ವಾರೆವ್ಹಾ ಕ್ರಿಸ್ಮಸ್ ಬಂತು

0

ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶಗಳ ರವಾನೆ, ಕ್ರಿಸ್ಮಸ್ ಸ್ನೇಹಿತರಿಗಾಗಿ ಉಡುಗೊರೆಯ ಖರೀದಿ, ನಕ್ಷತ್ರಗಳ ತಯಾರಿ ಗಡದ್ದಾಗಿಯೇ ನಡೆಯುತ್ತಿದೆ.

ಮಂಗಳೂರಿನಲ್ಲಂತೂ ಕ್ರಿಸ್ಮಸ್ ಗಾಗಿ ಕುಸ್ವಾರ್ ತಯಾರಿಸುತ್ತಾರೆ. ಕ್ರಿಸ್ಮಸ್ ತಿಂಡಿಯನ್ನು ಇಲ್ಲಿನ ಜನ ಪ್ರೀತಿಯಿಂದ ಕುಸ್ವಾರ್ ಎನ್ನುತ್ತಾರೆ. ಕ್ರಿಸ್ಮಸ್ ಕೇಕ್ ಕುಸ್ವಾರ್ ನ ಯಜಮಾನ. ಕುಸ್ವಾರ್ ನಲ್ಲಿ ಕೇಕ್ ಜೊತೆಗೆ ಕಿಡಿಯೊ, ಗುಳಿಯೊ, ಲಾಡು, ಚಕ್ಕುಲಿ, ಚಿಪ್ಸ್, ನಿವ್ರ್ಯೊ, ಚಕ್ಕುಲಿ... ಮುಂತಾದ ಇನ್ನೂ ಕೆಲವು ತಿಂಡಿಗಳಿರುತ್ತವೆ.

ಮಧ್ಯ ರಾತ್ರಿ ಕ್ರಿಸ್ಮಸ್ ಬಲಿಪೂಜೆಯ ಸಂಭ್ರದಲ್ಲಿ ಭಾಗವಾಹಿಸುವಾಗ ಆಗುವ ಅನುಭವವೇ ವಂಡರ್ ಫುಲ್. ಅಂದಹಾಗೆ ಕ್ರಿಸ್ಮಸ್ ಅಜ್ಜನೆಂದೇ ಕರೆಯಲ್ಪಡುವ ಸಾಂತಾ ಕ್ಲಾಸ್ ಜೊತೆಗೆ ಕ್ರಿಸ್ಮಸ್ ಕ್ಯಾರಲ್ಸ್ ಹಾಡಿ ಸಂಭ್ರಮಿಸಿದರೆ ವ್ಹಾರೆವ್ಹಾ....

ಕ್ರಿಸ್ಮಸ್ ಮತ್ತೆ ಬಂದಿದೆ. ಜಗಕ್ಕೆಲ್ಲಾ ಸಂತೋಷ ತಂದು. ಸಂಭ್ರಮಿಸೋಣ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮನ್ನೂ ಸೇರಿಸಿಕೊಳ್ಳಿ ಈ ಸಾರಿ :-)

ಕಿಡಿ, ಗುಳಿ ಏನು ಎಂಬುದು ಗೊತ್ತಿಲ್ಲ. ಆದರೆ ಚಿಕ್ಕವನಿದ್ದಾಗ ಸ್ನೇಹಿತನ ಮನೆಗೆ ಕ್ರಿಸ್ಮಸ್ ಹಬ್ಬದ ಸಮಯ ಹೋದಾಗಲೆಲ್ಲ ಕೇಕು ಗಡದ್ದಾಗಿ ಹೊಡೆದದ್ದು ನೆನಪಿದೆ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ
ಅದು ಕಿಡಿ ಮತ್ತು ಗುಳಿ ಅಲ್ಲ, ಕಿಡಿಯೊ ಮತ್ತು ಗುಳಿಯೊ. ಹಾಗೆ೦ದರೇನೆ೦ದು ವೀಣಾರನ್ನೇ ಕೇಳಬೇಕು. ನನಗೆ ಗೊತ್ತಿರುವುದು ಹೆಸರುಗಳು ಮಾತ್ರ. :)
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ಕ್ಷಮಿಸಿ, ತಪ್ಪಾಗಿ ಓದಿಕೊಂಡು ಬಿಟ್ಟೆ. [:http://en.wikipedia.org/wiki/Category:Christmas_food|ಕ್ರಿಸ್ಮಸ್ ಫುಡ್ ಪಟ್ಟಿಯಲ್ಲಿ] ಹುಡುಕಿದೆ, ಸಿಗಲಿಲ್ಲ. ಬಹುಶಃ ಮಂಗಳೂರಿನವರು ಯಾರೂ ಕುಸ್ವಾರ್ ಬಗ್ಗೆ ಅಲ್ಲಿ ಬರೆದಿರಲಿಕ್ಕಿಲ್ಲ. ಹೀಗಾಗಿ ನಾನೇ ಸ್ವತಃ [:http://en.wikipedia.org/wiki/Kuswar|ಕುಸ್ವಾರ್] ಹಾಗೂ [:http://en.wikipedia.org/wiki/Kidyo|ಕಿಡಿಯೋ] ಬಗ್ಗೆ ಹೊಸ ಪುಟಗಳನ್ನು ಪ್ರಾರಂಭಿಸಿದೆ.

ಕಿಡಿಯೋ ಬಗ್ಗೆ [:http://www.mangaloredelicacy.netfirms.com/kidyo.htm|ವಿವರ ಸಿಗ್ತು].
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[:http://www.konkandaiz.com/recipe_2112.html|ಉಳಿದ ಕುಸ್ವಾರ್ ರೆಸಿಪಿಗಳು ಇಲ್ಲಿವೆ] :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

veenadsouza
http://veenamanasu.blogspot.com/

ಪರ್ವಾಗಿಲ್ವೆ :)

hpnರವರೇ ಒಳ್ಳೆಯ ಸಂಶೋಧನೆಯನ್ನೇ ಮಾಡಿದಿರಿ. ನನಗೆ ಕುಸ್ವಾರ್ ಮಾಡಲು ಬರುತ್ತೆ ಆದರೆ ಅದನ್ನ ವಿವರಿಸುವುದು ಗೊತ್ತಿಲ್ಲ...

:) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೀಣಾರವರೆ,
ಸಿಡ್ನಿಯಲ್ಲಿ ಕ್ರಿಸ್ಮಸ್ ಸುತ್ತಮುತ್ತ ಜನರಿಗೆ ಹುಡುಗಾಟದ ದಿನಗಳು. ಅದನ್ನು silly season ಎಂದೇ ಕರೆಯುತ್ತಾರೆ. ಮೊನ್ನೆ ತಾನೆ ಕ್ರಿಸ್ಮಸ್ ಪಾರ್ಟಿವೊಂದಾಯಿತು. ಮೋಜು, ಉನ್ಮಾದ, ಸಂತೋಷ.

ನಮ್ಮಂಥ ಅನ್ಯರಿಗೆ, ಅದನ್ನೆಲ್ಲಾ ನಗುಮೊಗದಿಂದ ನೋಡುವ ಆನಂದ. ಜತೆಗೆ ನಾಕು ದಿನ ಸುತ್ತಾಡಿಕೊಂಡಿರುವ ಮಜ. ಬೀಚಿನಲ್ಲೋ, ಪೂಲಿನಲ್ಲೋ ಸುಡುವ ದಿನಗಳನ್ನು ತಂಪು ಮಾಡಿಕೊಳ್ಳುವ ಆನಂದ.

ನಿಮ್ಮ ಬರಹ ಓದುತ್ತಲೇ, ಇದನ್ನು ಬರೆಯುತ್ತಲೇ ಮುಂದಿರುವ ದಿನಗಳು ಬೇಗ ಬರಲಿ ಎಂಬ ತವಕ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.