ಮೈಕೆಲ್ ಜಾಕ್ಸನ್ ನಮ್ಮಿಂದ ಅಗಲಿ ಒಂದು ವರುಷ...

5

ರಾಜ್ ಕುಮಾರ್, ಎಸ್ ಪಿ ಬಿ, ಪಿ ಬಿ ಶ್ರೀನಿವಾಸ್, ಜೇಸುದಾಸ್, ಘಂಟಸಾಲ ಇವರೆಲ್ಲರ ದ್ವನಿಗಳು..ಸಾಹಿತ್ಯ...ಭಾವನೆ....ಎಲ್ಲದರೊಡಗೆ...
ಎಲ್ಲೋ ಒಂದು ಕಡೆ...ನನಗೆ ಗೊತ್ತಿಲ್ಲದಂತೆ ನನ್ನನ್ನು ಆಕ್ರಮಿಸಿಕೊಂಡ ಮತ್ತೊಂದು ಧ್ವನಿ...ಈ ’ಎಮ್ ಜೆ’

ಅವನ ಆ ಹಾಡುಗಳನ್ನ ಕಷ್ಟಪಟ್ಟು ಅರ್ಥ ಮಾಡಿಕೊಂಡು (ಆಂಗ್ಲ ಭಾಷೆಯ ಬಗ್ಗೆ ನನಗಿದ್ದ ಅಲ್ಪ ಜ್ನಾನ... ಅಂದಿನ ಕಾಲಕ್ಕೆ...) ಆ ಸಂಗೀತ.....ಆ ಸಾಹಿತ್ಯ...೧೦-೨೦ ಸಲ ಕೇಳಿದರೂ ಅರ್ಥವಾಗದಿದ್ದ ಕಾಲದಿಂದಲೂ ನನಗೆ ಅವನೆಂದರೆ...ಅವನ ಹಾಡೆಂದರೆ.....ಬಹಳ ಇಷ್ಟ....

ಅವನು ಸತ್ತು ಇಂದಿಗೆ ೧ ವರುಷ...

ಅವನ ವೈಯುಕ್ತಿಕ ಜೀವನದ ಬಗ್ಗೆಯಾಗಲಿ, ಅಥವಾ ಆತನ ಬಗ್ಗೆ ಈಗಲು ಪ್ರಚಲಿತವಿರುವ ದಂತ ಕಥೆಗಳ ಬಗ್ಗೆಗಾಗಲೀ ನನಗೇ ಯಾವ ಆಸಕ್ತಿಯೂ ಇಲ್ಲ....ಆದರೆ..ಅವನ ಹಾಡುಗಳು...ಆ ಸಂಗೀತ..ಎಂದಿಗೂ ಅಜರಾಮರ.

ನನ್ನ ಅಭಿಪ್ರಾಯ ಇನ್ನೊಬ್ಬ ’ಎಮ್ ಜೆ’, ಇನ್ನೊಬ್ಬ ’ರಾಜ್’. ಇನ್ನೊಬ್ಬ ’ಸಿ ಅಶ್ವಥ್’ .....ಬಹುಷ: ಬರಲಾರರು...ಆದರೆ ಅವರು ಇಂದಿಗೂ ನನ್ನಂತ ಸಾವಿರಾರು, ಲಕ್ಶಾಂತರ ಸಾಮಾನ್ಯ ಜನಗಳ ಮನಸಿನಲ್ಲಿ ಎಂದೆಂದಿಗೂ ಅಳಿಸಲಾರದಂತೆ...ಅಜರಾಮರಾಗಿರುವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಿಜಯ್ ರವರೆ ವಂದನೆಗಳು. ನಾನೂ ಮೈಕೆಲ್ ಜಾಕ್ಸನ್ ರ ಹಾಡಿನ ಅಭಿಮಾನಿಗಳಲ್ಲೊಬ್ಬ.ನೆನಪಿಸಿದ ತಮಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಜಯ್ ನಾನು ಕೂಡ ಎಂಜೆ ಅಭಿಮಾನಿ. ಡಿಪ್ಲೊಮೊ ಓದುತ್ತಿದ್ದ ಸಂದರ್ಭದಲ್ಲಿ ಅವನ ಮೂನ್ ವಾಕ್ ನನ್ನನ್ನು ಡ್ಯಾನ್ಸ್ ಮಾಡಲು ಪ್ರೇರಿಪಿಸಿತ್ತು. ನಂತರದ ದಿನಗಳಲ್ಲಿ ನಾನು ಹಲವಾರು ಡ್ಯಾನ್ಸ್ ಕಾರ್ಯಕ್ರಮಗಳನ್ನು ನೀಡಿದ್ದೆ. ಹಳೆಯದನ್ನು ಮೆಲಕು ಹಾಕುವಂತೆ ಮಾಡಿದ್ದಕ್ಕೆ ಧನ್ಯವಾದಗಳು. ಮತ್ತೊಬ್ಬ ಎಂಜೆ ನೋಡಲೂ ಸಾಧ್ಯವೇ ಇಲ್ಲ. ಅವನಿಗೆ ಅವನೇ ಸಾಟಿ. ಅವನ ಆತ್ಮಕ್ಕೆ ಚಿರ ಶಾಂತಿ ಕೋರೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ ಆತ್ರೇಯ ರೇ ನಮ್ಮ ಮುಂದಿನ ಸಂ ಮಿಲನಕ್ಕೆ ಒಳ್ಳೆಯ ಡ್ಯಾನ್ಸರ್ ಸಿಕ್ಕಿದರು ನಾಡಿಗರ ಹೆಸರು ಬರ್ಕೊಳ್ಳಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಗೀತಕ್ಕೆ ಭಾಷೆ ದೇಶಗಳ ಗಡಿಯಿಲ್ಲವೆನ್ನುವುದಕ್ಕೆ ಎಮ್ಜೆ ಉತ್ತಮ ಉದಾಹರಣೆ. ಅ೦ದ ಹಾಗೆ ಹ್ಯಾಟ್ಸಾಫ್ ಕಣ್ರೀ ನಾಡಿಗರೆ, ಮು೦ದಿನ ಸ೦ಮಿಲನದಲ್ಲಿ ನಿಮ್ಮ ನರ್ತನ ನೋಡುವ ಸೌಭಾಗ್ಯ ನಮ್ಮದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.