ಸಂಪದ ಸಹಾಯ ಪುಟಗಳ ಪುಸ್ತಕ

ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ.

'ಸಂಪದ'ದ ಸದಸ್ಯರು ಈ ಪುಟಗಳನ್ನು ಓದಿ ಇಲ್ಲಿ ಉಲ್ಲೇಖಿಸಿರುವುದನ್ನು ಗಮನದಲ್ಲಿಟ್ಟು ಸಮುದಾಯದಲ್ಲಿ ಭಾಗವಹಿಸುವರು ಎಂಬ ಆಶಯ ನಮ್ಮದು.

 

 

ಪ್ರತಿಕ್ರಿಯೆಗಳು

ಸಂಪದದಲ್ಲಿ ಬರೆದು ಸೇರಿಸಿದ ಲೇಖನಕ್ಕೆ ತಿದ್ದುಪಡಿ ಮಾಡಬೇಕಿದ್ದರೆ (ಉದಾ: ಬಿಟ್ಟುಹೋದ ಚಿತ್ರ ಸೇರಿಸಲು) ಹೇಗೆ ಮಾಡುವುದೆಂಬ ಮಾಹಿತಿ ಸೇರಿಸಿದರೆ ಉಪಯೋಗವಾಗುವುದು.

ಎರಡು ಬಾರಿ ಓದಿ, ಎರಡು ಬಾರಿ ಪುಣ್ಯ ಸಂಪಾದಿಸಿಕೊಳ್ಳುತ್ತೇವೆ, ಬಿಡಿ - ಏಷ್ಟಾಗಲಿ ಭಗವನ್ನಾಮಸ್ಮರಣೆ ತಾನೆ :-)
ನಾಗೇಶ ಮೈಸೂರು, ಸಿಂಗಾಪುರದಿಂದ

ಬರವಣಿಗೆಯಲ್ಲಿ ತಪ್ಪುಗಳಾಗುವುದು ಸಹಜ. ಕಾಗುಣಿತ, ಮತ್ತು ಇತರೆ ತಪ್ಪುಗಳಾದರೆ ಅವುಗಳನ್ನು ತಿದ್ದಲು ಅವಕಾಶವಿಲ್ಲದಿರೆ ಅಪಭ್ರಂಶವಾಗಿ ದೊಡ್ಡ ಪ್ರಮಾದವೇ ಆದೀತು. ಕೂಡಲೇ ಈ ಬಗ್ಗೆ ಗಮನಹರಿಸಿ ನಿರ್ವಾಹಕರೇ...

ಕವನ ವಿಭಾಗದಲ್ಲಿ ಬರೆದದ್ದು ಮುಖಪುಟದಲ್ಲಾಗಲೀ, "ಎಲ್ಲ ಪುಟಗಳು" ಕೊಂಡಿಯನ್ನು ಕ್ಲಿಕ್ ಮಾಡಿದಾಗಲಾಗಲಿ ಕಾಣಿಸುತ್ತಿಲ್ಲ.. ಹೀಗ್ಯಾಕೆ...?

ಬರಹ ಇಷ್ಟವಾಯಿತೆ ಎಂಬದು ಚೆನ್ನಾಗಿದೆ ಆದರೆ ಯಾರಾದರು ಮಾಡಬಹುದು,ಸಂಪದಿಗರಲ್ಲದೆ ಹೋದರು ಮಾಡಬಹುದು ,ಇದರಿಂದ ಯಾರು ಮಾಡಿದ್ದೂ ಎಂಬುದೇ ತಿಳಿಯುವುದಿಲ್ಲ ,ದಯವಿಟ್ಟು ಯಾರ್ಯಾರು ಎಂಬುದನ್ನ ತಿಳಿಯುವಂತೆ ಮಾಡಿದ್ದರೆ ಚೆನ್ನಾಗಿರುತಿತ್ತು.

ನಾನು ನೆನ್ನೆ ಒಂದು ಕವನ‌ ಸೇರಿಸಿದೆ. ಆದರೆ ಅದು ಗದ್ಯದ ರೀತಿಯಲಿ ಪ್ರಕಟವಾಗಿದೆ. ಕವನದ‌ ರೂಪದಲಿ ‍ ‍ಅಂದರೆ ಪ್ಯಾರಗಳ ರೂಪದಲಿ ಬಂದಿಲ್ಲ‌.  ಇದ್ದನ್ನು  ಸರಿಪಡಿಸಬಹುದೆ? ಏನು ತಪ್ಪಾಗಿದೆ?

ಸಂಪದದಲ್ಲಿ ಬರಹ ಅಥವಾ ಪ್ರತಿಕ್ರಿಯೆಯನ್ನು ಸೇರಿಸುವಾಗ ಮೇಲ್ಭಾಗದಲ್ಲಿ ಬರಹಗಾರರ ಹೆಸರಿನ ಬದಲಾಗಿ ಯೂಸರ್ ನೇಮ್ (Username) ಕಾಣಿಸಿಕೊಳ್ಳುತ್ತದೆ. ಬರಹಗಾರರ ಹೆಸರಿಗಾಗಿ ಬರಹದ ಕೊನೆಯಲ್ಲಿ ಹುಡುಕಾಡಬೇಕಾಗುತ್ತದೆ, ಪ್ರತಿಕ್ರಿಯೆಗಾರನ ಹೆಸರು ಕಾಣಿಸುವುದೇ ಇಲ್ಲ. ಬರಹದ ಮೇಲ್ಭಾಗದಲ್ಲಿ ಬರಹಗಾರನ ಯೂಸರ್ ನೇಮ್ ಬದಲಾಗಿ ಹೆಸರೇ ಕಾಣಿಸುವಂತಾದರೆ ಸಂಪದ ಇನ್ನಷ್ಟು ಸರಳವಾಗಿ, ಕ್ರಮಬದ್ಧವಾಗುತ್ತದೆ. ಸಂಪದ ನಿರ್ವಹಣೆ ತಂಡದವರು ದಯವಿಟ್ಟು ಈ ಬಗ್ಗೆ ಆಲೋಚಿಸಿ.

ಸಂಪದದಲ್ಲಿ ನನ್ನ‌ ಜಿಮೈಲ್ ಐಡಿಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ‌. ಅಕೌಂಟ್ ತೆರೆಯಲಿಕ್ಕಾಗಿ ನನಗೆ ಗೊತ್ತಿರುವವರ‌ ಜಿಮೈಲ್ ಐಡಿ ಹಾಕಿದರೆ ಒಪ್ಪಿಕೊಂಡಿತು. ಈಗ‌ ನಾನು ನನ್ನ‌ ಅಕೌಂಟನ‌ ಇಮೈಲ್ ಐಡಿ ಬದಲಿಸಲಿಕ್ಕಾಗಿ ಒದ್ದಾಡುತ್ತಿದ್ದೇನೆ. ಯಾರಿಗಾದರೂ ಗೊತ್ತಿದ್ದಲ್ಲಿ ತಿಳಿಸಿ.