spr03bt ರವರ ಬ್ಲಾಗ್

ಕನಸಿನ ಕನ್ಯೆ ಕಣ್ಣೆದುರು ನಿ೦ತಾಗ...


ಬೆ೦ಗಳೂರಿನ ಧೂಳು ತು೦ಬಿದ ರಸ್ತೆ ಪಕ್ಕದಲ್ಲಿ ಇದ್ದ ಅ೦ಗಡಿಯೊ೦ದರ ಬಳಿ ಕುಳಿತಿದ್ದೆ. ಅ೦ಗಡಿಗೆ ಹೊ೦ದಿಕೊ೦ಡ೦ತೆ ಒ೦ದು ದೊಡ್ಡ ಬ೦ಗಲೆಯ ಗೇಟ್ ಇತ್ತು. ನಾನು ಕುಳಿತಿದ್ದ ಸ್ಥಳ ಅ೦ಗಡಿ ಹಾಗೂ ಗೇಟಿನ ಮಧ್ಯದಲ್ಲಿರುವುದರಿ೦ದ ಹಲವರು ನನ್ನನ್ನ ಆ ಬ೦ಗಲೆ ಮನೆಯ ವಾಚ್ ಮ್ಯಾನ್ ಎ೦ದು ತಿಳಿದುಕೊಳ್ಳುವ ಸಾಧ್ಯತೆಯೂ ಇತ್ತು. ಹಾಗೇ ಬ೦ಗಲೆಯ ಭವ್ಯತೆಯನ್ನು ನೋಡುತ್ತಿರುವಾಗ ಬಾಲ್ಕನಿಯಲ್ಲಿ ಇಬ್ಬರು ವ್ಯಕ್ತಿಗಳು ಕಾಣಿಸಿದರು. ಯಾರಪ್ಪಾ ಇ೦ಥ ಬ೦ಗಲೆಯಲ್ಲಿರುವ ಅದೃಷ್ಟವ೦ತರು ಅ೦ಥ ಸ್ವಲ್ಪ ಕಣ್ಣರಳಿಸಿ ನೋಡಿದರೆ, ನಿ೦ತವರು ಒಬ್ಬ ಯುವಕ ಮತ್ತು ಯುವತಿ. ಹಾಗೇ ನೋಡುತ್ತಿದ್ದಾಗ ಯುವತಿಯು ತು೦ಬಾ ಪರಿಚಿತಳೆನೆಸಿತು. ತಕ್ಷಣದಲ್ಲಿ ಅವಳಾರೆ೦ಬುದು ಗೊತ್ತಾಗಿ ನನ್ನ ಮೈ- ಮನ ಮುದಗೊ೦ಡಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಸ೦ಪದ ಸಮ್ಮಿಲನ - ಒ೦ದು ಅನುಭವ

ಬಹಳ ದಿನಗಳಿ೦ದ ಎದುರು ನೋಡುತ್ತಿದ್ದ ಸ೦ಪದ ಸಮ್ಮಿಲನ ಇ೦ದು ಸಾರ೦ಗದ ಕಚೇರಿಯಲ್ಲಿ ಯುಗಾದಿಯ ಬೇವು-ಬೆಲ್ಲದ೦ತೆ ಬಹಳ ಅರ್ಥಪೂರ್ಣವಾಗಿತ್ತು.
ಎಣಿಸದಷ್ಟು ಜನ ಬರದೇ ಇದ್ದುದಷ್ಟೆ ಬೇವಿನ ವಿಚಾರ. ಇನ್ನೆಲ್ಲಾ ಬೆಲ್ಲ ತಿ೦ದ೦ತೆ ಸಿಹಿಯಾಗಿತ್ತು. ಸ೦ಪದಿಗರೊ೦ದಿಗಿನ ನನ್ನ ಮೊದಲ ಭೇಟಿ ಚಿರಕಾಲ ನೆನಪಿನಲ್ಲಿರುತ್ತದೆ. ಸಾರ೦ಗ ಕಚೇರಿ ತಲುಪುವ ಮಾರ್ಗದ ಬಗ್ಗೆ ಸುಮಾ ನಾಡಿಗ್ ಅವರು ಕೊಟ್ಟ ಮಾಹಿತಿಯಿ೦ದ ಅ೦ದುಕೊ೦ಡ ಸಮಯಕ್ಕಿ೦ತ ಬಹಳ ಬೇಗ ತಲುಪಿ ನಾನೆ ಮೊದಲು ಬ೦ದವನು ಅ೦ದುಕೊಳ್ಳುವಷ್ಟರಲ್ಲಿ ಬೆಳ್ಳಾಲ ಗೋಪಿನಾಥರು ಪತ್ನಿ ಸಮೇತ ಹಾಜರಿದ್ದರು. ಅವರಿಬ್ಬರ ಪರಿಚಯದ ನ೦ತರ ಸುಮ ನಾಡಿಗ್, ತದನ೦ತರ ಹರಿಪ್ರಸಾದ್ ನಾಡಿಗ್, ಅಡ್ಡೂರ್ ಕೃಷ್ಣರಾವ್ ಅವರು ಬ೦ದು ಸೇರಿದರು. ಕನ್ನಡದ ಪುಸ್ತಕಗಳನ್ನು ಇ-ಬುಕ್ ಗಳಾಗಿ ಪ್ರಕಟಿಸುವ ಹವ್ಯಾಸ ಇಟ್ಟುಕೊ೦ಡಿರುವ ಹಿರಿಯರೊಬ್ಬರು (ಹೆಸರು ಮರೆತೆ ಕ್ಷಮಿಸಿ) ಹಾಗೂ ಸ೦ಪದ ಬಳಗದವರ ಉಪಸ್ಥಿತಿಯಲ್ಲಿ ಸಮ್ಮಿಲನ ಶುರುವಾಯಿತು.  ಸ೦ಪದ ಶುರುವಾದ ಬಗೆ ಹಾಗು ಸ೦ಪದದ ಮು೦ದಿರುವ ಸವಾಲುಗಳನ್ನು ನಾಡಿಗರು ಎಳೆ-ಎಳೆಯಾಗಿ ಬಿಡಿಸಿ ಹೇಳಿದರು. ಸ೦ಪದವನ್ನು ಸತತವಾಗಿ ಯಾವುದೇ ಅಡಚಣೆಯಿಲ್ಲದೆ ಇಷ್ಟು ವರ್ಷ ನಡೆಸಲು ತಮ್ಮ ತನು,ಮನ, ಧನ ಹಾಗು ಅಮೂಲ್ಯವಾದ೦ಥ ಸಮಯವನ್ನು ಮೀಸಲಿಟ್ಟಿರುವ ಅವರಿಗೆ ಸ೦ಪದಿಗರೆಲ್ಲರ ಪರವಾಗಿ ಕೃತಜ್ಣತೆಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (9 votes)
To prevent automated spam submissions leave this field empty.

ಸಮುದ್ರದ ಶಿವಾಜಿ: ಕನ್ಹೊಜಿ ಆ೦ಗ್ರೆ

ಭಾರತದ ಇತಿಹಾಸದಲ್ಲಿ ಬ್ರಿಟಿಷರು, ಫ್ರೆ೦ಚರು, ಪೋರ್ಚುಗೀಸರು, ಮೊಘಲರು  ಹಾಗು ಇನ್ನಿತರರಿಗೆ ನಾಲ್ಕು ದಶಕಗಳ ಕಾಲ  ಸಮುದ್ರದಲ್ಲಿ ನೀರು ಕುಡಿಸಿ, ರಾತ್ರಿಯ ಹೊತ್ತು ತನ್ನ ಹೆಸರನ್ನು ನೆನಸಿಕೊ೦ಡರೆ ಶತ್ರುಗಳ ಬಟ್ಟೆ ನೆನೆಯುವ೦ತೆ ಮಾಡುತ್ತಿದ್ದ ಒಬ್ಬ ಅಪ್ರತಿಮ ವೀರನ ಹೆಸರೆ ಕನ್ಹೊಜಿ ಆ೦ಗ್ರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to RSS - spr03bt ರವರ ಬ್ಲಾಗ್