ಬಾಳಿನ ಪಾಠ

0

ನಗುತಿಹುದು ಹೂವು ನನ್ನ ಕಂಡು
ಮುರ್ಖನಾಗಿಯಲ್ಲೋ ಎಂದು
ನೋಡಿಕಲಿ ನನ್ನನ್ನೊಮ್ಮೆ ಜೀವನದ ಪಾಠವ
ಮಳೆ ಬರಲಿ , ಬಿಸಿಲೆರಲಿ
ಬರಸಿಡಿಲೆ ಬಂದೆರಗಲಿ ತಲೆಯೆತ್ತಿ
ನಿಲ್ಲು ಕೊನೆಯವರೆಗೂ

ಬಾಳ ಹಾದಿಯಲಿ ಚಿವುಟುವರು
ಅದೆಷ್ಟೋ ,ಹೊಸಕುವವರು
ಅದೆಷ್ಟೋ ,ಅಂಜದಿರು ನೀ ಅದಕ್ಕೆಲ್ಲ
ಮಾಡುತಿರು ಯತ್ನವ ಮರಳಿ ಮರಳಿ
ಎಂದಾದರೊಂದು ದಿನ ಆರಳುವುದು
ನಗುವೂ ನಿನ್ನ ಮೊಗದಲಿ

ಇರುವರು ಇಲ್ಲಿ ನಿನ್ನಾ ಆರೈಸುವವರು
ಕಾಯಬೇಕಿದೆ ನೀನು ಅವರಿಗಾಗಿ,
ನಗುಮುಕವ ನೋಡಿದೊಡನೆ
ಗ್ರಹಿಸದಿರು ನೀ ನೋವೆ ಇಲ್ಲವೆಂದು ನನಗೆ
ಇರುವ ನೋವೆಲ್ಲ ಒಡಲೊಳಗೆ ನುಂಗಿ
ರಸವಾಗಿ ಹರಿಯುತಿಹುದು ಇಂದು

ನೋವೆಲ್ಲವನ್ನೂ ರಸವಾಗಿಸಿ
ಒಡಲೊಳಗೆ ಬಚ್ಚಿಟ್ಟರು ಬಿಡಲೊಲ್ಲರು
ಇಲ್ಲಿ ಕೆಲವರು ನನ್ನ ಸುಖದಿಂದಿರಲು
ಒಡಲ ಒಡೆದು ರಸವ ಹಿರಿ ಸಿಹಿಯಾಗಿದೆ
ಎಂದು ಹಿಗ್ಗುತ್ತಿಹರು

ತಿಳಿ ಮನುಜನೆ ಬಾಳಿನ
ಅರ್ಥವೊಮ್ಮೆ
ತ್ಯಾಗಕ್ಕಿಂತ ದೊಡ್ಡ ಗುಣವಿಲ್ಲ
ನಗುವಿಗಿಂತ ದೊಡ್ಡ ಅಸ್ತ್ರವಿಲ್ಲ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜ ಸಧ್ಯದ ಅವಶ್ಯಕತೆ ನಿಮ್ಮ ಬಾಳಿನ ಪಾಠ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರಭಾಕರ್ ನಿಮ್ಮಿ ಪ್ರತಿಕ್ರಿಯೆಗೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗು ನಗುತ ನಲಿ ನಲಿ ಏನೆ ಆಗಲೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಗು ನಗುತ ನಲಿ ನಲಿ ಏನೆ ಆಗಲೆ...>>
ನಿಮಾನ್ಸ್ ಗೆ ಕರೆದೊಯ್ಯದಿದ್ದರೆ ಸಾಕು :D :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಹ್ಹ ..ತರ್ಲೆ...ಅಂಗೇನಾದ್ರು ಕರ್ಕೊಂಡೊದ್ರೆ ಬರ್ತೀನಿ ನೋಡಕೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಅಂಗೇನಾದ್ರು ಕರ್ಕೊಂಡೊದ್ರೆ ಬರ್ತೀನಿ ನೋಡಕೆ>>
ಹ್ಮ್ಮ್ಮಂ
ಬರುವಿರಾ ನೀವು ನನ್ನಾ ಹುಚ್ಚಾಟವ
ನೋಡಲು , ಮೈಯೆಲ್ಲಾ ಪರಚಿಕೊಂಡು
ಮಗುವಿನಂತೆ ಮೈಮರೆತು
ಅಗಸವನೊಮ್ಮೆ ಭುವಿಯನೊಮ್ಮೆ ನೋಡಿ
ನಸು ನಕ್ಕು ಮರು ಕ್ಷಣವೇ ಅತ್ತು
ಹುಚ್ಚನಂತೆ ಆದಾಗ ,ಬರುವಿರಾ ನೀವು ನನ್ನ ನೋಡಲು . ಹಿ ಹೀ

:D :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ವಿನಯವರೇ ಸುಂದರವಾದ ಕವನದಕ್ಕೆ (ಬಾಳ ಪಾಠ)

< ಬಾಳ ಹಾದಿಯಲಿ ಚಿವುಟುವರು
ಅದೆಷ್ಟೋ ,ಹೊಸಕುವವರು
ಅದೆಷ್ಟೋ ,ಅಂಜದಿರು ನೀ ಅದಕ್ಕೆಲ್ಲ
ಮಾಡುತಿರು ಯತ್ನವ ಮರಳಿ ಮರಳಿ
ಎಂದಾದರೊಂದು ದಿನ ಆರಳುವುದು
ನಗುವೂ ನಿನ್ನ ಮೊಗದಲಿ >

ಸುಂದರವಾದ ಸಾಲುಗಳು ಇಡಿ ಕವನಕ್ಕೆ ಜೀವ ನೀಡಿತು.

ಧನ್ಯವಾದ ಒಂದು ಸುಂದರ ಕವನ ಓದಲು ನೀಡಿದಕ್ಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಾಗರಾಜ್ ರವರೆ ನಿಮ್ಮಿ ಪ್ರತಿಕ್ರಿಯೆಗೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.