ಕುಪ್ಪಳ್ಳಿ ಸುತ್ತ - ಮುತ್ತ .

0

ತುಂಬಾ ಜನ ಕುಪ್ಪಳ್ಳಿ ನೋಡಿಲಿಕ್ಕೊಸ್ಕರ ತುಂಬಾ ಕಡೆ ಇಂದ ಬರುತ್ತೀರಿ, ಕೇವಲ ಅದೊಂದೇ ನೋಡಿ ಮರಳುವ ಬದಲು ಅಲ್ಲೇ ಸುತ್ತ ಮುತ್ತ ಇರುವ ಕೆಲವು ಪ್ರದೇಶಗಳನ್ನು ಪರಿಚಯಿಸಲು ಈ ಲೇಕನ .
೧) ಅಷ್ಟು ದೂರ ಬದಿರುತ್ತಿರ ಅಂದ ಮೇಲೆ ಮೊದಲು ನಮ್ಮ ಮನೆಗೆ ಬನ್ನಿ ದಾರಿ ನನ್ನ ಪ್ರೊಫೈಲ್ ಫೋಟೋ ದಲ್ಲಿದೆ :D
(ನಾನು ಊರಿನಲ್ಲಿದ್ದರೆ ಖಂಡಿತವಾಗಿ ನಿಮ್ಮ ನೆರವಿಗೆ ಬರುತ್ತೇನೆ ).
೨) ಕುಪ್ಪಳ್ಳಿ - ಇದರ ಬಗ್ಗೆ ನಾನೇನು ಹೆಚ್ಚು ವಿವರಿಸಬೇಕಾಗಿಲ್ಲ ಅನ್ನಿಸುತ್ತೆ .
ಬೆಂಗಳುರಿಂದ ಬರುವವರಾದರೆ ರಾತ್ರಿ ೧೦.೩೦ ಕ್ಕೆ ನೇರವಾದ ರಾಜಹಂಸ ಬಸ್ಸಿದೆ .
ಇನ್ನು ಬೀದರ್ , ಗುಲ್ಬರ್ಗ ಕಡೆ ಇಂದ ಬರುವವರಾದರೆ ಶಿವಮೊಗ್ಗ ಕ್ಕೆ ಮೊದಲು ಬಂದು ಅಲ್ಲಿಂದ ತೀರ್ಥಹಳ್ಳಿ . ಅಲ್ಲಿಂದ ಕೊಪ್ಪ ಬಸ್ ಹತ್ತಿದರೆ ನಿಮಗೆ ಮಾರ್ಗ ಮಧ್ಯದಲ್ಲಿ ಕುಪ್ಪಳ್ಳಿ ಸಿಗುತ್ತದೆ .
ಇನ್ನು ಮಂಗಳೂರು , ಕುಂದಾಪುರ ಆ ಕಡೆ ಇಂದ ಬರುವವರಿಗೆ ತೀರ್ಥಹಳ್ಳಿಗೆ ನೇರವಾಗಿ ಬಸ್ ಸೌಲಭ್ಯವಿದೆ .
ತೀರ್ಥಹಳ್ಳಿ ಯಲ್ಲಿ ಉಳಿದುಕೊಳ್ಳಲು ಎಲ್ಲ ವ್ಯವಸ್ತೆ ಇದೆ .
೩)ಇನ್ನು ಹೇರಾಂಭಾಪುರ , ನಿಮಗೆ ಸ್ವಲ್ಪ ತ್ರಾಸ ಆಗಬಹುದು . ಕಾರಣವಿಷ್ಟೇ ನೇರವಾಗಿ ಇಲ್ಲಿಗೆ ಬಸ್ ಇಲ್ಲ .ನೀವು ನಮ್ಮ ಮನೆ ಕಡೆ ಅಂದರೆ ಕುಪ್ಪಳ್ಳಿ ಮತ್ತು ತೀರ್ಥಹಳ್ಳಿ ಮಧ್ಯೆ ದೇವಂಗಿ ಅಂತ ಒಂದು ಊರು ಸಿಗುತ್ತೆ ಅಲ್ಲಿ ಇಳಿದುಕೊಂಡು ಕಟ್ಟೆಹಕ್ಕಲು ಎಂಬ ಗ್ರಾಮಕ್ಕೆ ಬರಬೇಕು (ಘಂಟೆಗೊಂದು ಬಸ್ ). ಅಲ್ಲಿಂದ ೫ ಕಿ ಮಿ (ಇಷ್ಟವಿದ್ದರೆ ನಡೆಯಬಹುದು , ಇಲ್ಲದಿದ್ದರೆ ಆಟೋನೆ ಗತಿ ).
ಇಲ್ಲಿಯ ವಿಶೇಷ ಅಂದ್ರೆ ಇಲ್ಲಿರುವ ಅಮ್ಮನವರು (ಜಲದುರ್ಗಂಬ ) ತೋಟದ ಸಮೀಪವಿದ್ದು (ಉದ್ಭವ ಮೂರ್ತಿ )ಇಲ್ಲಿ ಸದಾ
ಕಾಲ ಗರ್ಭಗುಡಿ ಯಲ್ಲಿ ನೀರು ಇದ್ದೆ ಇರುತ್ತದೆ (ಜಲ ಬರುತ್ತದೆ ).
೩)ಕಟ್ಟೆಹಕ್ಕಲು ಅಲ್ಲಿಂದ ಮುಂದೆ ಹೋದರೆ ನಿಮಗೆ ಸಿಗುವುದೇ ಮೃಗವಧೆ .
ಹೆಸರೇ ಹೇಳುವಂತೆ ಇಲ್ಲಿ ಮೃಗ ವಧೆ ಆಗಿದೆ .ಅದಕ್ಕೊಂದು ಕಥೆ "ರಾಮಾಯಣದಲ್ಲಿ ಸೀತೆಯು ಬೇಕೆನುವ ಮಾಯಾ ಜಿಂಕೆ ಯನ್ನು ಶ್ರೀ ರಾಮ ಬೆನ್ನಟ್ಟಿಕೊಂಡು ಹೋಗಿ ಕೊಂಡಿದ್ದು ಇಲ್ಲೇ ಅನ್ನುತ್ತದೆ ಪುರಾಣ ".
೪)ಈಗ ಮತ್ತೆ ವಾಪಸ್ ತೀರ್ಥಹಳ್ಳಿಗೆ (ನಮ್ಮೂರಿಂದ ತೀರ್ಥಹಳ್ಳಿಗೆ ಹೋಗಲು ೨ ಮಾರ್ಗಗಳಿವೆ , ಈಗ ನಾವು ಹೊರಟಿರುವುದು ೨ ನೆ ಮಾರ್ಗ ದಲ್ಲಿ ).ದಾರಿಯಲ್ಲಿ ನಿಮಗೆ ತುಂಗಾ ನದಿಯ ದರ್ಶನವಾಗುತ್ತದೆ , ಅದರ ದಡದಲ್ಲಿ ಇರುವುದೇ ಚಿಬ್ಬಲಗುಡ್ಡೆ .
ಇಲ್ಲಿ ಗಣಪತಿ ದೇವಸ್ಥಾನವಿದೆ .ಇಲ್ಲಿ ಕೂಡ ಶೃಂಗೇರಿಯಲ್ಲಿರುವಂತೆ . ಇಲ್ಲಿರುವ ಮೀನುಗಳಿಗೆ ಅಕ್ಕಿ ಹಾಕಿದರೆ ಮೈ ಮೇಲೆ ಏಳುವ ಚಿಬ್ಬು ಹೋಗುತ್ತದೆ ಎಂಬ ನಂಬಿಕೆ ಇದೆ . ಇನ್ನೊಂದು ಅಂದ್ರೆ ಇಲ್ಲಿರುವ ಒಂದು ದೊಡ್ಡ ಮೀನಿಗೆ ಮೂಗುತಿ ಸುರಿದಿದ್ದಾರೆ ಎಂದು ಕೂಡ ಹೇಳುತ್ತಾರೆ .
೫)ಮುಂದೆ ಹೋದರೆ ಸಿಗುವುದೇ ಮೇಳಿಗೆ - ಇಲ್ಲಿ ನಿಮಗೆ ಪುರಾತನವಾದ ಒಂದು ಜೈನರ ದೇವಾಲಯ ಸಿಗುತ್ತದೆ .
೬) ಕೊನೆಯಲ್ಲಿ ತೀರ್ಥಹಳ್ಳಿ - ಇಲ್ಲಿ ನಿಮಗೆ ಗೊತ್ತಿರುವಂತೆ ಪುರಾತನ ಸೇತುವೆ , ರಾಮ ದೇವಾಲಯ .
ವಿಶೇಷವೆಂದರೆ ರಾವಣನು ಶಿವನ ಆತ್ಮ ಲಿಂಗ ತರುವಾಗ ಗಣಪತಿ ಕೈ ಅಲ್ಲಿ ಸಿಕ್ಕಿ ಅದು ನೆಲಕ್ಕೆ ಅಂಟಿಕೊಂಡು , ಅದನ್ನು ಕೀಳುವ ಪ್ರಯತ್ನದಲ್ಲಿ ಅದಕ್ಕೆ ಬಲವಾಗಿ ಹೊಡೆದಾಗ ಅದರ ಒಂದು ಚೂರು ಇಲ್ಲಿ ಬಂದು ಬಿತ್ತೆಂದು ಹೇಳುತ್ತಾರೆ .
ಹಾಗೆಯೇ ಪರಶುರಾಮ ತನ್ನ ತಾಯಿಯ ಶಿರ ತುಂಡರಿಸಿದ ಕೊಡಲಿಯನ್ನು ಯಲ್ಲಿ ತೊಳೆದರು ಅದರಲ್ಲಿನ ರಕ್ತದ ಕಲೆ ಹೋಗದಿದ್ದಾಗ ಇಲ್ಲಿ ಬಂದು ತೊಳೆದನೆಂದು ಅದು ಹೋಯಿತೆಂದು ಪುರಾಣ ಹೇಳುತ್ತದೆ .ಅದಕ್ಕಾಗೆ ಇಲ್ಲಿ ಹೊಳೆ ಮಧ್ಯೆ ರಾಮನ ಕೊಂಡ ಇದೆ . ಪ್ರತಿ ದಶಂಬರ ದಲ್ಲಿ ಇಲ್ಲಿ ಜಾತ್ರೆ ನಡೆಯುತ್ತೆ (ಎಳ್ಳು ಅಮಾವ್ಯಸೆ).ಕೊನೆ ದಿನ ತೆಪ್ಪೋಸ್ಸವ ನಡಿಯುತ್ತೆ .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಅಷ್ಟು ದೂರ ಬದಿರುತ್ತಿರ ಅಂದ ಮೇಲೆ ಮೊದಲು ನಮ್ಮ ಮನೆಗೆ ಬನ್ನಿ ದಾರಿ ನನ್ನ ಪ್ರೊಫೈಲ್ ಫೋಟೋ ದಲ್ಲಿದೆ >>
ಎಷ್ಟು ಚೆನ್ನಾಗಿ ದಾರಿ ತೋರಿಸ್ತೀಯಪ್ಪ!!! ಈ ಫೋಟೋ ತಗೊಂಡು ಎಲ್ಲರಿಗೂ ತೋರಿಸುತ್ತಾ ಈ ದಾರಿ ಎಲ್ಲಿದೆ ಗೊತ್ತಾ ಅಂತ ಕೇಳಿಕೊಂಡು ಬರ್ತಿವಿ. (ಜನ ನಮಗೆ ಏನಾದರೂ ತಗೊಂಡು ಹೊಡೆಯದಿದ್ದರೆ.!!! :)

ಮೃಗವಧೆಯಲ್ಲಿ ಏನಿದೆ? ಬರೀ ಕಾಡಾ? ಗುಡಿಯೇನಾದ್ರು ಇದೆಯಾ ?

<< ಪರಶುರಾಮ ತನ್ನ ತಾಯಿಯ ಶಿರ ತುಂಡರಿಸಿದ ಕೊಡಲಿಯನ್ನು ಯಲ್ಲಿ ತೊಳೆದರು >>
" " ಯಲ್ಲಿ ? ಎಲ್ಲಿ ?

ಸೇತುವೆ ನ ವಿಶ್ವೇಶ್ವರಯ್ಯ ಕಟ್ಟಿಸಿದ್ದಂತೆ!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಜನ ನಮಗೆ ಏನಾದರೂ ತಗೊಂಡು ಹೊಡೆಯದಿದ್ದರೆ>>
ನಮ್ ಕಡೆಯೋರು ಬಹಳ ಒಳ್ಳೆರು ಅಣ್ಣ , ದೇವಂಗಿ ಅಲ್ಲಿ ಬಂದು ನನ್ ಹೆಸರು ಹೇಳಿ ನಮ್ ಮನೆ ಕೇಳಿ ಅಣ್ಣ ಯಾರದ್ರು ಕರ್ಕೊಂಡು ಬಂದು ಬಿಡ್ತಾರೆ .
<<ಮೃಗವಧೆಯಲ್ಲಿ ಏನಿದೆ? ಬರೀ ಕಾಡಾ? ಗುಡಿಯೇನಾದ್ರು ಇದೆಯಾ ?>>
ದೇವಸ್ಥಾನ ಇದೆ , ಒಂದು ಸಣ್ಣ ನದಿ ಕೂಡ .
<<ಯಲ್ಲಿ ? ಎಲ್ಲಿ ?>.
ತೀರ್ಥಹಳ್ಳಿ ಯಲ್ಲಿ , ರಾಮನಕೊಂಡ ಅಂತ ಇದೆ ಅಲ್ಲಿ .ಹೊಳೆ ಮಧ್ಯದಲ್ಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಹಾಗೆಯೇ ಪರಶುರಾಮ ತನ್ನ ತಾಯಿಯ ಶಿರ ತುಂಡರಿಸಿದ ಕೊಡಲಿಯನ್ನು ಯಲ್ಲಿ ತೊಳೆದರು ಅದರಲ್ಲಿನ ರಕ್ತದ ಕಲೆ ಹೋಗದಿದ್ದಾಗ ಇಲ್ಲಿ ಬಂದು ತೊಳೆದನೆಂದು ಅದು ಹೋಯಿತೆಂದು ಪುರಾಣ ಹೇಳುತ್ತದೆ >>

ಮೊದಲು ತೊಳೆದಿದ್ದು ಎಲ್ಲಿ? ಎಲ್ಲಿ ತೊಳೆದಾಗ ರಕ್ತ ಹೋಗಲಿಲ್ಲ ?????

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಮೊದಲು ತೊಳೆದಿದ್ದು ಎಲ್ಲಿ? ಎಲ್ಲಿ ತೊಳೆದಾಗ ರಕ್ತ ಹೋಗಲಿಲ್ಲ ????>>
ಮೊದಲು ಎಲ್ಲಿ ಎಂದು ನಂಗು ತಿಳಿಯದು ಹರ್ಷಣ್ಣ.
ಇಲ್ಲಿನ ಸ್ಥಳ ಪುರಾಣದ ಪ್ರಕಾರ ಪರಶುರಾಮ ತನ್ನ ತಾಯಿಯ ಶಿರ ಕತ್ತರಿಸಿದ ಕೊಡಲಿಗೆ ಅಂಟಿ ಕೊಂಡಿದ್ದ ರಕ್ತ ಹೋಗಿಸಲು ಅದನ್ನು ಬೇರೆ ಬೇರೆ ನದಿಗಳಲ್ಲಿ (ಆವಾಗ ಬೋರ್ವೆಲ್ ಇರಲಿಲ್ಲ ಹಿ ಹೀ :D ) ತೊಳೆಯುತ್ತಾನೆ .
ಆದರೆ ಎಲ್ಲಿ ಹೋದರು ರಕ್ತದ ಕಲೆ ಮಾತ್ರ ಸಂಪೂರ್ಣವಾಗಿ ಹೋಗುವುದಿಲ್ಲ ,ಆವಾಗ ಅವನು ಬಂದು ತೊಳೆದದ್ದೇ ಈ ನಮ್ಮ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ .
ಇನ್ನು ಹೆಚ್ಚಿನ ವಿವರ ಬೇಕಾದ್ರೆ ಈ ಬಾರಿ ಊರಿಗೆ ಹೋದಾಗ ತಿಳಿದುಕೊಂಡು ಬಂದು ಹೇಳ್ತೀನಿ (ಚಿತ್ರ ಸಹಿತ ).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮಾ ವಿನಯ್

ಎಷ್ಟು ಬೇಗ ಬರೆದುಬಿಟ್ಟಿದ್ದೀಯಲ್ಲಪ್ಪಾ... ನಿಜವಾಗಲು ಈ ಎಲ್ಲ ಜಾಗಗಳನ್ನೂ ನೋಡಬೇಕಾದದ್ದೇ.... ಈಗ ಸಧ್ಯಕ್ಕೆ ಬೆಳಗಿನ ಜಾವ ೩ ಘಂಟೆಗೆ ಹೊರಟು, ದಿಲ್ಲಿಯಿಂದ ಚಾರ್ ಧಾಮ್ ನೋಡಿ ಬರ್ತೀನಿ. ಮುಂದಿನಸಾರಿ ಆ ಕಡೆ ಹೋದಾಗ ಖಂಡಿತಾ ಈ ಜಾಗಗಳನ್ನು ನೋಡಲು ಪ್ರಯತ್ನಿಸುವೆ. ಮಾಹಿತಿಗಾಗಿ, ಅದೂ ಇಷ್ಟು ಬೇಗ ಕೊಟ್ಟದ್ದಕ್ಕಾಗಿ, ತುಂಬಾ ತುಂಬಾ ಧನ್ಯವಾದಗಳು.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಎಷ್ಟು ಬೇಗ ಬರೆದುಬಿಟ್ಟಿದ್ದೀಯಲ್ಲಪ್ಪಾ... ನಿಜವಾಗಲು ಈ ಎಲ್ಲ ಜಾಗಗಳನ್ನೂ ನೋಡಬೇಕಾದದ್ದೇ.... ಈಗ ಸಧ್ಯಕ್ಕೆ ಬೆಳಗಿನ ಜಾವ ೩ ಘಂಟೆಗೆ ಹೊರಟು, ದಿಲ್ಲಿಯಿಂದ ಚಾರ್ ಧಾಮ್ ನೋಡಿ ಬರ್ತೀನಿ. ಮುಂದಿನಸಾರಿ ಆ ಕಡೆ ಹೋದಾಗ ಖಂಡಿತಾ ಈ ಜಾಗಗಳನ್ನು ನೋಡಲು ಪ್ರಯತ್ನಿಸುವೆ>>
ನಿಮ್ಮಿ ಪ್ರತಿಕ್ರಿಯೆಗೆ ಧನ್ಯವಾದಗಳು ಅಕ್ಕ .
ಹಾಗೆಯೇ ನಿಮ್ಮ ಪ್ರಯಾಣ ಶುಭಾಕರವಾಗಿರಲೆಂದು ಹಾರೈಸುತ್ತೇನೆ .
ಇನ್ನೊಂದು , ಇನ್ನೊಮ್ಮೆ ಆ ಕಡೆ ಬಂದಾಗ ನಮ್ಮ ಮನೆ ಕಡೆ ಬರುವುದು ಮರೆಯಬೇಡಿ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್, ಕುಪ್ಪಳ್ಳಿ ಸುತ್ತಮುತ್ತಲಿನ ಸ್ಥಳಗಳ ಮಾಹಿತಿಗೆ ಧನ್ಯವಾದಗಳು.
ಐದು ವರ್ಷಗಳ ಹಿಂದೆ ಶಿವಮೊಗ್ಗೆಯಿಂದ ಕೆಮ್ಮಣ್ಣುಗುಂಡಿ ಗೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಂಡ "ಕವಿಶೈಲ ಕುಪ್ಪಳ್ಳಿಗೆ ದಾರಿ" ಎಂಬ ಫಲಕ ನೋಡಿ ಕುವೆಂಪು ಅವರ ಸುಂದರ ಮನೆ ನೋಡಿ ಸಂತಸಗೊಂಡಿದ್ದೆ. ಕುವೆಂಪು ಅವರಲ್ಲಿ ಅಡಗಿದ್ದ ಕವಿಯನ್ನು ಜಾಗೃತಗೊಳಿಸಿದ್ದ ಇಂಥ ಮನೋಹರ ಪರಿಸರಕ್ಕೆ ಇನ್ನೊಮ್ಮೆ ಭೇಟಿ ನೀಡಬೇಕೆನಿಸುತ್ತಿದೆ. ಇನ್ನೊಮ್ಮೆ ಹೀಗೆ ಬಂದಾಗ ನಿಮ್ಮೂರಿನ ಪಕ್ಕವೂ ಒಂದು ಸುತ್ತು ಹಾಕುತ್ತೇನೆ.
ನನ್ನಂಥ ಬಯಲುಸೀಮೆಯವರು ಶಿವಮೊಗ್ಗೆಯಿಂದ ಪ್ರಾರಂಭಿಸಿ ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಗಳಿಗೆ ಭೇಟಿ ನೀಡಿದರೆ ನಾವು ಕರ್ನಾಟಕದಲ್ಲಿದ್ದೇವೆ ಎಂಬುದನ್ನೇ ಮರೆಯುತ್ತೇವೆ; ಅಂಥ ಸೊಬಗು ಈ ಪ್ರದೇಶಗಳದ್ದು. ದುರ್ದೈವವೆಂದರೆ, ನಮ್ಮ ಪ್ರವಾಸೋದ್ಯಮ ಇಲಾಖೆ ಇವನ್ನು ಹೊರಜಗತ್ತಿಗೆ ಪರಿಣಾಮಕಾರಿಯಾಗಿ ಬಿಂಬಿಸಿಲ್ಲ. ಪ್ರವಾಸಿ ತಾಣಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದನ್ನು ನಾವು ತಮಿಳುನಾಡಿನಿಂದ ಕಲಿಯಬೇಕಿದೆ. ರಣಬಿಸಿಲ ನಾಡಿನಲ್ಲಿ ಒಣಭೂಮಿಯನ್ನೇ ತೋರಿಸಿ ಅವರು ರೊಕ್ಕ ಮಾಡುತ್ತಿದ್ದಾರೆ. ಆದರೆ ನಾವು ಹಸುರಿನಿಂದ ಕೂಡಿದ ತಾಣಗಳನ್ನು ಪ್ರವಾಸಿ ತಾಣಗಳಾಗಿ ಬಿಂಬಿಸುತ್ತಿಲ್ಲ ಎಂದು ನನಗನಿಸುತ್ತಿದೆ.
------------------
http://www.vishwaputa.blogspot.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಿ ಕಳಕಳಿಯ ಪ್ರತಿಕ್ರಿಯೆಗೆ ಧನ್ಯವಾದಗಳು ವಿಶ್ವನಾಥ ಸರ್ .
ನಿಮ್ಮ ಮಾತು ನಿಜವಾಗ್ಲು ಸತ್ಯ , ನಮ್ಮಿ ಸರ್ಕಾರದ ಅಸೆಡ್ಡೆ ಇದಕ್ಕೆಲ್ಲ ಕಾರಣ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.