SUmUಕತೆ : ಭಾಗ - ೪

4

SUmUಕತೆ: ಭಾಗ - ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%...

SUmUಕತೆ: ಭಾಗ - ೨ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%...

SUmUಕತೆ: ಭಾಗ - ೧ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%...

 

 

ಅವತ್ತು ನಾವು ಮನೆಗೆ ಬಂದಾಗ ಹನ್ನೆರಡು ವರೆ, ಸರಸು ಅತ್ತೆ ಬಾಗಿಲು ತೆರೆದವರೆ, ಏನ್ರಿ ಇದು ವಾಕಿಂಗ್ ಹೋಗಿದ್ದೆ ಅಂತ ೧೦-೧೫ ನಿಮಿಷಕ್ಕೆ ವಾಪಸ್ಸಾಗೋ ನೀವು ಇಷ್ಟೊತ್ತಾದ್ರು ಮನೆಗ್ ಬರ್ಲ್ಲಿಲ್ಲ, ಎಷ್ಟ್ ಭಯ ಆಗಿತ್ತು, ಅವ್ನು ಜೊತೆಗಿದ್ದ ಅನ್ನೋ ಒಂದೇ ಸಮಾಧಾನ ನಂಗೆ, ಅದ್ಸರಿ ಇಷ್ಟೊತ್ತಂಕ ಎಲ್ಲಿಗೆ ಹೋಗಿದ್ರಿ, ಏನ್ ಮಾಡ್ತಿದ್ರಿ?ಅಯ್ಯೋ ಯಾಕೆ ಹಾಗ್ ವಟ ವಟ ಅಂತ್ಯ, ನಾವ್ ಇಲ್ಲೇ ಆ ಸೇ.. ಸೇ .. ಪಕ್ಕದ ಬೀದಿ ಸೇತುಮಾಧವನ ಮನೆ ಹತ್ರ ಹೋಗಿದ್ವಿ, ಕರೆಂಟ್ ಇಲ್ಲ ಅಂತ ಅವ್ರು ಕಟ್ಟೆಮೇಲೆ ಹರಟೆ ಹೊಡಿತಾ ಕೂತಿದ್ರು, ನಾವು ಹಾಗೆ ಮಾತಾಡ್ಕೊಂಡು ಇದ್ವಿ ಭಾಳ ದಿನ ಆಗಿತ್ತು ಆತ ಸಿಕ್ಕಿ.. ಸರಿ ಸರಿ ಮಲ್ಗಣ ನಡಿ, ನೀನು ಇಲ್ಲೇ ಮಲ್ಕೋಳೋ ಬೆಳಗ್ಗೆ ಎದ್ದು ಹೋದರೆ ಆಯಿತು.ಮನೆ ಬಾಗಿಲಿಗೆ ಬೇಗ ಹಾಕಿ ರೂಮಿನತ್ತ ನಡೆದ ಅಂಕಲ್ ನ ತಡೆದು, ಅತ್ತೆ ಬನ್ನಿ ಇಲ್ಲಿ ಅಂತ ಇಬ್ಬರನ್ನು ಕೂಡಿಸಿದೆ. ಸೇಟು ಮನೆಯಲ್ಲಿ ನಡೆದ್ದದ್ದನ್ನು ಅತ್ತೆಗೆ ತಿಳಿಸಿದೆ. ಆ ಶಾಲೆ ಬಿಡಿಸಿ ಮನೆ ಹತ್ತಿರದ ಸರ್ಕಾರಿ ಶಾಲೆಗೇ ಸೇರಿಸಿದರೆ ಅರ್ಧ ಪರಿಹಾರ ಆಗತ್ತೆ ಅಲ್ವೇನಪ್ಪ ಅಂದರು ಸರಸು ಅತ್ತೆ ನನ್ನ ಕಡೆ ತಿರುಗಿ.

ನೋಡಿ ಅಂಕಲ್, ನಾವು ಕತೆ ಕೇಳಿಕೊಂಡು ಬಂದೆವು, ಆದರೆ ಅತ್ತೆ ಕತೆ ಕೇಳಿ ಪರಿಹಾರನೂ ಸೂಚಿಸಿದರು.

ನಮ್ಮಲ್ಲೂ ಎಷ್ಟು ಜನ ಹೀಗೆ ಮಾಡೋದಿಲ್ಲ ಹೇಳಿ? ಇಂಥ ಸಮಸ್ಯೆಗಳನ್ನು ಅವಳಿಗೆ ಹೇಳಿದರೆ ಏನೂ ಪ್ರಯೋಜನವಿಲ್ಲ ಅಂತ ಎಷ್ಟು ಜನ ಗಂಡಂದಿರು ತಮ್ಮ ಹೆಂಡತಿಯರ ಬಗ್ಗೆ ತಾತ್ಸಾರ ಮನೋಭಾವ ಹೊಂದಿಲ್ಲ ಹೇಳಿ? ಇದರಿಂದ ಹೆಂಡತಿಯರೂ ಹೊರತಲ್ಲ. ಅಯ್ಯೋ ಇಂಥ ವಿಷಯಾನ? ನಮ್ಮನೆಯವರಿಗೆ ಅವರ ಕೆಲಸ ಬ್ಯುಸಿನೆಸ್ಸು ಬಿಟ್ಟರೆ ಬೇರೇನೂ ಅರ್ಥ ಆಗೋಲ್ಲ, ನಂಗ್ಗೊತ್ತಿಲ್ವಾ ಅವರ ಬುದ್ದಿ? ಅಂತ ಎಷ್ಟು ಜನ ಹೆಂಡತಿಯರು ತಮ್ಮ ಗಂಡಂದಿರ ಬಗ್ಗೆ ತಾತ್ಸಾರ ಮನೋಭಾವ ಹೊಂದಿಲ್ಲ ಹೇಳಿ? ಹೆಚ್ಚಿನ ಮನೆಗಳಲ್ಲಿ ಗಂಡ ಹೆಂಡತಿ ಕೂತು ಇಂಥಾ ಸಮಸ್ಯೆಗಳ ಬಗ್ಗೆ ಮಾತಾಡೋದೇ ಇಲ್ಲ. ಕೆಲವರು ಕೂತು ಮಾತಾಡಿದರೂ ಅಯ್ಯೋ ಪಕ್ಕದ ಮನೆಯವರ ಸಮಸ್ಯೆಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಅನ್ನುವವರೇ ಹೆಚ್ಚು. ಇಂದು ಪಕ್ಕದ ಮನೆಯ ಸಮಸ್ಯೆಯಾಗಿರೋದು ನಾಳೆ ನಮ್ಮನೆ ಸಮಸ್ಯೆಯಾಗಬಹುದೆಂಬ ಕನಿಷ್ಠ ಜ್ಞಾನವೂ ಕೆಲವರಿಗಿರೋದಿಲ್ಲ.

ಹೆಂಡತಿ ಹತ್ರ ಮಾತಾಡ್ಬಾರ್ದು ಅಂತೇನೂ ಇಲ್ಲಪ್ಪ... ಅಂತ ಏನೋ ಹೇಳಲು ಬಂದ ಅಂಕಲ್ ಅಷ್ಟಕ್ಕೇ ಸುಮ್ಮನಾದರು. ನಾನು ಹೇಳಿ ಅಂಕಲ್ ಏನ್ ಹೇಳ್ಬೇಕು ಅಂತಿದೀರಾ ಪೂರ್ತಿ ಹೇಳಿ ಅಂತ ಬಲವಂತ ಮಾಡಿದರೂ ಅವರು ಏನಿಲ್ಲಪ್ಪ ಏನಿಲ್ಲಪ್ಪ ಅಷ್ಟೇ ಅಷ್ಟೇ ಅಂದು ಸುಮ್ಮನಾಗಿಬಿಟ್ಟರು.

ಆಗ ನಾನು ಹೇಳಲು ಶುರುಮಾಡಿದೆ. ಇದೆ ನೋಡಿ ಅಂಕಲ್ ಸಮಸ್ಯೆ.ಅವಳ/ಅವರ ಹತ್ತಿರ ಕೆಲವೊಂದು ವಿಷಯಗಳನ್ನು ಮಾತಾಡಲು ಕೆಲವೊಮ್ಮೆ ಸಂಕೋಚ, ಕೆಲವೊಮ್ಮೆ ಸಂಕುಚಿತ ಮನೋಭಾವ ಅಡ್ಡ ಬರುತ್ತದೆ. ನೀವು ನಿಮ್ಮ ಮಕ್ಕಳನ್ನು ಬೆಳೆಸಿದಷ್ಟು ಸ್ವೇಚ್ಚಯಾಗಿ ನಿಮ್ಮನ್ನು ಬೆಳೆಸಿಲ್ಲ ನಿಮ್ಮ ತಂದೆ ತಾಯಿಯರು ... ಅದಕ್ಕೆ ಕಾರಣ ತುಂಬು ಕುಟುಂಬಗಳು ಇರಬಹುದು ಅಥವಾ ದೊಡ್ದವರಿಗೆ ಆ ವಿಷಯದ ಬಗ್ಗೆ ಇದ್ದ ಅಜ್ಞಾನವಿರಬಹುದು. ಹಾಗಂತ ನಾನು ದೊಡ್ಡವರನ್ನು ಬೈಯುತ್ತಿಲ್ಲ. ಅವರು ಆ ಕಾಲಕ್ಕೆ ತಕ್ಕಂತೆ ಜೀವನ ನಡೆಸಿದ್ದಾರೆ ಮತ್ತು ನಿಮ್ಮನ್ನೆಲ್ಲಾ ಬೆಳೆಸಿದ್ದಾರೆ. ಕಾಲ ಬದಲಾಗಿಲ್ಲ ಅಂಕಲ್, ಬದಲಾಗಿರೋದು ಈ ಜನ, ಬದಲಾಗಿರೋ ಈ ಜನಗಳ ಮಧ್ಯೆಯಲ್ಲಿ ಬಾಳಬೇಕಾದರೆ ನಾವು ಸ್ವಲ್ಪ ಬದಲಾಗಬೇಕಾಗುತ್ತದೆ, ಹಾಗಂತ ನಿಮ್ಮ ಆದರ್ಶಗಳನ್ನು ಮಣ್ಣುಪಾಲು ಮಾಡಿ ಎಂದು ನಾನು ಹೇಳುತ್ತಿಲ್ಲ. ಎಂಥದೇ ಸಮಸ್ಯೆ ಬಂದರೂ ಮುಚ್ಚಿಡದೆ, ಮುಕ್ತವಾಗಿ ಚರ್ಚಿಸಿ, ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕಷ್ಟೇ ಅಂಕಲ್.

ನಮ್ಮ ಎಲ್ಲಾ ಸಮಸ್ಯೆಗಳಿಗು ಒಂದೇ ಉತ್ತರ : ವಿಶ್ವಕೋಶ ತೆರೆ , ನಿಘ೦ಟು ತೆರೆ , ಮನಸ್ಸು ತೆರೆ !!

ಈ ವಿಷಯಗಳು ನಿಮಗೆ ತಿಳಿದಿಲ್ಲವೆಂದು ನಾನು ಹೇಳುತ್ತಿಲ್ಲ ಅಂಕಲ್, ಆದರೆ ತಿಳಿದ್ದಿದ್ದನ್ನ ಆಚರಣೆಯಲ್ಲಿಟ್ಟುಕೊಳ್ಳೋದು ಮುಖ್ಯ ಎಂಬುದಷ್ಟೇ ನನ್ನ ವಾದ. ಜಾಸ್ತಿ ಮಾತಾಡಿಬಿಟ್ಟೆ ಅಂಕಲ್, ದಯವಿಟ್ಟು ಕ್ಷಮಿಸಿ, ಅಂತ ನಾನು ಹೇಳಿದರೆ ಅಂಕಲ್ ನನ್ನನ್ನು ಅಭಿನಂದಿಸುತ್ತಾ ಎಷ್ಟ್ ವಿಷ್ಯ ತಿಳ್ಕೊಂಡಿದ್ಯಪ್ಪ, ನಮ್ ಸಂಯುಕ್ತಾ ಪುಣ್ಯ ಮಾಡಿದ್ದಳು ಅಂದು ಮಲಗಲು ತಯಾರಾದರು.

                                                                      *******

ನಾನು ಸೈಡಿಗೆ ತಿರುಗಿಕೊಂಡು ಮಲಗಬೇಕೆಂದುಕೊಳ್ಳುತ್ತಿರುವಾಗಲೇ, ಸಂಯುಕ್ತಾ ನನ್ನ ಹೆಗಲ ಮೇಲೆ ಜೋತು ಬಿದ್ದಳು.ಗಡಿಯಾರ ನೋಡಿಕೊಂಡೆ ಇನ್ನು ನಾವು ಹೊರಟು ಅರ್ಧ ಗಂಟೆಯೂ ಆಗಿರಲ್ಲಿಲ್ಲ.

[ ಏನಪ್ಪಾ ಇವ್ನು.. ನಾಕು ಎಪಿಸೋಡ್ ಬರೆದಾದ ಮೇಲೂ ಇನ್ನು ಅರ್ಧ ಗಂಟೆ ಕಳೆದಿಲ್ಲ ಅಂತಿದಾನೆ ಅಂತ ಆಶ್ಚರ್ಯಪಡದಿರಿ, ಯಾಕೆಂದರೆ ಇಷ್ಟೆಲ್ಲಾ ವಿಷಯ ಮನಸಿನಲ್ಲಿ ಮೂಡಲು ಅರ್ಧ ಗಂಟೆನೂ ಜಾಸ್ತಿನೇ! ಆಲ್ವಾ? ನಿಮಗೂ ಇಂತಹ ಅನುಭವವಾಗಿರತ್ತೆ ಅನ್ಕೋತೀನಿ.. ಏನ್ ಅಂತೀರಾ?? ]

ನಾನು ಸುತ್ತ ಮುತ್ತ ಕಣ್ಣು ಹಾಯಿಸಿದೆ, ಬಹುತೇಕ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು, ಇನ್ನು ಕೆಲವರು ಮ್ಯಾಗಜಿನ್ ಓದುತ್ತಿದ್ದರು. ನಾನು ಮತ್ತೊಮ್ಮೆ ನೀರು ಕುಡಿದು ಕಣ್ಣುಮುಚ್ಚಿದೆ. 

 

ಅವತ್ತೊಂದಿನ ನಾನು ಆಫೀಸಿಂದ ಬರೋದು ರಾತ್ರಿ ಹನ್ನೊಂದಾಗಿತ್ತು. ಮನೆಗೆ ಬಂದವನೇ ಊಟ ಮಾಡುವ ಮೊದಲು ಸಂಯುಕ್ತಾಳಿಗೆ ಕರೆ ಮಾಡಿ ಮಾತಾಡಿದೆ. ಕೆಲಸದ ಒತ್ತಡದಲ್ಲಿ ಬೆಳಗ್ಗಿಂದ ಮಾತಾಡಲು ಆಗಿರಲ್ಲಿಲ್ಲ. ಅವಳಿಗೆ ಶುಭ ರಾತ್ರಿ ಹೇಳಿ ಊಟ ಮಾಡಿ ಹಾಸಿಗೆ ಹಾಸಿ CNBC TV18 ಚಾನೆಲ್ ನೋಡುತ್ತಾ ಕೂತಿದ್ದೆ. ಸುಮಾರು ಹನ್ನೆರಡು ಗಂಟೆ ಆಗಿತ್ತೇನೋ... ಸ್ಮೈಲೆರುವಂತೆ ಸರಾಸರಿ... ಲೈಕಾದಂತೆ ತರಾತುರಿ... ಡ್ರೀಮ್ಸಲ್ಲಿ ಏನೋ ಹೆಚ್ಚುವರಿ.. ಮೆಮೊರೀಸ್ ಎಲ್ಲಾ ವಿಲೇವಾರಿ ಅಂತಾ ಇನ್‌ಸ್ಟ್ರುಮೆಂಟಲ್ ರಿಂಗ್ ಟೋನ್ ಹೊರಹೊಮ್ಮಲು ಶುರುವಾಗಿತ್ತು ನನ್ನ ಮೊಬೈಲ್ ಗೃತ್ಸಮದನಿಂದ.. ನಾನು ಇಷ್ಟು ಹೊತ್ತಲ್ಲಿ ಯಾರಪ್ಪ ಅನ್ನುತ್ತಾ ಎದ್ದು ಹೋಗಿ TV ಪಕ್ಕ ಇಟ್ಟಿದ್ದ ಮೊಬೈಲ್ ತೆಗೆದರೆ, Incoming Call Vimala ಅಂತ ಅವಳ ಮುದ್ದಾದ ಮುಖದಮೇಲೆ ಮೂಡುತ್ತಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.