ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ - 1

4.5

ಮನುಷ್ಯನ ಸಹಜಗುಣ ತನಗೆ ಗೊತ್ತಿಲ್ಲದೇ ಇರುವುದರ ಬಗ್ಗೆ ಅರಿಯುವ ಪ್ರಯತ್ನ .ಅಂತಹ ಅರಿವಿಕೆಯ ಜಾಡು ಹಿಡಿದು ಹೊರಟಾಗಲೇ ಗೋಚರವಾಗೋದು ಇಂತಹ ಉಹಿಸಲಸಾಧ್ಯವಾದ ವಿಷಯಗಳು . ಕೆಲವೊಮ್ಮೆ ಆ ಅರಿಯುವ ಆತುರ ಕಲ್ಪನೆಗಳಿಗೂ ಎಡೆ ಮಾಡಿಕೊಡುತ್ತದೆ , ಮತ್ತೆ ಕೆಲವೊಮ್ಮೆ ನೋಡಿದರೂ ನಂಬಲಸಾಧ್ಯವಾದುದ್ದನ್ನು ಅವನ ಮುಂದೆ ತೆರೆದಿಟ್ಟೂ ಬಿಡುತ್ತದೆ .ಹಾಗೆಯೇ ಕೆಲವೊಂದು ಅವನ ಊಹೆಗಳನ್ನು ಮೀರಿ ನಿಂತು ಬಿಡುತ್ತವೆ. ಅಂತಹ ವಿಚಿತ್ರಗಳಲ್ಲೇ ಒಂದು ಈ ಬರ್ಮುಡ ಟ್ರೈ ಅನ್ಗಲ್ . 

             ಒಮ್ಮೆ ಯೋಚಿಸಿ ಯಾವುದೋ ಒಂದು ನಿರ್ದಿಷ್ಟ ಪ್ರದೇಶದೊಳಗೆ ಹೋದ ತಕ್ಷಣ ಮಾಯವಾಗುವುದು ಎಂದರೆ ಎಷ್ಟು ವಿಚಿತ್ರದ ಸಂಗತಿ ಅಲ್ವಾ . ಉಹಿಸಿಕೊಳ್ಳಲು ಸಾಧ್ಯವಾಗೋದಿಲ್ಲ .ಆದರೆ ನಂಬಲೇಬೇಕಾಗಿರುವಂತದ್ದು . ಜಗತ್ತಿನ ಸಾವಿರಾರು ಹಡಗು ಮತ್ತು ವಿಮಾನಗಳನ್ನು ನುಂಗಿ ತನಗೆ ಏನು ತಿಳಿದಿಲ್ಲವೇನೋ ಅನ್ನೋ ರೀತಿ ತನ್ನ ಪಾಡಿಗೆ ಹಾಯಾಗಿ ಇರೋ ಜಾಗವೇ ಈ ಬರ್ಮುಡ ಟ್ರೈ ಅನ್ಗಲ್ .EPIRB(emergency position indicatining radio beacon) , ELT(emergency locator transmitter) ಗಳಂತಹ ಅತ್ಯಾಧುನಿಕ ವ್ಯವಸ್ತೆಗಳಿರುವ ನೌಕೆಗಳು ಯಾವುದೇ ಸುಳಿವು ಕೊಡದೆ ಕ್ಷಣಾರ್ಧದಲ್ಲಿ ಮರೆಯಾಗುವುದು ಅಂದರೆ ವಿಸ್ಮಯವಲ್ಲದೆ ಮತ್ತಿನ್ನೇನು .ಅಟ್ಲಾಂಟಿಕ್ ಮಹಾ ಸಾಗರದ ಸುತ್ತ ಮುತ್ತ ಬರುವ ಬರ್ಮುಡಾ , ಮಯಾಮಿ , ಸ್ಯಾನ್ ಜುಯನ್ ಪುಅರ್ಟೋ ರಿಕೋ , ಫ್ಲೊರಿಡ ಮತ್ತು ಬಹಾಮ ದ್ವೀಪ ಸಮೂಹಗಳ ನಡುವೆ ಇರೋದೇ ಈ ಬರ್ಮುಡಾ ಟ್ರೈ ಅನ್ಗಲ್ .

         ಜಗತ್ತಿನಲ್ಲಿ ಹೀಗೆ ಹೇಳದೇ ಕೇಳದೇ ಕಾಣಿಯಾಗುವ ಹಲವಾರು ಜಾಗಗಳಿದ್ದರೂ , ದೊಡ್ಡ ಮೊತ್ತದಲ್ಲಿ ಕಾಣೆಯಾದ ಘಟನೆಗಳು ಇಲ್ಲಿ ನಡೆದಿರುವುದರಿಂದ ಇದು ಜಗತ್ತಿನ ಗಮನವನ್ನು ತನ್ನೆಡೆಗೆ ತುಸು ಜಾಸ್ತಿಯಾಗೇ ಸೆಳೆದಿದೆ . ಈ ರೀತಿಯ ವಿದ್ಯಮಾನಗಳು ನಡೆಯುವ ಜಗತ್ತಿನ ಇತರ ಸ್ಥಳಗಳೇಂದರೆ :

1ಟೋಕಿಯೋ ಹತ್ತಿರವಿರುವ ಮಿಯಾಕೆ ಐಸ್ಲ್ಯಾಂಡ್ ಸುತ್ತಮುತ್ತ ಬರುವ ಡೆವಿಲ್ ಸೀ ಅಥವಾ ಪೈಶಾಶಿಕ ಸಮುದ್ರ .2)ಬರ್ಮುಡ ಟ್ರೈ ಅನ್ಗಲ್ನ ಪೂರ್ವಕ್ಕೆ ಬರುವ ಸಾರ್ಗ್ಯಾಸೊ ಸಮುದ್ರ .3)ಮೀಚಿಗನ್ ಸಮೀಪ ಬರುವ ದಿ ಮೀಚಿಗನ್ ಟ್ರೈ ಅನ್ಗಲ್ . 4)ತೈವನ್ ಸಮೀಪ ಬರುವ ಫಾರ್ಮೋಸ ಟ್ರೈ ಅನ್ಗಲ್ . 
ಇವುಗಳ ಬಗ್ಗೆ ಮುಂದಿನ ಸರಣಿಯಲ್ಲಿ ವಿವರಿಸುವೆ.

    ಇದರ ಕಾರ್ಯ ನಿರಂತರವಾಗಿ ಸಾಗುತ್ತಾ ಇದ್ದರೂ ಜಗತ್ತಿನ ಅರಿವಿಗೆ ಬಂದಿದ್ದು ಸ್ವಲ್ಪ ನಿಧಾನವೇ ಅಂತ ಹೇಳಬಹುದು. ಅದು ದಶಂಬರ್ 5 ,1945 2ನೇ ಮಹಾ ಯುದ್ದದ ಸಂದರ್ಭ, ಆವಾಗಲೇ ಈ ಕಾಣದ ಕೈ ತನ್ನ ಮೊಟ್ಟ ಮೊದಲ ದೊಡ್ಡ ಬೇಟೆಯಾಡಿ ಜಗತ್ತಿಗೆ ತನ್ನ ಇರುವನ್ನು ತೋರಿಸಿದ್ದು . ಅಭ್ಯಾಸಕ್ಕೆಂದು ಹೋದ F19 ಸರಣಿಯ 5 ಯುದ್ದ ವಿಮಾನಗಳ ಹಾಗೂ ತರುವಾಯ ಅದನ್ನು ಹುಡುಕಲು ಹೋದ ಮತ್ತೊಂದು ವಿಮಾನವನ್ನು ಯಾರಿಗೂ ತಿಳಿಯದಂತೆ ತನ್ನ ತೆಕ್ಕೆಯೊಳಗೆ ಎಳೆದುಕೊಂಡಿದ್ದು ಆವಾಗಲೇ.ಇದರ ಬಗ್ಗೆ ಮೊದಲ ಸುದ್ದಿ ಪ್ರಕಟಗೊಂಡಿದ್ದು ಅಸೋಸೇಟೆಡ್ ಪ್ರೆಸ್ ಎಂಬ ಪತ್ರಿಕೆಯಲ್ಲಿ . ಬರೆದವನು ಈ . ವಿ . ಡಬ್ಲ್ಯೂ. ಜೋನ್ಸ್ , ಪ್ರಕಟಗೊಂಡ ದಿನಾಂಕ ಸೆಪ್ಟೆಂಬರ್ 16 , 1950 .2 ವರ್ಷಗಳ ನಂತರ ಲೇಟ್ ಮ್ಯಾಗಸೀನ್ ಅಲ್ಲಿ ಜಾರ್ಜ್ .ಎಕ್ಸ್ . ಸ್ಯಾಂಡ್ ಎಂಬುವವನು "ಸಮುದ್ರದ ನಿಗೂಡತೆ ನಮ್ಮ ಹಿಂದಿನ ಬಾಗಿಲಿನಲ್ಲಿ " ಅನ್ನೋ ಲೇಖನವನ್ನು ಪ್ರಕತಿಸಿದ.ಅದರಲ್ಲಿ ಆತ. F19 ವಿಮಾನದ ನಾಪತ್ತೆ ಅಲ್ಲದೇ ಹಿಂದೆ ಅದೇ ಜಾಗದಲ್ಲಿ ನಡೆದ ಇತರ ನಾಪತ್ತೆ ಪ್ರಕರಣಗಳ ಬಗ್ಗೆಯೂ ಬೆಳಕು ಚೆಲ್ಲಿದ್ದ .ಬರ್ಮುಡ ಟ್ರೈ ಅನ್ಗಲ್ ಎಂಬ ಪದ ಮೊಟ್ಟ ಮೊದಲ ಬಾರಿಗೆ ಬಳಸಲಾಗಿದ್ದು ವಿನ್ಸೆಂಟ್ ಗಡ್ಡೀಸ್ ಫೆಬ್ರುವರೀ 1964 ರಲ್ಲಿ ಬರೆದ "The deadly bermuda triangle".ಗಮನಿಸಬೇಕಾದ ಅಂಶ ಅಂದ್ರೆ ಈ ವಿಚಿತ್ರ ಟ್ರೈ ಅನ್ಗಲ್ಗಳ ಬಗ್ಗೆ ಕೊಲುಂಬುಸ್ ಕೂಡ ಉಲ್ಲೇಖ ಮಾಡಿದ್ದಾನೆ ಅನ್ನೋದು.

ಇದರ ಬಗ್ಗೆ ನಡೆದಿರೋ ವಿಶ್ಲೇಷಣೆಗಳ ಬಗ್ಗೆ , F 19 ನಾಪತ್ತೆಯಾಗೊ ಮುಂಚೆ ಪರಸ್ಪರ ಸಹಮಿತ್ರರು ನಡೆಸಿದ ಸಂಭಾಷಣೆ ಹಾಗೆಯೇ ಇದರ ಹಿಂದೆ ಇರಬಹುದಾದ ಕಾರಣಗಳ ಬಗ್ಗೆ ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ . 

 ಮೂಲ :Gian.j. quasar ರವರು ಬರೆದಿರುವ Into the Bermuda triangle

ಚಿತ್ರ ಕೃಪೆ : Crystal.com  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮ ಮಾಹಿತಿ..
ಬರ್ಮುಡಾ ಟ್ರೈಆಂನ್ಗಲ್ ಬಗ್ಗೆ ಕುತೂಹಲವಿತ್ತು
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶೋಭಾರವರೆ ನಿಮ್ಮಿ ಪ್ರತಿಕ್ರಿಯೆಗೆ .
ನನಗೂ ಕುತೂಹಲ ಹೆಚ್ಚಾಗಿ ಇದನ್ನು ಬರೆದಿದ್ದು , ಪೂರ್ತಿ ಸರಣಿ ಓದಿ ಇದಕ್ಕಿಂತ ಕುತೂಹಲಕಾರಿ ಆದದ್ದು ಇನ್ನು ಇದೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರ ಡಾಕ್ಯುಮೆಂಟರಿಯೊಂದು ಸ್ನೇಹಿತನ ಬಳಿ ಇತ್ತು. ಅದನ್ನು ನೋಡಿದಾಗ ಅದರ ಬಗ್ಗೆ ಅಧ್ಯಯನ ಮಾಡಿದವರಿಗೂ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುತೂಹಲಕರ ಮಾಹಿತಿ ವಿನಯ್.........

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅಕ್ಕ ನಿಮ್ಮಿ ಪ್ರತಿಕ್ರಿಯೆಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜ ನಂದಕುಮಾರ್ ರವರೆ , ಆ ಮಾಹಿತಿ ಸಿಗದೇ ಹೋಗಿದ್ದಕ್ಕೆ ಇದು ವಿಸ್ಮಯವಾಗಿ ಉಳಿದಿರೋದು ಅಲ್ವಾ ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅನುವಾದವನ್ನು ಓದಿದರೆ ಬರ್ಮುಡಾ ತ್ರಿಕೋಣದಲ್ಲಿ ಹೋಗುವ ಎಲ್ಲ ಹಡಗು/ವಿಮಾನಗಳು ಮಾಯ ಆಗುತ್ತವೆ ಎಂಬ ಅನಿಸಿಕೆ ಬರುತ್ತದೆ. ಹಾಗಲ್ಲ ಎಂದು ಸ್ಪಷ್ಟ ಪಡಿಸಿದ್ದರೆ ಚೆನ್ನಿತ್ತು.
ಬರ್ಮುಡಾ ತ್ರಿಕೋಣ ರಹಸ್ಯಮಯ ಅಲ್ಲ ಎನ್ನುವ ಕೆಲವು ಲಿಂಕುಗಳು:
http://www.skepdic.com/bermuda.html
http://unmuseum.mus.pa.us/triangle.htm
http://www.history.navy.mil/faqs/faq8-1.htm

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ತಮ್ಮಿ ಪ್ರತಿಕ್ರಿಯೆಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಜಗತ್ತಿನ ಸಾವಿರಾರು ಹಡಗು ಮತ್ತು ವಿಮಾನಗಳನ್ನು ನುಂಗಿ ತನಗೆ ಏನು ತಿಳಿದಿಲ್ಲವೇನೋ ಅನ್ನೋ ರೀತಿ ತನ್ನ ಪಾಡಿಗೆ ಹಾಯಾಗಿ ಇರೋ ಜಾಗವೇ ಈ ಬರ್ಮುಡ ಟ್ರೈ ಅನ್ಗಲ್[/quote]
ನಿಜವಾಗಿಯೂ ಸಾವಿರಾರು ಹಡಗು/ವಿಮಾನಗಳು ಮಾಯವಾಗಿವೆಯೆ? http://en.wikipedia.org/wiki/List_of_Bermuda_Triangle_incidents ಇಲ್ಲಿ ನೋಡಿದರೆ ಸಾವಿರಾರು ಎಂದಂತೂ ಅನಿಸುವುದಿಲ್ಲಪ್ಪ.
ಒಟ್ಟಿನಲ್ಲಿ ೪ ವಿಮಾನಗಳು, ೭ ಹಡಗುಗಳು (೧೭೭೯ ರಿಂದ ಲೆಕ್ಕ ಹಾಕಿದರೆ) ಅನುಮಾನಸ್ಪದವಾಗಿ ಅಪಘಾತಕ್ಕೆ ಒಳಗಾಗಿವೆ ಎಂದು ಇದೆ. ಕೊನೆಯ ವಿಮಾನ ಅಪಘಾತ ೧೯೪೯ರಲ್ಲಿ ಮತ್ತು ಕೊನೆಯ ಹಡಗು ಅಪಘಾತ ೧೯೬೭ರಲ್ಲಿ ಎಂದು ಇದೆ.
[quote].EPIRB(emergency position indicatining radio beacon) , ELT(emergency locator transmitter) ಗಳಂತಹ ಅತ್ಯಾಧುನಿಕ ವ್ಯವಸ್ತೆಗಳಿರುವ ನೌಕೆಗಳು ಯಾವುದೇ ಸುಳಿವು ಕೊಡದೆ ಕ್ಷಣಾರ್ಧದಲ್ಲಿ ಮರೆಯಾಗುವುದು ಅಂದರೆ ವಿಸ್ಮಯವಲ್ಲದೆ ಮತ್ತಿನ್ನೇನು .[/quote]
ಈ ಅತ್ಯಾಧುನಿಕ ಉಪಕರಣಗಳು ೧೯೬೭ರಲ್ಲಿ ಇದ್ದವೆ? ಇವೆರಡೂ ತಂತ್ರಜ್ನಾನಗಳು ೧೯೮೨ರಲ್ಲಿ ಬಂದದ್ದು ಎಂದು http://en.wikipedia.org/wiki/Distress_radiobeacon ನಲ್ಲಿ ಇದೆ.

ನಿಮ್ಮ factಗಳನ್ನು ನೀವೇ ಸ್ವಲ್ಪ ಒರೆಗೆ ಹಚ್ಚಿದ್ದರೆ ಚನ್ನಾಗಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು...ಇಲ್ಲಿಯವರೆಗೆ ಬರೆದವರೆಲ್ಲಾ ಬರ್ಮುಡಾ ತ್ರಿಕೋಣದ ಬಗ್ಗೆ ಅತಿರಜಿತವಾಗಿ ಬರೆದು ಅದಕ್ಕೊಂದು myth ನ್ನು ಆರೋಪಿಸುತ್ತಾರೇನೋ ಎನ್ನಿಸುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<< ಇಲ್ಲಿಯವರೆಗೆ ಬರೆದವರೆಲ್ಲಾ ಬರ್ಮುಡಾ ತ್ರಿಕೋಣದ ಬಗ್ಗೆ ಅತಿರಜಿತವಾಗಿ ಬರೆದು ಅದಕ್ಕೊಂದು myth ನ್ನು ಆರೋಪಿಸುತ್ತಾರೇನೋ ಎನ್ನಿಸುತ್ತದೆ.
>>>
ಇಲ್ಲ ಹರ್ಷಣ್ಣ ಹೇಗೆ ಬರ್ಮುಡಾ ತ್ರಿಕೋಣ ಇದೆ ಎಂದು ವಾದಿಸಿದ್ದಾರೋ ಹಾಗೆ ಇಲ್ಲ ಎಂದು ವಾದಿಸಿದ್ದವರು ಇದ್ದಾರೆ , ಅವರ ಬಗ್ಗೆ ಹಾಗೆಯೇ ಅವರ ವಿಶ್ಲೇಷಣೆಗಳ ಬಗ್ಗೆ ಬೆಳಕು ಚೆಲ್ಲಲು ಪ್ರಯತ್ನಿಸುತ್ತೇನೆ
ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಎಲ್ಲ ಪ್ರಶ್ನೆ ಗಳಿಗೂ ಲೇಕನ ಮುಗಿಯುವುದುದರೋಳಗಾಗಿ ಉತ್ತರ ದೊರಕುತ್ತದೆ ಅಂತಷ್ಟೇ ಹೇಳಬಲ್ಲೆ .
ಹಾಗೆಯೇ <<<ನಿಜವಾಗಿಯೂ ಸಾವಿರಾರು ಹಡಗು/ವಿಮಾನಗಳು ಮಾಯವಾಗಿವೆಯೆ?>>>
ಹೌದು ಎನ್ನುವುದಕ್ಕೆ ಪುರಾವೆ ಗಳಿವೆ , ಮುಂದಿನ ಕಂತು ಗಳಲ್ಲಿ ವಿವರಿಸುತ್ತೇನೆ ,
<<ಈ ಅತ್ಯಾಧುನಿಕ ಉಪಕರಣಗಳು ೧೯೬೭ರಲ್ಲಿ ಇದ್ದವೆ? ಇವೆರಡೂ ತಂತ್ರಜ್ನಾನಗಳು ೧೯೮೨ರಲ್ಲಿ ಬಂದದ್ದು ಎಂದು>>
ನಾನು ಓವರ್ ಆಲ್ ಆಗಿ ಹೇಳಿದ್ದು , ನಿಮಗೆ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ ಈ ತ್ರಿಕೋನದಲ್ಲಿ ಕೊನೆಯ ನಾಪತ್ತೆ ಆಗಿದ್ದು ೨೦೦೭ ಅಕ್ಟೋಬರ್ ೪ ರಂದು . ಇದರ ದಾಖಲೆಯ ಪಿ ಡಿ ಎಫ್ ಫೈಲ್ ನನ್ನ ಬಳಿ ಇದೆ .
ನಾನು ಕೇವಲ http://www.wikipedia.org/ ಮಾತ್ರ ಅಧ್ಯಯನ ಮಾಡಿ ಬರೆದಿಲ್ಲ . ಈ ತ್ರಿಕೋನದ ಬಗ್ಗೆ ಸಾಕಷ್ಟು ವಿಷಯ ಒದಗಿಸುವ ಬೇರೆ ಬೇರೆ ವೆಬ್ಸೈಟ್ ಗಳನ್ನೂ ಓದಿದ್ದೇನೆ .

ಹಾಗೆಯೇ ಇದರ ಇರುವು ಇಲ್ಲದಿರುವಿಕೆಗಳ ನಡುವೆ ಇರುವವಾದ ವಿವಾದಗಳನ್ನೂ ಬರೆಯುತ್ತೇನೆ ಅಂತ ಹೇಳಲು ಇಚ್ಛಿಸುತ್ತೇನೆ .
ಪೂರ್ತಿ ಲೇಕನವಾದ ಮೇಲೆ ಚರ್ಚೆ ಆದರೆ ಒಳ್ಳೆಯದು ಅಲ್ಲವೆ , ಕಾರಣ ಇಷ್ಟೇ ನಿಮ್ಮ ಕೆಲವು ಪ್ರಶ್ನೆ ಗಳಿಗೆ ನನ್ನ ಮುಂದಿನ ಲೇಕನದಲ್ಲಿ ಉತ್ತರ ಸಿಗಬಹುದು .

ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದು ಕೆಲವು ವಿಚಾರಗಳಿದ್ದವು.. ಲೇಖನ ಮುಗಿಲೀ ಅಂತ ಕಾಯ್ತಿದ್ದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ .ಇಲ್ಲಿ ಇದೆ , ಇಲ್ಲ ಅನ್ನುವುದಕ್ಕಿಂತ ಹೆಚ್ಚಾಗಿ ಆಗಿದ್ದನ್ನು , ನಡೆದಿರುವ ಅಧ್ಯಯನಗಳನ್ನು , ಬೇರೆ ರೀತಿಯ ಸಾಧ್ಯತೆಗಳನ್ನೂ ತಿಳಿಪಡಿಸಲು ಹೆಚ್ಚಾಗಿ ಒತ್ತು ನೀಡುತ್ತೇನೆ. ಆಮೇಲೆ ಅವು ಎಷ್ಟರ ಮಟ್ಟಿಗೆ ಸರಿ ಅಂತ ಚರ್ಚಿಸಬಹುದು

ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ, ನಿಮ್ಮ ಮುಂದಿನ ಲೇಖನಗಳಿಗೆ ಕಾಯುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಾ , ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಕ್ಕೋಣ, ತ್ರಿಕೋಣ, ತ್ರಿಭುಜ, ಮೂರ್ಬುಜ.... ಟ್ರಯಾಂಗಲ್ ಬದಲು ಬಳಸಬಹುದಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಬಳಸಬಹುದು , ತಮ್ಮ ಸಲಹೆಗೆ ಧನ್ಯವಾದಗಳು ಹರ್ಷಣ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಣ ಣ ಣ ಣ ಣ ಣ ಣ ಣ! ಣ ಣಣಣ ಣಣ ಣಣ!
ಪೂರ್ತಿ ಕನ್ನಡ ಅಂತ ಅನ್ಸ್ಲಿ ಅಂತ, ಣ ಕಾರದಲ್ಲೇ ಮಾತಾಡಿ ಬಿಡುವ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಹುಟ್ಟುವ ಮುಂಚಿನಿಂದಲೂ ಕಾಡುತ್ತಿರುವ ಈ "ಬರ್ಮುಡಾ ತ್ರಿಕೋನ" ಈಗ ನಮ್ಮ ಯುವ ಸಂಪದಿಗರನ್ನೂ ಇಷ್ಟೊಂದು ಕಾಡಿ, ಒಳ್ಳೆಯ ಚರ್ಚೆಗೆ ಗ್ರಾಸವಾಗಿರುವುದನ್ನು ನೋಡಿದರೆ ಅಲ್ಲಿ "ನಮ್ಮೂರಿನ ಮಾರಮ್ಮ", ಇಲ್ಲಿನ ಕೋಳಿ, ಕುರಿ, ಕೋಣಗಳ ಬಲಿ ಸಾಕಾಗದೆ, ಸ್ವಯಂ ವರ್ಗಾವಣೆಗೊಂಡು, ಆ ತ್ರಿಕೋನದಲ್ಲಿ ಸಂಸ್ಥಾಪಿತಳಾಗಿ, ಇದುವರೆಗಿನ ನರಬಲಿಗಳಿಂದ ಸುಪ್ರೀತಳಾಗಿ, ಇನ್ನೂ ಸಾಕಷ್ಟು ನರಬಲಿಗಳಿಗೆ ಬಾಯ್ತೆರೆದು ಕಾದಿರಬಹುದು ಅನ್ನಿಸುತ್ತಿದೆ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಂಜುನಾಥರವರೆ ನಿಮ್ಮಿ ಪ್ರತಿಕ್ರಿಯೆಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪುಸ್ತಕ ಪ್ರಕಾಶನ ಹೊರತಂದಿರುವ ಪ್ರದೀಪ ಕೆಂಜಿಗೆಯವರ "ಬರ್ಮುಡಾ ಟ್ರ್ಯಾಂಗಲ್" ಅನ್ನು ೨೦೦೭ರ ಜುಲೈ ನಲ್ಲಿ ಓದಿದ್ದು ನೆನಪಾಗಿ ನನ್ನ ಪುಟ್ಟ ಲೈಬ್ರರಿಯಿಂದ ಅದೇ ಪುಸ್ತಕವನ್ನೊಮ್ಮೆ ಹೊರತೆಗೆದು ನೋಡ್ತಿದ್ದೇನೆ...

ವಿಸ್ಮಯ ಭರಿತವಾದ ಅದೆಷ್ಟೋ ವಿಷಯಗಳನ್ನು ನಾವೆಲ್ಲ ತಿಳಿದು ಕೊಳ್ಳೋದು ಬಹಳಷ್ಟಿದೆ.. ಹೀಗೇ ಬರೀತಿರಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಶಿವಣ್ಣ , ಇದರ ಬಗ್ಗೆ ತೇಜಸ್ವಿಯವರು ಕೂಡ ಬರೆದಿದ್ದಾರೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.. ತೇಜಸ್ವಿಯವರ ಮತ್ತು ನಾಗೇಶ್ ಹೆಗಡೆಯವರ ಲೇಖನಗಳಲ್ಲಿ ಇದರ ಉಲ್ಲೇಖ ಇರೋ ನೆನಪು.. ತೇಜಸ್ವಿಯವರ ಮಿಲೇನಿಯಮ್ ಸೀರೀಸ್ ನಲ್ಲಿ ಎಲ್ಲೂ ಕಾಣಲಿಲ್ಲ.. ಬೇರೆ ಪುಸ್ತಕ ಹುಡುಕ್ತಿದ್ದೀನಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶಃ ೪ ಸರಣಿಯಲ್ಲಿ ಪ್ರಕಟಗೊಂಡಿತ್ತು ಅಂತ ಜ್ಞಾಪಕ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬ ನಿಜಕ್ಕು ವಿಸ್ಮಯ ವಿಚಾರವನ್ನು ತಿಳಿಸುತ್ತಿದ್ದಿಯ ವಿನಿ...ಕುತುಹಲಕಾರಿಯಾಗಿದೆ ಮುಂದುಮರಿದ ಭಾಗಕ್ಕಾಗಿ ಕಾಯುತ್ತಿದ್ದೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಅಕ್ಕ , ಹಾಗೆಯೇ ತಮ್ಮಿ ಪ್ರತಿಕ್ರಿಯೆಗೆ ಧನ್ಯವಾದಗಳು
ಇಂತಿ
ವಿನಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.