Shyam Kishore ರವರ ಬ್ಲಾಗ್

ಕ್ರಿಕೆಟ್ ವಿಶ್ವಕಪ್ ೨೦೦೭ - ಮೊದಲ ಸುತ್ತಿನ ವೇಳಾಪಟ್ಟಿ - ಕನ್ನಡದಲ್ಲಿ

ಆತ್ಮೀಯ ಸಂಪದಿಗರೇ,

ಇಂದಿನಿಂದ ಕ್ರಿಕೆಟ್ ವಿಶ್ವಕಪ್ - ೨೦೦೭ ಪ್ರಾರಂಭವಾಗಲಿದೆ. ನಮ್ಮವರು ಗೆಲ್ಲುತ್ತಾರೋ ಇಲ್ಲವೋ ಅದು ಎರಡನೆಯ ಮಾತು. ಆದರೆ "ಗೆಲ್ರೋ ಅಣ್ಣಾ" ಅಂತ ಹಾರೈಸುವದನ್ನಂತೂ ನಾನು ಬಿಡುವುದಿಲ್ಲ. ನಿಮ್ಮೆಲ್ಲರ ಬಳಿಯೂ ಈಗಾಗಲೇ ಪಂದ್ಯಾವಳಿಯ ವೇಳಾಪಟ್ಟಿ ಇರಬಹುದು. ಆದರೂ, ಸಂಪದದಲ್ಲೂ ಒಂದು ಕ್ರಿಕೆಟ್ ವೇಳಾಪಟ್ಟಿ ಇರಲೆಂದು, ಮೊದಲ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಇಲ್ಲಿ ಹಾಕುತ್ತಿದ್ದೀನಿ.

ಅಂದಹಾಗೆ ಈ "ಕ್ರಿಕೆಟ್ ವಿಶ್ವಕಪ್ - ೨೦೦೭"ರ ವೇಳಾಪಟ್ಟಿ ಕನ್ನಡದಲ್ಲಿದೆ. ಇದನ್ನು ನೀವು ನಿಮ್ಮ ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಲಗತ್ತಿಸಿಕೊಳ್ಳಲೂಬಹುದು. ನಾನಂತೂ ನನ್ನ ಕ್ಯೂಬಿಕಲ್ಲಿನಲ್ಲಿ ಒಂದು ಘಂಟೆಯ ಹಿಂದೆ ಲಗತ್ತಿಸಿಕೊಂಡೆ. ಆಗಲೇ ನಾಲ್ಕು ಜನರು ಬಂದು, "ಇದ್ಯಾವ ಭಾಷೆ? ಯಾವ ಊರಿನದ್ದು, ಯಾವ ಲಿಪಿ?" ಅಂತೆಲ್ಲ ಕೇಳಿದರು. "ರೋಗಿ ಬಯಸಿದ್ದೂ ಹಾಲು ಅನ್ನ..." ಎಂಬಂತೆ ನನಗೆ ಬೇಕಾದದ್ದೂ ಅದೇ ಎನ್ನಿ! ಬೇಸರವಿಲ್ಲದೆ ಎಲ್ಲರಿಗೂ ಕನ್ನಡದ ಬಗ್ಗೆ ಸಣ್ಣದಾಗಿ ಕೊರೆದೆ. Wink "ಕೆನಡಾ" ಅಲ್ಲ ಸ್ವಾಮೀ, "ಕ-ನ್ನ-ಡ" ಅಂತ ಬಿಡಿಸಿ ಹೇಳಿಕೊಡುವಷ್ಟರಲ್ಲಿ ಸಾಕಾಯಿತು. ಅವರಲ್ಲಿ ಇಬ್ಬರು ಹೇಳಿದ್ದು: "ನಾವೆಲ್ಲ ಇಷ್ಟು ದಿನ ಭಾರತೀಯ ಭಾಷೆಗಳಲ್ಲಿ ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳ ಬಗ್ಗೆ ಕೇಳಿದ್ದೆವು. ಇವತ್ತು ನಾಲ್ಕನೆಯ ಹೆಸರು ಕೇಳಿದಂತಾಯಿತು". ನನಗಂತೂ ತುಂಬಾ ಸಂತೋಷವಾಯಿತೆಂಬುದನ್ನು ಬಿಡಿಸಿ ಹೇಳಬೇಕೆ?

             
  ದಿನಾಂಕ ಸ್ಥಳ ತಂಡ ಎದುರಾಳಿ ತಂಡ  
  13 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಪಾಕಿಸ್ತಾನ  
  14 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ಸ್ಕಾಟ್‍ಲ್ಯಾಂಡ್  
  14 ಮಾರ್ಚ್ ಸೈಂಟ್ ಲೂಸಿಯ ಕೆನ್ಯಾ ವಿ ಕೆನಡ  
  15 ಮಾರ್ಚ್ ಟ್ರಿನಿದಾದ್ & ಟೊಬಾಗೊ ಶ್ರೀಲಂಕಾ ವಿ ಬರ್ಮುಡ  
  15 ಮಾರ್ಚ್ ಜಮೈಕ ಜಿಂಬಾಬ್ವೆ ವಿ ಐರ್‍ಲ್ಯಾಂಡ್  
  16 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ದ. ಆಫ್ರಿಕ ವಿ ನೆದರ್‍ಲ್ಯಾಂಡ್ಸ್  
  16 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ನ್ಯೂಜಿಲೆಂಡ್  
  17 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಬಾಂಗ್ಲಾದೇಶ  
  17 ಮಾರ್ಚ್ ಜಮೈಕ ಪಾಕಿಸ್ತಾನ ವಿ ಐರ್‍ಲ್ಯಾಂಡ್  
  18 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ನೆದರ್‍ಲ್ಯಾಂಡ್ಸ್  
  18 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ಕೆನಡ  
  19 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಬರ್ಮುಡ  
  19 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಜಿಂಬಾಬ್ವೆ  
  20 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ದ. ಆಫ್ರಿಕ ವಿ ಸ್ಕಾಟ್‍ಲ್ಯಾಂಡ್  
  20 ಮಾರ್ಚ್ ಸೈಂಟ್ ಲೂಸಿಯ ನ್ಯೂಜಿಲೆಂಡ್ ವಿ ಕೆನ್ಯಾ  
  21 ಮಾರ್ಚ್ ಟ್ರಿನಿದಾದ್ & ಟೊಬಾಗೊ ಶ್ರೀಲಂಕಾ ವಿ ಬಾಂಗ್ಲಾದೇಶ  
  21 ಮಾರ್ಚ್ ಜಮೈಕ ಜಿಂಬಾಬ್ವೆ ವಿ ಪಾಕಿಸ್ತಾನ  
  22 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಸ್ಕಾಟ್‍ಲ್ಯಾಂಡ್ ವಿ ನೆದರ್‍ಲ್ಯಾಂಡ್ಸ್  
  22 ಮಾರ್ಚ್ ಸೈಂಟ್ ಲೂಸಿಯ ನ್ಯೂಜಿಲೆಂಡ್ ವಿ ಕೆನಡ  
  23 ಮಾರ್ಚ್ ಟ್ರಿನಿದಾದ್ & ಟೊಬಾಗೊ ಭಾರತ ವಿ ಶ್ರೀಲಂಕಾ  
  23 ಮಾರ್ಚ್ ಜಮೈಕ ವೆಸ್ಟ್ ಇಂಡೀಸ್ ವಿ ಐರ್‍ಲ್ಯಾಂಡ್  
  24 ಮಾರ್ಚ್ ಸೈಂಟ್ ಕಿಟ್ಸ್ & ನೆವಿಸ್ ಆಸ್ಟ್ರೇಲಿಯ ವಿ ದ. ಆಫ್ರಿಕ  
  24 ಮಾರ್ಚ್ ಸೈಂಟ್ ಲೂಸಿಯ ಇಂಗ್ಲೆಂಡ್ ವಿ ಕೆನ್ಯಾ  
  25 ಮಾರ್ಚ್ ಟ್ರಿನಿದಾದ್ & ಟೊಬಾಗೊ ಬರ್ಮುಡ ವಿ ಬಾಂಗ್ಲಾದೇಶ  
             

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

DLI ಎಂಬ ಪುಸ್ತಕಾರಣ್ಯದಲ್ಲಿ ಹುಡುಕಾಟ...

ನೀವು "ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ(DLI)"ಗೆ ನಿಯಮಿತವಾಗಿ ಭೇಟಿನೀಡಿ ಪುಸ್ತಕಗಳನ್ನು ಹುಡುಕಿ, ತಿರುವುಹಾಕುವ ಆಸಕ್ತರಲ್ಲೊಬ್ಬರಾದಲ್ಲಿ, ಆ ಹುಡುಕಾಟದ ಕಷ್ಟ-ಸುಖ ನಿಮಗೀಗಾಗಲೇ ಮನದಟ್ಟಾಗಿರುತ್ತದೆ. "ಎ, ಬಿ, ಸಿ..." ಎಂದು ನೇರವಾಗಿ ಅಕ್ಷರಗಳ ರೀತ್ಯಾ ಹುಡುಕಾಡುವುದಾದಲ್ಲಿ ಅಂತಹ ಸಮಸ್ಯೆಯೇನಿಲ್ಲ. ಆದರೆ ಹಾಗೆ ಹುಡುಕಲು ಪುಸ್ತಕದ ಹೆಸರು ಮೊದಲೇ ತಿಳಿದಿರಬೇಕಾಗುತ್ತದೆ. ಅದರ ಬದಲು ಬರೆದವರ (ಕರ್ತೃ) ಹೆಸರನ್ನಾಧರಿಸಿ ಬೇಗ ಹುಡುಕೋಣ, ಆ ಲೇಖಕರ ಯಾವ್ಯಾವ ಪುಸ್ತಕಗಳು ದೊರಕುತ್ತವೆ ನೋಡೋಣವೆಂದು ಹೊರಟಿರೋ, ಆಗ ಶುರು ತಮಾಷೆ! ಇನ್ನೂ ಇದರ ಅನುಭವವಿಲ್ಲದೆ ಇರುವವರು ಪ್ರಯತ್ನಿಸಿ ನೋಡಿ; ಬಹಳ ತಮಾಷೆಯಾಗಿರುತ್ತದೆ. ಹುಡುಕಾಟ ಫಲಿಸುತ್ತದೆ, ಇಲ್ಲವೆಂದಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...

ಚಿತ್ರಗೀತೆಗಳೆಂದರೆ ಕೇವಲ ಕಾಲಕಳೆಯಲು ಇರುವ ಗೀತೆಗಳಲ್ಲ; ಅಥವಾ ಬರಿದೇ ಮನರಂಜನೆಗಾಗಿ ಇರುವ ಹಾಡುಗಳೂ ಅಲ್ಲ. ಉತ್ತಮ ಜೀವನ ತತ್ವಗಳನ್ನು, ಸಾಮಾಜಿಕ-ನೈತಿಕ ಸಂದೇಶಗಳನ್ನು, ಆದರ್ಶದ ಹೊಂಗನಸುಗಳನ್ನು ಜನಸಾಮಾನ್ಯರಿಗೆ ಅತಿಬೇಗನೆ, ಮನಮುಟ್ಟುವಂತೆ ತಲುಪಿಸುವ ಸಾಮರ್ಥ್ಯ ಚಿತ್ರಗೀತೆಗಳಿಗಿದೆ. ಆದರೆ ಅವುಗಳ ಸತ್ವವನ್ನು ಅರಿತು ದುಡಿಸಿಕೊಳ್ಳುವ ನಿರ್ದೇಶಕರು ಬೇಕಷ್ಟೇ! ಇತ್ತೀಚಿನ ದಿನಗಳಲ್ಲಂತೂ ಚಿತ್ರಗೀತೆಗಳಲ್ಲಿನ ಸಾಹಿತ್ಯದ ಪಾಡು "ಹೇಳಬಾರದು, ಕೇಳಬಾರದು" ಎಂಬಂತಾಗಿದೆ. ಎಲ್ಲೋ ಒಮ್ಮೊಮ್ಮೆ "ಮುಂಗಾರು ಮಳೆ" ಸುರಿದು ಕಾದ ಮನಗಳಿಗೆ ತಂಪೆರದರೂ, ಆ ರೀತಿಯ ಮಳೆ ಸುರಿಯುವುದು ವರ್ಷದಲ್ಲಿ ಎರಡು ಇಲ್ಲವೆ ಮೂರು ಬಾರಿ ಮಾತ್ರ ಎನ್ನುವಂತಹ ಸ್ಥಿತಿ ಬಂದೊದಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಮೋಜು-ಗೋಜು: ಕಪ್ಪು ಕುಂಕುಮ...

ಮೊನ್ನೆ ಟಿವಿಯಲ್ಲಿ ಮಕ್ಕಳ ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷಿನ ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಬರುತ್ತಿತ್ತು. "ಬಿಟ್ಟಿ ಬಾಟ್ ಸಮ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್..." ಹೀಗೆ ಸಾಗುತ್ತದೆ ಆ ಸಾಲು. ಆಗ ನನ್ನ ಗಮನ ಕನ್ನಡದಲ್ಲಿನ ನಾಲಗೆ ತಿರುಚುಗಳ ಬಗ್ಗೆ ಹರಿಯಿತು. ನನಗೆ ಕನ್ನಡದ ಎರಡು ಸರಳವಾದ, ಆದರೆ ಬಹಳ ಸೊಗಸಾದ ನಾಲಗೆ ತಿರುಚುಗಳು ಗೊತ್ತು.

೧. ಕಪ್ಪು ಕುಂಕುಮ, ಕೆಂಪು ಕುಂಕುಮ
೨. ಕಾಗೆ ಪುಕ್ಕ, ಗುಬ್ಬಿ ಪುಕ್ಕ

ಎಲ್ಲಿ, ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ನಿಧಾನವಾಗಿ ಹೇಳಿದರೆ ಏನೂ ಗಮ್ಮತ್ತಿರುವುದಿಲ್ಲ. ಸಾಧ್ಯವಾದಷ್ಟೂ ವೇಗವಾಗಿ ಹೇಳಬೇಕು. ಆದರೆ, ವೇಗ ಹೆಚ್ಚಿಸಬೇಕೆ ಹೊರತು ಪದಗಳು ಕಲಸಿಕೊಂಡು ಹೋಗಬಾರದು; ನಾಲಗೆ ತಡವರಿಸಬಾರದು. ಇದು ನಾಲಗೆ ತಿರುಚುಗಳ ಮೂಲ ನಿಯಮ. ಸುಮಾರು ಮೂರು ಅಥವ ನಾಲ್ಕನೇ ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಅಂದಹಾಗೆ, ಈ ತಮಾಷೆಯ ನಾಲಗೆ ತಿರುಚಿನ ಆಟ ಹೇಗಿತ್ತು ಅಂತ ಹೇಳೋದನ್ನು ಮರೆಯದಿರಿ.

ಮೇಲಿನ ಸಾಲುಗಳು ನೋಡಲು ಎಷ್ಟು ಚಿಕ್ಕದಾಗಿ, ಸರಳವಾಗಿ ಕಂಡರೂ, ಅದರ ಪೂರ್ಣ ರೂಪ ನಮ್ಮ ಅರಿವಿಗೆ ಬರುವುದು ವೇಗವಾಗಿ ಹೇಳಿದಾಗ ಮಾತ್ರ.

ಆದರೆ, ಬೇಸರವಾಗುತ್ತಿರುವ ವಿಚಾರವೆಂದರೆ ನನಗೆ ಕನ್ನಡದಲ್ಲಿ ಈ ರೀತಿಯ ಒಂದೆರಡು ನಾಲಗೆ ತಿರುಚುಗಳು ಮಾತ್ರ ಗೊತ್ತು. ನಿಮ್ಮಲ್ಲಿ ಯಾರಿಗಾದರೂ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?

ಈ ಸುದ್ದಿ ಓದಿದಾಗಿನಿಂದ ಏನೊಂದನ್ನು ಮಾಡಲೂ ಮನಸ್ಸಾಗುತ್ತಿಲ್ಲ. ಮೊನ್ನೆ ಬೆಂಗಳೂರಿನ ಬಿಇಎಂಎಲ್ ಲೇಔಟಿನಲ್ಲಿ ನಾಲ್ಕೈದು ವರ್ಷದ ಪುಟ್ಟ ಬಾಲಕನನ್ನು ಸುಮಾರು ಹದಿನೈದು ಬೀದಿ ನಾಯಿಗಳು ಕಚ್ಚಿ ಕಚ್ಚಿ ಕೊಂದಿವೆಯಂತೆ! ದಟ್ಸ್ ಕನ್ನಡದಲ್ಲಿ ಈಗ ತಾನೇ ಓದಿದೆ. ನಾವು ಯಾವ ಕಾಲದಲ್ಲಿದ್ದೀವಿ ಎನಿಸುತ್ತಿದೆ. ಇನ್ನೂ ಕೇವಲ ಒಂದೂವರೆ ತಿಂಗಳ ಹಿಂದೆ ಚಂದ್ರಾ ಲೇಔಟಿನಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ಇದೇ ರೀತಿ, ಬೀದಿ ನಾಯಿಗಳು ಕಚ್ಚಿ ಸಾಯಿಸಿದ ಘಟನೆ ವರದಿಯಾಗಿತ್ತು. ನಮ್ಮ ಆಳರಸರನ್ನು ನಿದ್ದೆಯಿಂದ ಎಬ್ಬಿಸಲು ವಿಶ್ವೇಶ್ವರ ಭಟ್ ಅವರು ಬಹಳ ಒಳ್ಳೆಯ ಸಂಪಾದಕೀಯ ಸಹಾ ಬರೆದಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages

Subscribe to RSS - Shyam Kishore ರವರ ಬ್ಲಾಗ್