DLI ಎಂಬ ಪುಸ್ತಕಾರಣ್ಯದಲ್ಲಿ ಹುಡುಕಾಟ...

0

ನೀವು "ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ(DLI)"ಗೆ ನಿಯಮಿತವಾಗಿ ಭೇಟಿನೀಡಿ ಪುಸ್ತಕಗಳನ್ನು ಹುಡುಕಿ, ತಿರುವುಹಾಕುವ ಆಸಕ್ತರಲ್ಲೊಬ್ಬರಾದಲ್ಲಿ, ಆ ಹುಡುಕಾಟದ ಕಷ್ಟ-ಸುಖ ನಿಮಗೀಗಾಗಲೇ ಮನದಟ್ಟಾಗಿರುತ್ತದೆ. "ಎ, ಬಿ, ಸಿ..." ಎಂದು ನೇರವಾಗಿ ಅಕ್ಷರಗಳ ರೀತ್ಯಾ ಹುಡುಕಾಡುವುದಾದಲ್ಲಿ ಅಂತಹ ಸಮಸ್ಯೆಯೇನಿಲ್ಲ. ಆದರೆ ಹಾಗೆ ಹುಡುಕಲು ಪುಸ್ತಕದ ಹೆಸರು ಮೊದಲೇ ತಿಳಿದಿರಬೇಕಾಗುತ್ತದೆ. ಅದರ ಬದಲು ಬರೆದವರ (ಕರ್ತೃ) ಹೆಸರನ್ನಾಧರಿಸಿ ಬೇಗ ಹುಡುಕೋಣ, ಆ ಲೇಖಕರ ಯಾವ್ಯಾವ ಪುಸ್ತಕಗಳು ದೊರಕುತ್ತವೆ ನೋಡೋಣವೆಂದು ಹೊರಟಿರೋ, ಆಗ ಶುರು ತಮಾಷೆ! ಇನ್ನೂ ಇದರ ಅನುಭವವಿಲ್ಲದೆ ಇರುವವರು ಪ್ರಯತ್ನಿಸಿ ನೋಡಿ; ಬಹಳ ತಮಾಷೆಯಾಗಿರುತ್ತದೆ. ಹುಡುಕಾಟ ಫಲಿಸುತ್ತದೆ, ಇಲ್ಲವೆಂದಲ್ಲ. ಆದರೆ ಅದಕ್ಕೆ ತಗುಲುವ ಸಮಯ ತುಸು ಹೆಚ್ಚಾಯಿತೇನೋ ಎಂದು ನನ್ನ ಅಭಿಪ್ರಾಯ. ಒಟ್ಟಿನಲ್ಲಿ ಪುಸ್ತಕಗಳನ್ನು ಹುಡುಕಾಡುವುದರಲ್ಲೂ ಇಂತಹ ಪರದಾಟವಿದೆಯೆಂದು ನನಗೆ ಗೊತ್ತಾಗಿದ್ದೇ DLIನಲ್ಲಿ ಲೇಖಕರ ಹೆಸರನ್ನಾಧರಿಸಿ ಪುಸ್ತಕಗಳನ್ನು ಹುಡುಕಲು ಪ್ರಾರಂಭಿಸಿದಾಗಲಿನಿಂದ.

"ಹೇಳಿದ್ದನ್ನೇ ಹೇಳುವ ಕಿಸುಬಾಯಿದಾಸ"ನ ತರಹ ಪ್ರತಿಬಾರಿಯೂ ಒಂದೇ ತೆರನಾಗಿ ಪರದಾಡುವ ಬದಲಿಗೆ, ಸ್ವಲ್ಪ ಸರಾಗವಾಗಲೆಂದು, ಕೆಲವು ಲೇಖಕರ ಮತ್ತು ಅವರ ಹೆಸರಿಗೆ ಸಂಬಂಧಿಸಿದ "ಹುಡುಕಾಟ ಸೂತ್ರ"ಗಳ ಒಂದು ಪಟ್ಟಿ ತಯಾರಿಸಿಕೊಂಡಿದ್ದೀನಿ. ಯಾವಾಗ ಹೊಸತೊಂದು ಅಂಶ ಕಾಣುತ್ತದೆಯೋ ಆಗೆಲ್ಲ ಇದನ್ನು ಪರಿಷ್ಕರಿಸುತ್ತಾ ಬಂದಿರುವೆ. ಒಬ್ಬನೇ ಇಟ್ಟುಕೊಳ್ಳುವ ಬದಲು ಆಸಕ್ತರಿಗೆಲ್ಲರಿಗೂ ಉಪಯೋಗಕ್ಕೆ ಬಂದೀತೆಂದು ಇಲ್ಲಿ ಹಾಕುತ್ತಿದ್ದೀನಿ. ಇದರಿಂದ ಯಾರಿಗಾದರೂ DLIಯಲ್ಲಿ ಹುಡುಕಾಡುವ ಶ್ರಮ ಕೊಂಚ ಹಗುರವಾದಂತೆ ಅನಿಸಿದಲ್ಲಿ ಅಷ್ಟೇ ಸಾಕು.

ಅಂದಹಾಗೆ ನಿಮಗೂ ಮತ್ತಷ್ಟು "ಹುಡುಕಾಟದ ಹೆಸರುಗಳು" ಗೊತ್ತಿದ್ದಲ್ಲಿ, ಅಥವಾ ನಿಮ್ಮಲ್ಲಿ ಯಾರಾದರೂ ಇಂತಹ ಒಂದು ಪಟ್ಟಿ ಸಿದ್ಧಪಡಿಸಿಕೊಂಡಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳುತ್ತೀರಾ? ನನ್ನ ಪಟ್ಟಿ ಈ ಕೆಳಕಂಡಂತಿದೆ (DLIನ ಹುಡುಕಾಟದ ಜಾಗದಲ್ಲಿ Author ಎನ್ನುವಲ್ಲಿ ಇದನ್ನು ಹಾಕಿ, ಭಾಷೆಗಳ ಪಟ್ಟಿಯಲ್ಲಿ ಕನ್ನಡವನ್ನು ಆಯ್ಕೆ ಮಾಡಿ, ಹುಡುಕಿ):

ಅನಕೃ: Krxshhnd-araayaru A Na / Krx A Na

ತರಾಸು: ta raa su / Su Ta Raa

ಶಿವರಾಮ ಕಾರಂತ: shivaraama kaaran'ta / Kaaran'ta Shivaraama

ದೇವುಡು:  Deivud'u / Baredudu Deivud'u / deivud'u

ಎನ್. ನರಸಿಂಹಯ್ಯ:  Narasin'hayya

ಆಲೂರು ವೆಂಕಟರಾಯರು: Aluura Ven'kat'eisha Bhiimaraav / Ven'kat'araaya Aluura / Ven'kat'araayaru Aaluura / aaluura ven'kat'araayaru

ಎಚ್ಚೆಸ್ಕೆ: echcheske

ನಿಸಾರ್ ಅಹಮದ್:  ke es nisaara ahamad

ಕುವೆಂಪು: Kuven'pu

ಪುತಿನ:  Narasin'haachaara Pu Ti

ಕೆ.ಎಸ್.ನರಸಿಂಹಸ್ವಾಮಿ:  Narasin'hasvaami Ke Es / ke es narasin'hasvaami

ಗೋಪಾಲಕೃಷ್ಣ ಅಡಿಗ: Ad'iga Mo Goopaalakrxshhnd-a / Ad'iga Goopaalakrxshhnd-a / Ad'iga En' Goopaalakrxshhnd-a / goopaalakrxshhnd-a ad'iga / en' goopaalakrxshhnd-a ad'iga

ದ.ರಾ.ಬೇಂದ್ರೆ: an'bikaatanayadatta / d'aa vaamana bein'dre / an'bikaatanayadattara

ರಾಜರತ್ನಂ: Raajaratnan' Ji Pi / ji pi raajaratnan

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇನ್ನು ಕೆಲವು ಲೇಖಕರು:

ಫ.ಗು. ಹಳಕಟ್ಟಿ   Hal'akat't'a Pha Gu,  

ಮಾಸ್ತಿ ವೆಂಕಟೇಶ ಅಯ್ಯಂಗಾರ್  Aiyan'gaaraa Maasti Ven'kat'eisha

ವಿ. ಕೃ . ಗೋಕಾಕ Gokaaka Vi Krx ಅಥವ vi ke gokaak

ಡಿವಿಜಿ    Gun'd'appa D'i Vi

ಎಮ್.ಎಚ್. ಕೃಷ್ಣ  Krxshhnd-a Em Ech

ಎಸ್.ವಿ. ಪರಮೇಶ್ವರ ಭಟ್ಟ  Parameishvara Bhat't'a Es Vi, es vi parameishvara bhat't'a

ಡಿ.ಎಸ್. ಕರ್ಕಿ  Karki D'i Es, d'i . es . karki, karki

ಶಾಂತರಸ   shaan'tarasa

ಪಿ. ಲಂಕೇಶ್  pi lan'keish

ಚೆನ್ನವೀರ ಕಣವಿ  Kand-avi Chennaviira

ವ್ಯಾಸರಾಯ ಬಲ್ಲಾಳ Ballaal'a Vyaasaraaya, vyaasaraaya ballaal'a

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.