ನೀವು ಬರೀತಿರೋ ಬರಹಗಳನ್ನ ಯಾರು ಯಾರು ಓದ್ತಾರೆ ಅಂತ ತಿಳ್ಕೋಬೇಕಾ?

0

ನಿಮ್ ಗೆಳೆಯನಿಂದ ನಿಮಗೆ ಸಂಪದದ ಬಗ್ಗೆ ತಿಳಿದು ಬರತ್ತೆ...
ಖುಷಿಯಿಂದ ಸಂಪದಕ್ಕೆ ಬಂದು ಸೇರ್ಕೋತೀರ...ನೀವು ನಿಮಗೆ ಅನಿಸಿದ್ದನ್ನೆಲ್ಲಾ ಸಂಪದದಲ್ಲಿ ಬರೀತಿರ್ತೀರಾ...
'ಸಂಪದ ಎಂಥಾ ಪ್ಲಾಟ್‍ಫಾರಂ !' ಅಂಥಾ ಮನದಲ್ಲೇ ಕೊಂಡಾಡ್ತೀರ...
ನಿಮ್ ಗೆಳೆಯರಿಗೂ ಹೇಳ್ತೀರಾ..ನಾನು 'ಸಂಪದದಲ್ಲಿ ಬರೀತಿನಿ ಕಣೋ!(ಕಣೇ!)' ಅಂತ

ಮೊದ ಮೊದಲು ತುಂಬಾ ಜೋಶ್...
ಯಾರೂ ಪ್ರತಿಕ್ರಿಯೆ ಹಾಕ್ದೇ ಹೋದ್ರೂ, ಬರಹದ ಮೇಲೆ, ಬರಹ ಹಾಕ್ತಾ ಇರೋದು...
ಸಂಪದಕ್ಕೆ ಬಂದು ಕೆಲವೇ ದಿನದಲ್ಲಿ ಗೊತ್ತಾಗತ್ತೆ, ಜನ ಬರೀ ಪ್ರತಿಕ್ರಿಯೆ ಬಂದ ಬರಹಗಳನ್ನ ಹೆಚ್ಚು ಓದ್ತಾರೆ ಅಂತ...
ಎಷ್ಟೋ ಜನಕ್ಕೆ http://www.sampada.net/view/comments ಲಿಂಕೇ ಹೋಮ್ ಪೇಜ್ ಅಂತ ಗೊತ್ತಾಗತ್ತೆ!

ನಿಮ್ ಬರಹಕ್ಕೆ ಎಷ್ಟು ಪ್ರತಿಕ್ರಿಯೆ ಬಂತೂ? ಅಂತ ಲೆಕ್ಕ ಹಾಕಕ್ಕೆ ಶುರು ಮಾಡ್ತೀರ...
ಎಷ್ಟೊಂದು ಸರತಿ ಒಂದು ಪ್ರತಿಕ್ರಿಯೆ ಕೂಡ ಬರಲ್ಲ...ನಿಮಗೆ ಸಕತ್ ಬೇಜಾರು ಆಗತ್ತೆ...
ಛೇ! ಏನಪ್ಪಾ, ನಾನು ಸೂಪರ್ ಹಿಟ್ ಆಗತ್ತೆ ಅಂದುಕೊಂಡ ಬರಹಕ್ಕೆ ಒಂದು ಕಾಮೆಂಟ್ ಬರಲಿಲ್ಲ ಅಂತ...

ಸರಿ! ಸ್ವಲ್ಪ ದಿನ ಆದ ಮೇಲೆ, ವಿಶೇಷ ಬರಹಕ್ಕೆ ಅಂತ ಹೆಚ್ಚು ಕಾಳಜಿ ವಹಿಸಿ ಬರೆದು, ಯಾವಾಗ್ಲೂ ಬ್ಲಾಗ್‍ನಲ್ಲಿ ಹಾಕೋಂತ ಬರಹ, 'ಲೇಖನ' ವಿಭಾಗಕ್ಕೆ ಹಾಕ್ತೀರ..."ವಿಶೇಷ ಲೇಖನ" ಅಂದ್ರೆ ಕನಿಷ್ಟ ಪಕ್ಷ ಮಾಡರೇಟರ್‍ಗಳು ಈ ಬರಹ ಗ್ಯಾರಂಟಿ ಓದಿದ್ದಾರೆ ಅಂತ :p
ಆದರೂ ಸಂಪದದ ಮಾಡರೇಟರ್‍ ಅದನ್ನ ನೋಡೋದೇ ಇಲ್ಲ...ನೋಡಿದ್ರೂ ಅದನ್ನ 'ವಿಶೇಷ ಬರಹ' ಅಂತ ಮಾಡಿರಲ್ಲ...
ನಿಮ್ ಲಕ್ ತುಂಬಾನೆ ಸರಿ ಇಲ್ಲ ಅಂದ್ರೆ, ನೀವೇ 'ವಿಶೇಷ ಲೇಖನ" ಅಂತ ಬಿರುದು ಕೊಟ್ಟ "ವಿಶೇಷ ಲೇಖನ" ಹಾಕಿದ ದಿನ, ಮಾಡರೇಟರ್‍ಗಳೆಲ್ಲ ತಮ್ಮ ಕಾರ್ಯದಲ್ಲಿ ತುಂಬಾ ಬಿಜಿ ಆಗಿ, ವಿಶೇಷ ಲೇಖನ ಲಿಸ್ಟ್ ಅಪ್ಡೇಟ್ ಮಾಡೋದೆ ಇಲ್ಲ...
ಸಕ್ಕತ್ ನಿರಾಶೆ ಆಗತ್ತೆ ಅಲ್ವಾ?

ಸರಿ, ನೀವು ಬರೆದಿದ್ದನ್ನ ಯಾರು ಯಾರು ಓದ್ತಾರೆ ಅಂತ ಹೆಂಗಪ್ಪಾ ತಿಳ್ಕೊಳ್ಳೋದು?????
ಹಲವಾರು ಕಿಲಾಡಿ ಜನರು ಸೈಲೆಂಟ್ ಆಗಿ, ಕಾಮೆಂಟ್ ಹಾಕ್ದೀರ ಓದ್ತಾ ಇರ್ತಾರೆ...
ಇಂಥಾ ಕಿಲಾಡಿಗಳ ಹೆಸರನ್ನೆಲ್ಲ ಹೇಗೆ ಹೊರತೆಗೆಯೋದು???

ಕೊನೆಗೆ ಎಸೀರಿ 'ರಾಮ ಬಾಣ'! ಇದು ಸರಿಯಾಗಿ ನಾಟತ್ತೆ!
ಏನಪ್ಪಾ ಈ 'ರಾಮ ಬಾಣ' ಅಂದ್ರಾ??? ಒಂದು ಬ್ಲಾಗ್ ಬರೀರಿ, 'ಸಂಪದಕ್ಕೆ ವಿದಾಯ/ಸಂಪದಕ್ಕೆ ಬೈ ಬೈ, ಟಾ ಟಾ'!
ಆಗ ನೋಡಿ ನಿಮ್ ಬೀಸಣಿಗೆಗಳಿಂದ ಹೇಗೆ ಗಾಳಿ ಬರತ್ತೆ ಅಂತ :) 'ಸೈಲೆಂಟ್ ಕಿಲಾಡಿಗಳೂ' ಆಗ ಕಾಮೆಂಟ್ ಹಾಕ್ಬಿಡ್ತಾರೆ!
ಯಾವ ಬರಹಕ್ಕೆ ಕಾಮೆಂಟ್ ಬರದೆ ಹೋದ್ರೂ, 'ವಿದಾಯ/ಟಾ ಟಾ' ಬರಹಕ್ಕೆ ಪ್ರತಿಕ್ರಿಯೆ ಬರೋದು ಗ್ಯಾರಂಟಿ :)
'ಅಬ್ಬಾ! ಇದಪ್ಪ ಅಲ್ಟಿಮೇಟ್ ಟ್ರಿಕ್' ಅಂತ ಮನಸಲ್ಲೇ ಅಂದುಕೋತಾ, ಒಂದೊಂದೇ ಕಾಮೆಂಟ್ ಓದಿ ಉಬ್ಬಿ ಬಿಡಿ... !
(ಈ ಬಾಣ ಎಸೆಯೋರು, ಓದ್ಕೊಂಡ್ ಓದ್ಕೊಂಡ್ ಹಾರಾಡ್ತಾ ಅಟ್ಟದ ಮೇಲೆ/ಮಹಡಿ ಮೇಲೆ ಹೋಗ್ತಾರೆ ಅಂತ ಕಾಣತ್ತೆ...)

ಈಗ ನಿಮಗೆ ಗೊತ್ತಾಯ್ತಲ್ಲ, ಯಾರು ಯಾರು ನಿಮ್ ಬರಹ ಓದ್ತಾರೆ ಅಂತ! ಹೆಂಗಿದೆ ಈ ಐಡೀರಿಯ??? :)

ಹಾ, ಇನ್ನೊಂದು ವಿಷ್ಯ ಹೇಳೋದ್ ಮರೆತಿದ್ದೆ...ನಿಮ್ 'ಟಾಟಾ' ಬರಹಕ್ಕೆ ತಕ್ಷಣ ಉತ್ತರ ಹಾಕ್ಬೇಡಿ...ಒಂದೈದಾರ್ ದಿನನೋ, ವಾರನೋ ಬಿಟ್ಕೊಂಡ್ ಹಾಕಿ...ಇಲ್ಲ ಅಂದ್ರೆ ನಿಮ್ ಬಂಡ್ವಾಳ ಹೊರಕ್ಕೆ ಬೀಳತ್ತೆ :p
ಮತ್ತೆ ಸಂಪದದಲ್ಲಿ ನಿಮಗನಿಸಿದ್ದನ್ನ ಗೀಚಕ್ಕೆ ಶುರು ಮಾಡಿ!

--ಶ್ರೀ
(ಈಗ ಈ ಬರಹಕ್ಕೆ ಯಾರು ಯಾರು ಕಾಮೆಂಟ್ ಹಾಕ್ತಾರೆ ಅಂತ ನಾನು ಕಾಯ್ತಾ ಇದೀನಿ ;) :P )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನಂತೂ ನಿಮ್ಮ ಲೇಖನಕ್ಕೆ ಕಮೆಂಟ್ ಹಾಕಲ್ಲಾ.. :-D :-D :-D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಬರಹಗಳನ್ನ ಎಷ್ಟು ಜನ ಓದ್ತಾರೆ ಅನ್ನೋದನ್ನಾ ಕಂಡುಹಿದಿಯೋ ಉಪಾಯ ಚನ್ನಾಗಿದೆ.... :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಡ್ರೀ... ಇದ್ಕೇನು ಪ್ರತಿಕ್ರಿಯೆ ಬರೆಯೋದು.......!?
ಯಾರೂ ಬರೆಯೋಲ್ಲ ನೋಡಿ ಬೇಕಿದ್ರೆ...
ನಾನೂ ಬರೆಯೋಲ್ಲಾ...
:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲೂ ಲಿಂಗ ಬೇದ ಇದೆ... ಕೆಲವರು ಬಾಯಿ ಅಂದ್ರೆ ಮಾತ್ರ ಬಾಯಿ ಬಿಡೊ ಜನ ಇದ್ದಾರೆ... :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಪ್ಪಾ...ಬೇಡಪ್ಪ ಈ ಲೇಖ್ನದಲ್ ಕಿತ್ಲಾಟ...ಈಗ್ಲೇ ಸರಿ ಮಾಡ್ತೀನಿ ತಾಳಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದು ಸರೀರಿ ಶ್ರೀನಿವಾಸ್. ನಾನು ಹಾಗೆ ಕಂಡು ಹಿಡಿದದ್ದು ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ನಿಮ್ ಗುಟ್ಟು ರಟ್ಟು ಮಾಡಿದೆ ಅಂತ ಬೈಕೋತಾ ಇದೀರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನನ್ನೆ ಟಾರ್ಗೆಟ್ ಮಾಡಿದ್ದು ಅಂಥಾ ಗೊತ್ತಾಯಿತು. ಸುಮ್ನೆ ಒಪ್ಪಿಕೊಂಡುಬಿಟ್ಟರೆ ರಗಳೆನೇ ಇಲ್ಲಾ ಅಲ್ಲವೇ? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರಾ ಅವರೇ, ನೀವೊಬ್ರೇ ಆ ರೀತಿ ಬರಹ ಪೋಸ್ಟ್ ಮಾಡಿರಲಿಲ್ಲ...ತುಂಬಾ ಜನ ಇದಾರೆ :)
ತಮಾಷೆ ಅಂತ ನಕ್ಕು ಬಿಡಿ...ನೋವಾಗಿದ್ರೆ ಕ್ಷಮಿಸಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ತರಹ ತಲೆ ಕೆಡಿಸಿಕೊಳ್ಳುವ ಜಾತಿಯಲ್ಲ ಬಿಡ್ರಿ ನಾನು. ನನಗೇನೂ ನೋವಾಗಿಲ್ಲ. ಅವತ್ತು ಬೇಜಾರಾಗಿತ್ತು. ಆ ರೀತಿ ಬರೆದೆ. ಇವತ್ತು ಖುಶಿಯಲ್ಲಿದ್ದೀನಿ. ಈ ತರಹ ಬರೀತೀನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವತ್ತು ಹಾಗಿತ್ತು... ಹಾಗ್ ಬರೆದೆ... ಇವತ್ತು ಹೀಗಿದೀನಿ.. ಹೀಗ್ ಬರಿತೀನಿ... ಸೋ ಮುಂದೆ... ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೊತ್ತಿಲ್ಲ ರೀ ಮಂಸೋರೆ :-) ಯಾರನ್ನಾದರೂ ಭವಿಷ್ಯ ಕೇಳಬೇಕು. ;-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಡಿ ಮಠದ ಸ್ವಾಮಿಜಿ ಭವಿಶ್ಯ ಕರಾರುವಕ್ಕಾಗಿ ಹೇಳ್ತಾರಂತೆ .. ;) ಪ್ರಯತ್ನಿಸಿ ನೋಡಿ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

sari

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವಷ್ಟೇ ಅಲ್ಲ, ಇಂಚರ, ಹಾಗೆ ತಿಳಿದುಕೊಂಡವರ ಪಟ್ಟಿ ದೊಡ್ಡದಿದೆ.
ನೀವು ಹಾಗೆ ಮಾಡಿದುದರಿಂದ ನನಗೆ ಆ ದಿನದಂದು ಪದ್ಯದಿಂದ ಗದ್ಯಕ್ಕೆ ಹೋಗುವ ಅವಕಾಶ ಸಿಕ್ತು.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿಂದ ಅಷ್ಟಾದ್ರೂ ಉಪಯೋಗವಾಯಿತಲ್ಲಾ ಬಿಡಿ. ಅಂದ ಹಾಗೆ ನಿಮ್ಮ ಬ್ಲಾಗ್ ಓದಿದೆ. ಆದ್ರೆ ನನ್ನಭಿಪ್ರಾಯ ಅದಲ್ಲವಾಗಿತ್ತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಈ ಟ್ರಿಕ್ ಪ್ರಯತ್ನಿಸೋದಿಲ್ಲ ; ಯಾರೂ ಪ್ರತಿಕ್ರಿಯೆ ತೋರಿಸದೆ ಇದ್ರೆ ? ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ ಆಗೋದಿಲ್ವೆ ? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-D :-D :-D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೇ ಕೆಲಸಕ್ಕಾದ್ರೂ ಪ್ರಯತ್ನ ಮುಖ್ಯ. ಫಲಾಫಲಗಳ ಬಗ್ಗೆ ಯೋಚಿಸಬಾರದು. ಏನಂತೀರಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ ಕಾಮೆಂಟ್ ಹಾಕ್ಬೇಕು ಅಂತಾನೆ ಗೊತ್ತಾಕ್ತಾ ಇಲ್ಲ........ಸೀನಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆ ಬಂದ ಬರಹಗಳನ್ನ ಮಾತ್ರ ಅನೇಕರು ಓದುತ್ತಾರಾ ? ಹಾಗಾದ್ರೆ ನಮ್ಮ ಬರಹಕ್ಕೆ ನಾವೇ ಕಮೆಂಟು ಹಾಕಿದರಾಯ್ತು !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾ, ಅದು ಹಳೇ ಟ್ರಿಕ್ ಬಿಡಿ...ಈ ಟ್ರಿಕ್‍ನಲ್ಲಿ ನಿಮಗೆ ಯಾರು ಯಾರು ಸೈಲೆಂಟ್ ಆಗಿ ಓದ್ತಿದ್ದಾರೆ ಅಂತ ಗೊತ್ತಾಗಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.