ದ್ವಂದ್ವ - ಒಂದು ಕಲ್ಪನೆ....!!

0

ದ್ವಂದ್ವ


"ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ....
ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದ..."

ಎಂಬ ಈ ಸಾಲುಗಳಲ್ಲಿ ಎಂತಹ ನೋವು ಅಡಗಿದೆ...ಎಂತಹ ಅರ್ಥ ಅಡಗಿದೆ....

ಒಮ್ಮೆ ಹಿಂದಿರುಗಿ ನೋಡಿದರೆ...ಜೀವನದಲ್ಲಿ ಏರಿ ಬಂದ ಮೆಟ್ಟಿಲುಗಳು ಒಂದೇ ಎರಡೇ...ಎಷ್ಟು ಉದ್ದದ ಮೆಟ್ಟಿಲು ಸಾಲುಗಳು....
ಇಷ್ಟೆಲ್ಲಾ ಮೆಟ್ಟಿಲುಗಳನ್ನು ಏರುವಾಗ ನಾವು ಮರೆತಿದ್ದೇನು...ಸಾಧಿಸಿದ್ದೇನು..

ಒಂದು ಕಾಲದಲ್ಲಿ ನನ್ನ ಜೊತೆ ಯಾರಿದ್ದರು...ಹೇಗಿದ್ದರು....
ಯಾರು ಇಲ್ಲದ ಕಾಲದಲ್ಲಿ ಎಲ್ಲ ಜೊತೆಯಲ್ಲಿದ್ದರು...
ಇಂದು ಎಲ್ಲ ಇರುವ ಕಾಲದಲ್ಲಿ ಯಾರು ಜೊತೆಗಿಲ್ಲ...

ನನ್ನ ಜೊತೆ ಯಾರಿಲ್ಲ ಅನ್ನುವುದು ಯಾರಿಗೂ ತಿಳಿಯುತ್ತಿಲ್ಲ ಯಾಕೆ....?
ಅಥವಾ ಯಾರೂ ನನ್ನ ಜೊತೆಯಲ್ಲಿಲ್ಲ ಎಂಬ ಕಟು ಸತ್ಯ ಈಗ ನನಗೆ ಅರಿವಾಗುತ್ತಿದೆಯಾ ?
ಎಲ್ಲರು ನನ್ನ ಸುತ್ತ ಮುತ್ತ ಇದ್ದರು ಎಂಬ ಭ್ರಮೆಯ ಪರದೆ ಇದೀಗ ಸರಿದು...ವಾಸ್ತವ ಏನು ಎಂಬುದು ಈಗ ನನಗೆ ಅರಿವಾಗುತ್ತಿದೆಯಾ?

ನಿಜವಾಗಿ ತಿಳಿಯದು...ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದು ತುಂಬಾ ಕ್ಲಿಷ್ಟವಾದ ದ್ವಂದ್ವ! ದೋಣಿ ಮುಳುಗುವ ಮುನ್ನ ನಾವಿಕ ಎಚ್ಚತ್ತುಕೊಂಡು ಜೀವ ಉಳಿಸಿಕೊಳ್ಳುವಂತೆ, ದೀಪ ಆರುವ ಮುನ್ನವೇ ಸ್ವಲ್ಪ ಎಣ್ಣೆ ತುಂಬುವ ಅರ್ಚಕನಂತೆ, ಉಸಿರು ನಿಲ್ಲುವ ಮುನ್ನ ತನ್ನೆಲ್ಲಾ ತಪ್ಪುಗಳ ಪರಾಮರ್ಶೆ ಮಾಡುವ ಯಜಮಾನನಂತೆ,,,,,,, ತುಂಬ ತುಂಬಾ ಕಷ್ಟಕರವಾದ ದ್ವಂದ್ವವಿದು! ಬಹುಶ: ಈಗ ಎಚ್ಚೆತ್ತರೆ ಮುಂದಿನ ಬದುಕು ಸುಂದರವಾಗಬಹುದೇನೋ?? ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.