ಸದಸ್ಯರ ಹೆಸರು, ಯೂಸರ್ ಐಡಿ ನಿಯಮಗಳು

ಸಂಪದ ಬಳಸುವ ಸದಸ್ಯರ ಯೂಸರ್ ಐಡಿ ಹಾಗು ಹೆಸರುಗಳಿಗೆ ಕೆಳಗಿನ ನಿಯಮಗಳು ಅನ್ವಯಿಸುತ್ತವೆ:

  • ಯೂಸರ್ ಐಡಿ: ಯೂಸರ್ ಐಡಿ ಸದಸ್ಯರ ಹೆಸರಾಗಿರಬೇಕು ಅಥವ ಹೆಸರು ಸೂಚಿಸುವಂತಿರಬೇಕು.
    • ಉದಾಹರಣೆಗೆ: raj.kumar ಅಥವ rajkumar.
    • ಅನಾಮಧೇಯ ಅಕೌಂಟುಗಳು: ಅನಾಮಧೇಯ ಐಡಿಗಳನ್ನು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಕೂಡಲೆ ಬ್ಲಾಕ್ ಮಾಡಲಾಗುವುದು. ಅನಾಮಧೇಯರಾಗಿ ಉಳಿಯಬಯಸುವವರು ದಯವಿಟ್ಟು ಸಂಪದ ನಿರ್ವಹಣೆಗೆ (moderation@sampada.net ಐಡಿಗೆ) ಒಂದು ಮೇಯ್ಲ್ ಹಾಕಿ ಮೊದಲೇ ತಿಳಿಸುವುದು ಉತ್ತಮ. 
      • ಅಕೌಂಟ್ ಬ್ಲಾಕ್ ಆಗದಿರುವಂತೆ ಆಯಾ ಅಕೌಂಟಿನ ಚಟುವಟಿಕೆಗೆ ತಕ್ಕಂತೆ ಕೆಲವು ಸಂದರ್ಭಗಳಲ್ಲಿ ನಿಮ್ಮ ಪರಿಚಯ, ಮಾಹಿತಿ ಸಂಪದ ನಿರ್ವಹಣೆಯೊಂದಿಗೆ ಹಂಚಿಕೊಳ್ಳಬೇಕಾಗಿ ಬರಬಹುದು. 
  • ಪೂರ್ಣ ಹೆಸರು: ಪೂರ್ಣ ಹೆಸರು ಕನ್ನಡದಲ್ಲಿ ಬರೆದ ನಿಮ್ಮ ಹೆಸರು ಆಗಿರಬೇಕು. ಹೀಗಿಲ್ಲದ ಅಕೌಂಟುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಕೂಡಲೆ ಬ್ಲಾಕ್ ಮಾಡಲಾಗುವುದು.

(ಮೇಲಿನ ನಿಯಮಗಳ ಕುರಿತು ಸದಸ್ಯರು ಸಲಹೆಗಳನ್ನು ಪ್ರತಿಕ್ರಿಯೆ ಮೂಲಕ ತಿಳಿಸಬಹುದು. ಸೂಕ್ತವಾಗಿದ್ದಲ್ಲಿ ಅದನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು) 

ಪ್ರತಿಕ್ರಿಯೆಗಳು

ನನ್ನ ಹೆಸರು/ಐಡಿಗೆ ಸಂಬಂಧಿಸಿರುವುದರಿಂದ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ನಿಜ ಹೆಸರಿನ ಮೇಲೆ ಅಷ್ಟು ಒತ್ತಡ ಯಾಕೆ? ಸದಸ್ಯರು ಸೂಕ್ತವಲ್ಲದ ಬರಹ/ಕಮೆಂಟುಗಳನ್ನು ಬರೆಯುತ್ತಿದ್ದರೆ ಅವರ ಹೆಸರು ನಿಜವೋ ಸುಳ್ಳೋ irrespective ಆಗಿ ಅವರನ್ನು ಬ್ಲಾಕ್ ಮಾಡುವುದು ಸರಿ.
ಸಮುದಾಯ ಬೆಳೆಯಲು ಸದಸ್ಯರು ಅಡ್ಡಪಡಿಸುತ್ತಿದ್ದರೆ ಅವರನ್ನು ಬ್ಲಾಕ್ ಮಾಡುವ ನಿರ್ಧಾರ ತೆಗೆದು ಕೊಳ್ಳುವ ಹಕ್ಕು ನಿರ್ವಾಹಕರಿಗೆ ಇರಬೇಕು. ಆದರೆ ಸದಸ್ಯರ ನಿಜವಾದ ಹೆಸರನ್ನು ತಿಳಿಸಲೇ ಬೇಕು ಅನ್ನುವುದು ಸಮಂಜಸವಲ್ಲ ಎಂದು ನನ್ನ ಅಭಿಪ್ರಾಯ.
ಅನಾಮಧೇಯ ಅಕೌಂಟುಗಳು ಸಮುದಾಯಕ್ಕೆ contribute ಮಾಡಲು ನನ್ನಂತಹ ಸದಸ್ಯರಿಗೆ ನೆರವಾಗುತ್ತವೆ. Slashdot ನ 'Anonymous Coward' ಪರಿಚಯ ಗೀಕ್ ಗಳಾದ ನಿಮಗೆಲ್ಲಾ ಇರುತ್ತದೆ ಎಂದುಕೊಂಡಿದ್ದೇನೆ. ಸಂಪದವನ್ನು ಅಂತಹ ಕೊಡುಗೆಗಳಿಂದ ವಂಚಿಸುವುದೇಕೆ?

ಅಷ್ಟಕ್ಕೂ ನಿಜ ಅನಿಸುವಂತ ಸುಳ್ಳು ಹೆಸರು ಇಟ್ಟುಕೊಂಡ ಸದಸ್ಯರನ್ನು ಹೇಗೆ ಪತ್ತೆ ಹಚ್ಚುತ್ತೀರಿ? ಒಟ್ಟಿನಲ್ಲಿ ಈ ನಿರ್ಧಾರವು ಸಂಪದ ಸಮುದಾಯದ ಬೆಳವಣಿಗೆಗೆ ಪೂರಕವಾಗೂ ಇಲ್ಲ, ಮತ್ತು implement ಮಾಡುವುದು ಅಸಾಧ್ಯ ಎಂದು ನನ್ನ ಅಭಿಪ್ರಾಯ. ಮಾಡರೇಟರ್ ಗಳ ಕೆಲಸ ಇದರಿಂದ ಕಮ್ಮಿ ಆದಂತೆ ಮೊದಲಿಗೆ ಅನಿಸಿದರೂ, people WILL learn to game the system ಮತ್ತು ಆಗ ಇನ್ನೂ ಬಹಳ ತೊಂದರೆಗಳು ಉಂಟಾಗುತ್ತವೆ.

ಇದು ನನ್ನ ಅಭಿಪ್ರಾಯ ಅಷ್ಟೆ. ಇತರ ಸದಸ್ಯರೂ ಅವರ ಅಭಿಪ್ರಾಯವನ್ನು ಹಂಚಿಕೊಂಡರೆ ಚೆನ್ನ.

[ನನ್ನ ಅನಾಮದೇಯತೆಯ ಅವಶ್ಯಕತೆಯ ಬಗ್ಗೆ ಬಹಳ ಮೊದಲೇ ಹರಿಯವರಿಗೆ ಮೈಲ್ ಮಾಡಿದ್ದೇನೆ. ನನ್ನ ಅಕೌಂಟು ಬ್ಲಾಕ್ ಆಗಲಾರದು ಎಂದು ಆಶಿಸುತ್ತೇನೆ. ಹೆಸರನ್ನು ಕನ್ನಡ ಶಬ್ದಗಳಾಗಿ ಸಧ್ಯದಲ್ಲೇ ಬದಲಿಸುತ್ತೇನೆ. ಆದರೆ ನನ್ನ ಈ ಕಮೆಂಟು ಈ ನಿಯಮದ ಅವಶ್ಯಕತೆಯ ಬಗ್ಗೆ ಜನರಲ್ ಆಗಿ ಬರೆದದ್ದು.]

ನನ್ನ ನಿಜ ಹೆಸರು ನನ್ನ userID ಅಲ್ಲ.

ಆದರೆ ಅದು ನನ್ನ ಹೆಸರೇ ಅನ್ನಿಸುವಷ್ಟು ನನಗೆ ಹತ್ತಿರವಾಗಿದೆ. ಅಲ್ಲದೆ ಸವಿತೃ ಅಂದ್ರೆ ನನ್ನ ಅನೇಕ ಸ್ನೇಹಿತರು ನನ್ನನ್ನು ಗುರುತಿಸುತ್ತಾರೆ.

ಸುಮಾರು ಹತ್ತು ವರ್ಷಗಳಿಂದಲೂ ಇಂಟರ್ನೆಟ್ ಲೋಕದಲ್ಲಿ ಈ ಹೆಸರನ್ನೇ ಬಳಸುತ್ತಿದ್ದೇನೆ. ವೈಯಕ್ತಿಕವಾಗಿ ಈ ಹೆಸರು ಅದಕ್ಕೂ ಮುಂಚೆಯೂ ಗೊತ್ತು.

ನನ್ನ ಸ್ವಂತ ಹೆಸರಿನಲ್ಲಿ ಮತ್ತು ಬೇನಾಮಿ ಹೆಸರಲ್ಲಿ ಸಂಪದದಲ್ಲಿ ನನಗೆ ID ಇಲ್ಲದ ಕಾರಣ, ನಾನು ಈ ಬರಹದ ಉದ್ದೇಶದ ವರ್ಗಕ್ಕೆ ನಾನು ಬರುವುದಿಲ್ಲ ಅಂದುಕೊಂಡಿದ್ದೇನೆ.

<ಪೂರ್ಣ ಹೆಸರು: ಪೂರ್ಣ ಹೆಸರು ಕನ್ನಡದಲ್ಲಿ ಬರೆದ ನಿಮ್ಮ ಹೆಸರು ಆಗಿರಬೇಕು. ಹೀಗಿಲ್ಲದ ಅಕೌಂಟುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಕೂಡಲೆ ಬ್ಲಾಕ್ ಮಾಡಲಾಗುವುದು. >
ಏನಿದು ಅರ್ಥ ಆಗ್ಲಿಲ್ಲ?
ಇಂಗ್ಲೀಷ್ ನಲ್ಲಿ ಇರೊ ಹೆಸರನ್ನು ಕನ್ನಡಕ್ಕೆ ಬದಲಾಯಿಸುವುದು ಹೇಗೆ?

ಸಂಪದ ನಿರ್ವಹಣಾ ತಂಡದವರೇ, ನೀವೇ ನನಗೊಂದು ಒಳ್ಳೆ ID ಕೊಟ್ಟುಬಿಟ್ಟರೆ ಟ್ರಾಫಿಕ್ ತುಂಬಾನೇ ಸುಧಾರಿಸುತ್ತೆ ನೋಡಿ.

ಪ್ರೀತಿಯಿಂದ
ಸಿ ಮರಿಜೋಸೆಫ್

summer_glau ಬರೆದಿರುವ ಪ್ರತಿಕ್ರಿಯೆಗೆ ನನ್ನ ಸಹಮತವಿದೆ. ನನ್ನದಲ್ಲದ ಹೆಸರು ಬಳಸೋದು ಏನು ಕಷ್ಟದ ಕೆಲಸವಲ್ಲ, ಹಾಗಿದ್ದಾಗ user id ಒಂದು ಹೆಸರಾಗಿರಬೇಕು ಅಂದರೆ ಅದರಲ್ಲಿ ಅರ್ಥವಿಲ್ಲ. ನೀವು ಸಂಪದದಲ್ಲಿರುವ ಸ್ಸದಸ್ಯರು ನಿಜ ಜನರಾಗಿರಬೇಕು ಅಂತ ಅಂದುಕೊಂಡಿದ್ದರೆ ಅದನ್ನು ಇಂಟರ್ನೆಟ್ನಲ್ಲಿ ಅಳವಡಿಸೋದು ಸುಲಭವಲ್ಲ (ನೀವು ಕ್ರೆಡಿಟ್ ಕಾರ್ಡ್ ಅಥವಾ ಲೈಸನ್ಸ್ ಅಥವಾ ಇನ್ನಿತರ ಐಡಿ ಬಳಸದಿದ್ದರೆ). ಇಲ್ಲಿ ಯಾರು ಬೇಕಾದರೂ ಇನೂಬ್ಬರನ್ನ impersonate ಮಾಡಬಹುದು.
ಮೇಲೆ ಹೇಳಿದ್ದನ್ನು ಒಂದು ಸಲಹೆಯಾಗಿ ಹೇಳಿದ್ದರೆ ಒಳ್ಳೆಯದು, ಆದರೆ ಅದನ್ನು ರೂಲ್ ಮಾಡಿದರೆ ಅದನ್ನು ಬ್ರೇಕ್ ಮಾಡೋದೇನು ಜನರಿಗೆ ದೊಡ್ಡ ವಿಷಯವಲ್ಲ.