ಬಾ ನಲ್ಲೆ

1

ನಲ್ಲೆ , ನಿನ್ನ ಆ ತಿಳಿನಗುವ ಕಂಡು
ಬಿದಿಗೆ ಚಂದ್ರಮನು ಕೂಡ
ಜೋಲು ಮೊಗವ ಹಾಕಿಕೊಂಡಿರುವನು ಇಂದು
ತನ್ನ ಆ ಹಾಲಬೆಳದಿಂಗಳಿಗಿಂತ ಈ
ನಿನ್ನ ನಗುವಿನ ಬೆಳಕೆ ಚಂದಿರುವುದೆಂದು

ನಲ್ಲೆ , ನಿನ್ನ ಆ ಪಾದ ಸ್ಪರ್ಶಕೆ
ನಾಚಿ ನೀರಾಗಿರುವ
ಭುವಿಯು ಕೂಡ ತಣ್ಣಗಾಗಿರುವುದಿಂದು

ನಲ್ಲೆ , ಗು ಗುಟ್ಟುವ ಗೂಬೆಯು
ಕೂಡ ಸುಮ್ಮನಾಗಿರುವುದು ಇಂದು
ನಿನ್ನ ಆ ಗೆಜ್ಜೆಯ ಸವಿ ಸದ್ದೇ
ಹಿತವಾಗಿರುವುದು ಅದಕ್ಕಿಂದು

ನಲ್ಲೆ ,ಬಾನಂಗಳದಲಿ
ಮೂಡಿರುವ ತಾರೆಗಳು ಕಾಯುತಿರುವವು
ನಿನ್ನ ಆ ಕಣ್ಣಂಚಿನ ಮಿನುಗುವಿಕೆಗೆ
ತಮ್ಮ ಕಣ್ಣು ಮಿಟುಕಿಸದೆ

ನಲ್ಲೆ , ಎಲ್ಲವನು ಬಿಟ್ಟು ನೋಡೋಮ್ಮೆ ಇಲ್ಲಿ
ಕಾಯುತಿರುವುದೊಂದು ಜೀವವಿಲ್ಲಿ
ನಿನ್ನ ಆ ಬಿಸಿ ಉಸಿರಿನ ಸ್ಪರ್ಶಕ್ಕೆ
ಜಗವ ಮರೆಸುವ ಆ ಮಧುರ ಕ್ಷಣಕ್ಕೆ .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಖತ್ ಆಗಿದೆ ನಿರೀಕ್ಷೆ...
ಶೀಘ್ರ ಇಷ್ಟಾರ್ಥ ಪ್ರಾಪ್ತಿ ರಸ್ತು!!!

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸರ್ ತಮ್ಮಿ ಪ್ರತಿಕ್ರಿಯೆಗೆ .
<<<ಶೀಘ್ರ ಇಷ್ಟಾರ್ಥ ಪ್ರಾಪ್ತಿ ರಸ್ತು!>>>
ತಮ್ಮ ಹಾರೈಕೆಗೆ ಇನ್ನೊಂದು ಸ್ಪೆಷಲ್ ಧನ್ಯವಾದ :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ತುಂಬಾ ಚೆನ್ನಾಗಿದೆ. ನಿಮ್ಮ ಎಲ್ಲ ಕವನಗಳನ್ನೂ ಓದುತ್ತೇನೆ. ಪ್ರತಿಕ್ರಿಯಿಸಲಾಗುತ್ತಿಲ್ಲ. ಇನ್ನೂ ಹೆಚ್ಚು ಹೆಚ್ಚು ಬರೆಯುತ್ತಿರಿ.
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅಂಬಿಕ ಅವರೇ
ಪ್ರತಿಕ್ರಿಯೆ ಬರೆಯಲಾಗುತ್ತಿಲ್ಲವೆಂದು ಬೇಸರ ಬೇಡ
ಪ್ರತಿಕ್ರಿಯೆಗಳ ಬಗ್ಗೆ ಆಸುರವರ ಒಂದು ಚಿಕ್ಕ ಕವನ ಇಲ್ಲಿದೆ ನೋಡಿ

http://sampada.net/blog/inchara123/03/06/2009/21043

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.