ಬೆಂಗಳೂರು ಬಸ್ ಸ್ಟ್ಯಾಂಡುಗಳ ಹೊಸ ಮುಖಗಳು

4


ಬೆಂಗಳೂರಿನ ಸಾರ್ವಜನಿಕ ಬಸ್ ನಿಲ್ದಾಣಗಳ make-over ನಡೆಯುತ್ತಿದೆ ಗಮನಿಸಿದಿರಾ?.
 
ತಲೆಯೊಳಗೆ ವ್ಯಾಪಾರೀ ಮನೋಭಾವ ಬಿಟ್ಟು ಬೇರೇನೂ ಇಲ್ಲದ ಮೂರ್ಖರು ಯಾರೋ ಹೊಸ ವಿನ್ಯಾಸ ಮಾಡಿದ್ದಾರೆ.
  • ಬೋರ್ಡಿನ ಮೇಲೆ ಸ್ಥಳದ ಹೆಸರು ಬಸ್ ನಿಲ್ದಾಣದ ಎದುರು ನಿಂತುಕೊಂಡರೆ ಮಾತ್ರ ಕಾಣಿಸುವಂತೆ ಬಹಳ ಚಿಕ್ಕದಾಗಿ ಇದೆ. ಬಸ್ ನಲ್ಲಿ ಪ್ರಯಾಣಿಸುತ್ತ ಬರುವವರಿಗೆ ಓದಲು ಸಾಧ್ಯವೇ ಇಲ್ಲ. ಬಸ್ಟ್ಯಾಂಡಿನ ಮುಖ್ಯ ಉದ್ದೇಶಗಳಲ್ಲಿ ಒಂದನ್ನು ಅಲ್ಲಿಗೆ ಬಲಿಕೊಟ್ಟಂತಾಯಿತು
  • Advertisement ಭಾಗ ಅತೀ ದೊಡ್ಡದಾಗಿದೆ
  • ಟ್ಯೂಬ್ ಲೈಟ್ ಗಳ ಗಳ ಬಳಕೆ ಇನ್ನೂ ಹೆಚ್ಚಾಗಿದೆ. ಅನಗತ್ಯ ಕರೆಂಟ್ ವೆಚ್ಚ
ನನಗೆ ಇವುಗಳನ್ನು ನೋಡಿದಾಗಂತೂ ಮೈ ಉರಿಯುತ್ತಿದೆ. ನೀವು ಈ ಬೆಳವಣಿಗೆಯನ್ನು ಗಮನಿಸಿದ್ದೀರಾ?
ವಸಂತ್ ಕಜೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕ್ಯಾಕರಿಸಿ ಉಗಿಯಬೇಕಿದೆ. ಅಧಿಕೃತವಾಗಿ ದೂರು ಕೊಟ್ಟರೆ ಇನ್ನೂ ಬೇಗ ಕೆಲಸವಾಗುತ್ತದೆ. ಏಕೆಂದರೆ, ಜಾಹೀರಾಗು ಹಾಕಲೆಂದೇ ಕೆಲವು ನಿಯಮಗಳಿವೆ. (ಅವುಗಳನ್ನು ಹುಡುಕುತ್ತಿದ್ದೇನೆ, ಸಿಕ್ಕ ತಕ್ಷಣ ಬರೆವೆ). ಅವನ್ನು ಉಲ್ಲಂಘಿಸಿ ಇಂಥ ಜಾಹೀರಾತುಗಳಿಗೆ ಸ್ಥಳ ಹಾಗೂ ಮರ್ಯಾದೆಯನ್ನು ಮಾರಿಕೊಂಡಿದ್ದಾರೆ.

ಸಂಪದಿಗರು ದಯವಿಟ್ಟು ಪ್ರತಿಭಟಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಾಮರಾಜ್,
ಖಂಡಿತ. ನಾನೇನು ಮಾಡಬಹುದು ತಿಳಿಸಿ. ನಾಡಿಗ್ ಹತ್ತಿರ ನಿಮ್ಮ ನಂಬರ್ ತೆಗೊಂಡು ನಿಮಗೆ ಫೋನ್ ಮಾಡುತ್ತೇನೆ.

ವಸಂತ್ ಕಜೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಲ್ದಾಣದ ಹೆಸರು ದೊಡ್ಡದಾಗಿರಲಿ.ಜಾಹೀರಾತು ಚಿಕ್ಕದಾಗಿ ಕೆಳಗಿರಲಿ. ಸೋಲಾರ್ ಟ್ಯೂಬ್ ಲೈಟ್ ಉಪಯೋಗಿಸಲಿ.
ಹೀಗೇ ಬಿಟ್ಟರೆ ಮುಂದೆ-
ಬೆಂಗಳೂರು ನಗರ 'ಬೃಹತ್ ಜಾಹೀರಾತು' ಪಾಲಿಕೆಯ ಅಧಿಕಾರಿಗಳು ತಮ್ಮ ಬಟ್ಟೆಯಲ್ಲಿ ಕ್ರಿಕೆಟಿಗರಂತೆ ಜಾಹೀರಾತು ಹಾಕಿಕೊಳ್ಳಲಿರುವರು.
ಎಡಗಡೆಯಲ್ಲಿ ಕುರ್ಚಿ ಹಿಡಿದು ಎಳೆಯುತ್ತಿರುವವರು ಏರ್ಟೆಲ್ ಪ್ರಾಯೋಜಿಸಿರುವ ನಗರ ಪಾಲಿಕೆ ಸದಸ್ಯ ಶ್ರೀ... ಅಂತ ಪತ್ರಿಕೆಗಳಲ್ಲಿ ಓದುವ ದಿನವೂ ಬರಬಹುದು :(
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂಬೈನಲ್ಲೂ ಇಂಥದೇ ಗೋಳು .
ಮುಂಬೈನಲ್ಲಿ ಫುಟ್ಪಾಥ್ ಗಳೇ ಇಲ್ಲದಿರುವಾಗ ಇದ್ದ ಕಿರು ಫುಟ್ಪಾಥ್ಗಳಲ್ಲಿ ಹಣಕ್ಕಾಗಿ 'ಅತ್ಯಾಧುನಿಕ' ಶೆಲ್ಟರ್ ನಿರ್ಮಿಸಿದ್ದಾರೆ .
ಫುಟ್ಪಾಥ್ ಅನ್ನು ಆಕ್ರಮಿಸಿಕೊಂಡಿರುತ್ತದೆ .
ಕುಳಿತುಕೊಳ್ಳಲು ಸಾಧ್ಯವಿಲ್ಲದ ಹಾಗೆ ಲೋಹದ ಕಿರುಪಟ್ಟಿ ಇದೆ . ಮಳೆಯಿಂದಾಗಲೀ ಬಿಸಿಲಿನಿಂದಾಗಲೀ ರಕ್ಷಣೆ ಕೊಡದಷ್ಟು ಕಿರಿದು . ಇಲ್ಲಿ ಬಸ್ ಸ್ಟ್ಯಾಂಡ್ ಗಳಲ್ಲೂ ಇಂಥವನ್ನು ಹಾಕಿದ್ದಾರೆ . ಎರಡುಮೂರು ರೂಟ್ಗಳಿಗೆ ಒಂದೇ ಶೆಲ್ಟರ್ . ಜನ ಕ್ಯೂನಲ್ಲಿ ನಿಂತಿರ್ತಾರೆ . ಬಸ್ಸು ಬಂದರೆ ಕ್ಯೂ ನಲ್ಲಿ ಆ ಬಸ್ ಬೇಡಾದ ಕಾರಣ ಕ್ಯೂನಲ್ಲೇ ಇರುತ್ತಾರೆ . ಆ ಬಸ್ ಗೆ ಹೋಗಬಯಸುವ ಹಿಂದಿನವರು ಇವರನ್ನು ದಾಟಿಕೊಂಡು ಹೋಗಲು ಕಷ್ಟ ; ಅಷ್ಟರಲ್ಲಿ ಕ್ಯೂನಲ್ಲಿ ಇರದ ಜನ ನೇರವಾಗಿ ಬಸ್ ಹತ್ತಿಕೊಳ್ಳುವರು . ಕ್ಯೂನಲ್ಲಿ ನಿಂತ ಶಿಸ್ತಿನ ಜನಕ್ಕೆ ಬಸ್ ನಲ್ಲಿ ಸೀಟ್ ಸಿಗದು . ಕ್ಯೂನಲ್ಲಿ ನಿಲ್ಲದ ಜನಕ್ಕೆ ಸೀಟು ಸಿಗುತ್ತದೆ , ಆದರೆ ಅಪರಾಧಿ ಭಾವನೆ ಕಾಡುತ್ತದೆ . ಕ್ಯೂ ಜನರಿಂದ ಬೈಸಿಕೊಳ್ಳಬೇಕು . ಯಾವ ಪುಣ್ಯಾತ್ಮರು ಇವನ್ನೆಲ್ಲ ಡಿಸೈನ್ ಮಾಡ್ತಾರೋ ?
ನೋಡಲು ಚೆನ್ನಾಗಿದ್ದು ಬಸ್ ಸಂಸ್ಥೆಗೆ ಜಾಹಿರಾತು ಹಣ ಬರುವದಷ್ಟೇ ಲಾಭ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟು ಸಾಲದು ಅಂತ ಆ ಜಾಹೀರಾತೋ - ಇಂಗ್ಲಿಷ್ ಲಿಪಿ ಹಿಂದೀ ಮಾತು :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

HARISH CHANDRA ಅಂತ ಬೇರೆ, ನೆಟ್ಟಗೆ ಬರೆಯೋದಕ್ಕೂ ಬರೋದಿಲ್ಲವಲ್ಲ ಇವಕ್ಕೆ. ಬಹುಶ:, ಹರೀಶ ಮತ್ತು ಚಂದ್ರ ಬೇರೆ ಬೇರೆ ಅಂತ ಅಂದುಕೊಂಡಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕಣ್ಣೂ ಇನ್ನೂ ಇ೦ತಾ ಘೋರವಾದದನ್ನು ನೋಡಿ ಪ್ರಕಟಿಸಲಿ. ನಾನು ಇದನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸುವ ಮಾರ್ಗ ತಿಳಿಸುವೆ - (ನಾನು ಪ್ರಯತ್ನ ಮಾಡುವೆ :) )
ctmobmtc@gmail.com

Managing Director:
Address :BMTC, Corporate office,
KH Road, Bangalore-560 027.
Telephone:22952501, mobile 99457-10055
ಒ೦ದು ಪೋನ್ ಹಚ್ಚಿ ಅಷ್ಟೇ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುರಳಿ,
ಮಾಹಿತಿಗಾಗಿ ವಂದನೆಗಳು. ನಾನು ಇವರಿಗೆ ಫೋನ್ ಮಾಡುತ್ತೇನೆ. ಆಮೇಲೆ update ಕೊಡುತ್ತೇನೆ.
ವಸಂತ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾರತ್ತಹಳ್ಳಿಯಲ್ಲೂ ಇಂತಹ ಎರಡು ಬಸ್ ನಿಲ್ದಾನಗಳು ತಲೆ ಎತ್ತುತ್ತಿವೆ.
ಅವರ ಕೆಲಸ ಮುಗಿದ ನಂತರ, ಈ ವಾರಾಂತ್ಯದಲ್ಲಿ ಚಿತ್ರ ತೆಗೆದು ಪ್ರಕಟಿಸಬೇಕೆಂದಿರುವೆ.
ಮಳೆ ಬಂದರೆ, ಹತ್ತು ಜನರಿಗೂ ತಮ್ಮ ತಲೆ ನೆನೆಯದಂತೆ ಕಾಪಾಡಿಕೊಳ್ಳುವುದೂ ಕಷ್ಟ ಈ ನಿಲ್ದಾನಗಳಲ್ಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಮುರಳಿ ಕೊಟ್ಟ ನಂಬರಿಗೆ ಫೋನ್ ಮಾಡಿದೆ. ಮೊಬೈಲ್ ಸ್ವಿಛ್ ಆಫ್ ಆಗಿತ್ತು. Landline ಎತ್ತಿಕೊಂಡರು. ನಾನು ಸಮಸ್ಯೆಯ ಬಗ್ಗೆ ಅವರಿಗೆ ತಾಳ್ಮೆಯಿಂದ ವಿವರಿಸಿದೆ. ಅವರು ಛೀಫ್ ಇಂಜಿನಿಯರ್ 'ಮಂಜುನಾಥ್' ಅಂತ ಇದಾರೆ ಅವರಿಗೆ ಹೇಳ್ತೇನೆ ಅಂತ ಹೇಳಿ ಫೋನ್ ಇಟ್ಟರು.

ನೀವು ಕೂಡ ಒಂದೊಂದು ಫೋನ್ ಮಾಡ್ತೀರಾ, ಪ್ಲೀಸ್.

ವಸಂತ್ ಕಜೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

acadvt@bmponline.org - ಕ್ಷಮಿಸಿ ಇದು ಬಿ.ಬಿ.ಎಮ್.ಪಿ ಅವರ್ ನಿಯ೦ತ್ರಣದಲ್ಲಿ ನಡೆಯೋದು.
ಅವರ ಹತ್ತಿರ ಕೂಡ ಮಾತಾಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.