ಮೋಜು-ಗೋಜು: ಕಪ್ಪು ಕುಂಕುಮ...

0

ಮೊನ್ನೆ ಟಿವಿಯಲ್ಲಿ ಮಕ್ಕಳ ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷಿನ ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಬರುತ್ತಿತ್ತು. "ಬಿಟ್ಟಿ ಬಾಟ್ ಸಮ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್..." ಹೀಗೆ ಸಾಗುತ್ತದೆ ಆ ಸಾಲು. ಆಗ ನನ್ನ ಗಮನ ಕನ್ನಡದಲ್ಲಿನ ನಾಲಗೆ ತಿರುಚುಗಳ ಬಗ್ಗೆ ಹರಿಯಿತು. ನನಗೆ ಕನ್ನಡದ ಎರಡು ಸರಳವಾದ, ಆದರೆ ಬಹಳ ಸೊಗಸಾದ ನಾಲಗೆ ತಿರುಚುಗಳು ಗೊತ್ತು.

೧. ಕಪ್ಪು ಕುಂಕುಮ, ಕೆಂಪು ಕುಂಕುಮ
೨. ಕಾಗೆ ಪುಕ್ಕ, ಗುಬ್ಬಿ ಪುಕ್ಕ

ಎಲ್ಲಿ, ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ನಿಧಾನವಾಗಿ ಹೇಳಿದರೆ ಏನೂ ಗಮ್ಮತ್ತಿರುವುದಿಲ್ಲ. ಸಾಧ್ಯವಾದಷ್ಟೂ ವೇಗವಾಗಿ ಹೇಳಬೇಕು. ಆದರೆ, ವೇಗ ಹೆಚ್ಚಿಸಬೇಕೆ ಹೊರತು ಪದಗಳು ಕಲಸಿಕೊಂಡು ಹೋಗಬಾರದು; ನಾಲಗೆ ತಡವರಿಸಬಾರದು. ಇದು ನಾಲಗೆ ತಿರುಚುಗಳ ಮೂಲ ನಿಯಮ. ಸುಮಾರು ಮೂರು ಅಥವ ನಾಲ್ಕನೇ ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಅಂದಹಾಗೆ, ಈ ತಮಾಷೆಯ ನಾಲಗೆ ತಿರುಚಿನ ಆಟ ಹೇಗಿತ್ತು ಅಂತ ಹೇಳೋದನ್ನು ಮರೆಯದಿರಿ.

ಮೇಲಿನ ಸಾಲುಗಳು ನೋಡಲು ಎಷ್ಟು ಚಿಕ್ಕದಾಗಿ, ಸರಳವಾಗಿ ಕಂಡರೂ, ಅದರ ಪೂರ್ಣ ರೂಪ ನಮ್ಮ ಅರಿವಿಗೆ ಬರುವುದು ವೇಗವಾಗಿ ಹೇಳಿದಾಗ ಮಾತ್ರ.

ಆದರೆ, ಬೇಸರವಾಗುತ್ತಿರುವ ವಿಚಾರವೆಂದರೆ ನನಗೆ ಕನ್ನಡದಲ್ಲಿ ಈ ರೀತಿಯ ಒಂದೆರಡು ನಾಲಗೆ ತಿರುಚುಗಳು ಮಾತ್ರ ಗೊತ್ತು. ನಿಮ್ಮಲ್ಲಿ ಯಾರಿಗಾದರೂ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆಲದಮರಬುಡತಳಿರೊಡೆದೆರೆಡೆಲೆಯಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತರಿಕೆರೆಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತು.

H.S.Raghavendra Rao

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.