ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...

3.5


 

ಕೆಲವು ದಿನಗಳ ಹಿಂದೆ ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿಯಾಗಲು ಹೋಗುತ್ತೇವೆ. Appointment ಈಗಾಗಲೇ ತೆಗೆದು ಕೊಂಡಿದ್ದೇವೆ ಎಂದಾಗ ತಮಾಷೆ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ಬೆಳಿಗ್ಗೆ ಹಠಾತ್ತ್ ಆಗಿ ಅನಿ ತಾನು ಇಂದು ಸ್ನೇಹ ಜೊತೆ ಸಿ ಎಂ ಅನ್ನು ಭೇಟಿ ಆಗಲು ಹೋಗುತ್ತೇನೆ ಎಂದಾಗ ಆವಕ್ಕಾದೆ!

ಆಫೀಸ್ ಕೆಲಸ ಮುಗಿಸಿ ಸಿ ಎಂ ಭೇಟಿ ವಿವರ ಕೇಳಲು ಹಾತೊರೆಯುತ್ತಿದ್ದ ನಾನು ಸಾಯಂಕಾಲ ರೂಮ್ ಗೆ ಹೋದಾಗ ಅನಿ ಟೀ ಕುಡಿಯುತ್ತಾ ಟಿವಿ ಮುಂದೆ ಕುಳಿತಿದ್ದಳು."ಒಳಗೆ ಬಾ" ಎಂದು ಕರೆದು ಅವಳಲ್ಲಿ "ಹೇಗಿತ್ತು ಅನುಭವ" ಎಂದು ಕೇಳಿದಾಗ, ಯಾವಗಲೂ ಬಿ ಜೆ ಪಿ ಯನ್ನು ಹೊಗಳುತ್ತಿದ್ದ ಸುಬ್ಬಿ, ಯುಡಿಯುರಪ್ಪರನ್ನ ಸರಿಯಾಗಿ ಬೈದಳು. ‘ಯಾಕಲೇ ಏನಾಯಿತು? ಎಂದು ಕೇಳಿದಾಗ, "ಸ್ವಲ್ಪ ಮಾನವೀಯತೆನೂ ಇಲ್ಲ ಅವರಿಗೆ... ಸಿ ಎಂ ಅಂತೆ ಸಿ ಎಂ... ಜನರನ್ನು ಹೇಗೆ ಮಾತನಾಡಿಸಬೇಕು, ಹೇಗೆ ವರ್ತಿಸಬೇಕು ಎಂದು ತಿಳಿಯಲ್ಲ ಅವರಿಗೆ. ಅವರಿಗಿಂತ ಅವರ ಸೆಕ್ರೆಟರಿ ಅವರನ್ನು ಸಿ ಎಂ ಮಾಡುತ್ತಿದ್ದರೆ ನಮ್ಮ ಕರ್ನಾಟಕ ಉದ್ದಾರವಾಗುತ್ತಿತ್ತೋ ಏನು... at least ಜನ ಸಮಾನ್ಯ ಮಾತನಾಡಿದ್ದ ಇಂಗ್ಲಿಷ್ ಅವರಿಗೆ ಅರ್ಥ ವಾಗಲ್ಲ...’ ಹೀಗೆ ಉಸಿರು ಬಿಡದೇ ಬೈಯುತ್ತಿದ್ದಳು.  (ಅವಳು ಅಲ್ಲಿ ಕಂಡಂತಹ ಪ್ರತಿಯೊಂದು ದ್ರಶ್ಯವನ್ನು ವಿವರಿಸ ಹೊರಟರೆ ಮಿನಿ ಧಾರವಾಹಿ ಆಗಿ ಹೋಗುತ್ತೆ...ಅವರೇನೂ ಸಿ ಎಂ ಅವರಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿಲ್ಲ... ತಮ್ಮ ಸಮಸ್ಯೆಯ ಕೆಲವು ಪದಗಳನ್ನು ಇಂಗ್ಲಿಷ್ ನಲ್ಲಿ ಬಳಸಬೇಕಾಯಿತು)"ಕರ್ನಾಟಕದವರಾಗಿ ಕನ್ನಡ ಮಾತನಾಡಿ ಎಂಬರ್ಥದಲ್ಲಿ ಅವರು ವರ್ತಿಸಿರಬಹುದು’ ಎಂದು ನಾನು ಸಮಜಾಯಿಸಿ ನೀಡಲು ಹೋದರೆ, "ಇಲ್ಲ... ಅಂಥನೇನಾಗಿರುತ್ತಿದ್ದರೆ ನಾನು ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದೆ. ನಿಮ್ಮ ಸಮಸ್ಯೆನಾ ಕನ್ನಡದಲ್ಲೇ ಹೇಳಿ... ಅಥವಾ ಕರ್ನಾಟಕದಲ್ಲಿ ಕನ್ನಡ ಮಾತನಾಡಿ’ ಎಂದು ಹೇಳಿದರೆ ನಾವು ಸಂತೋಷವಾಗಿ ಮಾತನಾಡುತ್ತಿದ್ದೇವು. ಅದರೆ ಅವರ ಮಾತಿನ ಶೈಲಿ ಚೆನ್ನಾಗಿರಲಿಲ್ಲ. ಅವರು ಪಕ್ಕದಲ್ಲಿದ್ದವರಲ್ಲಿ ಇಂಗ್ಲಿಷ್ನಲ್ಲಿದ್ದುದನ್ನು ಕನ್ನಡಕ್ಕೆ ಭಾಷಾಂತರಿಸಲು ಹೇಳಿದರು.’ "ಛೆ! ಸರಿಯಾಗಿ ವ್ಯವಹರಿಸಲು, ಗೌರವದಿಂದಲು ಗೊತ್ತಿಲ್ಲವಾ... ?’ "ಬಿಡು ನಾನು ಅಪ್ಪಂಗೆ ಹೇಳ್ತೆನೆ ಅವರಿಗೆ ಓಟು ಕೊಡಬೇಡಿ ಅಂತ. ಅವರಿಗೆ ಓಟು ಬೇಕಾದಾಗ ಜಾತಿ, ಮತ, ಭಾಷೆ, ಸ್ತ್ರೀ ಪುರುಷ ಎಲ್ಲರೂ ಒಂದೇ... ಆದರೆ ಸಹಾಯ ಕೋರಿ ಹೋದಾಗ ಅಲ್ಲಿದ್ದವರನ್ನು ಎಷ್ಟು ಕೇವಲವಾಗಿ ನೋಡುತ್ತಿದ್ದರು ಗೊತ್ತಾ? ಒಬ್ಬಾಕೆಗೆ ನಿಮ್ಮ ಪತಿ ಏನು ಸರ್ಕಾರಿ ಕೆಲಸದಲ್ಲಿದ್ದಾನ ಎಂದು ಕೇಳಿದ್ದರು. ಸರ್ಕಾರಿ ಕೆಲಸದಲ್ಲಿದ್ದರೆ ಮಾತ್ರವೇ ಅವರಿಗೆ ಸಹಾಯ ಮಾಡುತ್ತಾರಂತೆ! ಓಟು ಕೇಳಲು ಬರುವಾಗ ಮಾತ್ರ ಇವರಿಗೆ ಬರಿಯ ಸರ್ಕಾರಿ ಕೆಲಸದಲ್ಲಿದ್ದವರು ಓಟು ಕೋಡೋರೆನು?’ ಅನಿ ನಾನ್ ಸ್ಟಾಪ್ ಆಗಿ ಸಿ ಎಂನ ಗುಣಗಾನ ಮಾಡುತ್ತಿದ್ದಳು. ಸ್ನೇಹಳಂತೂ ಮಿರರ್ ಇಮೇಜ್ ಬಗ್ಗೆ ಹೇಳಿ ವ್ಯಂಗದೊಂದಿಗೆ ಹಾಸ್ಯ ಸೇರಿಸಿ ಮಾತು ಮರೆತಳು.ಹೋದ ಕೆಲಸವಂತೂ ಆಗಲ್ಲ... ಅದ್ರೆ ನಮ್ಮ ರಾಜಕಾರಣಿಗಳು ಕ್ಯಾಮೆರಾ, ಮಾಧ್ಯಮಗಳ ಮುಂದೆ ಹೇಗೆ ವರ್ತಿಸುತ್ತಿದ್ದಾರೆ, ಕ್ಯಾಮೆರಾ/ಮಾಧ್ಯಮಗಳ ಹಿಂದೆ ಹೇಗೆ ವರ್ತಿಸುತ್ತಿದ್ದಾರೆ ಎಂದು ತಿಳಿಯಿತು. ಸುವರ್ಣ ಚಾನೆಲ್ನಲ್ಲಿ ಯುಡಿಯುರಪ್ಪ-ರಮ್ಯಾ ಸಂಭಾಷಣೆ ಕಂಡು ಗ್ರೇಟ್ ವ್ಯಕ್ತಿ ಎಂದು ತಿಳಿದ್ದಿದ್ದ ನನಗೆ ನಿಜ ವ್ಯಕ್ತಿತ್ವ ಕಂಡು ನಿಜಕ್ಕೂ ಬೇಸರವಾಯಿತು. ತಪ್ಪು ಮಾಡದವರು ಯಾರಿದ್ದಾರೆ?...
‘ಯಾಕೆ ವಿದ್ಯಾವಂತರನ್ನ, ಮಾನವೀಯತೆಯುಳ್ಳವರನ್ನ, ಸಮಾಜ ಸೇವಕರನ್ನ ನಾವು ಸಿ ಎಂ ಮಾಡಲ್ಲ?’ ಎನ್ನುವ ಆಕೆಯ ಪ್ರಶ್ನೆಗೆ ಉತ್ತರ ನಾನಿನ್ನೂ ನೀಡಿಲ್ಲ...

 
(ಒಬ್ಬರನ್ನ ಹೊಗಳಿ, ಮತ್ತೊಬ್ಬರನ್ನ ತೆಗಳುವ ಉದ್ದೇಶ ನನ್ನದ್ದಲ್ಲ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲರ ಪ್ರಶ್ನೆಯೂ ಇದೇ.. ಆದರೆ ವಿದ್ಯಾವಂತರೆಲ್ಲಾ(ನನ್ನನ್ನೂ ಸೇರಿಸಿ) ತಮ್ಮ ಸಂಸಾರ, ಮನೆ ಕುಟುಂಬ, ಸಮಾಜ ಇವೇ ಮೊದಲಾದ ಸರ್ಕಲ್ಲುಗಳಲ್ಲೇ ಸಮಯ ಕಳೆಯುವುದೂ ಸುಳ್ಳಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Déjà vu :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೀಣಾ ರವರೆ ಅಂತಹ ಮನುಷ್ಯರನ್ನು ನಾವೇ ಆರಿಸಿ ಕಳಿಸಿದ್ದೇವಲ್ಲ ನಮ್ಮನ್ನಾಳಲು!ನಿಮ್ಮ ಸ್ನೇಹಿತೆಯರು ಹೋಗುವಾಗ ಹಿಡನ್ ಕ್ಯಾಮರ ಜೊತೆ ಹೋಗಬೇಕಿತ್ತು.. ಅದನ್ನು ಯಾವುದಾದರೂ ಲೋಕಲ್ ಚಾನೆಲ್ ನಲ್ಲಿ ಪ್ರಸಾರ ಮಾಡೋಕಾಗಿದ್ದಿದ್ದರೆ ಹಿಂದೊಂದು ಮುಂದೊಂದು ಆಡೋ ಜನಗಳಿಗೆ ಆಗಲೇ ಬುದ್ದಿ ಬರೋದು .. ವಂದನೆಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಡ್ಡಿ ಯವರು ಪ್ರತಿನಿಧಿಸುವ ಪಕ್ಷದ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇಲ್ಲದಿದ್ದರೂ ಮುಖ್ಯಮಂತ್ರಿಗಳು ವೀಣಾ ಅವರು ಬಣ್ಣಿಸಿದಂತೆ ಅಲ್ಲ ಎಂದು ಹಲವರು ಹೇಳಿದ್ದಾರೆ. ಗ್ರಾಮಾಂತರ ಹಿನ್ನೆಲೆಯ ಸೀದಾ ಸಾದಾ ಮನುಷ್ಯ, ಸಾಧ್ಯವಾದಾಗಲೆಲ್ಲಾ ಜನರಿಗೆ ಉಪಕರಿಸುವ ಮನಸ್ಸಿದೆ ಎಡ್ಡಿಯವರಿಗೆ ಎಂದು ಕೇಳಿದ್ದೇನೆ. ವೀಣಾ ಅವರ ಸ್ನೇಹಿತೆಯರಿಗೆ ಆದ ಅನುಭವ ನಿಜವೇ ಆಗಿದ್ದಲ್ಲಿ ಕೆಲಸದ ಮತ್ತು ಕುಮಾರಣ್ಣನವರ ಒತ್ತಡ ಮು.ಮಂತ್ರಿಗಳ ಮೇಲೆ ಬಿದ್ದಿರಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಏನು ಹೇಳಕ್ಕೆ ಹೊರಟಿದ್ದೀರ ಗೊತ್ತಾಗಿಲ್ಲ. ಯೆಡ್ಡಿ ಸಿಡುಕುತನ ಎಲ್ಲರಿಗೂ ಗೊತ್ತಿದ್ದದ್ದೇ. ಅದರಲ್ಲಿ ಹೊಸತೇನೂ ಇಲ್ಲ. ಯೆಡ್ಯೂರಪ್ಪ ಸರಕಾರದ ಪಾಲಿಸಿಗಳು ಎಲ್ಲಾ ಕಡೆಯಿಂದ ಉಗಿಸಿಕೊಳ್ಳುತ್ತಾ ಇವೆ. ಅದನ್ನು ಅವರ ಬಳಿಯೇ ಹೋಗಿ ತಿಳಿದುಕೊಳ್ಳುವಂಥಾದ್ದೇನಿಲ್ಲ. ಅಥವಾ ನಿಮ್ಮ ಗೆಳತಿ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರೆ ಅದನ್ನು ವಿವರಿಸಬಹುದಿತ್ತು. ವಿವರಿಸುವಂಥಾದ್ದು ಅಲ್ಲವಾದರೆ ಈ ಬರಹದ ಅವಶ್ಯಕತೆ ನನಗೆ ಕಾಣುತ್ತಿಲ್ಲ. ಯಾಕೆಂದರೆ ಓದುವಾಗ ನನಗೆ ನಿಜವಾಗಿ ಏನೂ ಅರ್ಥವಾಗಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಸ್ವಾಗತ... ನೀವು ಅಂದುಕೊಂಡಂತೆ ನಾನು ಮುಖ್ಯಮಂತ್ರಿ ಯುಡಿಯೂರಪ್ಪರವರ ಸಾದನೆಗಳನ್ನು ಟೀಕಿಸಿಲ್ಲ... ಹಾಗೆ ನೋಡ ಹೊರಟರೆ ಕರ್ನಾಟಕದ ಉಳಿದ ಮುಖ್ಯಮಂತ್ರಿಗಳಿಗಿಂತ ಯುಡಿಯೂರಪ್ಪನೇ ಮೇಲು... ಸುತ್ತಮುತ್ತಲೂ ಟೀಕಾಕಾರರು ಇದ್ದರೂ ಸಹ ತಮ್ಮ ಕೆಲಸಕಾರ್ಯಗಳನ್ನು ಅತ್ಯುತ್ತಮವಾಗಿ ಮಾಡಿದ್ದಾರೆ ಅವರು. ನಾನಿಲ್ಲಿ ಯುಡಿಯೂರಪ್ಪರವರನ್ನು ನನ್ನ ಸ್ನೇಹಿತರು ಭೇಟಿಯಾದದ್ದು ಹಾಗೂ ಅವರ ಅಭಿಪ್ರಾಯವನ್ನು ಹಂಚಿದ್ದೇನೆ ಅಷ್ಟೇ... ತಮ್ಮ ಒತ್ತಡದ ಕಾರ್ಯಗಳಿಂದಾಗಿ ಅವರು ಹಾಗೆ ವರ್ತಿಸಿರಲೂ ಬಹುದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಅದಕ್ಕೆ ಕಾರಣಗಳಿವೆ. ಯಾವಾಗ ಎಲ್ಲಿ ಸರಕಾರ ಬೆಳುತ್ತೋ ಎನ್ನುವ ಭಯ, ವಿರೋಧ ಪಕ್ಷದ ಅರಚಾಟ, ಗೂಳಿ ಹಟ್ಟಿಯ ಹರಿದ ಅಂಗಿ, ಎಲ್ಲೋ ಕುಡಿದು ಕೂತಿರುವ ರೇಣುಕಾಚಾರ್ಯ ಮಹಾ ಮುನಿ ಹೀಗೆ ಹತ್ತು ಹಲವು ! ಎಡ್ಡಿ ಅಷ್ಟೆಲ್ಲಾ ಬ್ರಷ್ಟ ಹಣೆಪಟ್ಟಿ ಕಟ್ಟಿಕೊಂಡು ಕೂಡ ಒಳ್ಳೆಯ ಕೆಲಸಗಳನ್ನೂ ಮಾಡುತ್ತಿರುವುದು ಸುಳ್ಳಲ್ಲ. ಇನ್ನು ನಿಮ್ಮ ಸ್ನೇಹಿತೆಯ ಜೊತೆ ಮಾತನಾಡಿದ ಸೌಜನ್ಯ ದ ಬಗ್ಗೆ ಹೇಳುವುದಾದರೆ " ೬ ಕೋಟಿ ಜನಕ್ಕೆ ಒಬ್ಬ ಎಡ್ಡಿ " ಅಲ್ವಾ.ಇದು ಇಂದಿನ ಎಲ್ಲ ರಾಜಕೀಯ ನಾಯಕರ ಕಥೆ! BMTC ಬಸ್ಸಲ್ಲಿ ಆಫೀಸ್ ತಲುಪುವ ಮೊದಲೇ ನಮ್ಮ ಸಹನೆ ನಾವು ಕಳಕೊಂಡು ಬಿಟ್ಟಿರ್ತೇವೆ.ಇನ್ನು ಎಡ್ಡಿ ರೆಡ್ಡಿ ಮತಾಡ್ಸಿದ್ರೆ ಅದೇ ಹೆಚ್ಚು :) ಪ್ರವೀಣ ಸಾಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶಃ ಯಡ್ಡಿ ಯವರ ಬಹು ದೊಡ್ಡ ವೀಕ್ ಪಾಯಿಂಟ್ ಅವರ "ಸಿಡುಕುತನ" ಅನ್ನಿಸುತ್ತೆ. ನಾಯಕನ ಮುಖ್ಯ ಗುಣ ಎಲ್ಲವನ್ನು ಸಮಚಿತ್ತದಿಂದ ಸ್ವಿಕರಿಸುವುದು. ಕುಮಾರಸ್ವಾಮಿಯವರ ಜನಪ್ರಿಯತೆಗೆ ಅವರು ಸಾಮಾನ್ಯ ಜನರ ಜೊತೆ ಬೆರೆಯುವ ರೀತಿಯು ಒಂದು ಮುಖ್ಯ ಕಾರಣ ಅಂತ ಅನ್ನಬಹುದು. ಯಡ್ಡಿಯವರಿಗೆ ಎಷ್ಟೋ ಒಳ್ಳೆ ಗುಣಗಳಿದ್ದರು ಅವರ ಸಿಡುಕುತನ ಎಲ್ಲವನ್ನು ಮುಚ್ಚಿ ಹಾಕಿಬಿಟ್ಟಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೀಣಾ ಅವರೇ: ನಿಮ್ಮ ಲೇಖನದ ಬಗ್ಗೆ ಎರಡು ಮಾತು. ೧) ಯಾಕೆ ವಿದ್ಯಾವಂತರನ್ನ, ಮಾನವೀಯತೆಯುಳ್ಳವರನ್ನ, ಸಮಾಜ ಸೇವಕರನ್ನ ನಾವು ಸಿ ಎಂ ಮಾಡಲ್ಲ? - ಯಡಿಯೂರಪ್ಪನವರು ಪದವೀಧರರು (ಬಿ.ಎ.). ಅಂದರೆ ವಿದ್ಯಾವಂತರೇ ಆಗಿದ್ದಾರೆ. - ಯಡಿಯೂರಪ್ಪನವರು ಉತ್ತಮ ಸಮಾಜ ಸೇವಕರು ಎಂದು ಹೆಸರು ಗಳಿಸಿ, ರಾಜಕೀಯದಲ್ಲಿ ವಿವಿಧ ಹಂತಗಳನ್ನೇರಿ ಇಲ್ಲಿಗೆ (ಮುಖ್ಯಮಂತ್ರಿ ಪಟ್ಟಕ್ಕೆ) ಬಂದು ತಲುಪಿದ್ದಾರೆ. - ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗುವವರೆಗೂ ಅವರ ಬಗ್ಗೆ ಯಾವುದೇ ಅಮಾನವೀಯತೆ (ಹಾವೇರಿ ಇತ್ಯಾದಿ) ದೂರು ಬಂದದ್ದಿಲ್ಲ. - ಅವರು ಪುರಸಭೆ ಅಧ್ಯಕ್ಷರಾಗಿದ್ದರು, ಶಾಸಕರಾಗಿದ್ದರು, ವಿರೋಧ ಪಕ್ಷದ ನಾಯಕರಾಗಿದ್ದರು. ಆವಾಗೆಲ್ಲ "ಸಿಡುಕುತನ" ಅನ್ನೋ ಒಂದೇ ಒಂದು ದೂರು. - ಶೋಭಾ ಅವರ ಬಗ್ಗೆ ಎರಡನೇ ದೂರು - ಅದು ತೀರ ಇತ್ತೀಚಿನದು. - ಈಗ ದೂರುಗಳು ಹಲವಿವೆ ಬಿಡಿ. :( - ಮುಖ್ಯಮಂತ್ರಿಯಾಗುವ ಮೊದಲೇ ಸಾರ್ವಜನಿಕ ವರ್ತನೆಯಲ್ಲಿ ಹೆಸರು ಕೆಡಿಸಿಕೊಂಡವರು ಕುಮಾರಸ್ವಾಮಿ. ಹಿಂದೊಮ್ಮೆ ಅವರು ಸಿಂಧ್ಯಾ ಮೇಲೆ ಕೈ ಮಾಡಿದ್ದು ವರದಿಯಾಗಿತ್ತು. - ಮುಖ್ಯಮಂತ್ರಿಯಾಗಿದ್ದಾಗಲೇ, ಮಹಿಳಾ ಕುಲಪತಿಯ ಕಚೇರಿಗೆ ಹೋಗಿ ಗಲಭೆ ನಡೆಸಿದ್ದೂ ಇದೇ ಕುಮಾರಸ್ವಾಮಿಯವರು. - ಆದರೆ ಜನ ಸಾಮಾನ್ಯರ ಬಳಿ ಮಾನವೀಯತೆಯಿಂದ ವರ್ತಿಸಿದ ವರದಿಗಳಿವೆ. - ಕುಮಾರಸ್ವಾಮಿಯವರು ಕೂಡಾ ಪದವೀಧರರು (ಬಿ ಎಸ್ ಸಿ). ಅವರ ಸಮಾಜ ಸೇವಕರಾಗಿರಲಿಲ್ಲ. ಸಿನೆಮಾ ನಿರ್ಮಾಣ ಮಾಡಿಕೊಂಡಿದ್ದರು, ರಾಜಕೀಯಕ್ಕೆ ಬರುವ ಮುನ್ನ. ಇದನ್ನೆಲ್ಲಾ ಯಾಕೆ ಬರೆದೆ ಅಂದ್ರೆ, ವಿದ್ಯಾವಂತರನ್ನ, ಮಾನವೀಯತೆಯುಳ್ಳವರನ್ನ, ಸಮಾಜ ಸೇವಕರನ್ನ ಸಿ ಎಂ ಮಾಡಿದ್ರೂ ಅವರು ಹಾಗೇ ಇರೋಲ್ಲ. ಬದಲಾಗ್ತಾರೆ ಅಂತ ಹೇಳೋಕೆ. ೨) ನಿಮ್ಮ ಲೇಖನದಲ್ಲಿ ಕೆಲವು ವಿವರಗಳನ್ನು ಮುಚ್ಚಿಟ್ಟಿದ್ದೀರ. ಪರವಾಗಿಲ್ಲ, ಆದರೆ ನೀವು ಕೊಟ್ಟಿರೋ ವಿವರಗಳನ್ನು ಓದಿದರೆ ಅವರದೇನೂ ತಪ್ಪಿಲ್ಲ ಅನ್ಸುತ್ತೆ. ತಮಗೆ ಅರ್ಥ ಗೊತ್ತಿಲ್ಲದಿರುವುದನ್ನು ಅವರು ತಮ್ಮ ಪಕ್ಕದಲ್ಲಿ ಇರುವವರ ಹತ್ತಿರ ಕೇಳಿದರು. ಮಂಡ್ಯದಲ್ಲಿ ಪದವಿ ಓದಿ, ಶಿಕಾರಿಪುರದಲ್ಲಿ ಹಲವು ಕಾಲ ರಾಜಕೀಯ ಮಾಡಿ, ಬೆಂಗಳೂರಿಗೆ ಬಂದ ಅವರಿಗೆ, ಅವರಿಗಿಂತ ೩೫-೪೦ ವರ್ಷ ಕಿರಿಯರ ಬೆಂಗಳೂರಿನ ಕಂಗ್ಲೀಷಿನ ಕೆಲವು ಶಬ್ದಗಳು ಅರಿವಾಗದಿದ್ದರೆ ಅಚ್ಚರಿಯೇನಿಲ್ಲ. ಹಾಗೆಯೇ "ಒಂದು ಸರ್ಕಾರದ ಮುಖ್ಯಸ್ಥನಾಗಿ ಅವರು ಸರ್ಕಾರಿ ನೌಕರರ ವಿಚಾರದಲ್ಲಿ ಮಾಡಬಹುದಾದ ನೆರವು ಹೆಚ್ಚು; ಇತರ ನೌಕರಿಯಲ್ಲಿ ಕಡಿಮೆ". ಇದು ನನ್ನ ಅಭಿಪ್ರಾಯ. ೩) ಕೊನೆಯದಾಗಿ - ಅವರ ಹೆಸರನ್ನು ತಪ್ಪಾಗಿ ಬಳಸಿದ್ದೀರ. ಮತ್ತು ಅಲ್ಲಲ್ಲಿ ಏಕವಚನ ಬಳಸಿದ್ದೀರ. ಅದು ನಿಮ್ಮ ಉದ್ದೇಶವಲ್ಲವೆಂದು ಕೊಳ್ಳುತ್ತೇನೆ. ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮನ್ನಾಳುವ ನಮ್ಮ ರಾಜ್ಯದ ಒಬ್ಬ ಮುಖ್ಯಮ೦ತ್ರಿಯವರನ್ನು ನಮ್ಮ ಬರಹದಲ್ಲಿ ಎಳೆದು ತ೦ದಾಗ ಅವರನ್ನು ಹೇಗೆ ಕರೆಯಬೇಕೆ೦ಬುದೇ ನಮಗೆ ಗೊತ್ತಿಲ್ಲದಿರುವಾಗ, ಮುಖ್ಯಮ೦ತ್ರಿಗಳು ನಮ್ಮ ಗೆಳೆಯ -ಗೆಳತಿಯರೊ೦ದಿಗೆ ನಡೆದುಕೊ೦ಡಿರುವ ರೀತಿ ಬಹು ಮುಖ್ಯ ವಿಷಯವಾಗುವುದಿಲ್ಲ! ಆರಿಸಿ ಕಳುಹಿಸುವ ನಾವುಗಳೇ ಇಷ್ಟು ಬುಧ್ಧಿವ೦ತರಾಗಿರುವಾಗ, ನಾವು ಕಳುಹಿಸಿರುವ ಅವರು ಎಷ್ಟು ಬುಧ್ಧಿವ೦ತರಿದ್ದಾರು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ: ಬರಹ ಬರೆದವರ ಪ್ರತಿಕ್ರಿಯೆ ನೋಡಿದಾಗ, ಬರಹದಲ್ಲಿನ ಆ ತಪ್ಪುಗಳು ಉದ್ದೇಶ ಪೂರ್ವಕ ಅಂತ ನನಗೆ ಅನ್ನಿಸಲಿಲ್ಲ. ಹಾಗಾಗಿ, ನಿಮ್ಮ ಈ ಪ್ರತಿಕ್ರಿಯೆ ಸ್ವಲ್ಪ ಖಾರವಾಯಿತೇನೋ ಅನಿಸಿತು. ಪ್ರೀತಿ ಇರಲಿ. ಇತೀ, ಉಉನಾಶೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯುಡಿಯುರಪ್ಪ ಅವರನ್ನು ಅವಮಾನಿಸುವ ಉದ್ದೇಶ ನನಗಿಲ್ಲ... ಅವರು ಹಿರಿಯರು ಏಕವಚನ ಬಳಸಿದ್ದಲ್ಲಿ ಕ್ಶಮೆ ಇರಲಿ.... ಇಂದು ಅವರ ಪರ(ಆ)ಕ್ರಮಗಳ ಬಗ್ಗೆ ಎಲ್ಲ ಕನ್ನಡಿಗರು ಮಾತನಾಡುತ್ತಿದ್ದಾರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.