thesalimath ರವರ ಬ್ಲಾಗ್

ಸಮಯ ಅನ್ನುವ ಬಕರಾ...
 ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ
ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ
ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ
ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ಜನ ಬದಲಾಗುವುದು ಮನ ಬದಲಾಗುವುದು
ಯೋಚನೆ ಬದಲಾಗುವುದು ಚಿಂತನೆ ಬದಲಾಗುವುದು
ದೊಡ್ದವರೆನ್ನುತ್ತಾರೆ ಕಾಲ ಬದಲಾಯಿತು ಮಾರಾಯ
ಸಮಯ ತಮ್ಮ ಪಾಡಿಗೆ ತಾನು ಮುನ್ನಡೆಯುತ್ತದೆ
ತಮ್ಮಲ್ಲಿನ ಕುಸಿತಕೆ ಗೂಬೆ ಕೂರಿಸಲು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ನಿನ್ನದೇ ಮಕ್ಕಳಿಗೆ ನೀ ಹೇಳಿ ಕೊಡಲಿಲ್ಲ ನೀ ಕಲಿಸಿ ಕೊಡಲಿಲ್ಲ
ದಾರಿ ತಪ್ಪಿಸಿದವ ನೀನು ವಿಷವ ಬಿತ್ತಿದವ ನೀನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಬದುಕೆಂಬುದು ಉಳಿವಿನ ಹೋರಾಟಮಾನವ ಬದುಕಿನಿಂದ ಬೇಸತ್ತು
ಬೇರೆಯದೇ ಜೀವವಾಗ ಬಯಸಿದೆ.

ಕಾಡಲ್ಲಿ ನೆಗೆನೆಗೆದು ಉಲ್ಲಾಸದಿ ಓಡುವ
ಜಿಂಕೆಯಾಗಿ ಹುಲ್ಲು ಸೊಪ್ಪು ತಿನ್ದುಕೊಂಡಿದ್ದೆ.
ಒಮ್ಮೆ ಹುಲಿಯು ಹಿಂದೆ ಮತ್ತೊಮ್ಮೆ ಕಿರುಬಗಳ ಮಂದೆ
ತೋಳಗಳ ಊಳಿಡುವ ಸದ್ದು ಕೇಳಿ ಜೀವ ಭಯದಿ ಬೆಚ್ಚಿಬಿದ್ದೆ!

ಇದಕಿಂತ ಬಲಶಾಲಿ ಹುಲಿಯು ಸುಖವಾಗಿರಬೇಕೆಂದು ಕೊಂಡೆ
ಯಾವಾಗಲೂ ಒಂಟಿ ಜೀವನ ತಿಂಗಳುಗಟ್ಟಲೆ ಊಟವಿಲ್ಲ
ಹೆಂಡತಿಗಾಗಿ ಪರರೊಡನೆ ಕಾದಾಟ
ಮುದಿಯಾಡೋದೇ ಬೇಟೆಗೂ ಬಲವಿಲ್ಲ. ಸೊಪ್ಪು ಹೊಟ್ಟೆಯಲಿ ನುರಿಯುವುದಿಲ್ಲ.

ಆಗಸದಿ ಗಾಳಿಯಲಿ ಹಾರಬಯಸಿದೆ ಹಕ್ಕಿಯಂತೆ
ಮಾಂಸಕೆ ಕಾದಿರುವ ಹದ್ದುಗಳ ಭಯ ಮಾನವನ ಬಲೆಯ ಭಯ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನದಿಗಳ ಕಥೆಗಳ ದಿಟ,ಪ್ರಕಟೇಶ್ವರ ಮತ್ತು ಪೂಜಾ ಭಾತ್ರಾ ಟ್ರಾಜಿಡಿ!

 

   ಶ್ರೀನಗರ ದಾಟಿ  ಬಾಲಟಾಲ್ ಕಡೆ ಹೊರಡುವ ದಾರಿಯಲ್ಲಿ ಒಂದರ್ಧ ಗಂಟೆ ಮುಂದೆ ಸಾಗುತ್ತಿದ್ದಂತೆ ಕಾಣಸಿಗುತ್ತದೆ ಸಿಂಧೂ ನದಿ.

 

"ನೋಡ್ರಿ ಹರ್ಷ ಇದು ಸಿಂದೂ ನದಿ" ಅಂತ ಸುಧೀಂದ್ರ ತೋರಿಸದಾಗ ಅಕ್ಷರಶಃ ನನಗೆ ರೋಮಾಂಚನ. ಜುಳಜುಳನೆ ಹರಿಯುತ್ತ ಬರುತ್ತಿರುವ ನೀರಿನ ಹರಿವು ನೋಡಿ ನೋಡಿದಂತೆ ಪ್ರತೀ ಕೂದಲೂ ಎದ್ದು ನಿಂತಂತೆ!

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೂಗೂರಿನ ತಿಬ್ಬಾದೇವಿ...

ಮೈಸೂರಿನ ಬಳಿ ಮೂಗೂರಿನಲ್ಲಿ ತಿಬ್ಬಾದೇವಿ ಗುಡಿಯಿದೆ.

 

     ಗುಡಿಗೆ ತನ್ನದೇ ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳಿದ್ದು ಅವುಗಳಲ್ಲಿ ಇಂದಿಗೂ ಪಾಲನೆಯಘುತ್ತಿರುವ ಪವಾಡಗಳು ಅಚ್ಚರಿ ಹುಟ್ಟಿಸುತ್ತವೆ. ಗುಡಿಯನ್ನು ನವಾಬನೊಬ್ಬ ಕಟ್ಟಿಸಿದನಂತೆ.

    ಮೂಗೂರಿನ ನೇರಳೆಮರದ ಕೆಳಗೆ ವಿಶ್ರಾಂತಿಗಾಗಿ ಮಲಗಿದ್ದ ನವಾಬನಿಗೆ ದೇವಿ ಕನಸಲ್ಲಿ ಕಾಣಿಸಿಕೊಂಡು ಗುಡಿಕಟ್ಟಿಸಲು ಅಪ್ಪಣೆ ನೀಡಿದಳಂತೆ. ಕನಸಲ್ಲಿಯೇ ನವಾಬನು ದೇವಿಗೆ ನೀನು ನಿಜವಾದ ಮಹಿಮೆಯೇ ಆಗಿದ್ದರೆ ತಲೆಕೆಳಗಾಗಿ ಹೂತಿಟ್ಟ ಕೊರಡು ಜೋಳವನ್ನು ಚಿಗುರಿಸು ಎಂದು ಸವಾಲು ಹಾಕಿದನಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ವಿದ್ಯುತ್ ಸಮಸ್ಯೆ- ಹೊಂದಾಣಿಕೆಯೊಂದೇ ಶಾಶ್ವತ ಪರಿಹಾರ.

                  ಈ ಲೇಖನದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಬಹುದಾದ ಉಪಾಯವೊಂದನ್ನು ಸೂಚಿಸಿದ್ದೆ.

 

ಇದು ಹೊಂದಾಣಿಕೆಯ ಮಾರ್ಗವೇ ಹೊರತು ಶಾಶ್ವತ ಪರಿಹಾರವಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ.

 

  ನಾನು ಹೇಳಿದ ದಾರಿ ಕೇವಲ ಹೊಂದಾಣಿಕೆಯಲ್ಲ. ನಮ್ಮ ದೇಶದ ಮಟ್ಟಿಗೆ ಅದು ಶಾಶ್ವತ ಪರಿಹಾರ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.

Pages

Subscribe to RSS - thesalimath ರವರ ಬ್ಲಾಗ್