ನಮ್ಮ ಮನೆಯ ದೀಪಾವಳಿ

0

ಮತ್ತೊಂದು ದೀಪಾವಳಿ ಸಂದಿದೆ. ನಾವು ವರುಷದಂತೆ ಸರಳ ಸುಂದರವಾಗಿ ಆಚರಿಸಿಕೊಂಡೆವು. ನಮ್ಮಲ್ಲಿ ದೀಪಾವಳಿಯೆಂದರೆ ತುಳಸೀ ಪೂಜೆ, ಗೋಪೂಜೆ, ಊಟ.

ಗೋಪೂಜೆಗಾಗಿ ಬೆಳಗ್ಗೆಯೇ ಹಸುಕರುಗಳೆಲ್ಲವನ್ನು ಮೀಯಿಸಲಾಗುತ್ತದೆ. ಸಂಜೆ ತುಳಸೀ ಕಟ್ಟೆಯ ಸುತ್ತ ಸ್ವಲ್ಪ ಅಲಂಕಾರ ಮಾಡುತ್ತೇವೆ. ಮೊದಲೆಲ್ಲ ರಾತ್ರಿಯ ವೇಳೆ ಸ್ವಲ್ಪ ಪಟಾಕಿ ಸುಡುವುದಿತ್ತು. ವರುಷಗಳ ಹಿಂದೆಯೇ ಅದನ್ನು ತ್ಯಜಿಸಿ ನಾವು ಶಾಂತ ದೀಪಾವಳಿಯನ್ನು ನೆಚ್ಚಿಕೊಂಡಿದ್ದೇವೆ.

ದಶಕಗಳ ಹಿಂದೆ ಕೊಂಡು ತಂದಿದ್ದ ಮಣ್ಣಿನ ಹಣತೆಗಳು ಒಂದೊಂದಾಗಿ ಒಡೆದು ಹೋಗಿ, ಕೆಲವು ವರುಷಗಳ ಹಿಂದೆ ನಾನು ಕೈಯಿಂದ ತಯಾರಿಸಿದ ಸ್ವಲ್ಪ ಒರಟೊರಟಾದ ಹಣತೆಗಳು ಈಗ ಮೆಜಾರಿಟಿಯಲ್ಲಿವೆ. ಅವುಗಳನ್ನು ಅಮ್ಮ ಉರಿಸಿದ್ದೂ, ನಾನು ಚಿತ್ರಿಸಿದ್ದೂ ಆಯಿತು. ನಾನು ದೀಪಾವಳಿಯನ್ನು ಚಿತ್ರಿಸಲೆಂದೇ ಕಿಲೋಗ್ರಾಮ್ ನಷ್ಟು ಭಾರವಿರುವ ನನ್ನ ಟ್ರೈಪಾಡನ್ನು ಹೊತ್ತು ಊರಿಗೆ ತಂದಿದ್ದೇನೆ. ನಾನು ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಚಿತ್ರಿಸುವುದರಲ್ಲಿ ನಿರತನಾಗಿದ್ದೆ!.

ಎಂದಿನಂತೆ ತಂದೆ ತಮ್ಮ ಮಾಸಲು ಹಳೆಯ ಕಾಗದಗಳಿಂದ ಮಂತ್ರಗಳನ್ನೋದಿ ತುಳಸೀ ಪೂಜೆ ಮಾಡಿದರು. ಪ್ರತಿ ವರುಷದಂತೆ ಮಂತ್ರಗಳನ್ನು ಹೊಸ ಕಾಗದಕ್ಕೆ ಪ್ರತಿಯಿಳಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು :)

ಗೋಪೂಜೆಯ ಸಮಯದಲ್ಲಿ ಹೆಚ್ಚುಕಮ್ಮಿ ಅದು ಪೂಜಾವಿಧಿಯ ಅಂಗವೇನೋ ಎಂಬಂತೆ ನನ್ನಮ್ಮ/ಅಜ್ಜಿ ಪಾಲಿಸಿಕೊಂಡು ಬಂದಿರುವ ಕ್ರಮವೊಂದಿದೆ. ಅದೇನೆಂದರೆ, ತಂದೆಯ ಮಂಗಳಾರತಿಯ ಬಳಿಕ ಗೋವುಗಳನ್ನುದ್ದೇಶಿಸಿ 'ಕಾಡ ಸೊಪ್ಪು ತಿಂದು, ತೋಡ ನೀರು ಕುಡಿದು ಸುಖವಾಗಿ ಬಾಳಿರಿ' ಎಂದು ಹರಸುವುದು!. ನನಗೀಗಲೂ ನೆನಪಿದೆ, ನಾನು ಚಿಕ್ಕವನಿದ್ದಾಗ ದೀಪಾವಳಿ ಈ ಹಂತಕ್ಕೆ ಬರುತ್ತಲೂ ಡಿಪ್ರೆಶನ್ ಗೆ ಒಳಗಾಗುತ್ತಿದ್ದೆ. ಏಕೆಂದರೆ, ಆ ಹೊತ್ತಿಗೆ ಪಟಾಕಿಗಳೆಲ್ಲ ಮುಗಿದು, ಪೂಜಾಕಾರ್ಯಗಳೆಲ್ಲವೂ ಮುಗಿದು ಮರುದಿನದ ಶಾಲೆ ನೆನಪಾಗಲು ಶುರುವಾಗುತ್ತಿತ್ತು.

ಊಟದ ಬಳಿಕ ನಾನು ತೆಗೆದ ಚಿತ್ರಗಳನ್ನು ಕಂಪ್ಯೂಟರ್ ನಲ್ಲಿ ನೋಡುವ ಹೊಸ ಕಾರ್ಯಕ್ರಮ ೨ ವರ್ಷಗಳಿಂದ ಸೇರಿಕೊಂಡಿದೆ.

ನಮ್ಮ ನೆರೆಮನೆಯಿಂದ ಬಂದ ಸುದ್ದಿ: ಅವರಲ್ಲಿ ನಿನ್ನೆ ಪಟಾಕಿಯ ಭರಾಟೆ ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಆಘಾತಗೊಂಡು ಅವರ ನಾಯಿ ಅಸುನೀಗಿದೆ :( ಸಶಬ್ದವಾದ ದೀಪಾವಳಿಯನ್ನು ನಾವೆಂದು ಕೈ ಬಿಡುವೆವೆಂದು ನನಗೆ ಅರ್ಥವಾಗುತ್ತಿಲ್ಲ.

ನಿಮಗೆಲ್ಲರಿಗೆ ಶಾಂತಿ, ನೆಮ್ಮದಿಯ ಬೆಳಕು ಬರಲೆಂದು ಹಾರೈಸುವ,
ವಸಂತ್ ಕಜೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದೊಂದು ದೃಶ್ಯ ಕಾವ್ಯ!

- ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೋಟೋ ಸರಿಯಾಗಿ ತೆಗಿಬೇಕಾಗಿತ್ತು ! ಕರು ಮುಖ ಪೂರ್ತಿ ಕಾಣಿಸ್ತಿಲ್ಲಾ..ಆಮೇಲೆ ಇನ್ನೂ ಚೆನ್ನಾಗಿ ಒಳ್ಳೆಳ್ಲೆ ಪೋಟೋ ಹಾಕಬಹುದಾಗಿತ್ತು..
ಆದರೂ ಚೆನ್ನಾಗಿದೆ.. ಇನ್ನೂ ಜಾಸ್ತಿ ಹಬ್ಬ ಮಾಡಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ವೋ ಮುರಳಿ, ಅದು ಸರಿಯಾಗಿಯೇ ಇದೆ. ಫೋಕಸ್ ಇರೋದು ಕರು ಮೇಲಲ್ಲ - ಅದರ ಮೇಲೆ ಸುರಿದಿರೋ ನೀರಿನ ಮೇಲೆ.

ಯೂರೋಪಿನ ಒಬ್ಬ ಸ್ನೇಹಿತನಿಗೆ ಕನ್ನಡದ ಬಗ್ಗೆ ತಿಳಿಸುತ್ತಾ ಇವತ್ತು ಈ ಪುಟ ತೋರಿಸಿದೆ. "ಇದೇನು ಜಿಂಕೆಯಾ" ಅಂತ ಕೇಳಿದ ;-)

ಫೋಟೋ ಮಾತ್ರ ಬಹಳ ಒಳ್ಳೆಯ ಕ್ವಾಲಿಟಿಯದ್ದು. ವಸಂತ್ ರವರಿಂದ ಫೋಟೋಗ್ರಫಿ ಕಲಿಯೋದು ಬಹಳಷ್ಟಿದೆ ಅನ್ಸತ್ತೆ :)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೂರನೆಯ ಚಿತ್ರ ಜಾಸ್ತಿ exposure ಇಟ್ಟು ತೆಗೆದಿರೋದಲ್ವಾ?
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಳಸಿ ಪೂಜೆಗೆ ಇನ್ನು ದಿನ ಇದೆ ಆಗಲೆ ನೀವು ಮಾಡಿ ಮುಗಿಸಿದ್ರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಳಸೀ ಪೂಜೆ ದಿನಾ ಮಾಡ್ಬೇಕಲ್ವಾ?? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೇ ಪೂಜೆ ಕೂಡ ದಿನಾ ಮಾಡ್ಬಹುದು, ದೀಪ ದಿನಾ ಹಚ್ಚೋಲ್ವೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ವಸ೦ತ ಕಜೆ ತಿಳಿಸಿರುವ೦ತೆ ಅವರ ಆಚಾರದ೦ತೆ ದೀಪಾವಳಿಯ೦ದೇ ತುಳಸೀಪೂಜೆ ಮತ್ತು ಗೋಪೂಜೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ದೀಪಾವಳಿ ಸಂಬ್ರಮ ವನ್ನು ಹಂಚಿಕೊಂಡಿದ್ದಕ್ಕೆ ವಂದನೆಗಳು.

ಈ ಸರಿ ದೀಪಾವಳಿ ಅಂತೂ ಹೊಣಗಣೇಶ!.. ಬರೀ 3-4 ಕ್ಯಾಂಡಲ್ ಹಚ್ಚಿದ್ದಸ್ಟೇ ನಮ್ಮ ದೀಪಾವಳಿ.
ಊಟ .. ಮತ್ತೆ ಅದೇ ಅನ್ನ ಸಾರು!

youtube ನಲ್ಲಿ ಪಟಾಕಿ ಹೊಡೆದೆ!. Candle ಅಲ್ಲಿ ದೀಪ ಹಚ್ಚಿದೆ. ಹಚ್ಚಿದ್ದು 3-4 ಕ್ಯಾಂಡಲ್ ಆದ್ರೂ ತೆಗೊನ್ಡಿದ್ದು ಮೂವತ್ತು ಫೋಟೋಗಳು.!

ಆದ್ರೂ ನಮ್ಮ ಸೆಲೆಬ್ರೇಶನ್ ಬೊಮ್ಬಾಟ್ ಆಗಿತ್ತು.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದವರಿಗೆಲ್ಲ ವಂದನೆಗಳು.

ಸುನಿಲ್ ಅವರೇ, ಇಂಥ ಚಿತ್ರಗಳಿಗೆ ಯಾವುದೇ ಹೆಸರಿರುವುದು ನನಗೆ ತಿಳಿದಿಲ್ಲ. ಇದು long exposure ನ ಮಹಿಮೆಯಷ್ಟೆ. ನಾನು ಈ ಚಿತ್ರಕ್ಕಾಗಿ ೮ ಸೆಕೆಂಡ್ exposure ಇಟ್ಟಿದ್ದೆ.

ಮುರಳಿಯವರೇ, ಕರುವಿನ ಮುಖ ಸಂಪೂರ್ಣ ಇದ್ದಿದ್ದರೆ ಒಳ್ಳೆಯದಿತ್ತು ಎನ್ನುವುದು ನಿಜ. hpn ಅವರಂದಂತೆ ನನ್ನ ಗಮನ ನೀರಿನ ಮೇಲಿತ್ತು ಎನ್ನ್ನುವುದೂ ಹೌದು.

ನಾನು ಸದ್ಯಕ್ಕೆ ೨೧ ರ ತನಕ ಡಯಲಪ್ ಕನೆಕ್ಶನ್ ನಲ್ಲಿರುವುದರಿಂದ ನನಗೆ ಹೆಚ್ಚು ಚಿತ್ರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲಾಗುತ್ತಿಲ್ಲ :(

ವಂದನೆಗಳು,

ವಸಂತ್ ಕಜೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸದ್ಯಕ್ಕೆ ನನ್ನದೂ ಡಯಲ್ ಅಪ್ ಪಾಡು :P

ಭಾರತದಲ್ಲಿದ್ದೀರಾ? ಸಿಗೋ ಚಾನ್ಸಸ್ ಉಂಟಾ? :)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಸಂತರೆ,
ತುಂಬಾ ಸೊಗಸಾಗಿದೆ... ಲಾಂಗ್ ಎಕ್ಷಪೋಷರ್‍ ಪ್ರಯೋಗವೂ ಚೆನ್ನಾಗಿ ಕೆಲಸ ಮಾಡಿದೆ.
ಅಂದ ಹಾಗೆ, ಐ.ಎಸ್.ಓ ಜತೆ ಕೂಡ ಆಟವಾಡ ಬೇಕಾಯಿತೆ?
ಚಿತ್ರ-ಕತೆ ಹಂಚಿಕೊಂಡದ್ದಕ್ಕೆ ಥ್ಯಾಂಕ್ಸ್...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿವಾಸಿಯವರೇ,
ವಂದನೆಗಳು. ISO ಹೆಚ್ಚು ಬದಲಾಯಿಸಬೇಕಾಗಿ ಬರಲಿಲ್ಲ. ನನಗೆ ಹೇಗೂ ಹಲವಾರು ಸೆಕೆಂಡುಗಳ ಎಕಿಸ್ಪೋಷರ್ ಬೇಕಿತ್ತಷ್ಟೆ?.
ವಸಂತ್ ಕಜೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.