ಬಾ ಸಖಿ

0

ಹುಸಿ ಮುನಿಸು ತೋರದಿರು ಸಖಿ
ನಿನ್ನ ಹಸನಾದ ಮುಖಕ್ಕಲ್ಲ
ಅದು ಭೂಷಣ ಕಿಸಿ ಕಿಸಿ ಅಂತೊಮ್ಮೆ ನಕ್ಕು
ಖುಷಿಯ ಅಲೆಯನ್ನೊಮ್ಮೆ ನನ್ನ ಬಾಳಲಿ ತಾ

ಬಾಳ ದಾರಿಯಲಿ ಇರಬಹುದು
ನೂರೆಂಟು ಕಲ್ಲುಗಳು ಅಂದ ಮಾತ್ರಕ್ಕೆ
ಬಿಡುವುದೇ ನಡೆಯುವುದನ್ನೇ ?
ಸರಿಸಿ ನೋಡೊಮ್ಮೆ ಆ ಕಲ್ಲುಗಳ
ನೀ ಕಾಣುವೆ ಮೆತ್ತಗಿನ ಹೂವು ಹಾಸಿನ ದಾರಿಯ

ನಾ ಇಡುವ ಪ್ರತಿ ಹೆಜ್ಜೆಯಲೂ ಕಂಡಿಹೆನು
ನಾ ನಿನ್ನ ಮೊಗವ ಆ ಹೆಜ್ಜೆಗೆ
ನಿನ್ನ ಆ ಒಲವೆಂಬ ಪ್ರೀತಿಯ ಸುರಿದು
ಹೆಜ್ಜೆಯೊಳಗಿನ ಗುರುತಾಗಿ ಬಾ

ಬಾಳ ಈ ಪಯಣದಲಿ ಇರುವರು
ನೂರೆಂಟು ಮಂದಿ ನಿನ್ನ ನೋಯಿಸಲು
ಎಲ್ಲವನು ಮರೆತು ಬಾ ಒಮ್ಮೆ ನೀ ನಿಲ್ಲಿ
ಸೇರೆನ್ನ ಈ ಬಂಡಿಯ ಎಳೆಯ ಹೊರಟಿರುವೆನು
ನಾ ಇದ ಒಂಟಿ ಗಾಲಿಯಲಿ .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವಿನಯಣ್ಣಾ....
ಸಖಿಯ ಕರೆಯುತಿರುವಿರಲ್ಲ ಆ ಸಖಿ ಯಾರೆಂದು ತಿಳಿಯಿತೇ?
ಹೋಗಿದ್ರಾ ಹುಡುಗಿಯರ ಹಾಸ್ಟೆಲ್ ಬಳಿ??????

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಸಖಿಯ ಕರೆಯುತಿರುವಿರಲ್ಲ ಆ ಸಖಿ ಯಾರೆಂದು ತಿಳಿಯಿತೇ?>>>
ಮರಳಿ ಯತ್ನವ ಮಾಡು , ಅನ್ನೋ ತರ ಹುಡುಕುವುದೊಂದೇ ಆಗಿದೆ . ಇನ್ನು ಸಿಕ್ಕಿಲ್ಲ :D
<<ಹೋಗಿದ್ರಾ ಹುಡುಗಿಯರ ಹಾಸ್ಟೆಲ್ ಬಳಿ?????>>
ಇಲ್ಲ ಕಣಮ್ಮ , ಸ್ವಲ್ಪ ಹುಷಾರು ಇದ್ದಿಲ್ಲ ಅದಕ್ಕೆ ಆಗ್ಲಿಲ್ಲ . ಈ ಭಾನುವಾರ ನೋಡ್ಬೇಕು :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಬಾಳ ದಾರಿಯಲಿ ಇರಬಹುದು
ನೂರೆಂಟು ಕಲ್ಲುಗಳು ಅಂದ ಮಾತ್ರಕ್ಕೆ
ಬಿಡುವುದೇ ನಡೆಯುವುದನ್ನೇ ?
ಸರಿಸಿ ನೋಡೊಮ್ಮೆ ಆ ಕಲ್ಲುಗಳ
ನೀ ಕಾಣುವೆ ಮೆತ್ತಗಿನ ಹೂವು ಹಾಸಿನ ದಾರಿಯ
--ಈ ಚರಣ ಇಷ್ಟ ಆಯ್ತು..
ಕಿಸಿ ಕಿಸಿ ಅಂತ ನಗುವುದು ಹೇಗೆ?
ಒಲವೆಂಬ ಪ್ರೀತಿ ಅಂದ್ರೆ??
>>ನಾ ಇಡುವ ಪ್ರತಿ ಹೆಜ್ಜೆಯಲಿ ಕಂಡಿಹೆನು
ನಾ ನಿನ್ನಾ ಮೊಗವ ಆ ಹೆಜ್ಜೆಗೆ
--'ನಿನ್ನಾ' ಪದದ ಪ್ರಯೋಗ ಅರ್ಥ ಕೆಡಿಸುತ್ತಿದೆ. 'ನಿನ್ನ' ಸಾಕಾಗಿತ್ತಲ್ವ?
ಕವನದಲ್ಲಿ ಬಹಳ ದೋಷಗಳಿವೆ. ಸರಿಪಡಿಸು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓದಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ವಿನಯಣ್ಣ .
ಹಾಗೆಯೇ ನೀವು ಹೇಳಿದ್ದನ್ನು ಸರಿಪಡಿಸಿದ್ದೇನೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಿ ಚೆನ್ನಾಗಿದೆ ನಿನ್ನ ಸಖಿಯನ್ನು ಕರೆಯುವ ಪರಿ...
ಅಕ್ಕೊ ಹುಡ್ಕು ಹುಡ್ಕು....ಅಂತ ನೀನೆ ಹುಡ್ಕೊಂಬೆಟ್ಟಿದೀಯ....ನಿನ್ ಸಖಿನ........
ಬೀಗ ಸಿಗಲಿ ನಿನ್ನ ಬಂಡಿಗೆ ಇನ್ನೊದು ಗಾಲಿ ಎಂದು ಹಾರೈಸುತ್ತೇನೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ ಹುಡ್ಕೊದೋ ಏನೋ ಅಕ್ಕ .
ನೀವಂತೂ ತಪ್ಪಿಸಿಕೊಳ್ಳೋಕೆ ನೋಡ್ತಾ ಇರ್ತೀರಾ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

chennaagide .. maraLi yatnava mADi :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ .. ಮರಳಿ ಯತ್ನವ ಮಾಡಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶಶಾಂಕ್ ನಿಮ್ಮಿ ಪ್ರತಿಕ್ರಿಯೆಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.