ಬದುಕು

2

ಹುಟ್ಟೆಂಬ ದೋಣಿಯನೇರಿ
ಹುಟ್ಟು ಹಾಕುತ್ತಾ
ಹೊರಟಿದೆ ಈ ಬಾಳ ಪಯಣ

ಇರುವುದು ಕೆಲವೆಡೆ
ಶಾಂತ ಸಾಗರದಂತೆ ಸುಖದ ಅಲೆಗಳು
ಮತ್ತೆ ಕೆಲವೆಡೆ ಇರುವುದು
ಬಿರುಗಾಳಿ ಪೀಡಿತ ಕಷ್ಟದಲೆಗಳು

ಹೇಳಲಾಗದು ಇಲ್ಲಿ ಎಂದು ಮಗುಚುವುದೆಂದು
ಬದುಕೆಂಬ ದೋಣಿಯು
ಕೆಲವೊಮ್ಮೆ ಬೇಕಾಗಿಲ್ಲ ಅದಕ್ಕೆ
ಬರಸಿಡಿಲ ಪೆಟ್ಟು
ಸಾಕಾಗಲುಬಹುದು ತಿಳಿ ನೀರ ಸುಳಿಯು

ಬದುಕೆಂಬ ಗುಟ್ಟು ರಟ್ಟು
ಮಾಡಲು ಹೊರಟಿದೆ ಈ ಪಯಣ
ಗುರಿಯು ಇಲ್ಲದೆ , ದಡವೂ ಕಾಣದೆ
ಮಧ್ಯ ಸಾಗರದಲ್ಲಿ ಮನಸಿನ
ತೊಳಲಾಟದ ನಡುವೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು ವಿನಿ ಬದುಕೆ ಹಾಗೆ..ಅದುಕ್ಕೆ ಏನೆ ಬಂದರು ಈಜಿ ದಡ ಸೇರುತ್ತೇವೆ ಎಂಬ ಭರವಸೆ ಇರಬೇಕು......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.