Vasanth Kaje ರವರ ಬ್ಲಾಗ್

ಉದ್ಯೋಗ ಸೃಷ್ಟಿ - ನಮಗೆ ಕಾಯಕ, ಪರರಿಗೆ ಕೈಲಾಸ!

ಒಂದು ಸುಂದರವಾದ ಶನಿವಾರದ ಚುಮುಚುಮು ಬೆಳ್ಳಂಬೆಳಗು. ಸುತ್ತಲೂ ಹಸುರು ಹುಲ್ಲು ಹಾಸು. ಕಥೆಯ ಹೀರೋ '
ಟಾಮ್' ಕೈಯಲ್ಲಿ ಪೈಂಟು ತುಂಬಿದ ಬಾಲ್ಡಿ ಮತ್ತು ಬ್ರಶ್ ಹಿಡಿದು ಜೋಲು ಮುಖ ಹೊತ್ತು ಬರುತ್ತಾನೆ. ಏಕೆಂದರೆ ಅವನಿಗೆ ಮನೆಯ ಸುತ್ತಲಿನ, ಉದ್ದವಾಗಿ ಚಾಚಿ ನಿಂತ ಮರದ ಬೇಲಿಗೆ ಪೈಂಟು ಬಳಿಯುವ ಕೆಲಸವಿದೆ. ಅವನು ಉದ್ದುದ್ದಕ್ಕೆ ಪೈಂಟು ಹೊಡೆಯುತ್ತಿದ್ದಂತೆ ಅವನ ಓರಗೆಯ ದಾರಿಹೋಕ ಹುಡುಗರು ಬಂದು ಅವನ ಕೆಲಸದ ಬಗ್ಗೆ ಮರುಗುತ್ತಾರೆ. ಟಾಮ್ ಗೆ ಒಳಗೊಳಗೇ ಅಸಮಾಧಾನ. ಅವನ ಕೆಲಸದಲ್ಲಿ ಸ್ವಲ್ಪ ಕೈಜೋಡಿಸಿ ಎಂದರೆ ಆ ಹುಡುಗರು ಮಾಡಲೊಲ್ಲರು!. ಆಗ ಟಾಮ್ ಒಂದು ಹೊಸ ಉಪಾಯ ಹುಡುಕುತ್ತಾನೆ. ದಾರಿ ಹೋಕ ಹುಡುಗನೊಬ್ಬನಿಗೆ ತನ್ನ ಕೆಲಸದ ಬಗ್ಗೆ ಗಿಲೀಟು ಮಾತುಗಳಿಂದ ವರ್ಣಿಸುತ್ತಾನೆ. ತಾನು ಮಾಡುತ್ತಿರುವ ಈ ಕೆಲಸವೇ ತನಗೆ ಅಲಂಕಾರ, ಈ ಪೈಂಟು ಬಳಿಯುವ ಕೆಲಸ ತನ್ನಂಥ ದೈವಾಂಶ ಸಂಭೂತನಿಂದಷ್ಟೇ ಆಗಬೇಕಷ್ಟೆ ಎನ್ನುತ್ತಾನೆ. ಟಾಮ್ ನ ಖೆಡ್ಡಾಕ್ಕೆ ಆ ಹುಡುಗ ಬೀಳುತ್ತಾನೆ. ಮೊದಲಿಗೆ ಟಾಮ್ ನನ್ನು ತಮಾಷೆ ಮಾಡಿದವ ಈಗ 'ಹೇ ನನಗೂ ಒಮ್ಮೆ ಬ್ರಶ್ಶು ಕೊಡೋ' ಎನ್ನತೊಡಗುತ್ತಾನೆ. 'ಇಲ್ಲಪ್ಪ, ಇದನ್ನು ಯಾರ್ಯಾರೋ ಮಾಡುವ ಹಾಗಿಲ್ಲ, ಸಾವಿರಕ್ಕೊಬ್ಬರು ಮಾಡಬಹುದಷ್ಟೇ' ಎಂದು ಟಾಮ್ ಸ್ವಲ್ಪ ಮಸಾಲೆ ಸೇರಿಸುತ್ತಾನೆ, ಆಮೇಲೆ, 'ಇರಲಿ ಬಿಡು, ಸ್ವಲ್ಪ ಬಳಿದುಕೋ' ಎಂದು ಬ್ರಶ್ಶು ಅವನಿಗೆ ಕೊಡುತ್ತಾನೆ. ಒಬ್ಬೊಬ್ಬರಾಗಿ ದಾರಿಹೋಕ ಹುಡುಗರೆಲ್ಲರೂ ಟಾಮ್ ನ ಬಲೆಗೆ ಬೀಳುತ್ತಾರೆ. ಟಾಮ್ ನ ರಂಗುರಂಗಿನ ಮಾತುಗಳಿಗೆ ಬಲಿ ಬಿದ್ದ ಹುಡುಗರು ಅವನಿಗೆ ಭಕ್ಷೀಸಾಗಿ ಆಟದ ಸಾಮಾನುಗಳನ್ನು ಬೇರೆ ಕೊಡುತ್ತಾರೆ!! ಟಾಮ್ ಬುದ್ಧಿವಂತಿಕೆಯಿಂದ ಕೆಲಸ ಮಾಡಿಸಿಕೊಂಡು ಅದಕ್ಕೆ ತಾನೇ ದಕ್ಷಿಣೆ ಬೇರೆ ಪಡೆದುಕೊಳ್ಳುತ್ತಾನೆ. ಇದು ಮಾರ್ಕ್ ಟ್ವೈನ್ ಅವರ 'ಟಾಮ್ ಸಾಯರ್ ಮತ್ತು ಬೇಲಿ' ಕಥೆಯ ಸಾರಾಂಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಸೈಕ್ಲರ್ ನ ಸ್ವಗತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನ್ಸೋರೆಯವರ ಚಿತ್ರ ಪ್ರದರ್ಶನ

ಇವತ್ತು ಮನ್ಸೋರೆ ಕಲಾಪ್ರದರ್ಶನ ಮೆಜೆಸ್ಟಿಕ್ ನಲ್ಲಿ. ರಾತ್ರಿ ೯ ರ ತನಕ ಇದೆ. ಸಾಧ್ಯವಿದ್ದವರು ಹೋಗಿ, ಆಸ್ವಾದಿಸಿ, ಯುವ ಕಲಾವಿದನನ್ನು ನಿಮ್ಮ ಉಪಸ್ಥಿತಿಯ ಮೂಲಕ ಪ್ರೋತ್ಸಾಹಿಸಿ.

ನಾವು ಈಗಷ್ಟೇ ಹೋಗಿ ಬಂದೆವು. ಚಿತ್ರಗಳು ಇಲ್ಲಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಾಡ್ಕಾಸ್ಟ್ : ನೇತ್ರದಾನ - ಹೇಗೆ? ಯಾವಾಗ? ಎಲ್ಲಿ?

ಕಣ್ಣಿಲ್ಲದ ಕಷ್ಟ ಕಣ್ಣಿರುವ ನಮಗೆ ಊಹಿಸುದು ಅಸಾಧ್ಯವೇ. ಚಿಕ್ಕಂದಿನಲ್ಲಿ ನಾವು ದಿನವಿಡೀ ಮೌನವಾಗಿರುವ ಒಂದು ಆಟ(?)ವಾಡುತ್ತಿದ್ದೆವು. ನೀವೊಮ್ಮೆ ಮಾಡಿನೋಡಿದರೆ ಗೊತ್ತಾಗಬಹುದು. ಇಡೀ ದಿನ ಬಿಡಿ, ಒಂದೆರಡು ಘಂಟೆ ಸುಮ್ಮನಿರುವುದು ಭಯಂಕರ ಕಷ್ಟ. ಕಣ್ಣು, ಕಿವಿ, ಮೂಗು, ಬಾಯಿಗಳೆಲ್ಲ ಸರಿಯಾಗಿದ್ದರೆ ಅದರಿಂದ ದೊಡ್ಡ ವರ ಬೇರೊಂದಿಲ್ಲ.
ಹೀಗಿರುವಾಗ, ನಮ್ಮ ನಂತರಕ್ಕೆ ಬೇರೊಬ್ಬರಿಗೆ ನಮ್ಮ ಕಣ್ಣು ಬೆಳಕಾಗಬಹುದಾದರೆ ಅದು ಹೇಗೆ? ಯಾವಾಗ? ತೆಗೆದುಕೊಳ್ಳಬೇಕಾದ ಕ್ರಮಗಳೇನು?
ಮೊನ್ನೆ ಆಕಸ್ಮಿಕವಾಗಿ ನನ್ನ ಸಂಬಂಧಿ ನೇತ್ರತಜ್ನರಾದ ಡಾ|ವಿಶ್ವನಾಥ ಭಟ್ ಕಾನಾವು ಅವರ ಜೊತೆ ನೇತ್ರದಾನದ ಬಗ್ಗೆ ನಾನು ಮತ್ತು ಭಾವ ಪ್ರವೀಣ ಶಂಕರ್ ಚರ್ಚಿಸುತ್ತಿದ್ದೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರಿನ್ಸ್ ರಾಮ ವರ್ಮ


ಪ್ರಿನ್ಸ್ ರಾಮ ವರ್ಮ ಸಂಗೀತಾಸಕ್ತರಿಗೆ ಪರಿಚಿತ ಹೆಸರು. ರಾಮವರ್ಮ ಹಾಡುಗಾರಿಕೆ ಮತ್ತು ವೀಣಾ ವಾದನದಲ್ಲಿ ವಿದ್ವಾಂಸರು. ವಿಕಿಪೀಡಿಯ ದಲ್ಲಿ ಹೇಳುವಂತೆ ಅವರು ’ರಾಜ ಮನೆತನದಲ್ಲೊಬ್ಬ ಸಂಗೀತಗಾರ ಮತ್ತು ಸಂಗೀತಲೋಕಕ್ಕೊಬ್ಬ ರಾಜ!’.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

Pages

Subscribe to RSS - Vasanth Kaje ರವರ ಬ್ಲಾಗ್