ಬೆಂಗಳೂರಲ್ಲಿ ಕನ್ನಡ ಹರಡುವುದು

0

ನಮಗೆ ಬೇಕಾಗಿರೊದು ಕನ್ನಡದ ರಾರಾಜು. ಅತ್ತೆಡೆ ನಮಗೆ ಲಭಿಸೊ ಎಲ್ಲ ಶಕ್ತಿಗಳನ್ನು ನಾವು ಉಪಯೊಗಿಸಕೊಬೇಕು. ಹೊಸ ಚ್ಯಾಲೆಂಜುಗಳಿಗೆ ಹೊಸ ಉಪಾಯ ಬೇಕು. ಈಗಿರೊದು ಮಾರುಕಟ್ಟೆ. ಜನ ಈಗ ಕಿಸೆಗೆ ಕಯ್ಯಿ ಹಾಕಿ ಮತ ಚಲಾಯ್ಸ್ತಾರೆ. ದುಡ್ಡೇ ದೊಡಪ್ಪ. ಇದರಲ್ಲಿ ಸಂಕೋಚ ಬೇಡ. ಸಂದೇಹ ಬೇಡ. ಕೆಲಸಕ್ಕೆ ಬಾರದಿರೊ ಸಮಾಜವಾದದ ಮಡಿ ಬೇಡ.

ಇತ್ತೆಡೆ ನನ್ನ ಕೆಲ ಅನಸಿಕೆಗಳು....

#೧. ಭಾಶ್ಯಾಂತರದ ಬದಲು ಲಿಪ್ಯಾಂತರದ ಬಳಕೆ. ಲಿಪಿಗಿಂತ ಭಾಶೆ ಮುಖ್ಯ ಮಾಡಿಕೊಂಡು ಹೊರಟರೆ ಹೆಂಗೆ?

BMTC ಬದಲು BSN/BESANI(ಬೆಸನಿ) ಬೆಂಗಳೂರು ಸಾರಿಗೆ ನಿಗಮ, ಇಂಗ್ಲಿಶ್ ಲಿಪಿಲೂ ಕೂಡ.
BDA/BMP ಬದಲು BENAPA/BEMAPA
ITPL/EC ಬದಲು ANTAUD/ENA ಅಂತೌದ/ಇನ (ಅಂತರ್ರಾಷ್ಟ್ರಿಯಾ ತಂತ್ರಜ್ನ್ಯಾನ ಉದ್ಯಾನವನ.)
jayanagara 5th mukhya, 2nd tiruvu

ಎಲ್ಲ ಸೂಚಕ, ನಿರ್ದೆಶಕ ಸೂಚನೆಗಳು ಮೂರು ಲೈನಲ್ಲಿ---

Towards ANTAUD use hale madraasu raste
ANTAUD kaDege hale madraasu raste upayogisi
ಅಂತೌದ ಕಡೆಗೆ ಹಳೆ ಮದರಾಸು ರಸ್ತೆ ಉಪಯೊಗಿಸಿ.

ma ga raste full
ma ga raste tumbide
ಮ.ಗ. ರಸ್ತೆ ತುಂಬಿದೆ.

#೨. ಸ್ತಳೀಕರಣ ಅಪ್ಪಿಕೊಳ್ಳೊಕೆ ಸ್ವಂತ ಹಣ ಹೂಡೊರ್ಗೆ ಉತ್ತೇಜನೆ
ಪ್ರತಿ ಕಂಪನಿ ಕನ್ನಡ ಮೂಲ ಹೆಸರ ಬಳಕೆ ಮಾಡಿದಲ್ಲಿ ನೊಂದಾಣಿಕೆ ಸುಂಕ ೧೦% ಕಮ್ಮಿ. ಭಾರತಿಯ ಹೆಸರು ಬಳಕೆ ಮಾಡಿದಲ್ಲಿ ೫% ಕಮ್ಮಿ. ಕನ್ನಡ ಲಿಪೀಲಿ ಹಲಿಗೆ ಪ್ರದರ್ಶಿಸಿದಲ್ಲಿ ಇನ್ನೋಂದಿಶ್ಟು ರಿಯಾಯಿತಿ.

brigade acropolis -- ಬ್ರಿಗೇಡ್ ಹಜಾರ, ಬ್ರಿಗೇಡ್ ಶಾಲಿಮಾರ, ಇಟ್ಟಿನ ಐಹೊಳೆ. ಸಾಲಪುರಿಯಾ ಲಾಲಭಾಗ್.
ಕೊನೆ ಪಕ್ಷ, ಕನ್ನಡನಾಡಿನ ಇತಿಹಾಸ, ಸಾಂಪ್ರದಾಯ, ಸಂಸ್ಕ್ರುತಿ ತಿಳಿದು ಕೊಂಡಿರೊ arts ಗ್ರಾಜುಯೇಟ್ಟ್ಸ್ ಗಳಿಗಾದ್ರು ಡಿಮಾಂಡು ಹೆಚ್ಚುತ್ತೆ ;)

architecture ಅಲ್ಲಿ, ಬದಾಮಿ, ಬಿಜಾಪುರ, ಹಂಪಿ, ಮೈಸೂರ, ದ.ಕ. ಇಲ್ಲ ಇತರ ಭಾರತಿಯ ಶೈಲಿಯ ಬಳಕೆ ಮಾಡಿದಲ್ಲಿ ೨೫% ಕಮ್ಮಿ. ಮಂಗಳೂರ ಹಂಚು ೧೫%. ಇದರಿಂದ ನಮ್ಮವರ ಕುಂದುತಿರುವ ಹಂಚಿನ ವ್ಯಾಪಾರಕ್ಕು ಚೇತನ.

ನಗರ ಪಾಲಿಕೆಗಳ ಬೊಕ್ಕಸ ಹೇಂಗೂ ಖಾಲಿ, ನಾಡಲ್ಲಿ ಇವರಿಂದ ಇನ್ನೊಂದು ಐಹೊಳೆ ಬರೋದು ನಾ ಕಾಣೇ. ಕನಿಶ್ಟ ಖಾಸಗಿ ಜನ ಆದ್ರು ಉಳಿಸಲಿ ನಮ್ಮತನಾನ.

incentivize private companies to go local.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.