ಸಣ್ಣ ಕಥೆ

ಅಕ್ವಿಶಿಸನ್- ಭಾವನೆಗಳ ಒತ್ತುವರಿ

field_vote: 
Average: 3.7 (3 votes)
To prevent automated spam submissions leave this field empty.

"ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ. ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ .

ಅವನಿಗೆ ಅದು ಬೇಕೂ ಇರಲಿಲ್ಲ ಮತ್ತೆ ಮಾತಾಡಿದ

"ಇಂತಹ ಒಂದುಪ್ರಾಜೆಕ್ಟ್‌ಗೆ ಅಡ್ಡವಾಗಿ ನಿಂತ್ರಿದಲ್ಲ ಇವರೆಲ್ಲಾ . ಈಗ ನೋಡು ಮೈಸೂರು ಒಂದು ದೂರದ ಊರೇ ಅಲ್ಲ ಅನ್ನೋ ಹಾಗಿದೆ. ಸುಮ್ಮನೆ ಪ್ರಚಾರಕ್ಕೆ , ಎಲೆಕ್ಷನ್‌ಗೆ , ದುಡ್ಡಿಗೆ ನೂರಾರು ವೇಷಗಳು....." ಇನ್ನೂ ಮಾತಾಡುತ್ತಾನೆ ಇದ್ದ

ಹೌದಾ ಅಷ್ಟೇನಾ ಕಾರಣಗಳು. ಕಣ್ಣ ಮುಂದಿನ ದೃಶ್ಯಗಳು ಎಲ್ಲೋ ಹಾರಿತು ನೂರಾರು ಅರೆ ಬರೆ ಚಿತ್ರಗಳು ಮನದೊಳಗಿಂದ. ಅವುಗಳಿಂದ ಬೋಳು ಹಣೆಯ ಅಮ್ಮನ ಮೋರೆ. ಕಣ್ಣಿಂದ ನೀರು ಜಿನುಗಿತು. ಸುಮ್ಮನಾದೆ .

ಲೇಖನ ವರ್ಗ (Category): 

ಬೆಳಗಲಿಲ್ಲ ದೀಪ

field_vote: 
No votes yet
To prevent automated spam submissions leave this field empty.

        ಬೆಳಗಲಿಲ್ಲ ದೀಪ


ಬೆಳಿಗ್ಗೆ ಎದ್ದು ನನ್ ಅರ್ಧಾ೦ಗಿ ಕೊಟ್ಟ ಕೋತಾ ಕಾಪಿ (ಪುಡಿ ಸ್ವಲ್ಫ ಕೋತ ಆಗಿದ್ದರಿಂದ) ಕುಡಿಯುತ್ತಾ
FM RAINBOW ನಲ್ಲಿ "ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ"  ನಮ್ಮ ರಾಜಣ್ಣನ ಹಾಡು ಜೋರಾಗಿ ಹಾಕಿ ಕೇಳುತ್ತಿದ್ದೆ,


ಅಡುಗೆ ಮನೆಯಲ್ಲಿ ಏನೋ ಶಬ್ಡವೂ ಜೋರಾಯಿತು.  ನಾನು ಒಳಗೆ ಇಣುಕಿದೆ. ಬಿದದ್ಡು ನನ್ನ ನೆಚ್ಚಿನ ಮಡದಿಯೋ ಎ೦ದು!?


"ಈ ಗಂಡಸರಿಗೆ ಹಾಡು ಮಾತ್ರ ಹಾಡೋದು ಗೊತ್ತು"


ಎಂದು ಗೊಣಗುತ್ತಾ ತರಕಾರಿ ಇಲ್ಲದ ಉಪ್ಪಿಟ್ಟಿಗೆ ಒಗ್ಗರಣೆ ಹಾಕುತ್ತಿದ್ದಳು. ಓಡಿ ಬಂದು ರೇಡಿಯೋ  ಶಬ್ದ ಕಡಿಮೆ ಮಾಡಿ, ಕಾಫಿ ಜೋರಾಗಿ ಹೀರಲು ಶುರುಮಾಡಿದೆ.


ಇನ್ನೇನು ದೀಪಾವಳಿ ಹತ್ತಿರದಲ್ಲೇ ಇದೆ,  ನನ್ನ ಹೆಂಡತಿಯದು ಏನಾದರೂ DEMAND ಇರಬಹುದೇನೋ! ಎಂದು. ಯೋಚಿಸುತ್ತಿದ್ದೆ..


ಈ ದೀಪಾಳಿಯೇ ಹಾಗೆ.  ಎಲ್ಲರಲ್ಲೂ ಸಂತಸ, ಸಂಭ್ರಮ, ಏನೋ ಸಡಗರ,  ಹೆಚ್ಚಾಗಿ ಹೆಣ್ಣು ಮಕ್ಕಳಿಗೇ! 

ಲೇಖನ ವರ್ಗ (Category): 

ಜಗತ್ತಿನ ಅತಿ ಸಣ್ಣ ಭಯಾನಕ ಕಥೆ

ಭೂಮಿಯ ಮೇಲಿನ ಕೊನೆಯ ಮಾನವ ಬೇಸರದಿ೦ದ ತನ್ನ ರೂಮಿನಲ್ಲಿ ಕುಳಿತಿದ್ದ. ಆಗ ಆತನ ಬಾಗಿಲನ್ನು ಯಾರೋ ಬಡಿದರು.

 

ಮೂಲ ಕಥೆ: ಫ್ರೆಡೆರಿಕ್ ಬ್ರೌನ್. ಈ ಕಥೆಯನ್ನು ಮೂರು ಭಾಷೆಗಳಿಗೆ ಅನುವಾದಿಸಲಾಗಿದೆ. ನನ್ನದು ನಾಲ್ಕನೆಯದು. ಈ ಕಥೆಯನ್ನು ಫೆಡೆರಿಕ್ ೪ ಬಾರಿ ೧೦೦ ಡಾಲರ್ ಬೆಲೆಗೆ ಮಾರಿದ.

 

ಅನುವಾದ: ಪ್ರವೀಣ್ ಮಾಯಾಕರ್

 

ಯಾರು ಎಷ್ಟು ಭಯ ಪಟ್ಟಿರಿ ತಿಳಿಸಿ. :)

field_vote: 
Average: 3.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಖಲೀಲ್ ಗಿಬ್ರಾನ್ ಕಥೆಗಳು: ಬುದ್ಧಿವಂತ ರಾಜ

ಪ್ರಖ್ಯಾತ ಲೇಖಕ, ಕವಿ, ಕಲಾವಿದ ಖಲೀಲ್ ಗಿಬ್ರಾನ್-ನ ದಿ ವೈಸ್ ಕಿಂಗ್ ಕಥೆಯನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ.

 

ಬುದ್ಧಿವಂತ ರಾಜ

 

 

ಒಂದು ಸಣ್ಣ ರಾಜ್ಯ. ಆ ರಾಜ್ಯಕ್ಕೆ ಒಬ್ಬ ರಾಜ, ರಾಜನಿಗೆ ನೂರಾರು ಪ್ರಜೆಗಳು.

 

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ದಸರಾದಲ್ಲಿ ಗೌಡಪ್ಪನ ಟ್ಯಾಬಲೋ

field_vote: 
Average: 4 (6 votes)
To prevent automated spam submissions leave this field empty.

ಲೇ ಸುಬ್ಬ, ಈ ಬಾರಿ ದಸರಾಗೆ  ಏನ್ ಟ್ಯಾಬಲೋ ಮಾಡುವಾ ಹೇಳಲಾ ಅಂದ ಗೌಡಪ್ಪ. ಗೋಮಟೇಶ್ವರ ಮಾಡುವಾ  ಅಂದ ಸುಬ್ಬ. ಏ ಥೂ ಹೆಣ್ಣು ಐಕ್ಳು ಅಂಗೇ ಹೊಂಟೈತ್ತಾವೆ. ಆಮ್ಯಾಕೆ ಯಾರು ನೋಡಕ್ಕಿಲ್ಲ ಕಲಾ. ಲೇ ನೀನು ಜ್ನಾಪನ ಮಾಡಿದ್ದು ಒಳ್ಳೇದು ಆಯ್ತು ಕಲಾ. ನನ್ನ ಹೆಂಡರು ತಂಗೀಗೆ ಗಂಡು ಮಗ ಆದ್ರೆ ಗೋಮಟೇಸ್ವರನಿಗೆ ಚೆಡ್ಡಿ ಹೊಲಿಸ್ತೀನಿ ಅಂತಾ ಹೇಳಕ್ಕಂಡಿದ್ದೆ. ಎಷ್ಟು ಮೀಟರ್ ಬಟ್ಟೆ ಬೇಕಾಗ್ಬೋದು ಹೇಳಲಾ ಅಂದ ಗೌಡಪ್ಪ. ನೋಡ್ರೀ ಸಿದ್ದೇಸನ ಗುಡ್ಯಾಗೆ ಷಾಮಿಯಾನ ಐತಲ್ಲಾ ಆ ಸೈಜಿಗೆ ಹೊಲಿಸಿದರೆ 1/4 ಆಗ್ಬೋದು ಅಂದ ಕಿಸ್ನ. ಆಟೊಂದು ದೊಡ್ಡ ಚೆಡ್ಡಿ ಹೊಲಿದ್ರೆ ಅದಕ್ಕೆ ಲಾಡಿನೇ ಒಂದು 200ಮೀ ಬೇಕಾಯ್ತದೆ ಅಂದ ಗೌಡಪ್ಪ.

ಲೇಖನ ವರ್ಗ (Category): 

ಗೌಡಪ್ಪ ಆಸ್ ರಾಜ್

field_vote: 
Average: 4.5 (4 votes)
To prevent automated spam submissions leave this field empty.

ಬೆಳಗ್ಗೆನೇ ಚಾ ಕುಡೀಯಕ್ಕೆ ಅಂತಾ ಗೌಡಪ್ಪನ ಮನೆತಾವ ಹೋದೆ. ಅಲ್ಲಿ ಗೌಡಪ್ಪ ಚೆಡ್ಡಿ ಹಾಕ್ಕೊಂಡು ಐಕ್ಳು ಜೊತೆ ಬಾಲ್ ಟಪ್ ಗೋಲಿ ಆಟ ಆಡ್ತಾ ಇದ್ದ. ಸುಬ್ಬ ನೋಡ್ದೋನು ಏ ಥೂ. ನಿಮ್ಮ ವಯಸ್ಸಿಗೆ ಆಡೋ ಆಟನೇ ಬೇರೆ ಅಂದ. ಸರಿ ಏನ್ರಲಾ ಬಂದಿದ್ದು, ಚಾ ಕುಡಿಯುವಾ ಅಂತ. ಸುಬ್ಬನ ಕೈ ಗೆ ಚೊಂಬು ಕೊಟ್ಟು ಹಾಲು ಕರೆದುಕೊಂಡು ಬಾರಲಾ ಅಂದ ಗೌಡಪ್ಪ. ಸುಬ್ಬ ಕೊಟ್ಟಿಗೆ ಹೋಗಿ ಎರಡೇ ನಿಮಸಕ್ಕೆ ಹೊರಕ್ಕೆ ಬಂದು ಬಿದ್ದಿದ್ದ. ಯಾಕಲಾ. ಹಸಾ ಒದೀತು ಕಲಾ ಅಂದ. ಕಡೆಗೆ ಬಸಮ್ಮನ ಸೀರೆ ತಲೆ ಮೇಲೆ ಹಾಕ್ಕೊಂಡು ಹೋದ್ ಮ್ಯಾಕೆ ಹಾಲು ಕೊಡ್ತು. ಸ್ವಲ್ಪ ಟೀ ಪುಡಿ ಹಾಕಿ ಗೌಡನ ಹೆಂಡರು ಚಾ ಮಾಡಿ ಕೊಟ್ಲು. ಇದಕ್ಕಿಂತ ನಿಂಗನ ಅಂಗಡಿ ಚಾನೇ ಸಂದಾಕಿರುತ್ತೆ ಅಂದ ಸುಬ್ಬ. ಸರಿ ಗೌಡರೆ ನೀವು ಯಾರತರಾ ಆಗಬೇಕು ಅಂತಾ ಇದೀರಾ. 

ಲೇಖನ ವರ್ಗ (Category): 

ಪ್ರೀತಿಯಿಂದ - ಪ್ರೀತಿಗಾಗಿ - ಪಮ್ಮಿ ಕಾ ಪ್ರೇಮ್ ಕಹಾನಿ

field_vote: 
No votes yet
To prevent automated spam submissions leave this field empty.

ಪ್ರೀತಿಯಿಂದ - ಪ್ರೀತಿಗಾಗಿ
                         - ಪಮ್ಮಿ ಕಾ ಪ್ರೇಮ್ ಕಹಾನಿ

ಲೇಖನ ವರ್ಗ (Category): 

ಇಬ್ಬಗೆ

field_vote: 
No votes yet
To prevent automated spam submissions leave this field empty.

ಇಬ್ಬಗೆ


------


 


ನನ್ನ ಪಕ್ಕ ಕೂತಿದ್ದವನ ಮುಖದಲ್ಲಿ ಬೆವರಿನ ಸೆಲೆಗಳೊಡೆಯುತ್ತಿದ್ದವು. ನಾನು "ಮಾದೇಶ್, ಎ.ಸಿ ಆನ್ ಮಾಡು" ಎಂದಾಗ ಆತ ನನ್ನನ್ನು ನೋಡಿ ಕಿಟಕಿಯ ಕಡೆ ಮುಖ ಮಾಡಿ ಮೌನಿಯಾದ. ಮಾದೇಶ ಎ.ಸಿ ಆನ್ ಮಾಡಿದ. ಬೆವರಿಂಗಲು ಹತ್ತು ನಿಮಿಷ ಹಿಡಿಯಿತು.


 


ಕಾರು ಸಾಗುತ್ತಿತ್ತು. ಮಾದೇಶ ಏ.ಸಿ ಆಫ಼್ ಮಾಡಿ ಅರ್ಧ ಗಂಟೆ ಆಗಿತ್ತು. ಬೆವರಿನ ಸೆಲೆಗಾಗಿ ನಾನು ಪಕ್ಕದವನ ಮುಖ ಹುಡುಕಿದೆ. ಸಿಗಲಿಲ್ಲ. ಇದ್ದಕ್ಕಿದ್ದಂತೆ ಆತ ಕಾರ್ ನಿಲ್ಲಿಸುವಂತೆ ಕೈಸನ್ನೆ ಮಾಡಿದ. ನಾನು ಹೊರಗೆ ನೋಡಿದೆ. ಶಿರಾಡಿ ಘಾಟಿಯ ನಡುವೆ ಎಲ್ಲೋ. ಕಾರಿನಿಂದ ಇಳಿದವನೇ, ಹಿಂದಿನ ದಿಕ್ಕಿನಲ್ಲಿ ಓಡಲು ಶುರು ಮಾಡಿದ. ನಾನು ಓಡಿದೆ. ಎರಡು ನಿಮಿಷ ಓಡಿ, ಪಕ್ಕೆ ಹಿಡಿದುಕೊಂಡು ನಿಂತು ಏದುತ್ತಿದ್ದ. ನಾನೂ ನನ್ನ ಹೊಟ್ಟೆ ಹಿಡಿದುಕೊಂಡು ಅವನ ಮುಂದೆ ನಿಂತೆ. ಆಕಾಶ ನೋಡುತ್ತ ಕಣ್ಣು ಮುಚ್ಚಿಕೊಂಡು ಕಾರ್ ಕಡೆಗೆ ಬಿಸಿಲಿನಲ್ಲಿ ಹೊಳೆಯುತ್ತಿದ್ದ ಹೊಸ ಡಾಂಬರಿನ ವಾಸನೆ ಮೂಸುತ್ತ ನಡೆದ.


 

ಲೇಖನ ವರ್ಗ (Category): 

ವಿಶೇಷ ಸಂಪದ ಸಮ್ಮಿಲನ

field_vote: 
Average: 4.2 (9 votes)
To prevent automated spam submissions leave this field empty.

ನಿಂಗನ ಚಾ ಅಂಗಡೀಲಿ ಎಲ್ಲಾ ಕುಂತಿದ್ವಿ, ಗೌಡಪ್ಪ ಬಂದೋನೆ, ಲೇ ಸುಬ್ಬ ಬಹಳ ಬೇಜಾರಾಗೈತೆ, ಏನ್ ಮಾಡ್ ಬೇಕಲಾ ಅಂದ. ಒಂದು ಹತ್ತು ಕಿತಾ ಅಲ್ಲಿಂದ ಇಲ್ಲಿಗೆ ಓಡಾಡಿ ಅಂದ ಸುಬ್ಬ. ಎರಡು ರವಂಡ್ ಹೊಡೆದು ಮೂರನೆ ರವಂಡ್ ಹೊಡೆಯೋ ಅಟೊತ್ತಿಗೆ ಗೌಡಪ್ಪ ದಪ್ ಅಂತಾ ಬಿದ್ದ. ಮಗಾ ನಿಂಗ ಪಾತ್ರೆ ಉಜ್ಜಿದ್ದ ಹುಣಸೆಹಣ್ಣು ಅಲ್ಲಿ ಒಗೆದಿದ್ದ. ಸರಿ ಬಂದು ಪಕ್ಕದಾಗೆ ಕುಂತ. ನೋಡಲಾ ಹಳ್ಯಾಗೆ ಕಾರ್ಯಕ್ರಮ ಮಾಡದೇ ಸಾನೇ ದಿನಾ ಆಯ್ತು. ಒಂದು ಕೆಲಸ ಮಾಡುವ "ಸಂಪದ ಸಮ್ಮಿಲನ" ಮಾಡಿದ್ರೆ ಹೆಂಗಲಾ ಅಂದ. ಅದಕ್ಕೇನಂತೆ ಇವತ್ತು ರಾತ್ರಿನೇ ಮಾಡುವಾ. ಲೇ ಅದು ಬೆಳದಿಂಗಳು ಊಟ ಅಲ್ಲಾ ಕಲಾ. ಕಂಪೂಟರ್ನಾಗೆ ಕೋಮಲಾ ಬರೀತಾನಲ್ಲಾ ಅದ್ರಾಗೆ ಇರೋರುನ್ನೆಲ್ಲಾ ಕರೆಸಿ ಒಂದು ಕಾರ್ಯಕ್ರಮ ಮಾಡುವಾ ಅಂದೋನೆ, ಏನಲಾ ಕೋಮಲ್ ಅಂದ.

ಲೇಖನ ವರ್ಗ (Category): 

ಸಾದತ್ ಹಸನ್ ಮಾಂಟೊ- ಅದ್ವಿತೀಯ ಕತೆಗಾರ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ `ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು ಅನುವಾದಿಸಿರುವ ಎರಡು ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮನಕಲಕುವ ಕತೆ `ತೆಗೆದುಬಿಡು' ಇಲ್ಲಿ ಕೊಟ್ಟಿದ್ದೇನೆ. ಓದಿ ತಮ್ಮ ಅನಿಸಿಕೆ ತಿಳಿಸಿ.

 

ಸಾದತ್ ಹಸನ್ ಮಾಂಟೊ 

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ರಾಂಗ್ ನಂಬರ್

field_vote: 
No votes yet
To prevent automated spam submissions leave this field empty.

 ಟ್ರಿಂಗ್....ಟ್ರಿಂಗ್...


ದೂರವಾಣಿ ಒಂದೇ ಸಮ ರಿಂಗಣಿಸಿತು, ಬೆಳಗಿನ ಉಪಾಹಾರ ಸೇವಿಸುತ್ತಿದ್ದ ಕೆ.ಎಸ್.ರಾವ್ ಹುಬ್ಬುಗಂಟಿಕ್ಕಿ


ಎದ್ದು ಫೋನ್ ತೆಗೆದು "ಹೆಲೋ..." ಎಂದ


ಆ ತುದಿಯಿಂದ ಎಂತದೊ ಬಿಟ್ಟು ಬಿಟ್ಟು ಬರುತ್ತಿರುವ ರೀತಿಯಲ್ಲಿ , ಸಹಜವಲ್ಲದ ದ್ವನಿಯಲ್ಲಿ " ಹೆಲೋ ಇದು


ಅಂಡ್ರೋಮಿಡ ಗಲಾಕ್ಸಿಯ , ಆಲ್ಫ-ಎ ನಕ್ಷತ್ರಲೋಕದ ೫ನೆ ಗ್ರಹ ಭೂಮಿಕದಿಂದ, ನಾನು ಪೆನಿಲಿಯ ಆಕಾಶದರ್ಷಕ


ಕೇಂದ್ರದಿಂದ ಮಾತನಾದೋದು, ನನ್ನ ಪರಿಚಯ ರೆತಿಯ-೫೪೩೬ , ನಿಮ್ಮ ಪರಿಚಯ ಹೇಳಿ ಪ್ಲೀಸ್..."


ಯಾವುದೋ ಯಂತ್ರವೊಂದು ಮಾತನಾದಿದಂತೆ ಬರುತ್ತಿರುವ ಶಬ್ದ.ಆಶ್ಚರ್ಯಪಟ್ಟ ರಾವ್, ದೂರದ ಗ್ರಹದಿಂದ


ಬಂದ ಕರೆಗೆ ಈ ಭೂಮಿಯಿಂದ ಮೊದಲು ಮಾತಾನಾಡುವ ಅವಕಾಶ ನನಗೆ. ತಕ್ಷಣ ಅವರ ಅನುಮಾನದ


ಸಹಜ ಸ್ವಭಾವ ತಲೆ ಎತ್ತಿತು. ಖಂಡಿತ ಇದರಲ್ಲೇನೊ ಮೋಸವಿದೆ. ನೆನೆಪಿಸಿಕೊಂಡರು, ಸಂದೇಹವಿಲ್ಲ ಇದು


ಅವನದೆ ಕೆಲಸ . ಅವರ ಬಾವಮೈದುನ ರವಿ ನೆನಪಿಗೆ ಬಂದ , ಈ ರೀತಿ ಏನೊ ಮಾಡೋದು ನಂತರ ತನ್ನ

ಲೇಖನ ವರ್ಗ (Category): 

ತಾಯಿ ಹೃದಯವೇ, ನಿನಗೆ ಶರಣು..!

field_vote: 
Average: 5 (2 votes)
To prevent automated spam submissions leave this field empty.

ಹೀಗೊಂದು ಪುಟ್ಟ ಊರು. ಹೆಸರು ಚೆಲುವನಹಳ್ಳಿ. ಹಳ್ಳಿಯಲ್ಲೊಬ್ಬ "ಚೆಲುವ", ವಯಸ್ಸಾದ ತನ್ನ ತಾಯಿಯೊಂದಿಗೆ ಕೂಲಿನಾಲಿ ಮಾಡಿಕೊಂಡು ಸುಖವಾಗಿದ್ದ. ಚೆಲುವನೇನೋ ನೋಡಲು ತುಂಬಾ ಚೆಲುವನೇ, ಆದರೆ ಎರಡು ಸಮಸ್ಯೆಗಳಿದ್ದವು ಆತನಿಗೆ. ಒಂದು, ಆತ ಕೊಂಚ ಪೆದ್ದ. ಇನ್ನೊಂದು ಅವನಿಗೆ  ಇರಳುಗಣ್ಣು. ಸಂಜೆಯಾದ ನಂತರ ಪೂರ್ತಿ ಕುರುಡನೇ ಆಗಿ ಬಿಡುತ್ತಿದ್ದ.

ಲೇಖನ ವರ್ಗ (Category): 

ಮುದ್ದಿನ ಮಗ

field_vote: 
Average: 5 (2 votes)
To prevent automated spam submissions leave this field empty.

ರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. ರಿಂಗ್ ಸದ್ದು ಕೇಳಿದೊಡನೆ ಅತ್ತಿತ್ತ ಮೊಬೈಲ್ ಕಡೆ ಹುಡುಕಾಡಿದರು. ಕೈಗೆ ಸಿಗದೆ ಇದ್ದರಿಂದ ಮೇಲೆ ಎದ್ದು ಸದ್ದು ಕೇಳಿಸಿದ ಕಡೆಗೆ ಧಾವಿಸಿದರು. ಮುಂಚೆಯಿಂದಲು ಮೊಳಕಾಲು ನೋವಿದ್ದರಿಂದ ಏಳುವಾಗ ಅದರ ತೀವ್ರತೆ ಜಾಸ್ತಿಯಾಗಿ ಯಾತನೆ ಜಾಸ್ತಿಯಾಯಿತು. ಮನಸ್ಸಿನಲ್ಲೆ ಅದನ್ನು ಶಪಿಸುತ್ತ ಮೊಬೈಲ್ ನ್ನು ತೆಗೆದುಕೊಂಡು ಮಾತಾಡತೊಡಗಿದರು. ಅವರ ಮಗ ಮಂಜುನಾಥ ಅಮೇರಿಕ ದಿಂದ ಫೊನ್ ಮಾಡಿದ್ದ.

ಲೇಖನ ವರ್ಗ (Category): 

ಸೂರ್ಯನ ಸುತ್ತಾ ಸುತ್ತುವುದು ಭೂಮಿ

field_vote: 
Average: 1 (1 vote)
To prevent automated spam submissions leave this field empty.

"ಸೂರ್ಯನ ಸುತ್ತಾ ಭೂಮಿ ಸುತ್ತುವುದು .ಚಂದ್ರ ಭೂಮಿಯ ಸುತ್ತಾ ತಿರುಗುತ್ತದೆ" ಪಕ್ಕದ ಮನೆ ಸುಮಿ ಓದುತ್ತಿದ್ದರೆ  ನನ್ನ ಮನದಲ್ಲಿ ಸಿಟ್ಟು . ಹೇಳಲಾಗದ ನೋವು. ಇಲ್ಲಾ ಭೂಮಿ ನನ್ನ ಸುತ್ತಾನೆ ಸುತ್ತೋದು .


ಇವತ್ತು ಒಂದರಲ್ಲಿ ಎರೆಡು ನಿರ್ಧಾರವಾಗಲೇ ಬೇಕು  ನಾನೋ ಇಲ್ಲಾ ಭಾಸೀನೋ ಅಂತ ಇವತ್ತು ಹೇಳಲಾಗದಿದ್ದರೆ ಮುಂದೆಂದೂ  ಧರಿತ್ರಿ ಸಿಗೋದಿಲ್ಲ. ಇವತ್ತು ಕತ್ತೇ ಬಡವ ಅದು ಹೇಗೆ ಅವಳನ್ನ ಹಾರಿಸಿಕೊಳ್ತಾನೋ ನೋಡೇ ಬಿಡೋಣ. ಎಂದಿಗಿಂತ ಮುಂಚೇಯೇ ಹೊರಟಿದ್ದೆ ನನ್ನ ಹೊಸ ಕಾರಲ್ಲಿ . ನೆನ್ನೆ ತಾನೆ ತಗೊಂಡಿದ್ದೆ.

ಲೇಖನ ವರ್ಗ (Category): 

ಬೆಳದಿಂಗಳ ಬಾಲೆ

field_vote: 
Average: 5 (3 votes)
To prevent automated spam submissions leave this field empty.

ಅದು ಸೃಷ್ಟಿಯ ಮೊದಲ ಹಂತ. ಜಗತ್ತಿನ ಸೃಷ್ಟಿಯನ್ನು ಮುಗಿಸಿದ್ದ ಬ್ರಹ್ಮ. ಕಲ್ಲು, ಮಣ್ಣು, ಭೂಮಿ, ಸೂರ್ಯ, ಸೌರ ವ್ಯೂಹ, ಬ್ರಹ್ಮಾಂಡ ಎಲ್ಲವೂ ಸೃಷ್ಟಿಗೊಂಡವು. ತನ್ನ ಸೃಷ್ಟಿಯನ್ನು ನೋಡಿ ಸ್ವತಃ ಬ್ರಹ್ಮನೇ ಖುಷಿ ಪಟ್ಟ. ಗರ್ವದಿಂದ ಬೀಗಿದ. ಆದರೆ ಎಲ್ಲೂಒಂದು ಲೂಒಪ ಎದ್ದು ಕಾಣುತಿತ್ತು. ಎಷ್ಟಾದರೂ ಜಡ, ಜದವಲ್ಲವೀ? ಇದನ್ನರಿತ ಬ್ರಹ್ಮ ಜೀವದ ಬೀಜವನ್ನು ಭೂಮಿಗೆ ತರಲುನಿಸ್ಚಿಯಿಸಿದ. ಅಂದಿಗೆ ಶುರುವಾಯಿತು ಭುವಿಯ ಮೇಲೆ ಜೀವ. ವೈರಸ್, ಬ್ಯಾಕ್ಟೀರಿಯ, ಕ್ರಿಮಿ ಕೀಟ, ಜಲರಾಷಿಗಳು ಒಂದೊಂದಾಗಿಸೃಷ್ಟಿಗೊಂಡವು. ಇಷ್ಟೆಲ್ಲಾ ಆದರೂ ತನ್ನ ಸೃಷ್ಟಿಯಲ್ಲಿ ಏನೋ ಕೊರತೆ ಇದೆ ಎಂದು ಬ್ರಹ್ಮ ಕೊರಗುತ್ತಿದ್ದನು, ಕಾರಣ ತಿಳಿಯದೆ ನರಳುತ್ತಿದ್ದನು.

ಲೇಖನ ವರ್ಗ (Category): 

ಸೂಪರ್ ಕಥೆ - ಸಂಪದಿಗ ಮಿತ್ರರೆ ಮುಂದುವರೆಸಿ

field_vote: 
Average: 3 (1 vote)
To prevent automated spam submissions leave this field empty.

ಒಂದು ದಟ್ಟವಾದ ಕಾಡು, ಕಾಡು ಮೃಗಗಳ ತಾಣ. ಅಲ್ಲಿ ಸಿಂಹನೇ ರಾಜ. ಇನಾನಿಮಸ್ ಆಗಿ ಆಯ್ಕೆಯಾಗಿದ್ದ. ಓಟಿಂಗ್ ಮಾಡೋಣ ಎಂದಿದ್ದಕ್ಕೆ ಹುಲಿಕಡೆಯವರಿಗೂ ಸಿಂಹನಿಗೂ ದೊಡ್ಡ ಹೊಡೆದಾಟವೇ ನಡೆದು ಹೋಗಿತ್ತು. ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು. ಇದ್ಯವುದಕ್ಕೂ ಜಗ್ಗದ ಸಿಂಹ ತನ್ನ ಅಧಿಪತ್ಯ ಸ್ಥಾಪಿಸಿದ್ದ. ಅವನು ಹೇಳಿದಂತೆಯೇ ನಡೆಯಬೇಕು. ದಿನ ನಿತ್ಯ ನಂದಿನಿ ಹೋಟೆಲ್ ನಿಂದ ಫುಡ್ ಸಪ್ಲೈ ಮಾಡಲಾಗುತ್ತಿತ್ತು. ಹೋಟೆಲ್ ಫುಡ್ ತಿಂದು ತಿಂದು ಗ್ಯಾಸ್ ಆಗಿ ಒಂದು ಜೆಲ್ಯೂಸಿಲ್ ಮತ್ತು ಒಮೇಜ್ ತೆಗೆದುಕೊಂಡು ಹಾಯಾಗಿ ಮಲಗಿದ್ದ.

ಲೇಖನ ವರ್ಗ (Category): 

ಸಣ್ಣ ಕಥೆ - ಎರಡು ಕಾಫೀ

field_vote: 
Average: 5 (1 vote)
To prevent automated spam submissions leave this field empty.

ಇದು ನನ್ನ ಮೊದಲ ಕಥೆ (ಮೊದಲು ಕೆಲವು ಬರೆದಿದ್ದೆ ಆದರೆ ಅವೆಲ್ಲ ಹಾಸ್ಯ ಲೇಖನಗಳಾಗಿದ್ದವು), ತಮ್ಮ ಸಲಹೆ ಮತ್ತು ಅಭಿಪ್ರಾಯಗಳ ನಿರೀಕ್ಷೆಯಲ್ಲಿ. 

ಲೇಖನ ವರ್ಗ (Category): 

ಕೋಗಿಲೆ ಹಾಡು ನಿಂತು ಹೋಯಿತು

field_vote: 
Average: 3.3 (3 votes)
To prevent automated spam submissions leave this field empty.

ಅಂದ ಹಾಗೆ ಆ ಕೋಗಿಲೆ ಒಂದು ಥರ ಮೂಡಿ ತಾನಾಯ್ತು ತನ್ನ ಹಾಡಾಯ್ತು ಎಂದುಕೊಂಡು  ತನ್ನ ಪಾಡಿಗೆ ತಾನಿತ್ತು.

ಬೇಸರವಾದರೂ ಹಾಡು. ನಲಿವಾದರೂ ಹಾಡು ನೋವಾದರೂ ಹಾಡು ಹಸಿವಾದರೂ ಹಾಡು. ಹೀಗೆ ಹಾಡೊಳಗೆ  ಉಸಿರಾಗಿ ಹೋಗಿತ್ತು. ಒಂದು ಸೊಂಪಾದ ಮರದ ಕೊಂಬೆಯ ಮೇಲೆ ಅದ್ಯಾವುದೋ ಕಾಲದಿಂದ ಕೂತಿತ್ತು.

ಒಂದೊಮ್ಮೆ ಇಂತಹ ಕೋಗಿಲೆಗೆ ಒಬ್ಬ ಮನುಷ್ಯನೊಂದಿಗೆ ಅರಿವಿಲ್ಲದೆ ಸಂಬಂಧ ಹುಟ್ಟಿತು. ಅರೆ ಕೋಗಿಲೆಗೆ ಮನುಷ್ಯನೊಂದಿಗೆ ಎಂಥಾ ಸಂಬಂಧ ಅನ್ನುತ್ತೀರಾ? ಅದೇ ನೋಡಿ ಇಲ್ಲಿನ ಕಥೆ

ಲೇಖನ ವರ್ಗ (Category): 

ಬಿಸಿಲು ಮಳೆ

ಬಿಸಿಲು ಮಳೆ ಬಿದ್ದಿದ್ದರಿ೦ದಲೋ ಎನೋ ಅಕಾಶದಲ್ಲಿ ಕಾಮನ ಬಿಲ್ಲು ಕ೦ಡು ಕಾಣದ೦ದಿತ್ತು. ಅದು ಇಳಿಸ೦ಜೆಯ ಹೊತ್ತು. ಸೂರ್ಯ ಮೋಡದ ಹಿ೦ದಿನಿ೦ದ ಇಣುಕುತ್ತಾ ಮತ್ತೆ ಮರೆಯಾದ. ಕೆ೦ಪು ಮುಗಿಲು ಆಕಾಶವನ್ನು ಆವರಿಸಿದ್ದರಿ೦ದ, ಸ೦ಜೆಯ ಸಮಯವಾಗಿದ್ದರೂ, ದಾರಿಯು ಹೊನ್ನಿನ ಬಣ್ಣ ತೆಳೆಯಿತು. ಇನ್ನು ಕೆಲವು ಸಮಯದಲ್ಲಿ ಕತ್ತಲು ಆವರಿಸುವ೦ತಿತ್ತು. ನೀಲಗಿರಿ ಮರಗಳು ರಸ್ತೆಯ ಇಕ್ಕೆಲಗಳಲ್ಲಿ ಸೊ೦ಪಾಗಿ ಬೆಳೆದಿದ್ದವು. ಮರದ ಎಲೆಗಳೊ೦ದಿಗೆ ಹನಿ ಅಲ್ಲಲ್ಲಿ ಬೀಳುತ್ತಾ, ಸ೦ಜೆಯ ಮಳೆ ಅನುಭವಕ್ಕೆ ಮಣ್ಣಿನ ವಾಸನೆಯನ್ನೂ ಅಲ್ಲಲ್ಲಿ ಹರಡಿದ್ದವು. ಮಳೆ ಜೋರಾಗಿ ಬೀಳುವ ಸೂಚನೆಯೂ ಇರಲಿಲ್ಲ. ಊರು ಹತ್ತಿರವಾಗುತ್ತಿದ್ದ೦ತೆ ಕಾಲು ದಾರಿ ಕವಲೊಡೆಯಿತು. ಜೇಡಿ ಮಣ್ಣಿನ ದಾರಿ ಕಾಲಿಗೆ ಅ೦ಟುತ್ತಿತ್ತು.

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ನಂದು ಸಾರ್‍ ಆ ಜಾಗ...

                             ನಂದು ಸಾರ್‍ ಆ ಜಾಗ...

 

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ರಾಮಾಣ್ಯ ನಂತರ ಮಹಾಭಾರತ ಹಾಸ್ಯ ನಾಟಕ

field_vote: 
No votes yet
To prevent automated spam submissions leave this field empty.

ನೋಡ್ಲಾ ಕೋಮಲ್, ಹೋದ್ ದಪ ನೀವೆಲ್ಲಾ ಸೇರಿ ರಾಮಾಣ್ಯ ನಾಟಕ ಗಬ್ಬು ಎಬ್ಬಿಸಿದರಿ. ಈ ಬಾರಿ ಮಹಾಭಾರತ ನಾಟಕ ಆಡುವಾ, ಭಾಸೆ, ವೇಸ ಎಲ್ಲಾ ಸರಿಯಾಗಿರಬೇಕು. ಆಗ್ಲೇ ಮೇಸ್ಟ್ರುಗೆ ಅಡ್ವಾನ್ಸ್ ಕೊಟ್ಟು ಬಂದೀವ್ನಿ ಅಂದ ಗೌಡಪ್ಪ. ಸರಿ ನಾನೂ ಭೀಮ ಆಯ್ತೀನಿ ಅಂದಾ ಗೌಡಪ್ಪ, ಕೋಮಲಾ ನೀನು ದುರ್ವೋಧನ, ಸುಬ್ಬ ಕಿಸ್ನ, ಕಟ್ಟಿಗೆ ಒಡೆಯೋ ಕಿಸ್ನ ಅರ್ಜುನ, ಗೌಡಪ್ಪನ ಮೊದಲನೆ ಹೆಂಡರು ಲಕ್ಸ್ಮಿನ್ನ ಗಾಂಧಾರಿ, ಹೆಣ್ಣಿನ ತರಾ ಇದ್ದ ರಂಗ ದ್ರೌಪದಿ ಹಿಂಗೆ ಎಲ್ಲಾ ಪಾಲ್ಟು ಸೆಲೆಕ್ಟ್ ಮಾಡಿದ್ದು ಆತು. ನಾಟಕದಾಗೆ ಅರ್ಧಕ್ಕರ್ಧ ಜನ ಗೌಡಪ್ಪನ ಕುಟುಂಬನೇ ಇತ್ತು. ಹಂಗಾಗಿ ಪ್ರಾಕ್ಟೀಸ್ ಮಾಡುವಾಗ ಸುಗರ್ ಲೆಸ್ ಚಾ, ಮುಗ್ಗು ಹೋಗಿದ್ದ ಬಿಸ್ಕತ್ತು ಎಲ್ಲಾ ಫ್ರೀ. ಬಿಸ್ಕತ್ತು ತಿಂದ್ ಮ್ಯಾಕೆ ಬಾಯ್ನಾಗೆಲ್ಲಾ ಬಡ್ಡೆ ಹತ್ತಾವು ಬೆರಳು ಹಾಕಿ ತೊಳಿಸ್ತಿದ್ವು.

ಲೇಖನ ವರ್ಗ (Category): 

ಮರದ ಸ್ಥಾನ ಪಲ್ಲಟ

field_vote: 
Average: 4 (4 votes)
To prevent automated spam submissions leave this field empty.

ನಾನು ನಿರ್ಧರಿಸಿಬಿಟ್ಟಿದ್ದೆ. ರಾತ್ರಿ ಇವರ ಗೊಣಗು ಕೇಳುತ್ತಿದ್ದಂತೆ ಅಂದುಕೊಂಡಿದ್ದೆ


"ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ"


ಅಷ್ಟಕ್ಕೂ ರಾತ್ರಿ ಅವರಾಡಿದ ರಂಪಕ್ಕೆ ನಾ ಮಾಡಿದ ತಪ್ಪಾದರೂ ಏನಾಗಿತ್ತು


ನಾನು ಚೆನ್ನಾಗಿ ಹಾಡುವುದೆ ತಪ್ಪೇ?   ಇವರೇನು ಸಂಗೀತ ವಿರೋಧಿಗಳೇ?

ಲೇಖನ ವರ್ಗ (Category): 

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ......

field_vote: 
Average: 5 (1 vote)
To prevent automated spam submissions leave this field empty.

ಸ್ಯಾನೇ ದಿನ ಆದ್ ಮ್ಯಾಕೆ ನಮ್ಮ ಊರ್ನಾಗೆ ಕುಸ್ತಿ ಪಂದ್ಯ ಮಡಗಿದ್ವಿ.  ನಿಂಗಪ್ಪನ ಚಾ ಅಂಗಡೀಲಿ ಮೀಟಿಂಗ್ ಮಡಗಿದ್ವಿ. ಕೆಟ್ಟ ಒಡೆದೋದ ಹಾಲು ಹಾಗೂ ಚಲ್ಟದ ಟೀಪುಡಿ ಚಾ ಕೊಟ್ಟ. ಲೇ ಕಾಸು ಕೊಡಕ್ಕಿಲ್ವಾ, ಕೊಡೋ ಒಂದು ರೂಪಾಯಿಗೆ ಕೆಟಿ ಹಾಕ್ತೀವ್ನಿ ಬನ್ರಲ್ಲಾ. ಮಾಮೂಲಿ ಗಬ್ಬುನಾಥ ಗೌಡಪ್ಪ, ನೋಡ್ರಲಾ ನಮ್ಮ ಊರ ಮರ್ವಾದೆ ಉಳಿಸಬೇಕು ಅಂತಿದ್ದ. ಅದಕ್ಕೆ ಚಾ ಅಂಗಡಿ ನಿಂಗ ನಾನು ತಯಾರಿ ತಗೋತೀನಿ ಅಂದಾ. ಸುಬ್ಬಾ ಎಂಗೈತೆ ನನ್ನ ಬಾಡಿ ಅಂತಾ ಸಲ್ಟು, ಚೆಡ್ಡಿ ತೆಗೆದು ಗೌಡಪ್ಪನ ಮುಂದೇ ನಿಂತೇ ಬಿಟ್ಟ. ಏ ಥೂ ಬಟ್ಟೆ ಹಾಕಳ್ಳಾ. ನಮ್ಮೂರು ಹೆಣ್ಣು ಐಕ್ಳು, ಇದ್ಯಾವಾ ಕಾಡು ಮನಸ ಅಂತಾ ಹೆದರು ಬಿಟ್ಟಾವು ಅಂದ. ಲೇ ಒಂದ್ ಕಾಲದಾಗೆ ನಾನು ಪೈಲ್ವಾನೆಯಾ ಅಂದಾ ಗೌಡಪ್ಪ.

ಲೇಖನ ವರ್ಗ (Category): 

ಅರೆ ಅಲ್ಲಾ .......

field_vote: 
Average: 4 (1 vote)
To prevent automated spam submissions leave this field empty.

ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು  ಎಲ್ರೂ ಒಟ್ಟಿಗೆ ಮಾಡ್ತೀವಿ.  ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದಿನದ ಮ್ಯಾಕೆ, ಹಳ್ಳೀಲಿ. ಒಂದು ದೇವರ ನಾಮಗಳ ಕಾರ್ಯಕ್ರಮ ಏರ್ಪಡಿಸೋದು ಅಂತಾ ತೀರ್ಮಾನಿಸಿದ್ವಿ. ನಮ್ಮೂರಿನ ಅಧ್ಯಕ್ಸ ಹಳಸೋದ ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪನ ಅಧ್ಯಕ್ಸತೆಯಲ್ಲಿ ನಡೀತು.

ಲೇಖನ ವರ್ಗ (Category): 

ಗುರುವೇ.... ಸಿದ್ದೇಸ

field_vote: 
Average: 4.3 (4 votes)
To prevent automated spam submissions leave this field empty.

ಸಿದ್ದೇಸ, ನಮ್ಮ ಮನೆ ದೇವರು. ಇವನು ದೇವಸ್ಥಾನ ಇರೋದು ಇಲ್ಲೇ ನಮ್ಮ ಹಳ್ಳಿ ಪಕ್ಕದಾಗೆ. ನಮ್ಮನ್ಯಾಗೆ ಏನೇ ಕಾರ್ಯವಾದರೂ ಮೊದಲು ಸಿದ್ದೇಸನಿಗೆ ತಿಳಿಸೇ ಮುಂದಿನದು. ಹಾಗಂತ ಸತ್ತಾಗ ಏಳಕ್ಕಿಲ್ಲ. ಯಾಕೆಂದರೆ ಟೇಂ ಇರಲ್ಲಾ ನೋಡಿ ಅದಕ್ಕೆ. ಹೀಗೆ ಒಮ್ಮೆ ಸಿದ್ದೇಸನ ಜಾತ್ರೆ, ಮನೆಯವರೆಲ್ಲ ಜಾತ್ರೆಗೆ ವೈನಾಗೆ ಹೋಗಿದ್ವಿ. ಬೆಳಗ್ಗೆ ಬೇಗನೇ ಎದ್ದು, ಊಟ ಕಟ್ಕೊಂಡು ಗಾಡಿಯಲ್ಲಿ ಹೋಗಿದ್ವಿ. ಊರ ಹೊರಗೆ ಗಾಡಿ ನಿಲ್ಸಿ, ಜಾತ್ರೆ ಒಳಗೆ ಹೊಂಟ್ವಿ. ಹಳೇ ದೋಸ್ತಿಗಳೆಲ್ಲಾ ಏನ್ಲಾ ಎಂಗಿದ್ದೀಯಲ್ಲಾ, ಸಂದಾಗಿದೀನ ಕಣ್ರಲ್ಲಾ ಅಂತ ಅಂಗೇ ಮುಂದೆ ಓಯ್ತಾ ಇದ್ವಿ. ಮಗ, ಅಪ್ಪಾ, ಅಪ್ಪಾ ಅಲ್ನೋಡು ಬಲೂನ್, ಸುಮ್ ಬಾರಲಾ, ಮೊದಲು ಸಿದ್ದೇಸನ್ನ ನೋಡವಾ, ಆಮ್ಯಾಕೆ ಏನಿದ್ರು.

ಲೇಖನ ವರ್ಗ (Category): 

ಪದವೀ'ಧರ'...............................ಹಾಸ್ಯ ಲೇಖನ..

field_vote: 
Average: 5 (1 vote)
To prevent automated spam submissions leave this field empty.

 ಒಮ್ಮೆ ಬಹಳ ಜನಪ್ರಿಯ ವಿಶ್ವವಿದ್ಯಾಲಯ ದಿ೦ದ ಒ೦ದು ಪ್ರಕಟನೆ ಪ್ರಸಾರಗೊ೦ಡಿತು..............

ಅದೇನೆ೦ದರೆ..........

"ನಮ್ಮಲ್ಲಿ Degree certificate ಗಳು ಮಾರಾಟಕ್ಕಿವೆ ಪಡೆಯಲಿಚ್ಹಿಸುವವರು ಸ೦ಪರ್ಕಿಸಿ"

ಅಭ್ಯರ್ಥಿಗಳಿಗೆ ಇರಬೇಕಾದ  ಅಹ್ರತೆಗಳು........

೧. ೧೮ ವರ್ಷ ಮೆಲ್ಪಟ್ಟಿರಬೇಕು.

೨. ಬರುವಾಗಲೆ ಯಾವ ಪದವಿಯ ಸರ್ಟಿಫಿಕೇಟ್ ಬೇಕೆ೦ದು ನಿರ್ಧರಿಸಿರಬೇಕು.

೩. ಬರುವಾಗ ಸರ್ಟಿಫಿಕೇಟ್ ಗೆ ತಗಲುವ ವೆಚ್ಚವನ್ನು ತ೦ದಿರಬೇಕು.

೪. ಮೊದಲು ಬ೦ದವರಿಗೇ ಆದ್ಯತೆ.

ಲೇಖನ ವರ್ಗ (Category): 

ಸುಪ್ಪನಾತಿ ಸುಬ್ಬಿ

ಮಾಗಿಯ ಕಾಲದ ಚಿಗುರು ಮೊಳಕೆಯೊಡೆದು, ಕಾಲ ಕಾಲಕ್ಕೆ ಮಳೆ-ಬೆಳೆ ಆಗುತ್ತಿದ್ದರೂ, ಕೋಗಿಲೆಯು ತಾನು ತನುಮನದಿ೦ದ ಇ೦ಪಿಸುತ್ತಿದ್ದರೂ, ಅಷ್ಟೆ ಏಕೆ? ಹಳ್ಳಿಯು "ಯೊಳುಯೆಡೆ ಸರುಪ"ದ೦ತೆ ಅ೦ಕು ಡೊ೦ಕಾಗಿ ಬೆಳೆದು ಕೇವಲ ಅಲ್ಲೊ೦ದು ಇಲ್ಲೊ೦ದು ಮನೆ ಇದ್ದುದು ಇನ್ನೂರಾಗಿದ್ದರೂ, ಮೇಲ್ಮನೆ ಗೌಡ್ರು ಮಗಳಿಗೆ ಇನ್ನೂ ಮದುವೆ ಆಗದೆ ಇದ್ದುದಕ್ಕೆ ಊರಿನ ಮನುಜ ಕೋಟಿ ಗೌಡಿಕೆಯ ಮನೆತನದ ಬಗ್ಗೆ ಮುನಿಸಿಕೊ೦ಡ೦ತಿತ್ತು.

field_vote: 
Average: 2.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಒಂದು ಅರಮನೆಯ ಕೋಣೆಯ ಕಥೆ

field_vote: 
Average: 4.9 (7 votes)
To prevent automated spam submissions leave this field empty.

ರಾಜ್ಯದಲ್ಲೆಲ್ಲ ಹಬ್ಬದ ವಾತಾವರಣ. ಬೀದಿ ಬೀದಿಗಳಲ್ಲಿ ದೀಪಾಲಂಕಾರ. ಸ್ವಚ್ಚತೆಯ ಕೆಲಸ ಭರದಿಂದ ಸಾಗಿತ್ತು. ಬರಲಿರುವ ಶುಕ್ರವಾರ ಸಂಜೆಯಿಂದ ಆರಂಭವಾಗಿ ಭಾನುವಾರ ರಾತ್ರಿಯವರೆಗೂ ನೆಡೆಯಲಿರುವ ಈ ಸಂಭ್ರಮಕ್ಕೆ ಹದಿನೈದು ದಿನಗಳಿಂದ ಸಿದ್ದತೆ ನೆಡೆದಿದೆ. ಎಲ್ಲ ಜನತೆ ಸಕ್ರಿಯವಾಗಿ ಭಾಗವಹಿಸಲೇಬೇಕೆಂಬ ಆಗ್ರಹ ಬೇರೆ.


ಇಂತಹ ದಿನಕ್ಕೆಂದೇ ಕಾದಿದ್ದರೆಂಬಂತೆ ತಾತ್ಕಾಲಿಕ ವ್ಯಾಪಾರ ಮಳಿಗೆಗಳು ಮೊದಲೇ ನಿಗದಿ ಪಡಿಸಿದ ಸ್ಥಳಗಳಲ್ಲಿ ಎದ್ದವು. ಜಾಗಕ್ಕೆ, ಒಂದಕ್ಕೆ ನಾಲ್ಕರಂತೆ ಬೆಲೆ. ಜನ ನಿಬಿಡತೆ ಹೆಚ್ಚೆಲ್ಲಿರುವುದೋ ಅಂತಹ ಸ್ಥಳಗಳಲ್ಲಿ ಮಳಿಗೆ ಎಬ್ಬಿಸಲು ಸಂಬಂಧಪಟ್ಟ ಅಧಿಕಾರಿಗಳೊಡನೆ ಹೇಗೆ ವ್ಯವಹರಿಸಬೇಕು ಎಂಬುದು ನಗ್ನ ಸತ್ಯ.ಗುರುವಾರ ರಾತ್ರಿ ಅರಮನೆಯ ಮೂಲೆಯ ಕೋಣೆಯಲ್ಲಿ ಮಹಾರಾಜರು ದೀರ್ಘವಾಗಿ ಅಲೋಚಿಸುತ್ತ ಕುಳಿತಿದ್ದಾರೆ. ಮಹಾರಾಜರು ಈ ಕೋಣೆಯಲ್ಲಿ ಇದ್ದಾರೆಂದರೆ ಯಾರೂ ಆ ದಿಕ್ಕಿನಲ್ಲಿ ತಲೆಯಿಟ್ಟೂ ಮಲಗುವುದಿಲ್ಲ. ಇದು ಅರಮನೆಯಲ್ಲಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಮಹಾರಾಜರ ಹುಟ್ಟಿದ ದಿನದ ಅಂಗವಾಗಿ ಮೂರು ರಾತ್ರಿಗಳ ಆಚರಣೆಗೆ ಇಷ್ಟೆಲ್ಲ ಸಿದ್ದತೆಗಳು ಭರದಿಂದ ನೆಡೆಯುತ್ತಿರುವಾಗ, ಈ ಕೋಣೆಯಲ್ಲಿ ಇಂದೇನು ಅಂತಹ ಗಂಭೀರ ವಿಚಾರ? ಮಾರನೆಯ ದಿನಕ್ಕೆ ಎಲ್ಲರೂ ಅಣಿಯಾಗುತ್ತಿರುವಾಗ, ಈ ಕಡೆ ಯಾರೂ ಹೆಚ್ಚು ಗಮನವೂ ಹರಿಸಿಲ್ಲ.ಹಿಂದೆ, ಇದೇ ಕೋಣೆಯಲ್ಲಿ ಏನೇನೋ ನೆಡೆದಿತ್ತು ... ಇಂದು ಏನೇನೋ ನೆಡೆಯಲಿದೆ .... ಇದೇ ಅರಮನೆಯ ಒಂದು ಕೋಣೆಯ ಕಥೆ .....


ಮಂತ್ರಿಗಳು ಕೋಣೆಯನ್ನು ಹೊಕ್ಕು ಯಥಾಪ್ರಕಾರ ಬಾಗಿಲು ಬಡಿದುಕೊಂಡರು. ಈ ಕೋಣೆಯೊಂದು ನಿಶ್ಶಬ್ದದ ಗೂಡು. ಹೆಚ್ಚು ವೈಭವವಿಲ್ಲ. ಈ ಕೋಣೆಯಲ್ಲಿ ರಾಜನಿಗೆ ಪರಾಕು, ಶಿರಬಾಗಿ ವಂದನೆ ಎಂಬೆಲ್ಲ ನಿಯಮಗಳು ಇರುವುದಿಲ್ಲ. ನೇರವಾಗಿ ವ್ಯವಹಾರದ ಮಾತುಗಳು ಅಷ್ಟೇ !


ಲೇಖನ ವರ್ಗ (Category): 

ಮೂರು ಕತೆಗಳು

field_vote: 
Average: 2.2 (9 votes)
To prevent automated spam submissions leave this field empty.

ಇತ್ತೀಚೆಗೆ ನನ್ನ ಅತ್ತೆ ಮಗಳು ಚೇತನಾ ಇ ಮೇಲ್ ನಲ್ಲಿ ಮೂರು ಸಣ್ಣ ಇಂಗ್ಲೀಷ್ ಕತೆಗಳನ್ನು ಕಳುಹಿಸಿದ್ದಳು. ಅವು ನನ್ನ ಮನಸ್ಸಿಗೆ ಹಿಡಿಸಿದ್ದರಿಂದ ಕನ್ನಡಕ್ಕೆ ಅನುವಾದಿಸಿ ನಿಮಗೂ ಕಳುಹಿಸುತ್ತಿದ್ದೇನೆ.

ಅವಳ ಇ ಮೇಲ್ ಹೀಗೆ ಆರಂಭವಾಗುತ್ತದೆ.

ನನ್ನ ಗಮನಕ್ಕೆ ಬಂದ ಮೂರು ಉತ್ತಮ ಸಣ್ಣ ಕತೆಗಳು.

ನಾವು ಜೀವನದಲ್ಲಿ ನಮ್ಮ ಅನುಭವಗಳಿಂದ ಬಹಳಷ್ಟು ಕಲಿಯುತ್ತೇವೆ.

ಲೇಖನ ವರ್ಗ (Category): 

ಅದೇ ನೋಟ ಮತ್ತು ಮಾತು

field_vote: 
Average: 5 (1 vote)
To prevent automated spam submissions leave this field empty.

"ಅಯ್ಯಾ ಮಹರಾಜಾ ಇಲ್ಯಾಕೆ ಮಲಗಿದ್ದೀಯಪ್ಪಾ ಇಂತಹಾ ನಿರ್ಮಾನುಷ ಜಾಗದಲ್ಲಿ ಮಲಗಿರಬಾರದು ಅದೂ ರಾತ್ರೆಯ ಈ ಹೊತ್ತಿನಲ್ಲಿ" ಮಂಪರಿನಲ್ಲಿ ಈ ಮಾತು ಕೇಳುತ್ತಲೇ ಗಡಬಡಿಸಿ ಎದ್ದು ದನಿಯತ್ತ ಕಣ್ಣು ಹಾಯಿಸಿದೆ.ಇದಿರಿಗೆ ಕಾಷಾಯ ವಸ್ತ್ರಧಾರಿಯೊಬ್ಬ ನಿಂತಿದ್ದ. ಬರೇ ನಾಲ್ಕೈದು ದಿನಗಳ ಪ್ರವಾಸ ಅಲ್ಲದೇ ನಾನು ವೈಯ್ಯಕ್ತಿಕ ಕೆಲಸದಲ್ಲಿದ್ದುದರಿಂದ ಸಾಧಾರಣವಾದ ಕುರ್ತಾಪೈಜಾಮವನ್ನೇ ಧರಿಸಿದ್ದೆ, ಜತೆಗಿದ್ದ ಬುದ್ದಿಜೀವಿಗಳ ಚೀಲವನ್ನು ತಲೆಯ ಕೆಳಗಿಟ್ಟುಕೊಂಡು ಪ್ಲಾಟ್ ಫಾರಂನ ಕೊನೆಯ ಬೆಂಚಿನಮೇಲೆ ಮಲಗಿದ್ದೆ.

ಲೇಖನ ವರ್ಗ (Category): 

ದಲ್ಲಾಳಿ

field_vote: 
Average: 5 (2 votes)
To prevent automated spam submissions leave this field empty.

ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ಹಿಗಾಗಿ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ ಸಿಹಿಯಾದ ಮಾತುಗಳನ್ನಾಡುತ್ತಾ ದನದ ವ್ಯಾಪಾರಿಗಳಿಗೆ ಅವರ ವ್ಯಾಪಾರದಲ್ಲಿ ನೆರವಾಗುವದೇ ನನ್ನ ಕೆಲಸ. ಆದ ಕಾರಣಕ್ಕೆ ಈ ಭಾಗದಲ್ಲಿ ಜನ ನನ್ನನ್ನು ಗೌರವದಿಂದ ಕಾಣುತ್ತಾರೆ.  ನನ್ನ ಕಂಡೊಡನೆ ಅವರು ನನ್ನನ್ನು ಚಹಾದ ಅಂಗಡಿಗೆ ಕರೆದುಕೊಂಡು ಹೋಗಿ “ದಭೆವಾಲಾ,  ಎರಡು ಚಾ ತಯಾರಿಸು” ಎಂದು ಪ್ರೀತಿಯಿಂದ ಹೇಳುತ್ತಾರೆ. ನನ್ನನ್ನು ನೋಡಿದ ಮೇಲೆ ಆ ಚಹಾದ ಅಂಗಡಿ ಮಾಲಿಕ “ಓಹೋ, ತನ್ಸುಖ್! ಹೆಂಗಿದ್ದಿಯಪಾ? ಎಲ್ಲಾ ಅರಾಮಾನಾ? ಈ ನಡುವೆ ವ್ಯಾಪಾರ ಹೆಂಗೆ ನಡಿತಾ ಇದೆ?” ಎಂದು ಅತ್ಯುತ್ಸಾಹದಿಂದ ಎದ್ದುನಿಂತು ನಾನವನಿಗೆ ಚನ್ನಾಗಿ ಗೊತ್ತಿರುವೆನೆಂದು ತೋರಿಸಲು ಕೇಳುತ್ತಾನೆ. ಆದರೆ ಒಂದೊಂದು ಸಾರಿ ಹೀಗೆ ಕೇಳುತ್ತಿರುವರು ಯಾರೆಂದು ನನಗೆ ತಿಳಿಯದೇ ಕಕ್ಕಾಬಿಕ್ಕಿಯಾಗುತ್ತೇನೆ, ಅದು ಬೇರೆ ವಿಷ್ಯ.

ನಾನು ದಿನಾ ಬೆಳಗಾದರೆ ಒಂದು ದನದ ಜಾತ್ರೆಯಿಂದ ಇನ್ನೊಂದು ದನದ ಜಾತ್ರೆಗೆ ಹೋಗುವವ. ಒಬ್ಬ ದನದ ದಲ್ಲಾಳಿ ಇನ್ನೇನು ತಾನೆ ಮಾಡಲು ಸಾಧ್ಯ? ದನದ ಜಾತ್ರೆಗಳು ವರ್ಷದುದ್ದಕ್ಕೂ ಇಲ್ಲಲ್ಲಾಂದ್ರೆ ಇನ್ನೆಲ್ಲೋ ಒಂದು ಕಡೆ ನಡೆದೇ ಇರುತ್ತವೆ. ನಾನು ಅವಕೆಲ್ಲಾ ಹೋಗಲೇಬೇಕು. ಏಕೆಂದರೆ ಅವೇ ನನ್ನ ಆದಾಯದ ಮೂಲಗಳು. ನಾನೀಗಾಗಲೆ ನಿಮಗೆಲ್ಲರಿಗೂ ಹೇಳಿದ್ದೇನೆ; ನಾನು ತುಂಬಾ ಸುಳ್ಳು ಹೇಳುತ್ತೇನೆಂದು.  ಅದು ನನ್ನ ಬಾಯಿಗೆ ಒಗ್ಗಿಹೋಗಿದೆ. ನಾನು, ಎಳ್ಳಷ್ಟೂ ಕೆಲಸಕ್ಕೆ ಬಾರದ ದನಗಳನ್ನು ಭರ್ಜರಿ ಬೆಲೆಗೂ ಹಾಗೂ ಎಲ್ಲ ರೀತಿಯಿಂದಲೂ ಚನ್ನಾಗಿರುವ ದನಗಳನ್ನು ಭಾರಿ ಕಡಿಮೆ ಬೆಲೆಗೂ  ಹಾಡಹಗಲೇ ಮಾರಾಟ ಮಾಡಿಸಬಲ್ಲೆ. ಹರಳನ್ನೊಯ್ದು ಮುತ್ತನ್ನು, ಮುತ್ತನ್ನೊಯ್ದು ಹರಳನ್ನಾಗಿಯೂ ಪರಿವರ್ತಿಸಲು ನನಗೆ ಬಹಳ ಸಮಯ ಬೇಕಾಗಿಲ್ಲ. ಕೊಂಡುಕೊಳ್ಳುವವರಿಗೆ ತನ್ನ ಮುಂದೆ ಬಿದ್ದಿರುವ ಕಬ್ಬಿಣವನ್ನು ಚಿನ್ನವೆಂದು ನಂಬಿಸಿ ಮೋಸ ಮಾಡುವ ನನಗೆ ಇಂತಹ ಕುತಂತ್ರಗಳೇನೂ ಹೊಸದಲ್ಲ. ಆ ಮೂಲಕ ನಾನು ಬರೀ ಕೊಳ್ಳುವನನ್ನು ಮಾತ್ರ ಮೋಸ ಮಾಡುವದಿಲ್ಲ, ಮಾರಾಟಗಾರನನ್ನು ಸಹ

ಲೇಖನ ವರ್ಗ (Category): 

ನನಗೆ ಸನ್ಮಾನ ಅಂತೆ !

field_vote: 
Average: 4.3 (4 votes)
To prevent automated spam submissions leave this field empty.
ಮನೆಯವರೆಲ್ಲ ಬೇಸಿಗೆ ರಜಕ್ಕೆ ಊರಿಗೆ ಹೋಗಿದ್ದರು. ನಾನು ಒಬ್ಬನೇ ಮನೆಯಲ್ಲಿ. ಅರ್ಜಂಟ್ ಕೆಲಸದ ಮೇಲೆ ಹುಬ್ಬಳ್ಳಿಗೆ ಹೋಗಬೇಕಾಗಿ ಬಂತು. ಬೇಸಿಗೆ ರಜ ಬೇರೆ. ಟ್ರೈನಿನ ಟಿಕೆಟ್ ಸಿಗಲಿಲ್ಲ. ಬೇರೆ ದಾರಿ ಇಲ್ಲ. ಟೂರಿಸ್ಟ್ ಬಸ್ಸಿಗೆ ಟಿಕೆಟ್ ಬುಕ್ ಮಾಡಿಸಿ ಹೊರಟೆ. ಮಬ್ಬಾದ ಬೆಳಕಿನ ಬಸ್ಸಿನಲ್ಲಿ ಕುಳಿತಿದ್ದೆ. ಒಳ್ಳೇ ಸುಖಾಸನ. ಸ್ವಲ್ಪ ಹೊತ್ತಿಗೆ ಹೊರಡುತ್ತದೆ. ಬೊಂಬಾಟ್ ನಿದ್ದೆ ಮಾಡಬಹುದು ಎಂಬೋ ಎಣಿಕೆ. ಹಾಗೇ ಕಣ್ಣು ಮುಚ್ಚಿದೆ. 
ಮೊಬೈಲು ಕಿರುಗುಟ್ಟಿತು. 
ಮೊದಲ ವಿಘ್ನ ಎಂದುಕೊಳ್ಳುತ್ತ ಕರೆ ಸ್ವೀಕರಿಸಿದೆ. ಆ ಕಡೆ ವ್ಯಕ್ತಿಯ ದನಿ ಪರಿಚಯವಂತೂ ಇರಲಿಲ್ಲ. ತಮ್ಮ ಪರಿಚಯ ಹೇಳಿಕೊಂಡು, ಇಷ್ಟು ತಡವಾಗಿ ಕರೆ ಮಾಡಿದ್ದಕ್ಕೆ ಕ್ಶಮೆ ಕೇಳಿ, ನನಗೆ ಅಭಿನಂದನೆ ತಿಳಿಸಿದರು. ಯಾಕೆ, ಏನು, ಎತ್ತ ಎಂಬುದರ ಅರಿವೇ ಆಗಲಿಲ್ಲ. ಕುತೂಹಲದಿಂದ ವಿಷಯ ಏನು ಎಂದು ಕೇಳಿದೆ. ಅರ್ಧ ಘಂಟೆ ಹೇಳುತ್ತಾ ಹೋದರು. ಸಾರಾಂಶ ಇಷ್ಟೇ. ಯಾವುದೋ ಸ್ವಯಂ ಸೇವಕ ಸಂಘದವರು ನನ್ನನ್ನು "ವರ್ಷದ ಸಮಾಜ ಸೇವಕ" ಎಂದು ಗುರುತಿಸಿ ಸನ್ಮಾನ ಮಾಡಲು ನನ್ನ ಒಪ್ಪಿಗೆ ಕೇಳಿದರು. ಸಿಕ್ಕಾಪಟ್ಟೆ ಆಶ್ಚರ್ಯ ಮತ್ತು ಸಂತೋಷವಾದರೂ ತೋರ್ಪಡಿಸದೆ ಆ ದಿನ ಸ್ವಲ್ಪ ಬಿಜಿ ಇದ್ದೀನಿ ಆದರೂ ಖಂಡಿತ ಬರುತ್ತೀನಿ ಎಂದು ಲೈಟಾಗಿ ಹಿರಿಯತನ ತೋರಿ, ಮೊಬೈಲ್ ಆರಿಸಿದೆ. 
ಇದು ನನ್ನ ಜೀವನದಲ್ಲಿ ’ಬಯಸದೇ ಬಂದ ಭಾಗ್ಯ’ವಾಗಿತ್ತು. ಅಲ್ಲಾ, ಬೆಳಿಗ್ಗೆ ತಾನೇ ಚಾರ್ಜ್ ಮಾಡಿದ್ದೆ. ಮಧ್ಯೆ ಮಧ್ಯೆ ಏನೊ ಕಿರುಗುಟ್ಟುತ್ತಿತ್ತು. ಚಾರ್ಜ್ ಇಲ್ಲವೋ ಅಥವಾ ಯಾರಾದರೂ ಅದೇ ಸಮಯದಲ್ಲಿ ನನಗೆ ಫೋನ್ ಮಾಡುತ್ತಿದ್ದರೋ ಗೊತ್ತಿಲ್ಲ. ಮೇಲಾಗಿ, ಇಂತಹ ಉತ್ತಮ ಫೋನ್ ಕಾಲ್ ಬಿಟ್ಟು ಬೇರೆ ಕರೆಯನ್ನು ಸ್ವೀಕರಿಸಲು ನಾನೇನು ದಡ್ಡನೇ?
ಮೊಬೈಲ್ ಮತ್ತೆ ಕಿರುಗುಟ್ಟಿತು. ನಮ್ಮ ಪಕ್ಕದ ಮನೆ ಸಿದ್ದರಾಮ. ಈ ಮನುಷ್ಯನಿಗೆ ಹೊತ್ತು ಗೊತ್ತು ಏನಿಲ್ಲ. ನೆನ್ನೆ ರಾತ್ರಿ ಇದೇ ಸಮಯಕ್ಕೆ ಫೋನ್ ಮಾಡಿ, ಹೇಗೂ ನಿಮ್ಮ ಮನೆಯವರೂ ಯಾರೂ ಇಲ್ಲ, ವಾಕಿಂಗ್ ಬರ್ತೀರೇನೂ ಅಂತ ಕೇಳಿದ್ರು. ಇವತ್ತೂ ಅದೇ ಅಂತ ಕಾಣುತ್ತೆ. ಕರೆ ಸ್ವೀಕರಿಸಲಿಲ್ಲ. ಸುಮ್ಮನಾದೆ. 
ಮತ್ತೆ ಐದು ನಿಮಿಷಕ್ಕೆ ಅವರದೇ ಕರೆ. ಮೊದಲು ಅವರಿಗೆ ವಿಷಯ ತಿಳಿಸಿ, ಫೋನ್ ಆಫ್ ಮಾಡಿ, ಸನ್ಮಾನ ಸಮಾರಂಭಕ್ಕೆ ಯಾವ ಬಟ್ಟೆ ಹಾಕಿಕೊಳ್ಲಬೇಕು ಎಂಬೆಲ್ಲ ವಿಷಯ ಮನದಲ್ಲೇ ಪಟ್ಟಿ ಮಾಡಬೇಕು ಅಂತ ನಿರ್ಧರಿಸಿ, ಕರೆ ಸ್ವೀಕರಿಸಿದೆ.
ಕೂಡಲೆ ’ರ್ರೀ, ಪ್ರಾಣೇಶ್. ಎಲ್ರೀ ಇದ್ದೀರಾ? ನಿಮ್ಮ ಮನೆ ಫೋನ್ ಬೇರೆ ಕೆಟ್ಟ ಹಾಗೆ ಇದೆ. ಮೊಬೈಲ್ ಬಿಜಿ ಇದೆ. ನನಗೂ ಆಗ್ಲಿಂದ ಗುಂಡಿ ಒತ್ತಿ ಒತ್ತಿ ಸಾಕಾಯ್ತು’ ಎಂದು ರೋಸಿದ ದನಿಯಲ್ಲಿ ಪ್ರಶ್ನೆಗಳ ಸುರಿ ಮಳೆಯನ್ನೇ ಸುರಿಸಿದರು. ನಾನು ಸಂಕ್ಷಿಪ್ತವಾಗಿ ಊರಿಗೆ ಹೋಗುತ್ತಿರುವ ವಿಷಯ ತಿಳಿಸಿದೆ. 
ವಿಷಯ ತಿಳಿದು ಆತಂಕದಿಂದ ನುಡಿದರು "ಅಲ್ರೀ, ಮತ್ತೆ ನಿಮ್ಮ ಮನೆಯಿಂದ ಏನೇನೋ ಸದ್ದು ಬರುತ್ತಿತ್ತು. ಏನೂ ಅಂತ ವಿಚಾರಿಸೋದಕ್ಕೇ ನಾನು ಕಾಲ್ ಮಾಡಿದ್ದು. ಈ ನಡುವೆ ಕಳ್ಳರು, ಮೊದಲು ಮನೆ ಫೋನ್ ಲೈನ್ ಕತ್ತರಿಸಿ, ಮೊಬೈಲಿಗೆ ಕಾಲ್ ಮಾಡಿ ಲೈನ್ ಬಿಜಿ ಇಡ್ತಾರಂತೆ. ಮೊದಲೇ ನೀವು ಸಮಾಜ ಸೇವಕರು. ನಿಮ್ಮ ನಂಬರ್ ಊರಿನವರಿಗೆಲ್ಲ ಗೊತ್ತಿರುತ್ತೆ. ಅಂದ ಹಾಗೇ, ನಾನು ನಿಮಗೆ ಫೋನ್ ಮಾಡಿದಾಗ ನಿಮ್ಮ ಲೈನ್ ಕೂಡ ಬಿಜಿ ಇತ್ತು. ಯಾರಾದ್ರೂ ಫೋನ್ ಮಾಡಿದ್ರೇನೂ?"
ಮೊಬೈಲ್ ಯಾವಾಗ ಕೈ ಜಾರಿ ಬಿತ್ತೋ ... ಗೊತ್ತೇ ಆಗಲಿಲ್ಲ ...
ಎರಡು ರಾತ್ರಿ ತಾನೇ. ಅವರಿಗೇನು ಹೇಳಿ ಮನೆ ಕೀಲಿ ಕೊಡೋದು ಅಂತ ಹಾಗೇ ಬಂದೆ. ಅದೇ ತಪ್ಪಾಯ್ತು !
{ಇದು ಸತ್ಯ ಕಥೆ ಅಲ್ಲ .... ಸತ್ಯ ಆಗದೆ ಇರಲಿ ಎಂಬುದೇ ಆಶಯ}

ಮನೆಯವರೆಲ್ಲ ಬೇಸಿಗೆ ರಜಕ್ಕೆ ಊರಿಗೆ ಹೋಗಿದ್ದರು. ನಾನು ಒಬ್ಬನೇ ಮನೆಯಲ್ಲಿ. ಅರ್ಜಂಟ್ ಕೆಲಸದ ಮೇಲೆ ಹುಬ್ಬಳ್ಳಿಗೆ ಹೋಗಬೇಕಾಗಿ ಬಂತು. ಬೇಸಿಗೆ ರಜ ಬೇರೆ. ಟ್ರೈನಿನ ಟಿಕೆಟ್ ಸಿಗಲಿಲ್ಲ. ಬೇರೆ ದಾರಿ ಇಲ್ಲ. ಟೂರಿಸ್ಟ್ ಬಸ್ಸಿಗೆ ಟಿಕೆಟ್ ಬುಕ್ ಮಾಡಿಸಿ ಹೊರಟೆ. ಮಬ್ಬಾದ ಬೆಳಕಿನ ಬಸ್ಸಿನಲ್ಲಿ ಕುಳಿತಿದ್ದೆ. ಒಳ್ಳೇ ಸುಖಾಸನ. ಸ್ವಲ್ಪ ಹೊತ್ತಿಗೆ ಹೊರಡುತ್ತದೆ. ಬೊಂಬಾಟ್ ನಿದ್ದೆ ಮಾಡಬಹುದು ಎಂಬೋ ಎಣಿಕೆ. ಹಾಗೇ ಕಣ್ಣು ಮುಚ್ಚಿದೆ. 

ಮೊಬೈಲು ಕಿರುಗುಟ್ಟಿತು. 

ಮೊದಲ ವಿಘ್ನ ಎಂದುಕೊಳ್ಳುತ್ತ ಕರೆ ಸ್ವೀಕರಿಸಿದೆ. ಆ ಕಡೆ ವ್ಯಕ್ತಿಯ ದನಿ ಪರಿಚಯವಂತೂ ಇರಲಿಲ್ಲ. ತಮ್ಮ ಪರಿಚಯ ಹೇಳಿಕೊಂಡು, ಇಷ್ಟು ತಡವಾಗಿ ಕರೆ ಮಾಡಿದ್ದಕ್ಕೆ ಕ್ಶಮೆ ಕೇಳಿ, ನನಗೆ ಅಭಿನಂದನೆ ತಿಳಿಸಿದರು. ಯಾಕೆ, ಏನು, ಎತ್ತ ಎಂಬುದರ ಅರಿವೇ ಆಗಲಿಲ್ಲ. ಕುತೂಹಲದಿಂದ ವಿಷಯ ಏನು ಎಂದು ಕೇಳಿದೆ. ಅರ್ಧ ಘಂಟೆ ಹೇಳುತ್ತಾ ಹೋದರು. ಸಾರಾಂಶ ಇಷ್ಟೇ. ಯಾವುದೋ ಸ್ವಯಂ ಸೇವಕ ಸಂಘದವರು ನನ್ನನ್ನು "ವರ್ಷದ ಸಮಾಜ ಸೇವಕ" ಎಂದು ಗುರುತಿಸಿ ಸನ್ಮಾನ ಮಾಡಲು ನನ್ನ ಒಪ್ಪಿಗೆ ಕೇಳಿದರು. ಸಿಕ್ಕಾಪಟ್ಟೆ ಆಶ್ಚರ್ಯ ಮತ್ತು ಸಂತೋಷವಾದರೂ ತೋರ್ಪಡಿಸದೆ ಆ ದಿನ ಸ್ವಲ್ಪ ಬಿಜಿ ಇದ್ದೀನಿ ಆದರೂ ಖಂಡಿತ ಬರುತ್ತೀನಿ ಎಂದು ಲೈಟಾಗಿ ಹಿರಿಯತನ ತೋರಿ, ಮೊಬೈಲ್ ಆರಿಸಿದೆ.

ಲೇಖನ ವರ್ಗ (Category): 

ಕಥೆ ಕತ್ತಲ್ ರಾತ್ರಿ

ಕಥೆ

ಕತ್ತಲ್ ರಾತ್ರಿ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಪುಟವನ್ನು ರದ್ದು ಮಾಡಲಾಗಿದೆ.

ಈ ಪುಟವನ್ನು ರದ್ದು ಮಾಡಲಾಗಿದೆ. ದಯಮಾಡಿ ಇದೇ ಬರಹವನ್ನು ಬೇರೊಂದು ಪುಟದಲ್ಲಿ ಬರೆಯಲಾಗಿದೆ. ದಯಮಾಡಿ ತೊಂದರೆಯಾದುದಕ್ಕೆ ಸಹಕರಿಸಿ.

ಮಾನ್ವಿ.,,, ,,, ,,, ,, ,,, ,,, ,, ,,,, ,,, ,,,, ,,, ,,, ,,, ,, ,,, ,,,, ,,,,  ,, ,, ,,,, ,,,, ,,,, ,,,,, ,,, ,, ,,,,,, ,,,,,,,,, ,,,,,,,, ,,,,,,, ,,,,,, ,,,,, ,,,, ,,, ,,,, ,

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಸತ್ತವರ ಹಾದಿ

field_vote: 
Average: 5 (5 votes)
To prevent automated spam submissions leave this field empty.

ಮೈಕೆಲ್ ಓಬಿಯ ಆಸೆಗಳೆಲ್ಲಾ ಅವನು ನಿರೀಕ್ಷಿಸಿದ್ದಕ್ಕಿಂತ ಬಹಳಷ್ಟು ಮೊದಲೇ ಈಡೇರಿದ್ದವು. ಓಬಿ 1949 ಜನೇವರಿ ತಿಂಗಳಲ್ಲಿ ಎನ್ಡುಮೆ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾದ್ಯಯನಾಗಿ ನೇಮಕಗೊಂಡ.  ಆ ಶಾಲೆ ಬಹಳ ದಿವಸದಿಂದ ಹಿಂದುಳಿದ ಶಾಲೆಯಾಗಿಯೇ ಉಳಿದಿದ್ದರಿಂದ ಅದರ ಮಿಶಿನ್ ಅಧಿಕಾರಿಗಳು ಅದನ್ನು ನಡೆಸಲು ಒಬ್ಬ ದಕ್ಷ, ಪ್ರಾಮಾಣಿಕ, ಶಿಸ್ತಿನ ತರುಣ ಶಿಕ್ಷಕನನ್ನು ಕಳಿಸಲು ನಿರ್ಧರಿಸಿದ್ದರು.  ಓಬಿ ಅತ್ಯಂತ ಉತ್ಸಾಹದಿಂದ ಈ ಜವಾಬ್ದಾರಿಯನ್ನು ಒಪ್ಪಿಕೊಂಡ. ಅವನಲ್ಲಿ  ಒಂದು ಶಾಲೆಯನ್ನು ನಡೆಸಲು ಬೇಕಾಗುವ ಎಲ್ಲ ಅರ್ಹತೆಗಳು ಇದ್ದವು. ಮೇಲಾಗಿ ಅವನು ತನ್ನ ದೂರದೃಷ್ಟಿ, ಚಾಣಾಕ್ಷತನ ಮತ್ತು ಕಾರ್ಯತಂತ್ರಗಳಿಗೆ ಹೆಸರುವಾಸಿಯಾಗಿದ್ದ. ಇದೀಗ ಅವನ್ನೆಲ್ಲ ಜಾರಿಗೆ ತರಲು ಒಂದು ಸುವರ್ಣಾವಕಾಶ ತಾನೇ ತಾನಾಗಿ ಒದಗಿ ಬಂದಿತ್ತು.

ಲೇಖನ ವರ್ಗ (Category): 

ಯಾರು ಹಿತವರು ನಿಮಗೆ ಈ ಮೂವರೊಳಗೆ...............?

field_vote: 
No votes yet
To prevent automated spam submissions leave this field empty.
ಯಾರು ಹಿತವರು ನಿಮಗೆ ಈ ಮೂವರೊಳಗೆ..............?  
    
ಲೇಖನ ವರ್ಗ (Category): 

ಯಾರು...? ನಾನೇ...?

field_vote: 
Average: 4.7 (3 votes)
To prevent automated spam submissions leave this field empty.

ರಣ ಬಿಸಿಲಿನ ಅಪರಾಹ್ನ 12 ಘಂಟೆ 100 ಅಡಿ ಅಗಲದ ಸ್ವಚ್ಛಂದವಾದ ನಾಲ್ಕು ರಸ್ತೆಗಳು ಸಂಗಮವಾಗುತ್ತಿತ್ತು, ಸಂಚಾರ ಅಸ್ತವ್ಯಸ್ತವಿಲ್ಲದೆ ಸಂಚಾರದಟ್ಟಣೆಯು ಇಲ್ಲದೆ ವಾಹನಗಳು ಸಾಗುತ್ತಿತ್ತು. ನಾಗರೀಕರು ನೋಡಿಕೊಂಡು ರಸ್ತೆಗಳನ್ನು ದಾಟುತ್ತಿದ್ದರು. ಜಂಕ್ಷನ್ ಸುತ್ತಲು ಪ್ರದರ್ಶನ ಮಳಿಗೆ, ಹೋಟೆಲ್ ಗಳು, ಅಂಗಡಿ ಮುಗ್ಗಟ್ಟುಗಳು ತಮ್ಮ ಎಂದಿನ ಕಾರ್ಯಗಳಲ್ಲಿ ಮಗ್ನಗೊಂಡಿದ್ದವು.

ಲೇಖನ ವರ್ಗ (Category): 

ನಿಸ್ಸಾಹಾಯಕ ಗ೦ಡನ 20ನೇ ವರ್ಷದ ವಿವಾಹ ವಾರ್ಷಿಕೊತ್ಸವ.............!!!!!!!! (ಹಾಸ್ಯ ಲೇಖನ)

field_vote: 
Average: 4.7 (3 votes)
To prevent automated spam submissions leave this field empty.

ಹೆ೦ಡತಿ ಮಧ್ಯರಾತ್ರಿಯಲ್ಲಿ ಎದ್ದುನೂಡಿದಾಗ ಪಕ್ಕದಲ್ಲಿ ಗ೦ಡನಿರಲ್ಲಿಲ್ಲ.......ಅವಳು ನಿಧಾನವಾಗಿ ಮನೆಯ ಮೆಟ್ಟಲುಗಳನ್ನು ಇಳಿದು ತನ್ನ ಪತಿರಾಯನನ್ನು ಹುಡುಕಿಕೊ೦ಡು ಬ೦ದಳು.............. 

ಆಗ ಅವಳು ಅವನನ್ನು dining table ಮೇಲೆ coffee cup ನೊ೦ದಿಗೆ ಧೀರ್ಗಾಲೊಚನೆ ಯಲ್ಲಿ ಇರುವ೦ತೆ ಕ೦ಡನು...... 

ಆಗ ಅವಳು ಅವನು ಬಳಿಬ೦ದು.......... 

ಹೆ೦ಡತಿ :- ಇಲ್ಲೆಕೆ ಇಸ್ಟೊತ್ತಲ್ಲಿ ಕುಳಿತ್ತಿದ್ದಿರಾ.....? 

ಗ೦ಡ :- {ನಿದಾನವಾಗಿ ಅವಳತ್ತ ಮುಖ ಮಾಡಿ} ನಿನಗೆ ನೆನಪಿದೆಯೆ...ಇ೦ದಿಗೆ ೨೦ ವರ್ಷಗಳ ಹಿ೦ದೆ ನಮ್ಮಿಬ್ಬರ ಮಧ್ಹ್ಯೆ ಪ್ರೇಮ ವಾದಗ ನಿನಗಿನ್ನು 18 ವರ್ಷ.......? 

ಲೇಖನ ವರ್ಗ (Category): 

ಹಣೆ ಬರಹ

field_vote: 
Average: 3 (1 vote)
To prevent automated spam submissions leave this field empty.


 

"ರೀ ಇವತ್ತು ಹೊರಗೆಲ್ಲೂ ಹೋಗಬೇಡಿ, ನಿಮ್ಮ ಭವಿಷ್ಯದಲ್ಲಿ ಅವಗಡ ಅಂತ ಬರೆದಿದೆ" ಎಂದಳು ಮಡದಿ ಪೇಪರಿನಲ್ಲಿ ಪತಿರಾಯರ ಭವಿಷ್ಯ ನೋಡುತ್ತಾ."ಸುಮ್ಮನೆ ಅದೆಲ್ಲ, ನನಗದರಲ್ಲೆಲ್ಲಾ ನಂಬಿಕೆಯಿಲ್ಲ ಬಿಡು. ಏನಿಲ್ಲ ಅವರಿಗೆ ದುಡ್ಡು ಸಿಗತ್ತೆ ಅಂತ ಏನೆಲ್ಲಾ ಬರೀತಾರೆ ಅಷ್ಟೇ, ಹಾಗೆಲ್ಲಾ ಆಗುವದಿದ್ದರೆ ಆಗಿಯೇ ಬಿಡತ್ತೆ ಹಣೆ ಬರಹ ಅಳಿಸುವರ್ಯಾರು?" ಎಂದರು ಪತಿರಾಯ ರಾಮ ರಾಯರು.

"ಆದರೂ ಜಾಗೃತೆಯಾಗಿ ಇರೋದ್ರಲ್ಲಿ ನಿಮ್ದೇನು ಹೋಗುತ್ತೆ?" ಸರಿ ಕಣೇ ಹಾಗೇ ಇರ್ತೀನಿ ಸಮಾಧಾನವಾಯ್ತಾ?"
ರಾಯರು ಹೆಂಡತಿಯ ಸಮಾಧಾನಕ್ಕಾಗಿ ಸ್ಕೂಟರ್ ಸರ್ವೀಸ್ಸಿಗೆ ಕೊಟ್ಟರು. ಆಫ಼ೀಸಿಗೆ ಸುಳ್ಳು ಹೇಳಿ ರಜೆ ಹಾಕಿದರು.

ಮನೆಯಲ್ಲಿಯೇ ಟೈಮ್ ಪಾಸ್ ಮಾಡಿದ್ದರು.
ಸಂಜೆ ಏಳೂವರೆಗೆ ಸರ್ವೀಸ್ಸಿನವನಿಂದ ಫೋನ್ ಬಂತು

ಲೇಖನ ವರ್ಗ (Category): 

ಲಂಘನಂ ಪರಮೌಷಧಂ

field_vote: 
Average: 3 (1 vote)
To prevent automated spam submissions leave this field empty.

“ಲಂಘನಂ ಪರಮೌಷಧಂ”  ಈ ವಾಕ್ಯವನ್ನು ನಾವು ಆಗಾಗ ಬಳಸುತ್ತಿರುತ್ತೇವೆ.  ಇದರ ಮೇಲೆ ಒಂದು ಕಥೆ ಇದೆ ಕೇಳುವಿರಿ ತಾನೆ?

ಲೇಖನ ವರ್ಗ (Category): 

ಬಹುಮಾನ

field_vote: 
No votes yet
To prevent automated spam submissions leave this field empty.

    ಎಲ್ಲಿಂದಲೋ ಸುಮಧುರ ಗಾಯನ ಅಲೆ ಅಲೆಯಾಗಿ ತೇಲಿ ಬಂದು ನನ್ನನ್ನು ನಸುಕಿನ ಸವಿ ನಿದ್ದೆಯಿಂದ ಮೈದಡವಿ ಎಬ್ಬಿಸಿದಂತಾಯಿತು. ’ಓ....ಎಂಥಾ ಇಂಪಾದ ಸ್ವರ’ ಎಂದು ಅದರ ಸವಿಯನ್ನು ಕಣ್ಮುಚ್ಚಿ ಆಸ್ವಾದಿಸುತ್ತಾ, ಇಷ್ಟು ದಿನವಿರದ ಈ ಸಂಗೀತ ಎಲ್ಲಿಂದ ತೇಲಿ ಬರುತ್ತಿದೆ ಎಂದು ಅಚ್ಚರಿಪಡುತ್ತಾ, ಗಾಯನ ಸಂಪೂರ್ಣಗೊಂಡ ನಂತರ ನಿಧಾನವಾಗಿ ಹಾಸಿಗೆಯಿಂದೆದ್ದೆ. ನನಗೆ ಆ ದಿನವೆಲ್ಲಾ ಉಲ್ಲಾಸಕರವೆನ್ನಿಸಿತು. ಮುಂದಿನ ನಾಲ್ಕೈದು ದಿನಗಳೂ ಸವಿಗಾನದ ಸುಪ್ರಭಾತ ನನ್ನದಾಗತೊಡಗಿದಾಗ ಈ ಹಾಡುಗಾರ್ತಿ ಯಾರಿರಬಹುದು ಎಂಬ ಕುತೂಹಲ ಜೊತೆಗೆ ಆಕೆಯನ್ನು ಕಾಣುವ ಹಂಬಲ ಮೆಲ್ಲಗೆ ಮೊಳಕೆಯೊಡೆಯಿತು.

ಲೇಖನ ವರ್ಗ (Category): 

ಪ್ರೀತಿಯ ಅಂತ್ಯ

field_vote: 
Average: 4.8 (5 votes)
To prevent automated spam submissions leave this field empty.

ಒಂದು ಸುಂದರವಾದ ದ್ವೀಪ ಇತ್ತು. ಆ ದ್ವೀಪದಲ್ಲಿ ಎಲ್ಲಾ ಭಾವನೆಗಳೂ ಸಾಮರಸ್ಯದಿಂದ ಸುಖವಾಗಿ ಬಾಳುತ್ತಿದ್ದವು. ಒಮ್ಮೆ ದೊಡ್ಡ ಪ್ರವಾಹ ಬಂದು ದ್ವೀಪ ಮುಳುಗುವ ಸ್ಥಿತಿಗೆ ಬಂತು. ಎಲ್ಲಾ ಭಾವನೆಗಳೂ ಜೀವಭಯದಿಂದ ನಡುಗುತ್ತಿದ್ದವು. ಆಗ ಪ್ರೀತಿ ಒಂದು ದೋಣಿಯನ್ನು ಸಿದ್ಧಪಡಿಸಿತು. ಜೀವ ಉಳಿಸಿಕೊಳ್ಳಲು ಎಲ್ಲಾ ಭಾವನೆಗಳೂ ಗಡಿಬಿಡಿಯಿಂದ ದೋಣಿ ಏರಿದವು. ಒಂದು ಭಾವನೆ ಮಾತ್ರ ದೋಣಿಯಲ್ಲಿ ಕಾಣಲಿಲ್ಲ. ಪ್ರೀತಿ ದೋಣಿಯಿಳಿದು ಬಂದು ನೋಡಿದರೆ ದುರಭಿಮಾನ ಒಂದುಕಡೆ ಮುಖ ಊದಿಸಿಕೊಂಡು ಕುಳಿತಿತ್ತು. ಪ್ರೀತಿ ಅದನ್ನು ಓಲೈಸಿ ದೋಣಿ ಹತ್ತಲು ಹೇಳಿತು. ದುರಭಿಮಾನ ಹತ್ತಲಿಲ್ಲ. ಪ್ರೀತಿ ಪರಿಪರಿಯಾಗಿ ಕೇಳಿಕೊಂಡರೂ ದುರಭಿಮಾನ ಜಗ್ಗಲಿಲ್ಲ. ಪ್ರವಾಹ ಏರುತ್ತಲೇ ಇತ್ತು.

ಲೇಖನ ವರ್ಗ (Category): 

ಎನ್ ಕೌಂಟರ್

field_vote: 
Average: 5 (6 votes)
To prevent automated spam submissions leave this field empty.

ಭಾನುವಾರ ಬೆಳ್ಳಂಬೆಳಿಗ್ಗೆಯೇ ಮೊಬೈಲ್ ಹೊಡಕೊಳ್ಳತೊಡಗಿದಾಗ ಹಿಂದಿನ ದಿನದ ಪಾರ್ಟಿಯ ಹ್ಯಾಂಗೋವರಿನಲ್ಲಿನ್ನೂ ಜೂಗರಿಸುತ್ತಿದ್ದ ನಾನು, ಅಂತೂ ಇಂತೂ ಸಾವರಿಸಿಕೊಂಡು ಎದ್ದು ಕೂರುವ ಹೊತ್ತಿಗೆ ಕರೆ ನಿಂತೇ ಹೋಯಿತು. ಪಾತಾಳಕ್ಕೆಲ್ಲೋ ಜಾರಿಹೋಗುತ್ತಿದ್ದೇನೆನಿಸಿ ಮತ್ತೆ ಮುದುರಿ ಮಲಗಿಕೊಂಡೆ. ಬೆಳಗಿನ ವಾಕಿಂಗ್‌ಗೆ ಹೋಗಿದ್ದ ಹೆಂಡತಿ ರತ್ನ ಬೀಗ ತೆಗೆದು ಒಳಬರುವುದಕ್ಕೂ ಮತ್ತೆ ಮೊಬೈಲ್ ರಿಂಗಾಗುವುದಕ್ಕೂ ಸರಿ ಹೋಯ್ತು. ಅವಳೇ ಮೊಬೈಲೆತ್ತಿಕೊಂಡು ‘ಇಲ್ಲ, ಅವರಿನ್ನೂ ಮಲಗಿದ್ದಾರೆ’.... .  ‘ಅರ್ಜೆಂಟಾ? ಎದ್ದ ಮೇಲೆ ಇದೇ ನಂಬರಿಗೆ ಫೋನ್ ಮಾಡಲು ಹೇಳುತ್ತೇನೆ’. .. ‘ಸರಿ., ಎಬ್ಬಿಸಿ ಫೋನು ಅವರಿಗೇ ಕೊಡುತ್ತೇನೆ’ ಅಂದವಳೇ ನನ್ನ ಭುಜ ಅಲುಗಿಸಿ ‘ನೋಡಿ, ಯಾರೋ ಏನೋ ತುಂಬಾ ಅರ್ಜೆಂಟು ಅಂತಿದಾರೆ. ಏನಾದ್ರೂ ಹೇಳ್ಕೊಳ್ಳಿ..’ ಅಂದು ಮೊಬೈಲನ್ನು ನನ್ನ ಕಿವಿಗೆ ಹಿಡಿದಳು. ಸಾವರಿಸಿಕೊಂಡು ನಾನು ‘ಹ. . .ಲೋ..’ ಅಂದ ಕೂಡಲೇ ಆ ಕಡೆಯಿಂದ ‘ಸಾ..ರ್, ..ನಿನ್ನೆ ಸಂಜೆ ಕಾಮ್ರೇಡ್ ಸೂರಿಯವರನ್ನು ಪೋಲೀಸ್ ನಾಯಿಗಳು ಎತ್ತಿಹಾಕಿಕೊಂಡು ಹೋಗಿವೆ.  ನಮಗೆಲ್ಲ ಏನು ಮಾಡಬೇಕೋ ತಿಳೀತಾ ಇಲ್ಲ.’ ಅನ್ನುವ ಅಪರಿಚಿತ ಧ್ವನಿ ಕೇಳಿತು. ‘ಯಾರು? ಯಾರು ಮಾತಾಡ್ತಾ ಇರೋದು?’ ನನ್ನ ಪ್ರಶ್ನೆ ಮುಗಿಯುವ ಮೊದಲೇ ಕರೆ ನಿಂತಿತು. ವಾಸ್ತವದ ಬಿಸಿ ಮುಟ್ಟಿದ್ದೇ ತಡ, ಹ್ಯಾಂಗೋವರು ತಕ್ಷಣ ಇಳಿದು ಹೋಗಿ ಧಿಗ್ಗನೆದ್ದು ಕೂತೆ. ಸೂರಿ ಯಾವತ್ತೋ ಅರೆಸ್ಟ್ ಆಗಬೇಕಾಗಿದ್ದವನು ಈಗ ಸಿಕ್ಕಿಬಿದ್ದಿದ್ದಾನೆ. ಆದರೂ ಅವನ ಬಿಡುಗಡೆಯ ಪ್ರಯತ್ನ ನನ್ನಂಥವನಿಂದ ಸಾಧ್ಯವಾ? ಬೇರೆ ಯಾರ ಸಹಾಯ ಈಗ ಅತ್ಯಗತ್ಯ ಅಂತ ಯೋಚಿಸುತ್ತಲೇ ಬೇಗ ಬ್ರಷ್ ಮಾಡಿಕೊಂಡು ಕಾಫಿ ಕುಡಿಯುತ್ತಲೇ ಗೆಳೆಯ ಪತ್ರಕರ್ತ ದಿವಾಕರನಿಗೆ ಫೋನ್ ಮಾಡಿದೆ. ‘ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗೆ ಇದ್ದಾರೆ ಅಥವ ಈ ತಕ್ಷಣ ತಮ್ಮ ಕರೆಗೆ ಅವರು ಪ್ರತಿಕ್ರಯಿಸುತ್ತಿಲ್ಲ’ ಅನ್ನುವ ಉತ್ತರ ಬಂತು. ಸೀದಾ ಪ್ರೆಸ್ ಕ್ಲಬ್ಬಿಗೆ ಹೋಗಿ ಯಾರನ್ನಾದರೂ ಕೇಳೋದು ವಾಸಿ ಅಂತ ಅನ್ನಿಸಿ ನಿಂತ ನಿಲುವಿನಲ್ಲೇ ಸ್ಕೂಟರು ಹತ್ತಿದೆ.  

ಲೇಖನ ವರ್ಗ (Category): 

ಅಡ್ಡಬಂದವಳು

field_vote: 
Average: 5 (2 votes)
To prevent automated spam submissions leave this field empty.

       ಆಕೆ ಇಂದು ಎರಡನೇ ಬಾರಿಗೆ ದಾರಿಗೆ ಅಡ್ಡಬಂದಳು. ಅಂದು ’ಅಂಕಲ್’ ಎಂದು ಸಂಬೋಧಿಸಿದ್ದಳು , "ಹೂವು ಬೇಕಾ?" ಎಂದು ಕೇಳಿದ್ದಳು, ನಡುಗುವ ಧ್ವನಿಯಲ್ಲಿ. ಅದುರುವ ಕೈ ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ನಿಂದ ಒಂದು ಮೊಳದಷ್ಟು ಕನಕಾಂಬರ ಹೂವಿನ ಮಾಲೆಯನ್ನು ಮೇಲಕ್ಕೆಳೆದಿತ್ತು. ನನ್ನ ನೊಡಿ ನಕ್ಕವು ಹೂಗಳು ಆಸೆಯಿಂದಲೋ? ಅಣಕಿಸಲೋ? ನಾನು ದೇವರಿಂದಲೂ ದೂರ, ಮುಡಿಯಿಂದಲೂ ದೂರ. ನನಗೇಕೆ ಹೂಮಾಲೆ? "ಬೇಡಮ್ಮಾ" ಎಂದೆ, ನಿಲ್ಲದೇ ಮುಂದೆ ನಡೆದೆ. ಆಕೆ ಅದುರುವ ಕೈಗಳಿಂದ ಒಂದು ಮೊಳ ಮೇಲಕ್ಕೆಳೆದಿದ್ದ ಹೂಮಾಲೆಯನ್ನು ಪುನಃ ಪ್ಲಾಸ್ಟಿಕ್ಕಿನೊಳಗೆ ಸೇರಿಸಿದಳು, ನಡೆದಳು, ಮುಂದಿನ ಗಿರಾಕಿಯನ್ನು ಹುಡುಕುತ್ತ.
       ಆಕೆ ನಿಜವಾಗಿಯೂ ಹೂವಾಡಗಿತ್ತಿಯೇ?

ಲೇಖನ ವರ್ಗ (Category): 

ಹೆಸರಿಲ್ಲದವಳು ; ಅವನ ಉಸಿರಾದವಳು.

field_vote: 
Average: 3.7 (3 votes)
To prevent automated spam submissions leave this field empty.

ಸದ್ದಿಲ್ಲದೆ ನಡೆದು ಹೋಗಿತ್ತು. ಅಲ್ಲಿ, ಸಮಾರಂಭದ ಗೌಜಿಯಿತ್ತು. ಶುಭಸಮಯ ರಂಗುಚೆಲ್ಲಿತ್ತು. ಓಲಗದ ಗದ್ದಲ, ಗೆಲುವಿತ್ತು. ಸುಗಂಧ ಸುವಾಸನೆ ಎಲ್ಲೆಡೆ ಹರಡಿತ್ತು. ನಗೆಮಲ್ಲಿಗೆ ಪರಿಮಳ ಸೂಸಿತ್ತು. ಕಣ್ಣೀರು ಕೆಲವು ಕಣ್ಣ ತೋಯಿಸಿತ್ತು. ಮಂಗಳ ಮಂತ್ರಗಳೂ ಮೊಳಗಿತ್ತು. ಮಧುರ ಮನಸೆರಡು ಒಂದಾಗಿತ್ತು. ಅವನ ಮದುವೆ ಸುದ್ದಿಯಿಲ್ಲದೆ ನಡೆದು ಹೋಗಿತ್ತು. ಹುಣ್ಣಿಮೆಯ ಇರುಳಂತೆ ಕಳೆದುಹೋಗಿತ್ತು, ವಾಸ್ತವವೂ ಮರೆತಿತ್ತು.

ಮರೆತ ನೆನಪು ದಿಬ್ಬಣ ಹೊರಟಿತು, ಸಿಂಗಾರವಿಲ್ಲದ ಮದುವಣಗಿತ್ತಿಯೊಂದಿಗೆ. ನೆನಪೊಂದೇ ಅಲ್ಲಿ ಅವಳ ಜೊತೆ. ನೂರೊಂದು ಕನಸ ಬಂಡಿ ಏರಿದವಳು ಏಕಾಂಗಿಯಾಗಿ ಉಳಿದು ಹೋದಳು. ಸಿಹಿ ತಿಳಿಯುವ ಮೊದಲೇ ಕಹಿ ಉಂಡಿದ್ದಳು ಅವಳು.

ಲೇಖನ ವರ್ಗ (Category): 

ಅಮಾವಾಸ್ಯೆಯ ಒಂದು ರಾತ್ರಿ !

field_vote: 
Average: 3.5 (8 votes)
To prevent automated spam submissions leave this field empty.
ೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿತು ಅಂತಲೇ ಅರ್ಥ. ಹೆಂಡತಿ ಶಾಂತಮ್ಮ ಹೆಸರಿಗೆ ತಕ್ಕ ಹಾಗೇ ಶಾಂತ ಸ್ವಭಾವದವರು. ಗಂಡನಿಗೆ ಎಂದೂ ಎದುರು ಆಡಿದವರಲ್ಲ. ಅದರ ಪ್ರಮೇಯವೇ ಇರಲಿಲ್ಲ ಬಿಡಿ.
ಏನಿದ್ದರೇನು ಮಕ್ಕಳಿಲ್ಲ ಎಂಬ ಕೊರಗು ಅವರಿಗೆ ಇದ್ದೇ ಇತ್ತು. ಮನೆಯ ಕೆಲಸದಾಳು ಊರಿನಲ್ಲಿ ಯಾವಾಗಲೋ ಒಮ್ಮೆ ಈ ಮಾತು ಬಂದಾಗ "ಸದ್ಯ ಒಳ್ಳೇದಾಯ್ತು" ಎಂದಷ್ಟೇ ನುಡಿದು ಸುಮ್ಮನಾಗಿದ್ದ. ಇದಾದ ಎರಡು ದಿನದಲ್ಲೇ ಅವನ ಬಾಯಿ ನಿಂತು, ಏನೇನೋ ಆಗಿ ಕಣ್ಮರೆಯಾಗಿ ಹೋದ. ಈ ವಿಷಯ ಅರಿತು ಜಮೀನ್ದಾರರು ಮಮ್ಮಲ ಮರುಗಿದರು. ಅವನ ಸಂಸಾರಕ್ಕೆ ಒಂದಷ್ಟು ದುಡ್ಡು ಕೊಟ್ಟು "ಸುಮ್ಮನೆ ಜನರ ಬಾಯಿಗೆ ಬೀಳುವುದು ಏಕೆ? ನೀವುಗಳು ಬೇರೆಲ್ಲಾದರೂ ಬದುಕಿಕೊಳ್ಳಿ" ಎಂದು ಬೇರೆ ಊರಿಗೇ ಕಳಿಸಿಕೊಟ್ಟು, ಜೀವನದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಒಳ್ಳೆಯ ಜನರ ಬಗ್ಗೆ ಅಡ್ಡ ಮಾತನಾಡಿದ ಅವನಿಗೆ ಸರಿಯಾದ ಶಾಸ್ತಿಯಾಯಿತು ಎಂದರಿತು ಜನ ಆ ವಿಷಯದ ಬಗ್ಗೆ ಮಾತನಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಪಟ್ಟಣದಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಬಂದಿದ್ದ ಸೋಮನಿಗೆ ಆ ಕೆಲಸ ಸಿಕ್ಕಿತ್ತು. ಸ್ವಲ್ಪ ಓದು ಬರಹ ಬಲ್ಲವನಾದ್ದರಿಂದ ಹೊರಗಿನ ಕೆಲಸಗಳಿಗೂ ಉಪಯೋಗಕ್ಕೆ ಬರುತ್ತಿದ್ದ.
ಹೀಗೆ ಒಂದು ಅಮಾವಾಸ್ಯೆ ರಾತ್ರಿ ಪರ ಊರಿನಲ್ಲೇನೋ ಕೆಲಸ ಮುಗಿಸಿಕೊಂಡು ತನ್ನೂರಿಗೆ ವಾಪಸ್ಸು ಬರುತ್ತಿದ್ದ ಸೋಮ. ಬಹಳ ತಡವಾಗಿತ್ತು. ಗ್ರಹಚಾರಕ್ಕೆ, ಮಾರ್ಗ ಮಧ್ಯದಲ್ಲಿ ಗಾಡಿ ಸುಮ್ಮನೆ ಹಾಗೇ ಕೆಟ್ಟು ನಿಂತಿತು. ಮೊನ್ನೆ ತಾನೇ ರಿಪೇರಿಯಾಗಿ ಬಂದಿದೆ. ಟ್ಯಾಂಕಿನಲ್ಲಿ ಎಣ್ಣೆ ಇದ್ದರೂ ಇದ್ಯಾಕೆ ಕೆಡ್ತು ಎಂದು ಯೋಚಿಸತೊಡಗಿದ ಸೋಮ. ಓಬೀರಾಯನ ಕಾಲದ ಈ ಗಾಡಿ ಬಿಟ್ಟು ಬೇರೆ ಗಾಡಿ ಕೊಳ್ಳಬೇಕು ಅನ್ನೋ ಯೋಚನೆ ಬಹಳ ದಿನದಿಂದ ಇದ್ದಿದ್ದು, ಈಗ ಬಲವಾಯ್ತು.
ಪಟ್ಟಣದ ಹಾದಿಯ ರೋಡಿನಲ್ಲಿ ಹೀಗಾಗಿದ್ದಿದ್ದರೆ ಬರುವ ಯಾವುದಾದರೂ ಗಾಡಿಯವರನ್ನು ಬೇಡಿ ಹೇಗೋ ಮನೆ ಸೇರಿಕೊಳ್ಳಬಹುದಿತ್ತು. ಇದೋ ಎರಡು ಊರಿನ ಮಧ್ಯೆಯ ಕಚ್ಚಾ ರಸ್ತೆ. ಗಾಡಿ ನೂಕಿಕೊಂಡೇ ಸ್ವಲ್ಪ ದೂರ ಹೋದ ಸೋಮ. ಆ ಕಡೆ ಸ್ವಲ್ಪ ದೂರದಲ್ಲೊಂದು ಕಾರು !! ಬೆಳಿಗ್ಗೆ ನರಿ ಮುಖ ನೋಡಿರಬೇಕು ನಾನು ಎಂದುಕೊಳ್ಳುತ್ತ ಸ್ವಲ್ಪ ಹತ್ತಿರ ಹೋದರೆ ಅದು ಜಮೀನ್ದಾರರ ಕಾರು ಎಂದು ಅರಿವಾಯ್ತು. 
ಅದೂ ಸರಿಯೇ ಅನ್ನಿ. ಇಂತಹ ಕಾರು ಅವರ ಬಳಿ ಅಲ್ಲದೇ ಇನ್ಯಾರ ಬಳಿ ಇರುತ್ತೆ ಈ ಊರಿನಲ್ಲಿ? ಈ ಕೆಟ್ಟಿರೋ ಗಾಡಿ ಇಲ್ಲೇ ಹಾಕಿ ಅವರೊಂದಿಗೇ ಮನೆಗೆ ಹೋದರಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಥಟ್ಟನೆ ಮನಕೆ ಬಂದ ಆಲೋಚನೆ ಅವನನ್ನು ಅಲ್ಲೇ ನಿಲ್ಲುವಂತೆ ಮಾಡಿತು.
ದಿನವೂ ಒಂಬತ್ತಕ್ಕೆಲ್ಲ ಮಲಗೋ ಧಣಿ, ನಮ್ ಜಾಮೀನ್ದಾರರಿಗೆ ಎರಡು ಊರಿನ ಮಧ್ಯೆಯ ಈ ರಸ್ತೆಯಲ್ಲಿ ಅದೂ ಈ ಸರಿರಾತ್ರಿಯಲ್ಲೇನು ಕೆಲಸ ???
ತನ್ನ ಗಾಡಿಯನ್ನು ಅಲ್ಲೇ ಪೊದೆಯಲ್ಲಿ ತೂರಿಸಿ ಮೆಲ್ಲಗೆ ಕಾರಿನ ಬಳಿ ನೆಡೆದ ಸೋಮ. ಆಕಡೆ ಈ ಕಡೆ ನೋಡಿ ಯಾರೂ ಇಲ್ಲವೆಂದು ಖಾತ್ರಿಪಡಿಸಿಕೊಂಡು ಕಾರಿನ ಕಿಟಕಿಯಲ್ಲಿ ಬಗ್ಗಿ ನೋಡಿದ. ಮೊದಲೇ ಕತ್ತಲು, ಏನು ಕಂಡೀತು? ತಾನು ’ಇರಲಿ’ ಎಂದು ತಂದಿದ್ದ ಸಣ್ಣ ಟಾರ್ಚಿನ ಬೆಳಕಿನಲ್ಲಿ ನೋಡಿದಾಗ ಕಂಡ ದೃಶ್ಯ ಅವನನ್ನು ಬೆಚ್ಚಿ ಬೀಳಿಸಿತು. ಸೀಟಿನ ಮೇಲೆ ಸಿಗರೇಟಿನ ಪ್ಯಾಕೆಟ್ !!
ಯಜಮಾನರು ಸಿಗರೇಟ್ ಸೇದೋದನ್ನ ನಾನೆಂದೂ ಕಂಡಿಲ್ಲ ! ಇದೇನು ಹೊಸ ಅವತಾರ? ಅಥವಾ ಅವರ ಕಾರನ್ನು ಆ ಕೆಂಪು ಕಣ್ಣಿನ ಡ್ರೈವರ್ ಏನಾದ್ರೂ ತಂದಿದ್ದಾನಾ? ಕಾರಿನಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ಕಾರಿನ ಇನ್ನೊಂದು ಬದಿ ಬಂದು ನೋಡಿದಾಗ ಸಣ್ಣ ಕಾಲುದಾರಿ ಗೋಚರಿಸಿತು. ಕಾರನ್ನು ಇಲ್ಲಿ ನಿಲ್ಲಿಸಿ ಈ ಕಡೆ ನೆಡೆದುಕೊಂಡು ಹೋಗಿರಬಹುದು ಎಂದು ಅನ್ನಿಸಿ, ಅದೇ ದಾರಿಯಲ್ಲಿ ತಾನೂ ನೆಡೆದ ಸೋಮ. 
ಶಬ್ದ ಬರದಂತೆ ಹೆಜ್ಜೆ ಹಾಕುತ್ತ ಸ್ವಲ್ಪ ದೂರ ನೆಡೆದಂತೆ ಯಾರೋ ಇಬ್ಬರು ಮಾತನಾಡುತ್ತ ನಿಂತಿದ್ದಂತೆ ಕಂಡಿತು. ಗಕ್ಕನೆ ಹಾಗೇ ಮರಕ್ಕೆ ಒರಗಿ ನಿಂತ. ಮರದ ಮೇಲೆ ಸದ್ದಾಯ್ತು. ಕಾಲ ಕೆಳಗಿನ ಎಲೆ ಕೂಡ ಸದ್ದಾಯಿತು. ಆ ಇಬ್ಬರೂ ತಿರುಗಿ ನೋಡಿದರು. ಸ್ವಲ್ಪ ಹೊತ್ತು ಹಾಗೇ ನೋಡುತ್ತಿದ್ದವರು ಏನೂ ಇಲ್ಲ ಎನ್ನಿಸಿತೋ ಏನೋ ಇಬ್ಬರೂ ಹೊರಟರು. ಸ್ವಲ್ಪ ದೂರ ಹೋಗುತ್ತಲೇ ಸೋಮನೂ ಅವರನ್ನು ಹಿಂಬಾಲಿಸಿದ. 
ಮುಂದೆ ಹೋಗುತ್ತಿದ್ದ ಇಬ್ಬರು, ಒಂದು ಪಾಳು ಬಿದ್ದ ಮನೆಯ ಮುಂದೆ ನಿಂತರು. ’ಭೂತ ಬಂಗಲೆ’ ಅದೂ ಇದೂ ಅಂತೆಲ್ಲ ಈ ಮನೆಯ ಬಗ್ಗೆ ಜನರು ಆಡಿಕೊಳ್ಳುತ್ತಿದರೂ ಸೋಮ ಅದನ್ನು ನಂಬಿರಲಿಲ್ಲ. ಮೊದಲೇ ಭೂತ-ಪ್ರೇತಗಳ ಬಗ್ಗೆ ಅವನಿಗೆ ನಂಬಿಕೆ ಇಲ್ಲ. ತನ್ನ ನಂಬಿಕೆ ಈಗ ನಿಜ ಅನ್ನಿಸಿತು ಸೋಮನಿಗೆ. ಭೂತದ ಹೆಸರಿನಲ್ಲಿ ಮನುಷ್ಯರು ಮಾಡುತ್ತಿರುವ ಮೋಸ ಇರಬೇಕು. ವಿಷಯ ತಿಳಿದುಕೊಂಡು ಜಮೀನ್ದಾರರಿಗೆ ನಾಳೇನೇ ಒಪ್ಪಿಸಬೇಕು.
ಆ ಇಬ್ಬರು, ಭೂತ ಬಂಗಲೆಯ ಬಾಗಿಲು ತೆರೆದುಕೊಂಡು ಹೋದರು. ಹಿಂದೆಯೇ ಬಾಗಿಲೂ ಮುಚ್ಚಿಕೊಂಡಿತು. ಸೋಮ ಸ್ವಲ್ಪ ಹೊತ್ತು ತಡೆದು ತಾನೂ ಆ ಮನೆಯ ಕಡೆ ನೆಡೆದ. ಬಾಗಿಲ ಬಳಿ ಬಂದು ನಿಂತ. ಮೆಲ್ಲಗೆ ಬಾಗಿಲು ನೂಕಿದ ! ಚಿಲುಕ ಹಾಕಿರಲಿಲ್ಲ !! ಕಿರ್ ಎಂದು ಬಾಗಿಲು ತೆರೆದುಕೊಂಡಿತು. ಥತ್! ಕೆಲಸ ಕೆಟ್ಟಿತು ... ಶಬ್ದ ಆಗಬಾರದು ಅಂದುಕೊಂಡ್ರೆ ಎಂದು ಮನದಲ್ಲಿ ಬೈದುಕೊಳ್ಳುತ್ತಲೇ, ಅಡಿ ಇರಿಸಿದ ... ಒಳಗೋ ಗಮಟು ವಾಸನೆ. 
ಹಾಗೇ ಒಳ ನೆಡೆದ. ಎರಡು ಹೆಜ್ಜೆ ಇಡುತ್ತಿದ್ದಂತೆಯೇ ಬಾಗಿಲು ಮುಚ್ಚಿಕೊಂಡಿತು. ಮೊದಲ ಬಾರಿಗೆ ಭೀತನಾದ ಸೋಮ. ಟಾರ್ಚ್ ತೆಗೆಯಲು ಜೇಬಿಗೆ ಕೈ ಹಾಕಿದ. ಖಾಲೀ !!!!! ಈಗ ತಾನೇ ಕಾರಿನ ಬಳಿ ಉಪಯೋಗಿಸಿದ್ದೆನಲ್ಲ? ಎಲ್ಲಿ ಹೋಯ್ತು ?? 
ಎಲ್ಲೆಲ್ಲೂ ಕತ್ತಲು. ಒಳಗೆ ಹೋಗಲೋ? ಹೊರಗೆ ಓಡಿಬಿಡಲೋ? ಮನಸ್ಸು ಹೊಯ್ದಾಟದಲ್ಲಿರುವಾಗಲೇ ದನಿಯೊಂದು ಮೂಡಿಬಂತು "ನಿನ್ನ ಟಾರ್ಚ್ ಸಿಗಲಿಲ್ವಾ ಸೋಮಾ?". ಅರ್ರೇ ! ಜಮೀನ್ದಾರರ ದನಿ !! "ಆಗ್ಲಿಂದಾನೂ ಇವನೇ ಧಣಿ ನಮ್ ಹಿಂದೆ ಬರ್ತಿದ್ದೋನು" ಅನ್ನೋ ಮತ್ತೊಂದು ದನಿ. ಓ! ಇದು ಆ ಕೆಂಪು ಕಣ್ಣಿನ ಡ್ರೈವರ್ ದನಿ. 
ಹೃದಯವೇ ಬಾಯಿಗೆ ಬಂದ ಹಾಗೆ ಆಯ್ತು ಸೋಮನಿಗೆ. ಹರ ಕೊಲ್ಲಲ್ ಪರ ಕಾಯ್ವನೇ? ಏನೋ ಹೇಳಲು ಬಾಯಿ ತೆರೆದ. ಆಗ ...
---
"ಓ! ಏನ್ರಮ್ಮಾ? ಎಲ್ಲರದೂ ಊಟ ಆಯ್ತಾ? ಹೋಗ್ರೋ ಮಾಕ್ಳಾ ... ಈಗ ಎಲ್ರೂ ಮನೆಗೆ ಹೋಗಿ ಮಲಗಿಕೊಳ್ಳಿ ... ಕಥೆ ನಾಳೆ ಹೇಳ್ತೀನಿ"
ಮೂಲೆ ಮನೆ ರಿಟೈರ್ಡ್ ಶಾಲಾ ಮೇಷ್ಟ್ರು ಇಷ್ಟು ಹೊತ್ತೂ ಹೇಳ್ತಿದ್ದ ಕಥೆಯನ್ನ ಬಾಯಿ ಬಿಟ್ಟುಕೊಂಡು ಕೇಳ್ತಿದ್ರು ಮಕ್ಕಳು. ಅವರಿಗೇ ಅರಿವಿಲ್ಲದಂತೆ ಅವರ ಅಮ್ಮಂದಿರು ಇಡುತ್ತಿದ್ದ ಅನ್ನದ ತುತ್ತುಗಳನ್ನು ಒಂದರ ಮೇಲೊಂದರಂತೆ ಸ್ವಹಾ ಮಾಡುತ್ತಿದ್ದರು. 
ಏನೂ ರಗಳೆ ಇಲ್ಲದೆ ಮಕ್ಕಳ ಊಟ ಆಯ್ತು ಅನ್ನೋ ಸಮಾಧಾನ ಅಮ್ಮಂದಿರಿಗೆ. ಸಂಜೆ ಹೊತ್ತು ಸ್ವಲ್ಪ ಟೈಮ್ ಪಾಸ್ ಮೇಷ್ಟ್ರಿಗೆ. ಆದರೆ ಮೇಷ್ಟರ ಪತ್ನಿ ಮಾತ್ರ "ಮಕ್ಕಳಿಗೆ ರಾಮಾಯಣವೋ ಮಹಾಭಾರತವೋ ಹೇಳೋದು ಬಿಟ್ಟು ಇಂಥಾ ಕಥೆಗಳನ್ನೇ ಹೇಳೋದೂ? ಅದೂ ಯಾವಾಗಲೂ ಇದೇ ಅರ್ಧ ಕಥೆ? ಮಕ್ಕಳು ಹೆದರಿಕೊಂಡು ಬಟ್ಟೆ ಒದ್ದೆ ಮಾಡಿಕೊಳ್ಳೋಲ್ವೇ ?" ಅಂತ ಮೂದಲಿಸಿದರು. "ಹಂಗಾದ್ರೂ ಹಾಸಿಗೆಯ ಬಟ್ಟೆ ಒಗೀತಾರೆ ಬಿಡು ಈ ಅಮ್ಮಣ್ಣೀರು. ಕಥೆ ಪೂರ್ತಿ ಹೇಳೋಕೆ ಮುಂದೆ ಎನಾಗುತ್ತೆ ಅಂತ ನನಗೇನು ಗೊತ್ತು? " ಅಂತ ಬೊಚ್ಚು ಬಾಯಿ ಬಿಟ್ಕೊಂಡು ನಗುತ್ತ ಒಳ ನೆಡೆದರು ಮೇಷ್ಟ್ರು.

ಜಮೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿತು ಅಂತಲೇ ಅರ್ಥ. ಹೆಂಡತಿ ಶಾಂತಮ್ಮ ಹೆಸರಿಗೆ ತಕ್ಕ ಹಾಗೇ ಶಾಂತ ಸ್ವಭಾವದವರು. ಗಂಡನಿಗೆ ಎಂದೂ ಎದುರು ಆಡಿದವರಲ್ಲ. ಅದರ ಪ್ರಮೇಯವೇ ಇರಲಿಲ್ಲ ಬಿಡಿ.

ಏನಿದ್ದರೇನು ಮಕ್ಕಳಿಲ್ಲ ಎಂಬ ಕೊರಗು ಅವರಿಗೆ ಇದ್ದೇ ಇತ್ತು. ಮನೆಯ ಕೆಲಸದಾಳು ಊರಿನಲ್ಲಿ ಯಾವಾಗಲೋ ಒಮ್ಮೆ ಈ ಮಾತು ಬಂದಾಗ "ಸದ್ಯ ಒಳ್ಳೇದಾಯ್ತು" ಎಂದಷ್ಟೇ ನುಡಿದು ಸುಮ್ಮನಾಗಿದ್ದ. ಇದಾದ ಎರಡು ದಿನದಲ್ಲೇ ಅವನ ಬಾಯಿ ನಿಂತು, ಏನೇನೋ ಆಗಿ ಕಣ್ಮರೆಯಾಗಿ ಹೋದ. ಈ ವಿಷಯ ಅರಿತು ಜಮೀನ್ದಾರರು ಮಮ್ಮಲ ಮರುಗಿದರು. ಅವನ ಸಂಸಾರಕ್ಕೆ ಒಂದಷ್ಟು ದುಡ್ಡು ಕೊಟ್ಟು "ಸುಮ್ಮನೆ ಜನರ ಬಾಯಿಗೆ ಬೀಳುವುದು ಏಕೆ? ನೀವುಗಳು ಬೇರೆಲ್ಲಾದರೂ ಬದುಕಿಕೊಳ್ಳಿ" ಎಂದು ಬೇರೆ ಊರಿಗೇ ಕಳಿಸಿಕೊಟ್ಟು, ಜೀವನದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಒಳ್ಳೆಯ ಜನರ ಬಗ್ಗೆ ಅಡ್ಡ ಮಾತನಾಡಿದ ಅವನಿಗೆ ಸರಿಯಾದ ಶಾಸ್ತಿಯಾಯಿತು ಎಂದರಿತು ಜನ ಆ ವಿಷಯದ ಬಗ್ಗೆ ಮಾತನಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಪಟ್ಟಣದಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಬಂದಿದ್ದ ಸೋಮನಿಗೆ ಆ ಕೆಲಸ ಸಿಕ್ಕಿತ್ತು. ಸ್ವಲ್ಪ ಓದು ಬರಹ ಬಲ್ಲವನಾದ್ದರಿಂದ ಹೊರಗಿನ ಕೆಲಸಗಳಿಗೂ ಉಪಯೋಗಕ್ಕೆ ಬರುತ್ತಿದ್ದ.

ಲೇಖನ ವರ್ಗ (Category): 

ಸುರಿವ ಸೋನೆಯಲ್ಲಿ

field_vote: 
No votes yet
To prevent automated spam submissions leave this field empty.

ಸಂಭ್ರಮದ ಗಳಿಗೆಗಳನ್ನ ಯಾರೂ ಮರೆಯಲು ಇಚ್ಛಿಸುತ್ತಾರೆ ಹೇಳಿ ಕನಸಲ್ಲೂ ಯಾರೂ ಅದನ್ನ ಅಗಲಲು ಇಚ್ಛಿಸೊಲ್ಲ, ಈ ಕ್ಷಣ ಬದುಕಲ್ಲಿ ಹೀಗೆ ಯಾಕೆ ಉಳಿಯಬಾರದು, ಜಗತ್ತು ಈ ಕ್ಷಣಕ್ಕೆ ಹೀಗೆ ಸ್ಥಗಿತವಾಗ ಬಾರದೇಕೆ,ಸುರಿವ ಮಳೆ , ಬೀಸೋ ಗಾಳಿ, ಎಲ್ಲಾ ನನಗಾಗಿ ಒಮ್ಮೆ ಹಾಗೆ ಏಕೆ ನಿಲ್ಲ ಬಾರದು ! ಈ ಕ್ಷಣಕ್ಕೆ ನನ್ನ ಈ ಬದುಕು ಇಲ್ಲಿಗೆ ಕೊನೆಯಾದರೂ ಅಡ್ಡಿ ಇಲ್ಲ, ಜಗತ್ತಿನ ಎಲ್ಲಾ ಸಂತೋಷ ಇಂದು ನನ್ನ ಮಡಿಲಲ್ಲೇ ಇದೆ ಎಂಬ ಆ ಒಂದು ಸಂಭ್ರಮದ ಕ್ಷಣವನ್ನು ಎಲ್ಲರೂ ಅನುಭವಿಸಿರುತ್ತಾರೆ, ಬದುಕಿನ ಅಂತಹ ಒಂದು ಸಂಭ್ರಮವನ್ನು ಕೊಡುವ ಶಕ್ತಿ ಬದುಕಿನ ಜೀವನೋತ್ಸಾಹವನ್ನು ಇಮ್ಮಡಿಗೊಳಿಸುವ ಶಕ್ತಿ ಇರುವುದು ಪ್ರೀತಿಗೆ ಮಾತ್ರ ಅಂತಹ ಒಂದು ಷ್ಷಣ ನಿಮಗಾಗಿ,

*********

ಲೇಖನ ವರ್ಗ (Category): 

ಚಿನಕುರುಳಿ

೧) ಏನೋ ಸುಮಂತಾ ಸಿಗರೇಟ್ ಎಳೀತೀಯೇನೋ ಎಂದು ಅಪ್ಪ ಕೇಳಿದಾಗ "ಅಪ್ಪಾ ಇದೇನು ಆಫರೊ ?? ಎನ್ ಕ್ವಾಯರಿನೊ?? ಎಂದು ಪ್ರಶ್ನಿಸಿದೆ .

೨) "ಇಂಗು ತೆಂಗು ಇದ್ದರೆ ನಮ್ಮ ಶಾಂತಿ ಕೂಡ ಅಡುಗೆ ಮಾಡುತ್ತಾಳೆ" ಎಂದು ಹೇಳಿದಾಗ "ರೀ ನಾಲ್ಕು ಜನರ ಮುಂದೆ ನನ್ನನ್ನು ಹೊಗಳಬೇಡ್ರಿ" ಎಂದು ನನ್ನ ಶಾಂತಿ ನಾಚಿ ನೀರಾದಳು.

೩)ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ "ಅನಕ್ಷರಸ್ಥರೇ ಗಮನಿಸಿ"  ಎಂದು ಅನಕ್ಷರತೆಯ ದುಷ್ಪರಿಣಾಮಗಳ ಬಗ್ಗೆ ಬರೆದ ಬ್ಯಾನರ್ ಗಳನ್ನು ತೂಗು ಹಾಕಿದರು.

೪) ಚಿನ್ನದ ಪದಕ ಪಡೆದು ಮೆರಿಟ್ ನಲ್ಲಿ ಬ್ಯಾಂಕ್ ಕೆಲಸಕ್ಕೆ ಸೇರಿಕೊಂಡ ಗ್ರಾಜುಯೇಟ್ ಗಣೇಶನು ಕ್ಯಾಶ್ ನಲ್ಲಿ ಹತ್ತು ರುಪಾಯಿಯ ವ್ಯತ್ಯಾಸ ಕಂಡು ಬಂದಾಗ ಮೊದಲು ನೂರರ ಕಂತೆ ಎಣಿಸಲು ಶುರು ಮಾಡಿದನು.

field_vote: 
Average: 3.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಮಕರ ಸ೦ಕ್ರಮಣ

ದಿಕ್ಕು-ದೆಸೆ ಇಲ್ಲದವರ೦ತೆ ಕೂರಿರಲು, ಪ್ರಪ೦ಚಕ್ಕೇಕೆ ? ನಮಗೇ ಉಪಯೋಗವಾಗದ೦ತಹ ಯಾವುದೇ ನಿರ್ಧಾರಕ್ಕೆ ಬರದೆ ಗ೦ಟೆಗಳು ನಿಮಿಷದಲ್ಲಿ ಕಳೆದವು. ಪ್ರಪ೦ಚದಲ್ಲಿನ ಜೀವ-ಸ೦ಕುಲದಲ್ಲಿ ಮಾನವನ ಚಿ೦ತನ ಲಹರಿಗೆ ಬೆರಗಾದೆವು. ಹೊಳೆಯ ದ೦ಡೆಯ ಮೇಲೆ ನಾಲ್ಕಾರು ಅರೆ-ಬರೆ ಬುದ್ದಿವ೦ತರಾದ ನಾವು ಊರಲ್ಲಿನ ನಿಗೂಢ ರಹಸ್ಯಗಳ ಬಗ್ಗೆ ಗುಸು ಗುಸು ಆರ೦ಭಿಸಿದ್ದೆವು. ದೇಶ, ರಾಜ್ಯದಲ್ಲಿನ ಭ್ರಷ್ಟಚಾರವನ್ನೋ; ಕಲುಷಿತ ಸಮಾಜವನ್ನೋ; ಇನ್ನು ಎನೇನೊ ಕಿತ್ತೊಗೆಯಲು ಗೆಳೆಯರ ಬಳಗ ತಲ್ಲಿನವಾಗಿದ್ದುದು ಹೊಳೆಯ ದಡಕ್ಕಷ್ಟೇ ಸೀಮಿತವಾಗಿತ್ತು. ಕೇವಲ ಊರನ್ನೆ ಬದಲಾಯಿಸದ ನಾವು ಸಮಾಜವನ್ನೆ ಬದಲಾಯಿಸಲು ಸಾದ್ಯವಿಲ್ಲದ ಮಾತು ಎ೦ದು ಅರಿತು ಬೀಡಿಯ ಹೊಗೆಗೆ ತಣ್ಣಗೆ ಶರಣಾದೆವು. ನಮ್ಮ೦ತೆ ದೇಶಕ್ಕಾಗಿಯೂ, ಊರಿಗಾಗಿ ಚಿ೦ತಿಸುವರು ಯಾರು ಇರಲಾರರು ಎ೦ದು ಕೊ೦ಡಿದ್ದೆವು ಕೂಡ.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಉಣ್ಣಿ ಕಥಾ

field_vote: 
Average: 4.4 (5 votes)
To prevent automated spam submissions leave this field empty.

ಕಥಾ ಹಿನ್ನೆಲೆ: “ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ ಪಾಶ್ಚಿಮಾತ್ಯದ ವ್ಯಾಮೋಹ ಹಾಗೂ ಅದನ್ನೇ ಬಂಡವಾಳ ಮಾಡಿಕೊಂಡು ಪಾಶ್ಚಿಮಾತ್ಯರಿಂದ ಪೂರ್ವಾತ್ಯರ ಮೇಲೆ ಹಿಡಿತ ಸಾಧಿಸುವದನ್ನು ಕಥೆ ಸೂಚ್ಯವಾಗಿ ಹೇಳುತ್ತದೆ.

ಇಲ್ಲಿ ಎರಡು ವಿಶೇಷತೆಗಳಿವೆ. ಸಾಮಾನ್ಯವಾಗಿ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳಿದರೆ ಇಲ್ಲಿ ಮೊಮ್ಮಗ ಅಜ್ಜಿಗೆ ಕಥೆ ಹೇಳುತ್ತಿದ್ದಾನೆ. ಎರಡನೆಯದಾಗಿ ಕಥೆಯಲ್ಲಿ ಸಿನಿಮಾಅಟೋಗ್ರಾಫಿಕ್ ಶೈಲಿಯಿದೆ. ಅಂದರೆ ಕಥೆಯನ್ನು ಹೇಳುವಾಗ ಪಾತ್ರಗಳು ಹಾಗೂ ಚಿತ್ರಣಗಳು ಗೋಡೆಯ ಮೇಲೆ ಮೂಡುತ್ತವೆ. ಅಲ್ಲದೇ ಕಥೆಯಲ್ಲಿ ಅಲ್ಲಲ್ಲಿ ಪಶ್ಚಿಮದ ದಾಳಿಯನ್ನು ಸಂಕೇತಗಳ ಮೂಲಕ ಹೇಳಲಾಗಿದೆ. ಅದನ್ನು ಓದುಗರು ಗುರುತಿಸಬಹುದು.

ಕಥೆಯ ಕೊನೆಯಲ್ಲಿ ಮುಠಾಶಿ ಕಥೆಯನ್ನು ಕೇಳುತ್ತಾ ಕೇಳುತ್ತಾ ನಿದ್ರೆ ಹೋಗುತ್ತಾಳೆ. ಆದರೆ ನಾವು ಓದುಗರು ಎಚ್ಚೆತ್ತುಕೊಳ್ಳುತ್ತೇವೆ. ಅಂದರೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.

“ಉಣ್ಣಿ, ಉಣ್ಣಿ ನಂಗೊಂದು ಕಥೆ ಹೇಳು ಬಾರೋ” ಮುಠಾಶಿ ಕರೆದಳು.

ಲೇಖನ ವರ್ಗ (Category): 

ವೃತ್ತಿ ಜೀವನದಲ್ಲಿ ಒಂದು ದಿನ ...

field_vote: 
Average: 3 (4 votes)
To prevent automated spam submissions leave this field empty.

 

ಬೆಳಿಗ್ಗೆ ಅಲಾರಂ ಹೊಡೆದುಕೊಳ್ಳಲಾರಂಭಿಸಿತು. ಅದರ ತಲೆ ಮೇಲೆ ಕುಟ್ಟಿ ಸ್ವಲ್ಪ ಹೊತ್ತು ಹಾಗೇ ಮಿಸುಕಾಡಿ, ಏಳಲು ಮನಸ್ಸಿಲ್ಲದಿದ್ದರೂ ಕೊನೆಗೂ ಎದ್ದ ಪ್ರತಾಪ ಸಿಂಹ. ಕೆಲಸ ಮುಗಿಸಿ ಮಲಗಿದಾಗ ಘಂಟೆ ಎರಡಾಗಿತ್ತು. ಅವನ ಕೆಲಸವೇ ಹಾಗೆ. ಹಗಲಿಗಿಂತ ರಾತ್ರಿ ನೆಡೆವ ಹಲವಾರು ಸುಪ್ತ ಕಾರ್ಯಾಚರಣೆಗಳಿಂದಾಗಿ ಯಾವ ವೇಳೆಯಲ್ಲೂ ಸಂದೇಶಗಳು ಬರಬಹುದು. blackberry ಹೊತ್ತು ತರುವ ಸಂದೇಶ ಸಂಕ್ಷಿಪ್ತವಾದರೂ ಸರಿ ರಾತ್ರಿಯಲ್ಲೂ ಅದನ್ನು ಅರ್ಥೈಸಿಕೊಂಡು ಮುಂದಿನ ಹೆಜ್ಜೆಯ ಬಗ್ಗೆ ತಕ್ಷಣವೇ ಕಾರ್ಯತತ್ಪರನಾಗಬೇಕಾದ ಸಂದರ್ಭ ಸರ್ವೇಸಾಮಾನ್ಯ. 

 

ಸುಪ್ತ ಮನಸ್ಸು ಎಂದಿಗೋ blackberry ಜೊತೆ ಮಿಲನವಾಗಿ ಹೋಗಿದೆ.

 

ಲೇಖನ ವರ್ಗ (Category): 

ಶಿಕಾರಿಯ ದಿನಗಳು-೨

ತೋಪಿನಲ್ಲಿ ಸ್ವಲ್ಪ ದೊಡ್ಡದು ಅನಿಸುವ ಅರಳಿಮರದ ಬುಡದಲ್ಲಿ ಬೇವಿನ ಮರ ಮನೆ ಮಾಡಿದ್ದುದು ಎ೦ತ ಸೋಜಿಗ; ಬೇವಿನ ಮರ ತಮ್ಮನ೦ತೆ ಅರಳಿಮರವನ್ನು ಬಿಗಿದಪ್ಪಲು ಯತ್ನಿಸಿ ಯಶಸ್ವಿಯಾಗಿತ್ತು. ಅದೋ ಆ ಮೂಲೆಯಲ್ಲಿರುವ ಹತ್ತಿ ಮರಕ್ಕೆ ಬಾವಲಿಗಳು ತೂಗಿ ನೇತಾಡುತ್ತಿದ್ದವು; ಹಾಗೆ ಒ೦ದೊಕ್ಕೊ೦ದು ಪ್ರೀತಿಸುತ್ತ, ಕಿಚ್ ಕಿಚ್ ಅ೦ತ ಚೀರುತ್ತ ಜಗಳವಾಡುತ್ತಿದ್ದವು; ಆ ಕಾರ್ಯಕ್ಕೆ ಅವುಗಳ ರಬ್ಬರಿನ೦ತ ರೆಕ್ಕೆಗಳು ಕೊ೦ಚ ತೂತಾಗಿದ್ದವು. ಇದೆನ್ನೆಲ್ಲ ಗಮನಿಸುತ್ತಿದ್ದ ನಾವು ಬ್ಯಾಟರಿಯ ಬೆಳಕನ್ನು ಬಾವಲಿಗಳ ಮೇಲೆ ಹರಿಸಲು, ಅವುಗಳ ಕಣ್ಣು ಹೊಳೆಯುತ್ತಿರುವ೦ತೆಯೇ, ಹತ್ತು ಹದಿನೈದು ಬಾವಲಿಗಳ ಗು೦ಪೊ೦ದು ಒ೦ದೇ ಬಾರಿಗೆ ಮರವನ್ನು ಬಿಟ್ಟು ಹಾರಿದವು, ಕೆಲವು ನಿದ್ರಿಸಿರುವ೦ತೆ ತೋರುತ್ತಿದ್ದವು. ಕಾಡು ಕೆ೦ಬೂತ ಪಕ್ಷಿಗಳ ಗುಟುರ್...ಘುಟುರ್.. ಶಬುದ ಹೆಚ್ಚಾಗಿಯೂ; ಒಮ್ಮೆ ನಿಶಬ್ದವಾಗಿಯೂ ನಡೆಯುತ್ತಿತ್ತು. ಇ೦ತ ಸನ್ನಿವೇಶದಲ್ಲಿ ನಮ್ಮ ಕಾಲುನಡುಗೆಯ... ಪರ್ .ಪರ್ ..ಸವು೦ಡು ಬೇರೆ ಮಾರ್ಧನಿಸುತ್ತಿತ್ತು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ವಿಷಾತಿ ಮಳೆ

ಅದು ಮಳೆಗಾಲದ ಅ೦ತ್ಯವಿರಬೇಕು. ವಿಷಾತಿ ಮಳೆಯ ತು೦ತುರಿಗೆ ಕಾದು ಕಾರ್ಮುಗಿಲು ಆವರಿಸಿ ಊರು ಮೌನವಾಗಿತ್ತು. ಎಲ್ಲೆಲ್ಲು ಹಸಿರು ಹೊದಿಕೆಯಿ೦ದಾಗಿ ಹೊಲ ಗದ್ದೆಗಳು ತು೦ಬಿದ್ದ ಕಾಲವದು. ಊರಿನ ಜನರು ತಮ್ಮ ತಮ್ಮ ಮನೆಗಳಲ್ಲಿ ಸ೦ಜೆಯ ಸುಳಿಗೆ ಸಿಲುಕಿ, ಕರುನಾಡೆoಬೊ ನಾಡಿಗೆ ಸವಾಲಾಗಿ ಕಾಲವನ್ನು ನೂಕುತ್ತಿದ್ದರು. ಕೆಲವರು ಟೀ ಅ೦ಗಡಿಯಲ್ಲಿ ಕಾಲಹರಣ ಮಾಡುತ್ತ; ಭವಿಷ್ಯದ ಬಗ್ಗೆ ಚರ್ಚೆ ಶುರುವಾಗಿ; ಪಾರ್ಲಿಮೆ೦ಟಿನಿ೦ದ ರಾಜ್ಯದ ಕಡೆಗೆ ತಿರುಗಿ; ನಕಶಿಖಾ೦ತ ಉರಿದು ಊರಿನ ರಾಜಕೀಯಕ್ಕೆ ಮರಳಿ; ಟೀ ಎ೦ಬ ಪಾನಿಯದೊಳಗೆ ಲೀನವಾಗುತ್ತಿತ್ತು. ಯಾರದೋ ಮನೆಯಲ್ಲಿ ಬೊ೦ಡ ಕರಿಯುವ ಸುವಾಸನೆಯಿ೦ದ, ಕೆಲವುರು ಯಾರ ಮನೆಯಲ್ಲಿ ಇರಬಹುದು ಎ೦ದು ಊಹೆ ಮಾಡಲು; ಅದು ಪಟೇಲರ ಮನೆಯದ್ದೆ ಇರಬೇಕು ಎ೦ದುಕೊ೦ಡರು.

field_vote: 
Average: 4.7 (11 votes)
To prevent automated spam submissions leave this field empty.
ಲೇಖನ ವರ್ಗ (Category): 

ನಾ ಮಾಡಿದ ತಪ್ಪೇನು?

field_vote: 
Average: 4.2 (5 votes)
To prevent automated spam submissions leave this field empty.

ಪೋಲೀಸ್ ಅಧಿಕಾರಿ ಪ್ರತಾಪ ವರ್ಮ ಕೇಡಿಗರಿಗೆ ಸಿಂಹಸ್ವಪ್ನ ... ಇವರು ಹುಟ್ಟುತ್ತಲೇ ಖಾಕಿ ಬಟ್ಟೆ ಧರಿಸಿ ಹುಟ್ಟಿದ್ದರೇನೋ ಅನ್ನಿಸುವಂತಿತ್ತು ಅವರ ಕರ್ತವ್ಯ ನಿಷ್ಟೆ. ಮಾದಕ ವಸ್ತುಗಳನ್ನು ತನ್ನ ಆಟೊದಲ್ಲಿ ಸಾಗಿಸುತ್ತಿದ್ದಾಗ ಪ್ರತಾಪರ ಕೈಯಲ್ಲಿ ಮಾಲಿನ ಸಮೇತ ಸಿಕ್ಕಿಬಿದ್ದವನು ಆಟೋ ಡ್ರೈವರ್ ರಾಜ. 

ಲೇಖನ ವರ್ಗ (Category): 

ಬರೀ ನೊರೆ....ನೊರೆ ಅಷ್ಟೆ

field_vote: 
No votes yet
To prevent automated spam submissions leave this field empty.
ಮೂಲ ಕತೆ : ಹರ್ನ್ಯಂಡೋ ತೆಲೆಜ್
ಲೇಖನ ವರ್ಗ (Category): 

ಫಲಿತಾಂಶ

field_vote: 
No votes yet
To prevent automated spam submissions leave this field empty.

ಪ್ರಣತಿಯನ್ನು ನೋಡುತ್ತಿರುವಂತೆ ನನ್ನ ಮನದಲ್ಲೇನೋ ಅಪರಾಧಿ ಪ್ರಜ್ನೆ ಹೀಗೇ ಧುಮ್ಮಿಕ್ಕುತ್ತಿದೆ. ಅವಳನ್ನು ಪ್ರೀತಿಸುತ್ತಿದ್ದೇನೆ ನಾನು ಆದರೆ ಅವಳು ನನ್ನನ್ನ ಪ್ರೀತಿಸುತ್ತಿದ್ದಾಳೇಯೇ. ಅವಳು "ಅನಿಲ್ ಐ ರಿಯಲ್ಲಿ ಐ ಲವ್ ಯು "ಅಂದಾಗಲೂ ಹೃದಯ ಹಿಗ್ಗಲಿಲ್ಲ ಬದಲಿಗೆ ಕುಗ್ಗಿತು. ಒಂದು ಹೆಣ್ಣನ್ನು ಪ್ರೀತಿಸಲು ಮುಖವಾಡ ಹಾಕ್ತೀಯಾ ಹೇಡಿ ಎಂದಿತ್ತು. ಆದರೂ ಭಂಡ ನಾನು .ಯಾವುದಕ್ಕೂ ಬಗ್ಗೋದಿಲ್ಲ. ಇನ್ನೂನನ್ನದೇ ಮಾತಿಗೆ ಬಗ್ಗುತ್ತೇನೆಯೇ. ಅದನ್ನ ಗದರಿದ್ದೆ.

 


ಈ ಪ್ರಣತಿ ನನ್ನನ್ನ ಈ ಒಂದು ಕೀಳು ಮಟ್ಟಕ್ಕೆ ಇಳಿಸಿಬಿಡುತ್ತಾಳೆ ಎಂದು ನಾನಾದರೂ ಯಾವಾಗ ತಿಳಿದಿದ್ದೆ.

 


ಪ್ರೀತಮ್ ನನ್ನ ಕಂಪೆನಿಯಲ್ಲಿ ಕೇವಲ ಕೆಲಸಗಾರನಾಗಿರಲಿಲ್ಲ ನನ್ನ ಜೀವದ ಗೆಳೆಯನಾಗಿದ್ದ. ಸ್ವಭಾವತ: ಚಿಪ್ಪಿನಲ್ಲಿ ಮುಳುಗಿ ಹೋಗುವ  ಹುಡುಗ. ಅದು ಹೇಗೋ ಅವನು ನನ್ನ ಗೆಳೆತನದ ಪರಿಧಿಯಲ್ಲಿ ತೂರಿದ್ದ.

 

ಲೇಖನ ವರ್ಗ (Category): 

ಕ್ರಿಕೆಟ್ ದಿನಗಳು

ರಜೆದಿನಗಳು ಬ೦ತೆoದರೆ ನಮ್ಮೂರಿನ ಮಿಸಿನ್ ಬಾವಿ ಬಯಲಿಗೆ ವಿಶ್ರಾ೦ತಿ ಎಲ್ಲಿಹುದು. ಚಿಳ್ಳೆ ಮಿಳ್ಳೆಗಳಿ೦ದ ಹಿಡಿದು ದೊಡ್ಡವರಾದಿಯಾಗಿ (ಯುವಕರು, ಮದುವೆಯಾಗದೆ ಅಲೆಯುವ, ಮದುವೆಯಾದವರು ಮತ್ತು ಬಿಟ್ಟವರೂ, ಕುರಿ-ದನ ಮೇಯಿಸುವವರು, ಅಕ್ಕಪಕ್ಕದ ಹೊಲದವರು, ಹಳ್ಳಿಯವರೂ, ಕೆಲವು ನಾಯಿಗಳೂ ಕೂಡ )ಎಲ್ಲರಿಗೂ ಇದು ಟೈಮ್ ಪಾಸ್ ಜಾಗ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಶಿಕಾರಿಯ ದಿನಗಳು

ಸ೦ಜೆ ನಾಲಕ್ಕು ಗ೦ಟೆ ಸುಮಾರಿಗೆ ಕಾಲೇಜಿ೦ದ ಬಳಲಿ ಬೆ೦ಡಾಗಿ ಬ೦ದವನು ಹಟ್ಟಿಯ ಮು೦ದೆ ಒಳ ಕಲ್ಲಿನ ಮೇಲೆ ಕೂತು ಸ೦ಜೆಯಾಗುವುದನ್ನೆ ಕಾಯುತ್ತಾ ನಿಟ್ಟುಸಿರೆಳೆದೆ. ಹಾಗೆ ಕಾಲೇಜಿನಲ್ಲಿ ನಡೆದಿದ್ದ ಪಾಠವನ್ನೊ; ತು೦ಟಾಟವನ್ನೊ; ಯಾರು ಯಾರಿಗೆ ಸ್ಕೆಚ್ ಹಾಕ್ತಾವ್ರೆ ಅನ್ನೊ ಮ್ಯಾಟರ್ ಅನ್ನೊ; ಅವಳು ನನ್ ಕಡೆ ನೋಡುದ್ಲು ಕಲ........ ಅ೦ತ ಕ್ಲಾಸಮೇಟ್ ಗಿರೀಶ ಹೇಳಿದ ಅರೆ ಬರೆ ಸುಳ್ಳಿನ ಕ೦ತೆಯನ್ನೊ; ಕೆಮಿಸ್ಟ್ರಿ ಲ್ಯಾಬಿನಲ್ಲಿ ಎಲ್ಲಾ ಗೆಳೆಯರ ಲಲನೆಯರ ಗ೦ಭೀರ ಚರ್ಚೆಗೆ ಒಡ್ಡಿ ಅದು ಆಸಿಡ್ಡೊ, ಲಿಕ್ವಿಡ್ಡೊ ತಿಳಿಯದೆ, ಎಲ್ಲರೂ ಒಬ್ಬನ ಉತ್ತರವನ್ನ ಸೇರಿ ಹ೦ಚಿಕೊಡು, ಕೆಮಿಸ್ಟ್ರಿ ಲೆಕ್ಚರ್ ಸಿದ್ದೇಗೋಡ್ರು ಬ೦ದಾಗ "ಸಾರ್ ಎಲ್ಲಾ ರಿಸಲ್ಟ್ ಕರೆಕ್ಟ್ ಬ೦ದಿದೆ" ಅ೦ತ ತೋರಿಸಿ ೨ ಗ೦ಟೆ ನಡೆಯಬೇಕಾದ ಲ್ಯಾಬ್ ಕ್ಲಾಸನ್ನು ಕೇವಲ ಅರ್ಧ ಗ೦ಟೆಗೆ ಮುಗಿಸಿ ಗುಡ್ ಎನಿಸಿಕೊ೦ಡಿದ್ದನ್ನೊ; ನಮ್ಮ ಬ್ಯಾಚನಲ್ಲಿ ಕೇವಲ ಹುಡುಗರನ್ನು ಹಾಕಿದ ಲೆಕ್ಚರನ್ನು ಶಪಿಸಿಕೊಳ್ಳುತ್ತನೊ; ಕಾಲೇಜಿನ ಏಕೈಕ ಜೀನ್ಸ್ ಧಾರಿಣಿಯಾದ "ದಾಪು" ಎ೦ಬ ಸೇಠು ಹುಡುಗಿಯ ಧೈರ್ಯವನ್ನೊ; ನೆನೆಯುತ್ತ ಮನದ ಸುತ್ತ ಒನ್ ರವು೦ಡು ಬ೦ದೆ.


field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ನಂಬುಗೆ - ೨

field_vote: 
Average: 4.7 (3 votes)
To prevent automated spam submissions leave this field empty.

ಲೇಖನ ವರ್ಗ (Category): 

ನಂಬುಗೆ - ೧

field_vote: 
Average: 4.3 (3 votes)
To prevent automated spam submissions leave this field empty.

ಬೇಸಿಗೆಯ ರಜೆಯೊಂದರ ದಿನ ಬಿಸಿಲ ಬೇಗೆಗೆ ಬೆವರಿಳಿಸುತ್ತಾ ಮಂಜುನಾಥ ಮಯ್ಯರು ತಮ್ಮನ ಮನೆಯೊಳಗೆ ಕಾಲಿಡುತ್ತಾ, ನಗು ಮೊಗದಿಂದ ತಮ್ಮನ ಕೂಗಿ ಕರೆದರು. ದೂರದ ಮಂಗಳೂರಿನಿಂದ ಕೋಡಿಯ ತಮ್ಮ ಮನೆಗೆ ಅನಿರೀಕ್ಷಿತವಾಗಿ ಭೇಟಿಯಿತ್ತ ಅಣ್ಣನ ನೋಡಿ ಜಗನ್ನಾಥರಿಗೂ ಸಂತಸವಾಯ್ತು. ಅಣ್ಣನ ಮುಖ ನೋಡುತ್ತಾ, "ಮೊನ್ನೆ ದಾವಣಗೆರೇಲಿ ಒಂದ್ ಕಾರ್ಯಕ್ರಮಕ್ಕೆ ಹೋಗಿದ್ಯಲ್ಲ ಹೇಗಿತ್ತು?" ಎಂದು ಕೇಳಿದರು. ಇದಕ್ಕುತ್ತರವಾಗಿ ಮಂಜುನಾಥ ಮಯ್ಯರು "ಕಾರ್ಯಕ್ರಮದ ವಿಷಯ ನಂತರ ತಿಳಿಸುತ್ತೇನೆ, ನಿನ್ನ ಮಗಳ ಜಾತಕ ಒಬ್ಬರಿಗೆ ಕೊಟ್ಟು ಬಂದಿದ್ದೇನ. ಹುಡುಗ ಕೋಟೇಶ್ವರದವನು. ನಮ್ಮ ಸಾಲಿಗ್ರಾಮದ ಗಜಾನನ ಸ್ಟೋರ್ಸ್ ಉಪಾಧ್ಯರ ಹೆಂಡತಿಯ ತಮ್ಮ. ಹೆಸರು ಅರವಿಂದ. ಹುಡುಗ ಬೆಂಗ್ಳೂರಲ್ಲಿ ಇಂಜಿನಿಯರ್ ಅಂತೆ.

ಲೇಖನ ವರ್ಗ (Category): 

ಫಣಿಯಜ್ಜಿಯೊ೦ದಿಗೆ ಉಭಯಕುಶಲೋಪರಿ ಕೊನೆಯ ಭಾಗ

"ಮೆಟ್ಟಿಲು ಹತ್ತಬಕು ,ಬ್ರಹ್ಮಜ್ನಾದ ಸ೦ಪಾದನೆ ಮಾಡಬಕು ಅ೦ದ್ರೆ ಬ್ರಹ್ಮಚಾರಿಯಾಗೆನೇ ಇರ್ಬಕು ಅ೦ತೇನಿಲ್ಲ.ಸ೦ಸಾರದಲ್ಲಿದ್ದೂ ಅದನ್ನ ಗಳಿಸ್ಬಹುದು"

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

‘ಅವಳು’ - ಅದವನ ದಿನಚರಿಯ ಹೆಸರು

field_vote: 
Average: 5 (1 vote)
To prevent automated spam submissions leave this field empty.

ಮಳೆಗಾಲದ ಮಳೆ ಅದು. ಗಾಳಿ ಬೀಸಿದಾಗ ಮಂಜು ತುಂಬಿ ಕೈ ಅಳತೆಯ ಅಂತರವೂ ಕಾಣದಾಗುವುದು. ಮಲೆನಾಡಿನ ವಿಶೇಷವೇ ಅಂಥದು. ಮಳೆ ಶುರುವಾಗುವ ಮುಂಚೆಯೂ ಮಂಜು, ಮಳೆಗಾಲ ನಿಂತ ಮೇಲೂ. ಅಂಥಾ ಮಳೆಗಾಲದಲ್ಲಿ ಜೊತೆ ಸೇರಿದ ಗೆಳೆಯರಲ್ಲಿ ಹೊಳೆದ ಐಡಿಯಾ ‘ಮಾನ್ಸೂನ್ ಚಾರಣ’. ಯಾವ ಕಡೆ..? ಹತ್ತಿರ ಎಲ್ಲಾದರೂ ಹೋಗುವ ಮನಸು, ದೂರವೂ ಆಗಬಹುದೆಂಬ ಮನಸು ಕೆಲವರದ್ದು.

ಲೇಖನ ವರ್ಗ (Category): 

ಮುಸ್ಸಂಜೆಯ ನೆನಪಲಿ...

field_vote: 
No votes yet
To prevent automated spam submissions leave this field empty.

ಶ್ಯಾಮರಾಯರಿಗೆ ಇಂದು ತಮ್ಮ ಸರ್ಕಾರಿ ಕೆಲಸದಿಂದ ರಿಟಾಯ್ರ್ ಆಗುವ ದಿನ. ಮಾಮೂಲಿನಂತ ಅವರು ವಾಯು ವಿಹಾರಕ್ಕೆ ಸೌಥ್ ಎಂಡ್ ಸರ್ಕಲ್ ಬಳಿ ಇರೋ ಪಾರ್ಕಿನ ಕಲ್ಲಿನ ಬೆಂಚಿನ ಮೇಲೆ ಕೂತು ದಿನ ಬರುವ ತಮ್ಮ ಹಳೆಯ ಮಿತ್ರರಿಗಾಗಿ ಕಾಯುತ್ತ ಕುಳಿತಿದ್ದರು. ನೆನಪು ಅವರ ಕಣ್ಣ ಮುಂದೆ ಮಡುಗುಟ್ಟುತ್ತಾ ಇತ್ತು. 30 ವರ್ಷಗಳ ಸರ್ಕಾರಿ ಸೇವೆ ಇಂದು ಮುಗಿಯುತ್ತಿತ್ತಲ್ಲಾ...

ಲೇಖನ ವರ್ಗ (Category): 

ಮಗ.....

ಅವನನ್ನು ನಾನಾಗಿಯೇ ಹುಡುಕಿ ಹೋಗೋಣವೆಂದರೆ ಅವನ ಫೋಟೋ ಕೂಡಾ ನನ್ನಲ್ಲಿ ಇಲ್ಲ...

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಆ ಹುಡುಗ....

field_vote: 
No votes yet
To prevent automated spam submissions leave this field empty.

ಬೆಂಗಳೂರಿನ ಕಂಟೋನ್ಮೆನ್ಟ್ ರೈಲ್ವೆ ಸ್ಟೇಷನ್ ಹಳಿಯ ಬಳಿ ಒಬ್ಬ ಯುವಕನ ಹೆಣ ಬಿದ್ದಿತ್ತು. ಕಾಲೊಂದು ತುಂಡಾಗಿ, ಮುಖದ ಒಂದು ಪರ್ಶ ಜಜ್ಜಿ ಹೋಗಿತ್ತು... ಅಗಲೇ ಸಾಕಷ್ಟು ಜನ ಅಲ್ಲಿ ಸೇರಿದ್ದರು. ಪಕ್ಕದ ರೋಡಿನಲ್ಲಿ ನೆಡೆದು ಹೋಗುತ್ತಿದ್ದ ನಾನು ನೆಡೆಯುವುದನ್ನು ನಿಲ್ಲಿಸಿ, ಒಂದು ಕ್ಷಣ ನಿಂತು ಅ ಘಟನೆ ನೆಡೆದ ಸ್ಥಳಕ್ಕೆ ಸಾಗಿದೆ...

ಲೇಖನ ವರ್ಗ (Category): 

ನನ್ನವಳ ಮೌನ ಮಾತು

field_vote: 
No votes yet
To prevent automated spam submissions leave this field empty.

ಇವತ್ತು ನನಗಿಷ್ಟವಾದ ಡ್ರೆಸ್ಸನ್ನೇ ಹಾಕಿದ್ದೀಯಾ.ವಾವ್ ಈ ತಿಳಿ ಹಸಿರು ಬಣ್ಣದ ಚೂಡಿ ನೀನ್ ಹಾಕ್ಕೊಂಡಮೇಲೇನೇ ಚ೦ದ
ಕಾಣ್ಸಿಲಿಕ್ಕೆ ಶುರುವಾದದ್ದು.ಹಲೋ!, ಇದು ಹೊಗಳಿಕೆ ಮಾತೇನಲ್ಲ ಆಯ್ತಾ .ಒ೦ದೂ ಮಾತಾಡದೆ ನನ್ನ ಜೊತೆ ಇರ್ತೀಯಲ್ಲ ಅದು ಹೇಗೆ

ಲೇಖನ ವರ್ಗ (Category): 

ಕಾರ್ಯ ಕರ್ತ

field_vote: 
No votes yet
To prevent automated spam submissions leave this field empty.

"ಎಮ್ಮೆಲ್ಲೆ ದಾಸಪ್ಪನೋರ್ಗೆ, ಜಯವಾಗಲಿ,ಬಡವರ ಬ೦ಧು ದಾಸಪ್ಪನೋರ್ಗೆ ಜೈ,ಆಪತ್ಬಾ೦ಧವ ದಾಸಪ್ಪನೋರ್ಗೆ ಜೈ"
ಸೀನಣ್ಣ ಗ೦ಟಲು ಹರಿಯೋವ೦ಗೆ ಕಿರುಚ್ತಿದ್ದ.ಅವನ ಜೊತೆಗೆ ಸುಮಾರು ಒ೦ದಿಪ್ಪತ್ತು ಜನ ಅವನ ಸಮಕ್ಕೆ ಕೂಗ್ತಾ ಇದ್ರು
ಒಬ್ಬಬ್ಬರಿಗೂ ಐವತ್ತು ಕೊಟ್ಟು ಕರ್ಕೊ೦ಡು ಬ೦ದಿದ್ದ ’ಮಿಕ್ಕಿದ್ದು ಆಮೇಲೆ ಕೊಡಿಸ್ತೀನಿ ಬರ್ರಲೆ,"ಅ೦ತೇಳೆ ಜನ ಸೇರ್ಸಿದ್ದ

ಲೇಖನ ವರ್ಗ (Category): 

ಆ ಫೋಟೋಗ್ರಾಫರ್

field_vote: 
No votes yet
To prevent automated spam submissions leave this field empty.

“ನಾನೊಂದು ಫೋಟೋ ತೆಗಿಸಬೇಕಾಗಿದೆ” ಹೇಳಿದೆ. ಆ ಫೋಟೋಗ್ರಾಫರ್ ಆಸಕ್ತಿಯಿಲ್ಲದೆ ಸುಮ್ಮನೆ ಒಮ್ಮೆ ನನ್ನ ನೋಡಿದ. ಅವನಿಗೆ ವಿಜ್ಞಾನಿಗಳಿಗಿರುವಂತೆ ಗುಳಿಬಿದ್ದ ಕಣ್ಣುಗಳಿದ್ದವಾದ್ದರಿಂದ ಆ ಬೂದು ಬಣ್ಣದ ಸೂಟಿನಲ್ಲಿ ಮತ್ತಷ್ಟು ಇಳಿಬಿದ್ದಂತೆ ಕಾಣುತ್ತಿದ್ದ. ಇಷ್ಟು ಬಿಟ್ಟರೆ ಅವನ ಬಗ್ಗೆ ಹೆಚ್ಚಿಗೆ ಏನು ಹೇಳಬೇಕಾಗಿಲ್ಲ. ಏಕೆಂದರೆ ಒಬ್ಬ ಫೋಟೊಗ್ರಾಫರ್ ಹೇಗೆ ಇರುತ್ತಾನೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ!

“ಸ್ವಲ್ಪ ಹೊತ್ತು ಕಾಯಿರಿ” ಎಂದು ಹೇಳುತ್ತಾ ಕುರ್ಚಿಯೊಂದನ್ನು ತೋರಿಸಿದ. ನಾನಲ್ಲಿ ಕುಳಿತುಕೊಂಡು ಸುಮಾರು ಒಂದು ಗಂಟೆಯಷ್ಟು ಕಾಯ್ದೆ. ಅಷ್ಟರಲ್ಲಿ ಅಲ್ಲೇ ಟೇಬಲ್ ಮೇಲಿದ್ದ ಮೂರು ಬೇರೆ ಬೇರೆ ಮ್ಯಾಗಜೀನ್ಗನಳನ್ನು ತಿರುವಿ ಹಾಕಿದ್ದೆ.

ಲೇಖನ ವರ್ಗ (Category): 

ನಾನಿರುವೆ………..ಕೊನೆಯ ಭಾಗ

field_vote: 
No votes yet
To prevent automated spam submissions leave this field empty.

ಭಯಗೊ೦ಡರೂ ತೋರಗೊಡದೆ,"ಹಾಯ್" ಅ೦ದ
"ಬಾ ಒಳಗೆ" ಎ೦ದಷ್ಟೆ ಹೇಳಿದಳು
"ಅಪ್ದರಾ ನಾನು ನೇರ ವಿಷಯಕ್ಕೆ ಬರ್ತೀನಿ,ನನ್ನ ತಪ್ಪನ್ನ ಒಪ್ಕೊತೀನಿ ಆದ್ರೆ ಅದು ನಿನ್ನ ಬಲವ೦ತದಿ೦ದ ಆಯ್ತು ,ನಾನು ಸ್ವಲ್ಪ ಎಚ್ಚರಿಕೆಯಿ೦ದ ಇರ್ಬೇಕಾಗಿತ್ತು ಮೈ ಮರೆತೆ ನಿಜ,ಆದ್ರೆ ನಿನ್ನ ಬುದ್ಧಿ ಎಲ್ಲಿ ಹೋಗಿತ್ತು"
"ಯಾವುದರ ಬಗ್ಗೆ ಮಾತಾಡ್ತಾ ಇದೀಯಾ , ನಿಶ್ಚಿ೦ತ್.ಅದೆಲ್ಲಾ ಮರೆತು ಬಿಡು ಆಯ್ತಾ"

ಲೇಖನ ವರ್ಗ (Category): 

ನಾನಿರುವೆ………..ಭಾಗ ೨

field_vote: 
No votes yet
To prevent automated spam submissions leave this field empty.

"ಯಾರದು"
ನಿಧಾನವಾಗಿ ತಲೆ ಎತ್ತಿತು ಆ ಅಕ್ರತಿ ಆಶ್ಚಯ್ರದಿ೦ದ ನೋಡುತ್ತಿದ್ದ ನಿಶ್ಚಿ೦ತ್.ಹೊಳೆವ.ಕಣ್ಣುಗಳು ಅತ್ತು ಕೆ೦ಪಗಾಗಿದ್ದವು.ಚೆ೦ದುಟಿ ನಡುಗುತ್ತಿತ್ತು.ಮುದ್ದು ಮುಖ ನಿಸ್ತೇಜವಾಗಿತ್ತು.ಅಪ್ಸರೆ ಎ೦ದ ಮನದಲ್ಲೇ
"ಯಾರಮ್ಮಾ ನೀನು ಯಾಕಳ್ತಿದೀಯಾ"

ಲೇಖನ ವರ್ಗ (Category): 

ನಾನಿರುವೆ………..

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನಾನು ಮತ್ತು ನನ್ನಮ್ಮ೦ದಿರು

field_vote: 
Average: 3.5 (2 votes)
To prevent automated spam submissions leave this field empty.

ತು೦ಬಾ ಹಿ೦ಸೆ ಅನ್ಸುತ್ತೆ.ಇದ್ದ್ದಕ್ಕಿದ್ದ೦ತೆ ನಾನು ಸಾಕಿದ ಮಗ ಅ೦ತ ಗೊತ್ತಾದರೆ ,ಅದೂ ನನ್ನ ಹೆತ್ತಮ್ಮ ನನ್ನ ಕಣ್ಣೆದುರಿಗೇ ಇದ್ರೆ ಇನ್ನೂ ಹಿ೦ಸೆ ಆಗುತ್ತೆ
ಹೆತ್ತಮ್ಮನ್ನ ದೊಡ್ಡಮ್ಮಾ೦ತ ಕರೀತಾ, ಚಿಕ್ಕಮ್ಮ ಆಗಬೇಕಿದ್ದವಳನ್ನ ಅಮ್ಮಾ ಕರೀತಾ, ಅಯ್ಯೋ ! ಇದೊ೦ದು ಥರ ನರಕ ಅನ್ನಿಸ್ತಿದೆ.ನನ್ನನ್ನ ಇಬ್ರೂ ಪ್ರೀತಿಸ್ತಾರೆ

ಲೇಖನ ವರ್ಗ (Category): 

ಯಾತ್ರೆ

ಅಂದು ಭಾನುವಾರ. ಬೆಳಗ್ಗೆ 11 ಗಂಟೆಗೆ ಬರಬೇಕಾದ ಬಸ್ಸು 11.15 ಆದರೂ ಬರಲೇ ಇಲ್ಲ. ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಬಸ್ ಸ್ಟಾಪಿಗೆ ಬರಬೇಕಾದರೆ ಸುಮತಿಗೆ ಸಾಕು ಸಾಕಾಗಿತ್ತು. ಈ ದರಿದ್ರ ಬಸ್ ಬೇಕಾದಾಗ ಬರುವುದೇ ಇಲ್ಲ.

field_vote: 
Average: 4.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ನೀನು ಮಾಡಿದ್ದು, ಪುನಃ ನಿನಗೆ ಬರುತ್ತದೆ.

field_vote: 
No votes yet
To prevent automated spam submissions leave this field empty.

ಒಂದು ದಿನ ರಾಮಣ್ಣ ತಾನು ಬೆಳೆದ ತರಕಾರಿಗಳನ್ನ ಮಾರಿ ಮನೆಗೆ ಹಿಂದಿರುಗುತ್ತಿದ್ದ. ಬರುತ್ತಿರುವಾಗ ದಾರಿಯಲ್ಲಿ ಒಬ್ಬ ವಯಸ್ಸಾದ ಸಾಹುಕಾರ ಹೊಂಡದಲ್ಲಿ ಸಿಕ್ಕಿಕೆೊಂಡಿರುವ ಕಾರಿನ ಚಕ್ರವನ್ನ ಬಿಡಿಸಲಾಗದೆ ಬಳಲುತ್ತಿದ್ದ.

ಲೇಖನ ವರ್ಗ (Category): 

ಎಡಗೈ ಬೆರಳ ಮೇಲಿನ ಮಚ್ಚೆ

field_vote: 
No votes yet
To prevent automated spam submissions leave this field empty.

"ಅಮ್ಮ ಆಗಿನಿಂದ ಅಪ್ಪನ ಫೋನಿಗೆ ಕಾಲ್ ಮಾಡ್ತಾ ಇದೀನಿ ಸ್ವಿಚ್ ಆಫ್ ಅಂತಾನೆ ಬರ್ತಿದೆ" ರಾಜೀವನ ಧ್ವನಿಯಲ್ಲಿ ಗಾಬರಿ ಕಾಣುತ್ತಿತ್ತು

ರಾಯರು ಮನೆ ಬಿಟ್ಟು ಆರು ದಿನವಾಗಿತ್ತು.

ರಮ್ಯಾ ಮದುವೆಗೆ ಇನ್ನು ತಿಂಗಳಷ್ಟೆ ಉಳಿದದ್ದು.

ವಾರದ ಹಿಂದೆ ಮೈಸೂರಿನಲ್ಲಿ ತಿಳಿದಿರುವವರ ಬಳಿ ಒಡವೆ ಮಾಡಿಸಿಕೊಂಡು ಬರಲು ಹೋದವರು ನಂತರ ಕಂಡಿರಲಿಲ್ಲ.

ಲೇಖನ ವರ್ಗ (Category): 

ಗೃಹ ಪ್ರವೇಶ

field_vote: 
Average: 1 (1 vote)
To prevent automated spam submissions leave this field empty.

DSC09355ಬೆಂಗಳೂರಿನ ಖ್ಯಾತ ಬಡಾವಣೆಯಲ್ಲಿ ಹೊಸದಾಗಿ ತಲೆ ಎತ್ತಿ ನಿಂತ ಮೂರಂತಸ್ಥಿನ ಭವ್ಯ ಬಂಗಲೆ. ಮನೆಯೆದುರಿನ ರಸ್ತೆಯಲ್ಲಿ ಶಾಮಿಯಾನ ಹಾಕಿಸಿ, ಸುಮಾರು ೨೦೦ ಜನ ಒಮ್ಮೆಲೇ ಕುಳಿತು ಊಟ ಮಾಡುವಷ್ಟು ಮೇಜು ಕುರ್ಚಿಗಳನ್ನಿರಿಸಿ, ಪಕ್ಕದಲ್ಲಿಯೇ ಅಡುಗೆಗಾಗಿ ತಾತ್ಕಾಲಿಕ ಏರ್ಪಾಡು ಮಾಡಲಾಗಿತ್ತು. ಮಗನ ಮನೆಯ ಗೃಹ ಪ್ರವೇಶವಾದ್ದರಿಂದ ರಾಯರು ಗೆಲುವಿನಿಂದಲೇ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದರು. ಬಂದವರಿಗೆ ನೀರು, ಕಾಪಿ, ಮಾತುಗಳಿಂದ ಉಪಚರಿಸಿ, ಮಗ ಕಟ್ಟಿಸಿದ್ದ ಮನೆಯ ಅಂಚಂಚನ್ನು ಹುಮ್ಮಸ್ಸಿನಿಂದ ತೋರಿಸಿ, ಅವರಾಡಿದ ಮೆಚ್ಚುಗೆಯ ಮಾತುಗಳಿಂದ ಪುಳಕಿತರಾಗಿದ್ದರು.

ಬಡತನದಲ್ಲಿ ಬೆಳೆದು, ವಿದ್ಯೆಯನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಬಂದು ಕೆಲಸ ಹುಡುಕುತ್ತಿರಬೇಕಾದರೆ ಅವರಿಗೆ ಸಿಕ್ಕಿದ್ದು ಬ್ಯಾಟರ್ ಫ್ಯಾಕ್ಟರಿಯಲ್ಲೊಂದು ಸಣ್ಣ ಕೆಲಸ. ತೀರಾ ಸಿರಿತನ ಅಲ್ಲದ್ದಿದ್ದರೂ ಇನ್ನೊಬ್ಬರ ಮುಂದೆ ಕೈಚಾಚಿ ಬದುಕಬೇಕಿಲ್ಲದಿದ್ದ ಪರಿಸ್ಥಿತಿಯಲ್ಲಿ, ತಮ್ಮ ಊರಿನ ಒಬ್ಬ ಕನ್ಯೆಯನ್ನೇ ವಿವಾಹವಾಗಿ ಸುಖವಾಗಿಯೇ ಇದ್ದರು. ಒಂದೆರಡು ವರ್ಷಗಳೊಳಗಾಗಿ ಗಂಡು ಮಗುವನ್ನು ಹೆತ್ತು, ಆ ಮಗುವಿನಲ್ಲಿ ತಮ್ಮ ಸುಖ ಕಾಣಲು ಮೊದಲುಗೊಂಡರು. ಸಂಸಾರಕ್ಕೆ ಹೊಸಬ್ಬನ ಆಗಮನದಿಂದ ಮನೆಯ ಅವಶ್ಯಕತೆ ಹೆಚ್ಚಿ ರಾಯರು ಫ್ಯಾಕ್ಟರಿಯಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಿ ಇನ್ನಷ್ಟು ಹಣ ಹೊಂದಿಸಬೇಕಾದ ಪರಿಸ್ಥಿತಿ ಬಂದಿತ್ತು. ಎಡ ಬಿಡದ ದುಡಿತ, ಬ್ಯಾಟರಿ ಆಸಿಡ್ಗಳೊಂದಿಗಿನ ನಂಟು ರಾಯರ ಆರೋಗ್ಯವನ್ನು ದಿನೇ ದಿನೇ ಹದಗೆಡಿಸುತ್ತಿತ್ತು. ಮಡದಿ ಬಂದಾಗಿನಿಂದ ಆಕೆಗೊಂದು ಹೊಸ ಬಟ್ಟೆ, ಆಭರಣ, ಅಪೂರ್ವಕ್ಕೊಮ್ಮೆಯಾದರೂ ತಿರುಗಾಟ ಮೊದಲಾದ ಸೌಲಭ್ಯ ಒದಗಿಸಲಾರದೇ ರಾಯರು ಖಿನ್ನರಾಗಿದ್ದರು.

ಲೇಖನ ವರ್ಗ (Category): 

ಹೆಗ್ಗಣಗಳು ಹಾವುಗಳು ಕುರಿಗಳು

field_vote: 
No votes yet
To prevent automated spam submissions leave this field empty.

ಆತ ಭಾರತದ ಪ್ರಖ್ಯಾತ ಹೆಗ್ಗಣ ಇಲಿ ನಿರ್ಮೂಲನ ಕಂಪನಿಯ ಮೇಲಾಧಿಕಾರಿಯಾಗಿ ನೇಮಕಗೊಂಡ.ಅದು ಕೇಂದ್ರ ಸರಕಾರದ ಅಧೀನದ ಕಂಪನಿ
ಅವನಿಗೋ ಎಲ್ಲಾ ಹೆಗ್ಗಣ ಇಲಿಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಬೇಕೆಂಬುದೇ ಮಹದಾಸೆ.ಸರಕಾರದಿಂದ ಸುತ್ತೋಲೆ ಬಂದಿತ್ತು

ಲೇಖನ ವರ್ಗ (Category): 

ತಾಯಿಯೇ ದೇವರು? ಹೆಣ್ಣೇ ನೀ ಹೀಗೇಕಾದೆ

field_vote: 
No votes yet
To prevent automated spam submissions leave this field empty.

" ಕುಮಾರಿ ಪ್ರಭಾವತಿಗೆ ಜೈ ಕುಮಾರಿ ಪ್ರಭಾವತಿಗೆ ಜೈ" ಜೈಕಾರಗಳು ಮುಗಿಲು ಮುಟ್ಟಿದವು.

ಲೇಖನ ವರ್ಗ (Category): 

ಹೆಸರಿಲ್ಲದ ಒಂದು ಡಜನ್ ಮಿಣಿಮಿಣಿ ಮೈಕ್ರೌಮೈಕ್ರೌ ಕಥೆಗಳು. (ಹೆಡ್ಡಿಂಗೇ ಇಷ್ಟುದ್ದ!)

field_vote: 
No votes yet
To prevent automated spam submissions leave this field empty.

-೧-
ಅಂದು ದೀಪಾವಳಿ ರಾತ್ರಿ. ಕೆಲ ದಿನಗಳ ಹಿಂದಷ್ಟೇ ಪಕ್ಕದಮನೆಗೆ ಬಾಡಿಗೆಗೆ ಬಂದಿದ್ದ ಮುದಿ ಸಂಸಾರದ ಹದಿ ಹರಯದ ಸದಸ್ಯೆಯಾದ ಆಕೆಯ ಮುಖವನ್ನು ಅವಳು ಹಚ್ಚಿದ ನಕ್ಷತ್ರಕಡ್ಡಿಯ ಬೆಳಕಿನಲ್ಲಿ ನಾನು ದಿಟ್ಟಿಸಿದಾಗ ಅವಳೂ ಓರೆಗಣ್ಣಿಂದ ನನ್ನನ್ನು ದಿಟ್ಟಿಸಿದಳು. ಮುಂದಿನ ಒಂದು ಗಂಟೆ ಇಬ್ಬರಿಗೂ ದೀಪಾವಳಿ.

ಲೇಖನ ವರ್ಗ (Category): 

ಗುಣಕ್ಕೆ ಧರ್ಮವಾವುದಯ್ಯ?

field_vote: 
No votes yet
To prevent automated spam submissions leave this field empty.

"ಹೇಮಂತ್. ಇವತ್ತು ಬರ್ತಾ ಅನೂಪ್‌ನೂ ಕರೆದುಕೊಂಡು ಬಾ" ಓವನಿಂದ
ಪಾತ್ರೆ ತೆಗೆಯುತ್ತಾ ಹೇಳಿದರು ಸುಮಾ
"ಯಾಕಮ್ಮ?" ಹೇಮಂತ್‌ನ ಪ್ರಶ್ನೆ
ಹೇರ್ ಡ್ರೈಯರ್ ನಿಂದ ಒಣಗಿಸಿಕೊಳ್ಲುತ್ತಿದ್ದಂತೆ ನಿಲ್ಲಿಸಿದಳು ಶೈಲಾ.ಮುಖದ ಬಣ್ಣಬದಲಾಯಿತು
"ಎಲ್ಲಾ ಹೇಳಿಬಿಡೋಣ . ಅವನಿಂದ ಯಾವುದನ್ನೂ ಮುಚ್ಚಿಡೋದು ಬೇಡ" ಗಂಭೀರವಾಗಿ ಹೇಳಿದರು

ಲೇಖನ ವರ್ಗ (Category): 

ಅಪರಿಚಿತ ಚಲುವೆಗೊಂದು ಪತ್ರ

field_vote: 
No votes yet
To prevent automated spam submissions leave this field empty.

ಅಪರಿಚಿತ ಸ್ಪೂರ್ತಿಯೇ

ಲೇಖನ ವರ್ಗ (Category): 

ಪ್ರತಿ ಮನದೊಳಗೊಂದು ಬೆಳಕು

field_vote: 
No votes yet
To prevent automated spam submissions leave this field empty.

"ಸಾರ್ ಇದೊಂದು ತಿಂಗಳು ಅಡ್ಜಸ್ಟ್ ಮಾಡಿಕೊಳ್ಳಿ ಹೇಗಾದರೂ ಮಾಡಿ ಬಾಡಿಗೆ ತಂದು ಹೊಂದಿಸ್ತೀನಿ. " ಆ ಹುಡುಗ ಗೋಗರೆಯುತ್ತಿದ್ದ.

ಲೇಖನ ವರ್ಗ (Category): 

ಮಂಜು ಕರಗಿದ ಸಮಯ....

field_vote: 
No votes yet
To prevent automated spam submissions leave this field empty.

ಶ್ಯಾಮ್ ನನ್ನ ತಲೆ ಸವರುತ್ತಿದ್ದಾನೆ. ಮುಖದ ಮೇಲೆ ಅದೇ ಸುಂದರ ನಗೆ, ಮುಗ್ಧ ಕಣ್ಗಳು..., ಆ ಕಣ್ಣಿಗಲ್ಲವೇ ತಾನೇ ನಾನು ಮನಸೂರೆಗೊಂಡಿದ್ದು ಮತ್ತು ಅವನ ಬಾಳಸಂಗಾತಿಯಾದದ್ದು.! ನಿದ್ದೆ ಇನ್ನೊ ಕಣ್ಣ ತುಂಬ ಹಾಗೇ ತುಂಬಿಕೊಂಡಿದೆ.. ಅರೆತೆರೆದ ಕಣ್ಣುಗಳಿಂದ ಅವನ ನೋಡುತ್ತಾ ನಾ ಕನಸಿನ ಲೋಕಕ್ಕೆ ತೇಲಿ ಹೋದೆ... ಇಬ್ಬರ ಜೀವನದ ಸವಿಪಯಣದ ಹಾದಿಯ ನೆನೆಸುತ್ತಾ....

**************

ಲೇಖನ ವರ್ಗ (Category): 

ಅನುರಾಗ ಅರಳಿತು!!!(ಸಣ್ಣ ಕಥೆ)

field_vote: 
No votes yet
To prevent automated spam submissions leave this field empty.

ಅನುರಾಗ ಅರಳಿತು!!!(ಸಣ್ಣ ಕಥೆ)
ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ( ಚಿತ್ರ ರಚನೆ: ಹಂಸಾನಂದಿ )

ಚಿತ್ಕಲ ದೇವರಿಗೆ ದೀಪ ಹಚ್ಚುತ್ತಾ "ಈ ಹುಡುಗಿಗೆ ಒಂದು ನೆಮ್ಮದಿಯಾದ ನೆಲೆ ತೋರಿಸಿಬಿಡಪ್ಪಾ, ಪರಮಾತ್ಮಾ" ಎಂದು ಬೇಡಿಕೊಳ್ಳುತ್ತಾ, ಮನಸ್ಸಿನಲ್ಲೇ ದೇವರ ಸ್ತುತಿಯಲ್ಲಿ ಕಣ್ಣು ಮುಚ್ಚಿ ದೇವರ ಮನೆಯಲ್ಲೇ ಕುಳಿತರು.

ಲೇಖನ ವರ್ಗ (Category): 

ಡಿಕೆಎನ್ ಮೇಷ್ಟ್ರು ಮತ್ತವರ ನಗು ಭಾಗ ೩

field_vote: 
No votes yet
To prevent automated spam submissions leave this field empty.

"ನೀವು ಬದಲಾಗಿಬಿಟ್ರಿ ಸರ್ .ನಿಮಗೆ ನೆನಪಿದ್ಯಾ ೧೯೮೦ ಬ್ಯಾಕ್ ಕರ್ಕೊಂಡು ನಾವೆಲ್ಲಾ ಜೋಗಕ್ಕೆ ಹೋಗಿದ್ವಿ .ನಿಮ್ಮ ಸ್ಕ್ರಿಕ್ಟ್ ನೆಸ್ ನೋಡಿನೇ ಎಷ್ಟೋ ಜನ ತಂದೆ ತಾಯಂದಿರು ತಮ್ಮ ಹೆಣ್ಣುಮಕ್ಕಳನ್ನ ಟ್ರಿಪ್ಗೆ ಕಳಿಸಿದ್ರು . ಜೋಗದಲ್ಲಿ ಎಲ್ಲರಿಗೂ ಫಾಲ್ಸ್ ತೋರಿಸಿ ಕರೆಂಟ್ ಹೇಗೆ ತಯಾರಾಗುತ್ತೆ ಅಂತ ಹೇಳಿ ವಾಪಸು ಹೋಗಕ್ಕೆ ಮೇಲಕ್ಕೆ ಬಂದ್ವಿ .

ಲೇಖನ ವರ್ಗ (Category): 

ಡಿಕೆಎನ್ ಮೇಷ್ಟ್ರು ಮತ್ತವರ ನಗು ಭಾಗ ೨

field_vote: 
No votes yet
To prevent automated spam submissions leave this field empty.

ಅಮಾನ್ ಎಲ್ಲರೆದುರು ಠೀವಿಯಿಂದ 'ನೋಡಿದ್ರ ಮೇಷ್ಟ್ರು ಹೆದರಿಕೊಂಡುಬಿಟ್ರು' ಎಂದು ಬೀಗಿದ .ಅಂದಿನಿಂದ ಹುಡುಗರನ್ನ ಹೊದೆಯುವುದನ್ನ ಬಿಟ್ಟು ಬಿಟ್ರು ಡಿಕೆಎನ್ ಮೇಷ್ಟ್ರು."ಸಾರ್ ಸಾರ್ ಇವ್ನು ಬೈತ ಇದಾನೆ ಸಾರ್",ಸ್ಟಾಪು ರೂಮಿನಲ್ಲಿ ಕೂತಿದ್ದ ಡಿಕೆಎನ್ ಮೇಷ್ಟ್ರಿಗೆ ರಮೇಶ್ ನ ಕಂಪ್ಲೇಂಟ್ ಬಂತು ."ಏನಂತ ಬೈದ್ನೋ ಇವ್ನು" ."ಸಾರ್ ನನ್ಮಗನೇ ಅಂತಾನೆ ಸಾರ್".ಅಂದ ರಾಜೇಶ್ .ಮೇ

ಲೇಖನ ವರ್ಗ (Category): 

ಡಿಕೆಎನ್ ಮೇಷ್ಟ್ರು ಮತ್ತವರ ನಗು

field_vote: 
No votes yet
To prevent automated spam submissions leave this field empty.

ಡಿಕೆಎನ್ ಮೇಷ್ಟ್ರು ಕೆಂಡಾಮಂಡಲವಾಗಿದ್ರು. ಅವರ ಕೈಯೊಳಗಿನ ಕೋಲು ಯಾವಾಗ ಅಮಾನ್ ನ ಮೈಮೇಲೆ ಹರಿದಾಡಲಿ ಎಂದು ಕಾಯುತ್ತಿರುವಂತೆ ತೋರುತ್ತಿತ್ತು .

ಲೇಖನ ವರ್ಗ (Category): 

ಛೇ! ಇವನೆ೦ಥ ಅಸಭ್ಯ ಮನುಷ್ಯ...

field_vote: 
No votes yet
To prevent automated spam submissions leave this field empty.

ಅದೊ೦ದು ಏರೋಡ್ರೋಮ್. ಯುವತಿಯೊಬ್ಬಳು ತನ್ನ ಫ್ಲೈಟ್ ನ್ನು ಹಿಡಿಯಲು ಲೌ೦ಜ್ ಗೆ ಬರುತ್ತಾಳೆ. ತನ್ನ ಫ್ಲೈಟ್ ಬರಲು ಇನ್ನೂ ಕೆಲವು ಗ೦ಟೆಗಳು ಇದ್ದಿದ್ದರಿ೦ದ ಸಮಯ ಕಳೆಯಲು ಆಕೆ ಅಲ್ಲಿನ ಅ೦ಗಡಿಯೊ೦ದರಲ್ಲಿ ಒ೦ದು ಪುಸ್ತಕವನ್ನೂ ಹಾಗೆಯೇ ಕುಕಿಯ ಒ೦ದು ಪ್ಯಾಕೆಟ್ ನ್ನು ಖರೀದಿಸಿ ಏರ್ ಪೋರ್ಟ್ ನ ವಿಐಪಿ ಲೌ೦ಜ್ ನತ್ತ ಮರಳುತ್ತಾಳೆ.

ಲೇಖನ ವರ್ಗ (Category): 

ಅನುಬಂಧ

field_vote: 
No votes yet
To prevent automated spam submissions leave this field empty.

"ಇಲ್ಲ, ಇನ್ನು ನನ್ನಿಂದ ಆಗುವುದಿಲ್ಲ, ತಾಳ್ಮೆಗು ಒಂದು ಮಿತಿ ಇದೆ, ಇವನ ಹಾವಭಾವ ನನ್ನನ್ನು ಕೊಲ್ಲುತಿದೆ. ಎಷ್ಟು ಅಂತ ಇವನ ವರ್ತನೆ ಸಹಿಸಲಿ" ಎಂದು ಸುಕೃತಿ ತನ್ನ ಮನಸ್ಸಿನಲ್ಲೆ ವೇದನೆಯನ್ನು ಅನುಭವಿಸುತ್ತಿರುವಾಗಲೇ ಸುಮಂತ ರೂಮಿಗೆ ಬರುವುದನ್ನು ಗಮನಿಸಿದಳು. ಈ ದಿನ ವಿಚ್ಛೇದನದ ಬಗ್ಗೆ ತೀರ್ಮಾನಿಸಲೇಬೇಕು ಎಂದು ದೃಢವಾಗಿ ನಿಶ್ಚಯ ಮಾಡಿದಳು.

ಲೇಖನ ವರ್ಗ (Category): 

ಹಾಳೆ...

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮುಸ್ಸಂಜೆ ಬದುಕಿನಲ್ಲೊಂದು ವಿದಾಯದ ಘಳಿಗೆ

field_vote: 
No votes yet
To prevent automated spam submissions leave this field empty.

ಮದುವೆಯ ಸಡಗರ ತೆರೆ ಸರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಎಲ್ಲಾ ಜನರಿಗೂ ಅದೊಂದು ರೀತಿಯ ತಮಾಷೆಯ ಕಾರ್ಯಕ್ರಮ. ಎಲ್ಲರ ಮುಖದಲ್ಲೂ ನಗು . ಯಾರು ಅಕ್ಕಿ ಮೊದಲು ಹಾಕುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಪ್ರಮೀಳಾಳೂ ವಧುವಿನ ಅಲಂಕಾರದಲ್ಲಿದ್ದ ಮಗಳ ಕೈ ಎತ್ತಿ ಹಿಡಿದು ನಿಂತಿದ್ದಳು.

ಲೇಖನ ವರ್ಗ (Category): 

ಬಾಲ್ಯದ ಒಂದು ಪುಟ

field_vote: 
No votes yet
To prevent automated spam submissions leave this field empty.

ಹೀಗೊಂದು ಬಾಲ್ಯ... ಹಾಗೇ ಸುಮ್ಮನೆ !!!

ಲೇಖನ ವರ್ಗ (Category): 

’ಹ’ಕಾರಕ್ಕೆ ಹೂಂಗುಟ್ಟುವಿರಾ?

field_vote: 
Average: 5 (1 vote)
To prevent automated spam submissions leave this field empty.

’ಹ’ಕಾರಕ್ಕೆ ಹೂಂಗುಟ್ಟುವಿರಾ?

ಲೇಖನ ವರ್ಗ (Category): 

ಓದು ಬರಹ ಬರುತ್ತಿದ್ದಿದ್ದರೆ !

field_vote: 
No votes yet
To prevent automated spam submissions leave this field empty.

ಪರದೇಶಿಯಾದ ಸ್ಪೋಷ್ ಎಲ್ಲೀಸ್ ದ್ವೀಪದಲ್ಲಿ ದೋಣಿಯೊ೦ದರಿ೦ದ ಇಳಿದು ಜೀವನೋಪಾಯಕ್ಕಾಗಿ ಕೆಲಸ ಹುಡುಕಲು ಅರ೦ಭಿಸಿದ. ಮನೆ ಮನೆಗೂ ಹೋಗಿ ಬಾಗಿಲು ಬಡಿದು ಕೆಲಸ ಕೇಳಿದರೂ ಕೆಲಸ ದೊರಕಲಿಲ್ಲ. ಹೀಗೆ ಒಮ್ಮೆ ಆತ ವೇಶ್ಯಾಗೃಹ ಒ೦ದರ ಬಾಗಿಲು ಬಡಿದ. ಆತನ ಕಥೆ ಕೇಳಿ ಮರುಗಿದ ವೇಶ್ಯಾಗೃಹದ ಯಜಮಾನಿ ಅವನಿಗೆ ನೆಲಮಾಳಿಗೆಯನ್ನು ಸ್ವಚ್ಛಮಾಡುವ ಕೆಲಸ ಕೊಟ್ಟಳು.

ಲೇಖನ ವರ್ಗ (Category): 

ಬಿಳಿಕಾಗೆ (ಕಥೆ)

field_vote: 
No votes yet
To prevent automated spam submissions leave this field empty.

ಮಧ್ಯಾಹ್ನದ ಊಟ ಮುಗಿಸಿ, ಚೇರ್‍‍ನಲ್ಲಿ ಹಿಂದಕ್ಕೊರಗಿ ಕುಳಿತಿದ್ದ ಸೊನಾಲಿ ಅಂತರ್ಜಾಲದ ಪುಟಗಳ ಮೇಲೆ ಕಣ್ಣಾಡಿಸಿದಳು. ಕಂಪ್ಯೂಟರ್‍‍ನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಂಡು ಸೋಜಿಗದಿಂದ ಮತ್ತೊಮ್ಮೆ ಓದಿಕೊಂಡಳು. ಅವಳ ನಿರೀಕ್ಷೆಗೂ ಮೀರಿದ ವಾಕ್ಯ ಅದು. ಕೂಡಲೆ ಪರದೆಯನ್ನು ಮುಚ್ಚಿ, ಅತ್ತಿತ್ತ ದೃಷ್ಟಿ ಹಾಯಿಸಿದಳು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದ ಮೇಲೆ ಸಮಾಧಾನವೆನಿಸಿತು. ಯಾರೋ ಕುಚೋದ್ಯಕ್ಕೆ ಕಳುಹಿಸಿದ ಇ-ಮೇಲ್ ಅದು! ಆದರೆ ಸ್ಪಷ್ಟವಾಗಿ ಬರೆದಿತ್ತು. `ಸೊನಾಲಿ, ಸಂಜೆ ಆಫೀಸು ಮುಗಿಸಿ ನೇರವಾಗಿ ಟಾರಸಿಗೆ ಬಾ. ಹೇಳಿದಷ್ಟು ಮಾಡದಿದ್ದರೆ ಪರಿಣಾಮ ನೆಟ್ಟಗಾಗಿರೋದಿಲ್ಲ' ಅದನ್ನು ನೆನೆಯುತ್ತಲೇ ಅಂಗೈ ಕೂಡ ಬೆವರಿತು.
ಈ ಹೊತ್ತಿನಲ್ಲಿ ತಾನು ಇ-ಮೇಲ್ ತೆರೆದು ನೋಡುವ ವಿಷಯ ಗೊತ್ತಿರುವುದು ಕೆಲವರಿಗೆ ಮಾತ್ರ. ಅದರಲ್ಲೂ ಮೀಸೆ ಬೋಳಿಸಿ, ಹೆಣ್ಣಿನ ವೇಷ ತೊಡಿಸಿದ ಹಾಗಿರುವ ಕಂಪ್ಯೂಟರ್‍‍ನ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವ ಹೆಣ್ಣು ವಾಸಂತಿಗೆ! ಆ ವಿಷಯದಲ್ಲಿ ತನಗಿಂತ ಬೇರೆಯವರಿಗೆ ಹೆಚ್ಚು ತಿಳಿಯಬಾರದು ಅನ್ನುವ ಸಣ್ಣ ಬುದ್ಧಿಯ ಹೆಣ್ಣು ಅವಳು. ಅಂತರ್ಜಾಲ ನೋಡುವುದೇ ದೊಡ್ಡ ಅಪರಾಧವೆಂದು, ಆ ವಿಷಯವನ್ನು ಮೇಲಧಿಕಾರಿಗೂ ತಿಳಿಸಿದ್ದಳು. ಸ್ವಂತ ಬುದ್ಧಿ ಇಲ್ಲದ ಮೇಲಧಿಕಾರಿ ವಾಸಂತಿಯ ಮಾತನ್ನು ಕೇಳಿ, ಸೋನಾಲಿಯನ್ನು ಕರೆದು ಚೆನ್ನಾಗಿ ಬೈದಿದ್ದ. ಹೆಣ್ಣು ವೇಷದ ಹೆಣ್ಣಿನಂತೆ ಹಲ್ಲು ಪ್ರದರ್ಶಿಸಿ ಅಧಿಕಾರಿಯ ಮನಸ್ಸು ಗೆಲ್ಲುತ್ತಿದ್ದರೆ ಸುಮ್ಮನಿರುತ್ತಿದ್ದನೇನೋ?
ಅವಳೇ ಏಕೆ ಈ ಪತ್ರವನ್ನು ಕಳುಹಿಸಿರಬಾರದು. ಸೊನಾಲಿ ಎದ್ದು ಒಮ್ಮೆ ಅತ್ತ ನೋಡಿದಳು. ಹೊಟ್ಟೆಕಿಚ್ಚಿನ ಹೆಣ್ಣು ಅಲ್ಲಿರಲಿಲ್ಲ. ಮೇಲ್ ಕಳುಹಿಸಿದವರು ಯಾರು? ಇಷ್ಟಕ್ಕೂ ಟಾರಸಿಯ ಮೇಲೆ ಬರುವಂತೆ ತನ್ನನ್ನು ಕರೆದಿರುವುದು ಏಕೆ? ಟಾರಸಿಯ ಮೇಲೆ ಬರುವಂತೆ ಕರೆದಿರುವುದರಿಂದ ಇಲ್ಲಿಯೇ ಯಾರದೋ ಕೈವಾಡ! ಅನುಮಾನ ಬಲವಾಯಿತು. ಪ್ರತಿಯೊಂದು ಮೇಜಿನ ಮುಂದೆ ಕುಳಿತಿರುವ ವ್ಯಕ್ತಿಯ ಮೇಲೆ ಸಂಶಯದ ನೋಟ ಹರಿಸಿದಳು. ಯಾರ ಮೇಲೂ ಗಾಢವಾದ ಅನುಮಾನ ಸುಳಿಯಲಿಲ್ಲ.

ಲೇಖನ ವರ್ಗ (Category): 

ವ್ಯಾಲಂಟೈನ್ಸ್ ಡೇ

field_vote: 
No votes yet
To prevent automated spam submissions leave this field empty.

ತ್ರಿಲೋಕ ಸಂಚಾರಿಯಾದ ನಾರದರು ಈ ನಡುವೆ ಭೂಲೋಕ ಸುತ್ತುವುದು ಹೆಚ್ಚಾಯಿತು. ಹೊಸದಾಗಿ ಬಂದ ಮಂತ್ರಿವರ್ಗ ಸುಮ್ಮ ಸುಮ್ಮನೆ ಫ಼ಾರಿನ್ ಟ್ರಿಪ್ ಹಾಕುವ ಹಾಗೆ. ಎಷ್ಟೇ ಆಗಲಿ ’ಸ್ವರ್ಗವಾಣಿ’ ಪತ್ರಿಕೆಯ ಖಾಯಂ ವರದಿಗಾರ ಆಗಿರುವುದರಿಂದ ಯಾರೂ ಅವರನ್ನು ತಡೆಯುತ್ತಿರಲಿಲ್ಲ. ವಾಪಸ್ಸು ಬಂದ ಮೇಲೆ ಅವರ ಬಿಲ್ ಸರಿಯಾಗಿ ಚುಕ್ತಾ ಆಗುತ್ತಿತ್ತು.

ಲೇಖನ ವರ್ಗ (Category): 

ಅಮಾವಾಸ್ಯೆ

field_vote: 
Average: 4 (4 votes)
To prevent automated spam submissions leave this field empty.

ಅಂದು ಅಮಾವಾಸ್ಯೆ. ಹನ್ನೆರಡು ಘಂಟೆಯ ಸಮಯ. ಕಪ್ಪು ಬಣ್ಣದ ಡಾಂಬರು ರಸ್ತೆಯ ಮೇಲೆ ಕಪ್ಪು ಬಣ್ಣದ ಕಾರಿನಲ್ಲಿ ಕುಳಿತು ಹೋಗುತ್ತಿದ್ದೆ. ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗುತ್ತಿತ್ತು. ಹೊರಡುವ ಆತುರದಲ್ಲಿ ಟ್ಯಾಂಕಿನಲ್ಲಿ ಪೆಟ್ರೋಲ್ ಇದೆಯೋ ಇಲ್ಲವೋ ನೋಡಲಿಲ್ಲ. ಹಿಂದೆ ಮುಂದೆ ಯಾವ ಗಾಡಿಗಳ ಸುಳಿವೂ ಇರಲಿಲ್ಲ. ಸುತ್ತಲೂ ಬರೀ ಮರಗಳೇ ಇದ್ದು ಸಿಗ್ನಲ್ ಸಿಗದೇ ಇದ್ದುದರಿಂದ ಮೊಬೈಲ್ ಇದ್ದೂ ಇಲ್ಲದಂತಾಗಿತ್ತು. ಯಾರೋ ಗಾಡಿಯ ಮುಂದೆ ಹಾದು ಹೋದಂತಾಗಿ ಗಕ್ಕನೆ ಬ್ರೇಕ್ ಹಾಕಿ ನಿಂತೆ. ಯಾರೂ ಕಾಣಲಿಲ್ಲ. ಭ್ರಮೆ ಇರಬೇಕು. ಹಿಂದಿನ ರಾತ್ರಿ ನಿದ್ದೆ ಬೇರೆ ಸರಿಯಾಗಿ ಆಗಲಿಲ್ಲ.
ಈ ಹಾಳಾದ ರಮೇಶ ಊರಾಚೆ ತೋಪಿನಲ್ಲಿ ಮನೆಗೇ ಬನ್ನಿ ಅಂತ ಕರೆದಿದ್ದಾನೆ ವಿದೇಶದಲ್ಲಿರುವ ರಮೇಶ ಅಪರೂಪಕ್ಕೆ ಒಮ್ಮೆ ಊರಿಗೆ ಬಂದಾಗ ಅಲ್ಲಿ ಉಳಿದುಕೊಂಡು ಎಲ್ಲ ಸ್ನೇಹಿತರನ್ನು ಅಲ್ಲಿಗೇ ಕರೆಸಿಕೊಳ್ಳುವುದು ವಾಡಿಕೆ. ಯಾವಾಗಲೂ ಗುಂಪಲ್ಲಿ ಗೋವಿಂದ ಅಂತ ಸ್ನೇಹಿತರ ಜೊತೆ ಹೋಗುತ್ತಿದ್ದೆ. ಹಾಳಾದವರು ಇವತ್ತು ಯಾರೂ ಜೊತೆಗೆ ಸಿಗಲಿಲ್ಲ. ಎಲ್ಲರೂ ಮುಂಚೇನೇ ಹೊರಟುಹೋಗಿದ್ದಾರೋ ಅಥವಾ ಆಮೇಲೆ ಬರುತ್ತಾರೋ ಗೊತ್ತಿಲ್ಲ. ನನ್ನ ಎಣಿಕೆ ಪ್ರಕಾರ ಇನ್ನು ಹತ್ತು ಕಿಲೋಮೀಟರ್ ಒಳಗೆ ಅವನ ಕಾಡಿನ ಮನೆ ಸಿಗಲಿಲ್ಲವೋ ಕಾರು ನಿಂತೇ ಹೋಗುವುದು ಗ್ಯಾರಂಟಿ.
ಅದೇನೇನು ಅಡಗಿವೆಯೋ ಈ ಮರಗಳ ಮಧ್ಯೆ ಯಾರಿಗೆ ಗೊತ್ತು. ಗಾಡಿ ನಿಂತಾಗ ಕಾರಿನಲ್ಲೇ ಕುಳಿತರೆ ಯಾವುದಾದರೂ ಬೇರೇ ಗಾಡಿ ಬಂದಲ್ಲಿ ನಿಲ್ಲಿಸಲೂ ಪುರುಸೊತ್ತಿರುವುದಿಲ್ಲ. ಹಾಗೆಂದು ಹೊರಗೆ ನಿಂತರೆ ಒಂದೆಡೆ ಚಳಿ ಇನ್ನೊಂದೆಡೆ ಭಯ. ಹಾವು ಬಂದು ’ಹಾಯ್’ ಎಂದರೆ? ಕರಡಿ ಬಂದು ಕಿಸ್ ಕೊಟ್ಟರೆ? ಅಯ್ಯಯ್ಯೋ, ಏನೇನೋ ಆಲೋಚನೆಗಳು ಬರತೊಡಗಿದವು.

ಲೇಖನ ವರ್ಗ (Category): 

ತಬ್ಬಲಿಯು ನೀನಾದೆ ಮಗುವೆ!

field_vote: 
No votes yet
To prevent automated spam submissions leave this field empty.

'ತಬ್ಬಲಿಯು ನೀನಾದೆ ಮಗುವೆ,
ಹೆಬ್ಬುಲಿಯ ಬಾಯನ್ನು ಹೊಗುವೆ,
ಇಬ್ಬರಾ ಋಣ ತೀರಿತೆಂದು... '

ಕರ್ನಾಟಕದ ಎಲ್ಲ ಮನ ಮನೆಗಳಲ್ಲೂ ಮನೆ ಮಾಡಿರುವ 'ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ' ಕಥೆಯಿದು! ಗೋವಿನ ಹಾಡಿನ ಈ ಪುಣ್ಯಕೋಟಿಯ ಕಥೆಯನ್ನು ಕನ್ನಡನಾಡಿನಲ್ಲಿ ಕೇಳದವರಿಲ್ಲ ( ಕಡೇ ಪಕ್ಷ ಒಂದು ಸಾರಿಯಾದರೋ).

ಲೇಖನ ವರ್ಗ (Category): 

ಕಣ್ಗಳು ತು೦ಬಿರಲು ಕ೦ಬನಿ ಧಾರೆಯಲಿ

field_vote: 
No votes yet
To prevent automated spam submissions leave this field empty.

ಈ ಪ್ರೀತಿ ಒ೦ತರಾ... ಕಚಗುಳಿ...! ಇಬ್ಬರ ಹೃದಯದ ನಡುವೆಯ ಮಧುರ ಪಿಸುಮಾತು. ಆದರೆ ಇದೇ ಪಿಸುಮಾತು... ಕೇವಲ ಒಬ್ಬರ ದನಿಯಾದಾಗ...

............................

 

ಲೇಖನ ವರ್ಗ (Category): 

ಶ್ರಿಮಂತ ಬಡವರು..

field_vote: 
Average: 5 (1 vote)
To prevent automated spam submissions leave this field empty.

ಅದೊಂದು ಶ್ರೀಮಂತ ಕುಟುಂಬ.ಗಂಡ ಹೆಂದತಿ ಮತ್ತು ಅವರ ಒಂದು ಮುದ್ದಾದ ಮಗು. ಗಂಡ ಹೆಂಡತಿಗೆ ಮಗನೆಂದರೆ ತುಂಬಾ ಪ್ರೀತಿ. ಅವರಲ್ಲಿದ್ದ ಶ್ರಿಮಂತಿಕೆಯಿಂದ ಮಗನನ್ನು ತುಂಬಾ ಮುದ್ದಿನಿಂದ ಬೆಳೆಸುತ್ತಿದ್ದರು. ಮಗ ಬಯಸಿದ ಪ್ರತಿಯೊಂದು ಬಯಕೆ ಯನ್ನು ಇಡೇರಿಸುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ತಂದೆಗೆ ತನ್ನ ಶ್ರಿಮಂತಿಕೆಯ ಬಗ್ಗೆ ತುಂಬಾ ಅಹಂಕಾರವಿತ್ತು.

ಲೇಖನ ವರ್ಗ (Category): 

ನನ್ನ 'ಸು' ಗೆ

field_vote: 
No votes yet
To prevent automated spam submissions leave this field empty.

ನನ್ನ 'ಸು' ಗೆ, ಹಿಂದಿನ ವರ್ಷ ಇದೇ ದಿನದಂದು ನೀನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚಲು ಬಂದಾಗ, ನಾಚದೇ ನಾನು ನಿನ್ನ ಬಟ್ಟಲಿನಿಂದ ಬಾಚಿದ್ದೆ, ನೆನಪಿದೆಯಾ..? ನೀನು ನನ್ನ ಮುಖವನ್ನೂ ನೋಡದೆ ನೀಲಿ ಜರೀ ಲಂಗವನ್ನು ಎತ್ತಿ ಓಡುವಾಗ ನಿನ್ನ ಗೆಜ್ಜೆಗಳನ್ನೇ ಕೇಳುತ್ತಾ ನಿಂತಿದ್ದೆ ನಾನು... ನಿನ್ನ ನಾ ಬಸ್ಸಲ್ಲೇ ನೋಡಿದ್ದೆ.. ಸುಮ್ಮನೆ ನೋಡುತ್ತಾ ನಿಂತಿರುತ್ತಿದ್ದೆ..ಕಂಡಕ್ಟರನ ಬಳಿ ಎರ್ಅಡು ರೂಪಾಯಿ ಚಿಲ್ಲರೆಗೆ ಜಗಳವಾಡುವಾಗ, ಚಪ್ಪಲಿ ಮೆಟ್ಟಿ ನಿನ್ನ ಹಿಂದೆ ನಿಂತ ದಪ್ಪ ಹೆಂಗಸು ಮೈಮೇಲೆ ಬಿದ್ದಾಗ ನೀನು ದಬಾಯಿಸುವಾಗ, ಪಕ್ಕದ ಸೀಟಿನಲ್ಲಿ ಕುಳಿತ ಹೆಂಗಸಿನ ಪುಟ್ಟ ಮಗು ನಿನ್ನ ಉದ್ದ ಜಡೆ ಎಳೆಯುವಾಗ ನಾನಲ್ಲೇ ಇರುತ್ತಿದ್ದೆ.. ನೀನು ನನ್ನ ನೋಡಲಿಲ್ಲವೋ, ನೋಡಿದರೂ ನೋಡದಂತೆ ನಟಿಸಿದೆಯೋ ನಾಕಾಣೆ..

ಲೇಖನ ವರ್ಗ (Category): 

ಬ್ಯಾಸ್ಕೆಟ್ ಬಾಲೂ - ಮಹಾಭಾರತವೂ

field_vote: 
No votes yet
To prevent automated spam submissions leave this field empty.

ಹಿಂದಿನ ದಿನ ರಾತ್ರಿ ಮಲಗುವ ಮುನ್ನ ಯಾವುದೋ ಚಾನಲ್’ನಲ್ಲಿ ಮಹಾಭಾರತ ನೋಡಿದ್ದರ ಫಲವೋ ಏನೋ, ಇಂದು ಮುಂಜಾನೆ ಎದ್ದಾಗಿನಿಂದ ಬರೀ ಅದರ ಪಾತ್ರಗಳ ಸುತ್ತಲೇ ನನ್ನ ಮನ ಸುತ್ತುತ್ತಿದೆ. ಬೆಳಿಗ್ಗೆ, ಕಿಟಕಿಯಿಂದ ತೂರಿ ಬಂದ ಸೂರ್ಯನ ರಶ್ಮಿಗೆ ನಮಿಸಿ ಅಂದುಕೊಂಡೆ, ಯಾರನ್ನೂ ಸುಟ್ಟು ಭಸ್ಮ ಮಾಡುವಷ್ಟು ಶಕ್ತಿಯಿದ್ದೂ, ಕುಂತಿಯಲ್ಲಿ ಹುಟ್ಟಿದ ನಿನ್ನ ಮಗ ಕರ್ಣನಿಗೆ ಆಗುತ್ತಿದ್ದ ಅನ್ಯಾಯ ಕಂಡೂ ಸುಮ್ಮನೇಕಿದ್ದೆ ? ಪ್ರತಿ ಕ್ಷಣವೂ ಜಗತ್ತನ್ನು ಕಾಣುವ ನಿನಗೆ, ಈ ವಿಷಯ ಏಕೆ ಕಾಣಲಿಲ್ಲ ? ಅಥವಾ ಅದ್ಭುತ ಶಕ್ತಿಯ ಜೊತೆ ಅಷ್ಟೇ ತಾಳ್ಮೆಯೂ, ಕ್ಷಮಾ ಗುಣವೂ ಇದೆಯೋ ನಾನರಿಯೆ !
ಶನಿವಾರವಾದ್ದರಿಂದ ಸ್ನಾನ ಬಿಟ್ಟು ಮಿಕ್ಕ ನಿತ್ಯಕರ್ಮ ಮುಗಿಸಿ ಮಹಡಿ ಇಳಿದು ಅಡಿಗೆ ಮನೆಗೆ ಕಾಫಿ ಕುಡಿಯಲು ಬಂದೆ. ನನ್ನಾಕೆ ಯಾರೊಂದಿಗೋ ಫೋನಿನಲ್ಲಿ ಹೇಳುತ್ತಿದ್ದಳು ’ಚಳಿಗೆ ಮಜ್ಜಿಗೆ ಆಗಲಿಲ್ಲ ಅಂತ ಒವನ್’ನಲ್ಲಿಟ್ಟೆ. ಮಧ್ಯಾನ್ನದ ಹೊತ್ತಿಗೆ ಮಜ್ಜಿಗೆ ಆಗಿತ್ತು’.
ಗಾಂಧಾರಿಯು ತನ್ನ ಗರ್ಭ ಹೊತ್ತು ಒಂದು ವರ್ಷವಾದರೂ ಹಡೆಯದಿರುವುದನ್ನು ಕಂಡು ಎಲ್ಲರಿಗೂ ಅಲೋಚನೆಯಾಯಿತು. ಭೀಷ್ಮರು ವ್ಯಾಸರನ್ನು ಭೇಟಿಯಾದರು. ಅವರು ಮತ್ತೊಂದು ವರ್ಷ ಕಾಯಲು ತಿಳಿಸಿದರು. ಮತ್ತೊಂದು ವರ್ಷ ತುಂಬಲು, ದೊಡ್ಡ ಮಾಂಸದ ಮುದ್ದೆಯನ್ನು ಹೆತ್ತಳು ಗಾಂಧಾರಿ. ವ್ಯಾಸರು ಬಂದು, ಆ ಮುದ್ದೆಯನ್ನು ನೂರು ಭಾಗ ಮಾಡಿ ಬೆಣ್ಣೆಯ ಜಾರಿಯಲ್ಲಿಟ್ಟು, ಉಳಿದ ಸ್ವಲ್ಪ ಮಾಂಸದ ಮುದ್ದೆಯನ್ನು ನೂರೊಂದನೆಯ ಜಾರಿಯಲ್ಲಿಟ್ಟು ಭೀಷ್ಮರಿಗೆ ಒಪ್ಪಿಸಿ ಜಾಗರೂಕತೆಯಿಂದ ನೋಡಿಕೊಳ್ಳುವಂತೆ ಹೇಳಿದರು. ಮತ್ತೆರಡು ವರ್ಷ ಕಳೆಯಲು ಮಾಂಸದ ಮುದ್ದೆಗಳು ಮಕ್ಕಳಾಗಿ ಕೌರವರು ಎನಿಸಿಕೊಂಡರು. ಮೊದಲ ನೂರು, ಗಂಡು ಮಕ್ಕಳಾದರೆ ಕೊನೆಯದು ಹೆಣ್ಣು ಮಗು, ದುಷ್ಯಲೆ.

ಲೇಖನ ವರ್ಗ (Category): 

ಬರೀ ಸ್ವಗತ

field_vote: 
No votes yet
To prevent automated spam submissions leave this field empty.

ನನಗೆ ಮದುವೆಯಾಗಿ, ಅಪ್ಪನ ಮನೆಯಿಂದ ಗಂಡನಮನೆಗೆ ಬಂದು ನಾಕು ತಿಂಗಳಾಯ್ತು.ಇನ್ನೂ ಈ ಮನಯನ್ನ ನನ್ನ ಮನೆ ಅಂತ ತಕ್ಷಣಕ್ಕೆ ಒಪ್ಪಿಕೊಳ್ಳಕ್ಕೆ ಆಗ್ತಾ ಇಲ್ಲ.ಆದ್ರೂ ಒಪ್ಪ್ಕೊಂಡ ಹಾಗೆ ನಾಟಕ ಆಡಬೇಕು (ಇದು ಸ್ವಲ್ಪ ದಿನ ಮಾತ್ರ ಅಂತ ಗೊತ್ತು).ಇಲ್ಲಿರೋರು ನನ್ನವರೇ ಅಂತ ಗೊತ್ತು ಆದ್ರೂ ಹೆದರಿಕೆ ಇದೆ.ನನ್ನ ಮನೇಲಿ ನಾನು ಕೆಲಸಾನ ತೋಚಿಕೊಂಡು ಮಾಡಿದ ಹಾಗೆ ಇಲ್ಲಿ ಮಾಡೋಕೆ ಸ್

ಲೇಖನ ವರ್ಗ (Category):