ಸಂಪದಿಗರೆ ನೀವು ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಎಚ್ಚರ !

0

ಸಂಪದಿಗರೆ ನೀವು ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಎಚ್ಚರ !

ನೀವು ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದಲ್ಲಿ ದಯವಿಟ್ಟು ನಿಮ್ಮ ಖಾತೆಯಲ್ಲಿರುವ ಮೊತ್ತದ ಬಗ್ಗೆ ಸದಾ ಎಚ್ಚರದಿಂದಿರಿ, ಯಾಕೆಂದರೆ ಐಸಿಐಸಿಐ ಬ್ಯಾಂಕ್ ಖಾತೆದಾರರಿಗೆ ಯಾವ ಮುನ್ಸೂಚನೆಯನ್ನೂ ಕೊಡದೆ ಖಾತೆಯಲ್ಲಿರುವ ಹಣವನ್ನು ಬ್ಲಾಕ್ ಮಾಡುತ್ತಾರೆ ಮತ್ತು ಹಿಂದಿರುಗಿಸಲು 1 ವಾರದ ಅವಧಿ ಕೇಳುತ್ತಾರೆ. ಈಗ ನನ್ನ ಅನುಭವ ಕೇಳಿ,

ನಾನು ಈ ಬ್ಯಾಂಕ್ ನಲ್ಲಿ 2007 ಸೆಪ್ಟಂಬರ್ ನಲ್ಲಿ ಉಳಿತಾಯ ಖಾತೆ ತೆರೆದೆ ಅದಕ್ಕೆ ಮುಂಚೆ ಸುಮಾರು 5 ವರ್ಷಗಳು ದೇಶದಿಂದ ಹೊರಗೆ ಇದ್ದೆ ಇಲ್ಲಿಯವರೆಗೂ ಯಾವುದೇ ತೊಂದರೆ ಇರಲಿಲ್ಲ (ಕೊಡೈಕೆನಾಲ್ ನಲ್ಲಿ ಮೇ ತಿಂಗಳಲ್ಲಿ ಪ್ರವಾಸ ಹೋದಾಗ ಆದ ಒಂದು ತೊಂದರೆ ಬಿಟ್ಟು - ಅದರ ಬಗ್ಗೆ ನಂತರ ಬರೆಯುತ್ತೇನೆ) . ನೆನ್ನೆ ಅಂದರೆ 26 ಜೂನ್, ನನ್ನ ಖಾತೆಗೆ ನಮ್ಮ ಕಂಪನಿಯಿಂದ ಸಂಬಳ ವರ್ಗಾವಣೆ ಆಯಿತು ಮೊಬೈಲ್ ಗೆ ಸಂದೇಶ ಬಂತು ನೋಡಿದರೆ ಸಂದಾಯವಾಗಿರುವ ಮೊತ್ತ ಹಾಗು ಉಪಲಭ್ದವಿರುವ ಮೊತ್ತದಲ್ಲಿ ವೆತ್ಯಾಸ !! ಸುಮಾರು 45000 ರುಪಾಯಿಗಳು. ಘಾಬರಿಯಿಂದ Phone Banking ಗೆ ಕಾಲ್ ಮಾಡಿದರೆ ಅವರು ಹೇಳ್ತಾರೆ ನಿಮ್ಮ Credit Card Outstanding ಗೆ ಈ ಹಣ ಜಮಾ ಮಾಡಬೇಕಿದೆ ಆದ್ದರಿಂದ ಆ ಮೊತ್ತವನ್ನ ಬ್ಲಾಕ್ ಮಾಡಲಾಗಿದೆ ಎಂಬ ಉತ್ತರ ಬಂತು...ನನಗೋ ಪರಮ ಆಶ್ಚರ್ಯ.. !!! ಕೇಳಿದೆ, ತಾವು ನನಗೆ ಯಾವಾಗ Credit Card ವಿತರಣೆ ಮಾಡಿದ್ರಿ ಯಾಕೆಂದ್ರೆ ನನ ಹತ್ರ ಐಸಿಐಸಿಐ ಒಂದೇ ಅಲ್ಲ ಬೇರೆ ಯಾವ ಬ್ಯಾಂಕ್ ಗಳಿಂದಲೂ ಸಹ ಯಾವುದೇ Credit Card ಇಲ್ಲ ಹಾಗಿದ್ದ ಮೇಲೆ ನೀವು ಹೇಗೆ ಹಣವನ್ನು ಬ್ಲಾಕ್ ಮಾಡ್ತೀರ ಅಂತಾ...!!!!

ಅದಕ್ಕೆ ಅವರ ಉತ್ತರ ಎನು ಗೊತ್ತೆ ? ನನ್ನದೇ ಹೆಸರು ಮತ್ತು ನನ್ನ ಜನ್ಮ ದಿನಾಂಕ ಹೊಂದಿರುವ ಯಾರದೊ Credit Card ಇಸವಿ 2001 ರಿಂದ Outstanding ಇದೆಯಂತೆ ಅದಕ್ಕೆ ಅದು ನನ್ನದೇ ಇರಬಹುದು ಅಂತಾ ಬ್ಲಾಕ್ ಮಾಡಿದ್ರಂತೆ....!!!!

ಸರಿ ನನ್ನಲ್ಲಿ ಯಾವ Credit Card ಇಲ್ಲ ಮತ್ತು ನಾನು ICICI Bank ಗೆ ಯಾವ ರೀತಿಯಿಂದಲೂ ಸಾಲಗಾರನಲ್ಲ ದಯಮಾಡಿ ನನ್ನ ಹಣವನ್ನು ಹಿಂದಿರುಗಿಸಿ ಎಂದಾಗ, "ಒಂದು ವಾರ ಕಾಯಿರಿ ನಾವು ಮತ್ತೆ ಪರಿಶೀಲಿಸಿ ನಿಮಗೆ ತಿಳಿಸುತ್ತೇವೆ" ಎಂಬ ಉತ್ತರ ಬಂತು.

" ಮತ್ತೆ ಹಣ ಬ್ಲಾಕ್ ಮಾಡುವ ಮೊದಲು ನನ್ನ ಬಳಿ ವಿಚಾರಿಸಬಹುದಿತ್ತಲ್ಲ ಅದೂ ಅಲ್ಲದೆ ನಾನು ನಿಮಗೆ ಈ ರೀತಿ ಹಣ ಬ್ಲಾಕ್ ಮಾಡಿಕೊಳ್ಳಬಹುದು ಅಂತಾ ಯಾವ ಅರ್ಜಿಯಲ್ಲು ಸಹಿ ಹಾಕಿರಲಿಲ್ಲವಲ್ಲ ನೀವು ನನ್ನ ಖಾತೆಯಿಂದ ಹೇಗೆ ಹಣ ಬ್ಲಾಕ್ ಮಾಡುವಿರಿ" ಎನ್ನುವ ನನ್ನ ಪ್ರೆಶ್ನೆಗೆ ಅವರ ಉತ್ತರ.. " ಒಂದು ವೇಳೆ ನೀವೆ ಸಾಲಗಾರರಾಗಿದ್ದಲ್ಲಿ..ನಿಮಗೆ ನಾವೆ ಮುಂಚಿತವಾಗಿ ತಿಳಿಸಿದ ಪಕ್ಶದಲ್ಲಿ ನೀವು ಎಲ್ಲ ಹಣವನ್ನು Withdraw ಮಾಡ್ತಿರಲ್ಲ ಅದಕ್ಕೆ ಹೇಳಿಲ್ಲ" ಎಂಬ ಉತ್ತರ ಬಂತು !!!

ನನ್ನ ಇನ್ನೊಂದು ಪ್ರೆಶ್ನೆ.. "ಸರಿ ಹಾಗೊಂದು ವೇಳೆ ನಾನು ನಿಮ್ಮ ಬ್ಯಾಂಕ್ ಗೆ ನಾನು 2001 ರಲ್ಲಿ ಸಾಲಗಾರನಾಗಿ ಮತ್ತು ಹಣ ಹಿಂದಿರುಗಿಸದೆ ಮೋಸ ಮಾಡಿದ್ದಲ್ಲಿ 2007 ಗೆ ಮತ್ತೆ ಬಂದು ಸೇವಿಂಗ್ಸ್ ಖಾತೆ ಯಾಕೆ ತೆಗೆಯುತ್ತಿದ್ದೆ ಮತ್ತು ನಮ್ಮ ಕಂಪನಿಯವರಿಗೆ ಇಲ್ಲಿ ನನ್ನ Salary ಹಾಕಿ ಅಂತ ಯಾಕೆ ಹೇಳುತ್ತಿದ್ದೆ ? ಹಾಗೂ 2 ವರ್ಶದಿಂದ ಗೊತ್ತಾಗದಿದ್ದಿದ್ದು ಈಗ ಹೇಗೆ ? " ಅಂದರೆ ಅದಕ್ಕೆ ಅವರ ಬಳಿ ಸಮಂಜಸ ಉತ್ತರ ಬರಲಿಲ್ಲ. ಅದೂ ಅಲ್ಲದೆ ಸಾಧಾರಣವಾಗಿ ದೂರುಗಳನ್ನ ದೂರವಾಣಿ ಮುಖಾಂತರ ಕೊಟ್ಟಾಗ ಬ್ಯಾಂಕ್ ನವರು ನೀಡುವ Reference Number/Complaint Number ಸಹ ಅವರು ಕೊಡರು ಸಿದ್ದರಿಲ್ಲ.

" ನೀವು ಒಂದು ವಾರದ ನಂತರ ನಿಮ್ಮ Account Check ಮಾಡಿ ಒಂದು ವೇಳೆ ನಿಮ್ಮ ಹಣ ಬಿಡುಗಡೆ ಆಗಿಲ್ಲದಿದ್ದರೆ ಮತ್ತೆ ನಮಗೆ Phone ಮಾಡಿ" ಎಂದು ದೂರವಾಣಿ ಸಂಭಾಷಣೆ ಮುಗಿಸಿದರು.

ಇದು ಒಬ್ಬ ಗ್ರಾಹಕನೊಂದಿಗೆ ಬ್ಯಾಂಕ್ ನಡೆದು ಕೊಂಡ ರೀತಿ ಎಷ್ಟು ಸರಿ ?

ಯಾವ ಮುನ್ಸೂಚನೆಯನ್ನೂ ಕೊಡದೆ, ಸರಿಯಾಗಿ ಪರಿಶೀಲನೆ ಮಾಡದೆ, 2 ವರ್ಷಗಳಿಂದ ಚಾಲ್ತಿಯಲ್ಲಿರುವ ಖಾತೆಯಿಂದ ಏಕಾಏಕಿ 45000 ದಷ್ಟು ಹಣವನ್ನು ಈ ರೀತಿ ಬ್ಲಾಕ್ ಮಾಡಿ 1 ವಾರ ಕಾಯಿರಿ ಎನ್ನುವ ಉತ್ತರ ನೀಡುವುದು ಎಷ್ಟು ಸರಿ?

ಪುಣ್ಯಕ್ಕೆ ನನ್ನ ಯಾವ ಚೆಕ್ ಗಳು Clearance ಗೆ ಬರುವವು ಇಲ್ಲ, ಆದರೆ ಒಂದು ವೇಳೆ ಯಾವುದಾದರೂ ಚೆಕ್ ಬರುವುದು ಇದ್ದರೆ (PDC) ಅದು ಬಂದು ಬೌನ್ಸ್ ಆದರೆ ಮುಂದಿನ ಪರಿಣಾಮಗಳಿಗೆ ಯಾರು ಹೊಣೆ ?

Written Complaint ತೆಗೆದುಕೊಂಡು Branch Manager (ICICI Bank - Langford Road branch) ನೋಡಲು ನಾಳೆ ಹೋಗುತ್ತಿದ್ದೇನೆ. ಅಲ್ಲಿ ಏನಾಯಿತು ಎಂದು ನಂತರ ಇಲ್ಲಿ ಬರೆಯುತ್ತೇನೆ.

ಒಂದು ವೇಳೆ ನನ್ನ ಹಣ ಹಿಂದಿರುಗದಿದ್ದಲ್ಲಿ ನಾನು ಅದನ್ನ ಹೇಗೆ ವಾಪಸ್ ಪಡೆಯಬೇಕು ಅಂತ ಯಾರಾದರೂ ಸಂಪದಿಗರು ಸಲಹೆ / ಮಾರ್ಗದರ್ಶನ ಕೊಟ್ಟರೆ ಅವರಿಗೆ ನಾನು ಚಿರ ಋಣಿ.

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದು ಸಧ್ಯಕ್ಕೆ ನಮ್ಮ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕುಗಳಲ್ಲೇ ಅತಿ ದೊಡ್ಡ ದರಿದ್ರ ಬ್ಯಾಂಕು ಎಂದು ನನ್ನ ಅಭಿಪ್ರಾಯ. ನಾನಿದ್ದ ಲಗ್ಗೆರೆಯಲ್ಲಿ ಒಮ್ಮೆ ಈ ಐಸಿಐಸಿಐ ಬ್ಯಾಂಕಿನ ಮಹಾನುಭಾವರ ಉಪಟಳ ತಡೆಯಲಾಗದೆ ವ್ಯಕ್ತಿಯೊಬ್ಬರು ಸಾವಿಗೆ ಶರಣಾದಾಗ, ನಮ್ಮ " ಕರ್ನಾಟಕ ರಕ್ಷಣಾ ವೇದಿಕೆ"ಯ ನಾರಾಯಣ ಗೌಡರ ಹುಡುಗರು ಸಂಬಂಧಿಸಿದವರನ್ನು ಚೆನ್ನಾಗಿ ತದುಕಿ, ಒಂದು ದೊಡ್ಡ ಆಂದೋಲನವನ್ನೇ ಮಾಡಿ, ಆ ದರಿದ್ರ ಬ್ಯಾಂಕಿನ " ಮಲ್ಲೇಶ್ವರಂ" ಶಾಖೆಯ ಬಾಗಿಲು ಮುಚ್ಚಿಸಿದ್ದರು. ಬೇಕಾದರೆ ಅವರ ನೆರವು ಪಡೆಯಬಹುದು.http://karnatakarakshanavedike.org/modes/view/17/president, ಇಲ್ಲಿ ಅವರನ್ನು ಸಂಪರ್ಕಿಸಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅನುಭವ ಬಹು ಕಟು ಅನುಭವ.
ನೀಮ್ಮ ಆನ್‌ಲೈನ್ ಮೂಲಕ ನೀವು ದೂರು ಕೊಡಬಹುದು. ದೂರವಾಣಿ ಮೂಲಕ ದೂರು ನೀಡುವುದಕ್ಕಿಂತ ಹೆಚ್ಚಿನ ವೈಯುಕ್ತಿಕ ಉತ್ತರ ನಿಮಗೆ ಸಿಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

http://www.deccanherald.com/content/8679/banks-need-give-details-fund.html
ಆ ಲೇಕನ ಸಹಾಯಕವಾಗಬಹುದು. ಆ ಮಂತ್ರಿಗಳಿಗೂ ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಜಯ್‌, ನಿಮ್ಮ ದೂರನ್ನು ಸುದ್ದಿಯಾಗಿ ಮಾಡಬಹುದೆ? ಇವತ್ತು ಬ್ಯಾಂಕ್‌ನಲ್ಲಿ ವಿಚಾರಿಸಿ. ಹಾಗೇ ಅವರು ಹಣ ಬ್ಲಾಕ್‌ ಮಾಡಿದ್ದರ ಬಗ್ಗೆ ನಿಮ್ಮ ಅಕೌಂಟ್‌ ಬುಕ್‌ ಅಪ್‌ಡೇಟ್‌ ಮಾಡಿಸಿ. ನೀವು ಸಿದ್ಧರಿದ್ದರೆ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿ ಮಾಡುವುದು ಸುಲಭವಾಗುತ್ತದೆ.

ದೂರು ನೀಡುವುದಾದರೆ, chamarajs AT gmail DOT com ಮೇಲ್‌ ವಿಳಾಸಕ್ಕೆ ನಿಮ್ಮ ದೂರವಾಣಿ, ವಿಳಾಸದ ಮೂಲಕ ಸಂಪರ್ಕಿಸಿ. ನಿಮ್ಮ ಸಮಸ್ಯೆ ಗಂಭೀರವಾಗಿದ್ದರೆ, ವಕೀಲರ ನೆರವು ಸಹ ಒದಗಿಸಬಲ್ಲೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಸವಡಿಯವರೆ,

ನಿಮ್ಮ ಸಹಾಯದ ಭರವಸೆಗಳಿಗೆ ಧನ್ಯವಾದಗಳು. ಇನ್ನು ಒಂದು ದಿನ ಕಾದು ನೋಡೋಣ. ಬಹುಶ: ಎಲ್ಲ ಸರಿ ಹೋಗಬಹುದು.

ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಹೃದಯ ಸಂಪದಿಗರೆ

ನಿಮ್ಮ ಎಲ್ಲರ ಪ್ರತಿಕ್ರಿಯೆ ಹಾಗೂ ಸಹಾಯಕ್ಕೆ ಧನ್ಯವಾದಗಳು. ನೆನ್ನೆ ನಾನು Branch Manager ಅವರನ್ನ ಸಂಪರ್ಕಿಸಿ ಲಿಖಿತ ದೂರನ್ನು ಕೊಟ್ಟಿದ್ದೇನೆ. ಇಂದು ಸಂಜೆಯ ಓಳಗಾಗಿ ಸರಿಪಡಿಸುವ ಭರವಸೆ ನೀಡಿದ್ದಾರೆ. ಬಹುಶ: ಇಂದು ಇತ್ಯರ್ಥ ಆಗಬಹುದು.

ಓಂದು ವೇಳೆ ಇತ್ಯರ್ಥ ಆಗದಿದ್ದರೆ ಮುಂದಿನ ಪ್ರಯತ್ನಗಳನ್ನ ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.