಲ್ಲಿ ವಾಡಿಕೆ.

ಲೇಖನ ವರ್ಗ (Category): 

ಭಾರತದಲ್ಲಿ ಯೆಹೂದ್ಯರು

field_vote: 
Average: 5 (1 vote)
To prevent automated spam submissions leave this field empty.

ನಮ್ಮ ಸಿಂಧೂ ಬಯಲಿನ ನಾಗರೀಕತೆ ಪ್ರಚ್ಛನ್ನವಾಗಿದ್ದ ಕಾಲದಲ್ಲಿ ಏಷ್ಯಾ ಖಂಡದ ಮತ್ತೊಂದು ಬದಿಯಲ್ಲಿ ಅಂದರೆ ಯೂಫ್ರ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ಇನ್ನೊಂದು ನಾಗರೀಕತೆ ರೂಪುಗೊಂಡಿತ್ತು. ಅದೇ ಪುರಾತನ ಯೆಹೂದೀ ನಾಗರೀಕತೆ. ಯೆಹೂದಿಗಳು ಸಹಸ್ರಾರು ವರ್ಷಗಳ ಹಿಂದೆಯೇ ಲಿಪಿಯನ್ನು ಅಳವಡಿಸಿಕೊಂಡು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಬರೆದಿಡುತ್ತಾ ಬಂದರು. ಈ ಕಾರಣದಿಂದ ಯೆಹೂದ್ಯ ಸಂಸ್ಕೃತಿಯ ಇತಿಹಾಸ ಸ್ಪಟಿಕಸ್ಪಷ್ಟವಾಗಿದೆಯಲ್ಲದೆ ಅದು ಆಯಾ ಕಾಲಘಟ್ಟಗಳ ಜನಾಂಗೀಯ ಸಂಘರ್ಷ, ರಾಜವಂಶಗಳು, ದಿರಿಸುಗಳು, ಆಚಾರ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತದೆ.
ಸಕಲಕ್ಕೂ ಸೃಷ್ಟಿಕರ್ತನಾದ ಸರ್ವಶಕ್ತ ದೇವರೆಂಬುವನು ಒಬ್ಬನೇ. ಆತ ಸಕಲ ಜನ ಪ್ರಾಣಿಪಕ್ಷಿ ಆಕಾಶ ಭೂಮಿಗಳೆಲ್ಲದಕ್ಕೂ ಒಡೆಯನಾಗಿದ್ದಾನೆ ಹಾಗೂ ಆತ ಆರಿಸಲ್ಪಟ್ಟ ಪ್ರವಾದಿಗಳ ಮೂಲಕ ಮಾತನಾಡುತ್ತಾನೆ. ಅವನನ್ನು ಓಲೈಸುವವರಿಗೆ ರಕ್ಷಣೆಯಿದೆ, ವಿರೋಧಿಸುವವರಿಗೆ ಆ ಕ್ಷಣವೇ ಶಿಕ್ಷೆ ಇದೆ ಎಂದು ನಂಬುವ ಯೆಹೂದ್ಯರು ಆಧುನಿಕ ವಿಚಾರವಾದದಿಂದ ಎಂದೂ ವಿಚಲಿತರಾದವರಲ್ಲ. ತೋರಾ ಎಂಬ ಧರ್ಮಸಂಹಿತೆಯಿಂದ ಬಂಧಿತರಾದ ಅವರು ಮೂರ್ತಿ ಪೂಜೆಯಿಂದ ದೂರ ಉಳಿದವರು. ಪ್ರವಾದಿ ಮೋಸೆಸನ ಮೂಲಕ ದೇವರು ದಶ ಕಟ್ಟಳೆಗಳನ್ನು ಕೊಡಮಾಡಿದರೆಂದೂ ಆ ಕಟ್ಟಳೆಗಳ ಪ್ರಕಾರ ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮುಂತಾದವುಗಳು ವರ್ಜ್ಯವೆಂದೂ ಹೇಳಲಾಗಿದೆಯಲ್ಲದೆ ದೇವರನ್ನು ಮಾತ್ರ ಆರಾಧಿಸು, ದೇವರ ಹೆಸರನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಳಸಬೇಡ, ತಂದೆ ತಾಯಿಯರನ್ನು ಗೌರವಿಸು, ಪರಸ್ತ್ರೀಯನ್ನೂ ಪರರ ವಸ್ತುಗಳನ್ನೂ ಬಯಸಬೇಡ ಎಂದೂ ತಾಕೀತು ಮಾಡಲಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡವನನ್ನು ಬಯಲಲ್ಲಿ ನಿಲ್ಲಿಸಿ ಸಮಾಜದ ಇತರೆಲ್ಲರೂ ಕಲ್ಲಿನಿಂದ ಹೊಡೆದು ಸಾಯಿಸಬಹುದೆಂಬ ಕಠೋರ ನೀತಿಗಳೂ ಇವರಲ್ಲಿವೆ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ಹಮ್ಮರಾಬಿಯ ನೀತಿಯೂ ಯೆಹೂದ್ಯ ನೀತಿಯಿಂದಲೇ ಪ್ರೇರಿತವಾಗಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಲೇಖನ ವರ್ಗ (Category): 

ಬೆರಗಿನ ಬೆಲಂ ಗುಹೆಗಳು

field_vote: 
No votes yet
To prevent automated spam submissions leave this field empty.

ನಾನು ರಾಮಸುಬ್ಬ(An imaginary character). ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ ಅದು ನನ್ನ ಜೀವನದ ಧರ್ಮ. ಜೀವನದಲ್ಲಿ ಓದು ತುಂಬಾ ಮುಖ್ಯ.

ಓದದ ಬಾಯದು ತಾನ್
ಮೇದಿನಿಯೊಳ್ ಬಿಲದ ಬಾಯ್

ಲೇಖನ ವರ್ಗ (Category): 

ತ ರಾ ಸು ಮತ್ತು ಮಾಸ್ತಿ ಒಂದೇ ಸ್ಥಳಮಹಿಮೆ ಬಗ್ಗೆ ಬರೆದಿದ್ದರೇ?

field_vote: 
Average: 4 (1 vote)
To prevent automated spam submissions leave this field empty.

ತರಾಸು ಅವರ "ಹಂಸಗೀತೆ" ಕಾದಂಬರಿಯನ್ನು ಓದುತ್ತಿದ್ದೇನೆ. ಅದರಲ್ಲಿ ವೀರಣ್ಣಜ್ಜ ಎಂಬ ಅರ್ಚಕರ ಕತೆ ಬರುತ್ತದೆ. ಅರ್ಚಕರು ಓರ್ವ ಮಹಿಳೆಯನ್ನು ಇಟ್ಟುಕೊಂಡಿದ್ದು, ಪೂಜೆ ಮುಗಿಸಿ ಅವಳನ್ನು ಭೇಟಿಯಾಗುವ ಕ್ರಮ ಇಟ್ಟುಕೊಂಡಿದ್ದರಂತೆ.ಪಾಳೆಯಗಾರರು ಆಗಮಿಸಿದ ಬಳಿಕವಷ್ಟೆ ಮಹಾಪೂಜೆ ಮಾಡುವ ಅವರು ಒಂದು ದಿನ ಎಷ್ಟು ಕಾದರೂ ಅವರು ಬರದಿದ್ದಾಗ, ಪೂಜೆ ಮುಗಿಸಿ ಮನೆಗೆ ತೆರಳುತ್ತಾರೆ. ಅಲ್ಲಿ ಅವರ ಹೆಂಗಸು ಹೂ ಮುಡಿದುಕೊಂಡು,ಊಟ ಮುಗಿಸಿ,ಮಲಗಬೇಕೆನ್ನುವಷ್ಟರಲ್ಲಿ ಪಾಳೆಯಗಾರರ ಆಗಮನದ ಸೂಚನೆ ಸಿಗುತ್ತದೆ. ಪಾಳೆಯಗಾರರಿಗೆ ಅಸಮಾಧಾನವಾದೀತೆಂಬ ಹೆದರಿಕೆಯಿಂದ, ಸ್ತ್ರೀಗೆ ಮುಡಿಸಿದ ಹೂವನ್ನು ಮತ್ತೆ ತೆಗೆದುಕೊಂಡು,ದೇವಾಲಯಕ್ಕೆ ಬಂದು,ಪೂಜೆ ಮತ್ತೆ ಮಾಡಿ,ಪಾಳೆಯಗಾರರಿಗೆ ಪ್ರಸಾದರೂಪವಾಗಿ,ಹೂವನ್ನಿತ್ತಾಗ,ಅದರಲ್ಲಿ ಕೂದಲನ್ನು ನೋಡಿ ಪಾಳೆಯಗಾರರು ಕಿಡಿಕಿಡಿಯಾದರೆ, ಅರ್ಚಕರು ಅದು ದೇವರ ಮುಡಿಯ ಕೂದಲು ಎಂದು ಸಾಧಿಸುತ್ತಾರೆ.ಮಾತಿಗೆ ಮಾತು ಬೆಳೆದು,ಮರುದಿನ ಹಗಲು ಪಾಳೆಯಗಾರರು ದೇವಸ್ಥಾನಕ್ಕೆ ಆಗಮಿಸಿ,ದೇವರ ಮುಡಿಯನ್ನು ಪರೀಕ್ಷಿಸುವುದು ಎಂದಾಗುತ್ತದೆ.

ಆಶ್ಚರ್ಯವೆಂದರೆ,ಮಾಸ್ತಿಯವರ ಸಣ್ಣಕತೆಯೊಂದರಲ್ಲಿ,ಇಂತಹದ್ದೇ ಐತಿಹ್ಯದ ಬಗ್ಗೆ ಕತೆಯಿದೆ. ಆದರೆ ಅಂತ್ಯವನ್ನು ತರಾಸು ಅವರಿಗಿಂತ ಭಿನ್ನವಾಗಿ ಮಾಸ್ತಿಯವರು ನಿರೂಪಿಸಿದ್ದಾರೆ.ಮಾಸ್ತಿಯವರು ತಮ್ಮ ಕತೆಯಲ್ಲಿ ಅರ್ಚಕ ದಿಕ್ಕು ಕಾಣದೆ, ದೇವರ ಮುಂದೆ ಪ್ರಾರ್ಥಿಸುತ್ತಾ,ಅಲ್ಲೇ ನಿದ್ದೆ ಹೋದ ಸಂದರ್ಭದಲ್ಲಿ (ಬಹುಶ:) ಅರ್ಚಕರ ಮಗಳು ತನ್ನ ಮುಡಿಯನ್ನು ಕತ್ತರಿಸಿ,ಶಿವಲಿಂಗದ ಮೇಲಿಟ್ಟು,ಅವರನ್ನು ಸಂಕಟದಿಂದ ಪಾರು ಮಾಡಿದಂತೆ ನೈಜವಾಗಿ ಚಿತ್ರಿಸಿದ್ದಾರೆ. ತರಾಸು ಕಾದಂಬರಿಯಲ್ಲಿ ಅರ್ಚಕರು ಮತ್ತು ವೆಂಕಟಸುಬ್ಬಯ್ಯ ಎಂಬ ಸಂಗೀತ ಕಲಾವಿದರು ತನ್ಮಯದಿಂದ ಧ್ಯಾನಿಸಿ, ಪಾಳೆಯಗಾರರು ಬರುವಾಗ,ಶಿವಲಿಂಗದ ಮೇಲೆ ಮುಡಿ ಬಂದಿರುತ್ತದೆ.ಅದು ನೈಜವೇ ಎಂದು ನೋಡಲು ಪಾಳೆಯಗಾರರು ಅದನ್ನು ಕಿತ್ತಾಗ, ಅದರಿಂದ ರಕ್ತ ಬರುತ್ತದೆ ಎಂಬ ಐತಿಹ್ಯದ ಬಗ್ಗೆ ಬರೆದಿದ್ದಾರೆ.

ಲೇಖನ ವರ್ಗ (Category): 
Subscribe to ಸ್ಥಳ ಮಹಿಮೆ, ಪುರಾಣ