ಮುಟ್ಟಿ ನನ್ನ ಮನಸ...!!!

0

ಈ ಬಾರಿ ’ಯಾರಾನಾ’ ಚಿತ್ರದ ’ಛೂಕರ್ ಮೆರೆ ಮನ್ ಕೊ....’ ಚಿತ್ರದ ಗೀತೆಯ ಭಾವಾನುವಾದ. ಕಿಶೊರ್ ದಾ ಹಾಡು, ರಾಜೇಶ್ ರೋಶನ್ ಸಂಗೀತ.

ಪ್ರತಿಕ್ರಿಯೆಯಾಗಿ ತಮ್ಮ ಅನುವಾದವನ್ನು ಬರೆಯುವ ಕವಿಗಳ ಅನುವಾದ ಮೂಲ ರಾಗದಲ್ಲಿ ಹಾಡುವಂತಿದ್ದರೆ ಇನ್ನೂ ಚೆಂದ.
ಪಾಲ ಮತ್ತು ಶೊಭಾ ಜೊತೆಗೆ ಇನ್ನಿತರರೂ ಭಾಗವಹಿಸಲು ವಿನಂತಿ. ಭಾಗವಹಿಸುವ ಕವಿಗಳಿಗೆಲ್ಲಾ ಅಡ್ವಾನ್ಸ್ ಥ್ಯಾಂಕ್ಸ್.

ಮುಟ್ಟಿ ನನ್ನ ಮನಸ
ನೀ ಎಂಥ ಸನ್ನಿ ಮಾಡಿದಿ.
ಬದಲಾಗೇತಿ ಹವಾ
ಜಗತ್ತೆಲ್ಲಾ ಚೆಂದ ಅನ್ನಸ್ಲಿಕ್‍ಹತ್ತೇತಿ....!!!

ನೀ ಹೇಳಿದಿ ಅಂದ್ರ
ನಿನ್ನ ಸಲುವಾಗಿ ನಾ ಹಾಡ್ತೇನಿ
ನಿನ್ನ್ ಸಲುವಾಗಿ ನಾ ಹಾಡ್ತೇನಿ..
ನಿನ್ನ ಮಾತಿನ ಮ್ಯಾಲೇ
ನಾ ಹಾಡು ಬರೀತೇನಿ ನಾ ಹಾಡು ಬರಿತೇನಿ..
ನನ್ನ ಪದದೊಳಗ ನಿನ್ನ ಹುಡುಕ್ತತಿ ಜಗತ್ತೆಲ್ಲಾ...!!! || ಮುಟ್ಟಿ ನನ್ನ ಮನಸ..||

ಬಾ ನಿನ್ನ ಮಡಿಲೆಲ್ಲಾ..
ಪ್ರೀತಿಲೆ ತುಂಬತೇನಿ ಪ್ರೀತಿಲೆ ತುಂಬತೇನಿ
ಜಗತ್ತಿನ ಖುಷಿಯೆಲ್ಲಾ
ನಿನ್ನ ಕಡಿ ತಿರುಗಿಸ್ತೇನಿ ನಿನ್ನ ಕಡಿ ತಿರುಗಿಸ್ತೇನಿ ...
ನೀನೆ ನನ್ನ ಬದುಕು ನನ್ನ ಬದುಕಿಗೆ ನೀ ಆಸರಾ..... !!! ||ಮುಟ್ಟಿ ನನ್ನ ಮನಸ...||

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನನ್ನೀ ಮನಸನು ಮುಟ್ಟೀ
ಮಾಡಿದೆ ಏನಿದು ಸನ್ನೇ..
ಬದಲಿದೆ ಈ ಹವಾಮಾನಾ
ಜಗವೀಗ ಸುಂದರ ತಾಣಾ...

ನೀನಂದರೆ ಜನುಮವಿಡೀ
ನಿನಗಾಗಿ ಹಾಡ್ತೀನೀ ನಾ ನಿನಗಾಗಿ ಹಾಡ್ತೀನಿ
ನಿನ್ನ ನುಡಿಗಳ ಮೇಲೆ
ಗೀತೆ ನಾ ಬರೀತೀನಿ ಗೀತೆ ನಾ ಬರೀತೀನಿ
ನನ್ನಾ ಗೀತೆಯಲಿ
ನಿನ್ನಾ ಹುಡುಕಲೀ ಜಗವೂ...

ನನ್ನೀ ಮನಸನು ಮುಟ್ಟೀ
ಮಾಡಿದೆ ಏನಿದು ಸನ್ನೇ..
ಬದಲಿದೆ ಈ ಹವಾಮಾನಾ
ಜಗವೀಗ ಸುಂದರ ತಾಣಾ...

ಬಾ ನಿನ್ನ ಸೆರಗಲ್ಲಿ
ಪ್ರೀತೀನ ತುಂಬ್ತೀನಿ ನಾ ಪ್ರೀತೀನಾ ತುಂಬ್ತೀನಿ
ಜಗದೆಲ್ಲಾ ಖುಷಿಯನ್ನೂ
ನಿನಗೇ ಅರ್ಪಿಸುತ್ತೀನಿ ನಾ ನಿನಗೇ ಅರ್ಪಿಸುತ್ತೀನಿ
ನೀನೇ ನನ್ನ ಜೀವನಾ
ನೀನದಕೇ ಆಧಾರಾ

ನನ್ನೀ ಮನಸನು ಮುಟ್ಟೀ
ಮಾಡಿದೆ ಏನಿದು ಸನ್ನೇ..
ಬದಲಿದೆ ಈ ಹವಾಮಾನಾ
ಜಗವೀಗ ಸುಂದರ ತಾಣಾ...
*****************

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಹ್..! ವಾಹ್..!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೇ ಧಾಟಿಯಲ್ಲಿ ಹಾಡಿಕೊಳ್ಳಲು ನಾನು ಶಬ್ದಗಳನ್ನು ಜೋಡಿಸಿದ್ದೆ .
ಪೂರ್ತಿಯಾಗಿ ನೆನಪಿಲ್ಲ ... ನೆನಪಿನಿಂದ ಕೆಲವು ಸಾಲು ಇಲ್ಲಿವೆ

ಸುಳಿದು ಸುತ್ತಮುತ್ತ
ತಂದೆ ನೀನು ಎಂಥ ಹೊತ್ತ !
ಜಗವೇ ಹೊಸದಾಗಿ
ಬಂದಿದೆ ಕನಸಿಗೆ ಬಣ್ಣ !!

.....

ಬಣ್ಣದ ಮಳೆಬಿಲ್ಲು
ಮೂಡಿದ ಆಕಾಶ

...

ನನ್ನ ಕವಿತೆಯಲೇ
ಕಾಣಲಿ ಜಗ ನಿನ್ನ ... ||

( ಇಡಿಯ ಹಾಡು ಎಲ್ಲೋ ಕಾಗದರಾಶಿಯಲ್ಲಿ ಅಡಗಿಕೊಂಡಿದೆ...)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಯವಿಟ್ಟು ಹುಡುಕಿ..ನನಗಾಗಿ ..ಎಲ್ಲ ಸಂಪದಿಗರಿಗಾಗಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತ್,
ಈ ಹಾಡು ನನ್ನ ಅಚ್ಚು ಮೆಚ್ಚಿನದು. ನನಗೆ ಇದಲ್ಲಿ ಬಹುಮಾನ ಬಂದಿತ್ತು (ಚಿಕ್ಕಂದಿನಲ್ಲಿ)

ನಿಮ್ಮ ಪ್ರಯತ್ನ ಚೆನ್ನಾಗಿದೆ. ಆದರೆ ಹಿಂದಿಯಲ್ಲಿನ ಈ ಹಾಡಿನ ಆ ಇಂಪು ನಿಮ್ಮ ಅನುವಾದದಲ್ಲಿ ಸ್ವಲ್ಪ ಬದಲಾವಿದೆ. 'ಬದಲಾಗೇತಿ ಹವಾ . . ' ಹಾಸ್ಯದಂತಿದೆ (ಮನ್ನಿಸಿ). ಬದಲಿಗೆ ನನ್ನ ಪ್ರಯತ್ನ ನೋಡ್ತೀರಾ :

ಮುಟ್ಟಿ ನನ್ನ ಮನವ
ಮಾಡಿದೆ ನೀನು ಏನು ಚೆಂದ
ಹವೆಯೇ ಬೇರಾಯ್ತು
ಪ್ರಿಯವಾಯ್ತು ಜಗವೆಲ್ಲಾ ll೨ll

ನೀ ಕೇಳಲು ನಾನು ಜೀವನವೆಲ್ಲಾ
ನಿನಗಾಗಿ ಹಾಡುವೆನೂ ll೨ll
ನಿನ್ನ ಮಾತಿನ ಮೇಲೆ
ಕವಿತೆಗಳನಾ ಬರೆವೆ ll೨ll
ನನ್ನ ಪದಗಳಲಿ
ನಿನ ಹುಡುಕಿದೆ ಜಗವೆಲ್ಲಾll೨ll ಮುಟ್ಟಿ ನನ್ನ ಮನವ

ಬಾ ನಿನ್ನ ಮಡಿಲೆಲ್ಲಾ
ಪ್ರೀತಿಯನೇ ತುಂಬುವೆll೨ll
ಜಗದ ನಗುವನೆಲ್ಲ
ನಿನ ನೋಡಮಾಡೇನುll೨ll
ನೀನೇ ನನ್ನ ಜೀವ
ನನ್ನ ಜೀವನದಾಸೆll೨ll ಮುಟ್ಟಿ ನನ್ನ ಮನವ

(ಕೆಲ ಪದ ತಪ್ಪಿರಬಹುದು)

- ಅರವಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<'ಬದಲಾಗೇತಿ ಹವಾ . . ' ಹಾಸ್ಯದಂತಿದೆ >>
ನಮ್ಮ ಕಡೆಗೆಲ್ಲ ಹವಾಮಾನಕ್ಕೆ (weather) ಗೆ ಹವಾ ಎಂದೇ ಕರೆಯುವುದು ರೂಢಿ. ಮೌಸಮ್ ಗೆ ಈ ಪದವನ್ನು ಬಳಸಿದೆ. ಹಾಸ್ಯ ಬಂದರೂ ಬಂದಿರಬಹುದು. ನಿಮ್ಮ ಮಾರುಲಿಗೆ ನನ್ನಿ.

ನಿಮ್ಮ ಕವಿತೆ ಚೆನ್ನಾಗಿದೆ. ಮೂಲ ಸೊಗಡಿಗೆ ಹತ್ತಿರವಿದೆ.

ಅಂದ ಹಾಗೆ ನೀವು ಇದನ್ನು ನನಗೆ ಹೇಳಿದ್ದೀರೋ ಶ್ರೀಕಾಂತ್‍ಗೆ ಹೇಳಿದ್ದೀರೊ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನ್ನಿಸಿ ಸಾಲಿಮಠರೆ, ನಿಮಗೇ ಹೇಳಿದ್ದು (ಶ್ರೀಕಾಂತ್ ಅಂತ ತಪ್ಪಾಗಿ ಬರೆದಿದ್ದೆ). ಬದಲಾಗೇತಿ ಅನ್ನೋದು ಯಾವ್ದೋ ಗುನುಗಿನಲ್ಲಿ ಸ್ವಲ್ಪ ನಗು ತರಿಸಿತು ಅಷ್ಟೆ. ಮತ್ತೇನಿಲ್ಲ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಬದಲಾಗೇತಿ ಅನ್ನೋದು ಯಾವ್ದೋ ಗುನುಗಿನಲ್ಲಿ ಸ್ವಲ್ಪ ನಗು ತರಿಸಿತು ಅಷ್ಟೆ>>

ಹ್ಹಾ...ಹ್ಹಾ.... ಯಾವ ಗುಂಗಿನಲ್ಲಿ ಅಂತ ಗೊತ್ತಾಯ್ತು..!!!! :D

ಇದೂ ಒಂದು ನೋಡಿ.

http://www.sampada.net/blog/thesalimath/25/06/2009/21908

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವ್ದು ಹೇಳ್ರಿ ಅಂತ ತಿರುಗಿ ಕೇಳಲ್ಲ ಬಿಡಿ . . ನಿಮಗೆ ಗೊತ್ತಾದ್ರೆ ಖುಷಿ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಟ್ಟಿ ನನ್ನ ಮನವ
ನೀ ಏನ್ ಸನ್ನೆ ಮಾಡಿದೆ
ಬದಲಾದ ಈ ಹವಾಮಾನ
ಅನಿಸಿದೆ ಸುಂದರ ಜಗವೆಲ್ಲಾ
ಮುಟ್ಟಿ ನನ್ನ ಮನವ
ನೀ ಏನ್ ಸನ್ನೆ ಮಾಡಿದೆ

ನೀ ಹೇಳಿದ್ರೆ ಜೀವನವಿಡೀ
ನಿನಗಾಗಿ ಹಾಡುವೆನು (೨)
ನಿನ್ನ ಪ್ರತಿ ಮಾತಿನಂತೆ
ನಾ ಗೀತೆಯ ಬರೆಯುವೆನು(೨)

ನನ್ನ ಈ ಗೀತೆಗಳಲ್ಲಿ
ನಿನ್ನ ಹುಡುಕಲಿ ಜಗವೆಲ್ಲಾ

ಮುಟ್ಟಿ ನನ್ನ ಮನವ
ನೀ ಏನ್ ಸನ್ನೆ ಮಾಡಿದೆ

ಬಾ ನಿನ್ನ ಮಡಿಲನ್ನು
ಪ್ರೀತಿಯಿಂದ ತುಂಬುವೆನು(೨)
ಜಗದ ಈ ಖುಷಿಯೆಲ್ಲ
ನಿನಗೆ ಅರ್ಪಿಸುವೆನು(೨)

ನೀನೆ ನನ್ನ ಜೀವನ
ನೀ ನನ್ನ ಜೀವದಾಸರೆ

ಮುಟ್ಟಿ ನನ್ನ ಮನವ
ನೀ ಏನ್ ಸನ್ನೆ ಮಾಡಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹಾ! ಅದ್ಭುತ...! ನಿಮ್ಮ ಭಾಷೆಯೇ ಚೆನ್ನ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜವಾರಿ ಸ್ಟೈಲ್ ಛಂದೈತ್ರೀ ಹರ್ಷ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಭಿಮಾನಕ್ಕ ಶರಣ್ರೀ... ಮಂಜುನಾಥ್...!!! ಹಿಂಗ ನಮ್ಮ ಬೆನ್ನು ತಟ್ತಾ ಇರ್ರಿ....!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಹಿಂಗ ನಮ್ಮ ಬೆನ್ನು ತಟ್ತಾ ಇರ್ರಿ....!>>>
ಅದಕ್ಕೇನಾ.. ತಟ್ಟೋಕ್ ಮುಂಚೇನೆ ಬೆನ್ನು ತೋರಿಸ್ತಾ ಇರೋದು... ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಟ್ಟಿದೆ ನೀ ಹೃದಯಾ
ಕರೆದೆ ನೀನು ಹತ್ತಿರ
ಮಾಡಿದೆ ಹೊಸ ಜಗವಾ
ಕಂಡಿದೆ ಅದು ಸುಂದರಾ
ತಟ್ಟಿದೆ ನೀ ಹೃದಯಾ
ಕರೆದೆ ನೀನು ಹತ್ತಿರ

ಹಾಡಿದೆ ಈ ಹೃದಯಾ
ನಿನಗಾಗೇ ಈ ನುಡಿಯಾ
ನಿನ್ನಿಂದಾ ಈ ಬದುಕು
ಕಂಡಿತು ಹೊಸ ಪಲುಕು

ನನ್ನೀ ಹಾಡಿನಲಿ
ನೀ ಕಂಡೆ ಜಗಕ್ಕೆಲ್ಲಾ.....

ತಟ್ಟಿದೆ ನೀ ಹೃದಯಾ
ಕರೆದೆ ನೀನು ಹತ್ತಿರ

ತುಂಬಲೇ ನಿನ ಮಡಿಲಾ
ಭರಪೂರ ಒಲವಿಂದ
ಸಿಗಲೀ ನಿನಗೆಲ್ಲಾ
ಜೀವನದ ಪ್ರತಿ ಖುಷಿಯೂ

ನೀನೇ ನನ್ನ ಜೀವಾ, ನೀನಾದೇ ಈ ಹೃದಯಾ

ತಟ್ಟಿದೆ ಈ ಹೃದಯಾ
ಕರೆದೆ ನೀನು ಹತ್ತಿರ

(ಯಾರೂ ನಗಬೇಡಿ, ಸುಮ್ನೆ ಹೀಗೆ ಬರೆದೆ :-))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗಬೇಡಿ ಅಂತಾ ಹೇಳಿದ್ದೆ. ಆದ್ರೂ ನಗ್ತಿದ್ದೀರಾ :-(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.