ನಮ್ಮವ್ವಾ....!!!

5

ಇದೊಂದು ಹೊಸ ರೀತಿ.

ಹಿಟ್ ಹಾಡುಗಳನ್ನು ಕನ್ನಡಕ್ಕೆ ಭಾವಾನುವಾದಿಸಿಡುವ ಪ್ರಯತ್ನ. ಸುಮ್ಮನೆ ಫ಼ನ್ನಿಗಾಗಿ.....
ದಯವಿಟ್ಟು ಭಾಗವಹಿಸಿ ಹಾಡನ್ನು ಚೆಂದಗೊಳಿಸಲು ಪ್ರಯತ್ನಿಸಿ.

ಮೊದಲ ಹಾಡು ’ತಾರೆ ಜಮೀನ್ ಪರ್’ ನ "ಮೇರಿ ಮಾ" ಹಾಡು...

ನಮ್ಮವ್ವಾ....

ನಾನ್ಯಾವತ್ತು ಬಾಯಿ ಬಿಟ್ ಹೇಳಂಗಿಲ್ಲ
ಆದ್ರ ನಾ ಕತ್ತಲಿಗೆ ಹೆದರ್ತೇನವ್ವಾ..!
ಹಂಗ ನಾ ತೋರಿಸ್ಕೆಳಂಗಿಲ್ಲ
ನಿನ್ನ ಕಾಳಜಿ ನಾ ಮಾಡ್ತೇನವ್ವಾ...!
ನಿಂಗ ಎಲ್ಲಾದುನೂ ಗೊತ್ತೈತಲ್ಲವ್ವಾ..!
ನಿಂಗೆಲ್ಲಾ ಗೊತ್ತೈತಿ ...ನಮ್ಮವ್ವಾ..!
ನಮ್ಮವ್ವಾ..!!!

ಗದ್ದಲದಾಗ ಹಿಂಗ ಕೈಬಿಡಬ್ಯಾಡ
ತಿರುಗಿ ಮನೀಗು ಬರ್ಲಾಕಾಗಲ್ಲ...
ಭಾಳ ದೂರ ನನ್ನ ಕಳಿಸ್ಬ್ಯಾಡವ್ವಾ..
ನಿಂಗ ನೆನಪಿಗು ಬರ್ತೇನಿಲ್ಲವ್ವಾ...
ನಾ ಇಷ್ಟು ಉಡಾಳ ಅದಿನೇನವ್ವಾ..!
ನಾ ಇಷ್ಟು ಉಡಾಳ ....ನಮ್ಮವ್ವಾ..!
ನಮ್ಮವ್ವಾ....!!!

ಯಾವಾಗರ ಅಪ್ಪಾ ನನ್ನ ಜೋರ್ ಜೋರಾಗಿ
ಜೋಕಾಲಿ ದೂಕ್ತಾರವ್ವಾ...
ನಾ ನಿನ್ನನ್ನ ಹುಡುಕುತ್ತೇನಿ..
ನೀಬಂದು ನನ್ನ ಹಿಡ್ಕೊಂತಿ ಅಂತಾ ಕಂಡು
ಆ ಹೊತ್ನೆಗ ನಾ ಹೇಳಂಗಿಲ್ಲ
ನಾ ಒಳಗ.. ಹೆದರ್ಕೋತೇನವ್ವಾ...
ನಿಂಗೆಲ್ಲಾ ತಿಳಿದೈತಲ್ಲವ್ವಾ....!
ನಿಂಗೆಲ್ಲಾ ಅರಿವ್...ನಮ್ಮವ್ವಾ....!!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಬ್ಬೇ,
ನಾ ಏಗ್ಳಿಗೂ ಬಾಯ್ಬಿಟ್ ಹೇಳುದಿಲ್ಲೆ
ಆದ್ರೆ ಬೈಗಾರ್ಕೂಳೆ ನಂಗೆ ಹೆದ್ರಿಕೆಯಾತ್ತಬ್ಬಿ
ನಾ ತೋರ್ಸ್ಕಂತಿಲ್ದಿರೂ
ನಿನ್ ಮೇಲ್ ನಿಗಾ ಇತ್ತಬ್ಬಿ
ನಿಂಗೆಲ್ಲಾ ಗೊತಿತಲ್ದಾ
ನಿಂಗೆಲ್ಲಾ ಗೊತಿತ್.. ನನ್ನಬ್ಬಿ..
ನನ್ನಬ್ಬಿ

ಈ ನಮ್ನಿ ಗಲಾಟೀಲಿ ನನ್ ಕೈ ಬಿಡ್ಬೇಡ
ನಂಗೆ ಮತ್ತೆ ಮನೀಗ್ ಬಪ್ಪುಕಾತ್ತಿಲ್ಲ
ಕಂಡಾಪಟಿ ದೂರ ಕಳ್ಸ್ಬೇಡ
ನಾ ಹಮ್ಲಲ್ಲಿರ್ತ್ನಲ್ದ
ನಾನೇನ್ ಅಷ್ಟಪ ಕೆಟ್ಟವ್ನ
ನಾನೇನ್ ಅಷ್ಟಪ ಕೆಟ್ಟವ್ನ.. ನನ್ನಬ್ಬಿ
ನನ್ನಬ್ಬಿ

ಅಪ್ಪಯ್ಯ ಏಗ್ಳಿಗಾದ್ರೂ ಒಂದೊಂದ್ ಸಲ
ಜೋರ್ ಮಾಡಿ ಹೊಡಿತ್ರಬ್ಬಿ
ನನ್ ಕಣ್ ಆಗ ನಿನ್ನನ್ನೆ ಹುಡ್ಕತ್
ನೀ ಬಂದ್ಕಂಡ್ ನನ್ ತಬ್ಕಂತೆ ಅಂದ್ಕಂಡ್
ಆ ಗಳ್ಗಿಲಿ ನಂಗೆ ಹೇಳುಕಾತ್ತಿಲ್ಲ
ನಂಗೊಳ್ಗೊಳ್ಗೆ ಪುಕು ಪುಕು ಆತ್
ನಿಂಗೆಲ್ಲಾ ಗೊತಿತಲ್ದಾ
ನಿಂಗೆಲ್ಲಾ ಗೊತಿತ್.. ನನ್ನಬ್ಬಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ, ultimate ಕಣ್ರೀ. ಒರಿಜಿನಲ್ ಕಿಂತ ಒರಿಜಿನಲ್ ಆಗಿದೆ. ಭಯಂಕರ ಸೂಪರಾಗಿದೆ. 'ನಂಗೊಳ್ಗೊಳ್ಗೆ ಪುಕು ಪುಕು ಆತ್
ನಿಂಗೆಲ್ಲಾ ಗೊತಿತಲ್ದಾ' - ಆಹಾ. ಪಾಲಂಗೆ ಜೈ.

ಬಾಕಿ ಎಲ್ಲ ಗೊತ್ತಾತ್. ಆದ್ರೆ, ಏಗ್ಳ ಅಂದ್ರೆ ಎಂತ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಏಗ್ಳಿಗೂ ಬಾಯ್ಬಿಟ್ ಹೇಳುದಿಲ್ಲೆ=ನಾನು ಯಾವಗಲೂ ಬಾಯಿಬಿಟ್ಟು ಹೇಳುವುದಿಲ್ಲ.
ಅಪ್ಪಯ್ಯ ಏಗ್ಳಿಗಾದ್ರೂ =ಅಪ್ಪಯ್ಯ ಯಾವಾಗಲಾದರೂ
ಎರಡೂ ಕವನಗಳು ಚೆನ್ನಾಗಿವೆ, ಅದ್ರಲ್ಲೂ ನಮ್ಮ ಕುಂದಾಪ್ರ ಕನ್ನಡದ್ದು ಸೂಪರ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಮಿನ್ನಿ, ಅನಂತೇಶ್, ನಾಗೇಂದ್ರ
ಶ್ರೀಹರ್ಷ, ಪ್ರೇರಣೆಗೆ ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವ್ವನೆ ಹಂಗ್ ಬಿಡ್ರಿ...ಛಲೊ ಹಾಡು ಅನುವಾದ ಮಾಡಿದೀರಿ ಬಿಡ್ರಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಟ್ಟೆ... ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರ್ಷ ಅವರೇ
ಒಳ್ಳೆಯ ಪ್ರಯತ್ನ, ಚೆನ್ನಾಗಿ ಅನುವಾದ ಮಾಡಿದೀರಾ

ನನ್ನದೂ ಒಂದು ಪ್ರಯತ್ನ..

ನನ್ನಮ್ಮ..
ನಾನ್ಯಾವತ್ತು ಬಾಯ್ಬಿಟ್ಟು ಹೇಳೋಲ್ಲ
ಆದ್ರೆ ನಾ ಕತ್ತಲಿಗೆ ಹೆದ್ರಿತೀನಮ್ಮ
ಹಂಗೆ ನಾ ತೋರಿಸ್ಕೊಳ್ದಿದ್ರೂ
ನಾ ನಿನ್ ಬಗ್ಗೆ ಕಾಳಜಿ ಮಾಡ್ತೀನಮ್ಮ
ನಿಂಗೆ ಎಲ್ಲಾ ಗೊತ್ತಲಮ್ಮ
ನಿನ್ಗೆಲ್ಲ ಗೊತ್ತು.. ನನ್ನಮ್ಮ..

ಈ ಗುಂಪೊಳಗೆ ಹಿಂಗೆ ನನ್ನ್ ಕೈಬಿಡಬೇಡ
ಮತ್ತ್ ಮನೆಗೆ ಬರೋದಿಕ್ಕೂ ಆಗೋಲ್ಲಮ್ಮ
ನನ್ನ ತುಂಬಾ ದೂರ ಕಳಿಸಬೇಡ
ನಿಂಗೂ ನಾ ನೆನಪಿಗ್ ಬರ್ತೀನಲ್ವಮ್ಮ
ನಾನೇನ್ ಅಷ್ಟ ಕೆಟ್ಟವ್ನೇನಮ್ಮ
ಕೆಟ್ಟವ್ನೇನಮ್ಮ..ನನ್ನಮ್ಮ

ಅಪ್ಪಯ್ಯ ಯಾವಾಗಾದ್ರೂ ಜೋರಾಗಿ ಹೊಡುದ್ರೆ
ನನ್ ಕಣ್ಣು ನಿನ್ನನ್ನೇ ಹುಡ್ಕುತಮ್ಮ
ನೀ ಬಂದು ನನ್ನನ್ನ ತಬ್ಬಿ ಸಮಾಧಾನ ಮಾಡ್ತಿ ಅಂತ
ಆ ಹೊತ್ತಲ್ಲಿ ನಂಗೆ ಹೇಳೋಕಾಗಲ್ಲ
ಆದರೆ ನಾ ಸಹಿಸ್ಕೊತೀನಿ ಅಮ್ಮ
ಮುಖದಲ್ಲಿ ವ್ಯಕ್ತಪಡಿಸೋದಿಲ್ಲ
ಒಳಗೊಳಗೆ ಹೆದ್ರಿಕೋತೆನಮ್ಮ
ನಿನ್ಗೆಲ್ಲ ಗೊತ್ತಲ್ಲಮ್ಮ
ನಿನ್ಗೆಲ್ಲ ಗೊತ್ತಲ್ಲಮ್ಮ..ನನ್ನಮ್ಮ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಕ್ಯೂಟಾಗಿದೆ... ಮುದ್ದಾಗಿದೆ.
ಮಗುನೇ ಬಂದು ಅಮ್ಮನ ಹತ್ರ ಹೇಳಿದ ಹಾಗೆ...
ಮುಂದೆನೂ ಹೀಗೆ ’ಕ್ಲಾಸಿ’ಗಳು ಬರಲಿ...

<<ಮುಖದಲ್ಲಿ ವ್ಯಕ್ತಪಡಿಸೋದಿಲ್ಲ>>
ಬದಲು
ಮುಖದಲ್ಲಿ ತೋರಿಸಲ್ಲಮ್ಮ...
ಹೇಗನ್ಸುತ್ತೆ?... ಮಗುವಿನ ಭಾಷೆಗೆ ಹತ್ತಿರ ಆಗುತ್ತಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು
<<ಮುಖದಲ್ಲಿ ತೋರಿಸಲ್ಲಮ್ಮ...>>
ಸರಿಯಾಗುತ್ತೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾರೀ ಚಲೋ ಬರದೀರ್ ಬಿಡ್ರೀ, ಅನುವದಾನೂ ಅಷ್ಟು ಸುಲಭದ್ದಲ್ಲ. ಸೂಪರ್ ಆಗಿ ಬರ್ದಿದಿರಿ
ಮಹೇಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ ಗುರು, ಗಿರೀಶ್, ಮಹೇಶ್, ಮಾಲತಿ, ಶೋಭಾ ಎಲ್ಲರಿಗೂ ಶರಣು.