’ಧರ್ಮ’ ಇದರ ಆಂಗ್ಲ ಸಮಾನಾರ್ಥ ಪದವೇನು?

0

’ಧರ್ಮ’ ಇದು ಕನ್ನಡ ಪದವೇ? (ನಾನೇನೊ ಸಂಸ್ಕೃತ ಪದವೆಂದುಕೊಂಡಿದ್ದೇನೆ, ಮೂಲ, ಧಾತು ಇತ್ಯಾದಿಗಳು ತಿಳಿದಿಲ್ಲ)
ಇದರ ಆಂಗ್ಲ ಸಮಾನಾರ್ಥ ಪದವೇನು? ನನ್ನರಿವಿನಲ್ಲಿ,
ಸಂಸ್ಕೃತಿ - culture
ಜಾತಿ - caste
ಮತ - religion
ಪಂಗಡ - community
ನ್ಯಾಯ - justice
ಕರ್ತವ್ಯ - duty

ಹಾಗಾದಲ್ಲಿ ’ಧರ್ಮ’ ಎಂದರೇನು? ಬೇರೆ ಭಾಷೆಗಳಲ್ಲಿ (ರಾಷ್ಟ್ರೀಯ, ಅಂತರಾಷ್ಟ್ರೀಯ) ಇದನ್ನು ಹೇಗೆ ಬಳಸುತ್ತಾರೆ? ಯಾವ ಅರ್ಥದಲ್ಲಿ?
ಉತ್ತರಗಳ ನಿರೀಕ್ಷೆಯಲ್ಲಿ....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬರಹ ಪದಕೋಶದ ಪ್ರಕಾರ religion (ನಾ) 1) ಧರ್ಮ, ಮತ 2) ಧರ್ಮ-ಶ್ರದ್ಧೆ, ನಿಷ್ಠೆ; ಆಸ್ತಿಕತೆ 3) ಧಾರ್ಮಿಕ ವ್ರತಾಚರಣೆ, ಕರ್ಮಾನುಷ್ಠಾನ
ನನಗನ್ನಿಸಿದ ಮಟ್ಟಿಗೆ "ಧರ್ಮ" ಎಂಬ ಪದವು ವಿಶಾಲವಾದ ಅರ್ಥವನ್ನು ಹೊಂದಿದೆ ಅದಕ್ಕೆ ಒಂದೇ ಅರ್ಥದ ಚೌಕಟ್ಟಿಲ್ಲ.

ಶ್ರೀನಿವಾಸ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತವರೆ,

"ಧರ್ಮ" ಇದು ಸಂಸ್ಕ್ರತ ಪದ, ಇದಕೀ ಸುಮಾರು ಅರ್ಥಗಳಿವೆ- ಸತ್ಯ (Ultimate Truth) ,ಜೀವನ ಪದ್ದತಿ, etc..
ಇದನ್ನ್ನು ಆಂಗ್ಲ ಭಾಷೆಗೆ ಟ್ರಾನ್ಸ್ಲೇಟ್ ಮಾಡಿದರೆ - LAW
ಎಂದಾಗುತ್ತದೆ.
ಹೆಚ್ಚಾಗಿ ಈ ಪದವನ್ನು 'ಮತ ' ಪದದ ಅರ್ಥದಲ್ಲಿ ಬಳಸುತ್ತಿದ್ದಾರೆ.

Mahesh

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಗ್ಲಿಷಿನಲ್ಲಿ ಏನನ್ನುತ್ತಾರೋ ಗೊತ್ತಿಲ್ಲ. ಕನ್ನಡದಲ್ಲಿ ’ಅಱ’ ಎನ್ನುತ್ತಾರೆ. ಸಾಮಾನ್ಯವಾಗಿ ಧರ್ಮ=ಪರೋಪಕಾರ. ಹಾಗಾಗಿ ಕನ್ನಡದಲ್ಲಿ ಅಱವಟ್ಟಿಗೆ=ಧರ್ಮಛತ್ರ ಅಂದರೆ ದಾರಿಹೋಕರಿಗೆ ಸಹಾಯವಾಗಲೆಂದು ಉಚಿತವಾಗಿ (ದುಡ್ಡಿಲ್ಲದೆ) ನೀರು ಆಹಾರ ಒದಗಿಸುತ್ತಿದ್ದ ಸ್ಥಳ. ಹಾಗೆಯೇ ಅಱಕೆಱೆ=ಧರ್ಮಕ್ಕಾಗಿ, ಜನರಿಗೆ ಉಪಯೋಗವಾಗಲೆಂದು ಕಟ್ಟಿಸಿದ ಕೆಱೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧರ್ಮ - Free
ಧರ್ಮಕ್ಕೆ - Free of cost.

ಕೆಲವರು ಧರ್ಮಾಧಿಕಾರಿಗಳಾಗಿ ಸಮಾಜದಲ್ಲಿ ಮೆರೆಯುತ್ತಿದ್ದಾರಲ್ಲಾ ಅವರ ನೆನಪಾಯಿತು.
ಹಾಗಾಗಿ ಈ ಅರ್ಥ ಕೊಟ್ಟೆ. ಏಕೆಂದರೆ ಅವರೆಲ್ಲ ಧರ್ಮಾಧಿಕಾರಿಗಳೆಂಬ ಬಿರುದು ಪಡೆದಿರುವುದು ಧರ್ಮಕ್ಕೆ ( Free of cost) ತಾನೇ?
:-)

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆ ಪೋಸ್ಟ್ ಮಾಡಬೇಕಾದಾಗ ಆದ ಗೊಂದಲದಿಂದ ಮೇಲಿನದು ಆಗಿದ್ದು.
ನಿಮ್ಮ ಧರ್ಮ ವ್ಯಾಖ್ಯೆ ಚೆನ್ನಾಗಿದೆ! ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧರ್ಮ - Free; ಧರ್ಮಕ್ಕೆ - Free of cost.
ಈ ಅರ್ಥ ದಲ್ಲಿ "ಧರ್ಮ" ಪದದ ಬಳಕೆ ಹೆಚ್ಚಾಗಿ ದಕ್ಷಿಣ ಕನ್ನಡದಲ್ಲಿ ಎಂದು ಕಾಣುತ್ತದೆ. ದಾನಧರ್ಮ ಎಂಬರ್ಥದಿಂದ ಧರ್ಮಕ್ಕೆ ಕೊಡುವುದು ಎಂದಾಗಿರಬಹುದೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ದೃ" ಧಾತುವಿನಿಂದ ಬಂದಿದೆಯಂತೆ! ಈ ಧಾತುವಿಗೆ to sustain; carry, hold ಎಂಬ ಅರ್ಥ ಇದೆ ಅಂತೆ.

>>ಧಾರಣಾತ್ ಧರ್ಮಮಿತ್ಯಾಹು, ಧರ್ಮೋ ಧಾರಯತೇ ಪ್ರಜಾ:!
ಎತ್ತಿ ಹಿಡಿಯುವುದರಿಂದ ಅದು ಧರ್ಮ!. ಅದು ಪೀಳಿಗೆಯನ್ನು ಕಾಪಡುತ್ತೆ

>>ಧರತಿ ಲೋಕಂ ಇತಿ ಧರ್ಮ:
ಲೋಕವನ್ನು ಯಾವುದು ಕಾಪಾಡುತ್ತೋ ಅದು ಧರ್ಮ!

ಹಾಗಾದ್ರೆ ಯಾವುದು ಧರ್ಮ?? ಅಂದ್ರೆ ಅದು ಅವರ ಸಂಸ್ಕೃತಿ, ವೈಚಾರಿಕತೆ, ನಂಬಿಕೆ ಮೇಲೆ ಬಿಟ್ಟಿದ್ದು.
ಕೆಲವರ ಪರಕಾರ "ಸತ್ಯಾನ್ನಾಸ್ತಿ ಪರೋಧರ್ಮಃ" . ಸತ್ಯಕ್ಕಿಂತ ಬೇರೆ ಧರ್ಮವಿಲ್ಲ ಅಂತ. ಅದು ಅವರ ನಂಬಿಕೆ. ಎಲ್ರೂ ಒಪ್ಲೇ ಬೇಕಿಲ್ಲ .
ಬಸವಣ್ಣ ಹೇಳಿದ್ದು "ದಯವೇ ಧರ್ಮದ ಮೂಲವಯ್ಯ!"

( ಸಕ್ಕದ ಬಲ್ಲವರು ಮೆಲಿನವುಗಳಲ್ಲಿನ ತಪ್ಪುಗಳನ್ನು ಸರಿಪಡಿಸಬಹುದು! )

ಮೇಲಿನ ನಂಬಿಕೆಗಳನ್ನು ಉಳಿಸಿಕೊಳ್ಳಲು ಕೆಲವು ಆಚರಣೆಗಳು ಬೇಕಾಗುತ್ತೆ . ಈ ನೀತಿ ನಿಯಮ ಆಚರಣೆಗಳೇ
ಮುಖ್ಯವಾಗಿರುವ ಭಾಗಕ್ಕೆ ನಾವು ಮತ ಅನ್ನಬಹುದು. ಈ ಧರ್ಮ ಅತ್ವ ನಂಬಿಕೆಗಳಿಗೆ ಕಟ್ಟು ನಿಟ್ಟಿನ ಆಚಾರವನ್ನು ವಿಧಿಸಿದರೆ ಅದು ಮತಗಳಾಗುತ್ತೆ.
ಈ ನಂಬಿಕೆಗಳ / ಧರ್ಮದ ಬಗ್ಗೆ... ನಮ್ಮ ನಮ್ಮ "ಮತಿ" ಗೆ ಅನುಸಾರವಾಗಿ ಮತವಾಗುತ್ತೆ.

ritualistic ಆಗಿರೋದು religion.
spiritualistic ಆಗಿರೋದು ಧರ್ಮ ಅಂತಾರೆ.
ಕೆಲವರು ಧರ್ಮಕ್ಕೆ ಇಂಗ್ಲೀಷಿನಲ್ಲಿ righteousness ಅಂತ ಕರೀಬಹುದು ಅಂತಾರೆ .

ಮೇಲಿನ ರೀತಿಯ ಪದದ ಹುಟ್ಟು ಮತ್ತಿ ಅರ್ಥೈಸುವಿಕೆ ಅದೇನೇ ಇರಲಿ

ಇಂದಿನ ಮತ್ತು ಹಿಂದಿನ ನಿತ್ಯ ಬಳಕೆಯಲ್ಲಿ ಧರ್ಮ ಅಂದರೆ ರಿಲಿಜನ್ ಅನ್ನೋ ರೀತಿಯಲ್ಲೇ ಬಳಕೆಯಾಗಿದೆ.
ನನಗೆ ಮತಕ್ಕೂ ಧರ್ಮಕ್ಕೂ ರಿಲಿಜನ್ ಗೂ ಈಗಿನ ಅರ್ಥದಲ್ಲಿ ಏನೂ ವ್ಯತ್ಯಾಸ ಕಾಣ್ತಾ ಇಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೃ ಅಲ್ಲ ಅದು ಧೃ, ಇದೇ ಧಾತುವಿನಿಂದ ಇನ್ನಿತರ ಶಬ್ದಗಳು, ಧರಾ, ಧರಿತ್ರೀ= ಭೂಮಿ ಕೂಡ ನಮ್ಮನ್ನೆಲ್ಲ ಹೊತ್ತು ರಕ್ಷಿಸುತ್ತಿರುವುದಱಿಂದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತರಿಸಿದ ಎಲ್ಲರಿಗೂ ಧನ್ಯವಾದಗಳು. ಹಾಗಾದಲ್ಲಿ ಧರ್ಮ ಎಂಬುದಕ್ಕೆ ಇಂತದೇ ಎನ್ನುವ ಅರ್ಥವಿಲ್ಲ, ವ್ಯಾಖ್ಯೆಯಿಲ್ಲ. ಹಕ್ಕಿಗೆ ಹಾರುವುದೇ ಧರ್ಮ, ನದಿಗೆ ಹರಿಯುವುದೇ ಧರ್ಮ. ಮಾನವರಿಗೂ ಒಂದು ಧರ್ಮವಿರಬೇಕಲ್ಲವೇ, ಅದು ಯಾವುದು? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡದಲ್ಲಿ ಅಱ ಮತ್ತು ಪರೋಪಕಾರ ಎರಡೂ ಒಟ್ಟೊಟ್ಟಿಗೆ ಹೋಗುತ್ತವೆ. ಅಱಕೆಱೆಯೇ ಆಗಲಿ ಅಱವಟ್ಟಿಗೆಯೇ ಆಗಲಿ ಬೇಱೆಯವರಿಗೆ ಸಹಾಯ ಮಾಡಲೆಂದೇ ಇರುವುದು. ಹಿಂದಿನವರು "ಪರೋಪಕಾರಃ ಪುಣ್ಯಾಯ, ಪಾಪಾಯ ಪರಪೀಡನಮ್" ಇದನ್ನು ಅಕ್ಷರಶಃ ಪಾಲಿಸುತ್ತಿದ್ದರು. "ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಃ ಮೃತ್ಯುಃ ಸನ್ನಿಹಿತೋ ನಿತ್ಯಂ ಕರ್ತವ್ಯೋ ಧರ್ಮಸಂಗ್ರಹಃ"
ಶರೀರಗಳು ಕ್ಷಣಿಸುವಂತಹವು, ಸಂಪತ್ತು ಶಾಶ್ವತವಲ್ಲ. ಮೃತ್ಯು ಯಾವಾಗಲೂ ಹೊಂಚಿ ಕುಳಿತಿರುತ್ತದೆ. ಧರ್ಮದ ಕೆಲಸಗಳನ್ನು ಮಾಡಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಹಕ್ಕಿಗೆ ಹಾರುವುದೇ ಧರ್ಮ, ನದಿಗೆ ಹರಿಯುವುದೇ ಧರ್ಮ. ಮಾನವರಿಗೂ ಒಂದು ಧರ್ಮವಿರಬೇಕಲ್ಲವೇ, ಅದು ಯಾವುದು?[/quote]

ಮಾನವರಿಗೆ ಮಾನವಧರ್ಮ? humanitarian?

ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎನ್ನುವಲ್ಲಿ ಧರ್ಮದ ಅರ್ಥವೇನು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಮಾನವ ಧರ್ಮ ಎ೦ದರೇನು ಎ೦ದು ತಿಳಿದುಕೊಳ್ಳುವ ಕುತೂಹಲ. ನಮ್ಮ೦ತೆಯೇ ಎಲ್ಲರೂ ಎನ್ನುವುದಷ್ಟೇ ಮಾನವ ಧರ್ಮವೇ?
ಭಗವದ್ಗೀತೆಯ ಈ ಶ್ಲೋಕದಲ್ಲಿ ಕೃಷ್ಣ 'ಧರ್ಮ' ಎ೦ದು ಯಾವುದನ್ನು ಹೇಳಿದ್ದಾನೆ೦ದು ನನಗೆ ಗೊತ್ತಿಲ್ಲ. ತಿಳಿದವರು ಹೇಳಿದರೆ ತಿಳಿದುಕೊಳ್ಳಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಮತಿ ವಿನುತಾ, 'ಧರ್ಮ' ಪದದ ಅರ್ಥ ಹುಡುಕುವ ಕಷ್ಟದ ಬಗ್ಗೆ: ಇದೀಗ ಓದಲೆಂದು ಎತ್ತಿಕೊಂಡಿರುವ ಗುರ್ ಚರಣ್ ದಾಸ್ ರ ಹೊಸ ಪುಸ್ತಕ, "The Difficulty Of Being Good - On The Subtle Art of Dharma." ಪುಸ್ತಕದ ಹಿಂದಿನ ರಕ್ಷಾ ಪುಟ ದ ಬ್ಲರ್ಬ್ ಹೀಗನ್ನುತ್ತದೆ: "WHY BE GOOD? WHAT EXACTLY IS DHARMA? HOW DOES ONE PRACTISE IT, AND TO WHAT EFFECT? ಪುಸ್ತಕದ " A Note On Rendering Sanskrit into English" ಪುಟದ ಕೊನೆಯಲ್ಲಿ, ದಾಸರು ಹೀಗೆನ್ನುತ್ತಾರೆ: "I have also preferred not to translate 'dharma' and 'kshatriya' as van Buitenen did and fell far short of the mark. Dharma, in any case, is at the heart of the poem (Mahabharata); it is not only untranslatable, but the Mahabharata's characters are still trying to figure it out at the epic's end."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧರ್ಮಕ್ಕೆ ಕರ್ತವ್ಯ ಅನ್ನುವ ಅರ್ಥವೂ ಬರುತ್ತದಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.