ವಿಮರ್ಶೆ

ಮತ್ತೆ ’ಆಸು’; ಈ ಸಲ ’ಸಿಲ್‌ಸಿಲಾ’

field_vote: 
No votes yet
To prevent automated spam submissions leave this field empty.


  ಮಿತ್ರ ಆಸು ಹೆಗ್ಡೆ ಮತ್ತೆ ನಮಗೊಂದು ಭಾವಪೂರ್ಣ ಭಾವಾನುವಾದ ನೀಡಿದ್ದಾರೆ. ’ಕಭೀ ಕಭೀ’ ನಂತರ ಇದೀಗ ’ಸಿಲ್‌ಸಿಲಾ’ ಹಿಂದಿ ಚಿತ್ರದ ಚಂಪೂರೂಪದ ಗೀತೆಯೊಂದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ:

http://sampada.net/blog/asuhegde/20/10/2010/28592

ಲೇಖನ ವರ್ಗ (Category): 

ಒಮ್ಮೆ ಜನಮತಸಾಂದ್ರತೆ (Demography) ಬದಲಾದರೆ...........

       ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಒಮ್ಮೆ ಆ ಪ್ರದೇಶದ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ. ಇಲ್ಲಿ ಎಲ್ಲವೂ ಅಂದರೆ ಆ ಪ್ರದೇಶದ ಭಾಷೆ, ಆಚಾರ-ವಿಚಾರ, ರಾಷ್ಟ್ರನಿಷ್ಠೆ, ನಾಯಕರುಗಳು-ಎಲ್ಲವೂ ಬದಲಾಗುತ್ತದೆ!!! ಇದಕ್ಕೆ ಕಶ್ಮೀರಕಣಿವೆಯ ಉದಾಹರಣೆಯೇ ನಮ್ಮ ಕಣ್ಣುಮುಂದೆ (ಕಣ್ಣಿದ್ದವರಿಗೆ) ಕಾಣುತ್ತಿದೆ. ಕಲ್ಹಣ ಸಾಹಿತ್ಯ ರಚಿಸಿದ ಆ ಕಾಶ್ಮೀರಿ ಭಾಷೆ ಕಣಿವೆಯಲ್ಲಿ ಎಲ್ಲಿದೆ? ಬೋರ್ಡ್ ಗಳಲ್ಲೆಲ್ಲಾ ಅರಬಿ ಲಿಪಿ.

field_vote: 
Average: 4 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಇವರು ಯಾರು ಬಲ್ಲಿರೇನು?

ಲೇಖಕರೊಬ್ಬರ ಕೃತಿಯೊಂದಿಗೆ ನಡೆಸಿದ ಅನುಸಂಧಾನದಿಂದ ಹೊರಹೊಮ್ಮಿದ ಈ ಕೆಳಗಿನ ಸಾಲುಗಳನ್ನು ಓದುತ್ತಿದ್ದ ಹಾಗೆ, ನನ್ನ ಪ್ರಶ್ನೆಗೆ ನಿಮಗೆ ಉತ್ತರ ಹೊಳೆದೇ ಇರುತ್ತದೆ. ಕೊನೆಯಲ್ಲಿ ಅವರ ಫೋಟೋ ಕೂಡಾ ಇದೆ. ಜೊತೆಗೆ ಒಂದು ಕ್ಲೂ ಕೂಡಾ!  • ದೇವರು ಇದ್ದಾನೋ ಇಲ್ಲವೋ. ಆದರೆ ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ. ಅಂತಹ ವಿಸ್ಮಯಗಳ ಹುಡುಕಾಟ ಇವರ ಹವ್ಯಾಸ. 

  • ಒಬ್ಬ ಮನುಷ್ಯ ಸಾಮಾಜಿಕವಾಗಿ ಸ್ವಲ್ಪ ಗುರುತಿಸಲ್ಪಟ್ಟರೆ ಸಾಕು. ಅವನನ್ನು ಒಂದು ಫಂಥಕ್ಕೆ ಸೀಮಿತಗೊಳಿಸಿ, ಅವನ ಪ್ರಗತಿಪರವಾದ, ಜೀವಪರವಾದ ನಿಲುವುಗಳನ್ನು ಮೂಲೆಗುಂಪು ಮಾಡುವ ಪ್ರತಿಗಾಮಿತನ ಶಕ್ತಿಮೂಲ ಯಾವುದು? 

  • ಬಹುಸಂಸ್ಕೃತಿಯ, ಧಾರ್ಮಿಕತೆಯ ನಾಡಿನಲ್ಲಿ ಸಹಬಾಳ್ವೆ ಸಾದ್ಯವಿರುವೆಡೆಯಲ್ಲೆಲ್ಲಾ ಅಂತರಂಗದಲ್ಲಿ ಕ್ರೋಧ, ದ್ವೇಷಗಳಂತೆ ಜಾತಿಯತೆಯೂ ಸ್ಥಾಯಿಯಾಗಿ ಇರುವುದರಿಂದ ಸಾಂಸ್ಕೃತಿಕ ಚಿದ್ರೀಕರಣವಾಗುತ್ತಿರುವುದು.  
field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಚಿಗುರು - ಇತ್ತೀಚೆಗೆ ನಾನು ಓದಿದ ಒಂದು ಒಳ್ಳೆಯ ಕತೆ

ಇತ್ತೀಚೆಗಿನ ಕನ್ನಡ ಲೇಖಕರ ಕೃತಿಗಳನ್ನು ನಾನ್ಯಾಕೋ ಕೆಲಸಮಯದಿಂದ ಓದೇ ಇಲ್ಲ ಎನ್ನುವುದನ್ನು ಪೊಗರಿನಿಂದೇನೂ ಹೇಳುತ್ತಿಲ್ಲ. ಆದರೆ ಹಳೆಯ ಸಾಹಿತಿಗಳ ರಚನೆಗಳಲ್ಲಿ ಓದದೇ ಬಿಟ್ಟುಹೋದವನ್ನು ಆರಿಸುತ್ತಲಿದ್ದ ನಾನು ಇತ್ತೀಚೆಗಿನವರನ್ನು ದೂರವಿಟ್ಟದ್ದಕ್ಕೆ ಗಂಭೀರ ಕಾರಣವೇನೂ ಇಲ್ಲ. ಹೀಗೆಯೇ ‘ಸಪ್ನಾ’ದಲ್ಲಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ’ಸುಮಂಗಲಾ ಕತೆಗಳ’ ಪುಸ್ತಕ ‘ಕಾಲಿಟ್ಟಲ್ಲಿ ಕಾಲುದಾರಿ’ ಕಾಣಸಿಕ್ಕಿತು. ನಿಯತಕಾಲಿಕಗಳಲ್ಲಿ ಸುಮಂಗಲಾರವರ ಕೆಲವು ಕತೆಗಳನ್ನು ಆರೇಳು ವರ್ಷಗಳ ಹಿಂದೆ ಓದಿದ್ದೆ; ಮೆಚ್ಚಿದ್ದೆ. ಆ ನೆನಪಿನಲ್ಲಿ ಈ ಪುಸ್ತಕವನ್ನು ಕೈಗೆತ್ತಿಕೊಂಡೆ.


ಪುಸ್ತಕವನ್ನು ಮನೆಗ ತಂದು ಪುಟ ಮಗುಚುತ್ತಿದ್ದು, ‘ಚಿಗುರು’ ಕತೆಯನ್ನು ಓದತೊಡಗಿದೆ. ಓದುತ್ತಿದ್ದಂತೆಯೇ ಹೃನ್ಮನಗಳು ತುಂಬಿ ಬಂದಂತಾಯಿತು. ಮುಗಿಸಿದ ಮೇಲೆ ನನ್ನ ಅನ್ನಿಸಿಕೆಗಳು ತೀವ್ರಗೊಂಡು ಅವನ್ನು ಬರೆಹಕ್ಕಿಳಿಸಲೇಬೇಕು ಎಂದೆನ್ನಿಸಿತು. ಅದನ್ನಿಲ್ಲಿ post ಮಾಡಿದ್ದೇನೆ. ಇದು ಓದುಗನಾಗಿರುವ ನನ್ನ ಅನ್ನಿಸಿಕೆಯಲ್ಲದೆ ವಿಮರ್ಶೆ ಅಲ್ಲ.  

field_vote: 
Average: 4.8 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಡುಗೆಯವಳೂ ಆದ ಸರಸ್ವತಿ

 ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ’ಜಯನೃಪಕಾವ್ಯ’, ’ನೇಮಿಜಿನೇಶ ಸಂಗತಿ’, ’ಸಮ್ಯಕ್ತ್ವ ಕೌಮುದಿ’ ಮತ್ತು ’ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.


 


ಪರಬ್ರಹ್ಮಹೃದಯಸರಸಿರುಹೋ


 


ದರದೊಳಗೊಗೆದಾತನ ಸಿರಿಮೊಗದೊಳು


 


ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ


 


ಭರದಿಂ ಭವ್ಯಭುಜಂಗರನವಳೊಳ್


 


ನೆರಪುವ ಕೋವಿದೆ ನರಸುರವಂದಿತೆ


 


ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು


 

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

"LOVE" IN BANGALORE

field_vote: 
Average: 4 (2 votes)
To prevent automated spam submissions leave this field empty.

೧) ಈಗಿನ ಕಾಲದ  ಹೈ ಸ್ಕೂಲ್ ಓದುವ ಕೆಲ ವಿದ್ಯಾರ್ಥಿ ಗಳು ಪ್ರೀತಿ ಪ್ರೇಮ ಎಂಬ ಜಾಲದಲ್ಲಿ ಬೀಳ್ತಾರೆ, ಅದು ಅವರಿಗೆ ಒಂದು ಹೊಸ ಅನುಭವ, ಆಗ ಅವರಲ್ಲಿ ಏನೋ ಒಂದು ತರಹದ ಸಂತೋಷ, ಉತ್ಸಾಹ ..  ಒಬ್ಬರನ್ನೋಬರು ತುಂಬಾ ಪ್ರೀತಿಸುತ್ತಾರೆ ಆದ್ರೆ ಅದು ಎಲ್ಲಿಯ ವರೆಗೂ? ಬರೀ ಅವರ ಹೈ ಸ್ಕೂಲ್ ಮುಗಿಯೋ ವರೆಗೂ ಅಷ್ಟೇ. ಆಮೇಲೆ ಕಾಲೇಜು ಹೈಯರ್ ಸ್ಟಡೀಸ್ ಅಂತ ಮುಂದುವರಿತ ಹೋಗ್ತಾರೆ. ಹೈ ಸ್ಕೂಲ್ ಲವ್ ನ ಬ್ರೇಕ್ ಮಾಡೋಕೆ ಅವ್ರ್ಗೆ ಒಂದು ಒಳ್ಳೆಯ  ರೀಸನ್ ಅಂದ್ರೆ "ಆಗ ನಾನು ಇನ್ನು ಚಿಕ್ಕ ಹುಡುಗ/ಹುಡುಗಿ ಆಗಿದ್ದೆ. ಆ ವಯಸಲ್ಲಿ ನನಗೇನು ಅರ್ಥ ಆಗುತ್ತೆ" (ಮೋಸ್ಟ್ ಕಾಮನ್ಲಿ ಯುಸಡ್ ರೀಸನ್) . 

 

ಲೇಖನ ವರ್ಗ (Category): 

ಅಪ್ಪ--ನಾಟಕ

field_vote: 
No votes yet
To prevent automated spam submissions leave this field empty.

ಅಪ್ಪ  ನಾಟಕದ ಬಗ್ಗೆ ಕುತೂಹಲವಿತ್ತು.ಮೇಲಾಗಿ " ಜೆಪಿ" ಅವರು ಅಭಿನಯಿಸಿದ್ದು, ಚಂಪಾ ಬರೆದಿದ್ದು ಇವೇ ಮುಂತಾಗಿ
ಸಂಗತಿಗಳಿದ್ದವು.ಫೇಸ್ ಬುಕ್ ನಲ್ಲಿ ಅಟೆಂಡ್ ಆಗುವೆ ಎಂದು ಘೋಷಿಸಿದ ಅನೇಕ ಗೆಳೆಯರು ಬರುತ್ತಾರೆ ಭೇಟಿಯಾದೀತು ಎಂಬ ಉಮೇದಿನೊಂದಿಗೆ ಹೋದೆ. ಪ್ರೇಕ್ಷಕ ಪ್ರಭು ಯಾಕೋ ಮುನಿಸಿಕೊಂಡಿದ್ದ..ಕುರ್ಚಿ ಖಾಲಿ
ಇದ್ದವು. ಲೇಖಕರು ಹಾಜರಾಗಿದ್ದರು. ಕೊನೆತನಕ ಇದ್ರು ನಾಟಕ ನೋಡಿದ್ರು.

ಹುಡುಕಾಟವೇ ಪ್ರಧಾನ ವಿಷಯ ನಾಟಕದ್ದು ತನ್ನ  ಅಪ್ಪನ ಬೇರುಹುಡುಕುವ ಹಂಬಲ.ಇಡೀ ನಾಟಕದಲ್ಲಿ ವ್ಯಾಪಿಸಿನಿಲ್ಲುವ ಅವ್ವಳ  ಪಾತ್ರಕ್ಕೆ " ಜೆಪಿ" ಜೀವ ತುಂಬಿದ್ರು. ಭಾವಾವೇಶ ಇಲ್ಲದ ಸಹಜ ಅಭಿನಯ. ಮುಕ್ತದ
ಮಂಗಳತ್ತೆ ಯನ್ನು ಮೀರಿಯೂ ತನ್ನೊಳಗೆ  ಕಲಾವಿದೆ ಸಜೀವವಾಗಿದ್ದಾಳೆ ಎಂದು ತೋರಿಸಿಕೊಟ್ಟರು. ಚೂಟಿಯಿಂದ

ಲೇಖನ ವರ್ಗ (Category): 

ಮತದಾನ ಮಾಡುವವರು ಮಾತ್ರ ಪ್ರತಿಕ್ರಿಯಿಸಿ

field_vote: 
No votes yet
To prevent automated spam submissions leave this field empty.

ಮತದಾನ ಎನ್ನುವುದು ನಮ್ಮಲ್ಲಿನ ಆಂತರಿಕ ಜವಾಬ್ದಾರಿಯನ್ನು ಸಮಾಜಕ್ಕೆ ಎತ್ತಿ ತೋರಿಸುವಂತುಹುದು. ನಮಗೆ ಬೇಕಾದಂತಹ, ಸ್ಪಂದಿಸುವಂತಹ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಂವಿಧಾನ ಕೊಟ್ಟಂತಹ ಅವಕಾಶ. ಆದರೆ ಇದನ್ನು ಪ್ರಜ್ಞಾವಂತರು ನಿಭಾಯಿಸುತ್ತಿದ್ದಾರೆಯೇ, ಇಲ್ಲ, ಎನ್ನುವುದಕ್ಕೆ ಬಿಬಿಎಂಪಿ ಚುನಾವಣೆಯೇ ನಮ್ಮ ಕಣ್ಣೆದುರುಗಿನ ಸಾಕ್ಷಿ. ಅದೇ ಗ್ರಾಮ ಮಟ್ಟದಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದಿದೆ ಎನ್ನಲು ಗ್ರಾ.ಪಂ ಚುನಾವಣೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆಯಾಗಿದ್ದು.

ಲೇಖನ ವರ್ಗ (Category): 

ವಿರೋಧ ಪಕ್ಷಗಳು ಏನು ಮಾಡುತ್ತಿದೆ

field_vote: 
Average: 5 (2 votes)
To prevent automated spam submissions leave this field empty.

ರಾಜ್ಯ ಸರ್ಕಾರ ತೆಗದುಕೊಂಡಂತಹ ಅನೇಕ ವಿಷಯಗಳು ಚರ್ಚೆಯೇ ಆಗುತ್ತಿಲ್ಲ. ಇವುಗಳು ಜನಪರ ಇದೆಯೋ ಇಲ್ಲವೋ ಎನ್ನುವುದು ಆ ನಂತರದ ವಿಷಯ. ಆದರೆ ಇದೀಗ ನಡೆಯುತ್ತಿರುವ ಅನೇಕ ವಿದ್ಯಮಾನಗಳಿಗೆ ವಿರೋಧ ಪಕ್ಷಗಳು ಸರಿಯಾಗಿ ದನಿಯೆತ್ತದ ಕಾರಣ ಅದು ಅಲ್ಲಿಗೆ ಅಂತ್ಯವಾಗುತ್ತಿದೆ. ಇದರ ಪ್ರತಿಕೂಲ ಪರಿಣಾಮ ನಾಗರಿಕರ ಮೇಲೆ ಆಗುತ್ತಿದೆ. ಎಸ್.ಇ.ಜೆಡ್ ಯೋಜನೆಯಡಿಯಲ್ಲಿ , ಗೃಹ ನಿರ್ಮಾಣದ ಅಡಿಯಲ್ಲಿ ಕೂಷಿ ಭೂಮಿ  ಕಬಳಿಕೆಯಾಗುತ್ತಲೇ ಇದೆ. ಅಲ್ಪ ಮೊತ್ತದ ಹಣ ನೀಡುವ ಮೂಲಕ ರೈತರ ಬಾಯಿ ಮಚ್ಚಿಸಲಾಗುತ್ತಿದೆ. ಇದಕ್ಕೆ ರೈತ ವಿರೋಧ ವ್ಯಕ್ತಪಡಿಸಿದರೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸುವಂತಹ ಕಾರ್ಯ, ಇಲ್ಲಾ ಸ್ಥಳೀಯ ಮುಖಂಡರಿಂದ ಹಿಂಸೆ ನೀಡುವಂತಹ ಕಾರ್ಯ ನಡೆಯುತ್ತಲೇ ಇದೆ.

ಲೇಖನ ವರ್ಗ (Category): 

ಪೃಥ್ವಿ ಎಂಬ ಉತ್ತಮ ಚಿತ್ರ - ವಿಮರ್ಶೆ

field_vote: 
No votes yet
To prevent automated spam submissions leave this field empty.

ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಪೃಥ್ವಿ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾರೆ. ಸರ್ಕಾರ ಇವರನ್ನು ಬಳ್ಳಾರಿಗೆ ನಿಯೋಜಿಸುತ್ತದೆ. ಬಳ್ಳಾರಿಯು ಗಣಿಧಣಿಗಳ ಅಟ್ಟಹಾಸದಲ್ಲಿ ಮೆರೆಯುತ್ತಿದೆ ಎನ್ನುವುದನ್ನು ಮೊದಲು ಕುಲಂಕುಷವಾಗಿ ಅರಿತು. ಒಬ್ಬರಾದ ನಂತರ ಒಬ್ಬರಿಗೆ ನಿಧಾನವಾಗಿ ಕಡಿವಾಣ ಹಾಕುತ್ತಾ ಬರುತ್ತಾರೆ. ಅಧಿಕಾರ ಹಾಗೂ ಹಣವಿರುವ ಗಣಿಧಣಿಗಳು ಇನ್ನಿಲ್ಲದ ಹಿಂಸೆಯನ್ನು ನೀಡುತ್ತಾರೆ. ರೌಡಿ ಪಡೆಗಳಿಂದ ಕೊಲೆ ಮಾಡುವ ಸಂಚೂ ಕೂಡ ನಡೆಯುತ್ತದೆ.

ಲೇಖನ ವರ್ಗ (Category): 

ಎಚೆಸ್ವಿ-ಎಚ್.ಎಸ್.ವೆಂಕಟೇಶ ಮೂರ್ತಿಗಳಿಗೆ ೬೭-ಒಂದು ನುಡಿ ನಮನ

field_vote: 
Average: 5 (3 votes)
To prevent automated spam submissions leave this field empty.

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .

 

ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ್ಯ ವಾಹಿನಿಗಳಲ್ಲಿ ಖಂಡಿತವಾಗಿ ಗಮನಿಸಲೇಬೇಕಾದ ಪ್ರಮುಖ ಹೆಸರು. ಅವರ  ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’  ಪ್ರಕಟಿಸಿದ ಅವರು ೨೦೦೮ರಲ್ಲಿ ‘ಉತ್ತರಾಯಣ ಮತ್ತು. . .’ ಸಂಕಲನ ಪ್ರಕಟಿಸಿದಾಗ ಅದು ಅವರ ೬೪ನೇ ಕೃತಿಯಾಗಿತ್ತು, ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಎಷ್ಟು ಶ್ರೀಮಂತಗೊಳಿಸಿದೆ ಎಂದು ಮನಗಾಣಬಹುದು. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸುತ್ತಲೇ ಬಂದಿದ್ದಾರೆ. ನಾಟಕಗಳನ್ನು, ಅನುವಾದಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ‘ಆ ಮುಖೇನ’ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಇತ್ತೀಚೆಗೆ ‘ಅವದಿ’ಯಲ್ಲಿ ಅವರು ಬರೆದುಕೊಳ್ಳುತ್ತಿರುವ ಆತ್ಮಕತೆಯ ಪುಟಗಳು ಅವರ ಜೀವನದ ಹಲವು ವಿವರಗಳನ್ನು ನಮ್ಮ ಮುಂದಿಡುತ್ತಿದೆ. ಜೊತೆಗೇ ‘ಮುಕ್ತ ಮುಕ್ತ’ ಧಾರಾವಾಹಿಯ ಟೈಟ್ಲ್ ಸಾಂಗ್ ಅವರದೇ ಕಾಂಪೊಸಿಷನ್ನು ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯ. ಏಕೆಂದರೆ ಕಮರ್ಷಿಯಲ್ ಸೂತ್ರದ ಟೀವಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆಗೂ ಸಾಹಿತ್ಯದ ಸ್ಪರ್ಶ ಕೊಟ್ಟು ಅದನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿರುವ ಮೋಡಿಗಾರರು ಅವರು. ‘ಪರಸ್ಪರ’ಎನ್ನುವ ಬ್ಲಾಗನ್ನು ನಿರ್ವಹಿಸುತ್ತಿರುವ ಅವರು ಹೊಸಕಾಲಮಾನದ ಎಲ್ಲ ಅನುಕೂಲಗಳ ಪ್ರಯೋಜನವನ್ನು ಪಡೆದಿದ್ದಾರೆ. ಮತ್ತೆ ಆ ಕಾರಣಕ್ಕೇ ವರ್ತಮಾನದ ತಲ್ಲಣಗಳನ್ನು ತಕ್ಕಮಟ್ಟಿಗಾದರೂ ಅರಿತು ಹೊಸ ಬರಹಗಾರರಿಗೆ ಮುನ್ನುಡಿ ಬೆನ್ನುಡಿಗಳ ಆಶೀರ್ವಚನವನ್ನೂ ನಡೆಸಿಕೊಡುತ್ತಿದ್ದಾರೆ. ‘ಚಿನ್ನಾರಿ ಮುತ್ತ’ ಚಲನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಹೊಸ ಸಂಕಲನಗಳ ಮೂಲಕ ಹುಡುಕುತ್ತಿರುವ ಕಾವ್ಯದ ಹಾದಿಯನ್ನು ಗಮನಿಸುವುದೇ ಒಂದು ಸೊಗಸು.

 

ತಮ್ಮ ಇತ್ತೀಚಿನ ಸಂಕಲನ ‘ಉತ್ತರಾಯಣ’ದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿರುವ ಅವರು, ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸಿದ್ದಾರೆ. ಹಾಗೆಯೇ ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ‘ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು’ ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.  

 

ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಶರಣೆನ್ನಲೇ ಬೇಕಾಗುತ್ತದೆ. ಏಕೆಂದರೆ ವೈಚಾರಿಕತೆಗೆ ಪೂರ್ವ-ಪಶ್ಚಿಮ, ಎಡ-ಬಲ, ಇತ್ಯಾದಿ ಆಕೃತಿಗಳ ಪ್ರತ್ಯೇಕ ಅಸ್ತಿತ್ವವನ್ನೇ ಅವರ ಕಾವ್ಯ ನಿರಾಕರಿಸುತ್ತ ಬಂದಿದೆ. ಅನುಭವದ ಪಾತಳಿಯಲ್ಲೇ ಅರಿವಿನ ಆವಿಷ್ಕಾರ ಆಗಬೇಕೆನ್ನುವುದು ಈ ಕವಿ ಮೊದಲಿಂದಲೂ ಮಂಡಿಸುತ್ತ ಬಂದ ಗಂಧವಾಗಿದೆ, ಮತ್ತು ಅವರ ಕಾವ್ಯದುದ್ದಕ್ಕೂ ಅಂಟಿ ನಿಂತ ಪರಿಮಳವೂ ಅದೇ ಆಗಿದೆ. ಸಹನೌ, ಸೌಗಂಧಿಕಾ, ಮುಂತಾದ ಪದ್ಯಗಳಲ್ಲಿ ಅವರು ಕಟೆದು ನಿಲ್ಲಿಸುವ ಸಾಮಾಜಿಕ ಕಳಕಳಿ ಅವುಗಳನ್ನು ಓದಿಯೇ ಅನುಭವಿಸಬೇಕಾದ ಪಾರಮ್ಯಗಳು. ಸ್ಮೃತಿ ಮತ್ತು ಪುರಾಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಅವರು ಅವನ್ನು ತಮ್ಮ ಕಾವ್ಯದ ಅಲಂಕರಣಕ್ಕೆ ಬಳಸದೇ ಅವುಗಳ ತಳಹದಿಯಲ್ಲೇ ಹೊಸ ಆಲೋಚನೆಗಳ ಪಟ್ಟಕವನ್ನಾಗಿ ರೂಪಿಸಿ, ವರ್ತಮಾನದ ತಹತಹಿಕೆಗಳಿಗೆ ಉತ್ತರವನ್ನಾಗಿಸಿ ಆಶ್ಚರ್ಯ ಹುಟ್ಟಿಸುತ್ತಾರೆ. ‘ಭೂಮಿಯೂ ಒಂದು ಆಕಾಶ’ ಕವಿತೆಯಲ್ಲಿ ಸಂಬಂಧಗಳ ಅನಿವಾರ್ಯತೆಯನ್ನೂ, ಜೊತೆಗೇ ಅವೆಲ್ಲ ಹೇಗೆ ಅಪ್ರಾಕೃತ ಎಂದೂ ಹೇಳಿದ್ದಾರೆ. ಅಂದರೆ ಪುರಾಣ ಪ್ರತಿಮೆಯ ಮೂಲಕ ಸಮಕಾಲೀನ ತೊಡಕುಗಳನ್ನೂ, (ವಿಮುಕ್ತಿ) ಜೊತೆಗೆ ಸಮಕಾಲೀನ ಬದುಕನ್ನು ಪುರಾಣವಾಗಿಸುವ ಮೂಲಕವೂ (ಹರಿಗೋಲು, ಬಸವ ಪುರಾಣ ಥರದ ಕವಿತೆಗಳು) ಅವರು ಈಗಾಗಲೇ ಕಾವ್ಯಾಸಕ್ತರ ಗಮನವನ್ನೂ ಮನವನ್ನೂ ಸೆಳೆದಿದ್ದಾರೆ. ಕಥನ ಕಲೆ ಕೂಡ ಅವರಿಗೆ ಸಿದ್ಧಿಸಿದ ಕಲೆಯಾಗಿದ್ದರಿಂದಲೇ ಕಥನ ಕವನಗಳಲ್ಲೂ ಅವರ ಮುದ್ರೆ ಇದ್ದೇ ಇದೆ. ‘ಕಂಡದ್ದು’ ಕವಿತೆ ಓದುಗನನ್ನು ಬರಿಯ ಕವಿತೆಯಾಗಿ ಕಾಡದೇ ಅವನ ಸ್ವಂತ ಅನುಭವವಾಗಿಯೇ ಉಳಿದು ಬಿಡುತ್ತದೆ. ಹೀಗೆ ಕಾವ್ಯೋದ್ಯೋಗವೆಂಬ ಮಥನದಿಂದ ತಾತ್ವಿಕತೆಯ ಎಳೆಗಳನ್ನು ನೇಯ್ದು ಬೆಚ್ಚನೆಯ ಅರಿವಿನ ಹೊದಿಕೆಗಳನ್ನು ತಯಾರಿಸಿ ಕೊಡುತ್ತಿರುವ ಎಚೆಸ್ವಿ ಒಂದು ರೀತಿಯಲಿ ಕಬೀರನೇ ಆಗಿದ್ದಾರೆ. ಮಡಿವಂತಿಕೆಯ ಸೋಂಕಿಲ್ಲದ, ಸಾಮಾಜಿಕ ನ್ಯಾಯಕ್ಕೆ ಪರಿತಪಿಸುವ ಅವರೊಳಗಿನ ಕವಿ ಜಾಗತೀಕರಣ ಕಾಲದಲ್ಲೂ ಸ್ವದೇಶೀಕರಣದಲ್ಲಿ ನಿರತನಾಗಿದ್ದಾನೆ. ಸಮಕಾಲೀನ ಸಂದರ್ಭವನ್ನು ಪಾರಂಪರಿಕ ಕಾವ್ಯದೊಂದಿಗೆ ವಾದಿ-ಸಂವಾದಿಗಳ ಸ್ವರೂಪದಲ್ಲಿ ಮುಖಾಮುಖಿಯಾಗಿಸುತ್ತಲೇ ಗೇಯತೆಯನ್ನೂ ಅವರು ಉಳಿಸಿ ಬೆಳೆಸಿದ್ದಾರೆ.

ಲೇಖನ ವರ್ಗ (Category): 

ಕೃಷಿ ಪದ್ದತಿಯಿಂದಲೂ ಪರಿಸರ ನಾಶ

field_vote: 
Average: 4.7 (3 votes)
To prevent automated spam submissions leave this field empty.

ಸ್ನೇಹಿತರೆ ಸಂಪದದಲ್ಲಿ ಸಾಕಷ್ಟು ಮಾಹಿತಿಗಳು ಕೃಷಿ ಬಗ್ಗೆ ಇರುವುದನ್ನು ಗಮನಿಸಿದೆ. ಆದರೂ ಪರಿಸರದ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ಕೃಷಿಯ ಇದೊಂದು ವಿಷಯ ಸೇರಿಸಬೇಕು ಅನ್ನಿಸಿತು.

ಇವತ್ತು ನಾವು ಅರಣ್ಯ ಸಂಪತ್ತು ಹಾಳಾಗುತ್ತಿದೆ. ಗುಡ್ಡ ಬೆಟ್ಟಗಳೆಲ್ಲಾ ಹಾಳಾಗುತ್ತಿದೆ. ಇದು ಮುಂದಿನ ದಿನದ ಪರಿಸರ ನಾಶಕ್ಕೆ ನಾಂದಿ ಎಂದು ಎಲ್ಲರೂ ಚಿಂತಿಸುತ್ತಿದ್ದೇವೆ. ಹಾಗಾದರೆ ಇವತ್ತಿನ ಕೃಷಿ ಚಟುವಟಿಕೆ ಸರಿಯಾಗಿದೆಯಾ ಎನ್ನುವುದರ ಬಗ್ಗೆ ಕೂಡ ಚಿಂತನೆ ನಡೆಸಬೇಕಲ್ಲವೆ.

 

ಲೇಖನ ವರ್ಗ (Category): 

ಮಲೆಗಳಲ್ಲಿ ಮದುಮಗಳು- ಯಶಸ್ವೀ ರಂಗಪ್ರಯೋಗ-ರಂಗಾಯಣದ ತುಂಬ ಮಲೆನಾಡಿನ ಚಿತ್ರಗಳು

field_vote: 
No votes yet
To prevent automated spam submissions leave this field empty.

‘ಮಲೆಗಳಲ್ಲಿ ಮದುಮಗಳು’ ಈ ಶತಮಾನದ ಅತ್ಯುತ್ತಮ ಗದ್ಯ ಕೃತಿಗಳಲ್ಲೊಂದು.ಕನ್ನಡ ಕಾದಂಬರಿಪರಂಪರೆಗೆ ಹೊಸ ವ್ಯಾಖ್ಯೆಯನ್ನು ತನ್ನ ವಿಶಿಷ್ಠ ರಚನಾಕ್ರಮದಿಂದ ಮತ್ತು ಅನುಭವ ಸಾಂಧ್ರತೆಯ ಪಾರಮ್ಯದಿಂದ ಹಾಗೂ ಕಲಾತ್ಮಕ ಪ್ರಯೋಗಗಳಿಂದಲೂ ಬೆಳಗಿಸಿದ ಕೃತಿ. ಪ್ರತಿ ಓದಿನಲ್ಲೂ ಹೊಸ ಹೊಸ ವಿಸ್ತರಣಕ್ಕೆ ಕೊಂಡೊಯ್ಯುವ ಕು.ವೆಂ.ಪುರವರ ಈ ಕಾದಂಬರಿ ಈಗಾಗಲೇ ದೂರದರ್ಶನ ಧಾರಾವಾಹಿಯ ಕೆಲವು ಕಂತುಗಳಿಗೇ ನಿಂತು ಇದನ್ನು ಪುನರ್ಸುಷ್ಟಿಸುವವರ ಎದೆಗಾರಿಕೆಯನ್ನು ಪ್ರಶ್ನಿಸುತ್ತಲೇ ಇದೆ. ಇಡೀ ಕಾದಂಬರಿಯುದ್ದಕ್ಕೂ ಹಲವು ಕಥಾನಕದ ಝರಿಗಳು ಏಕಕಾಲಕ್ಕೆ ಓಡುತ್ತೋಡುತ್ತಲೇ ಒಮ್ಮೆ ಒಂದಾಗುತ್ತ ಮತ್ತೆ ಬೇರೆಯಾಗುತ್ತಲೇ ದರ್ಶನವೊಂದನ್ನು ನೀಡುತ್ತಲೇ ಸಾಗುತ್ತದೆ.

ಲೇಖನ ವರ್ಗ (Category): 

ಹೊಸ ಪತ್ರಿಕೆಗೆ ನಿಮ್ಮ ಸಲಹೆ

field_vote: 
Average: 3 (1 vote)
To prevent automated spam submissions leave this field empty.

ಸ್ನೇಹಿತರೆ ಕಳೆದ ಕೆಲ ದಿನಗಳಿಂದ ನಾನು ಉತ್ತರ ಕರ್ನಾಟಕದಲ್ಲಿ ಹೊಸ ಪತ್ರಿಕೆಯೊಂದನ್ನು ಆರಂಭಿಸಬೇಕು ಎನ್ನುವ ಉದ್ದೇಶ ಹೊಂದಿರುವುದರಿಂದ ಸಂಪದಕ್ಕೆ ಬರದೇ ಹಲವು ದಿನಗಳೇ ಕಳೆದಿದೆ. ಇಲ್ಲಿ ಓದುಗರು ಹೆಚ್ಚಿದ್ದಾರೆ. ಆದರೆ ಸಂಜೆ ದೈನಿಕ ಯಾವುದೂ ಇಲ್ಲ ಎನ್ನುವ ಸ್ನೇಹಿತ ಮಲ್ಲೂರು ಹೇಳಿದ ಹಿನ್ನಲೆಯಲ್ಲಿ ಪತ್ರಿಕೆ ಆದಷ್ಟು ಶೀಘ್ರದಲ್ಲಿ ಆರಂಭಿಸಬೇಕು ಎನ್ನುವ ಚಿಂತನೆಯಿದೆ. ಇದೀಗ ಪತ್ರಿಕೆಗೆ "ನಮ್ಮೂರು" ಎನ್ನುವ ಹೆಸರು ಇಡಬೇಕೆಂಬ ಚಿಂತನೆ ನಡೆಯುತ್ತಿದೆ. ಮೂರು ಅಕ್ಷರಗಳಲ್ಲಿ ಇದ್ದರೆ ಹೆಸರು ಹೇಳುವುದಕ್ಕೆ ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ. ಬೇರೆ ಹೆಸರುಗಳನ್ನು ಕೂಡ ನೀವು ಸೂಚಿಸಬಹುದಾಗಿದೆ. ಹಾಗೇ ಪತ್ರಿಕೆ ಯಾವ ಸುದ್ದಿಗಳಿಗೆ ಹೆಚ್ಚು ಒತ್ತು ನೀಡಿದರೆ ಗ್ರಾಮಾಂತರ ಹಾಗೂ ನಗರದ ಜನರನ್ನು ತಲುಪಬಹು ಎಂದು ನಿಮಗನ್ನಿಸುತ್ತದೆ.

ಲೇಖನ ವರ್ಗ (Category): 

ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ

field_vote: 
Average: 5 (6 votes)
To prevent automated spam submissions leave this field empty.

“ಶೆಟ್ಟರ ಸಾತಣ್ಣ ಸತ್ತ....!” ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು. ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಥೆಯಿದು. ಬರೆದವರು ಉತ್ತರ ಕರ್ನಾಟಕ ಭಾಗದ ಮುಂಚೂಣಿಯ ಲೇಖಕರಲ್ಲೊಬ್ಬರಾದ ದು.ನಿಂ. ಬೆಳಗಲಿಯವರು. ಕಥೆ, ಕಾದಂಬರಿ, ಹರಟೆ, ಚರಿತ್ರೆ, ಅನುವಾದ, ಮಕ್ಕಳ ಸಾಹಿತ್ಯ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೈಯಾಡಿಸಿರುವ ಬೆಳಗಲಿಯವರು ಅನೇಕ ಪ್ರಶಸ್ತಿಗಳ ಜೊತೆಗೆ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ. “ಶೆಟ್ಟರ ಸಾತಣ್ಣ ಸತ್ತ....!” ಎಂಬ ಕಥೆ ಮೊದಲ ಸಲ ‘ಸುಧಾ’ ವಾರ ಪತ್ರಿಕೆಯ ಎಪ್ರಿಲ್ 4, 1971ರ ಸಂಚಿಕೆಯಲ್ಲಿ ಪ್ರಕಟವಾಯಿತು.

ಲೇಖನ ವರ್ಗ (Category): 

ಕೃಷಿ ವಿವಿಗೆ ತಾಳಗುಂದ ವಿವಿ ಎಂದು ನಾಮಕರಣ ಮಾಡುವಂತೆ ಒತ್ತಾಯ

field_vote: 
Average: 3 (1 vote)
To prevent automated spam submissions leave this field empty.

ಲೇಖನ ವರ್ಗ (Category): 

ಐ.ಟಿ.ಐ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಬಯಲು ಮಾಡುವುದು ಕಾಪಿ ಹೊಡೆಸುವುದು ಎಷ್ಟರ ಮಟ್ಟಿಗೆ ಸರಿ?

field_vote: 
Average: 2.5 (2 votes)
To prevent automated spam submissions leave this field empty.
ಐ.ಟಿ.ಐ ಎಂಬ ಅಲ್ಪಾವಧಿ ತಾಂತ್ರಿಕ ಕೋರ್ಸ್ ನ ಪರೀಕ್ಷೆಗಳು ಈ ಮುಂಚೆ ಹೇಗೆ ನಡೆಯುತ್ತಿತ್ತೋ ಗೊತ್ತಿಲ್ಲ. ಆದರೆ ಕಳೆದ 5-6 ವರ್ಷಗಳಿಂದ ಒಂದನೇ ತರಗತಿಯ ಪರೀಕ್ಷೆಗಳಾದರೂ ಸ್ವಲ್ಪ ಮಟ್ಟಿಗಾದರೂ ಕಟ್ಟು ನಿಟ್ಟಾಗಿ ನಡೆಯುತ್ತದೆಯೋ ಏನೋ ಆದರೆ ಐ.ಟಿ.ಐ ಪರೀಕ್ಷೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಹದಗೆಟ್ಟುಹೋಗಿದ್ದು. ಅದಕ್ಕಿಂತ ಕೆಳ ಮಟ್ಟದಲ್ಲಿ ನಡೆಯುತ್ತಿದೆ. ಇದು ರಾಜ್ಯದೆಲ್ಲೆಡೆ ಸಾಮಾನ್ಯವಾಗಿ ನಡೆಯುತ್ತಿರುವ ಪದ್ದತಿ ಎಂದರೂ ತಪ್ಪಾಗಲಾರದು. ಒಟ್ಟು 4ಪೇಪರ್ ಗೆ ಲಿಖಿತ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆಗಳು ಉತ್ತರದ ಸಮೇತ ಸಿಕ್ಕಿರುತ್ತದೆ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿ (ತರಬೇತುದಾರ) 2ಸಾವಿರ ರೂ ಕೊಟ್ಟು ಕೊಂಡುಕೊಳ್ಳುತ್ತಾನೆ. ಇದಕ್ಕೆಂದೇ ಹಲವು ಬ್ರೋಕರ್ ಗಳು ಪರೀಕ್ಷಾ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತಾರೆ.
ಲೇಖನ ವರ್ಗ (Category): 

ಸಂಚಲನ ಮೂಡಿಸಿದ ಶಿವಸಂಚಾರದ ನಾಟಕಗಳು

field_vote: 
No votes yet
To prevent automated spam submissions leave this field empty.

ಕಳೆದ ಹದಿಮೂರು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು ತಯಾರು ಮಾಡಿ ಆ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಿರುವ  ‘ಶಿವಸಂಚಾರ’ ರಾಜ್ಯದ ಮುಖ್ಯ ರಂಗ ರೆಪರ್ಟರಿಗಳಲ್ಲೊಂದು. ನೀನಾಸಂ ಮತ್ತು ಶಿವಸಂಚಾರ ತಂಡಗಳು ಕನ್ನಡ ರಂಗಭೂಮಿಯ ಹೊಸ ಆವಿಷ್ಕಾರಗಳನ್ನು ಪ್ರಯೋಗಗಳನ್ನು ಗ್ರಾಮೀಣ ಜನತೆಗೂ ತಿರುಗಾಟದ ಹೆಸರಲ್ಲಿ ಸಿಗುವಂತೆ ಮಾಡಿರುವುದು ಶ್ಲಾಘನೀಯ ಕೆಲಸವೇ ಆಗಿದೆ. ಇಂಥದೇ ಪ್ರಯತ್ನಗಳನ್ನು ಈ ಹಿಂದೆ ಮಾಡಿದ್ದ ಕೊಡಗು ರಂಗ ಮತ್ತು ಧೃವ ರಂಗಗಳು ಹಾಗೇ ತುಮರಿಯ ಕಿನ್ನರ ತಂಡಗಳ ಪ್ರಯತ್ನಗಳನ್ನೂ ನೆನಪಿಸಿಕೊಳ್ಳಲೇಬೇಕು.

ಸಾಂಸ್ಕೃತಿಕ ಚಟುವಟಿಕೆಗಳಿಲ್ಲದ ಸಣ್ಣ ಊರುಗಳಲ್ಲಿ ಟೀವಿಯೊಂದೇ ಸುಲಭ ಮನರಂಜನಾ ಮಾಧ್ಯಮವಾಗಿರುವ ಕಾರಣ ಅಂಥ ಊರುಗಳಲ್ಲಿರುವ ಸಾಹಿತ್ಯ ಸಾಂಸ್ಕೃತಿಕಾಸಕ್ತರು ಇಂಥ ತಂಡಗಳ ಬರವನ್ನೇ ಕಾಯುತ್ತಿರುತ್ತಾರೆ. ಅರಸೀಕೆರೆಯ ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಹೊಯ್ಸಳೇಶ್ವರ ಕಾಲೇಜಿನಲ್ಲಿ ನಡೆದ ಮೂರುದಿನಗಳ ನಾಟಕೋತ್ಸವ ‘ಶಿವಸಂಚಾರ’ ೨೦೦೯ರ ನಾಟಕಗಳನ್ನು ಆಸಕ್ತರಿಗೆ ಪ್ರದರ್ಶಿಸಿತು.

ಲೇಖನ ವರ್ಗ (Category): 

ಪ್ರತಿಯೊಬ್ಬರೂ ಓದಿ

field_vote: 
Average: 2.1 (8 votes)
To prevent automated spam submissions leave this field empty.

ನಾವೆಲ್ಲಾ ಹಿಂಗ್ಯಾಕೆ ಆಗಿದೀವಿ?

ಲೇಖನ ವರ್ಗ (Category): 

ಕಾಲದಕನ್ನಡಿ-`` ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ ``

taj pictures

field_vote: 
Average: 2.6 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಜಾತಿ ರಾಜಕಾರಣದ ಚರ್ಚೆ ಮತ್ತು ಮಾಯವತಿ ಎಂಬ ರಾಜಕಾರಣಿ

field_vote: 
Average: 3.3 (4 votes)
To prevent automated spam submissions leave this field empty.

ಜಾತಿ ಮತ್ತು ರಾಜಕಾರಣದ ಸಂಬಂಧವನ್ನು ವಿವರಿಸುತ್ತಿರುವ ಬಹಳಷ್ಟು ಚಿಂತಕರು ಪ್ರಸ್ತುತ ಇಂದಿನ ಬಹುಜನಪ್ರೀಯವಾದಶಕ್ತಿರಾಜಕಾರಣವನ್ನು ಸಮಸ್ಯೆಯಾಗಿ ಭಾವಿಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ರಾಜಕಾರಣ ಎಂದರೇನು? ಎಂಬುದಕ್ಕೆಹಲವಾರು ವ್ಯಾಖ್ಯಾನಗಳಿವೆ. ಸರಳವಾಗಿ ಹೇಳುವುದಾದರೆ ಪ್ರಭುತ್ವದ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಎಂದುವಿವರಿಸಿಕೊಳ್ಳಬಹುದು. ಪ್ರಖ್ಯಾತ ರಾಜಕೀಯಶಾಸ್ತ್ರಜ್ಞ ಡೇವಿಡ್ ಈಸ್ಟನ್ ರಾಜಕೀಯವನ್ನು ಮೌಲ್ಯಗಳ ಅಧಿಕಾರಯುತ ವಿತರಣೆಎಂದು ವಿಶ್ಲೇಷಿಸಿದ್ದಾನೆ. ಅಂದರೆ ರಾಜಕಾರಣ ಎಂಬುದು ಪ್ರಭುತ್ವದ ಕಾರ್ಯಚಟುವಟಿಕೆ ಅದರಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಮುಂತಾದವುಗಳ ಕುರಿತಂತೆ ತಿಳಿಸುವುದಾಗಿದೆ. ಆದರೆ ಜನಸಾಮನ್ಯರ ಸಾಮಾನ್ಯ ತಿಳುವಳಿಕೆಯಲ್ಲಿ ರಾಜಕೀಯ ಎಂದರೆ ಯಾವಮಾರ್ಗವನ್ನಾದರೂ ಹಿಡಿದು ಸಾರ್ವಜನಿಕ ಅಧಿಕಾರವನ್ನು ಪಡೆಯುವ ತಂತ್ರಗಾರಿಕೆ ಎನ್ನುವ ನೆಗೆಟಿವ್ ಆದಂತಹ ಭಾವನೆಪ್ರಬಲವಾಗಿದೆ. ಪ್ರಸ್ತುತ ಬಹುಪಾಲು ಚಿಂತರಕರು ಸಾಮಾನ್ಯ ಜನರ ಅರ್ಥದಲ್ಲಿನ ನೆಗೆಟಿವ್ ಮಾದರಿಯ ರಾಜಕಾರಣವನ್ನೇಸಮಸ್ಯೆಯನ್ನಾಗಿ ಗ್ರಹಿಸುತ್ತಾರೆ. ಮಾಯಾವತಿಯವರ ವರ್ತನೆಯ ಹಿಂದೆ ರಾಜಕೀಯದ ಕುರಿತ ಈ ಗ್ರಹಿಕೆಯೇ ಕೆಲಸಮಾಡಿದೆ. ಹಾಗಾದರೆ ಇದು ರಾಜಕಾರಣಿಗಳ ತಪ್ಪಾ ಖಂಡಿತ ಅಲ್ಲ!

ಲೇಖನ ವರ್ಗ (Category): 

ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ

field_vote: 
Average: 4.7 (9 votes)
To prevent automated spam submissions leave this field empty.

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ ’ಯುಗಾದಿ’ ತರುವುದು ಹೊಸ ಹರುಷ.
  ಯುಗಾದಿಯೊಡನೆ ಎಪ್ಪತ್ತೆಂಟು ವಸಂತಗಳ ಅವಿನಾಭಾವ ಸಂಬಂಧ ಹೊಂದಿದೆ ದ.ರಾ. ಬೇಂದ್ರೆಯವರ ಕವನ ’ಯುಗಾದಿ’.
  ಯುಗಾದಿಗೆ ’ಯುಗಾದಿ’ಯೇ ಸಾಟಿ; ’ಯುಗಾದಿ’ಗೆ ಯುಗಾದಿಯೇ ಸಾಟಿ.

  ಯುಗಯುಗಾದಿ ಕಳೆದರೂ
  ಯುಗಾದಿ ಮರಳಿ ಬರುತಿದೆ.
  ಹೊಸ ವರುಷಕೆ ಹೊಸ ಹರುಷವ
  ಹೊಸತು ಹೊಸತು ತರುತಿದೆ

ಲೇಖನ ವರ್ಗ (Category): 

ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

field_vote: 
Average: 2.7 (3 votes)
To prevent automated spam submissions leave this field empty.

ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದರಿಂದ ಅವನ ವಿಧ್ಯಾಭ್ಯಾಸ ಅಲ್ಲಿಯೇ ಮುಂದುವರಿಯಿತು. ಮುಂದೆ ಆತ ಯೂನಿವರ್ಷಿಟಿ ವಿಧ್ಯಾಭ್ಯಾಸಕ್ಕಾಗಿ ಇಂಗ್ಲೀಷ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಇಬಾಡನ್ ಎಂಬಲ್ಲಿ ಮುಗಿಸಿದ. ಅಲ್ಲಿಯೇ ಆತ ಯೂರೋಪಿಯನ್ನರು ಆಫ್ರಿಕಾ ಖಂಡದ ಬಗ್ಗೆ ಬರೆದ ಬಹಳಷ್ಟು ಕಾದಂಬರಿಗಳನ್ನು ಓದಲು ಆರಂಭಿಸಿದ್ದು. ಹೀಗೆ ಓದುವಾಗ ಅವನಿಗೇನನ್ನಿಸಿತೋ ಏನೋ ಇನ್ಮುಂದೆ ನಮ್ಮ ಕಥೆಯನ್ನು ನಾವೇ ದಾಖಲಿಸಿದರೆ ಚೆನ್ನ ಎಂದುಕೊಂಡು ಬರಹಗಾರನಾಗಲು ನಿರ್ಧರಿಸಿದ. ಹಾಗೆಂದೇ ಆತ ಆಫ್ರಿಕಾ ಖಂಡದ ಮುಖ್ಯವಾಗಿ ನೈಜೇರಿಯಾದವರ ನೋವು ನಲಿವುಗಳನ್ನು ಎಲ್ಲೂ ಆವುಟಗೊಳಿಸದೆ ಅಬ್ಬರಗೊಳಿಸದೆ ಇದ್ದಕ್ಕಿದ್ದಂತೆ ದಾಖಲಿಸುತ್ತಾ ಹೋದ. ಪರಿಣಮವಾಗಿ ಬಹಳಷ್ಟು ಕಥೆ, ಕಾದಂಬರಿಗಳನ್ನು ಹೊರತಂದನು. ಅವನ ಮೊಟ್ಟ ಮೊದಲ ಕಾದಂಬರಿ “ಥಿಂಗ್ಸ್ ಫಾಲ್ ಅಪಾರ್ಟ್” ಇಂಗ್ಲೀಷ ಸಾಹಿತ್ಯವಲಯದಲ್ಲಿ ಬಹು ಚರ್ಚೆಗೊಳಗಾದ ಕಾದಂಬರಿ. ಮಾತ್ರವಲ್ಲ  ಅವನಿಗೆ ಅಪಾರ ಕೀರ್ತಿ, ಯಶಸ್ಸುಗಳೆರಡನ್ನೂ ತಂದುಕೊಟ್ಟಿತು. ಮುಂದೆ ಇದೇ ಕಾದಂಬರಿಗೆ ನೋಬೆಲ್ ಪ್ರಶಸ್ತಿಯೂ ಸಹ ದೊರಕಿತು. ಮುಂದೆ ಈತ “No Longer at Ease” (1960),  “Arrow of God” (1964),  “A Man of the People” (1966) ಎನ್ನುವ ಕಾದಂಬರಿಗಳನ್ನು "Marriage Is A Private Affair" (1952),  "Dead Men's Path" (1953),  “The Sacrificial Egg and Other Stories” (1953) ಎನ್ನುವ ಕಥಾಸಂಕಲನಗಳನ್ನು ಹೊರತಂದನು.

ಲೇಖನ ವರ್ಗ (Category): 

ಶ್ರೀಕಾಂತ ಕೃತಿ ಸೌರಭ

ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯುವಿಕೆ ಸಹಜವೂ ಆಗಿತ್ತು.
ಮೊನ್ನೆ ಮೊನ್ನೆ ಈ ಜೋಡಿ ಸಿಡಿಗಳು ಬಂದ ಮೇಲೆ ನಾಕಾರು ಬಾರಿ ಕೇಳಿದ್ದೂ ಆದಮೇಲೆ ಕೆಲವು ಅನಿಸಿಕೆಗಳನ್ನು ಬರೆಯಹೊರಟೆ.

field_vote: 
Average: 4.6 (8 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ದೊಡ್ಡೋರ್ಯಾಕೆ ಹಿಂಗೆ?- ಸ್ಯಾಡಿಸ್ಟ್ ಅಜ್ಜಿಯರು

 ನನ್ನ ಅಜ್ಜಿಯಂತಹ ಬ್ರಿಲ್ಲಿಯಂಟ್ ಹೆಣ್ಣುಮಗಳನ್ನು ನಾನು ಇಲ್ಲಿಯವರೆಗೂ ಕಂಡಿಲ್ಲ. ಎಪ್ಪತ್ತೈದರಲ್ಲೂ ಹದಿವಯಸ್ಸಿನವರಂತಹ ನೆನಪಿನ ಶಕ್ತಿ. ಎಲ್ಲವನ್ನೂ ನೆನಪಿಟ್ಟು ಯಾವಾಗ ಬೇಕಾದರೂ ಪುನರುಚ್ಚರಿಸುವ ತಾಕತ್ತು, ಭಾಷಾಸೌಷ್ಟವ!

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ದೊಡ್ಡೋರ್ಯಾಕೆ ಹಿಂಗೆ?- ಪ್ರಶ್ನೋತ್ತರಗಳ ಪರಿಶೆ!

ನನ್ನ ಅಪ್ಪನ ಕಡೆಯವರು ಎಂದರೆ ಕರೂರಿನ ಜನ ಎಂದರೆ ಬುದ್ದಿವಂತರು ಎಂದೇ ಪ್ರಸಿದ್ಧಿ. ಅಥವಾ ನಮ್ಮ ರವಿ ಬೆಳಗೆರೆಯವರಂತೆ ಹಾಗೆ ಪದೇ ಪದೇ ಹೇಳಿಕೊಂಡು ಇಮೇಜ್ ಸೃಷ್ಟಿಸಿಕೊಂಡಿದ್ದರು. ಇದರ ಬಗ್ಗೆ ಹಲವಾರು ಜೋಕುಗಳು ಪ್ರಚಲಿತವಾಗಿವೆ. ನನ್ನ ಅಪ್ಪನ ತಮ್ಮಂದಿರು ಅಕೆಡೆಮಿಕ್ ಆಗಿ ಬುದ್ಧಿವಂತರು. ಒಳ್ಳೆಯ ಅಂಕಗಳನ್ನು ತೆಗೆದು ಸ್ಕಾಲರ್ ಶಿಪ್ ಗಿಟ್ಟಿಸಿಕೊಂಡು ಓದಿದವರು. ಈಗ ಒಳ್ಳೆಯ ಹುದ್ದೆಗಳಲ್ಲಿದ್ದಾರೆ.
 ಅಮ್ಮನ ಅಣ್ಣ ತಮ್ಮಂದಿರು ತಾವು ದಡ್ಡರೆಂದು ಸ್ವತಃ ಯಾವಾಗಲೋ ಘೋಷಿಸಿಕೊಂಡಿದ್ದರು. ಹೀಗಾಗಿ ನನ್ನ ಪ್ರಶ್ನೆಗಳಿಂದ ಅವರು ವಂಚಿತರಾಗಿದ್ದರು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ದೊಡ್ಡೋರ್ಯಾಕೆ ಹಿಂಗೆ?- ಬ್ರಾಹ್ಮಿ ಮುಹೂರ್ತದ ಟಾರ್ಚರ್!

ಚಿಕ್ಕಂದಿನಿಂದ ದೊಡ್ದೋರ ಯೋಜನೆಗೆಳು, ಚಿಂತನೆಗಳು,ನಂಬಿಕೆಗಳು , ತಿಕ್ಕಲುತನಗಳು ಎಳೆಯರ ಬದುಕಿಗೆ ಹೊಸ ಆಯಾಮಗಳನ್ನು ನೀಡುವುದನ್ನು ನೋಡಿದ್ದೇನೆ. ಆಗಿನ ಮುಗ್ಧ ಕಣ್ಣುಗಳಿಂದ ನೋಡಿದ್ದನ್ನು ಈಗಿನ ವಿಷ್ಲೇಷಣೆಯೊಂದಿಗೆ ಮುಂದೊಂದು ದಿನ ನಾನೂ ಆ ದೊಡ್ಡವರಲ್ಲೊಬ್ಬನಾಗಬಹುದೆಂಬ ಎಚ್ಚರಿಕೆಯೊಂದಿಗೆ ನೆನಪಿನಿಂದ ಹೆಕ್ಕಿ ಇಲ್ಲಿಡುತ್ತಿದ್ದೇನೆ

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಬಾನುಲಿದ ಬರಹ

field_vote: 
Average: 4 (1 vote)
To prevent automated spam submissions leave this field empty.

ತೀರಾ ತಾಂತ್ರಿಕ ಮಾಧ್ಯಮಗಳಲ್ಲಿ ಒಂದಾದ ಬಾನುಲಿ ಭಾರತದಲ್ಲಿಂದು ತುಳಿಯುತ್ತಿರುವ ಹಾದಿಯ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಸಂದರ್ಭ ಇದು. ಹಿಂದೆ ಅಂದರೆ ತೀರಾ ಏಳೆಂಟು ವರ್ಷಗಳವರೆಗೂ ರೇಡಿಯೋ ಎಂದರೆ ಆಕಾಶವಾಣಿ ಒಂದೇ ಆಗಿತ್ತು. ಖಾಸಗೀ ವಾಹಿನಿಗಳಿಗೆ ಪರವಾನಗಿ ಕೊಡದೇ, ಖಾಸಗೀ ಸಹಭಾಗಿತ್ವವನ್ನು ಬಯಸದೇ, ಪ್ರೋತ್ಸಾಹಿಸದೇ ಆಕಾಶವಾಣಿಯು ಸರ್ಕಾರದ ಮಾಧ್ಯಮವಾಗಿ ಬೆಳೆದು ಬಂತು. ಅಂದಿನ ಸಂದರ್ಭಗಳಲ್ಲಿ ಮಾಧ್ಯಮಗಳಿಗೆ ಖಾಸಗೀ ಪ್ರಭುತ್ವವು ಹಣಸುರಿಯುವುದೂ ಅಸಾಧ್ಯವಾಗಿತ್ತು ಎನ್ನುವುದು ಬಡ ಭಾರತದ ವಾಸ್ತವ. ಆದರೆ ಕೆಲವೊಮ್ಮೆ ಸರ್ಕಾರದ ಮುಖವಾಣಿಯಾದ ಆಕಾಶವಾಣಿಯಾದರೂ ಜನರ ದನಿಗೆ, ಅಗತ್ಯಕ್ಕೆ ಸ್ಪಂದಿಸಿತ್ತೇ ಎಂಬ ಪ್ರಶ್ನೆಗೆ ಉತ್ತರ ಹುಡುಕಹೊರಟರೆ ನಿರಾಶೆ.

೧೯೫೬ರಲ್ಲಿ ಪ್ರಾರಂಭವಾದ ವಿವಿಧಭಾರತಿಯು ಜನರ ನಿರಾಶೆಗೆ ಸಂದ ಸಾಂತ್ವನ. ನೆರೆಯ ಶ್ರೀಲಂಕಾದ ವಾಹಿನಿಯು, ಭಾರತೀಯ ಆಕಾಶವಾಣಿಯ ಮಡಿವಂತಿಕೆಯ ಮಡಿಲಲ್ಲಿ ಮುಳುಗಿಹೋಗಿದ್ದ ಚಲನಚಿತ್ರಗೀತೆಗಳನ್ನು ಪ್ರಸಾರ ಮಾಡುವುದರ ಜೊತೆಗೆ ಜಾಹೀರಾತುಗಳನ್ನು ಪ್ರಸಾರ ಮಾಡಿ ಇಡೀ ಭಾರತದ ಕೇಳುಗರು ತಮ್ಮ ದೇಶದ ಚಲನಚಿತ್ರಗೀತೆಗಳನ್ನು ಶ್ರೀಲಂಕಾದ ರೇಡಿಯೋ ವಾಹಿನಿಯಿಂದ ಕೇಳಬೇಕಾದ ಅನಿವಾರ್ಯತೆ ಬಂತು. ಆ ಸಮಯಕ್ಕೆ ನಿದ್ದೆಯಿಂದ ಎಚ್ಚೆತ್ತ ಭಾರತ ಸರ್ಕಾರ ವಿವಿಧ ಭಾರತಿಯನ್ನು ಸ್ಥಾಪಿಸಿತು. ಇಂದಿಗೂ ಮುಂಬೈ ವಿವಿಧಭಾರತಿ ತನ್ನ ಶಾಸ್ತ್ರೀಯ ಶೈಲಿಯ ನಿರೂಪಣೆಗೆ, ಹಾಡುಗಳಿಗೆ ತನ್ನದೇ ಆದ ಕೇಳುಗಬಳಗವನ್ನು ಹೊಂದಿದೆ. ಆದರೆ ಮುಂಬೈನಲ್ಲಿ ವಿವಿಧಭಾರತಿಯನ್ನು ಸ್ಥಾಪಿಸಲು ತೋರಿದ್ದ ಆಸಕ್ತಿಯನ್ನೇ ಇತರ ರಾಜ್ಯಗಳಲ್ಲಿ ಸ್ಥಾಪಿಸಲು ತೋರಿದ್ದರೆ, ಇಂದಿನ ಎಲ್ಲಾ ಖಾಸಗೀ ಎಫ್‌ಎಮ್ ವಾಹಿನಿಗಳ ಅಬ್ಬರ, ಅರಚಾಟ, ಗಲಾಟೆಗಳಿಗೆ ಮೂಲವಾದ, ಗಟ್ಟಿಯಾದ ನೆಲೆಯೊಂದನ್ನು ಸಾತ್ವಿಕ ಹಿನ್ನೆಲೆಯಲ್ಲಿ ಕಟ್ಟಿಕೊಡಬಹುದಾಗಿತ್ತು.

ಲೇಖನ ವರ್ಗ (Category): 

ಕೊಂಕಣಿಗಳ ಸಂಘ ನಿಷ್ಟೆಯೂ, ಪುಣ್ಯಕೋಟಿಯ ಧರ್ಮನಿಷ್ಟೆಯೂ...

field_vote: 
Average: 5 (1 vote)
To prevent automated spam submissions leave this field empty.

ಈ ಹಿಂದೆ ಕೊಂಕಣಿಗರ ಸಂಘ ನಿಷ್ಟೆ ಮತ್ತು ಅದರಿಂದ ಕೊಂಕಣಿಗರಿಗಾಗಿರುವ ಅನ್ಯಾಯದ ಬಗ್ಗೆ ಗುರು ಬಾಳಿಗರ ಪ್ರಬಂಧಕ್ಕೆ ನನ್ನ ಕೆಲವು ವ್ಯಾಖ್ಯಾನಗಳು.
ಬಾಳಿಗರ ಬರವಣಿಗೆಯ ರೀತಿ ಇಷ್ಟ ಆಯಿತು. ಅವರು ವಿಷಯವನ್ನು ಮಂಡಿಸುವ ರೀತಿಯಂತು ಸುಂದರ... ಇದನ್ನ ಇನ್ನೆಲ್ಲಾದರು ಹೇಳ್ತೆನೆ.. ವಿಷಯಕ್ಕೆ ಬರೋಣ.

ಲೇಖನ ವರ್ಗ (Category): 

’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

field_vote: 
Average: 3.5 (2 votes)
To prevent automated spam submissions leave this field empty.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗ ಮಿತ್ರ ಮಹೇಂದ್ರ ವಿಜಯಶೀಲ (mavipra) ಅವರು ಈಚೆಗೆ ನನಗೆ ’ಸಂಪದ’ದ ಮೂಲಕ ಸಂದೇಶವೊಂದನ್ನು ಕಳಿಸಿ, ದ.ರಾ.ಬೇಂದ್ರೆಯವರ ಪ್ರಸಿದ್ಧ ಕವನ ’ಹಕ್ಕಿ ಹಾರುತಿದೆ ನೋಡಿದಿರಾ?’ ಇದರ ಭಾವಾರ್ಥವನ್ನು ತಿಳಿಸುವಂತೆ ಕೇಳಿಕೊಂಡರು.

ಲೇಖನ ವರ್ಗ (Category): 

ನಾನು ಓದಿದ ಪುಸ್ತಕ-ಮತಸಂತೆ-ಕುರಿತು

field_vote: 
No votes yet
To prevent automated spam submissions leave this field empty.

ಸಾಮಾನ್ಯವಾಗಿ ರಾಜಕಾರಣಿಯು ಅದೆಷ್ಟೋ ಸಿಹಿ ಕಹಿಗಳನ್ನು ಅನುಭವಿಸಿದ್ದರೂ ಮೂಖನೊಬ್ಬನ ಭಾವನೆಗಳಂತೆ ಸಮಾಜದ ಅರಿವಿಗೆ ವ್ಯಕ್ತವಾಗದೆ ಅಳಿದುಹೊಗುತ್ತದೆ. ಆದರೆ ಸಂಸದರಾದ H.ವಿಶ್ವನಾಥರು ಬರೆದ ಪುಸ್ತಕ ಹಳ್ಳಿ ಹಕ್ಕಿಯ ಹಾಡು ತದನಂತರ ಮತಸಂತೆ. ನನಗೆ ಪ್ರಸ್ತುತವಾಗಿರುವುದು ಚುನಾವಣೆಗಳ ಅವಲೋಕನ ಮಾಡಿರುವ ಮತಸಂತೆ.

ಲೇಖನ ವರ್ಗ (Category): 

ನಮ್ಮ ನಿಮ್ಮ ಜನಪ್ರತಿನಿಧಿಗಳು....

field_vote: 
No votes yet
To prevent automated spam submissions leave this field empty.

ಹ... ಲೋಕಸಭಾ ಚುನಾವಾಣೆ ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ಎದುರಿಗೆ ಬರಲಿದೆ... ಮೊದಲ ಹಂತ 23ನೇ ಎಪ್ರಿಲ್ ಮತ್ತು ಎರಡನೆ ಮತ್ತು ಕೊನೆಯ ಹಂತ 30ನೇ ಎಪ್ರಿಲ್ 2009....

ಇನ್ನೊಂದು ವಿಷಯ... ನಿಮಗೆ ಗೊತ್ತೆ ನಿಮ್ಮ ಲೋಕಾಸಭಾ ವ್ಯಾಪ್ತಿಯಲ್ಲಿ ನಿಮ್ಮನ್ನು ಪ್ರತಿನಿಧಿಸಲು ಒಟ್ಟು ಎಷ್ಟು ಜನ ಚುನಾವಣೆಗೆ ನಿಂತಿದ್ದಾರಂತಾ???

ಲೇಖನ ವರ್ಗ (Category): 

ಕೆ.ಎಸ್ ನರಸಿ೦ಹ ಸ್ವಾಮಿಯವರ ’ಮದುವಣಗಿತ್ತಿಯ ಮನಸ್ಸು’

field_vote: 
No votes yet
To prevent automated spam submissions leave this field empty.

ನವಿರಾದ ಪ್ರೇಮಗೀತೆಗಳಿಗೆ ಕೆ.ಎಸ್.ನ ಖ್ಯಾತರು.ದ೦ಪತಿಗಳಿಗೆ ದಾ೦ಪತ್ಯದ ಮಾಧುರ್ಯವನ್ನು ಉಣಿಸಿದ ಕವಿ
ಮೈಸೂರುಮಲ್ಲಿಗೆಯ ಪ್ರತಿಯೊ೦ದು ಕವನವೂ ಮಲ್ಲಿಗೆಯಷ್ಟೇ ಮ್ರದು, ಪರಿಮಳಯುಕ್ತ. ಕವನಗಳನ್ನು ಓದುತ್ತಾ ಹೋದ೦ತೆ
ಭಾವನನ್ನು ಅನುಭವಿಸುತ್ತೇವೆ.ಮನಸ್ಸು ಕೆ೦ಪಾಗುತ್ತದೆ.ಕವನಗಳನ್ನ ಆಳಕ್ಕಿಳಿದು,ಬಗೆದು , ಶೋಧಿಸಿ ನೋಡಬೇಕಾಗಿಲ್ಲ

ಲೇಖನ ವರ್ಗ (Category): 

ಆಸ್ಕರ್‌ಗೆ ಹರ್ಷವೇಕೆ ?

field_vote: 
No votes yet
To prevent automated spam submissions leave this field empty.

ದೇಶದೆಲ್ಲಡೆಡೆ ಸ್ಲಂಡಾಗ್‌ನದ್ದೇ ಮಾತು.. ಸ್ಲಂ ಡಾಗ್‌ ಮೇನಿಯಾ.. ಜಯ ಹೋ ಸ್ಲಂ ಡಾಗ್‌.. ಹೀಗೆ ಭಿನ್ನ ಭಿನ್ನ ನಾಮಧೇಯದಿಂದ ದೃಶ್ಯಪತ್ರಿಕೋದ್ಯಮ (ದೃಶ್ಯ ಮಾಧ್ಯಮ) ಗಳು ಬಿಂಬಿಸುತ್ತಿವೆ. ಇದು ನಿಜಕ್ಕೂ ಭಾರತೀಯರು ಹರ್ಷ ವ್ಯಕ್ತಪಡಿಸುವ ವಿಚಾರವೇ ? ಎನ್ನುವ ಮಾತು ಮನಸ್ಸಿನಲ್ಲಿ ಸುಳಿಯದಿರದು.

ಲೇಖನ ವರ್ಗ (Category): 

ಹಿಂದ ನೋಡದ ಗೆಳತಿ.....

field_vote: 
Average: 4 (3 votes)
To prevent automated spam submissions leave this field empty.

ವರಕವಿ ಬೇಂದ್ರೆ ಯವರ ಈ ಕವನದ ಬಗ್ಗೆ ಬರೆಯಲು ಪ್ರೆರೇಪಣೆ ಬಂದಿದ್ದು ಎರಡು ಕಾರಣಕ್ಕೆ, ಒಂದು ನಮ್ಮ ಸವಡಿಯವರ ನೀ ಹಿಂಗ ನೋಡಬ್ಯಾಡ ನನ್ನ ಲೇಖನ ಮತ್ತು ರತ್ನಮಾಲ ಪ್ರಕಾಶ್ ಅವರ ಗಾಯನ(ಇದೇ ಕವನದ್ದು).

ಲೇಖನ ವರ್ಗ (Category): 

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೫

field_vote: 
No votes yet
To prevent automated spam submissions leave this field empty.

ಇತ್ತೀಚೆಗೆ ಡಿಸ್ಕವರಿಯಲ್ಲಿ ಬಾಗ್ದಾದ್ ಬ್ಯಾಟೆರಿ ಹಾಗೂ ಈಜಿಪ್ಟಿನ ಬ್ಯಾಟೆರಿ ಬಗ್ಗೆ ತೋರಿಸಿದಾಗ, ಭಾರತೀಯರಿಗೆ ಬ್ಯಾಟೆರಿ ಬಗ್ಗೆ ಏನು ಅರಿವಿದ್ದಿತು ಎಂದು ಹುಡುಕಿದಾಗ ಸಿಕ್ಕಿದು....

ಲೇಖನ ವರ್ಗ (Category): 

ರಜತ ಪರದೆಯ ಹಿಂದೆ

field_vote: 
No votes yet
To prevent automated spam submissions leave this field empty.

******ಏನು ?? ....ಏನು ??..... ಏನು ??.....********
(ನನ್ನ ಕುತ್ತಿಗೆ 0-180 degree 3 ಸಲ ತಿರುಗಿದೆ )
ನಾನು ಬರೆದ ಲೇಖನ ನೀವು ಓದುವುದಿಲ್ಲವಾ ??
ಇಷ್ಟು ದಿನ ನನ್ನ ಸ್ನೇಹಿತರಾಗಿದ್ದಕ್ಕೆ ಒಳ್ಳೆ ಪ್ರಶಸ್ತಿ ಸಿಕ್ಕಿತು .....

ಗಾಬರಿಗೊಳ್ಳಬೇಡಿ .... ಇದು ಕನ್ನಡ ಧಾರಾವಾಹಿ ನೋಡಿ ಕಲಿತಿದ್ದು ಅಷ್ಟೆ .

ಕಲ್ಯಾಣರೇಖೆ ,ಕಂಕಣಭಾಗ್ಯ ,ಕಾದಂಬರಿ , ನಾಕುತಂತಿ ,ಶುಭಲಗ್ನ ,ರಂಗೋಲಿ ,ಸುಕನ್ಯಾ ,ಸುಮತಿ ,ಮಾಂಗಲ್ಯ , ಪಾರ್ವತಿ (ನಿಮ್ಮ ಮನೆ ಮಗಳು ), ಗಂಗೋತ್ರಿ ,ಕಸ್ತೂರಿ ನಿವಾಸ..... ಮತ್ತೆ ಕೊನೆಗೆ ಬುಸ್ಸ್ಸ್ .......
" ನಾಗಮ್ಮ " .ಇಷ್ಟು ಧಾರಾವಾಹಿಯಲ್ಲಿ ಪ್ರತಿದಿನ ಒಂದೇ ಒಬ್ಬ ನಟ ಅಥವಾ ಒಬ್ಬ ವೀಕ್ಷಕ ಖಂಡಿತ ಸಾಯುತ್ತಾನೆ . ಅದು ಕೊನೆಗೆ Crime Diary ಯಲ್ಲಿ ಬರುತ್ತದೆ .

ಹಮ್.... ಶುರು ಮಾಡೋಣ . ಮೊದಲಿಗೆ "Title song ". ಇದು ತುಂಬಾ important . ಇದರ ರಚನೆ ತುಂಬಾ ಸುಲಭ . ಈ ಕೆಳಗಿನ ದೃಶ್ಯಗಳು ಇದ್ದೆ ಇರುತ್ತವೆ .

1) ಒಬ್ಬಳು ಹುಡುಗಿ ಶಾಲು ಹಿಡಿದುಕೊಂಡು ಗದ್ದೆಯಲ್ಲಿ ಓಡುತ್ತಾಳೆ.
2)ಹುಡುಗಿಯು ಮದರಂಗಿ ಹಚ್ಚಿದ ಕೈಯ್ಯಲ್ಲಿ ಹಣತೆ ಆರಿ ಹೋಗುವುದನ್ನು ತಡೆಯುತ್ತಾಳೆ.
3) ಹೋಳಿಯ ದೃಶ್ಯ ಹುಡುಗ ಹುಡುಗಿಗೆ ಪಿಚಕಾರಿ ಹೊಡೆಯುತ್ತಾನೆ .
4) ಹುಡುಗಿಗೆ ಅವಳ ತಾಯಿ ಕಪಾಳಕ್ಕೆ ಬಾರಿಸುತ್ತಾಳೆ.
5)ಕೊನೆಗೆ ಹುಡುಗಿ 32 ಹಲ್ಲು ತೋರಿಸಿ ನಗುತ್ತಾಳೆ ಅದರ ಪಕ್ಕ ಧಾರಾವಹಿಯ ಹೆಸರು ಬರುತ್ತದೆ .

ಲೇಖನ ವರ್ಗ (Category): 

ನಾ ಕಂಡಂತೆ ಬೇಂದ್ರೆಯವರ "ಹುಬ್ಬಳ್ಳಿಯಾಂವಾ"

field_vote: 
No votes yet
To prevent automated spam submissions leave this field empty.

ನಾನು ಮೊನ್ನೆ ನನ್ನ ಅಚ್ಚು ಮಿಚ್ಚಿನ ಕವಿ ಬೇಂದ್ರೆಯವರ ಹಾಡುಗಳನ್ನು ಸೀಡಿ ಪ್ಲೇಯರ್ನಲ್ಲಿ ಕೇಳುತ್ತಿದ್ದಾಗ ಅದರಲ್ಲಿನ ಒಂದು ಹಾಡು "ಹುಬ್ಬಳ್ಳಿಯಾಂವಾ" ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿಬಿಟ್ಟಿತು. ಮತ್ತೆ ಮತ್ತೆ ರಿವೈಂಡ್ ಮಾಡಿ ಮತ್ತೆ ಮತ್ತೆ ಕೇಳಿದೆ. ಕೇಳಿದಷ್ಟು ನನ್ನ ಬುದ್ಧಿ ಭಾವಗಳೆರಡೂ ಹೊಸ ಹೊಳಹುಗಳನ್ನು ಹುಡುಕಿ ಹೊರಟವು.

ಲೇಖನ ವರ್ಗ (Category): 

ನನ್ನ ಕನ್ನಡ ಭಾಷಾ ಪರಾಕ್ರಮ.

field_vote: 
Average: 2.7 (3 votes)
To prevent automated spam submissions leave this field empty.

೧.ಧಾರವಾಡ ಕನ್ನಡ, ಸಂಕೇತಿ ಕನ್ನಡ , ಹವ್ಯಕ ಕನ್ನಡ ,
ಅರೆ ಭಾಷೆ, ಮೈಸೂರು ಕನ್ನಡ, ಮಂಗಳೂರು ಕನ್ನಡ, ಕುಂದಗನ್ನಡ...ವೈವಿದ್ಯಮಯ ಶೈಲಿಯ ನಮ್ಮ ಕನ್ನಡ.

೨.ವೈಜ್ಞ್ಯಾನಿಕವಾಗಿ ಬಳಸುಬಹುದಾದ ಕನ್ನಡ.

೩.ಬರೆದಂತೆ ನುಡಿಯುಬಹುದಾದ ಕನ್ನಡ, ನುಡಿದಂತೆ ಬರೆಯಬಹುದಾದ ಕನ್ನಡ.

೫.ಕನ್ನಡ ಚೆಲುವಿನ ಚೆನ್ನುಡಿ.

೬.ಸರಸ್ವತಿ ವೀಣೆಯಲ್ಲಿ ಉಲಿದ ಕನ್ನಡ.

ಲೇಖನ ವರ್ಗ (Category): 

ಅಮ್ಮ ಹೇಳಿದ್ದೆಲ್ಲಾ ಸತ್ಯ:

field_vote: 
No votes yet
To prevent automated spam submissions leave this field empty.

ಮನೆಯಲ್ಲಿ ತಂದೆ ತಾಯಿ ಆಡುವ ಮಾತುಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬುದಕ್ಕೆ ಒಂದು ಸತ್ಯ ಘಟನೆಯನ್ನು ಓದಿ. ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ "ಮಳೆ ಬರುತ್ತೆ,ಹೊರಗೆ ಹರವಿರುವ ಬಟ್ಟೆಯನ್ನುತೆಗೆದುಕೊಂಡು ಬಾ" ಎಂದು.

ಲೇಖನ ವರ್ಗ (Category): 

ಬೊಗಸೆ ಬೆಳಕು

field_vote: 
No votes yet
To prevent automated spam submissions leave this field empty.

ಲೇಖನ ವರ್ಗ (Category): 

ನಮ್ಮದಲ್ಲದ ನ್ಯಾಯ

field_vote: 
No votes yet
To prevent automated spam submissions leave this field empty.

ಕಳೆದ ವಾರವಷ್ಟೆ ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬ ಮುಗಿದಿದೆ. ಈ ಹಬ್ಬಕ್ಕೂ ಮೊದಲು ವಾರಗಟ್ಟಲೇ ಹಬ್ಬದ ತಯಾರಿ ಕೂಡ ನಡೆದಿತ್ತು. ಪರಿಣಾಮ ಸಾವಿರಾರು ರಾಸುಗಳು, ಕುರಿಗಳು ಒಂಟೆಗಳು ಇವರ ಉದರವನ್ನು ಮಿಂದು ಮಣ್ಣಾಗಿ ಹೋಗಿವೆ. ಇವೆಲ್ಲಾ ಜಂತುಗಳು ರೂಪಾಯಿಗೆ ಎರಡಲ್ಲ ಬಿಡಿ... ಸಾವಿರಾರು ರೂಪಾಯಿಗಳು ಕಿಸೆಯಿಂದ ಕಾಲ್ಕಿತ್ತಿದೆ.

ಲೇಖನ ವರ್ಗ (Category): 

ದೇವಾಲಯ ಸುತ್ತುತ್ತಿರುವ ವರಾಹ.

field_vote: 
No votes yet
To prevent automated spam submissions leave this field empty.

ನಿನ್ನೆ ಮೊನ್ನೆಯಿಂದ ಹಂದಿಯೊಂದು ದೇವಾಲಯ ಸುತ್ತುತ್ತಿರುವ ದೃಷ್ಯವನ್ನು ಟಿ.ವಿ-೯ ರಲ್ಲಿ ತೋರಿಸಲಾಗುತ್ತಿದೆ. ನೀವೂ ನೋಡಿರಬಹುದು. ಆಂದ್ರದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿನ ಒಂದು ದೇವಾಲಯದ ಕಥೆ ಇದು. ಪಾಪ! ಆ ಹಂದಿ ಯಾಕೆ ಹಾಗೆ ಸುತ್ತು ಹಾಕುತ್ತಿದೆಯೋ ಗೊತ್ತಿಲ್ಲ.

ಲೇಖನ ವರ್ಗ (Category): 

ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

field_vote: 
No votes yet
To prevent automated spam submissions leave this field empty.

ಹೇಳಿ ಕೇಳಿ ನಮ್ಮ ಭಾರತ ಬಡರಾಷ್ಟ್ರ. ಹಾಗಂತ ಶ್ರೀಮಂತರಿಗೇನೂ ಕಡಿಮೆ ಇಲ್ಲ. ಶ್ರೀಮಂತಿಕೆ ಸ್ವ್ಲಲ್ಪಮಟ್ಟಿನದಾದರೂ ತೋರಿಕೆ ಮಾತ್ರ ಬೆಟ್ಟದಷ್ಟು.

ನಮ್ಮಲ್ಲಿ ಬಹುಪಾಲು ಶ್ರೀಮಂತರೆಂದರೆ ರಾಜಕಾರಣಿಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಶ್ರೀಮಂತರಾಗಲು ಈ ಕ್ಷೇತ್ರ ಇಂದಿನ ದಿನಗಳಲ್ಲಿ ಹೆಸರುವಾಸಿಯಾಗಿದೆ.

ಲೇಖನ ವರ್ಗ (Category): 

ಅಶ್ರು ತರ್ಪಣ

field_vote: 
No votes yet
To prevent automated spam submissions leave this field empty.

ಅಶ್ರುತರ್ಪಣ:

ಭಯೋತ್ಪಾದಕರ ಗುಂಡಿಗೆ ಬಲಿಯಾದ ಮುಂಬೈ ಪೋಲೀಸರಿಗೆ,

ಅಮಾಯಕರಿಗೆ.

ಇಲ್ಲಿತನಕ ೧೦೧ ಜನರ ಬಲಿ

೩೦೦ ಜನರಿಗೆ ಗಾಯ; ಬದುಕುಳಿಯುವವರೆಷ್ಟೋ, ಬಲಿಯಾಗುವವರೆಷ್ಟೋ;

ಏನೀ ಹುಚ್ಚಾಟ?

ಯಾರ ಸಿಟ್ಟಿಗೆ ಯಾರ ಬಲಿ?

ಇನ್ನಾದರೂ ಎಚ್ಚರ! ಎಚ್ಚರ! ಎಚ್ಚರ!!

ದೇಶದ  ಉಳಿವಿಗಾಗಿ ಸಂಪದಿಕರ ಕೊಡುಗೆ ಏನು?

ಲೇಖನ ವರ್ಗ (Category): 

ಹೆಣ್ಣುಗ ಏನೀ ನಿನ್ನ ಪರಿ...

field_vote: 
No votes yet
To prevent automated spam submissions leave this field empty.

ಕಳೆದ ಒಂದು ತಿಂಗಳಿನಿಂದ ಮಾಧ್ಯಮದಲ್ಲಿ ಹಿಜಡಾಗಳದ್ದೇ ಸುದ್ದಿ. ನಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಮಾಡಿದ ಖೋಜಾಗಳು ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿ ಪ್ರವರ ಕೂಡ ಮಾಡಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಅದಕ್ಕೆ ಕಾರಣವಿಷ್ಟೆ.

ಲೇಖನ ವರ್ಗ (Category): 

ನಮ್ಮೂರಿನಲ್ಲಿ ಹೀಗೊಂದು ರಸದೌತಣ

field_vote: 
No votes yet
To prevent automated spam submissions leave this field empty.

ನಮ್ಮೂರಿನಲ್ಲಿ ಹೀಗೊಂದು ರಸದೌತಣ
ದರ್ಶನೇ ಸ್ಪರ್ಶನೇ ಚಾಸ್ಯ ಭೋಗ ಸ್ವರ್ಗಾಪವರ್ಗದೇ
ಪುನೀತೋ ವಿಪ್ರ ಹತ್ಯಾದಿ ಪಾತಕೇ ಪತಿತಂಜನಂ
ದಂಡಶ್ಶಂಬುರುಮಾ ತಂತ್ರೀ ಕಕುಭಿಃ ಕಮಲಾಪತಿಃ
ಇಂದಿರಾ ಪತ್ರಿಕಾ ಬ್ರಹ್ಮ ತುಂಬು ನಾಭಿ ಸರಸ್ವತೀ
ದೋರಕೋ ವಾಸುಕೀರ್ಜೀವಾ ಸುಧಾಂಶುಸ್ಸಾರಿಕಾ ರವಿಃ
ಸರ್ವದೇವಮಯೀ ತಸ್ಮಾತ್ ವೀಣೀಯಂ ಸರ್ವಮಂಗಳಾ||

ಲೇಖನ ವರ್ಗ (Category): 

ಖಂಡಿತಾ ಮನುಷ್ಯರನ್ನು ನಂಬಬಹುದು!

field_vote: 
No votes yet
To prevent automated spam submissions leave this field empty.

ಮನುಷ್ಯನ ಜೀವನದ ಪಯಣದಲ್ಲಿ ಎದುರಾಗುವ, ಎದುರಿಸುವ ನೋವು, ನಲಿವುಗಳ ಮತ್ತು ಅವುಗಳಿಗೊಂದು ಸೂಕ್ಷವಾದ ಪರಿಹಾರವನ್ನು ಕೊಡುವ ಪರಿಶುದ್ಧ ಕಥೆಗಳ ಒಂದು ಪ್ರಾಮಾಣಿಕ ಪ್ರಯತ್ನ ಬಿ. ರಮೇಶ ಭಟ್ಟರ `ಮನುಷ್ಯರನ್ನು ನಂಬಬಹುದು'. ಶಿರೋನಾಮೆಯೆ ಸೂಚಿಸುವಂತೆ ಇಲ್ಲಿಯ ಕಥೆಗಳೆಲ್ಲ ಮನುಷ್ಯ ಸಂಬಂಧಗಳ ಎಳೆಯನ್ನು ಹಿಡಿದು ಸಾಗುವಂಥವುಗಳು. ಬಹಳ ಆತ್ಮೀಯವಾಗಿ ಬಿಡುವ, ನಿನ್ನೆ ಮೊನ್ನೆಯೆಲ್ಲೋ ಕಂಡಂತೆ, ಕೇಳಿದಂತೆ, ಅವು ನಮ್ಮನ್ನು ಆವರಿಸುತ್ತವೆ. ಅಲ್ಲಿಯ ಪಾತ್ರಗಳು ನಿಜಕ್ಕೂ ಜೀವಂತ ಮತ್ತು ನಮಗೆ ಪರಿಚಿತ ಅನ್ನುವಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವ ಬೀರುತ್ತವೆ. `ಯಾರನ್ನೂ ನಂಬಬಾರದು' ಅಂದುಕೊಳ್ಳುತ್ತಲೇ ನಾವು ಎಲ್ಲರನ್ನೂ ನಂಬುತ್ತೇವೆ ಮತ್ತು ನಂಬಲೇ ಬೇಕಾಗುತ್ತದೆ, ಇಲ್ಲಿಯ ಕಥೆಗಳ ಹಾಗೆ.

ಸಂಕಲನದ ಮೊದಲ ಕಥೆ `ಮನುಷ್ಯರನ್ನು ನಂಬಬಹುದು', ಒಬ್ಬ ಮನುಷ್ಯನಿಗೆ, ಒಂದು ಅಪರಿಚಿತ ಸ್ಥಳದಲ್ಲಿ ತನ್ನ ಮುಂದಿನ ಪ್ರಯಾಣಕ್ಕೆ ಅನಾನುಕೂಲವಾಗಿ ಅಲ್ಲಿ ಆತನಿಗೆ ಎದುರಾಗುವ ಪರಿಸ್ಥಿತಿಯನ್ನು ಈ ಕಥೆ ಚಿತ್ರಿಸುತ್ತದೆ. ಅಸಾಹಯಕ ಮನುಷ್ಯ ಗಮ್ಯ ತಲುಪುವಲ್ಲಿ ಅವನಿಗಿರುವ ಆತಂಕ ಮತ್ತು ಆ ಸಮಯದಲ್ಲಿ ಯಾವುದೋ ದೂರದ ಸಂಬಂಧವೊಂದನ್ನು ಹೇಳಿಕೊಂಡು ಸಹಾಯ ಯಾಚಿಸುವ ಸ್ಥಿತಿ, ಅನಾಥರಾಗುವ ಪ್ರಜ್ಞೆ, ಯಾರಾದರೂ ಸಹಾಯ ಮಾಡಿಯಾರೆಂಬ ಧನಾತ್ಮಕ ಚಿಂತನೆ, ಹಾಲಾಡಿಯ ಉಡುಪರ ಮೂಲಕ ತೆರೆದುಕೊಳ್ಳುತ್ತದೆ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಶ್ರೀನಿವಾಸ, ಸಹಾಯವನ್ನು ನಿರಾಕರಿಸುವಾಗ ಕಥಾ ನಾಯಕ, ಮನುಷ್ಯ ಮನುಷ್ಯರನ್ನು ನಂಬಲಿಕ್ಕಾಗದ ಕಾಲದಲ್ಲೂ ಅವನ ಸಹಾಯಕ್ಕೆ ನಿಲ್ಲುತ್ತಾನೆ. ಮುಂದೆ ಉಡುಪರು ಅವನಿಂದ ಪಡೆದ ಎಲ್ಲಾ ಸಹಾಯವನ್ನೂ ಪದೇ ಪದೇ ನೆನಪಿಸಿಕೊಳ್ಳುವ ಮೂಲಕ ಮನುಷ್ಯ ಮನುಷ್ಯನನ್ನು ನಂಬಬಹುದು ಅನ್ನುವುದನ್ನು ದೃಢಪಡಿಸುತ್ತಾರೆ.

ಲೇಖನ ವರ್ಗ (Category): 

ಓಪನ್ ಆಫೀಸ್ ಸರ್ವರ್ ಡೌನ್ ?

field_vote: 
Average: 5 (1 vote)
To prevent automated spam submissions leave this field empty.

 

Open Office 3.0 ಡೌನ್‌ಲೋಡ್ ಮಾಡೋಣ ಅಂತ http://www.openoffice.org/ ಗೆ ಹೋದರೆ, ನನಗೆ ಆ ಪುಟವನ್ನು ಬಳಸಲು ನನಗೆ ಅನುಮತಿಯಿಲ್ಲ (403 Forbidden) ಎಂದು ಹೇಳಿತು. ಏನಾಯ್ತಪ್ಪಾ ಎಂದು ಗೂಗಲ್ ಗುರುವನ್ನು ಕೇಳಿದಾಗ ಈ ಕೊಂಡಿ ಸಿಕ್ಕಿತು. ಈ ತಾಣದಲ್ಲಿದ್ದ ಸಂದೇಶವನ್ನು ನೋಡಿ ಬಹಳ ಸಂತೋಷವಾಯಿತು.

---------------------

ಲೇಖನ ವರ್ಗ (Category): 

ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

field_vote: 
No votes yet
To prevent automated spam submissions leave this field empty.

(ವೇಶ್ಯಾವಾಟಿಕೆ ಎಷ್ಟರಮಟ್ಟಿಗೆ ಸಾಮಾಜಿಕವಾಗಿ ಒಪ್ಪಲರ್ಹ, ಎಂಬುದನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸಿದರಾಯಿತು. ಈ ಲೇಖನ, ಕೇವಲ acceptable prostitution ಬಗ್ಗೆ ಮಾತನಾಡುತ್ತದೆ.)

ಅನುಭವವನ್ನು ಕಾದಂಬರಿಯಲ್ಲಿ ತುಂಬಲು ಶಿವರಾಮ ಕಾರಂತರು ಮಾಡಿದ ಮತ್ತೊಂದು ಪ್ರಯತ್ನವೇ “ಮೈ ಮನಗಳ ಸುಳಿಯಲ್ಲಿ”. ಎಂದಿನಂತೆ ಕಾರಂತರು, ಕಥೆಯನ್ನು ಹೇಳುತ್ತ ಹೋಗುತ್ತಾರೆ. ಅವರ narrationನಲ್ಲಿ ಓದುಗನನ್ನು ಸೆಳೆದೆ ಹಿಡಿಯಬೇಕೆಂಬ ಹಂಬಲವಿಲ್ಲ. ಕಾದಂಬರಿಯನ್ನು ಅರ್ಧಕ್ಕೆ ನಿಲ್ಲಿಸಿ ಎದ್ದರೆ, ಎನೋ ಕಳೆದುಕೊಂಡೆ ಎನ್ನುವಂತಹ ಚಡಪಡಿಕೆ ಮೂಡಿಸುವದಿಲ್ಲ. ಆದರೆ, ಕಥೆಯನ್ನು ಹೇಳಿದಂತೆಲ್ಲ, ಕೇಳುವ ತಾಳ್ಮೆಯನ್ನು ಸೃಷ್ಟಿಸುತ್ತಾರೆ. ಇದು ಪಕ್ಷಪಾತ ರಹಿತ ಸಾಹಿತ್ಯಕ್ಕಿರಬೇಕಾದ ಮಹತ್ವದ ಲಕ್ಷಣ (ಇದು ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವದಿಲ್ಲ. ಹೀಗಾಗಿ, ಅವರನ್ನು ನಿಷ್ಪಕ್ಷಪಾತ ಸಾಹಿತಿ ಎಂದು ನಾನು ಹೇಳಲಾರೆ.)

ಕಾರಂತರ ಎಲ್ಲ ಕಾದಂಬರಿಗಳನ್ನು ಗಮನಿಸಿದಾಗ, ಅವರು ಎಲ್ಲ ಪಾತ್ರಗಳನ್ನೂ ಅದರ ಸಾಮಾನ್ಯ ಪರಿಧಿಯಲ್ಲಿಯೇ ನಿಲ್ಲಿಸಿ ಅದಕ್ಕೆ ತೂಕ ತುಂಬುತ್ತಾರೆ. ಪಾತ್ರ ಬಣ್ಣ ಹಚ್ಚಿದಕ್ಷಣ ತನ್ನ ಎಲ್ಲ ಸಾಮಾನ್ಯ ಗುಣಗಳನ್ನು ಕಳೆದುಕೊಂಡು ಒಂದು ಹಂತ ಎತ್ತರಕ್ಕೆ ಹೋಗಲಾರದು.ಹಾಗೆ ಹೋಗಬಾರದು ಕೂಡ (ಹಾಗೇನಾದರೂ ಆದರೆ, ಪಾತ್ರಗಳು ತಮ್ಮ ನೈಜತೆಯನ್ನು ಕಳೆದುಕೊಂಡು, ಢೋಂಗಿಯಾಗಿಬಿಡುತ್ತವೆ. ಓದುಗನಿಗೆ ಒಂದು fairy tailನ ಅನುಭವ ಕೊಡುತ್ತವೆ. ಅಲ್ಲದೇ, ಅಲ್ಲಿ ಬರುವ “values and ethics” impractical ಆಗಿರುವ ಸಾಧ್ಯತೆ ಹೆಚ್ಚು).

ಲೇಖನ ವರ್ಗ (Category): 

ಸೂಪರ್ ಜಾಹಿರಾತು ಲೆಟ್ಸ್ ಟೀಚ್ ಇಂಡಿಯಾ

field_vote: 
Average: 4 (1 vote)
To prevent automated spam submissions leave this field empty.

ನಾವೆಲ್ಲಾ ಆಗಾಗ್ಗೆ ಗಮನಿಸಿರುತ್ತೇವೆ, ನಮ್ಮ ಸಿನಿಮಾ ನಿರ್ದೇಶಕರು ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾ ಮಾಡ್ತಾ ಇದೀವಿ ಅಂತ ಹೇಳುತ್ತಿರುತ್ತಾರೆ.

ಲೇಖನ ವರ್ಗ (Category): 

ತಿರುಗುತ್ತಲೇ ಬಣ್ಣಗಳನ್ನು ಬಿಚ್ಚಿಡುವ ಬಿ. ಎಂ. ಹನೀಫ್ ಅವರ `ಬಣ್ಣದ ಬುಗುರಿ'

field_vote: 
No votes yet
To prevent automated spam submissions leave this field empty.

ಮೇಲ್ನೋಟಕ್ಕೆ `ಬಣ್ಣದ ಬುಗುರಿ' ಅಂಕಣ ಬರಹಗಳ ಸಂಕಲನವಾದರು, ಇವುಗಳಲ್ಲಿಯ ಒಂದೊಂದು ವಿಷಯವೂ ಅನುಭವದ ಬರಹಗಳೇ, ಅಂಕಣದ ಬರಹಗಳಾಗಿ ತೆರೆದುಕೊಂಡವುಗಳು.

ಲೇಖನ ವರ್ಗ (Category): 

ವಿಮಾನ ಆಸುಪಾಸು...

field_vote: 
No votes yet
To prevent automated spam submissions leave this field empty.

ನಾಗರೀಕತೆ ಅರಣ್ಯಗಳನ್ನು ಹಿಮ್ಮೆಟ್ಟಿಸುತ್ತವೆ ಎಂಬುದು ಹಳೆಯ ಕಲ್ಪನೆ ಅಥವಾ ಮಾತು. ಆದರೀಗ ಇದನ್ನು ಪುನಾರವಲೋಕಿಸಬೇಕಿದೆ. ಜನರಿಗೆ, ಸರ್ಕಾರ ಅಥವಾ ಸಮಾಜ ಅಭಿವ್‌ಋದ್ದಿ ಎಂಬ ವಿಶ್ಲೇಷಣೆ ತಪ್ಪು ನೀಡಿರಬಹುದೇ?

ಲೇಖನ ವರ್ಗ (Category): 

ಕ್ಷಮೆಯಿಲ್ಲದೂರಿನಲಿ....

field_vote: 
No votes yet
To prevent automated spam submissions leave this field empty.

ದೇಶಕಾಲದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾದ ವಸುಧೇಂದ್ರ ಅವರ ಕತೆ ಕ್ಷಮೆಯಿಲ್ಲದೂರಿನಲಿ.

ಲೇಖನ ವರ್ಗ (Category): 

ತೇಜಸ್ವಿ

field_vote: 
Average: 3 (1 vote)
To prevent automated spam submissions leave this field empty.

ನನ್ನ ನೆಚ್ಚಿನ ಸಾಹಿತಿ ಪೂ.ಚಂ.ತೇಜಸ್ವಿ

ಸುಚೇತಾ ಕುಲಕರ್ಣಿ(ತಾಳಿಕೋಟಿ)
moonsu808@gmail.com

ಲೇಖನ ವರ್ಗ (Category): 

ವಿಜ್ಞಾನಿಗಳೊಡನೆ ರಸನಿಮಿಷಗಳು

field_vote: 
No votes yet
To prevent automated spam submissions leave this field empty.

ಜಿ.ಟಿ. ನಾರಾಯಣ್ ರಾವ್ ರವರ ಬಗ್ಗೆ ಚಿಂತಿಸುತ್ತ ನನ್ನ ಪುಸ್ತಕದ ಆಲ್ಮೇರಾ ಬಳಿ ಪುಸ್ತಕಗಳನ್ನು ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದವರು ಜೆ.ಆರ್.ಲಕ್ಷ್ಮಣರಾವ್ ರವರು. ಅವರ ಪುರ್ಣ ಹೆಸರು ಜಗಲೂರು ರಾಘವೇಂದ್ರ ರಾವ್ ಲಕ್ಷ್ಮಣ ರಾವ್. 1921ರಲ್ಲಿ ಜನಿಸಿದ ಇವರು 1943ರಿಂದ 38 ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪರಮಾಣು ಚರಿತ್ರೆ, ಬೈಜಿಕ ವಿದ್ಯುತ್ ಹೀಗೆ ಅನೇಕ ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ.
ನಾವು ಸಾಧಾರಣವಾಗಿ ವಿಜ್ಞಾನಿಗಳು ಎಂದರೆ ನಮ್ಮಂತೆ ಸಾಮಾನ್ಯ ಮನುಷ್ಯರು ಎಂದು ಪರಿಗಣಿಸುವುದೇ ಇಲ್ಲ. ಅವರೆಲ್ಲೋ ಎತ್ತರದಲ್ಲಿ ಇರುವ ವಿಶಿಷ್ಟ ಮನೊಭಾವದ ವ್ಯಕ್ತಿಗಳಾಗಿರುತ್ತಾರೆ, ನಮ್ಮ ನಿಮ್ಮ ಹಾಗೆ ಸಾಮಾನ್ಯ ವಿಚಾರಗಳು ಅವರಿಗೆ ಬರುವುದೇ ಇಲ್ಲ, ಸದಾ ಗಂಭೀರ ಪ್ರವೃತ್ತಿಯವರಾಗಿ ಇರುತ್ತಾರೆ ಎಂದೆಲ್ಲ ಅವರ ಬಗ್ಗೆ ಚಿಂತಿಸಿರುತ್ತೇವೆ. ಸಾಮಾನ್ಯ ಜನರಂತೆ ಅವರು ಸಂತೋಷ ಆದಾಗ ಕುಣಿದಾಡುವುದು, ಸಣ್ಣ ತಪ್ಪು ಮಾಡಿ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವುದು ಮುಂತಾದವು ಅವರಿಂದ ಬಲು ದೂರ ಎಂದುಕೊಳ್ಳುತ್ತೇವೆ. ಆದರೆ ಜೆ.ಆರ್. ಲಕ್ಷ್ಮಣ ರಾಯರು ವಿಜ್ಞಾನವಲ್ಲದೇ ವಿಜ್ಞಾನಿಗಳ ಬಗ್ಗೆಯೂ ಹೆಚ್ಚು ಆಸಕ್ತಿಯುಳ್ಳವರಾಗಿ ಅವರ ದಂತಕಥೆಗಳಿಂದಲೂ ಆಕರ್ಷಿತರಾದರಂತೆ. ಹೀಗಾಗಿ ತಾನು ಸವಿದು ಬಾಯಿ ಚಪ್ಪರಿಸಿದ ಸುದ್ದಿಗಳನ್ನು ನಮಗಾಗಿ “ವಿಜ್ಞಾನಿಗಳೊಡನೆ ರಸನಿಮಿಷಗಳು” ಎಂಬ ಕೃತಿ ರಚಿಸಿ ಮನರಂಜನೆ ನೀಡಿದ್ದಾರೆ. ಅವುಗಳನ್ನು ಓದುತ್ತಿದ್ದರೆ ಆ ವಿಜ್ಞಾನಿಗಳೆಲ್ಲಾ ನಮಗೆ ತೀರಾ ಹತ್ತಿರದವರೆನ್ನಿಸುತ್ತಾರೆ. ಅಪಾರ ಬುದ್ಧಿಶಕ್ತಿಯ ಅವರ ಹಸುಳೆ ಸ್ವಭಾವ, ವಿನೋದ ಪ್ರಿಯತೆ, ಮಾನವೀಯತೆ ಮತ್ತು ಮರೆಗೂಳಿತನ ನಮ್ಮ ಹೃದಯವರಳಿಸಿ ತುಟಿಯಂಚಿನಲ್ಲಿ ನಗು ಅರಳುವಂತೆ ಮಾಡುತ್ತವೆ. ಜೆ.ಆರ್. ಲಕ್ಷ್ಮಣರಾವ್ ರವರು ಇಲ್ಲಿ ಮೆರೆಸಿರುವ ಹಾಸ್ಯ ಯಾರ ಮನಸ್ಸನ್ನೂ ಘಾಸಿಗೊಳಿಸದ ಹಿತವಾದ ನಗೆರತ್ನಗಳಂತಿವೆ. ಈ ಪುಸ್ತಕದಲ್ಲಿನ ಒಂದು ಪ್ರಸಂಗವನ್ನು ಇಲ್ಲಿ ಉದಾಹರಿಸುತ್ತೇನೆ.

ಲೇಖನ ವರ್ಗ (Category): 

ಗಂಭೀರ ವಾಸ್ತವತೆಯಲ್ಲಿ ಸೃಜನಶೀಲತೆಯನ್ನು ಮೂಡಿಸಿದ `ಟಕ್ ಟಿಕ್ ಪೆನ್ನು'

field_vote: 
Average: 5 (1 vote)
To prevent automated spam submissions leave this field empty.

ವಾಸ್ತವತೆಯನ್ನೇ ಗಂಭೀರವಾಗಿ ಬಿಂಬಿಸುವ ಸೃಜನಶೀಲ ಕಥೆಗಳ ಗುಚ್ಛ, `ಟಕ್ ಟಿಕ್ ಪೆನ್ನು' ಕಥೆಗಾರ, ವಿಮರ್ಶಕ ನರೇಂದ್ರ ಪೈ ಅವರ ಮೊದಲ ಕಥಾ ಸಂಕಲನವೆಂದರೆ ಆಶ್ಚರ್ಯವಾಗದಿರಲಾರದು. ಕಥೆಗಾರರಾಗಿ ಗಮನ ಸೆಳೆದಿರುವ ನರೇಂದ್ರ ಪೈಯವರ ಸುಮಾರು ಕಥೆಗಳು ಇಷ್ಟರವರೆಗೆ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಕಥಾಲೋಕದಲ್ಲಿ ಯಾರನ್ನೂ ಅನುಕರಿಸದೆ ತಮ್ಮದೇ ಆದ ಶೈಲಿಯಲ್ಲಿ ಕಥೆಗಳನ್ನು ಬರೆಯುವ ಇವರ ಕಥೆಗಳ ಸನ್ನಿವೇಶಗಳು, ಪಾತ್ರ ಚಿತ್ರಣಗಳು ಓದುಗರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುವುದಲ್ಲದೆ, ಘಟನೆಗಳು, ಪಾತ್ರಗಳು ನಮ್ಮ ಮನೆಯ ಅಥವಾ ನಮ್ಮ ನೆರೆ ಕರೆಯಲ್ಲೆಲ್ಲೋ ನಡೆದಷ್ಟು ವಾಸ್ತವಕ್ಕೆ ಹತ್ತಿರವಾಗಿ ಮನಸ್ಸಿನಾಳಕ್ಕೆ ಇಳಿಯುತ್ತವೆ. ಕಥೆಗಳನ್ನು ಓದಿದ ನಂತರವೂ ಇವು ನಮ್ಮ ಮನಸ್ಸಿನಲ್ಲಿಯೇ ಗುಯ್ಂ ಗುಟ್ಟುತ್ತಿರುತ್ತವೆ.

ಲೇಖನ ವರ್ಗ (Category): 

'ವರ್ಮಾ'ನ "ಸರ್ಕಾರ್ ರಾಜ್ "ಸಾಮ್ರಾಜ್ಯದ ಅಂಧ: ಪತನ.....

field_vote: 
No votes yet
To prevent automated spam submissions leave this field empty.

ಚಂದಮಾಮ ಕಥೆಗಳಲ್ಲಿಯ ವಿಕ್ರಮ ಮತ್ತು ಬೇತಾಳ ಸೀರೀಸ್ [ಸೀರಿಯಸ್] ಅಲ್ಲ. ಕಥೆಗಳ ಪರಿಶ್ಕ್ರುತ ರೂಪ ಅಥವಾ ಮುಂದುವರೆದ

ರೂಪವೆನ್ನಬಹುದಾದ ನಮ್ಮ ಸಿನಿಮಾಗಳ ಮುಂದುವರೆದ ಭಾಗಗಳು ತಮ್ಮ ಹಿಂದಿನ ಸಿನಿಮಾಗಳಷ್ಟೇ ಯಶಸ್ವಿಯಾಗುವಲ್ಲಿ ಸದಾ

ಎಡುವುತ್ತಲೇ ಇರುವುದು ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ ರಾಮಗೋಪಾಲ್ ವರ್ಮಾ ನ ಬಹು ನಿರೀಕ್ಷಿತ ಚಿತ್ರ
"ಸರ್ಕಾರ್ ರಾಜ್"

ಲೇಖನ ವರ್ಗ (Category): 

ಮರಗಳ ಮಹತ್ವ

field_vote: 
Average: 3.1 (16 votes)
To prevent automated spam submissions leave this field empty.

ಅಶ್ವತ್ಥಮೇಕಂ ಪಿಚುಮಂದಮೇಕಮ್
ನ್ಯಗ್ರೋಧಮೇಕಂ ದಶ ತಿಂತ್ರಿಣೀಶ್ಚ
ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್
ಧರ್ಮಾರ್ಥಮಾರೋಪ್ಯ ಸ ಯಾತಿ ನಾಕಂ||

ಲೇಖನ ವರ್ಗ (Category): 

ಪತ್ರಕರ್ತ

field_vote: 
Average: 1 (1 vote)
To prevent automated spam submissions leave this field empty.

ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ.

ಲೇಖನ ವರ್ಗ (Category): 

ನರ್ತನ ಜಗತ್ತಿಗೊಂದು ಪರಿಭ್ರಮಣ

field_vote: 
No votes yet
To prevent automated spam submissions leave this field empty.

ನರ್ತನ ನೋಡೋಕೆ ಚೆನ್ನ. ಸಂಗೀತ ಕೇಳೋಕೆ ಚೆನ್ನ. ಓದೋಕೆ...?
ಎಲ್ಲವೂ ಚೆನ್ನ!

ಲೇಖನ ವರ್ಗ (Category): 

ವಿವೇಕರ ಕಥಾಲೋಕ-7

field_vote: 
No votes yet
To prevent automated spam submissions leave this field empty.

ಎರಡನೆಯ ನಾಟಕ : ಬಹುಮುಖಿ (2008) ( ಸದ್ಯದಲ್ಲೇ ಪ್ರಕಟವಾಗಲಿದೆ; ರಂಗಶಂಕರದಲ್ಲಿ ನಿರ್ದಿಷ್ಟ ದಿನಗಳಂದು ಪ್ರದರ್ಶಿಲ್ಪಡುತ್ತಿದೆ.)

ಈ ನಾಟಕ ಶರವಣ ಸರ್ವಿಸಸ್ ಕಥೆಯನ್ನು ನೆನಪಿಸುತ್ತದೆ ಮಾತ್ರವಲ್ಲ ಮೊದಲ ಓದಿಗೆ ಆ ಕಥೆಯ ಮೊನಚು, ಅದು ನೀಡುವ ಒಂದು ಗಾಢ ಅನುಭವ, ಅದರ appeal ಈ ನಾಟಕದ ಟೆಕ್ಸ್ಟ್‌ನಲ್ಲಿ ಮಿಸ್ಸಿಂಗ್ ಅಂತಲೇ ಅನಿಸಿದರೂ ಒಂದು ರಂಗಕೃತಿ ತನ್ನ ಟೆಕ್ಸ್ಟ್‌ನಲ್ಲೇ ಕೊಡಬೇಕಾದುದನ್ನೆಲ್ಲ ಕೊಟ್ಟುಬಿಟ್ಟರೆ ನಿರ್ದೇಶಕನಿಗೆ ಅದು ಸವಾಲಾಗುವುದು ಹೇಗೆ, ತನ್ನ ರಂಗಸಾಧ್ಯತೆಗಳನ್ನು ತೆರೆದುಕೊಳ್ಳುವುದು ಹೇಗೆ ಮತ್ತು ಅದನ್ನು ರಂಗದಲ್ಲಿ ನೋಡಬೇಕಾದರೂ ಯಾಕೆ ಅಂತ ಯೋಚಿಸಿದರೆ ಈ ತೀರ್ಮಾನ ಎಲ್ಲೋ ತಪ್ಪೆನಿಸುತ್ತದೆ. ಹಾಗಾಗಿ ಇದನ್ನು ಒಂದು ರಂಗಕೃತಿಯನ್ನಾಗಿಯೇ ನೋಡಬೇಕು. ವಿವೇಕರ ನಾಟಕಗಳು ತಕ್ಷಣವೇ ರಂಗ ಪ್ರಯೋಗದ ಭಾಗ್ಯವನ್ನೂ ಪಡೆದಿರುವುದರಿಂದ ಎರಡೂ ನಿಟ್ಟಿನಲ್ಲಿ ವಿವೇಕರ ನಾಟಕಗಳನ್ನು ಗಮನಿಸುವುದು ಕೂಡ ಸಾಧ್ಯವಾಗಿದೆ. ಹಿಂದೆ ವಿವೇಕರ ಸಕ್ಕರೆ ಗೊಂಬೆಯನ್ನು ನೀನಾಸಂ ತಂಡ ಕರ್ನಾಟಕದಾದ್ಯಂತ ಪ್ರದರ್ಶಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಬಹುರೂಪಿ ಕೂಡ ರಂಗಶಂಕರದಲ್ಲಿ ಕೆಲವು ಪ್ರಯೋಗಗಳನ್ನು ಕಂಡಿದೆ.

ಇಲ್ಲಿನ ಸಂಜಯ ಕುರುಕ್ಷೇತ್ರದ ಸಂಜಯನ ಹಾಗೆಯೇ ವರದಿಗಾರ. ಅವನ ಮೂಲ ವ್ಯಕ್ತಿತ್ವವೇ ರೂಪಾಂತರಗೊಳ್ಳಬೇಕಾದ ತುರ್ತು ಹುಟ್ಟಿಸುವಂಥದು ಅವನ ನೌಕರಿ. ಅಥವಾ ಆ ನೌಕರಿ ಹಾಗಾಗಲು ಕಾರಣವಾದ ಒಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವನಿದ್ದಾನೆ. ಹಾಗಾಗಿ ಇಲ್ಲಿ ಫ್ಯಾಕ್ಟ್ ರಿಪೋರ್ಟ್ ಮಾಡುವ ಸಂಜಯ ‘ತಲೆಯ ಮೇಲೆ ಹೊಡೆದ ಹಾಗೆ’ ಸ್ಟೋರಿ ಕೊಡಬಲ್ಲ ಸಂಜಯನಾಗಿ ರೂಪಾಂತರಗೊಳ್ಳ ಬೇಕಾದ ಒಂದು ಒತ್ತಡವಿದೆ. ನಾಟಕದಲ್ಲಿ "ನೀನೀಗ ಬೇರೆಯೇ ಮನುಷ್ಯನ ತರ ಕಾಣುತ್ತಿದ್ದೀಯ" ಎನ್ನುವ ಒಂದು ಮಾತಾಗಿ ಬರುವ ಇದನ್ನು ಪ್ರೇಕ್ಷಕನ ಅನುಭವವಾಗಿಸುವ ಸವಾಲು ಸಣ್ಣದಲ್ಲ. ಇದನ್ನು ನಿರ್ದೇಶಕ ಗಮನಿಸದೇ ಹೋದರೆ, ಸಮರ್ಥವಾಗಿ ನಿಭಾಯಿಸದೇ ಹೋದರೆ ನಾಟಕದ ಉದ್ದೇಶ ಸಫಲವಾಗುವುದಿಲ್ಲ.

ಲೇಖನ ವರ್ಗ (Category): 

ವಿವೇಕರ ಕಥಾಲೋಕ-6

field_vote: 
No votes yet
To prevent automated spam submissions leave this field empty.

ನಾಲ್ಕನೆಯ ಕಥಾಸಂಕಲನ : ಮತ್ತೊಬ್ಬನ ಸಂಸಾರ (2005)

ಲೇಖನ ವರ್ಗ (Category): 

ವಿವೇಕರ ಕಥಾಲೋಕ-5

field_vote: 
No votes yet
To prevent automated spam submissions leave this field empty.

ಲೇಖನ ವರ್ಗ (Category): 

ವಿವೇಕರ ಕಥಾಲೋಕ-4

field_vote: 
No votes yet
To prevent automated spam submissions leave this field empty.

ಮೊದಲ ನಾಟಕ : ಸಕ್ಕರೆ ಗೊಂಬೆ(1999)

ಲೇಖನ ವರ್ಗ (Category): 

ವಿವೇಕರ ಕಥಾಲೋಕ-3

field_vote: 
No votes yet
To prevent automated spam submissions leave this field empty.

ಮೂರನೆಯ ಕಥಾಸಂಕಲನ : ಹುಲಿಸವಾರಿ (1995)

ಲೇಖನ ವರ್ಗ (Category): 

ವಿವೇಕರ ಕಥಾಲೋಕ-2

field_vote: 
No votes yet
To prevent automated spam submissions leave this field empty.

ಲೇಖನ ವರ್ಗ (Category): 

ವಿವೇಕರ ಕಥಾಲೋಕ

field_vote: 
No votes yet
To prevent automated spam submissions leave this field empty.

ವಿವೇಕರ ಸಂದರ್ಶನದ ಜೊತೆ ಜೊತೆಗೆ ಅವರ ಕಥಾಸಂಕಲನಗಳ ಎಲ್ಲ ಕಥೆಗಳ ಬಗ್ಗೆ ಮತ್ತು ಅವರ ಕಾದಂಬರಿಗಳ ಬಗ್ಗೆ ಒಂದು ಟಿಪ್ಪಣಿ ಲಭ್ಯವಿದ್ದರೆ ಒಳ್ಳೆಯದು ಅನಿಸುತ್ತದೆ. ಹೊಸಬರಿಗೆ ಇದು ವಿವೇಕರ ಕಥಾಜಗತ್ತಿನ ಬಗ್ಗೆ ಆಸಕ್ತಿ ಮೂಡಿಸಿದರೆ ಈಗಾಗಲೇ ವಿವೇಕರನ್ನು ಓದಿಕೊಂಡಿರುವವರಿಗೆ ಒಮ್ಮೆ ತಮ್ಮ ಓದನ್ನು ಮೆಲುಕು ಹಾಕಲು ಸಾಧ್ಯವಾದೀತು ಎನ್ನುವುದು ನನ್ನ ಆಶಯ.

ಲೇಖನ ವರ್ಗ (Category): 

ಟಿವಿ-೯ ಹಿದ್ದೆನ್ ಉಪಾಯ

field_vote: 
Average: 5 (1 vote)
To prevent automated spam submissions leave this field empty.

ಉತ್ತಮ ಸಮಾಜಕ್ಕಾಗಿ ಅಂತ ಬಂದ ಆಂಧ್ರದ ಟಿವಿ-೯ ಈತಿಚ್ಚೆಗೆ ತುಂಬಾ ತೆಲುಗು ಮತ್ತು ತಮಿಳು ಚಿತ್ರದ ಬಗ್ಗೆ ಇಲ್ಲದ್ದಲ್ಲ ಹೊಗಳಿ ಪ್ರಸಾರ ಮಾಡುತ್ಹಿದೆ..ಅಲ್ಲಿ ಸೋತು ನೆಲ ಕಚ್ಹಿರುವ ಚಿತ್ರಗಳನ್ನು ಬಾರಿ ಯಶಸ್ವಿ ಚಿತ್ರಗಳೆಂದು ಆ ಚಿತ್ರಕ್ಕೆ ಉತ್ತೇಜನ ಕೊಡ್ತಾ ಇದ್ದಾರೆ..ನಾವು ಈಗಲೇ ಎಚ್ಹೆತ್ತು ಪ್ರತಿಭಟಿಸಿ ನಮ್ಮ ಕನ್ನಡ ಚಿತ್ರಕ್ಕೆ ಮಾತ್ರ ಪ್ರಚಾರ ಮಾಡಲು ಹೇಳಬೇ

ಲೇಖನ ವರ್ಗ (Category): 

ಕಿರಗೂರಿನ ಗಯ್ಯಾಳಿಗಳು

field_vote: 
Average: 5 (1 vote)
To prevent automated spam submissions leave this field empty.

ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಎಂಬ ನೀಳ್ಗತೆ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಕುಗ್ರಾಮವೊಂದರ ವನಿತೆಯರ ಚಿತ್ರಣವನ್ನು ತೆರೆದಿಡುತ್ತದೆ.

ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ. ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು (ಪುಟ ೨) ಎಂಬುದು ಕಥೆಯ ಉದ್ದಕ್ಕೂ ಸ್ಥಿರವಾಗುತ್ತಾ ಹೋಗುವುದೇ ಇದರ ವೈಶಿಷ್ಟ್ಯ.

ಮೂರು ದಿನಗಳು ಸತತವಾಗಿ ಬೀಸಿದ ಗಾಳಿ ಕಥೆಯ ಹಂದರಕ್ಕೆ ಮುಖ್ಯ ನೆಲೆ ಒದಗಿಸಿದ್ದರೂ ನಂತರದ ಸಾಮಾಜಿಕ ಬದಲಾವಣೆಗೆ ವನಿತಾಕ್ರಾಂತಿಗೆ ದಾನಮ್ಮನೇ ಮೂಲ ಕಾರಣವಾಗಿ ನಿಲ್ಲುತ್ತಾಳೆ. ಒಂದು ರೀತಿಯಲ್ಲಿ ದಾನಮ್ಮನೇ ಕಥಾನಾಯಕಿ ಎಂದರೂ ತಪ್ಪಾಗದು. ದಾನಮ್ಮನ ಸಿಟ್ಟು ಭಯಂಕರ, ಅವಳಿಗೆ ಸಿಟ್ಟು ಬಂದಾಗ ದೆವ್ವ ಬಂದವರನ್ನು ಮಾತಾಡಿಸುವಂತೆ ಅವಳ ಗಂಡನೂ ಮಾವನೂ ಆಕೆಯನ್ನು ಗೌರವದಿಂದ ಮಾತಾಡಿಸುತ್ತಿದ್ದರು.(ಪುಟ ೬) ಹೇಗೆ ಹೇಗೋ ಎಲ್ಲರನ್ನೂ ಕಲಾತ್ಮಕವಾಗಿ ಸಂಯೋಜಿಸಿ ಭಾವಗೀತೆಯಂತೆ ಝಾಡಿಸಿ ಉಗಿದಿದ್ದರಿಂದ ಪುಟ(೭) ಕಾಕತಾಳೀಯವೋ ಎಂಬಂತೆ ಬಿರುಗಾಳಿ ಕಡಿಮೆಯಾಗಿ. ಆ ಗಯ್ಯಾಳಿ ಬಾಯಿಗೆ ಮಳೆಗಾಳಿ ಸುತ ಹೆದರ್ತದೆ ಅಂತಾಯ್ತು ಎಂಬಂತೆ ಊರಿನವರಿಂದ ಅನ್ನಿಸಿಕೊಳ್ಳುತ್ತಾಳೆ.

ದಾನಮ್ಮ ಮಾತ್ರವಲ್ಲ ಊರಿನ ಇತರ ಹೆಂಗಸರು ಸಹ ಇದೇ ರೀತಿ ಗಯ್ಯಾಳಿಗಳೇ. ಅವರ ಗಯ್ಯಾಳಿತನ ಕೇವಲ ಮಾತುಗಾರಿಕೆಯಲ್ಲಿ ಮಾತ್ರವಲ್ಲದೆ ದೈಹಿಕ ಕಸುವಿನಲ್ಲೂ ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಊರಿನ ಗಂಡಸರ ದೌರ್ಬಲ್ಯ ಶಾರೀರಿಕವಾಗಿಯಲ್ಲದೆ ಆಲೋಚನಾ ಶಕ್ತಿಯಲ್ಲೂ ಕಾಣುತ್ತದೆ.

ಲೇಖನ ವರ್ಗ (Category): 

ಬ್ರೆಕ್ಟ್ ನ ವಿಶಿಷ್ಟ ನಾಟಕ 'ಚಾಕ್ ಸರ್ಕಲ್'ಪ್ರದರ್ಶನ ಕುರಿತ ವಿಮಶರ್ೆ

field_vote: 
No votes yet
To prevent automated spam submissions leave this field empty.

ಪ್ರಸಿದ್ದ ನಾಟಕಕಾರ ಬಟರ್ಾಲ್ ಬ್ರೆಕ್ಟ್ ರವರ 'ಚಾಕ್ ಸರ್ಕಲ್' ನಾಟಕ ಪ್ರದರ್ಶನ

ಲೇಖನ ವರ್ಗ (Category): 

ಕುವೆಂಪುರವರ ಒಂದು ಪ್ರಬಂಧ - ಬೇಟೆಗಾರರು ಕಬ್ಬಿಗರಾದ ಪ್ರಸಂಗ

field_vote: 
Average: 5 (1 vote)
To prevent automated spam submissions leave this field empty.

ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ ಬಣ್ಣಿಸುತ್ತೀರಿ? ಕುವೆಂಪು ಬರೆದ "ಕಾಡಿನಲ್ಲಿ ಕಳೆದ ಒಂದಿರುಳು" ಬಹುಶಃ ಈ ದಿಶೆಯಲ್ಲಿ ಒಳ್ಳೆಯ ಓದು.

ಲೇಖನ ವರ್ಗ (Category): 

ಬೆಸ್ಟ್ ಆಫ್ ನಾ ಕಸ್ತೂರಿ

field_vote: 
Average: 2.5 (2 votes)
To prevent automated spam submissions leave this field empty.

ಬೆಸ್ಟ್ ಆಫ್ ನಾ ಕಸ್ತೂರಿ, ( ನಾ ಕಸ್ತೂರಿಯವರ ಆಯ್ದ ನಗೆಬರಹಗಳು )

ನಾ. ಕಸ್ತೂರಿ, ಕನ್ನಡ ದೇಶದಲ್ಲಿ ಜನಿಸದಿದ್ದರೂ, ಕನ್ನಡದ ಹಾಸ್ಯ ಸಾಹಿತ್ಯದ ಪರಂಪರೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದರು ಎಂದರೆ ಸುಳ್ಳಲ್ಲ. ಕನ್ನಡದಲ್ಲಿ ಹಾಸ್ಯ ಸಾಹಿತ್ಯದ ಬೆಳವಣಿಗೆಯ ಪ್ರಥಮ ಹಂತದಲ್ಲಿ ಅವರ ಪಾಲೂ ಬಹು ಮುಖ್ಯ.

ಲೇಖನ ವರ್ಗ (Category): 

ಚಿದಂಬರ ರಹಸ್ಯ - ಥ್ರಿಲ್ಲು, ಸಸ್ಪೆನ್ಸು, ಒಂದಷ್ಟು ತಮಾಷೆ

ಕೆಲಸ ಬೇಕಾದಷ್ಟು ಪೆಂಡಿಂಗ್ ಇದ್ದರೂ ಯಾಕೋ ಬೇಜಾರಾಗಿ ಹೋದದ್ದರಿಂದ 'ಪುಸ್ತಕ ಓದೋಣ' ಎನ್ನಿಸಿತು. 'ಹುಷಾರು ಬೇರೆ ಇಲ್ಲ' ಎಂದು ನನಗೆ ನಾನೇ ನೆಪ ಕಟ್ಟಿಕೊಂಡದ್ದು ಮಲಗಿ ಪುಸ್ತಕ ಓದಲು ಸರಿಯಾಯ್ತು. ಯಾವ ಪುಸ್ತಕ ಓದೋದು? ಮೊನ್ನೆ ಪ್ರಾಣೇಶ್ ಮಾಮನ ಮನೆಯಿಂದ ತಂದಿದ್ದ ಪುಸ್ತಕವೊಂದು ಮೇಜಿನ ಮೇಲಿತ್ತು, ತೆಗೆದುಕೊಂಡೆ.

Taxonomy upgrade extras: 

ಮೈಸೂರು ಡೈರಿ

ಮೈಸೂರು ಡೈರಿ, [kn:ಬಿ ಜಿ ಎಲ್ ಸ್ವಾಮಿ|ಬಿ ಜಿ ಎಲ್ ಸ್ವಾಮಿಯವರ] ಜೀವನದ ಕೊನೆಯ ಕೃತಿ. ಮೈಸೂರಿನಲ್ಲಿ ತಾವಿದ್ದ ದಿನಗಳನ್ನು, ಅಲ್ಲಿಯ ಜನ, ವಾತಾವರಣ, ನಡೆದ ಸನ್ನಿವೇಶಗಳನ್ನು ನೆನಪು ಮಾಡಿಕೊಂಡು ಲೇಖನಿಯಲ್ಲಿ ಮರುಕಳಿಸಿದ್ದಾರೆ. ಈ ಪುಸ್ತಕ ಬಿ ಜಿ ಎಲ್ ರವರ ಉಳಿದ ಪುಸ್ತಕಗಳಿಗಿಂತ ಹಲವು ರೀತಿಯಲ್ಲಿ ಭಿನ್ನ. ಈ ಭಿನ್ನತೆಯನ್ನು ಸವಿಯಲೆಂದೇ ಈ ಪುಸ್ತಕವನ್ನೋದಬೇಕು.

Taxonomy upgrade extras: 

ಕಥೆ ಹೇಳುವ ಕಥೆಗಾರ ಕಥೆಯಾಗುವ ಪಾತ್ರಗಳು

ಸಣ್ಣ ಕಥೆಗಳು ನಮ್ಮಲ್ಲಿ ವಿವಿಧ ಹಂತಗಳನ್ನು ಧಾಟಿ ಬಂದಿರುವುದನ್ನು ಸಾಹಿತ್ಯ ಚರಿತ್ರೆ ಗುರುತಿಸಿ ದಾಖಲಿಸಿದೆ. ಮಾಸ್ತಿ ಬರೆದ ಸಣ್ಣ ಕತೆಗಳಿಗೂ ಸಂದೀಪನಾಯಕರಂಥ ಸಮಕಾಲೀನರು ಬರೆಯುವ ಕಥಾ ರೂಪಕ್ಕೂ ಸಾಕಷ್ಟು ಅಂತರವೇ ಕಾಣಸಿಗುತ್ತದೆ. ಕಥೆಯಾಗುವ ಪಾತ್ರಗಳು ಅವೇ. ಕಥೆ ಹೇಳುವ ರೀತಿ ಮಾತ್ರ ಬೇರೆ.

Taxonomy upgrade extras: 

ನಾನು ಕಂಡ ಕೈಲಾಸಂ

ಮನೆಯಲ್ಲಿ ನನ್ನ ಹಳೆಯ ಪುಸ್ತಕಗಳ ಸಂಗ್ರಹವನ್ನು ಹೆಕ್ಕುತ್ತಿದ್ದಾಗ ೧೯೪೫ರಲ್ಲಿ ಪ್ರಕಟವಾದ ಕಂದಾಡೆ ಕೃಷ್ಣಯ್ಯಂಗಾರ್ಯರು ಬರೆದ 'ನಾನು ಕಂಡ ಕೈಲಾಸಂ' ಎಂಬ ಪುಸ್ತಕ ಸಿಕ್ಕಿತು - ಅದರಲ್ಲಿರುವ ವಿಷಯ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುವೆ ಯಾರ ಹತ್ತಿರನಾದ್ರೂ ಈ ಪುಸ್ತಕ ಇದೆಯೇ? ಈ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ ಕೈಲಾಸಮ್ ರ ಜನನ್ನ ಮತ್ತು ಬಾಲ್ಯ ಬೆಂಗಳೂರಿನ ಕಬ್ಬನ್ಪೇಟೆ, ಸುಣ್ಣಕಲ್ಪೇತೆ, ಮಾಮೂಲ್ ಪೇಟೆಗಳಲ್ಲಿ. ತಾಯಿ ಕಮಲಮ್ಮನವರ ತಂದೆ ಸುಬ್ಬರಾಯಶಾಸ್ತ್ರಿಗಳು - ಇವರ ಹೆಸರಿನಲ್ಲಿ ಮೈಸೂರಿನಲ್ಲಿ ರಸ್ತೆ ಇದೆ.
Taxonomy upgrade extras: 

ವೇದಾಂತ ಸಾರಗಳು

ಎನ್ ಬಾಲಸುಬ್ರಹ್ಮಣ್ಯ ಅವರು ಬರೆದಿರೋ 'ವೇದಾಂತ ಸಾರಗಳು' ಎನ್ನುವ ಪುಸ್ತಕದಿಂದ ಆಯ್ದ ಭಾಗಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ
Taxonomy upgrade extras: 

ಮಲ್ಲಿಗೆಯ ಮಾಲೆ - ಸಮಗ್ರ ಕಾವ್ಯ

K.S. ನರಸಿ೦ಹ ಸ್ವಾಮಿ ಅವರ ಕವನ ಚಿಕ್ಕ ಹುಡುಗನಿ೦ದ ನ೦ಗೆ ಪ್ರಾಣ. "ಮಲ್ಲಿಗೆಯ ಮಾಲೆ " ಎ೦ಬ ಅವರ ಸಮಗ್ರ ಕಾವ್ಯ ಪುಸ್ತಕ ಓದುವ ಕೆಲಸ, ಕೆಲಸ ಬಿಟ್ಟ ನ೦ತರ ಮಾಡಿದ ಕೆಲಸ. ಮೈಸೂರೆನ್ನಿ ಕನ್ನಡವೆನ್ನಿ ಮಲ್ಲಿಗೆಯೆನ್ನಿ, ಒ೦ದೆ. ಒಡೆಯರ ಮುಕುಟದ ರತ್ನ್ವ್ ವಿದೆನ್ನಿ ಒಡೆಯರ ಕನ್ನಡ ವೆನ್ನಿ ! ಇರುಳನು ಕಾಣದ ಕನ್ನಡ ವೆನ್ನಿ ಒಡೆಯರ ಕನ್ನಡ ವೆನ್ನಿ ! ಕವಿಗಳು ಬಳಸುವ ಭಾಷೆಯಿದೆನ್ನಿ
Taxonomy upgrade extras: 

ಬಿ ಜಿ ಎಲ್ ಸ್ವಾಮಿಯವರ 'ದೌರ್ಗಂಧಿಕಾಪಹರಣ'

ಇತ್ತೀಚೆಗೆ ಹತ್ತಿರದ ಬಸವನಗುಡಿಯ ಅಂಕಿತ ಪುಸ್ತಕಕ್ಕೆ ಲಗ್ಗೆ ಇಟ್ಟು ಹಲವಾರು ಪುಸ್ತಕಗಳನ್ನು ಮನೆಗೆ ತಂದಿದ್ದೆ. ಅದರಲ್ಲಿ ಬಿ ಜಿ ಎಲ್ ಸ್ವಾಮಿಯವರ ದೌರ್ಗಂಧಿಕಾಪಹರಣ ಎಂಬ ಪುಟ್ಟ ಪುಸ್ತಕವೂ ಒಂದು. ಉಳಿದ ಪುಸ್ತಕಗಳಿಗೆ ಸಮಯ ಮಾಡಿಕೊಳ್ಳಲಾಗಲೇ ಇಲ್ಲವಾದರೂ ಒಂದೆರಡು ಘಂಟೆಗಳಲ್ಲಿ ಈ ಪುಸ್ತಕವನ್ನೋದಿ ಮುಗಿಸಿದೆ.

Taxonomy upgrade extras: 
Subscribe to ವಿಮರ್ಶೆ