ರಿಮೋಟ್ ಅರಣ್ಯೀಕರಣ

0
ನನಗೊಬ್ಬರು ಸ್ನೇಹಿತೆಯಿದ್ದಾಳೆ. ಅವಳ ಹೆಸರು ಶ್ರೀಮತಿ ರಶ್ಮಿ ರಾಜೇಶ್. ವಾಸ್ತವ್ಯ ಅಮೆರಿಕ. ನಾನು ನೋಡಿದ್ದು ಒಮ್ಮೆ ಮಾತ್ರ ಅವರ ಮದುವೆಯಲ್ಲಿ. ಅಂತರ್ಜಾಲದಲ್ಲಿ ನನಗೆ ಪರಿಚಯವಾಗಿ, ಅವರ ಮದುವೆಗೆ ನಾನು Photographer ಆಗಿ ಬರಬೇಕೆಂದು ಕೇಳಿಕೊಂಡಳು. ಹಾಗೆ ಅವರ ಮದುವೆಯ ಚಿತ್ರಗಳನ್ನು ತೆಗೆಯುವ ಭಾಗ್ಯ ನನ್ನದಾಯಿತು. ಇದಾಗಿ ಬಹುಶ: ೨ ವರ್ಷವಾಯಿತು.

ಈ ಮಧ್ಯೆ ನನ್ನ ಮತ್ತು ಅವಳ ಮಧ್ಯೆ ಗಿಡಮರಗಳ ಬಗ್ಗೆ, ಅರಣ್ಯೀಕರಣದ ಬಗ್ಗೆ ನಮ್ಮ ಸಮಾನ ಆಸಕ್ತಿಯ ವಿನಿಮಯ ಆಗಿದೆ. ಇತ್ತೀಚೆಗೆ ಅವಳು ನನ್ನಲ್ಲಿ ಒಂದು ವಿಶೇಷವಾದ ಕೋರಿಕೆಯನ್ನು ಮುಂದಿಟ್ಟಳು. ಇನ್ನು ಕೆಲವು ದಿನಗಳಲ್ಲಿ ರಾಜೇಶ್ ಹುಟ್ಟುಹಬ್ಬವಿರುವುದಾಗಿಯೂ, ಆ ಪ್ರಯುಕ್ತ ನಾನು ನಮ್ಮ ಊರಿನಲ್ಲಿ ನಮ್ಮ ಸ್ವಂತ ಜಾಗದಲ್ಲಿ ಗಿಡಮರಗಳನ್ನು ನೆಡಿಸಬೇಕಾಗಿಯೂ, ಅದಕ್ಕೆ ತಗಲುವ ಖರ್ಚನ್ನು ತಾನು ಕೊಡುವುದಾಗಿಯೂ ಕೇಳಿಕೊಂಡಳು !. ನಾನೋ ಊರಿನಿಂದ ತುಂಬ ಹೊರಗಿದ್ದೇನೆ. ನನ್ನಮ್ಮನನ್ನು ಆ ಕೆಲಸಕ್ಕೆ ಹಚ್ಚಿದೆ. ಕೆಲವು ಮರಗಳ ನರ್ಸರಿ ಗಿಡಗಳನ್ನು ತಂದೆ ತಂದದ್ದಾಯಿತು. ಅವುಗಳನ್ನು ನೆಡಿಸಿದ ಬಳಿಕ ಅವಳಿಗೆ ಸುದ್ದಿ ಮುಟ್ಟಿಸಿದೆ. ಮೊನ್ನೆ ಊರಿಗೆ ಹೋಗಿದ್ದಾಗ ಅವುಗಳನ್ನು ನೋಡಿ ಆನಂದಿಸಿದೆ ಕೂಡ. ನಮ್ಮ ಸ್ಥಳದಲ್ಲಿ ನಡೆದ ಕೆಲಸಕ್ಕೆ ದುಡ್ಡು ತೆಗೆದುಕೊಳ್ಳುವುದು ನನ್ನಿಂದಾಗಲಿಲ್ಲ.
ಅವಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕಾರ್ಯಗಳಿಗಾಗಿ ತನಗೆ ಪ್ರತಿವರ್ಷ ಖರ್ಚು ಮಾಡುವ ಉದ್ದೇಶವಿದೆಯೆಂದು ಕೇಳಿಕೊಂಡಿದ್ದಾಳೆ ಮತ್ತು ಯೋಗ್ಯ ಫಲಾನುಭವಿಗಳನ್ನು ಹುಡುಕುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾಳೆ. ನನಗೆ ಇನ್ನೂ ಯಾರೂ ಸಿಕ್ಕಿಲ್ಲ, ಇಷ್ಟರವರೆಗೆ!. ಊರಿನಲ್ಲಿ ರಬ್ಬರ್ ಕೃಷಿಗಾಗಿ, ಮತ್ತು ಇತರ ಅಭಿವೃಧ್ಧಿಯ ಹೆಸರಿನಲ್ಲಿ ಅರಣ್ಯ ಸರ್ವನಾಶದತ್ತ ಸಾಗಿದೆ. ಎಲ್ಲರೂ ಸವರುವವರೇ ಹೊರತು ನೆಡುವವರು ಯಾರೂ ಕಾಣಲಿಲ್ಲ !.
ನೋವಿನೊಂದಿಗೆ...
ವಸಂತ್ ಕಜೆ.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವಸಂತ್ ಅವರೆ,

ಒಂದು ತಲೆಮಾರು ಹಿಂದಿನ ಮಾತಿನಲ್ಲಿ ಹೇಳುವುದಾದರೆ

"ನಿಮ್ಮ, (ಹಾಗೂ ನಿಮ್ಮ ಗೆಳತಿಯವರ) ತರಹ ಜನಗಳು ಇರುವುದರಿಂದಲೇ, ಇನ್ನೂ ಭೂಮಿಯಲ್ಲಿ ಮಳೆ-ಬೆಳೆಗಳಾಗುತ್ತಿವೆ"

ಒಳ್ಳೆಯದಾಗಲಿ.

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಒಳ್ಳೆಯ initiative. ಆದರೆ ಗಿಡ ನೆಡಿಸುವವರು ಅಷ್ಟೇ ಅಲ್ಲ, ಗಿಡ ನೆಡುವವರೂ ಕೂಡ ಶ್ಲಾಘನೆಗೆ ಪಾತ್ರರು. passionate ಆಗಿ ಗಿಡ ನೆಡುವುದು ಎಲ್ಲರಿಂದಲೂ ಸಾಧ್ಯವಾಗದ ಕೆಲಸ. :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಬ್ಬ ವ್ಯಕ್ತಿ ಸ್ವಯಂಪ್ರೇರಿತರಾಗಿ ಮತ್ತೊಬ್ಬರ ಹತ್ತಿರ ಗಿಡ ನಡೆಸುವುದು ಇಂದಿನ ದಿನಗಳಲ್ಲಿ ಶ್ಲಾಘನೀಯವೆ.
ಆದರೆ ಅಮೇರಿಕದಂತಹ (ಅಥವ ಇಂದಿನ ಬೆಂಗಳೂರು/ಮುಂಬೈಯಂತಹ ಶಹರುಗಳು) ದೇಶದ ಶ್ರೀಸಾಮಾನ್ಯನ Ecological foot print ಗಮನಿಸಿದರೆ ಇವರು ಇಲ್ಲಿ ಮಾಡುತ್ತಿರುವುದು ಘೋರ ಪಾಪಕ್ಕೆ ಸಣ್ಣ ಪಶ್ಚಾತಾಪವಷ್ಟೆ.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ಕೆಲ್ಸ ವಸಂತ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಸಂತ್,
ಮೊದಲನೆಯ ಫೋಟೋ ಬಹಳ ಇಷ್ಟವಾಯಿತು. ಆ ಹಿನ್ನೆಲೆ ಇಟ್ಟುಕೊಂಡು ದೀಪವನ್ನು ಫೋಕಸ್ ಮಾಡಿರುವುದು ಬಹಳ ಒಳ್ಳೆಯ ಐಡಿಯ ಅನ್ನಿಸಿತು. ಮೇಲೆ ಸ್ವಲ್ಪ ಕಟ್ ಆಗಿಲ್ಲದಿದ್ದರೆ ಇನ್ನೂ ಚೆಂದವಿರುತ್ತಿತ್ತು.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣಾ ,
ಈ ಮರ ಗಿಡ ಬೆಳೆಸುವ "ಪುಣ್ಯ" ಕಾರ್ಯಗಳನ್ನು ಔಟ್ ಸೋರ್ಸ್ ಮಾಡುತ್ತಿರುವುದು ಒಳ್ಳೆಯದೇ , ಆದರೆ ಅಣ್ಣಾ ಅಮೇರಿಕಾದಿ೦ದ ಹೊರಗೆ ಬರುತ್ತಿರುವ ವಿಷವನ್ನು ನೋಡಿದರೆ ನಮ್ಮ ದೇಶದ ಪೂರ್ತಿ ಕಾಡು ಬೆಳೆಸಿದರೂ ಪ್ರಯೋಜನವಿಲ್ಲಾ.
ಅದೂ ಅಲ್ಲದೇ ಇವೆಲ್ಲಾ "ಪಾಶ್ಚಾತ್ತ್ಯ ದೇಶದ ಮನೋಬುದ್ಧಿಯ" ಪಶ್ಚಾತ್ತಾಪದ ಕಾರ್ಯಗಳೇ ಹೊರತು , ದಾರಿ/ದರ್ಶನ ಮೂಡಿಸುವ ಕೆಲಸಗಳಲ್ಲಾ..

ಒ೦ದು ದೃಷ್ಟಿಯಲ್ಲಿ ನೋಡಿದರೆ ಭಯ ಮೂಡಿಸುವ೦ತದು.
ಕಾರಣ ನಮ್ಮ ನೆಲ-ಜಲಗಳ ರಕ್ಷಣೆಗಾಗಿ , ನಾವು ಪರದೇಶದಿ೦ದ ಬರುವ ಸ೦ಪನ್ಮೂಲದ ಮೇಲೆ ಆವಲ೦ಬಿಗಳಾಗಿದ್ದೇವೆ.
ಅ೦ದರೆ ಇಲ್ಲಿಯ ಜನಕ್ಕೆ ಯಾವುದಕ್ಕೂ ಆಸ್ತೆ ಇಲ್ಲಾ...ಎಲ್ಲಕ್ಕೂ ನಿರ್ಲಕ್ಷ್ಯ ಇದಕ್ಕಿನ್ನಾ ಶೋಕದಾಯಕವಾದದ್ದು ಯಾವುದಿದೆ ?
ಆಮೇಲೆ ಮರ ಗಿಡ ಬೆಳೆಸೋಕ್ಕೆ "ಡಾಲರ್ " ಸಹಾಯ ಬೇಕಿಲ್ಲಾ ಅ೦ದ್ಕೊ೦ಡಿದ್ದೇನೆ.

"ರಿಮೋಟ್ ಅರಣ್ಯೀಕರಣ"-- ಅನ್ನುವುದ೦ತೂ ಅಸ೦ಭವ , ಅರಣ್ಯದಲ್ಲಿರುವ ಪಕ್ಷಿ ಮರ ಸಸಿಗಳನ್ನು ನಾನು
ದುಡ್ಡು ಕೊಟ್ಟು ರಿಮೋಟ್ /ಮೊಬೈಲ್ ಮೂಲಕ ಕಾಪಾಡ್ತೀನಿ ಅನ್ನುವುದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೋ ಗೊತ್ತಿಲ್ಲಾ .
ನಾಳೆ ಬೆಳೆಸಿದ ಮರ ಸತ್ತು ಹೋದರೆ , ಬಡ್ಡಿ ಮಗ ದುಡ್ಡೂ ಇಸ್ಕೊ೦ಡು ಕೆಲ್ಸಾ ಸರಿಯಾಗಿ ಮಾಡಲ್ಲಾ ಅನ್ನ ಬಹುದು ! ಜೋಪಾನ.
ಪ್ರಕೃತಿಗೆ ತನ್ನದೇ ಆದ ಶಕ್ತಿ ಚೈತನ್ಯವಿದೆ - ಗಮನಿಸಿ.
ಮುರಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುರಳಿ ಮತ್ತು ಶ್ಯಾಮ ಹೇಳುವುದರಲ್ಲಿ ಒಂದು ಗಂಭೀರವಾಗಿ ಅವಲೋಕಿಸಬೇಕಾದ ಕಹಿ ಸತ್ಯ ಇದೆ. ಪಾಶ್ಚಾತ್ಯರು ಮಾಡುತ್ತಿರುವ ಹಲವು "ಚ್ಯಾರಿಟಿ" ಕೆಲಸಗಳು (ಒಳ್ಳೆಯ ಕಾರ್ಯಗಳು ಎಂಬುದರ ಬಗ್ಗೆ ಸಂದೇಹವಿಲ್ಲದಿದ್ದರೂ) ಮುರಳಿ ಹೇಳಿರುವಂತೆ "ಪಾಶ್ಚಾತ್ತ್ಯ ದೇಶದ ಮನೋಬುದ್ಧಿಯ" ಪಶ್ಚಾತ್ತಾಪದ ಕಾರ್ಯಗಳು ಎಂದನಿಸದೇ ಇರುವುದಿಲ್ಲ.

ಪಾಶ್ಚಾತ್ಯರ ಜೊತೆ ಕೆಲವು non-profitಉ ಗಳಲ್ಲಿ ಭಾಗವಹಿಸುತ್ತಿರುವ ನನಗೆ ಅದ್ಯಾಕೋ ಅವರುಗಳು ದಾರಿ/ದರ್ಶನ ಅಥವ ಸಿದ್ಧಾಂತಕ್ಕಿಂತ ಹೆಚ್ಚಾಗಿ ಎಲ್ಲದರಲ್ಲೂ ಹಾಗೂ ಎಲ್ಲದನ್ನೂ ಬ್ಯುಸಿನೆಸ್ ಆಗಿ ನೋಡುವುದು ಹೆಚ್ಚು ಗಮನಕ್ಕೆ ಬಂತು, ಆಶ್ಚರ್ಯವಾಯ್ತು.

ಅಮೇರಿಕಾದಿ೦ದ ಹೊರಗೆ ಬರುತ್ತಿರುವ ವಿಷವನ್ನು ನೋಡಿದರೆ...

ಅಮೇರಿಕದ ಕಸ ಭಾರತಕ್ಕೆ ಬಂದು ಬೀಳುತ್ತಿರುವ ಹಲವು ದೃಷ್ಟಾಂತಗಳಿವೆ. ಇತ್ತೀಚೆಗಷ್ಟೆ ಹಿಂದೂ ಪೇಪರಿನಲ್ಲಿ [:http://www.hinduonnet.com/2007/10/20/stories/2007102056891600.htm|ಹೀಗೊಂದು ಕಣ್ಣಿಗೆ ಬಿದ್ದದ್ದರ ವರದಿಯೂ ಬಂದಿತ್ತು].
ನಾಗೇಶ ಹೆಗಡೆಯವರು ತಮ್ಮ ಪುಸ್ತಕ "ಸುರಿಹೊಂಡ ಭರತಖಂಡ"ದಲ್ಲಿ - ಭಾರತ ಹೇಗೆ ಜಾಗತಿಕ ಕಸದಬುಟ್ಟಿಯಾಗಿಬಿಟ್ಟಿದೆ ಎಂಬುದರ ಬಗ್ಗೆ ಬರೆದಿದ್ದಾರೆ.

ಇದಲ್ಲದೆ ಈ ಬಾರಿ ನೊಬೆಲ್ ಪ್ರಶಸ್ತಿ ಪಡೆದ ಅಲ್ ಗೋರ್ ಕುರಿತು ಚಿತ್ರಿಸಲಾದ (ಆಸ್ಕರ್ ಪ್ರಶಸ್ತಿ ಪಡೆದ) The Inconvenient Truth ಎಂಬ ಡಾಕ್ಯುಮೆಂಟರಿಯಲ್ಲಿ ಸ್ವತಃ ಅಮೇರಿಕ ವಿಶ್ವದಾದ್ಯಂತ ಆಗುತ್ತಿರುವ ಮಾಲಿನ್ಯಕ್ಕೆ ಎಷ್ಟು ಕಾರಣವಾಗಿದೆ ಎಂಬುದನ್ನು ಅವರುಗಳೇ ಅವಲೋಕಿಸಿಕೊಂಡಿದ್ದಾರೆ. ಚೀನ, ಭಾರತಕ್ಕಿಂತ ಜನಸಂಖ್ಯೆಯಲ್ಲಿ ಎಷ್ಟೋ ದೂರವಿದ್ದರೂ ಕೂಡ ಮಾಲಿನ್ಯದಲ್ಲಿ ಎಷ್ಟೋ ಮುಂದಿರುವುದು ಗ್ರಾಫ್ ಹಾಕಿ ತೋರಿಸುತ್ತಾರೆ, ಅಲ್ ಗೋರ್ ತಮ್ಮ ಭಾಷಣವೊಂದರಲ್ಲಿ :-)

ಕಾರಣ ನಮ್ಮ ನೆಲ-ಜಲಗಳ ರಕ್ಷಣೆಗಾಗಿ , ನಾವು ಪರದೇಶದಿ೦ದ ಬರುವ ಸ೦ಪನ್ಮೂಲದ ಮೇಲೆ ಆವಲ೦ಬಿಗಳಾಗಿದ್ದೇವೆ.
ಅ೦ದರೆ ಇಲ್ಲಿಯ ಜನಕ್ಕೆ ಯಾವುದಕ್ಕೂ ಆಸ್ತೆ ಇಲ್ಲಾ...ಎಲ್ಲಕ್ಕೂ ನಿರ್ಲಕ್ಷ್ಯ ಇದಕ್ಕಿನ್ನಾ ಶೋಕದಾಯಕವಾದದ್ದು ಯಾವುದಿದೆ ?
ಆಮೇಲೆ ಮರ ಗಿಡ ಬೆಳೆಸೋಕ್ಕೆ "ಡಾಲರ್ " ಸಹಾಯ ಬೇಕಿಲ್ಲಾ ಅ೦ದ್ಕೊ೦ಡಿದ್ದೇನೆ.

ಮೇಲಿನ ಮಾತುಗಳು ಕಟುವಾದರೂ ಒಪ್ಪುವಂಥಾದ್ದು. ನೆಲ-ಜಲಗಳ ರಕ್ಷಣೆಯೊಂದಷ್ಟೇ ಅಲ್ಲ, ಬೆಳವಣಿಗೆಯ ಎಷ್ಟೋ ಮಜಲುಗಳಿಗೆ ಪರದೇಶದ ಸಂಪನ್ಮೂಲದ ಅವಲಂಬಿಗಳಾಗಿದ್ದೇವೆ ನಾವುಗಳು ಅನ್ಸತ್ತೆ. ಇಲ್ಲಿಯ ಜನರಿಗೆ ತಮ್ಮ ನೆಲ ಜಲ ಸ್ವಚ್ಛ ಇಟ್ಟು ಉಳಿಸಿಕೊಂಡು ಹೋಗುವ ಕಾಳಜಿಯಿಲ್ಲ ಎಂಬುದೂ ಕಟು ಸತ್ಯವೇ. ಓದು ಬರಹ ಬಲ್ಲವರೂ ಕಸ ತಂದು ಕಸದ ಬುಟ್ಟಿಯ ಬದಲು ಬೀದಿಗೆ ಹಾಕುತ್ತಿರುವುದು ಬಹಳ ಅಚ್ಚರಿ ಹಾಗೂ ಬೇಸರ ಮೂಡಿಸುವ ವಿಷಯ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವುಗಳ ನಡುವೆ ತೃತೀಯ ಜಗತ್ತಿನ ದೇಶಗಳಲ್ಲಿ ಹಸುಗಳನ್ನು ಸಾಕುವುದರಿ೦ದ ಪರಿಸರಕ್ಕೆ ಹಾನಿಯೆ೦ಬ ಕುಹಕವೂ ಇದೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.