ಅಗಲುವಿಕೆ - ೨ (ಅಕ್ಕ - ದಿರು )

0

ಬೇಕಿನಿಸಿತ್ತು ನನಗೊಂದು
ಜೀವ ನನ್ನ ಭಾವನೆಗಳ
ತೋಡಿಕೊಳ್ಳಲು
ಮನಸಿನ ತೊಳಲಾಟವ
ಹೇಳಿಕೊಳ್ಳಲು

ಇರಲಿಲ್ಲವೆಂದಲ್ಲ
ಭಾವನೆಗಳ ಹಂಚಿಕೊಳ್ಳುವವರು
ಆದರೆ ನನಗೆ ಬೇಕಾಗಿತ್ತು
ಭಾವನೆಗಳಿಗೆ ಸ್ಪಂದಿಸುವವರು

ಸಿಕ್ಕಿದಿರಿ ನೀವಾಗ
ಸಂಪದದಂತೆ ಸೊಂಪಾಗಿ
ಸ್ಪಂದಿಸಿದಿರಿ ನನ್ನ ಪ್ರತಿ
ನುಡಿಗೆ , ನಡೆಗೆ

ಅಂದುಕೊಂಡೆ ನಾನಾಗ
ಇನ್ನೆನಗೆ ಚಿಂತೆಯಿಲ್ಲ
ಹರಿದುಬಿಡಬಹುದು ನನ್ನ
ಮನಸಿನ ಲಯರಿಯ
ಇವರೆಡೆಗೆ ಎಂದು

ಆದರೆ ಅನಿಸತೊಡಗಿದೆ
ಈಗೇಕೋ ಒಮೊಮ್ಮೆ
ದುರುಸರಿಯುತಿಹರೆನೋ ಇವರೆಂದು

ಹಿತವ ಕಾಣುವೆಯಾದರೆ ನೀ
ಅಗಲಿಕೆಯಲ್ಲೇ
ನನ್ನದು ಒಂದು ಹಾರೈಕೆ ಇದೆ
ಎಲ್ಲೇ ಇರು ಹೇಗೆ ಇರು
ಒಮ್ಮೆಯೂ ನನ್ನ ನೆನೆಯದಿರು
ನೆನೆದರೆ ನೀನಲ್ಲಿ ಮೂಡಬಹುದು ಕಣ್ಣೀರ ಹನಿ ನಿನಗೆ
ಆದರೆ ಸೋರುವುದು ಒಂದು ತೊಟ್ಟು ರಕ್ತ ನನಗೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತಮ್ಮಾ.. ಇದ್ದೀವಪ್ಪ ಇಲ್ಲೇ..
ಪರೀಕ್ಷೆ ಸಮಯ!!! :( ಅದಕ್ಕೆ ಕಾಣ್ಸೋದಿಲ್ಲ ಅಷ್ಟೆ!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದು ಅದೇಯ ತಮ್ಮ!!
ಒಂದ್ ಕಿತ್ ಈ ಪರಿಕ್ಸೆ ಎಲ ಮುಗ್ದು ಹೋಗ್ಲಿ..
ಆಮ್ಯಾಕಿಂದ ಇ ಹೆಣ್ಗಳ ಅದ್ಯಾಕೆ ಅಕ್ಕ ಅಂತ ಕರುದ್ನೋ ಅಂತ ನೀ ಕವ್ನವಾ ಗೀಚ್ ಬೀಸಾಕ್ಬೇಕ್ ಹಂಗ್ ತಲ್ತಿನ್ತಿನಿ..
ಸರಿನಾ ಮಗಾ??
ಈಗ ನೀ ಅಳ್ಬ್ಯಾಡ ಕಣ್ಲೇ
ಇನ್ ವಸಿ ದಿನ ಹಂಗೆ ಸೊಲ್ಪ ಸಮ್ದಾನದಿಂದ ಇರು ಮತ್ತೆ ನೋಡುಮಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೋ ಈ ವಿರಹ ನಿನಗೆ
ಹರಿಯಬಿಡು ನಿನ್ನ ಭಾವಗಳ
ಸಂಪದದ 'ದೋನಿ'ಯೊಳಗೆ
ಮುಟ್ಟುವುದು ಮುಟ್ಟಬೇಕಾದವರೆಡೆಗೆ
ಸ್ಪಂದನ ಆಗಿಯೇ ಆಗುವದು
ಕಟ್ಟ ಕಡೆಗೆ .................

--

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.