ನೆನಪಿನಂಗಳದಿ......

0

ನೆನಪುಗಳು....ನೆನಪುಗಳು ಎಂಥ ಮಧುರ....ಒಂದಾನೊಂದು ಕಾಲದಲ್ಲಿ ನೋವುಗಳನ್ನು ಕೊಟ್ಟಿದ್ದ ಆ ನೆನಪುಗಳು ಇಂದು ಎಂಥಹ ಮಧುರವಾದ ಸಂತೋಷವನ್ನು ಕೊಡುತ್ತವೆ. ಆ ಮಧುರವಾದ ನೋವು..ನೋವು ಎಂದೆನಿಸುವುದೇ ಇಲ್ಲ ಹಾಗೆ ಅಂದಿನ ಸುಮಧುರ ನೆನಪುಗಳು ಇಂದಿಗೆ ಕರುಳು ಹಿಂಡುವ ನೋವುಗಳು ಅಂದಿನ ಸಂತೋಷದ ಕ್ಷಣಗಳು ಇಂದಿನ ನೋವಿನ ನೆನಪುಗಳು. ಇಂದಿನ ಯಾಂತ್ರಿಕ ಜೀವನದಲ್ಲಿ..ಬದುಕಿನ ಓಟದಲ್ಲಿ...ಎಲ್ಲೋ ಸೇರಬೇಕೆಂಬ ತವಕ...ಆತುರ....ಏನನ್ನೋ ಮುಟ್ಟಬೇಕೆಂಬ ಆ ಹೆಬ್ಬಯಕೆ...ಗೆಲ್ಲಲೇಬೇಕೆಂಬ ಛಲ...ಏನನ್ನೋ ಸಾಧಿಸಬೇಕೆಂಬ ಹಂಬಲ...ಇವೆಲ್ಲದರ ಘರ್ಷಣೆ...ಅದರಿಂದುಂಟುಗುವ ಮಾನಸಿಕ ಸಂಘರ್ಷ...ತೀವ್ರತೆ...ಇದೆಲ್ಲದರ ನಡುವೆ ಎಲ್ಲೋ ಮನಸಿನ ಒಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡು ಸರಿಯಾದ ಸಮಯಕ್ಕೆ ನಮಗೆ ಅರಿವಿಲ್ಲದಂತೆ ಆಚೆ ಬರಲು ಹೊಂಚು ಹಾಕುತ್ತಿರುವ ನೆನಪುಗಳು ಎಂಥ ಮಧುರ ಅಥವಾ ಎಂಥ ನೋವುಗಳೋ?

ಈ ನೆನಪುಗಳು ಯಾವಾಗೆಂದರೆ ಆವಾಗ ಆಚೆ ಬರಲೊಲ್ಲವು..ಅವುಗಳಿಗು ಸಮಯ ಸಂದರ್ಭ ಸರಿಯಾಗಿ ಒದಗಿ ಬರಬೇಕು. ಉದಾಹರಣೆಗೆ..ಬೆಂಗಳೊರೆಂಬ ಮಾಯಾನಗರಿಯಲ್ಲಿ ಬೆಳಗ್ಗೆ ಕಛೇರಿಗೆ ಹೊರಟಾಗ ನನ್ನವಳ ಬೀಳ್ಕೊಡುಗೆಯ ನಗುವಿನಲ್ಲಿ ನೆನಪಾಗದ್ದಿದ್ದಂತಹ ನೆನಪುಗಳು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಾಗ ತನ್ನಂತೆ ತಾನೆ ದುತ್ತೆಂದು ಎದುರಿಗೆ ಬಂದು ಬೀಳುತ್ತವೆ. ಯಾರೋ ರಸ್ತೆ ದಾಟುವಾಗ ಅರೆ...ಇವಳು..ಅವಳ ತರಹ ಇದ್ದಾಳಲ್ಲ ಅನ್ನುವಾಗ..ಇದೋ ಇಲ್ಲೇ ಇದ್ದೆ ಇದಕ್ಕೇ ಕಾಯುತ್ತಿದ್ದೆ ಎಂದು ಮುಂದೆ ಬರುತ್ತವೆ. ಕೊಟ್ಟಿದ್ದ ಪ್ರಾಜೆಕ್ಟ ಸಮಯಕ್ಕೆ ಸರಿಯಾಗಿ ಮುಗಿದಿಲ್ಲ ಎಂದು ಬಾಸ್ ಕ್ಯಾಕರಿಸಿ ಉಗಿಯುವಾಗ ನೆನಪಾಗದಿದ್ದಂತವು...ಉಗಿಸಿಕೊಂಡು ಸೀಟಿಗೆ ಹೀಂತಿರುಗುವಾಗ ಬಾಸ್ ಸೆಕ್ರೆಟರಿಯನ್ನು ಕಂಡಾಗ ನೆನಪಾಗಿ ಮುಂದೆ ನಿಂತು ಹಲ್ಲುಕಿರಿಯುತ್ತವೆ.

ಈ ನೆನಪುಗಳಿಗೆ ಮಾನ ಮರ್ಯಾದೆ ಯಾವುದೂ ಇಲ್ಲ ’ಸೊ ಕಾಲ್ಡ್ ಡಿಪ್ಲೊಮಸಿ’ ಅಂತೂ ಇಲ್ಲವೇ ಇಲ್ಲ. ನನಗಿದು ನೆನಪಾಯಿತು ಅಂತ ನಾವು (ಮದುವೆ ಆದವರು) ಹೇಳಿಕೊಳ್ಳದೇ ಇರುವುದೇ ಡಿಪ್ಲೋಮಸಿ..ಏನಂತೀರಿ ?. ಇದೆಲ್ಲಾ ನನಗೆ ಇವತ್ತು ಯಾಕೆ ಮನಸಿಗೆ ಬಂತು ಅಂದರೆ..ಬಹುಷ: ಅದೂ ಸರಿಯಾದ ಸಮಯಕ್ಕೆ ಕಾಯುತ್ತಾ ಇತ್ತು ಅನ್ನಿಸುತ್ತೆ.

ನೆನಪುಗಳಲ್ಲಿ ಹಲವು ಹತ್ತು ವಿಧ. ಒಳ್ಳೆಯ ನೆನಪು, ಕೆಟ್ಟ ನೆನಪು, ಸಿಹಿ ನೆನಪು, ಕಹಿ ನೆನಪು, ಬಾಲ್ಯದ ನೆನಪು, ಹರೆಯದಲ್ಲಿ ನಡೆದ ಘಟನೆಗಳ ನೆನಪು, ಮೊದಲನೆಯ ಬಾರಿ ನಾವು ಮಾಡಿದ ತಪ್ಪುಗಳ ( ಮದುವೆಯ ಬಗ್ಗೆ ಹೇಳ್ತಾ ಇಲ್ಲಾ ಸ್ವಾಮಿ...) ನೆನಪು...ಮೊದಲ ಸಲ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೆಲಸಗಳ ನೆನಪು..ಇನ್ನೂ ಏನೇನೋ...ಮನಸಿನಲ್ಲಿ ಚಿಂತಿಸಲು ಏನೂ ವಿಷಯವಿಲ್ಲ ಅಂದ ತಕ್ಷಣ ಇದೋ ಬಂದೇ ಅಂತ ಒಂದರಿಂದೊಂದು ಪುಂಖಾನುಪುಂಖವಾಗಿ ಮುಗಿ ಬೀಳುತ್ತವೆ. ಆದರೆ ಅದರ ವಿಶೇಷತೆಗಳು ಎಂದರೆ..ಸಂತೋಷ ಕೊಡುವ ನೆನಪುಗಳನ್ನ ಯಾರೊಡನೆಯಾದರೂ ಮುಕ್ಕ್ತವಾಗಿ  ಹಂಚಿಕೊಳ್ಳಬಹುದು (ಕೆಲವರನ್ನು ಬಿಟ್ಟು !!!) ಆದರೆ ನೋವು ಕೊಡುವ ನೆನಪುಗಳನ್ನ ಯಾರೊಡನೆ ?.  

ಈ ನೆನಪುಗಳು ಯಾಕಿರಬೇಕು..ಇಂತಹ ನೆನಪಿನಿಂದ ನನಗೆ ಖುಷಿಯಾಯ್ತು ಎಂದಾಗಲೀ ಅಥವಾ ನನಗೆ ನೋವಾಯ್ತು ಎಂದಾಗಲೀ ಯಾರೋಡನೆಯೂ ಹೇಳಿಕೊಳ್ಳಲಾಗದ್ದಿದ್ದ ಮೇಲೆ ಅವುಗಳು ನಮಗೆ ಯಾಕಿರಬೇಕು ? ಯಾಕೆ ಅವು ದುತ್ತೆಂದು ಎದುರಿಗೆ ಬರಬೇಕು...ಯಾಕೆ ಅವು ನೋವು ತರಬೇಕು..ಯಾಕೆ ಅವು ಸಂತೋಷ ತರಬೇಕು...? ಅವುಗಳನ್ನ ಮನಸಿನಿಂದ ಅಳಿಸಲು ಸಾಧ್ಯವಿಲ್ಲವಾ...? ಯಾಕೆ ಅವು ಯಾವಾಗಲು ’ಮನೆಯೊಳಗಿನ ಶತ್ರುವಿನ’ ಹಾಗೆ ಆಗಾಗ ಚುಚ್ಚಬೇಕು ?

ಇರಲಿ...ಈ ನೆನಪುಗಳು ಯಾವಾಗಲೂ ನೆನಪುಗಳೇ..ಎಲ್ಲರಿಗು ಏನೇನೋ ನೆನಪುಗಳಿರುತ್ತವೆ...ಹೇಳಿಕೊಂಡು ಸಂತೋಷಪಡುವಂತ ನೆನಪುಗಳು...ಹೇಳಿಕೊಳ್ಳಲಾಗದೇ ಮನಸಲ್ಲೇ ನೋವು ಅನುಭವಿಸುವಂತಾ ನೆನಪುಗಳು..ಸುಖದ ನೆನಪುಗಳು, ದು:ಖದ ನೆನಪುಗಳು ಹೀಗೇ ಏನೇನೋ ಹತ್ತಾರು ಕಾಡುವ...ಕನವರಿಸುವ ನೆನಪುಗಳು.

ಆದರೆ ನೆನಪುಗಳು ವರವೋ ಶಾಪವೋ ನನಗೆ ಗೊತ್ತಿಲ್ಲ ಒಮ್ಮೊಮ್ಮೆ ನಮಗೆ ನೆನಪಾಗುವ ನೆನಪುಗಳು ಎಷ್ಟೋ ಮನಸಿಗೆ ನೆಮ್ಮದಿಯನ್ನು ನೀಡುತ್ತವೇ ಅದೇ ರೀತಿ ಕಷ್ಟವನ್ನೂ ಕೊಡುತ್ತವೆ. ಸಂತೋಷಪಡುವ ಸಮಯದಲ್ಲಿ ನೋವಾಗುವ ನೆನಪುಗಳು ಬರುವುದು...ದು:ಖ ಪಡುವಾಗ ಸಂತೋಷವಾಗುವ ನೆನಪುಗಳು ಬರುವುದು ಏನೀ ವಿಚಿತ್ರ ?

ಆದರೆ ನೆನಪುಗಳು - ಸಂತೋಷ ಕೊಡುವಂತವೇ ಆಗಲೀ...ದು:ಖ ಕೊಡುವಂತವೇ ಆಗಲಿ ಆ ನೆನಪುಗಳು ನೆನಪಾದಾಗ ನೋವಾಗುವುದೇ ಹೊರತೂ ಸಂತೋಷವಂತೂ ನಾ ಕಾಣೆ ಸಂತೋಷ ಪಡುವದಕ್ಕೆ ಆ ನೆನಪುಗಳು ಗತಕಾಲದ ಘಟನೆಗಳೇ...ಕಳೆದುಹೋದ ಘಳಿಗೆಗಳೇ....ಮತ್ತೆಂದೂ ಅವು ಬರಲಾರವು ಅನ್ನುವ ಒಂದೇ ಒಂದು ಅಂಶ ಸಂತೋಷಕ್ಕಿಂತ ದು:ಖವನ್ನು ಕೊಡುತ್ತವೆ.

ಒಟ್ಟಿನಲ್ಲಿ ನೆನಪುಗಳು..ನೆನಪುಗಳೇ...ಆ ನೆನಪುಗಳಲ್ಲಿರುವ ಸುಖವಾಗಲೀ ದು:ಖವಾಗಲೀ ಎಂದೆಂದಿಗೂ ಅವು ನಮ್ಮವೇ ಅದರಿಂದ ಬೇರೆಯವರಿಗೆ ಖುಷಿಯಾಗಲೀ ನೋವಾಗಲೀ ಆಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ...ಯಾಕೆಂದರೆ ಆ ನೆನಪುಗಳು ನಮ್ಮವು ಎಂದೆಂದಿಗೂ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು ವಿಜಿ, ನೆನಪುಗಳ ಮಾತೆ ಮಧುರ! ಆ ನೆನಪುಗಳೆ, ಅವು ಸವಿಯಾಗಿರಲಿ, ಕಹಿಯಾಗಿರಲಿ, ನಮ್ಮನ್ನು ಕೆಲವೊಮ್ಮೆ ಸರಿ ದಾರಿಯಲ್ಲಿ ನಡೆಯಲು ಪ್ರೇರೇಪಿಸುತ್ತವೆ. ಹಿ೦ದಿನದನ್ನು ಮರೆತು ಮು೦ದಿನ ದಾರಿಯಲ್ಲಿ ಸುಗಮವಾಗಿ ನಡೆಯುವವನೆ ಬುದ್ಧಿವ೦ತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ...ಕೆಲವೊಮ್ಮೆ ಮರೆತಿದ್ದೇವೆ ಎಂದುಕೊಳ್ಳುವ ನೆನಪುಗಳು ಮರೆಯಾಗಿರುವುದಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಬರಹ ಇಷ್ಟವಾಯಿತು ವಿಜಯ್ ರವರೆ ವಂದನೆಗಳು ತಮಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ಬಾಗ್ವತ ರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೆನಪುಗಳ ಮ೦ಥನ ಚೆನ್ನಾಗಿದೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ನಾವಡ ರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಜಯ್ ನಿಮ್ಮ ನೆನಪಿನಂಗಳ ಎಲ್ಲರ ಮನಸ್ಸನ್ನೂ ಹಚ್ಚ ಹಸಿರಾಗಿಸಿತು ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೆನಪುಗಳೇ ಹಾಗೆ...ಮನಸಿನ ಮೂಲೆಯಲ್ಲಿ ಸದಾ ಹಸಿರಾಗಿರುತ್ತವೆ. ಪ್ರತಿಕ್ರಿಯೆಗೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿ ನೆನಪುಗಳು ಖುಷಿ ಕೊಟ್ಟರೆ, ಕಹಿ ನೆನಪುಗಳು ಸರಿದಾರಿಯಲ್ಲಿ ನಡೆಯಲು ಸಹಕಾರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ.... ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

//ಆ ನೆನಪುಗಳಲ್ಲಿರುವ ಸುಖವಾಗಲೀ ದು:ಖವಾಗಲೀ ಎಂದೆಂದಿಗೂ ಅವು ನಮ್ಮವೇ ಅದರಿಂದ ಬೇರೆಯವರಿಗೆ ಖುಷಿಯಾಗಲೀ ನೋವಾಗಲೀ ಆಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. "ಸವಿನೆನಪುಗಳು ಬೇಕು ಸವಿಯಲೀ ಬದುಕು" ಎನ್ನುವ ಮಾತು ಸತ್ಯ. ಆದರೆ ಅವು ಭೂತಕಾಲದ ಭೂತಗಳಾಗದೆ ಇರಬೇಕು. ನೆನಪುಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುವುದು. ಈ ವ್ಯಕ್ತಿತ್ವ ಬೇರೆಯವರ ಮೇಲೆ ಕಂಡಿತಾ ಪ್ರಭಾವ ಬೀರುತ್ತದೆ. ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.