ತಿರುಗಿ ಬಾರದ ಜೀವನದ ದಾರಿಯ ತಿರುವಿನಲ್ಲೊಮ್ಮೆ ನಿಂತು ಹಿಂತಿರುಗಿ ನೋಡಿದಾಗ ..

0

ಬಟಾಬಯಲಿನ ನಡುವೆ ನಿಂತ ಒಂದು ಹೆಮ್ಮರ.. ಅದು ಪ್ರೀತಿಯೆಂಬ ಹೆಮ್ಮರ..ಜೀವನದಲ್ಲಿ ಒಂಟಿಯಾಗಿ ನಿಂತು ಪ್ರೀತಿಯ ಸೋನೆಗೆ ಹಂಬಲಿಸುತ್ತಿರೋ ಹುಡುಗನೊಬ್ಬನ ಹೃದಯದ ಪ್ರತೀಕ..
ಕಾರ್ಮೋಡ ಕವಿದಂತೆ ಮಳೆ ಸುರಿಯಲು ಪ್ರಾರಂಭ..ಮರ ನೆನೆದಂತೆ..ಹಚ್ಚ ಹಸಿರಿನಿಂದ ತುಂಬಿದಂತೆ..ಹೃದಯದಲ್ಲಿ ಪ್ರೇಮದ ಮೊರೆತ ಮೊಳೆಯುತ್ತಿದೆ..
ಆದರೆ ಆದದ್ದೇನು?..ಕಾಗೆಯ ಕಾವ್..ಕಾವ್ ಕರ್ಕಶವನ್ನೇ ಸಂಗೀತವೆಂದರಿತ ಹೃದಯಕ್ಕೆ ಆ ಮರದ ಪೊಟರೆಯಲ್ಲಿ ಗುಬ್ಬಿಯೊಂದು ಹಾಡಿದ ಚಿಂವ್..ಚಿಂವ್ ಎಂಬ ಪ್ರೇಮ ರಾಗ ಕೇಳಲೇ ಇಲ್ಲ..ಸಮಯ ಸರಿದಂತೆ ಕಾಗೆಯ ಮೊರೆತ ಅಸಹನಿಯವಾಗುತ್ತಿದ್ದಂತೆ ..ಹೃದಯಕ್ಕೆ ಮೆಲ್ಲಗೆ ಕಾಗೆಯ ಮೊರೆತದ ನಡುವೆ ಗುಬ್ಬಿಯ ಚಿಲಿಪಿಲಿ ಸದ್ದು ಹಿಂದನಿಯಲ್ಲಿ ಕೇಳಿಸುತ್ತಿದ್ದುದು ಅನುಭವಕ್ಕೆ ಬಂತು.ಒಮ್ಮೆಲೆ ಖುಷಿಯಾದ ಹೃದಯಕ್ಕೆ ಆಘಾತದ ಬರಸಿಡಿಲು ಬಡಿಯಲು ಸಮಯವೇನು ಬೇಕಾಗಲಿಲ್ಲ..
ಗುಬ್ಬಿಯಾಗಲೇ ಮರವನ್ನು ತೊರೆದಾಗಿತ್ತು..ತಿರುಗಿ ಬಾರದ ಜೀವನದ ದಾರಿಯ ತಿರುವಿನಲ್ಲಿ ಕಳೆದುಹೋಗಿತ್ತು..
ಒಂಟಿ ಮರ ಮತ್ತೆ ನಿಂತಿದೆ..ಈ ಬಾರಿ ಏನು ನಿರೀಕ್ಷೆಯಿಲ್ಲದೆ..ಆ ಗುಬ್ಬಿಯ ಕಲರವ ಮತ್ತೆಂದು ತನ್ನನ್ನು ಆವರಿಸಲಾರದೆನ್ನುವ ಕಟು ಸತ್ಯದ ಅರಿವಿನಲ್ಲಿ..

ದೂರದಲ್ಲೆಲ್ಲೋ ಒಂದು ಹಾಡು -
"ಅನಿಸುತಿದೆ ಯಾಕೋ ಇಂದು ....ನಿನೇನೆ ನನ್ನವಳೆಂದು ..."

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.