ಮೊದಲು ಕನ್ನಡಿಗ ? ಅಥವಾ ಮೊದಲು ಭಾರತೀಯ ?

0


ಹೀಗೊಂದು ಮಿಂಚೆ ಸುಮಾರು ದಿನದಿಂದ ಹರಿದಾಡ್ತಾ ಇದೆ. ಒಮ್ಮೆ ನೀವು ಓದಿ. ನಿಮಗೇನ್ ಅನ್ಸುತ್ತೆ ಹೇಳಿ..

ಕನ್ನಡಿಗ ಮೊದಲೋ, ದೇಶ ಮೊದಲೋ ಎನ್ನುವ ದ್ವಂದ್ವ ಎದ್ದಿದೆ. ಇದಕ್ಕೆ ಉತ್ತರ   ಕಾಲ/ದೇಶ/ಸಂದರ್ಭಕ್ಕೆ ಸರಿಯಾಗಿ ಇರುತ್ತದೆ.

ದೇಶ  ದುಸ್ಥಿತಿ ಬಂದಾಗ ದೇಶ ಮೊದಲು ಬರುತ್ತದೆ. ಆದರೆ ಭಾಷೆ, ಉದ್ಯೋಗ ದ ವಿಷಯ ಬಂದಾಗ ಪ್ರದೇಶದ ಜನರ ಹಿತ ಮುಂದೆ ಬರುತ್ತದೆ: ಇದು ತಪ್ಪೇ ಸರಿಯೇ? ಒಬ್ಬ ಸಾಮಾನ್ಯ ಮನುಷ್ಯ ಹೇಗೆ ಚಿಂತಿಸುತ್ತಾನೆ ಎಂದು ಆಲೊಚಿಸಿದಾಗ ಕೆಳಗಿನ/ಜೊತೆಗಿರಿಸಿದ ಚಿತ್ರ ಎದ್ದು ಬರುತ್ತದೆ.

 

ಬಹುಶ: ಇದು ತಪ್ಪು ಅನ್ನುವ ಅಭಿಪ್ರಾಯ ಸರ್ವ ಸಂಗ ಪರಿತ್ಯಾಗಿ ಯಾದ ಋಷಿ ಗಳಿಗೆ ಬರಬಹುದೇ ವಿನಹ ಸನ್ಯಾಸಿಗೂ ಬರಲಾರದು( ನಮ್ಮನ್ನು ನಾವೇ

ಪ್ರಶ್ನಿಸಿಕೊಳ್ಳೋಣ:
ನಮ್ಮ  ಕುಟುಂಬದವರಲ್ಲಿ ಹತ್ತಿರದವರು ತೀರಿಕೊಂಡಾಗ ಬರುವ ಕಣ್ಣೀರು, ಪಕ್ಕದ ಮನೆಯವರು
ತೀರಿಕೊಂಡಾಗ ಬರುವುದೇ, ಅಥವಾ ಮುಂಬೈ  ಅನಾಹುತದಲ್ಲಿ ತೀರಿಕೊಂಡಾಗ ಬಂತೆ : ಸತ್ಯವಾಗಿ
ಹೇಳಿ ಎಂದಾಗಿ ಬರುವ ಸಾಮಾನ್ಯ ಜನರ ಉತ್ತರವೇನು?)

ಎಲ್ಲೋ ಓದಿದ ನೆನಪು: ಹೀಗಿನಂತಿದೆ(ಭಾಸ ಕವಿಯ ನಾಟಕ ಒಂದರಲ್ಲಿ ಇರಬೇಕು)

ಒಂದು ಕುಟುಂಬವನ್ನು ಉಳಿಸಲೋಸುಗ ಒಬ್ಬ ವ್ಯಕ್ತಿಯನ್ನು ತೊರೆಯಬೇಕು. ಒಂದು ಗ್ರಾಮವನ್ನು ಉಳಿಸಲು  ಒಂದು ಕುಟುಂಬವನ್ನು ತೊರೆಯಬೇಕು. ಒಂದು ನಾಡನ್ನು ಉಳಿಸಲು  ಗ್ರಾಮವನ್ನೆ ಬಲಿಕೊಡಬೇಕಾಗಬಹುದು.


ಕವಿಯು,  ವ್ಯಕ್ತಿ >> ಕುಟುಂಬ >> ಗ್ರಾಮ >> ನಾಡು >>
ದೇಶ  ಎಂದು ಹೇಳಿರುವನೇ ವಿನ: ದೇಶ ಮೊದಲು ಎಂದಿಲ್ಲ. ಬಹುಶ:  ವ್ಯಕ್ತಿ ಯಿಂದ  ಕುಟುಂಬ
ಉದ್ಧಾರವಾಗುತ್ತದೆ. ಎಲ್ಲಾ ಕುಟುಂಬಗಳು ಉದ್ಧಾರವಾದರೆ ಗ್ರಾಮ  ಉದ್ಧಾರವಾಗುತ್ತದೆ.
ಗ್ರಾಮಗಳು ಉದ್ಧಾರವಾದರೆ ನಾಡು
ಉದ್ಧಾರವಾಗುತ್ತದೆ
ನಾಡು ಗಳು ಉದ್ಧಾರವಾದರೆ ದೇಶ ಉದ್ಧಾರವಾಗುತ್ತದೆ  ಎನ್ನುವುದು ಆತನ ಅಭಿಪ್ರಾಯ ಇರಬಹುದೇ?

ಇನ್ನು
ನಮ್ಮ ಕಂಪನಿಗಳಲ್ಲಿ  top down approach ಮತ್ತು bottom up aproach ಎನ್ನುವುದು  
ಇದೇ ತಾನೇ?   ಕಂಪನಿಯ ಪ್ರತಿಯಿಂದು ವಿಭಾಗವೂ ಚೆನ್ನಾಗಿ ದುಡಿದರೆ ಕಂಪನಿಯು ಉದ್ಧಾರ
ಆಗುವುದು ತಾನೇ? ಹಾಗೇ ಪ್ರತೀ ಪ್ರದೇಶ ಮುಂದು ಬಂದರೆ ದೇಶ ಮುಂದು ಬರಲು ಸಾಧ್ಯ
ಅಲ್ಲವೇ? ಇದಕ್ಕೆ ಪೂರಕವಾಗಿ ಕೆಳಗಿನ ಪ್ರಯೋಗವನ್ನು ಗಮನಿಸಿ( ಇದು ಕಟ್ಟು ಕತೆಯೇನಲ್ಲ : ಎಲ್ಲಿ ಯಾವಾಗ ಮಾಡಿದರು ಎಂದು ನೆನಪಿಲ್ಲ)

ಒಂದು
ಟ್ಯಾಂಕ್ ನಲ್ಲಿ ಒಂದು ಕಪಿ/ಕೋತಿ ಮತ್ತು ಅದರ ಮರಿಯನ್ನು ಇರಿಸಿ ಕೆಳಗಿನಿಂದ ನೀರನ್ನು
ಬಿಟ್ಟು ಕ್ರಮೇಣ ನೀರನ್ನು ಹೆಚ್ಚಿಸಿದರಂತೆ. ಮೊದಲು ಮರಿ ತಾಯಿಯ ಕಾಲಬುಡದಲ್ಲಿ
ಇತ್ತಂತೆ, ನೀರು ಹೆಚ್ಚಿದಂತೆ ತಾಯಿ ಮರಿಯನ್ನು ಎದೆಗೆ ಅಪ್ಪಿ ಹಿಡಿಯಿತಂತೆ. ಆಮೆಲೆ  ನೀರು ಕುತ್ತಿಗೆಯ ಹತ್ತಿರ ಬಂದಾಗ ಮರಿಯನ್ನು ತಲೆಯೆ ಮೇಲೆ ಇಟ್ಟುಕೊಂಡಿತಂತೆ. ನೀರು ಇನ್ನೂ ಏರಿದಾಗ ಮರಿಯನ್ನು ಕೆಳಗೆ ಹಾಕಿ ಅದರೆ ಮೇಲೆ ನಿಂತಿತಂತೆ!

ದೇಶದ ಹೊರಗೆ ನಡೆಯುವ ಸಮ್ಮೇಳನಗಳಲ್ಲಿ ಭಾರತೀಯ ಎಂತಲೂ ದೇಶದೊಳಗಿನ
ಕಾರ್ಯಕ್ರಮಗಳಲ್ಲಿ ಯಾವ ರಾಜ್ಯದವನಂತಲೂ, ರಾಜ್ಯದೊಳಗಿನ ಕಾರ್ಯಗಳಲ್ಲಿ ಯಾವ
ಊರಿನವನಂತಲೂ,  ಸಂಬಂಧಿಕರ ಸಮಾರಂಭಗಳಲ್ಲಿ ಯಾರ ಸಂಬಂಧಿ ಎಂತಲೂ
ಗುರುತಿಸಿಕೊಳ್ಳುತ್ತೇವೆ. ಯಾರೂ ರಾಜ್ಯದ/ಪ್ರಾಂತ್ತ್ಯದ/ಸಂಬಂಧಿಕರ ಸಮಾರಂಭಗಳಲ್ಲಿ  ತಾನು ಭಾರತೀಯ ಎಂದು ಹೇಳಿಕೊಲ್ಲುವುದಿಲ್ಲ, ಆದರ ಅಗತ್ಯ ಇಲ್ಲ ಅಲ್ಲವೇ?

ನಾನು ವಿಶ್ವ ಮಾನವ  ಪಟ್ಟಕ್ಕೆ ಏರದೆ ಕಾಲ ದೇಶ ಸಂದರ್ಭ ನೋಡಿ ಕನ್ನಡಿಗ ಎಂದು ನಾನು ಮೊದಲು ಗುರುತಿಸಿಕೊಳ್ಳುತ್ತೇನೇಯೇ ವಿನಹ ಭಾರತೀಯ ಎಂದು ಮೊದಲು ಅಲ್ಲ.
ಹಾಗಾದರೆ ನೀವು?
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವಸಂತರವರೆ, ತುಂಬಾ ಸಮಯೋಚಿತವಾದ ಪ್ರಶ್ನೆ ನಿಮ್ಮ ಲೇಖನದಲ್ಲಿದೆ, ಬೆಂಗಳೂರಿನಲ್ಲಿ ಕುಳಿತು ನಾವು ಮೊದಲು ಕನ್ನಡಿಗರೆಂದು ಎದೆ ತಟ್ಟಿ ಹೇಳಬಹುದು, ಅಲ್ಲಿದ್ದಾಗ ನಾನೂ ಅದನ್ನೇ ಮಾಡುತ್ತಿದ್ದೆ. ದೇಶ ಬಿಟ್ಟು ಹೊರ ಬಂದಾಗ ಮೊದಲು ನಾನು " ಭಾರತೀಯ" ನಾಗಿ, ನಂತರದಲ್ಲಿ ’ಕನ್ನಡಿಗ’ ನಾಗುತ್ತೇನೆ. ಉದಾಹರಣೆಗೆ, ದುಬೈನ ಬೀದಿಗಳಲ್ಲಿ ಓಡಾಡುವಾಗ, ಎಲ್ಲೆಲ್ಲೂ ನಿಮಗೆ ಭಾರತೀಯರೇ ಕಾಣ ಸಿಗುತ್ತಾರೆ, ಆದರೆ ಅವರ ರಾಜ್ಯ, ಭಾಷೆ, ಧರ್ಮ, ಸಾಮಾಜಿಕ ಸ್ಥಿತಿ ಗತಿಗಳು ಬೇರೆ ಬೇರೆಯಾಗಿರುತ್ತವೆ. ಆದರೆ " ಭಾರತೀಯ" ಎಂಬ ವಿಶೇಷಣ, ಅಲ್ಲಿ ನಮ್ಮನ್ನು ಒಂದುಗೂಡಿಸುತ್ತದೆ. ಒಬ್ಬ ಭಾರತೀಯನನ್ನು ಕಂಡಾಗ ಮತ್ತೊಬ್ಬ, ಅವನೊಟ್ಟಿಗೆ ತನ್ನ ಮನದ ಭಾವನೆಗಳನ್ನು ಹೇಳಿಕೊಳ್ಳಲು ಆರಂಭಿಸುತ್ತಾನೆ. ಅದು " ಭಾರತೀಯತೆ", ಅದೇ ನಮ್ಮೂರಿನಲ್ಲಿ ಕನ್ನಡದವರನ್ನು ಕಂಡರೆ ತಮಿಳರಿಗೆ ಸಿಟ್ಟು, ತಮಿಳರನ್ನು ಕಂಡರೆ ಮಲಬಾರಿಗಳಿಗೆ ಸಿಟ್ಟು,!! ಆದರೆ ಇಲ್ಲಿ ಎಲ್ಲರೂ ಒಂದೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.