ಭೂಪ್ ಕಛೇರಿ

4.5

ಒಮ್ಮೆ ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ವಿದ್ವಾಂಸರೊಬ್ಬರ ಕಛೇರಿಯೊಂದನ್ನು ಏರ್ಪಡಿಸುವ ಉದ್ದೇಶದಿಂದ ಒಂದು ಸಂಗೀತ ಸಂಸ್ಥೆಯ ಕಾರ್ಯದರ್ಶಿಗಳು ವಿದ್ವಾಂಸರ ಬಳಿ ಹೋದರು. ತಮ್ಮ ಸಂಸ್ಥೆಯ ಅಡಿಯಲ್ಲಿ ತಮ್ಮ ಊರಿನಲ್ಲಿ ಹಾಡಬೇಕೆಂದು ಅವರನ್ನು ವಿನಂತಿಸಿಕೊಂಡರು. ಅವರು ಅದಕ್ಕೆ ಒಪ್ಪಿ ತಾವು ಬರಬೇಕಾದ ದಿನಾಂಕ ಹಾಗೂ ಸಮಯದ ಬಗ್ಗೆ ವಿಚಾರಿಸಿ ಗುರುತು ಹಾಕಿಕೊಂಡರು. ನಂತರ ಮುಖ್ಯ ವಿಚಾರ, ಕಛೇರಿಗೆ ವಿದ್ವಾಂಸರಿಗೆ ಕೊಡಬೇಕಾದ ಸಂಭಾವನೆ ಬಗ್ಗೆ ಮಾತು ತಿರುಗಿತು. ಆಗ ಕಾರ್ಯದರ್ಶಿಗಳು ಕೈ ಕೈ ಹಿಸುಕಿಕೊಂಡರು. ಉಗುಳು ನುಂಗಿದರು. ಬಾಯಲ್ಲಿ ಮಾತೇ ಹೊರಡುತ್ತಿಲ್ಲ. ಇದನ್ನು ಗಮನಿಸಿದ ಗವಾಯಿಗಳು, "ಏನ್ರಿ ಅದು ನಿಮ್ಮವಸ್ಥೆ?" ಎಂದರು.
ಅದಕ್ಕೆ ಅವರು, "ಸರ್, ನಮ್ಮದು ಬಡ ಸಂಸ್ಥೆ. ಇದೀಗ ಅಸ್ತಿತ್ವಕ್ಕೆ ಬಂದಿದೆ. ತಮ್ಮಂಥ ಗಣ್ಯ ವಿದ್ವಾಂಸರ ಉದಾರ ಪ್ರೋತ್ಸಾಹ ಬೆಂಬಲಗಳಿಂದ ಬೆಳೆದು ಬಾಳಬೇಕಾಗಿದೆ." ಎಂದು ಮುಂತಾಗಿ ಸುತ್ತಿ ಬಳಸಿ ಮಾತಿಗಾರಂಭಿಸಿದರು.
ತಕ್ಷಣ ಗವಾಯಿಗಳು, "ವಿಷಯಕ್ಕೆ ನೇರವಾಗಿ ಬನ್ನಿ. ನನ್ನಿಂದ ಭೂಪ್ ಕಛೇರಿ ಆಗಬೇಕು ಅಂತತಾನೇ ನಿಮ್ಮ ಅಭಿಪ್ರಾಯ?" ಎಂದರು.
"ಅಂದರೆ?"
"ಭೂಪ್ ರಾಗದ ಹೆಸರು ಕೇಳಿಲ್ವೇನ್ರಿ ನೀವು? ನಿಮ್ಮ ಕರ್ನಾಟಕ ಸಂಗೀತದ ಮೋಹನ ರಾಗಕ್ಕೆ ಸಮನಾದ ರಾಗ ಇದು. ಆ ರಾಗಕ್ಕೆ ಮಧ್ಯಮ ಮತ್ತು ನಿಷಾದ ಸ್ವರಗಳು, ಎಂದರೆ ಮ-ನಿ- money ವರ್ಜ್ಯ ಅಲ್ಲವೇ? ಆಯ್ತು ಬರ್ತೀನಿ ಬಿಡಿ." ಎಂದರು ಗವಾಯಿಗಳು.
ಕಾರ್ಯದರ್ಶಿಗಳು ಸಂಕೋಚವಾದರೂ ಸಂತೋಷದಿಂದ ಗವಾಯಿಗಳಿಗೆ ಧನ್ಯವಾದ ಅರ್ಪಿಸಿ ಮರಳಿದರು.
ಇದನ್ನು ಎಸ್.ಕೃಷ್ಣಮೂರ್ತಿಯವರ ‘ಸಂಗೀತ ಸಮಯ’ದಿಂದ ಆಯ್ದುಕೊಳ್ಳಲಾಗಿದೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ದೊಡ್ಡ ವ್ಯಕ್ತಿ ದೊಡ್ಡ ಗುಣ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್, ಅವರ ಹಾಸ್ಯ ಪ್ರಜ್ಞೆ ಮತ್ತು ಗುಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ಫೂರ್ತಿ ನೀಡುವ ವ್ಯಕ್ತಿತ್ವ!
ಉತ್ತಮ ವಿಚಾರವನ್ನು ಹಂಚಿಕೊಂಡದ್ದಕ್ಕೆ ನನ್ನಿ!

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.