ಗೆಳೆಯ ನಿನಗೆ ಇದು ............ ಗೊತ್ತಿಲ್ಲ

4.153845

ಗೆಳೆಯ ನೀನು ಕೆಲ ದಿನಗಳ ಹಿಂದೆ ಪರಿಚಯವಾದವನು

ಆದರೂ ನೀ ಆಡುವ ಶೈಲಿ ನನಗೆ ಇಷ್ಟವಾಯಿತು

ಕೆಲವೊಮ್ಮೆ ನಿನ್ನಿಂದ ಆಗುವ ಅತಿರೇಕದ ನಡುವಳಿಕೆಗಳು

ಅದನ್ನು ಬೆಂಬಲಿಸುವ ನಿನ್ನದೇ ಪಡೆ

ಒಮ್ಮಮ್ಮೊ ಹಾಸ್ಯಾಸ್ಪದವಾಗಿ ಕಾಣುತ್ತದೆ.

 

ಗೆಳೆಯ ತಿಳಿಯದೇ ಇದ್ದವರನ್ನು ತಿದ್ದುವ ಕೆಲಸ

ಮಾಡುತ್ತಿದ್ದೇನೆ ಎನ್ನುವ ಭ್ರಮೆ

ಇದು ಕೆಲವರಿಗೆ ಮಾತ್ರ ಯಾಕೆ ಗೊತ್ತಿಲ್ಲ.

 

ಗೆಳೆಯ ನಿನ್ನನ್ನು ಒಮ್ಮೆ ಊಟಕ್ಕೆ  ಆಹ್ವಾನಿಸಿದಾಗ

ಉಪ್ಪಿನ ಕಾಯಿಯಲ್ಲಿ ಉಪ್ಪು ಕಡಿಮೆಯಾದರೆ

ಅಡುಗಯೇ ಸರಿಯಿಲ್ಲ ಎನ್ನುವ ನಿನ್ನ ತಕರ್ಕ

ನಿಜಕ್ಕೂ ಆಶ್ಚರ್ಯ ಮೂಡಿಸುವುದರ ಜೊತೆಗೆ

ಅದು ನಿನ್ನ ಜಾಯಮಾನವೇ ಅನ್ನಿಸುತ್ತದೆ.

ಮೊಸರಲ್ಲಿ ಕಲ್ಲು ಹುಡುಕುವ ಜಾಣತನ.

 

ಕೋಳಿ ಕೂಗಿನಿಂದಲೇ ಬೆಳಕು ಹರಿಯುತ್ತದೆ

ಎನ್ನುವುದು ಗೆಳೆಯ ನಿನ್ನ ಭ್ರಮೆಯಷ್ಟೆ

ಪಿಂಡವನ್ನು ಕಾಗೆ ತಿನ್ನುತ್ತದೆ ಎನ್ನುವುದು ವಾಡಿಕೆ

ಅದನ್ನೇ ಓಡಿಸುವ ಗೆಳೆಯನ ಪಡೆ

ಒಂದು ಹೆಜ್ಜೆ ಮುಂದೆಯೇ ಹೋಗಿದೆ.

 

ಮಾಡಿದ್ದೆಲ್ಲಾ ಸರಿ ಎಂದು ಹೇಳುವ ಜಾಯಮಾನ ನನ್ನದಲ್ಲ

ತಪ್ಪನ್ನು ತಪ್ಪು ಎಂದಲೇ ಹೇಳುತ್ತೇನೆ

ಗೆಳೆಯ ಇದು ಮನದ ಮಾತು

ನೀ ಬದಲಾದರೂ ನಷ್ಟವಿಲ್ಲ

ಬದಲಾಗದೇ ಇದ್ದರೂ ನಷ್ಟವಿಲ್ಲ

ಗೆಳೆಯ ನಿನಗೊಂದು ವಂದನೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (13 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ನೀವು ಯಾರಿಗೆ ಪಾಯಿ೦ಟ್ ಔಟ್ ಮಾಡಿದ್ದೀರೋ ಸ್ಪಷ್ಟವಾಗಿ ಗೋಚರಿಸುತ್ತೆ. ಅವರನ್ನು ಬೆ೦ಬಲಿಸುವುದರಿ೦ದ ಯಾರಿಗೂ ಇಲ್ಲಿ ಲಾಭವಿಲ್ಲ. ಆದರೆ ಅವರ ಕಳಕಳಿಯನ್ನು ಹಾಸ್ಯಾಸ್ಪದ ಎನ್ನುವುದು ನಿಜಕ್ಕೂ ಹಾಸ್ಯಾಸ್ಪದವಾಗುತ್ತೆ. ಇಡೀ ಊಟ ಉಪ್ಪಿನಕಾಯಿಯಾದರೆ ಆದ ಉಪ್ಪು ಮುಖ್ಯವಾಗುತ್ತೆ. ಊಟ ಕೆಟ್ಟಿದೆ ಎ೦ದೇ ಹೇಳಬೇಕಾಗುತ್ತೆ. ಆದರೆ ಸಣ್ಣ ತಪ್ಪುಗಳಿಗೆ ಮಾಫಿ ಇದೆ. ಅದನ್ನು ಎತ್ತಿ ತೋರುವುದು ತಿದ್ದಿಕೊಳ್ಲಲೆ೦ದೇ ಪರ೦ತು ಚುಚ್ಚುವುದಕ್ಕಲ್ಲ. ತಪ್ಪನ್ನು ತಪ್ಪು ಎ೦ದೇ ಹೇಳುತ್ತೇನೆ ಎ೦ದಿರಲ್ಲ ಅವರು ಅವನ್ನು ಹೇಳಿದಾಗ ಸಿಟ್ಟಾಗುವುದೇಕೆ? ಅವರನ್ನು ಬೆ೦ಬಲಿಸುವ ಪಡೆ ಎ೦ದಿರಲ್ಲ ಮೆಚ್ಚುಗೆ ಒಳ್ಳೆಯ ಕವನಕ್ಕಷ್ಟೇ. ಮಾಮೂಲಿ ಕವನಗಳಿಗೆ ಪ್ರತಿಕ್ರಿಯೆ ಬ೦ದಿರುವುದಿಲ್ಲ. ಸ೦ಪದದಲ್ಲಿ ಹೊಗಳು ಭಟ್ಟರಿಲ್ಲ ಸರ್ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹರೀಶ್ ರವರೇ, >>>ಇಡೀ ಊಟ ಉಪ್ಪಿನಕಾಯಿಯಾದರೆ ಆದ ಉಪ್ಪು ಮುಖ್ಯವಾಗುತ್ತೆ. ಊಟ ಕೆಟ್ಟಿದೆ ಎ೦ದೇ ಹೇಳಬೇಕಾಗುತ್ತೆ.<<< ಊಟದಲ್ಲಿರುವ.... ಸ್ವಲ್ಪ ಉಪ್ಪಿನಕಾಯಿ ಉಪ್ಪು ಕಮ್ಮಿ ಆದರೆ "ಊಟ ಸರಿಯಿಲ್ಲಾ" ಅಂತಾ ಹೇಳುವುದು ಎಂತಾ ನ್ಯಾಯ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಊಟಾನೇ ಸರಿ ಇಲ್ಲ ಅ೦ತ ಎಲ್ಲಿ ಹೇಳಿದ್ದಾರೆರೀ. ಉಪ್ಪಿನಕಾಯಿಯಲ್ಲಿ ಉಪ್ಪಿಲ್ಲ ಅ೦ತ ಹೇಳಿದ್ರೆ ಯಾಕೆ ಉರಿ ಅ೦ತೀನಿ. ರುಚಿಗೆ ತಕ್ಕಷ್ಟು ಸರಿ ಆದ್ರೆ ಕಡಿಮೆ ಆದ್ರೆ ಚೆನ್ನಾಗಿರಲ್ಲ (ಉಪ್ಪಿನಕಾಯಿ) ಊಟ ಸರಿಯಿಲ್ಲ ಅ೦ತ ಯಾವತ್ತೂ ಕಾಮೆ೦ಟ್ ಮಾಡಿಲ್ಲಣ್ಣ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್, ಈ ಕವನದ ಹಿನ್ನೆಲೆಯಾದ ಮೂಲ ವಿಷಯದ ಅರಿವು ವಿಜಯ ಕುಮಾರರಿಗೆ ಇದ್ದಂತಿಲ್ಲ. ಸುರೇಶ ನಾಡಿಗರು ಇಲ್ಲಿ ಆತ್ರಾಡಿ ಸುರೇಶ ಹೆಗ್ಡೆಯವರ ತೇಜೋವಧೆಗಾಗಿ ಬರೆದಿರುವ ಕವನ ಇದು ಎಂಬ ಅರಿವು ಇವರಿಗೆ ಆಗಿಲ್ಲ, ಅಷ್ಟೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮಿ ನಿಮ್ಮನ್ನ ತೇಜೋವಧೆ ಮಾಡಿ ನನಗೇನು ಲಾಭವಿಲ್ಲ. ಇಲ್ಲಿ ಬರೀ ಅಕ್ಷರಗಳ ಚರ್ಚೆಯಷ್ಟೆ. ಅದೂ ಅಲ್ಲದೆ ತಮಗೆ ಅಂತಲೇ ತಿಳಿದುಕೊಂಡಿದ್ದಕ್ಕೆ ಧನ್ಯವಾದಗಳನ್ನು ಮಾತ್ರ ಹೇಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗಷ್ಟೇ ಅಲ್ಲ ಹೆಚ್ಚಿನ ಸಂಪದಿಗರೆಲ್ಲರಿಗೂ ಅರ್ಥ ಆಗಿದೆ. ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲುಕುಡಿದ ಕಥೆ... ಇಲ್ಲಿ ನೀವೇ ಹೇಳಿದ್ದೀರಿ: <<ಸುರೇಶ್ ಹೆಗ್ಡೆಯವರು ಒಂದು ಕವನ ಬರೆಯುತ್ತಾರೆ. ಅದಕ್ಕೆ ಮತ್ತಷ್ಟು ಪ್ರತಿಕ್ರಿಯೆಗಳು ಚರ್ಚೆ ಲೇಖನದಲ್ಲಿ ಮುಗಿದಿದ್ದರೂ ಅದಕ್ಕೊಂದು ಕವನ. ಅದಕ್ಕೆ ಎರಡು ಉದಾಹರಣೆಗಳು ಇಲ್ಲಿವೆ ನೋಡಿ. http://sampada.net/b... http://sampada.net/b... ಈ ಬಾರಿ ಬೇಸರವಾಗಿ ಬರೆದಿದ್ದು. ಅದನ್ನು ಅಲ್ಲಿಗೆ ಬಿಡುವ ಬದಲು ಮುಂದುವರೆಸುವ ಹವ್ಯಾಸ ಯಾಕೆ ಇದೆಯೋ ಕಾಣೆ. ಬೇರೆಯವರಿಗೆ ತಪ್ಪೆನಿಸಿದರೆ ಕ್ಷಮಿಸಿ.>>
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರಲ್ಲಿ ಕಳ್ಳಬೆಕ್ಕು ಯಾರು ಎನ್ನುವುದು ಮತ್ತೊಂದು ವಿಷಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಇದರಲ್ಲಿ ಕಳ್ಳಬೆಕ್ಕು ಯಾರು ಎನ್ನುವುದು ಮತ್ತೊಂದು ವಿಷಯ.>> ಆದರೆ ಅದು ನೀವೇ ಎಂದು ಎಲ್ಲರಿಗೂ ಗೊತ್ತಿರುವ ವಿಷಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹರೀಶ್, ಯಾಕೆ ಸಿಟ್ಟು. ನೀವೇ ಹೀಗೆ ಆಡಿದರೆ ಹೇಗೆ ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಸಿಟ್ಟು ಇಲ್ಲ ಸೆಡವು ಇಲ್ಲ . ನಿಮ್ಮ ಮಾತು ಕೇಳಿ ನಗು ಬರ್ತಿದೆ ಅಷ್ಟೆ. ಒಬ್ಬರನ್ನ ಹೀಗೆಳೆಯೋದ್ರಿ೦ದ ನಿಮಗಾಗೋ ಉಪಯೋಗವಾದ್ರೂ ಏನು ಅ೦ತ. ಅವರದ್ದು ತಪ್ಪು ಅ೦ತ ಸಾಧಿಸಿ ತೋರಿಸ್ಬಿಡಿ ಅದು ತಪ್ಪೇ ಆಗಿದ್ರೆ ಅದನ್ನ ನಾವೂ ವಿಮರ್ಷೆ ಮಾಡ್ತೀವಿ. ಒಳ್ಳೆ ಬುದ್ಧಿ ಜೀವಿ ಹಾಗೆ ಹೇಳಿದ್ರೆ ಹೇಗೆ ಸ್ವಾಮಿ. :) ಹಹಹ್ ಹೋಗ್ಲಿ ಬಿಡಿ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್ ಚರ್ಚೆಯನ್ನು ಆ ಲೇಖನಕ್ಕೆ ಬಿಡಬೇಕು. ಆದರೆ ಅದಕ್ಕೊಂದು ಹೀಯಾಳಿಸುವ ಕವನ ಬರೆಯುವುದು ಸರಿಯಾ. ಇದೀಗ ಬ್ಲಾಗ್ ನಲ್ಲಿ ಹೊಸ ಕವನ ಒಂದು ಬಂದಿದೆ ನೋಡಿ "ಓ ಅಸುಮನವೇ" ಹಾಗೇ ಕೆಳಗಿನ ಪ್ರತಿಕ್ರಿಯೆಯೊಂದರಲ್ಲಿ ಎರಡು ಲಿಂಕ್ ಕೊಟ್ಟಿದ್ದೇನೆ. ಅದು ಯಾರನ್ನು ಹೀಯಾಳಿಸಲಾಗಿದೆ ಎಂದು ನಿಮಗೇ ತಿಳಿಯುತ್ತದೆ. ನಿಜ ಜಗಳವೂ ಇಲ್ಲ, ಏನೂ ಇಲ್ಲ. ನಾವು ಬರೆದರೆ ತಪ್ಪು. ಇತರರು ಬರೆದರೆ ಹೊಗಳಿಕೆಯ ಮಹಾಪೂರ. ಇದು ಸರಿಯಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ತಪ್ಪು ಸರ್ ಒ೦ದ್ವೇಳೆ ಅವರೂ ಸಹ ಹೀಗೇ ತಮ್ಮ ಪ್ರಹಾರವನ್ನು ಇತರರ ಮೇಲೆ ಪ್ರಯೋಗಿಸಿದ್ದರೆ ಆಗ ಅವರದೂ ತಪ್ಪಾಗುತ್ತೆ. ನಾ ಕ೦ಡ೦ತೆ ಬೇರೆಯವರ ತಪ್ಪುಗಳನ್ನ (ಕೇವಲ ಕಾಗುಣಿತ) ಹಿಡಿದು ಕೊಟ್ಟದ್ದಕ್ಕೆ ಅವರನ್ನು ಟೀಕಿಸಿದವರಿದ್ದಾರೆ. ಅವರ ಉದ್ದೇಶ ಕನ್ನಡ ಭಾಷೆ ಸರಿಯಾಗಿ ಬರಲಿ ಎ೦ಬುದಷ್ಟೇ/ ವ್ಯಕ್ತಿಗತ ದ್ವೇಷದಿ೦ದ ಯಾರಮೇಲೂ ಅವರು ಹರಿಹಾಯ್ದದ್ದು ಕ೦ಡಿಲ್ಲ. ತೀರ ವ್ಯಕ್ತಿಗತ ನಿ೦ದನೆಗೆ ಒಳಗಾದಾಗ ಬೇಸರದಿ೦ದ ತಮ್ಮ ಕವನದ ಮೂಲಕ ಹೇಳಿದ್ದಿದೆ ಈಗ ನೀವು ಮಾಡಿದ೦ತೆ . ತಾನೊಬ್ಬನೇ ಸಾಚಾ ಎ೦ದು ತೋರಿಸಿಕೊಳ್ಳುವ ಹಪಾಹಪಿ ಅವರಿಗಿದ್ದ೦ತಿಲ್ಲ. ಏನೇ ಇರಲಿ ಅವರ ತೀಕ್ಷ್ಣ ಪ್ರತಿಕ್ರಿಯೆಯ ಹಿ೦ದಿನ ಕಳಕಳು ಎಲ್ಲರಿಗೂ ಮುಟ್ಟಿದರೆ ಸಾಕು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ "ತಾನೊಬ್ಬನೇ ಸಾಚಾ ಎ೦ದು ತೋರಿಸಿಕೊಳ್ಳುವ ಹಪಾಹಪಿ ಅವರಿಗಿದ್ದ೦ತಿಲ್ಲ." ಅದು ನನಗೂ ಇಲ್ಲ. ನನ್ನ ಮೇಲೆ ವೈಯಕ್ತಿಕ ಕವನಗಳು ಬಂದದ್ದಕ್ಕೆ ಬರೆದದ್ದು ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಿಮ್ಮ ಮೇಲೆ ವ್ಯಯುಕ್ತಿಕ ಕವನಗಳು ಬರಕ್ಕೆ ಕಾರಣಗಳೇನಿರಬಹುದು ? ಯೋಚಿಸಿ ಉತ್ತರ ನಿಮಗೇ ಸಿಗಬಹುದು. ನಿಮ್ಮ ದ್ವೇಷ ಕಾರುವುದಕ್ಕೆ ನೀವೇನು ಅವರ ದಾಯಾದಿಯಲ್ಲ ಅಲ್ಲವೇ? ನೀವು ಅವರನ್ನು ವ್ಯಕ್ತಿಗತವನ್ನು ನಿ೦ದಿಸಿರಬಹುದು. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹರೀಶ್ ರವರೇ, ಕ್ಷಮಿಸಿ... "ಊಟ ಕೆಟ್ಟಿದೆ" ಅಂದರೆ "ಊಟ ಸರಿಯಿಲ್ಲಾ" ಅಂದುಕೊಂಡಿದ್ದೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ನಿಮ್ಮ ಅಡುಗೆ ಒ೦ಚೂರೂ ಸರಿ ಇಲ್ಲ.. ;) :-) ಉಪ್ಪಿನಕಾಯಿ ಹೀಗೆ ಇರಬೇಕು. ಉಪ್ಪಿನ ಕಾಯಿಯಲ್ಲಿ ಉಪ್ಪು ಕಡಿಮೆಯಾದರೆ - ಉಪ್ಪಿನಕಾಯಿಯಲ್ಲಿ ಉಪ್ಪು ಕಡಿಮೆಯಾದರೆ ಅಡುಗಯೇ ಸರಿಯಿಲ್ಲ ಎನ್ನುವ ನಿನ್ನ ತಕರ್ಕ - ಅಡುಗೆಯೇ ಸರಿಯಿಲ್ಲ ಎನ್ನುವ ನಿನ್ನ ತರ್ಕ ... :-) :-) :-) :-) -- ಹರ್ಷ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯಯ್ಯಪ್ಪಾ ಹರ್ಷರವರೆ, ನನ್ನ ಮೇಲೆ ಮತ್ತೊಂದು ಕವನ ಸಿದ್ದವಾಗಿ ಬಿಡುತ್ತೆ. ನಂಗೆ ಅಡುಗೆ ಬರಲ್ಲ ಸಾರ್. ಬೇಕಾದರೆ ಕಾಫಿ ಮಾಡ್ತೀನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಹಾತ್ಮಾ ಗಾಂಧಿ ಹುಟ್ಟಿದ ನಾಡಲ್ಲೇ ವಿನೋಬಾ ಬಾವೆ ಮತ್ತು ಗೋಡ್ಸೆಯೂ ಹುಟ್ಟಿದ್ದರು. ಭತ್ತದಪೈರಿನ ನಡುವೆ ಬೆಳೆವ ಕಳೆಯ ಕಿತ್ತೊಗೆದು ಪೈರನ್ನು ಉಳಿಸಿಕೊಳ್ಳುವವರೂ ಇಹರು ತಿದ್ದಿಸಿಕೊಂಡವರು ದೂರದ ಊರಿನಿಂದ ದೂರವಾಣಿ ಕರೆಮಾಡಿ ತಿದ್ದಿದವನ ಕೊಂಡಾಡುವರು ಬೆಳೆಯಲಿಚ್ಛಿಸದವರು ಬರಿದೆ ಜರೆದು, ಒಳಗೊಳಗೆ ಉರಿದುರಿದು ಅನವಶ್ಯಕವಾಗಿ ಬೇಯುತಿಹರು ಮೆಚ್ಚುವವರ ಪಡೆ ನಿಮಗೆ ಹಾಸ್ಯಾಸ್ಪದವೆನಿಸಿದರೆ ಹಾಸ್ಯಕ್ಕೆ ಇದರಿಂದೊಂದು ಹೊಸ ವ್ಯಾಖ್ಯಾನ ಸೊಂಟದಿಂದ ಕೆಳಗಿನ ಅಶ್ಲೀಲ ಪದಗಳ ಬಳಸಿ ಮಾಡುವ ಹಾಸ್ಯ ನಿಮಗೆ ಸದಾ ಅಪ್ಯಾಯಮಾನ ನಿಮ್ಮ ಪದಬಳಕೆಯಿಂದ ನೀವು ಸದಾ ನಿಮ್ಮ ಸಂಸ್ಕಾರದ ಪರಿಚಯ ಆಗಾಗ ಮಾಡುತಿರುವಿರಿಲ್ಲಿ ಅದಕ್ಕಿಲ್ಲ ಖೇದ ಏಕೆಂದರೆ ನಿಮಗೆ ಸಂಸ್ಕಾರ ನೀಡಿದವನು ನಾನಲ್ಲ ಇದನು ಜನ ಅರಿತಿರುವರಿಲ್ಲಿ ವೈಯಕ್ತಿಕ ಟೀಕೆಗೆ ಶ್ರೀಗಣೇಶ ಹಾಡಿದ್ದೀರಿ ಹಾಗಾಗಿ ನಾನೂ ಮುಂದುವರಿಸಬೇಕಾಯ್ತು ಇಲ್ಲೀಗ ಇಲ್ಲಿಗೇ ನಾ ಮುಗಿಸದೇ ಹೆಚ್ಚಿಗೆ ಬರೆಯುತ್ತಿದ್ದರೆ ಬೋರ್ಗಲ್ಲಮೇಲೆ ಮಳೆಗರೆದಂತಾಗಬಹುದಾಗ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಗೆಳೆಯ ನೀನು ಕೆಲ ದಿನಗಳ ಹಿಂದೆ ಪರಿಚಯವಾದವನು>> ಗೆಳೆಯನೆನ್ನದಿರಿ, ನಿಮ್ಮ ಗೆಳೆಯನನಿಸಿಕೊಳ್ಳಲೇ ನಿಜದಿ ಮುಜುಗರ ನನಗೆ ಪರಿಚಯ ಆಗಿಲ್ಲ ಕಣ್ರೀ, ನಿಮ್ಮ ಪದಬಳಕೆಯದಷ್ಟೇ ಬರೋಬರಿ ಪರಿಚಯ ನನಗೆ <<ಕೆಲವೊಮ್ಮೆ ನಿನ್ನಿಂದ ಆಗುವ ಅತಿರೇಕದ ನಡುವಳಿಕೆಗಳು ಅದನ್ನು ಬೆಂಬಲಿಸುವ ನಿನ್ನದೇ ಪಡೆ>> ಅತಿರೇಕದ ನಡವಳಿಕೆಗಳ ಮತ್ತು ಅವನ್ನು ಬೆಂಬಲಿಸಿದ ಉದಾಹರಣೆಗಳ ನೀಡಿದರೆ ಚೆನ್ನ. <<ಗೆಳೆಯ ತಿಳಿಯದೇ ಇದ್ದವರನ್ನು ತಿದ್ದುವ ಕೆಲಸ ಮಾಡುತ್ತಿದ್ದೇನೆ ಎನ್ನುವ ಭ್ರಮೆ ಇದು ಕೆಲವರಿಗೆ ಮಾತ್ರ ಯಾಕೆ ಗೊತ್ತಿಲ್ಲ.>> ನಿಮಗಿದು ಗೊತ್ತಿಲ್ಲ ಏಕೆಂದರೆ, ತಿಳಿಯದೇ ಇದ್ದವರ ಪಟ್ಟಿಯಲಿ ನಿಮ್ಮ ಹೆಸರೂ ಇಹುದಲ್ಲ..? <<ಗೆಳೆಯ ನಿನ್ನನ್ನು ಒಮ್ಮೆ ಊಟಕ್ಕೆ ಆಹ್ವಾನಿಸಿದಾಗ ಉಪ್ಪಿನ ಕಾಯಿಯಲ್ಲಿ ಉಪ್ಪು ಕಡಿಮೆಯಾದರೆ ಅಡುಗಯೇ ಸರಿಯಿಲ್ಲ ಎನ್ನುವ ನಿನ್ನ ತಕರ್ಕ>> ಇಡೀ ಊಟವನ್ನೇ ಸರಿಯಿಲ್ಲ ಎಂದ ತರ್ಕಕ್ಕೆ ಉದಾಹರಣೆ ನೀಡಬೇಕಿತ್ತು. ಉಪ್ಪಿಲ್ಲದ ಉಪ್ಪಿನಕಾಯಿ ಸರಿಯಿಲ್ಲ ಎಂದಿದ್ದೇನೆ ಅದು ಮಾತ್ರ ನನಗೆ ಗೊತ್ತು. <<ಕೋಳಿ ಕೂಗಿನಿಂದಲೇ ಬೆಳಕು ಹರಿಯುತ್ತದೆ ಎನ್ನುವುದು ಗೆಳೆಯ ನಿನ್ನ ಭ್ರಮೆಯಷ್ಟೆ ಪಿಂಡವನ್ನು ಕಾಗೆ ತಿನ್ನುತ್ತದೆ ಎನ್ನುವುದು ವಾಡಿಕೆ ಅದನ್ನೇ ಓಡಿಸುವ ಗೆಳೆಯನ ಪಡೆ ಒಂದು ಹೆಜ್ಜೆ ಮುಂದೆಯೇ ಹೋಗಿದೆ.>> ಅಸಂಬದ್ಧ ಉಪಮೆಗಳು. ದೇವರಿಗೇ ಇಷ್ಟ. <<ಮಾಡಿದ್ದೆಲ್ಲಾ ಸರಿ ಎಂದು ಹೇಳುವ ಜಾಯಮಾನ ನನ್ನದಲ್ಲ ತಪ್ಪನ್ನು ತಪ್ಪು ಎಂದಲೇ ಹೇಳುತ್ತೇನೆ ಗೆಳೆಯ ಇದು ಮನದ ಮಾತು ನೀ ಬದಲಾದರೂ ನಷ್ಟವಿಲ್ಲ ಬದಲಾಗದೇ ಇದ್ದರೂ ನಷ್ಟವಿಲ್ಲ ಗೆಳೆಯ ನಿನಗೊಂದು ವಂದನೆ.>> ಯಾರೂ ಲಾಭನಷ್ಟದ ಮಾತನ್ನು ಆಡುತ್ತಿಲ್ಲ ಇಲ್ಲಿ ಕೆಟ್ಟ ಮನಸ್ಸಿನ ವಂದನೆ ಅಸೀಕೃತ ನಿಮ್ಮಲ್ಲೇ ಇರಲಿ ನಿಮ್ಮ ಗೆಳೆಯನೆನಿಸಿಕೊಳ್ಳಲು ನಾ ಅಯೋಗ್ಯ, ಗೆಳೆಯ ಎನ್ನದಿರಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್ ನಿಮ್ಮ ಅಭಿಮಾನಿಯ ಮತ್ತೊಂದು ಕವನ ಇದೋ ನಿಮಗಾಗಿ ಬ್ಲಾಗ್ ನಲ್ಲಿ ಕಾಯುತ್ತಿದೆ. ನಡೆಯಲಿ ನಿರಂತರ ಪ್ರತಿಕ್ರಿಯೆಗಳು. ಜೈ ಸುರೇಶ್. sampada.net/blog/ksraghavendranavada/08/09/2010/27844
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹೆಸರೇ ಪ್ರಸ್ತಾಪ ಆಗಿಲ್ಲವೆಂದ ಮೇಲೆ ಗೆಳೆಯನ ವಿಷಯ ಎಲ್ಲಿಂದ ಬಂತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಿಮ್ಮ ಹೆಸರೇ ಪ್ರಸ್ತಾಪ ಆಗಿಲ್ಲವೆಂದ ಮೇಲೆ ಗೆಳೆಯನ ವಿಷಯ ಎಲ್ಲಿಂದ ಬಂತು.>> ಇದೇನು? <<ಸುರೇಶ್ ಹೆಗ್ಡೆಯವರು ಒಂದು ಕವನ ಬರೆಯುತ್ತಾರೆ. ಅದಕ್ಕೆ ಮತ್ತಷ್ಟು ಪ್ರತಿಕ್ರಿಯೆಗಳು ಚರ್ಚೆ ಲೇಖನದಲ್ಲಿ ಮುಗಿದಿದ್ದರೂ ಅದಕ್ಕೊಂದು ಕವನ. ಅದಕ್ಕೆ ಎರಡು ಉದಾಹರಣೆಗಳು ಇಲ್ಲಿವೆ ನೋಡಿ. http://sampada.net/b... ಈ ಬಾರಿ ಬೇಸರವಾಗಿ ಬರೆದಿದ್ದು. ಅದನ್ನು ಅಲ್ಲಿಗೆ ಬಿಡುವ ಬದಲು ಮುಂದುವರೆಸುವ ಹವ್ಯಾಸ ಯಾಕೆ ಇದೆಯೋ ಕಾಣೆ.>>
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇ೦ದು ಅಮಾವಾಸ್ಯೆ, ಭೋರ್ಗರೆವ ಕಡಲಿನ ಉಬ್ಬರ ಇಳಿತಗಳಲ್ಲೂ ವ್ಯತ್ಯಾಸಗಳಾಗುತ್ತವ೦ತೆ, ಅದರ೦ತೆ ಮಾನವನ ಮೆದುಳಿನ ಸ೦ವೇದನಾ ತರ೦ಗಗಳ ಮೇಲೂ ಅದರ ಪರಿಣಾಮವಾಗಿ ಅರಿವು ಕು೦ದುತ್ತದೆ೦ದು ಓದಿದ ನೆನಪು! ಸ೦ಪದವೆ೦ಬ ಸಾಗರದಲ್ಲಿಯೂ ವೈಯಕ್ತಿಕ ನಿ೦ದನೆಯ ಅಲೆಗಳ ಭೋರ್ಗರೆತ ಬೆಳಿಗ್ಗೆಯಿ೦ದಲೇ ಶುರುವಾಗಿ ಬಿಟ್ಟಿದೆ. ಇದು ಇನ್ಯಾವ ಮಟ್ಟಕ್ಕೆ ಹೋಗುವುದೋ? ಅದಿನ್ಯಾರಿಗೆ ಕೇಡು ತರುವುದೋ ನಾ ಕಾಣೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಇ೦ದು ಅಮಾವಾಸ್ಯೆ,>> ಮಂಜುನಾಥ್, ಇದು ಅಮವಾಸ್ಯೆಯ ಪ್ರಭಾವ ಎಂದು ನಾನು ಮೊದಲೇ ಅರಿತಿದ್ದರೆ, ಸುಮ್ಮನೇ ಇದ್ದುಬಿಡುತ್ತಿದ್ದೆ.... :) ಇನ್ನು "ಆಂಗ್ಲ ಕ್ಯಾಲೆಂಡರ್" ಅನ್ನಲ್ಲದೇ, ಭಾರತೀಯ ಪಂಚಾಂಗವನ್ನೂ ಅರಿತು ಹಿಂಬಾಲಿಸುತಿರಬೇಕು... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಮುಕ್ತ ಪೋರ್ಟಲ್ ಸಂಪದ ಆದ್ದರಿಂದ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯ ಇದೆ. ತಪ್ಪುಗಳನ್ನು ಹುಡುಕಿ ಸರಿಮಾಡಿಸುವವರ ಮನದಿಂಗಿತವನ್ನು ಅರ್ಥಮಾಡಿಕೊಂಡರೆ ನಿಮಗೆ ಆಶ್ಚರ್ಯ ಆಗದು! ಮೊಸರಿನಲ್ಲಿ ಕಲ್ಲು ಹುಡುಕದಿದ್ದರೆ ಮುರಿಯುವುದು ನಮ್ಮ ಹಲ್ಲು ಅಲ್ಲವೇ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೆಳೆಯ ಸಂತೋಷ್, ಮೊಸರಿನಲ್ಲಿ, ಹಣ್ಣುಗಳಲ್ಲಿ ಸಿಗುವುದು ಕೇಳಿದ್ದೀರಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್ ನಾಡಿಗ್ ರವರೇ, ಕವಿತೆ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಂದಕ ನಿಯರೆ ರಾಕಿಯೆ ಆಂಗನ ಕುಟಿ ಛವಾಯ ಬಿನ ಪಾನಿ ಸಾಬೂನ ಬಿನಾ ನಿರ್ಮಲ ಕರೇ ಸುಭಾಯ ತುಳಸಿದಾಸರ ಈ ದೊಹಾ ಹೇಳುವದೇನೆಂದರೆ ಜಗತ್ತಿನಲ್ಲಿ ನಿಂದಕರು ಇರಬೇಕು... ಸಾಬೂನು,ನೀರು ಇಲ್ಲದೇ ಅವರು ನಮ್ಮ ಮನಸು ಮತ್ತು ಮಸ್ತಿಷ್ಕವನ್ನು ಶುಚಿಗೊಳಿಸುತ್ತಾರೆ......ಅವರು ದೇವರಂತೆ.........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಈ ಕವನ ಬರೆಯಲು ಒಂದು ಕಾರಣವಿದೆ. ಪ್ರತೀ ಬಾರೀ ಭಾಷೆ ಬಗ್ಗೆ ಚರ್ಚೆಯಾದಗಲೆಲ್ಲಾ ಕುಹಕವಾಗಿಯೋ ಅಥವಾ ತಾವು ಉತ್ತಮರೆಂದು ತೋರಿಸಿಕೊಳ್ಳುವ ಚಪಲವೋ ಗೊತ್ತಿಲ್ಲ. ಸುರೇಶ್ ಹೆಗ್ಡೆಯವರು ಒಂದು ಕವನ ಬರೆಯುತ್ತಾರೆ. ಅದಕ್ಕೆ ಮತ್ತಷ್ಟು ಪ್ರತಿಕ್ರಿಯೆಗಳು ಚರ್ಚೆ ಲೇಖನದಲ್ಲಿ ಮುಗಿದಿದ್ದರೂ ಅದಕ್ಕೊಂದು ಕವನ. ಅದಕ್ಕೆ ಎರಡು ಉದಾಹರಣೆಗಳು ಇಲ್ಲಿವೆ ನೋಡಿ. http://sampada.net/b... http://sampada.net/b... ಈ ಬಾರಿ ಬೇಸರವಾಗಿ ಬರೆದಿದ್ದು. ಅದನ್ನು ಅಲ್ಲಿಗೆ ಬಿಡುವ ಬದಲು ಮುಂದುವರೆಸುವ ಹವ್ಯಾಸ ಯಾಕೆ ಇದೆಯೋ ಕಾಣೆ. ಬೇರೆಯವರಿಗೆ ತಪ್ಪೆನಿಸಿದರೆ ಕ್ಷಮಿಸಿ. ಸುರೇಶ್ ನಾಡಿಗ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸುರೇಶ್ ಹೆಗ್ಡೆಯವರು ಒಂದು ಕವನ ಬರೆಯುತ್ತಾರೆ. ಅದಕ್ಕೆ ಮತ್ತಷ್ಟು ಪ್ರತಿಕ್ರಿಯೆಗಳು ಚರ್ಚೆ ಲೇಖನದಲ್ಲಿ ಮುಗಿದಿದ್ದರೂ ಅದಕ್ಕೊಂದು ಕವನ. ಅದಕ್ಕೆ ಎರಡು ಉದಾಹರಣೆಗಳು ಇಲ್ಲಿವೆ ನೋಡಿ. http://sampada.net/b... http://sampada.net/b... ಈ ಬಾರಿ ಬೇಸರವಾಗಿ ಬರೆದಿದ್ದು. ಅದನ್ನು ಅಲ್ಲಿಗೆ ಬಿಡುವ ಬದಲು ಮುಂದುವರೆಸುವ ಹವ್ಯಾಸ ಯಾಕೆ ಇದೆಯೋ ಕಾಣೆ.>> ನಾನು ಬರೆವ ನನ್ನ ಮನದ ಮಾತುಗಳೆಲ್ಲಾ ಕವನದ ರೂಪದಲ್ಲಿಯೇ ಇರುತ್ತವೆ. ನಾನು ಬರೆವ ಪ್ರತಿಕ್ರಿಯೆಗಳಲ್ಲಿ ಹೆಚ್ಚಿನವೂ ದ್ವಿಪದಿಗಳ ರೂಪದಲ್ಲಿಯೇ ಇರುತ್ತವೆ ಹೀಗೊಂದು ಹವ್ಯಾಸ ಯಾಕೆ ಇದೆಯೆಂದು ನೀವು ಕೊರಗಬೇಕಾದ ಅವಶ್ಯಕತೆ ಇಲ್ಲ ಚರ್ಚೆ ಎಲ್ಲಿ ಮುಗಿಯುತ್ತದೆ ಸ್ಪಂದನ ಎಲ್ಲಿ ಮುಗಿಯಬೇಕೆಂದು ಕಾನೂನೇನೂ ಇಲ್ಲಿಲ್ಲ ಬೇರೆಲ್ಲರಿಗೂ ಸಂಪದದಲ್ಲಿ ಆ ಕಾನೂನು ಇಲ್ಲ ಈ ಕಾನೂನು ಇಲ್ಲ ಎನ್ನುವವರು ನೀವು ನಮ್ಮ ಹವ್ಯಾಸದ ಮೇಲೆ ಕಾನೂನನ್ನು ಹೇರುವ ಯತ್ನ ಮಾಡಿದರೆ ಸುಮ್ಮನಿರೆವು ನಾವು ನೀವು ಈ ಕವನ ನನಗಾಗಿಯೇ ಬರೆದುದೆಂದು ಇಲ್ಲಿ ಹೇಳಿಕೊಂಡಾಗಿದೆ ಅಲ್ಲವೇನ್ರೀ ಆದರೆ ಬೇರೆಲ್ಲೋ ಹೋಗಿ ಬೇರೆನೇ ಕಥೆ ಮಾತಾಡುತ್ತೀರಿ ಇದು ನಿಮಗೆ ಸೊಗಸೆನ್ರೀ? ನಿಮ್ಮ ಜಂಬದ ಕೋಳಿಯ ಕಥೆಗೆ ಜನ ಓದಿ ಬಹುಪರಾಕ್ ಹೇಳಬೇಕೆಂದು ಬಯಸುವಿರಿ ಸುಳ್ಳಲ್ಲ ಈ ಮನದ ಮಾತುಗಳಿಗೆ ಮೆಚ್ಚಿಗೆಯ ಪ್ರತಿಕ್ರಿಯೆ ಬಂದರೆ ಸುಮ್ಮನೇ ಉರಿದುಕೊಳ್ಳುವಿರಲ್ಲಾ? ನಿಮ್ಮ ಪರಿಚಯ ಪದೇ ಪದೇ ಮಾಡಿಸಿಕೊಡುವ ಅವಶ್ಯಕತೆ ನಿಜಕ್ಕೂ ಇಲ್ಲಿ ಇಲ್ಲವೇ ಇಲ್ಲ ನಿಮ್ಮ ಮನಸ್ಥಿತಿಯ ಅರಿವು ಇಲ್ಲಿ ಎಲ್ಲರಿಗಿದೆ ಅದಕೆ ಅಮವಾಸ್ಯೆ ಹುಣ್ಣಿಮೆ ಬರಬೇಕಾಗಿಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸುರೇಶ್ ನಿಮಗೆಲ್ಲರೂ ಬಹುಪರಾಕ್ ಹೇಳಿ ನಾನು ಹೇಳದಿದ್ದರೆ ಅದು ನಿಜಕ್ಕೂ ತಪ್ಪೆ. ನಿಮ್ಮ ಕವನಗಳು ಹಾಗೂ ಪ್ರತಿಕ್ರಿಯೆಗಳು. ಮತ್ತೆ ಬರಹಗಳನ್ನು ಸರಿಪಡಿಸುವ ಕ್ರಮ ಎಲ್ಲಾ ಚೆನ್ನಾಗಿದೆ. ಓ.ಕೆನಾ ಸಾರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.