Bengaluru Decoded 3

0

ಹಲಸೂರು

ಅಲಸೂರು ಇವತ್ತು ಹಲಸೂರು ಆಗಿದೆ. ಹೆಚ್ಚಾಗಿ ತಮಿಳರು ವಾಸಿಸುವ ಈ ಏರಿಯ, ದೇವಸ್ಥಾನಗಳು ಹಾಗು ಇಕ್ಕಟ್ಟಾದ ರಸ್ತೆಗಳಿಗೆ ಪ್ರಸಿಧ್ಧವಾಗಿದೆ.

ಹೆಬ್ಬಾಳ

ಒಂದುಕಾಲದಲ್ಲಿ ಬೆಂಗಳೂರಿನ ಉತ್ತರದ ಕೊನೆ [North End point] ಎಂದು ಗುರುತಿಸಲ್ಪಟ್ಟ ಈ ಸ್ಥಳ ಹೆಬ್ಬಾಳ ಕೆರೆಗೆ ತುಂಬ ಪ್ರಸಿಧ್ಧ. ಇಲ್ಲಿ ದೋಣಿವಿಹಾರಕ್ಕೂ ಅವಕಾಶವಿದೆ. ಇತ್ತೀಚೆಗೆ ನಿರ್ಮಿಸಿದ ಮೇಲುಸೇತುವೆ [fly over] ಒಟ್ಟು ೬.೨೫ KM ಉದ್ದವಿದೆ. ಇದು ಭಾರತದಲ್ಲಿಯೇ ಅತ್ಯಂತ ಉದ್ದವಾದ ಮೇಲುಸೇತುವೆ.

ಹನುಮಂತ ನಗರ

ಇಲ್ಲಿರುವ ರಾಮಾಂಜನೇಯ ದೇವಸ್ಥಾನ ತುಂಬ ಪ್ರಸಿಧ್ಧವಾದದ್ದು. ಮೊದಲು ಇಲ್ಲಿದ್ದದ್ದು ಕೇವಲ ಆಲಿಂಗನ ಮಾಡಿದಂತಹ ರಾಮ ಹಾಗು ಹನುಮನ ವಿಗ್ರಹ [ಕಲ್ಲಿನ ಕೆತ್ತನೆಗಳು]. ನಂತರ ನಗರ ಬೆಳೆದಂತೆ.. ದೇವಸ್ಥಾನ, ಉದ್ಯಾನವನಗಳು ಅಭಿವ್ರುಧ್ಧಿಗೊಂಡವು. ಇಲ್ಲಿ ಬೆಂಗಳೂರಿನ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆ ಪರಿಸರ ಮಲಿನ್ಯವಿದೆ. ಈ ಪ್ರದೇಶಕ್ಕೆ ರಾಮನ ಬಂಟನ ಹೆಸರನ್ನು ಇಡಲಾಗಿದೆ. ಬಸವನಗುಡಿಗೆ ಹತ್ತಿಕೊಂಡಿರುವ ಇಲ್ಲಿ ಹಲವಾರು ಉದ್ಯಾನವನಗಳು, ಮಠ ಮಂದಿರಗಳಿವೆ.

ಜಯನಗರ:

ಜಯನಗರ = "ಗೆಲುವಿನ ಪ್ರದೇಶ" [Victory City], ಇದು ಬೆಂಗಳೂರಿನ ಪ್ರತಿಷ್ಠಿತ ಬಡವಣೆಗಳಲ್ಲಿ ಒಂದು.

ಒಂದುಕಾಲದಲ್ಲಿ ಬೆಂಗಳೂರಿನ ದಕ್ಷಿಣದ ಕೊನೆಯಾಗಿತ್ತು.

"South End Circle" ಇಲ್ಲಿ ೬ ರಸ್ತೆಗಳು ಸೇರುತ್ತವೆ. ಅಶೋಕ ಸ್ಥಂಬ [Ashoka Pillar] ಇರುವುದು ಜಯನಗರ ೧ನೇ ಬ್ಲಾಕ್ ನಲ್ಲಿ ನಗರ ಬೆಳೆದಂತೆ, ಇಂದು ಜಯನಗರ ಬೆಂಗಳೂರಿನ ಮಧ್ಯಭಾಗ ಎಂಬಂತಾಗಿದೆ.

ಜಯನಗರ ೪ನೇ ಬ್ಲಾಕ್ ಒಂದು ವ್ಯಾಪಾರೀ ಕೇಂದ್ರ. ಇಲ್ಲಿನ BDA complex ಎಲ್ಲ BDA complex ಗಳಿಗಿಂತ ದೊಡ್ಡದು.

J P ನಗರ
"ಜಯಪ್ರಕಾಶ ನಾರಯಣ ನಗರ" ಇದು ಇಂದಿನ J P ನಗರದ ವಿಸ್ತ್ರುತ ರೂಪ. ಚಿತ್ರ ನಟರು, ಹಾಡುಗಾರರು, ರಾಜಕೀಯ ವ್ಯಕ್ತಿಗಳ ವಾಸಸ್ಥಾನ... ಇಲ್ಲಿ ವಾಸವಾಗಿರುವ ಹಲವರ ಹೆಸರುಗಳು.
೧. ಅಂಬರೀಶ [ಮಂಡ್ಯದ ಗಂಡು]
೨. ಗಿರೀಶ ಕಾರ್ನಾಡ [ಲೇಖಕರು]
೩. ಚಿತ್ರ ನಟಿ ತಾರಾ
೪. ಸುದೀಪ
೫. ಕುಮಾರಣ್ಣ [HDK]
೬. ಪಿ ಜಿ ಆರ್ ಸಿಂಧಿಯಾ.
೭. ಯಡ್ಯೂರಪ್ಪ
ಇತ್ಯಾದಿ...

ಜೀವನಭೀಮಾ ನಗರ [ಜೀವನ ವಿಮಾ ನಗರ]

ಒಂದುಕಾಲದಲ್ಲಿ ಇದು LIC ಹಾಗು KPWD ಉದ್ಯೋಗಿಗಳಿಗಾಗಿ ಮೀಸಲಿಟ್ಟ ಪ್ರದೇಶ. ಇಲ್ಲಿ ಹಲವಾರು LIC ಹಾಗು KPWD quarters ಗಳಿವೆ. L,M,N,P ಪ್ರಕಾರದ quarters ಗಳು LIC ಉದ್ಯೋಗಿಗಳಿಗೆ ಮೀಸಲಾಗಿದ್ದರೆ A,D ಗಳು KPWD ನೌಕರರಿಗೆ.
ವಿದ್ಯಾರಣ್ಯಪುರ
ಇದರ ಮೊದಲಿನ ಹೆಸರು "ನರಸೀಪುರ". ಇದು ಬೆಂಗಳೂರಿನ ಉತ್ತರಕ್ಕಿದ್ದು ಬ್ಯಾಟರಾಯನಪುರ ಪುರಸಭಾವ್ಯಾಪ್ತಿಗೆ ಒಳಪಟ್ಟಿತ್ತು, ಪ್ರಸಕ್ತ ಇದು BBMP ವ್ಯಾಪ್ತಿಯ ಬಡಾವಣೆ. ಮಹಾಕವಿ ವಿದ್ಯಾರಣ್ಯ ಹೆಸರಿನ ಈ ಪ್ರದೇಶದಲ್ಲಿಯೇ ಬೆಂಗಳೂರಿನ ಸ್ಥಾಪಕ ಕೆಂಪೇಗೌಡರು ಜನಿಸಿದರೆಂದು ಹಲವರ ಅಂಬೋಣ. [ಇದರ ಸತ್ಯಾಸ್ತ್ಯತೆಯ ಕುರಿತು ನನಗೆ ಮಾಹಿತಿಯಿಲ್ಲ ಗೊತ್ತಿದ್ದವರು ತಿಳಿಸಿ]

ಕೆಂಗೇರಿ
ಇವತ್ತು ಕೆಂಗೇರಿ ಪ್ರಸಿಧ್ಧಿ ಪಡೆದಿರುವುದು ವ್ರುಶಭಾವತಿ ನದಿಯಿಂದಾಗಿ. ಈ ನದಿ ಬೆಂಗಳೂರಿನ ಎಲ್ಲ ಚರಂಡಿ ನೀರನ್ನು ನಗರದಿಂದ ಹೊರಗಡೆ ಒಯ್ಯುತ್ತದೆ. ಈ ನೀರಿನ ಸಂಸ್ಕರಣೆ ಗೆ ಅಲ್ಲಲ್ಲಿ ಘಟಕಗಳಿದ್ದರೂ ಅವು ಕೆಂಗೇರಿಯಲ್ಲಿ ಗಬ್ಬು ವಾಸನೆ ತಡೆಯುವಲ್ಲಿ ಸಂಪೂರ್ಣ ಯಶಸ್ವಿ ಆಗಿಲ್ಲ. ಮೈಸೂರು ರಸ್ತೆಗೆ ಅಂಟಿಕೊಂಡಿರುವ ಈ ಪ್ರದೇಶ innovative film city [Bidadi] ಗೆ ಹಾಗು wondela ಗೆ ಸ್ವಲ್ಪ ಸನಿಹ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮ ಅಜ್ಜಿ (ಅಮ್ಮನ ಅಮ್ಮ) ಹನುಮಂತನಗರದಲ್ಲೇ ಇದ್ದಿದ್ದು.
ಅಜ್ಜಿ ಮನೆಗೆ ಹೋದಾಗಲೆಲ್ಲ ರಾಮಾಂಜನೇಯ ದೇವಾಲಯ, ಹಾಗೇ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಪಂಚಮುಖಿ ಗಣಪತಿ ದೇವಾಲಯಗಳಿಗೆ, ಅಜ್ಜಿ ಕರೆದುಕೊಂಡು ಹೋಗ್ತಿದ್ರು.

ನನ್ನ ಸೋದರಮಾವನ ಮನೆ ರಾಮಾಂಜನೇಯ ದೇವಾಲಯದ ಬಳಿಯೇ ಇರೋದು. ಅವರ ಮನೆಗೆ ಹೋಗ್ತಿರ್ತೀನಿ, ಆದ್ರೆ, ದೇವಸ್ಥಾನಕ್ಕೆ ಹೋಗೊಕೆ ಆಗ್ತಿಲ್ಲ. :(
ಬಿಡುವು ಮಾಡಿಕೊಂದು ಹೋಗಬೇಕು.

ತುಂಬಾ ಚೆನ್ನಾಗಿದೆ ಈ ದೇವಾಲಯಗಳು.

ವಿನಾಯಕ್,
Bengaluru Decoded ಸರಣಿ ಚೆನ್ನಾಗಿ ಮೂಡಿ ಬರ್ತಿದೆ.

ಹೀಗೇ ಮುಂದುವರೆಸಿ.

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶಃ ಇನ್ನೊಂದು ಭಾಗ ಬರಬಹುದು ಅಶ್ಟೇ.......
Email Database ಖಾಲಿ ಆಗ್ತಿದೆ... :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್!!! ಹೌದಾ?

ಪರ್ವಾಗಿಲ್ಲ ಬಿಡಿ. :)

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹನುಮಂತ ನಗರ ಖರೇ ಅಂದ್ರ ಬರೇ ಗುಡಿಗಳಿಗಾಗಿ ಪ್ರಸಿದ್ಧ . ಆದ್ರ commercial view point ನಿಂದ

ಬಾಜೂ ಇರುವ ಶ್ರೀನಿವಾಸ ನಗರ ಛಲೋ ಅದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರಾಗ ಯಾವ ಏರಿಯಾ commercial ಆಗಿಲ್ಲಂತ ಹೇಳ್ರಿ.. ಎಲ್ಲಾದರ್ದು ಹಣೇಬಾರ ಹಂಗ ಆಗೇದ....

ನಿಮ್ಮೂರ್ ಯಾವ್ದು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಾಯಕರೇ,

ಸರಣಿ ಚೆನ್ನಾಗಿ ಬರುತ್ತಿದೆ...

> ಜೀವನಭೀಮಾ ನಗರ [ಜೀವನ ವಿಮಾ ನಗರ]

ಈ ಹೆಸರಿಗೂ ಭೀಮನಿಗೂ ಸಂಬಂಧವಿಲ್ಲ :) ಭಾರತದ ಹಲವು ನುಡಿಗಳಲ್ಲಿ ವಿಮಾ = ಬಿಮಾ.
ಹಾಗಾಗಿ ಇದು, ಜೀವನ ಬಿಮಾ ನಗರ, ಭೀಮಾ ಅಲ್ಲ :)

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಸ್ ಗಳಲ್ಲಿ "ಜೀವನ ಭೀಮಾ ನಗರ" ಎಂದೇ ಬರೆಯುತ್ತಾರೆ ಅದಕ್ಕೇ ನಾನೂ ಹಾಗೇ ಬರೆದೆ....
ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ಜೀವನಬಿಮಾನಗರ ಆಗಬೇಕಿತ್ತು. ಯಾವ ಓದದವನು ಭೀಮನಿಗೆ ಸಂಬಂಧ ಕಲ್ಪಿಸಿದನೋ. ಇದು ನಿಜವಾಗಿ ಜೀವನ್‍ಬಿಮಾನಗರವೆಂದೇ ಆಗಬೇಕಿತ್ತು. ವ->ಬ ಆದರೆ ಭ ಅಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.