ನಮ್ಮ ಮನೆಯ ದೀಪಾವಳಿ (ಭಾಗ 2)

0

ಮುರಳಿಯವರು ಇನ್ನಷ್ಟು ದೀಪಾವಳಿಯ ಚಿತ್ರಗಳನ್ನು ತೆಗೆಯಬಹುದಿತ್ತು ಎಂದು ಕಳೆದ ಬಾರಿಯೇ ಹೇಳಿದ್ದರಷ್ಟೆ. ನನಗೂ ಇನ್ನಷ್ಟು ಚಿತ್ರಗಳನ್ನು ತೆಗೆಯಬೇಕೆಂದಿತ್ತು. ಅದಕ್ಕೆ ಸರಿಯಾಗಿ ನನ್ನ ಸೋದರಮಾವ ಕೆಲವು ದಿನಗಳ ಹಿಂದೆ ಮನೆಗೆ ಬಂದಿದ್ದ. ಅವನೂ ಫೊಟೊಗ್ರಫಿಯಲ್ಲಿ ನನ್ನ ಸಮಾನ ಆಸಕ್ತನಾಗಿದ್ದುದರಿಂದ ನಾನು ಬೆಳಕನ್ನಷ್ಟೆ ಬೀರುವ ಸುಡುಮದ್ದುಗಳನ್ನು ಕೊಂಡು ತಂದೆ (ಈಗ ಸುಡುಮದ್ದುಗಳಿಗೆ ಎಂತಾ ರೇಟು! ನಾನು ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಖರೀದಿಸುತ್ತಿದ್ದೆ).

ನೆಲಚಕ್ರವನ್ನು ಚಿತ್ರಿಸುವುದು ಅಷ್ಟೇನೂ ಕಷ್ಟವಾಗಲಿಲ್ಲ.

ರಾಕೆಟ್ ಅನ್ನು ಹೇಗೆ ಚಿತ್ರಿಸುವುದೆಂದು ನಾನು ನನ್ನದೇ ಆದ ಕಲ್ಪನೆ ಇಟ್ಟುಕೊಂಡಿದ್ದೆ. ಆದರೆ ಅವು ಬೆಂಕಿ ಕೊಡುತ್ತಿರಬೇಕಾದರೆ ಯಾವಾಗ ಲಾಂಚ್ ಆಗುತ್ತವೆ ಎಂದು ಊಹಿಸುವುದು ಬಹಳ ಕಷ್ಟವಾಯಿತು. ಲಾಂಚ್ ಆದ ಬಳಿಕ ಕ್ಷಣಾರ್ಧದೊಳಗೆ ಮಾಯವಾಗಿಬಿಡುತ್ತವೆ ಬೇರೆ. ಕೊನೆಗೆ ದೂರದಿಂದ ಚಿತ್ರಿಸಿ ಸುಮ್ಮನಾದೆ, ಕೊನೆಯ ರಾಕೆಟ್ ನೊಂದಿಗೆ ಇನ್ನಷ್ಟು ಪ್ರಯೋಗ ಮಾಡಲು ಹೋಗದೆ..

ಬೆಂಕಿ ಮತ್ತು ನೀರು ಚಿತ್ರಗಳನ್ನು ತೆಗೆಯಲು ತುಂಬಾನೇ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ. ಎಕ್ಸ್ಪೋಷರ್ ಸಮಯ ಬದಲಿಸಿದಂತೆ ಬೇರೆ ಬೇರೆ ರೀತಿಯ ಚಿತ್ರಗಳು ಸಿಗುತ್ತವೆ!.

ಇನ್ನಷ್ಟು ಸಾಧ್ಯತೆಗಳನ್ನು ಹುಡುಕಬೇಕಿದೆ

ವಂದನೆಗಳು,
ವಸಂತ್.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಒಳ್ಳೇ ಫೋಟೋಸ್ ವಸಂತ್.. ಮೊದಲನೇ ಮತ್ತು ಮೂರನೇ ಚಿತ್ರಗಳಂತೂ 'ಫೋಟೋಶಾಪ್ ಟೆಕ್ನಿಕ್ಕೇನೋ' ಎಂದು ಅನುಮಾನ ಬರುವಷ್ಟು ಚೆನ್ನಾಗಿವೆ. ಥ್ಯಾಂಕ್ಸ್ ಫಾರ್ ಶೇರಿಂಗ್..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.