ಕರ್ಮಧಾರಯ ಸಮಾಸ

3

ಈಗ ಆರನೆಯ ತರಗತಿಗೆ ಹೋಗಲಿರುವ ನನ ಮಗ ಅವನ ಹೊಸ ಪುಸ್ತಕಗಳನ್ನ ತಂದು 'ಅಪ್ಪಾಜಿ ಬೈಂಡ್ ಹಾಕಿಕೊಡಿ' ಎಂದು ಮುಂದಿಟ್ಟಾಗ ಅವನ ಸಂಸ್ಕ್ರತ ಪುಸ್ತಕ ನನ್ನ ಗಮನ ಸೆಳೆಯಿತು. ಹಾಗೆ ಅದನ್ನ ತಿರುವಿ ಹಾಕುತ್ತಿದ್ದಾಗ ನಾನು ಕಾಲೇಜಿನಲ್ಲಿ ಓದುವಾಗ ನಮಗೆ ಸಂಸ್ಕ್ರತ ತರಗತಿ ತೆಗೆದುಕೊಳ್ಳುತ್ತಿದ್ದ ಶ್ರೀ ಮೃತ್ಯುಂಜಯಾಚಾರ್ಯರು ನೆನಪಿಗೆ ಬಂದರು. ಅವರ ಪಾಂಡಿತ್ಯ, ಸರಳ ಸಜ್ಜನಿಕೆ, ಸಂಸ್ಕ್ರತ ಭಾಷೆಯ ಮೇಲಿದ್ದ ಮಮತೆ ಹಾಗೂ ಹಿಡಿತ, ಸ್ಪಷ್ಟ ಉcಚಾರಣೆ ನಮ್ಮನ್ನೆಲ್ಲಾ ಮಂತ್ರ ಮುಗ್ದರನ್ನಾಗಿಸುತ್ತಿದ್ದವು. ಅವರು ವಿದ್ಯಾರ್ಥಿಗಳನ್ನ 'ಏನಯ್ಯ ರತ್ನ' ಎಂದೇ ಕರೆಯುತ್ತಿದ್ದರು.

ಮೊದಲನೆಯ ದಿನ ಅವರ ತರಗತಿಯಲ್ಲಿ ನಾವೆಲ್ಲ ವಿದ್ಯಾರ್ಥಿಗಳು ಅವರಿಗೆ ತಮ್ಮ ತಮ್ಮ ಪರಿಚಯ ಮಾಡಿಕೊಡಬೇಕಿತ್ತು. ನನ್ನ ಬಳಿ ಬಂದ ಅವರು,
'ಏನಯ್ಯ ರತ್ನ ನಿನ್ನ ಹೆಸರು?' ಅಂದಾಗ ನಾನು ನನ್ನ ಹೆಸರನ್ನ ಹೇಳಿದೆ. ಅವರು ಅಷ್ಟಕ್ಕೆ ಸುಮ್ಮನಾಗದೇ 'ವಿಜಯ ಕುಮಾರ ಯಾವ ಸಮಾಸ ಹೇಳು ನೋಡೋಣ' ಅಂದರು. ನನಗೆ ಇದ್ದ ಬದ್ದ ದೈರ್ಯವೂ ಉಡುಗಿ ಹೋಯಿತು. ತಲೆ ಕೆರೆಯುತ್ತಾ 'ಎಂತಾ ಕರ್ಮ ಬಂತು' ಎಂದು ಗೊಣಗುವಾಗ ಅವರು 'ಅದೇ ಅದನ್ನೇ ಜೋರಾಗಿ ಹೇಳಯ್ಯ ರತ್ನ ಅದು ಬರೀ ಕರ್ಮ ಅಲ್ಲ - ಕರ್ಮಧಾರಯ ಸಮಾಸ' ಅಂದಾಗ ತರಗತಿಯಲ್ಲಿ ಎಲ್ಲಾ ಗೊಳ್ಳೆಂದು ನಕ್ಕಿದ್ದರು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವು ತಿಪಟೂರಿನವರಾ? ಅಥವಾ ಓದಿದ್ದು ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಓದಿದ್ದಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ನಾನು ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಓದಿದ್ದು. 1991-1994 ಸಾಲಿನಲ್ಲಿ ಪದವಿ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ತಾವು ಸಹ ಅಲ್ಲಿಯವರಾ ನಿಮಗೆ ಮ್ರತ್ಯುಂಜಯಾಚಾರ್ಯರು ಗೊತ್ತಾ !