ಬೆಂಗಳೂರು ಅಂದ್ರೆ... ಏನೋ ಅಂದುಕೊಂಡಿದ್ದೆ

0

ಬೆಂಗಳೂರು ಅಂದ್ರೆ ಸುಂದರ ನಗರಿ ಎಂದುಕೊಂಡಿದ್ದೆ. ಆದ್ರೆ ಈಗ ಗೊತ್ತಾಗುತ್ತಿದೆ. ಬೆಂಗಳೂರು ಎಂಥಹ ಮಯಾ ನಗರಿಯೆಂದು. ಬೆಂಗಳೂರು ಹೇಗಿದೆ ಎಂದು ಯಾರಾದ್ರೂ ನನ್ನಲ್ಲಿ ಕೇಳಿದರೆ ನನ್ನ ಉತ್ತರ ಹೀಗಿರುತ್ತದೆ. ಬೆಂಗಳೂರು ಧೂಳು ಮಯ ಪ್ರದೇಶ, ಇಲ್ಲಿನ ಹವಾಗುಣ ದಿನೇ ದಿನೇ ಹದಗೆಡುತ್ತದೆ. ಮನೆಯಿಂದ ಹೊರಗೆ ಬಂದರೆ ಕಾಣುವುದು ಬಿಕ್ಷುಕರ ಹಾವಳಿ. ಕೈ ಕಾಲು ಎಲ್ಲಾ ಸರಿಯಾಗಿದ್ದರೂ ಅದೆಷ್ಟು ಮಂದಿ ಭಿಕ್ಷೆ ಬೇಡುತ್ತಿರುತ್ತಾರೆ! ಸ್ವಲ್ಪ ರಶ್ ಆದರೂ ಸರಿ ಇಲ್ಲಿನ ಜನ ಕದಿಯೋದಿಕ್ಕೆ ಏನು ಸಿಗುತ್ತೆ ಅಂತ ಕಾಯುತ್ತಿರುತ್ತಾರೆ. ನಮ್ಮ ವಸ್ತುಗಳ ಬಗ್ಗೆ ಸ್ವಲ್ಪ ಕೇರ್ ಲೆಸ್ ಆದರೂ ಕಶ್ಟನೇ...

ಇನ್ನು ಇಲ್ಲಿನ ಆಹಾರದ ಬಗ್ಗೆ ಹೇಳೋದಾದರೆ... ಹೇಗೆ ವರ್ಣಿಸುವುದು ಎಂಬುವುದೇ ತಿಳಿಯುತ್ತಿಲ್ಲ. ನಾವು ಕಾಲಿಗೆ ಹಾಗುವ ಚಪ್ಪಲಿಯಿಂದ ಹಿಡಿದು ಹೊಟ್ಟೆಗೆ ಹಾಕುವ ಆಹಾರವೆಲ್ಲವೂ ಬೀದಿಬದಿಯಲ್ಲಿಯೇ ಸಿಗುತ್ತದೆ. ಬೀದಿಯಲ್ಲಿ ಸಿಗುವ ಆಹಾರವನ್ನು ಶ್ರೀಮಂತರು ಬಡವರೆನ್ನದೇ ಎಲ್ಲರೂ ತಿನ್ನುತ್ತಾರೆ. ಅದರಲ್ಲೂ ರಸ್ತೆ ಪಕ್ಕದಲ್ಲಿ ಅದೂ ಧೂಳುಮಯ ಪ್ರದೇಶದಲ್ಲಿ ಪಾನಿ ಪುರಿ ತಿನ್ನುವ ಜನರನ್ನು ನೋಡುವಾಗ ಅಯ್ಯೋ ಅನ್ನಿಸುತ್ತೆ. ಧೂಳುಮಯ ಆಹಾರಕ್ಕಿಂತ ಹೋಟೆಲ್ ಗೆ ಹೋಗಿ ತಿನ್ನೋಣವೆಂದು ಹೋದರೆ ... ಆ ಮಸಾಲೆ ದೋಸೆಗೆ ಅದೆಷ್ಟು ಏಣ್ಣೆ ಹಾಕುತ್ತಾರೋ.. ದೋಸೆಯಿಂದ ಏಣ್ಣೆ ಇಳಿದು ಹೋಗುತ್ತದೆ. ದಿನವೊಂದಕ್ಕೆ ಒಂದು ಮಸಾಲೆ ದೋಸೆ ತಿಂದರೂ ಆರೋಗ್ಯ ಕೆಡುವುದು ಗ್ಯಾರಂಟಿ.

ಇಲ್ಲಿನ ನೀರಿನ ಬಗ್ಗೆ ಹೇಳಬೇಕೆ?... ನೀರು ಯಾವಾಗ ನೋಡಿದರೂ ಡಿ.ಡಿ.ಟಿ ಪೌಡರ್ ಸ್ಮೆಲ್ ಬರುತ್ತೆ. ಕುಡಿಯಲು ಹೋದರೆ ಕೇರಳದಲ್ಲಿ ಪ್ರಚಲಿತವಾಗಿರುವ ಎಂಡೋಸಲ್ಪಾನ್ ನೆನಪಾಗುತ್ತದೆ. ದಾಹವಾದರೆ ಬಿಸ್ಲರಿನೇ ಲೇಸು. ಬಿಸ್ಲರಿಗೆ ಕೆಮಿಕಲ್ ಹಾಕಿದ್ರೂ ವಾಸನೆ ಅಂತೂ ಇಲ್ಲ.

ಇನ್ನು ಮಹಾನಗರಿಯಲ್ಲಿ ವಾಹನಗಳ ಅರಚಾಟ, ಟ್ರಾಪಿಕ್ ಎಲ್ಲಾ ಮಾಮುಲಿ ಬಿಡಿ. ಅದರ ಬಗ್ಗೆ ಪ್ರಶ್ನೆನೇ ಇಲ್ಲ.
ಬೆಂಗಳೂರಿಗೆ ವಿವಿಧ ಪ್ರದೇಶಗಳಿಂದ ಜನರು ಬರುತ್ತಾರೆ . ವಾಪಸ್ಸು ಊರುಗಳಿಗೆ ಹೋಗುವಾಗ ಹತ್ತು ಹಲವು ಖಾಯಿಲೆಗಳನ್ನು ಕೊಂಡೊಯ್ಯುತ್ತಾರೆ. ನೋಡಲು ಸ್ಟಳಗಳಿವೆ ನಿಜ. ಆದರೆ ಏಕಾಂತ ಕಳೆಯಲು ಅಲ್ಲ.

ಮನಸ್ಸಿಗೆ ಬೇಸರವಾಯಿತಾದರೆ ಏಕಾಂತ ಕಳೆಯಲು ಸೂಕ್ತವಾದ ಯಾವ ಸ್ಥಳನೂ ಇಲ್ಲ. ಎಲ್ಲಿ ಹೋದರೂ ಜನಸಂದಣಿ ತಪ್ಪಿದ್ದಿಲ್ಲ. ... ಹೇಳ ಹೋದರೆ ತುಂಬಾ ಇದೆ. ಅದನ್ನ ಓದುತ್ತಾ ಹೋದರೆ ನಿಮಗೂ ಬೇಸರವಾದೀತು. ಅದಿಕ್ಕೆ ಇಲ್ಲೇ ಮುಗಿಸುತ್ತೇನೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೋ !!! ಅಷ್ಟೋ೦ದು ಬೇಸರ ಪಡಬೇಡಿ , ನಮ್ಮ ಮನೆಗೆ ಬನ್ನಿ - ಬೆ೦ಗಳೂರಿನಲ್ಲಿ ಇಲ್ಲದ೦ತಹ ಸೌ೦ದರ್ಯ
ನಮ್ಮ ಮನೆಯ ಗಾರ್ಡ್ ನ್ ನಲ್ಲಿದೆ.
ನೀವು ಒ೦ದು ತೋಟ ಮಾಡಿ , ಅಲ್ಲಿ ನಿಮ್ಮ ಕೈಗೆ ಎಟಕುವ ಷ್ಟು ಭೂಮಿಯನ್ನು ಚೆಲುವು ಮಾಡಿ.
ನೀವು ಹೆ೦ಗಸ್ಸ್ರು ನಮ್ಗಿನ್ನಾ ಜಾಸ್ತಿ ಆಸೆಯಿರುತ್ತೆ - ಒಳ್ಳೆ ಮನೆ , ಒಳ್ಳೆ ಊರು , ಒಳ್ಳೆ ಬೀದಿ , ಒಳ್ಳೆ ಸೀರೆ ಇತ್ಯಾದಿ.
ನಿಮ್ಮ ಕನಸ್ಸಿನಿ೦ದಲೇ ಭೂಮಿ ಇಷ್ಟರ ಮಟ್ಟಿಗಿರುವುದು.
ಇಲ್ಲಾ ಅ೦ದರೆ ಇನ್ನೂ ನರಕ.
ನನ್ನ ಪ್ರಖಾರ ಎಲ್ಲ ಗ೦ಡಸ್ಸ್ ರು ರ೦ಗೋಲಿ ಇಟ್ಟೂ ಮನೆ ಬಿಡಬೇಕು ಆಗ ಅವ್ರಿಗೆ ನಮ್ಮೂರು ಅನ್ನುವ ಪ್ರಜ್ನೇ ಬರುತ್ತೆ.
ನಿಮ್ಮ೦ತೆ ಬೇಸರ ಬ೦ದು ಈ ಊರು ಬಿಟ್ಟೂ ಹಿಮಾಲಯಕ್ಕೆ ಓಡಿ ಹೋದ ಹೆಣ್ಣೊಬಳ exhibition ಇತ್ತು.

FEEL INDIA
At Indian Institute of World Culture,
B.P.Wadia Road, Basavangudi ,Bangalore

On Saturday , July 14, 2007 from 3 p.m. to 7 p.m. and Sunday July 15, July 15,2007 from 9 a.m. to 7 p.m.

An exhibition of sketches of travels through India by Chitra Nandan

Chitra, a self taught artist, hails from a family of painters. She moved out of a successful career when a special experience drew her strongly towards Nature. Thus started her journey with Line and Colors. She lives at the foothills of the Himalayas and is footloose. From the forests of South India to the mountains in the North she has been traveling for a number of years. The places she visits are brought back by her in Lines to be shared with others.

Chitra has exhibited her work in Bangalore in April 1996 (her first show of her paintings), in December 1996 (paintings), in September 1997
( group show of paintings with four other women artistes), in April 1999
( sketches), at Vancouver, Canada in July 1999 ( at a Women's Conference where she was also one of the keynote speakers and conducted a workshop in " Women and Earth – a common struggle for survival") and in New Delhi in March 2007 ( sketches).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಲಾಲ್ ಬಾಗ್, ಬಸವನಗುಡಿ, ಕಹಳೆಬಂಡೆ ತೋಟ, ಗವಿಗಂಗಾದರೇಸ್ವರ ಗುಡಿ ನೋಡಿದ್ದೀರಾ? ಒಂದು ಸಲ ನೋಡಿ ಆಮೇಲೆ ಮಾತಾಡಿ.

ವಸಿ ಹೊರಗೆ ಹೋದರೆ ದೊಡ್ಡಾಲದ ಮರ, ಅರ್ಕಾವತಿ ನದಿ, ಅಣೆಕಟ್ಟು, ಮುತ್ಯಾಲ ಮಡು... ಈಟೋಂದು ಇಕ್ಕೆ/ಸ್ತಳಗಳಿವೆ ನೋಡಕ್ಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.