ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-4

0

 

  ಯಾವುದೇ ದೊಡ್ಡ ಅಥವಾ ಚಿಕ್ಕ ಘಟನೆ ನಡೆಯಲಿ ಅಲ್ಲಿ ಯಾರೋ ಒಬ್ಬರನ್ನು ಬಲಿಪಶುವಾಗಿ ಮಾಡಲಾಗುತ್ತದೆ , ಇಲ್ಲಿ ಆಗಿದ್ದು ಹಾಗೆ . F ೧೯ ವಿಮಾನಗಳ ಮುಖ್ಯಸ್ಥನಾಗಿದ್ದ ಟೇಲರ್ ಅನ್ನು ಅದರ ಸಂಶಯಾಸ್ಪದ ಕಣ್ಮರೆಗೆ ಕಾರಣನೆಂದು ಹೇಳಲಾಯಿತು . ಏಪ್ರಿಲ್ ೩ , ೧೯೪೬ ರಲ್ಲಿ ಇದರ ಬಗ್ಗೆ ತನಿಖಾದಳದ ವಿವರ ಇಂತಿದೆ : " ವಿಮಾನದ ಮುಖ್ಯ ಚಾಲಕನ ತಪ್ಪು ಗ್ರಹಿಕೆ , ಗೊಂದಲ ಮತ್ತು ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಇರುವುದೇ ಈ ಅವಘಡಕ್ಕೆ ಕಾರಣ.ತಾನು ಎಲ್ಲಿದ್ದೇನೆ ಅಂತ ಸರಿಯಾಗಿ ತಿಳಿಯದೆ ಇದ್ದರೂ , ಫ್ಲೋರಿಡ ದ್ವೀಪಸಮೂಹಗಳ ಮೇಲೆ ಇರಬಹುದು ಅಂತ ತಾನಾಗೆ ಊಹಿಸಿಕೊಂಡು ಪೂರ್ವದ ಕಡೆಗೆ ವಿಮಾನಗಳನ್ನು ತಿರುಗಿಸಿದ್ದೆ ಅನಾಹುತಕ್ಕೆ ಕಾರಣವಾಯಿತು".

ಆದರೆ ಟೇಲರ್ ಅಮ್ಮ ಮತ್ತು ಚಿಕ್ಕಮ್ಮ ತನಿಖಾದಳದ ಈ ವರದಿ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಅದೇ ವರ್ಷದ ನವೆಂಬರ್ ೧೯ ರಂದು ಅದು ಇನ್ನೊಂದು ವರದಿ ಬಿತ್ತರಿಸಿತು."ಈ ಅವಘಡಕ್ಕೆ ಕಾರಣಗಳು ಇನ್ನು ತಿಳಿಯಲಾಗಿಲ್ಲ" ಅಂತ ಇತ್ತು ಅದು . ತನಿಖಾದಳವೇ ಹೀಗೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟರೆ ಮಾಧ್ಯಮಗಳಿಗೆ ಆಹಾರ ಸಿಕ್ಕಂತೆಯೇ. ಅಲ್ಲಿಂದ ಶುರುವಾಯಿತು ನೋಡಿ ಇದರ ಬಗ್ಗೆ ಇಲ್ಲದ ಕುತೂಹಲ.ಇಲ್ಲಿ ಕೆಲವು ಗಮನಿಸಬೇಕಾದ ಅಂಶಗಳಿವೆ . ಟೇಲರ್ ಹೇಳದ್ದಾನೆಂದು ಹೇಳಲಾಗಿರುವ ಕೆಲವು ಹೇಳಿಕೆಗಳು ಇಲ್ಲಿವೆ : "ಎಲ್ಲವೂ ತಪ್ಪಾಗಿ ಕಾಣುತ್ತಿದೆ , ಸಮುದ್ರ ಕಾಣುತ್ತಿಲ್ಲ , ಇಲ್ಲ ಇಲ್ಲ ಕಾಣುತ್ತಿದೆ ಆದರೆ ಅದು ಹೇಗೆ ಕಾಣಬೇಕಿತ್ತೋ ಹಾಗೆ ಕಾಣುತ್ತಿಲ್ಲ , ಅವರು ಬೇರೆ ಗ್ರಹದವರಂತೆ ಕಾಣುತ್ತಿದ್ದಾರೆ , ಬೇಡ ನನ್ನ ಮೇಲೆ ಬರಬೇಡ ....".ಇದರಲ್ಲಿ ಕೆಲ ಮಾತುಗಳು ನಮ್ಮನ್ನು UFO ಗಳ ಕುರಿತು ಯೋಚಿಸಲು ಪ್ರೇರೇಪಿಸಿದರೆ , ನನ್ನ ಮೇಲೆ ಬರಬೇಡ ಅನ್ನೋದು ಟೇಲರ್ ,ರಾಬರ್ಟ್ಗೆ ಹೇಳಿದ ಮಾತು ಅಂತ ಅವರ ಹಿಂದಿನ ಸಂಭಾಷಣೆಯಿಂದ ತಿಳಿಯುತ್ತೆ .ಅಂತೂ ಆ ವಿಮಾನದ ಕಥೆ ಮುಗೀತು ಅಂತ ಯೋಚಿಸುತ್ತಿರಬೇಕಾದರೆ ಬಂತು ನೋಡಿ ಸುದ್ಧಿ. ೧೯೯೧ ರಲ್ಲಿ ಫ್ಲೋರಿಡ ಸಮುದ್ರ ತೀರದ ೬೦೦ ಅಡಿ ಆಳದಲ್ಲಿ ೫ ವಿಮಾನಗಳ ಅವಶೇಷ ದೊರೆಯಿತು. ಆಮೇಲೆ ನಡೆದ ಪರೀಕ್ಷೆಗಳು ಅದು F ೧೯ ಅಲ್ಲವೆಂದು ರುಜುವಾತು ಪಡಿಸಿದವು.ಅಂತೂ ಕೊನೆಗೂ ಈ ವಿಮಾನಗಳ ಕಣ್ಮರೆ ನಿಗೂಢವಾಗೆ ಉಳಿಯಿತು ಮತ್ತು ಉಳಿದ ಕಣ್ಮರೆಗಳಿಗೆ ವೇದಿಕೆಯಾಯಿತು.

  F-19

ಸಮಯದ ಅಭಾವದಿಂದ ಸಧ್ಯಕ್ಕೆ ಇದಕ್ಕೆ ತಡೆ . ಈ ವಾರಾಂತ್ಯದಲ್ಲಿ ಊರಿಗೆ ಹೋಗುತ್ತಿದ್ದೇನೆ , ಅಲ್ಲಿಂದ ಬಂದಮೇಲೆ ಮುಂದುವರೆಸುತ್ತೇನೆ. ಅಡಚಣೆಗೆ ಕ್ಷಮೆ ಇರಲಿ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.